Tag: Pema Khandu

  • ಅರುಣಾಚಲ ಪ್ರದೇಶದ ಸಿಎಂ ಆಗಿ ಸತತ 3ನೇ ಅವಧಿಗೆ ಪೆಮಾ ಖಂಡು ಪ್ರಮಾಣವಚನ ಸ್ವೀಕಾರ

    ಅರುಣಾಚಲ ಪ್ರದೇಶದ ಸಿಎಂ ಆಗಿ ಸತತ 3ನೇ ಅವಧಿಗೆ ಪೆಮಾ ಖಂಡು ಪ್ರಮಾಣವಚನ ಸ್ವೀಕಾರ

    ಇಟಾನಗರ: ಬಿಜೆಪಿ ನಾಯಕ ಪೆಮಾ ಖಂಡು (Pema Khandu) ಅವರು ಅರುಣಾಚಲ ಪ್ರದೇಶದ (Arunachal Pradesh) ಮುಖ್ಯಮಂತ್ರಿಯಾಗಿ ಸತತ ಮೂರನೇ ಅವಧಿಗೆ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.

    ಇಟಾನಗರದಲ್ಲಿರುವ ಡಿಕೆ ರಾಜ್ಯ ಸಮಾವೇಶ ಕೇಂದ್ರದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ಜೆಪಿ ನಡ್ಡಾ, ಕಿರಣ್ ರಿಜಿಜು ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಉಪಸ್ಥಿತರಿದ್ದರು. ಇದನ್ನೂ ಓದಿ: ಒಡಿಶಾದ ಮೊದಲ ಬಿಜೆಪಿ ಸಿಎಂ ಆಗಿ ಮೋಹನ್‌ ಚರಣ್‌ ಪ್ರಮಾಣವಚನ ಸ್ವೀಕಾರ

    ಖಂಡು ಅವರು ಬುಧವಾರ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು. ಸತತ ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 44 ವಯಸ್ಸಿನ ಖಂಡು 2016 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

    ಅರುಣಾಚಲ ಪ್ರದೇಶದ ಗವರ್ನರ್ ಲೆಫ್ಟಿನೆಂಟ್ ಜನರಲ್ ಕೆಟಿ ಪರ್ನಾಯಕ್ (ನಿವೃತ್ತ) ಖಂಡು ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದರು. ಇದನ್ನೂ ಓದಿ: ಪೆಮಾ ಖಂಡು ಸತತ 3ನೇ ಅವಧಿಗೆ ಅರುಣಾಚಲ ಪ್ರದೇಶ ಸಿಎಂ

    60 ಸದಸ್ಯ ಬಲದ ಅರುಣಾಚಲ ಪ್ರದೇಶ ವಿಧಾನಸಭೆಗೆ ಲೋಕಸಭೆ ಚುನಾವಣೆಯ ಜೊತೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 46 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಚುನಾವಣೆಗೂ ಮುನ್ನ ರಾಜ್ಯದಲ್ಲಿ ಬಿಜೆಪಿ ಹತ್ತು ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿತ್ತು.

  • ಪೆಮಾ ಖಂಡು ಸತತ 3ನೇ ಅವಧಿಗೆ ಅರುಣಾಚಲ ಪ್ರದೇಶ ಸಿಎಂ

    ಪೆಮಾ ಖಂಡು ಸತತ 3ನೇ ಅವಧಿಗೆ ಅರುಣಾಚಲ ಪ್ರದೇಶ ಸಿಎಂ

    ಇಟಾನಗರ: ಪೆಮಾ ಖಂಡು (Pema Khandu) ಅವರು ಸತತ ಮೂರನೇ ಅವಧಿಗೆ ಅರುಣಾಚಲ ಪ್ರದೇಶದ (Arunachal Pradesh) ಮುಖ್ಯಮಂತ್ರಿಯಾಗಲಿದ್ದಾರೆ. ಬುಧವಾರ ನಡೆದ ಸಭೆಯಲ್ಲಿ ಖಂಡು ಅವರನ್ನು ಬಿಜೆಪಿ (BJP) ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

    ಅರುಣಾಚಲ ಪ್ರದೇಶದ ಶಾಸಕಾಂಗ ಪಕ್ಷದ ನಾಯಕರ ಆಯ್ಕೆಗೆ ಬಿಜೆಪಿಯ ಹಿರಿಯ ನಾಯಕರಾದ ರವಿಶಂಕರ್ ಪ್ರಸಾದ್ ಮತ್ತು ತರುಣ್ ಚುಗ್ ಅವರನ್ನು ವೀಕ್ಷಕರನ್ನಾಗಿ ಕಳುಹಿಸಲಾಗಿತ್ತು. ಖಂಡು ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ತಮ್ಮ ಸಂಪುಟದ ಸಹೋದ್ಯೋಗಿಗಳೊಂದಿಗೆ ಗುರುವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದನ್ನೂ ಓದಿ: ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು, ಸಚಿವರಾಗಿ ಪವನ್‌ ಕಲ್ಯಾಣ್‌ ಪ್ರಮಾಣವಚನ ಸ್ವೀಕಾರ

    ಅರುಣಾಚಲ ಪ್ರದೇಶದಲ್ಲಿ ಪೆಮಾ ಖಂಡು ನೇತೃತ್ವದ ಬಿಜೆಪಿ 60 ಸದಸ್ಯ ಬಲದ ವಿಧಾನಸಭೆಯಲ್ಲಿ 46 ಸ್ಥಾನಗಳಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿತ್ತು. ರಾಜ್ಯದಲ್ಲಿ ಈಚೆಗೆ ನಡೆದ ಚುನಾವಣೆಯಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ 5, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ 3, ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ 2, ಕಾಂಗ್ರೆಸ್ 1 ಮತ್ತು ಪಕ್ಷೇತರ ಅಭ್ಯರ್ಥಿಗಳು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

