Tag: Penalty Corner

  • ಒಲಿಂಪಿಕ್ಸ್ ನಲ್ಲಿ ಹಾಕಿ ಟೀಂ ಇಂಡಿಯಾಗೆ ನಿರಾಸೆ – ಸೆಮಿಫೈನಲ್‍ನಲ್ಲಿ ಬೆಲ್ಜಿಯಂ ವಿರುದ್ಧ ಸೋಲು

    ಒಲಿಂಪಿಕ್ಸ್ ನಲ್ಲಿ ಹಾಕಿ ಟೀಂ ಇಂಡಿಯಾಗೆ ನಿರಾಸೆ – ಸೆಮಿಫೈನಲ್‍ನಲ್ಲಿ ಬೆಲ್ಜಿಯಂ ವಿರುದ್ಧ ಸೋಲು

    ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ನ 12ನೇ ದಿನವಾದ ಇಂದು ನಡೆದ ಭಾರತ- ಬೆಲ್ಜಿಯಂ ಹಾಕಿ ತಂಡಗಳು ಸೆಮಿಫೈನಲ್ ನಲ್ಲಿ ಎದುರಾಗಿದ್ದವು. ಈ ಪಂದ್ಯವನ್ನ 5-2ರ ಅಂತರದಲ್ಲಿ ಗೆಲ್ಲುವ ಮೂಲಕ ಬೆಲ್ಜಿಯಂ ಫೈನಲ್ ಗೆ ಲಗ್ಗೆ ಇಟ್ಟಿದೆ. ಈಗ ಟೀಂ ಇಂಡಿಯಾ ಕಂಚಿನ ಪದಕಕ್ಕಾಗಿ ಆಡಲಿದೆ.

    ಮೊದಲ ಕ್ವಾರ್ಟರ್ ನಲ್ಲಿ ಟೀಂ ಇಂಡಿಯಾಗೆ 2-1ರ ಮುನ್ನಡೆಯನ್ನು ಕಾಯ್ದುಕೊಂಡಿತ್ತು. ಎರಡೂ ತಂಡಗಳು ಆರಂಭದಿಂದಲೇ ಆಕ್ರಮಣಕಾರಿ ಪ್ರದರ್ಶನ ನೀಡಲು ಆರಂಭಿಸಿದ್ದರಿಂದ ವೀಕ್ಷಕರನ್ನ ಕುರ್ಚಿಯ ತುದಿಯಂಚಿಗೆ ತಂದು ಕೂರಿಸಿತ್ತು. ಭಾರತದ ಡಿಫೆನ್ಸ್ ಮುಂದೆ ಬೆಲ್ಜಿಯಂ ಆಟ ನಡೆಯಲಿಲ್ಲ.

    ಎರಡನೇ ಕ್ವಾರ್ಟರ್ ನಲ್ಲಿ ಬೆಲ್ಜಿಯಂ ತಂಡ 1 ನಿಮಿಷ 4 ಸೆಕೆಂಡುಗಳಲ್ಲಿ ಪೆನಾಲ್ಟಿ ಕಾರ್ನರ್ ಲಾಭ ಪಡೆದು ಗೋಲ್ ದಾಖಲಿಸಿತು. ಇನ್ನೂ ಎಳನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಪಡೆದ ಭಾರತದ ಹರ್ಮನ್‍ಪ್ರೀತ್ ಡ್ರ್ಯಾಗ್ ಫ್ಲಿಕ್ ಮಾಡಿ ತಂಡಕ್ಕೆ ಒಂದು ಅಂಕ ತಂದುಕೊಟ್ಟರು. 8ನೇ ನಿಮಿಷದಲ್ಲಿ ಮಂದೀಪ್ ಸಿಂಗ್ ಅದ್ಭುತ ಬ್ಯಾಕ್‍ಹ್ಯಾಂಡ್ ಶಾಟ್ ಮೂಲಕ ಗೋಲ್ ದಾಖಲಿಸಿ 2-1ರಲ್ಲಿ ಮುನ್ನಡೆ ಕಾಯ್ದುಕೊಂಡರು. ಎರಡನೇ ಕ್ವಾರ್ಟರ್ ನಲ್ಲಿ ಬೆಲ್ಜಿಯಂ ಪೆನಾಲ್ಟಿ ಕಾರ್ನರ್ ಪಡೆಯಿತು. ವಿಶ್ವದ ಬೆಸ್ಟ್ ಡ್ರ್ಯಾಗ್ ಫ್ಲಿಕರ್ಸ್ ಆಗಿರುವ ಅಲೆಕ್ಯಾಂಡರ್ ಹ್ಯಾಂಡ್ರಿಕ್ಸ್ ಸಿಕ್ಕ ಅವಕಾಶವನ್ನು ಮಿಸ್ ಮಾಡಿಕೊಳ್ಳಲಿಲ್ಲ. ಗೋಲ್ ಮಾಡುವ ಮೂಲಕ 2-2 ಸಮಕ್ಕೆ ಆಟವನ್ನ ತಂದರು.

