Tag: pencil

  • ಪೆನ್ಸಿಲ್ ನಿಬ್ ಕದ್ದ ಬಾಲಕನ ವಿರುದ್ಧ ದೂರು ದಾಖಲಿಸಲು ಠಾಣೆಗೆ ಹೋದ ಪುಟಾಣಿ

    ಪೆನ್ಸಿಲ್ ನಿಬ್ ಕದ್ದ ಬಾಲಕನ ವಿರುದ್ಧ ದೂರು ದಾಖಲಿಸಲು ಠಾಣೆಗೆ ಹೋದ ಪುಟಾಣಿ

    ಅಮರಾವತಿ: ತನ್ನ ಒಪ್ಪಿಗೆ ಪಡೆಯದೇ ಪೆನ್ಸಿಲ್ ನಿಬ್ ತೆಗೆದುಕೊಂಡಿದ್ದಕ್ಕೆ ಸಹಪಾಠಿಯ ವಿರುದ್ಧ ಪುಟ್ಟ ಬಾಲಕನೊಬ್ಬ ದೂರು ನೀಡಲು ಪೊಲೀಸ್ ಠಾಣೆಗೆ ಹೋಗುವ ಮೂಲಕವಾಗಿ ಸುದ್ದಿಯಾಗಿದ್ದಾನೆ.

    ಈ ವಿಚಿತ್ರ ಸಮಸ್ಯೆಯನ್ನು ಬಗೆಹರಿಸುವಲ್ಲಿ ನಿರತರಾಗಿರುವ ಪೊಲೀಸರು ಈ ವೀಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಇದಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ನೆಟ್ಟಿಗರು ಬಾಲಕನ ಮಾತಿಗೆ ಫಿದಾ ಆಗಿದ್ದಾರೆ.

    ವೀಡಿಯೋದಲ್ಲಿ ಏನಿದೆ?: ಪ್ರಾಥಮಿಕ ಶಾಲಾ ಮಕ್ಕಳ ಗುಂಪು ತಮ್ಮ ಸಹಪಾಠಿಯ ವಿರುದ್ಧ ದೂರು ದಾಖಲಿಸಲು ಕರ್ನೂಲ್ ಜಿಲ್ಲೆಯ ಪೇಡಾ ಕಡಬೂರು ಠಾಣೆಗೆ ಬಂದಿದ್ದಾರೆ. ಹಸಿರು ಬಣ್ಣದ ಶರ್ಟ್ ಧರಿಸಿರುವ ಬಾಲಕ ತನ್ನ ಪೆನ್ಸಿಲ್ ನಿಬ್ ಕದ್ದಿದ್ದಾನೆ. ಇವನ ವಿರುದ್ಧ ನಾನು ದೂರು ದಾಖಲಿಸುತ್ತೇನೆ ಎಂದು ಬಾಲಕನೊಬ್ಬ ಹೇಳಿದ್ದಾನೆ. ಅದಕ್ಕೆ ಹಸಿರು ಶರ್ಟ್ ಬಾಲಕನು ತೆಗೆದುಕೊಂಡಿದ್ದ ಪೆನ್ಸಿಲ್ ನಿಬ್‍ನ್ನು ವಾಪಸ್ ನೀಡಿರುವುದಾಗಿ ತಿಳಿಸುತ್ತಾನೆ. ಇಲ್ಲ ಎಂದು ವಾದಿಸುತ್ತಾ ದೂರು ದಾಖಲಿಸಲು ಬಂದಿರುವ ಬಾಲಕ ತನ್ನ ಹತ್ತಿರ ಇದ್ದ ನಿಬ್‍ನ್ನು ತೊರಿಸುತ್ತಾನೆ. ಇದನ್ನೂ ಓದಿ: ಒಳ್ಳೆ ಬುದ್ಧಿ ಕಲಿಯಿರಿ ಎಂದಿದ್ದಕ್ಕೆ ಸಾಮಾಜಿಕ ಕಾರ್ಯಕರ್ತನ ಕೊಲೆಗೈದ ಬಾಲಕರು!

    ಇದಲ್ಲೆವನ್ನು ತಾಳ್ಮೆಯಿಂದ ಆಲಿಸಿದ ಪೊಲೀಸರು ಪ್ರತಿಕ್ರಿಯಿಸಿ, ದೂರು ದಾಖಲಿಸುವುದರಿಂದ ಅವನ ತಂದೆ-ತಾಯಿಗೆ ತೊಂದರೆ ಆಗುತ್ತದೆ. ಇದರಿಂದ ಇದೊಂದು ಬಾರಿ ರಾಜಿ ಆಗಿ ಎಂದು ಸಲಹೆ ನೀಡುತ್ತಾರೆ. ಅದಕ್ಕೆ ಒಪ್ಪಿದ ಬಾಲಕ ನಂತರದಲ್ಲಿ ಅವನು ತಪ್ಪು ಮಾಡಿದ್ದಾನೆ. ದೂರು ದಾಖಲಿಸಬೇಕು ಎಂದು ವಾದಿಸುತ್ತಾನೆ. ಅದಕ್ಕೆ ಪೊಲೀಸರು ಇನ್ನೊಮ್ಮೆ ತಪ್ಪಾಗದಂತೆ ನಡೆದುಕೊಳ್ಳಬೇಕು ಎಂದು ಬಾಲಕನಿಗೆ ಬುದ್ಧಿವಾದ ಹೇಳುತ್ತಾರೆ. ಆರೋಪಿಗಳನ್ನು ಚೆನ್ನಾಗಿ ಓದಿ ಮತ್ತು ಇಬ್ಬರೂ ಸೌಹಾರ್ದಯುತ ಸಂಬಂಧವನ್ನು ಹೊಂದಬೇಕು ಎಂದು ಆಶಿಸಿರುವ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಇದನ್ನೂ ಓದಿ: IND vs NZ ಟೆಸ್ಟ್ ಪಂದ್ಯದಲ್ಲಿ ಸುದ್ದಿಯಾದ ಪಾನ್ ಭಾಯ್ – ವೀಡಿಯೋ ವೈರಲ್

    ಈ ವೀಡಿಯೋಕ್ಕೆ ನೆಟ್ಟಿಗರು ಆಶ್ಚರ್ಯವನ್ನು ವ್ಯಕ್ತಪಡಿದ್ದಾರೆ. ಹುಡುಗರು ಸಲೀಸಾಗಿ ಸಂವಹನ ನಡೆಸುತ್ತಿರುವುದನ್ನು ನೋಡಿ ಅನೇಕರಿಗೆ ಶಾಕ್ ಆದರೆ ಇನ್ನೂ ಕೆಲವರು ಅವರ ಜಾಗೃತಿಗಾಗಿ ಶ್ಲಾಘಿಸಿದ್ದಾರೆ. ಕೆಲವರು ಈ ಪುಟ್ಟ ಹುಡುಗ ಮುಂದೊಂದು ದಿನ ಪೊಲೀಸ್ ಅಧಿಕಾರಿಯಾಗಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲಿದ್ದಾನೆ ಎಂದು ಆಶಿಸಿದ್ದಾರೆ.