Tag: pendal

  • ದುರ್ಗಾ ಪೂಜೆ ವೇಳೆ ಪೆಂಡಾಲ್‍ಗೆ ಬೆಂಕಿ – ಮಕ್ಕಳು ಸೇರಿದಂತೆ ಐವರು ಸಾವು, 66 ಮಂದಿಗೆ ಗಾಯ

    ದುರ್ಗಾ ಪೂಜೆ ವೇಳೆ ಪೆಂಡಾಲ್‍ಗೆ ಬೆಂಕಿ – ಮಕ್ಕಳು ಸೇರಿದಂತೆ ಐವರು ಸಾವು, 66 ಮಂದಿಗೆ ಗಾಯ

    ಲಕ್ನೋ: ದುರ್ಗಾ ಪೂಜೆಗೆ ಹಾಕಿದ್ದ ಪೆಂಡಾಲ್‍ಗೆ (Durga Puja Pandal) ಬೆಂಕಿ ಹೊತ್ತುಕೊಂಡು ಮೂವರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದು, 66 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಭದೋಹಿಯಲ್ಲಿ (Bhadohi) ನಡೆದಿದೆ.

    ಈ ಕುರಿತಂತೆ ಪ್ರತಿಕ್ರಿಯಿಸಿದ ಮ್ಯಾಜಿಸ್ಟ್ರೇಟ್ ಗೌರಂಗ್ ರಾಠಿ ಅವರು, ಔರೈ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗಾಪೂಜಾ ವೇಳೆ ಅಗ್ನಿ ಅವಘಡ ಸಂಭವಿಸಿದ್ದು, ಒಟ್ಟು 66 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಐಸಿಯುನಲ್ಲಿ ಮುಲಾಯಂ ಸಿಂಗ್ – ಅಖಿಲೇಶ್‍ಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ

    ಇದೀಗ ಘಟನಾ ಸ್ಥಳಕ್ಕೆ ಡಿಎಂ ಮತ್ತು ಜಿಲ್ಲೆಯ ಇತರ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕೆಲವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ 33 ಜನರನ್ನು ಸಮೀಪದ ವಾರಣಾಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಇದು ನಾಗರಿಕ ಸಮಾಜವೇ ತಲೆ ತಗ್ಗಿಸುವ ಸುದ್ದಿ – ಅಪ್ಪನ ಸಾಲ ತೀರಿಸಲು ಮಗನಿಂದ ಬೆತ್ತಲೆ ಪೂಜೆ

    ರಾತ್ರಿ 9.30ರ ಸುಮಾರಿಗೆ ಆರತಿ ಮಾಡುವಾಗ ಈ ಘಟನೆ ನಡೆದಿದೆ. ಘಟನೆ ವೇಳೆ ಸುಮಾರು 300 ಮಂದಿ ಪೆಂಡಾಲ್ ಕೆಳಗಿದ್ದರು. ಮೇಲ್ನೋಟಕ್ಕೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಬೆಂಕಿ ಅವಘಡಕ್ಕೆ ಕಾರಣ ಎಂದು ಕಾಣಿಸುತ್ತದೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಯುವಕನೊಬ್ಬನ ಹುಚ್ಚಾಟದಿಂದ ಮದ್ವೆ ಮನೆಯಲ್ಲಿ ಹೊತ್ತಿ ಉರಿದ ಪೆಂಡಾಲ್- ಮಂಗ್ಳೂರಲ್ಲಿ ವಿಡಿಯೋ ವೈರಲ್

    ಯುವಕನೊಬ್ಬನ ಹುಚ್ಚಾಟದಿಂದ ಮದ್ವೆ ಮನೆಯಲ್ಲಿ ಹೊತ್ತಿ ಉರಿದ ಪೆಂಡಾಲ್- ಮಂಗ್ಳೂರಲ್ಲಿ ವಿಡಿಯೋ ವೈರಲ್

    ಮಂಗಳೂರು: ಮದುವೆಯ ಮೆಹೆಂದಿ ಕಾರ್ಯಕ್ರಮವೊಂದರಲ್ಲಿ ಯುವಕನೊಬ್ಬನ ಹುಚ್ಚಾಟ ಇಡೀ ಪೆಂಡಾಲನ್ನೇ ಸುಟ್ಟು ಭಸ್ಮ ಮಾಡಿದ ಘಟನೆ ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ನಡೆದಿದೆ.

    ಈ ಬೆಂಕಿ ಆಕಸ್ಮಿಕದಿಂದ ಪೆಂಡಲ್ ಹೊತ್ತಿ ಉರಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಗಳೂರಿನ ಮೂಡಬಿದ್ರೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಮೆಹಂದಿ ಕಾರ್ಯಕ್ರಮದಲ್ಲಿ ಯುವಕರು ನಾನಾ ರೀತಿಯಲ್ಲಿ ಡಿಜೆ ಸಾಂಗ್‍ಗೆ ಕುಣಿದು ಕುಪ್ಪಳಿಸಿದ್ದಾರೆ.

    ಈ ಮೆಹೆಂದಿ ಕಾರ್ಯಕ್ರಮದಲ್ಲಿ ಇಬ್ಬರು ಯುವಕರು ವಿಭಿನ್ನವಾಗಿ ಕಾಣಿಸಿಕೊಳ್ಳಲು ದೆವ್ವದಂತೆ ವೇಷವನ್ನು ತೊಟ್ಟು ಕುಣಿಯುತ್ತಿದ್ದರು. ಬಳಿಕ ಓರ್ವ ಎರಡೂ ಕೈಗಳಲ್ಲಿ ಬೆಂಕಿಯ ಪಂಜು ಹಿಡಿದುಕೊಂಡು ಪೆಂಡಾಲ್ ಕೆಳಗೆ ಆಗಮಿಸಿ ಕುಣಿಯಲಾರಂಭಿಸಿದ್ದ. ಪಂಜನ್ನು ಮೇಲಕ್ಕೆತ್ತಿ ಕುಣಿಯುತ್ತಿದ್ದು, ಬೆಂಕಿ ಪೆಂಡಾಲ್‍ಗೆ ಹೊತ್ತಿಕೊಂಡಿದೆ.

    ಸಂಪೂರ್ಣ ಸಿಲ್ಕ್ ನ ಪೆಂಡಾಲ್ ಆಗಿದ್ದರಿಂದ ಕ್ಷಣಾರ್ಧದಲ್ಲಿ ಬೆಂಕಿ ಇಡೀ ಪೆಂಡಾಲ್‍ಗೆ ಹೊತ್ತಿಕೊಂಡಿದೆ. ಪರಿಣಾಮ ಪೆಂಡಾಲ್ ಸಂಪೂರ್ಣ ಕೆಳಗುರುಳಿ ಬಿದ್ದಿದೆ. ಪೆಂಡಾಲ್‍ನ ಕೆಳಗೆ ಜನರಿದ್ದು ಕೆಲವರಿಗೆ ಸಣ್ಣಪುಟ್ಟ ಗಾಯಗಾಳಾಗಿದ್ದು ಭಾರೀ ಅನಾಹುತವೊಂದು ತಪ್ಪಿದೆ.

    https://www.youtube.com/watch?v=w4R1EExx5u4