    ಮೂರನೇ ಕ್ವಾರ್ಟರ್ ನಲ್ಲಿ ಸಿಕ್ಕಿದ್ದ ಪೆನಾಲ್ಟಿ ಕಾರ್ನರ್ ನ್ನು ಟೀಂ ಇಂಡಿಯಾ ಬಳಸಿಕೊಳ್ಳಲು ವಿಫಲವಾಯ್ತು. ಇದಾದ ನಂತರವೂ ಆಕ್ರಮಣಕಾರಿ ಆಟ ಮುಂದುವರಿದಿತ್ತು. ನಾಲ್ಕನೇಯ ಕ್ವಾರ್ಟರ್ ನಲ್ಲಿ ಬೆಲ್ಜಿಯಂ ಎರಡು ಗೋಲ್ ದಾಖಲಿಸುವ ಮೂಲಕ ಪಂದ್ಯವನ್ನು ತನ್ನದಾಗಿಸಿಕೊಂಡಿತು. ನಾಲ್ಕನೇ ಕ್ವಾರ್ಟರ್ ನಲ್ಲಿ 49ನೇ ನಿಮಿಷ ಮತ್ತು 53 ನಿಮಿಷದಲ್ಲಿ ಅಲೆಕ್ಯಾಂಡರ್ ಗೋಲ್ ಮಾಡಿದರು.

    ಬೆಲ್ಜಿಯಂ ವಿರುದ್ಧ ಸೋಲು: ಭಾರತದ ಹಾಕಿ ತಂಡ 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಪೂಲ್ ಸ್ಟೇಜ್ ವೇಳೆ 3-0 ಅಂತ ರದಲ್ಲಿ ಬೆಲ್ಜಿಯಂ ವಿರುದ್ಧ ಸೋತಿತ್ತು. 2016ರ ರಿಯೋದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಕ್ವಾರ್ಟರ್ ಫೈನಲ್ ನಲ್ಲಿ ಬೆಲ್ಜಿಯಂ ವಿರುದ್ಧ ಟೀಂ ಇಂಡಿಯಾ 3-1ರಲ್ಲಿ ಸೋಲು ಕಂಡಿತ್ತು.

    ಪ್ರಧಾನಿ ನರೇಂದ್ರ ಮೋದಿ ಅವರು ಸಹ ಭಾರತ ಮತ್ತು ಬೆಲ್ಜಿಯಂ ನಡುವಿನ ಸೆಮಿಫೈನಲ್ ಪಂದ್ಯವನ್ನು ನೋಡುತ್ತಿರೋದಾಗಿ ಟ್ವೀಟ್ ಮಾಡಿ ತಂಡಕ್ಕೆ ಶುಭಕೋರಿದ್ದರು. ಇದನ್ನೂ ಓದಿ: ಮೊದಲ ಬಾರಿಗೆ ಒಲಿಂಪಿಕ್ ಸೆಮಿಫೈನಲ್ ಪ್ರವೇಶಿಸಿದ ಭಾರತೀಯ ಮಹಿಳಾ ಹಾಕಿ ತಂಡ