    ಬಿಜೆಪಿಗೆ ಎನ್‌ಪಿಪಿ ಬೆಂಬಲವನ್ನು ನೀಡಿದೆ. ಆದರೆ ಹೊಸ ಕ್ಯಾಬಿನೆಟ್‌ನಲ್ಲಿ ಪಕ್ಷಕ್ಕೆ ಪ್ರಾತಿನಿಧ್ಯ ಸಿಗುವ ಸಾಧ್ಯತೆಯಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜೂನ್‌ 24 ರಂದು 18ನೇ ಲೋಕಸಭೆಯ ಅಧಿವೇಶನ ಆರಂಭ

  • ವಿಧಾನಸಭಾ ಚುನಾವಣೆ 2024- ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಭರ್ಜರಿ ಜಯ

    ವಿಧಾನಸಭಾ ಚುನಾವಣೆ 2024- ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಭರ್ಜರಿ ಜಯ

    ಇಟಾನಗರ: ಅರುಣಾಚಲ ಪ್ರದೇಶದ (Arunachal Pradesh) ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದೆ. ರಾಜ್ಯದ 60 ವಿಧಾನಸಭಾ ಸ್ಥಾನಗಳ ಪೈಕಿ 46ರಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಈ ಮೂಲಕ ಪೇಮಾ ಖಂಡು ಅವರು ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲಿದ್ದಾರೆ.

    ನ್ಯಾಷನಲ್ ಪೀಪಲ್ಸ್ ಪಾರ್ಟಿ 5 ಸ್ಥಾನಗಳನ್ನು ಗೆದ್ದಿದೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (NCP) 3 ಸ್ಥಾನಗಳನ್ನು ಗೆದ್ದಿದೆ. ಅರುಣಾಚಲದ ಪೀಪಲ್ಸ್ ಪಾರ್ಟಿ 2, ಕಾಂಗ್ರೆಸ್ 1 ಮತ್ತು ಸ್ವತಂತ್ರರು 3 ಸ್ಥಾನಗಳನ್ನು ಗೆದ್ದಿದ್ದಾರೆ.

    2019ರಲ್ಲಿ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 41 ಸ್ಥಾನಗಳನ್ನು ಗೆದ್ದಿತ್ತು. 50.86% ರಷ್ಟು ಮತಗಳನ್ನು ಪಡೆದಿದ್ದಾರೆ. ಜೆಡಿಯು 7 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 2024 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 54.57 % ಮತಗಳನ್ನು ಪಡೆದು 5 ಸ್ಥಾನಗಳನ್ನು ಗಳಿಸಿತು. ಇದನ್ನೂ ಓದಿ: ಅರುಣಾಚಲಪ್ರದೇಶ, ಬಿಜೆಪಿಗೆ ಐತಿಹಾಸಿಕ ದಿನ: ಪೆಮಾ ಖಂಡು

    ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಪೆಮಾ ಖಂಡು ಸೇರಿದಂತೆ 10 ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಗೆದ್ದಿದ್ದಾರೆ. 2016ರ ಜುಲೈನಲ್ಲಿ ಕಾಂಗ್ರೆಸ್‌ನಲ್ಲಿದ್ದಾಗ ಪೆಮಾ ಖಂಡು ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ಸಿಎಂ ಆದ ನಂತರ ಅವರು ಸೆಪ್ಟೆಂಬರ್‌ನಲ್ಲಿ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲಕ್ಕೆ ಸೇರಿದರು. ಇದಾದ ಬಳಿಕ 2016ರ ಡಿಸೆಂಬರ್‌ನಲ್ಲಿ ಬಿಜೆಪಿ ಸೇರಿದ್ದರು.

  • ಅರುಣಾಚಲಪ್ರದೇಶ, ಬಿಜೆಪಿಗೆ ಐತಿಹಾಸಿಕ ದಿನ: ಪೆಮಾ ಖಂಡು

    ಅರುಣಾಚಲಪ್ರದೇಶ, ಬಿಜೆಪಿಗೆ ಐತಿಹಾಸಿಕ ದಿನ: ಪೆಮಾ ಖಂಡು

    ಇಟಾನಗರ: ಅರುಣಾಚಲ ಪ್ರದೇಶಕ್ಕೆ, ಅದರಲ್ಲೂ ಬಿಜೆಪಿಗೆ (BJP) ಇಂದು ಐತಿಹಾಸಿಕ ದಿನ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಹೊಸ ದಾಖಲೆ ನಿರ್ಮಿಸಿದೆ ಎಂದು ಸಿಎಂ ಪೆಮಾ (Pema Khandu) ಖಂಡು ಹೇಳಿದ್ದಾರೆ.

    ಅರುಣಾಚಲ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ ಬೆನ್ನಲ್ಲೇ ಮಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಹೊಸ ದಾಖಲೆ ನಿರ್ಮಿಸಿದೆ.  2019 ರಲ್ಲಿ ನಾವು 41 ಸ್ಥಾನಗಳನ್ನು ಗೆದ್ದಿದ್ದು, ಈ ಬಾರಿ ನಾವು 46 ಸ್ಥಾನಗಳನ್ನು ಗೆದ್ದಿದ್ದೇವೆ. ಈ ಮೂಲಕ ಹೊಸ ದಾಖಲೆ ನಿರ್ಮಿಸಿದ್ದೇವೆ ಎಂದು ತಿಳಿಸಿದರು.

    ಜೂನ್ 4 ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಈ ವೇಳೆ ಗೆಲ್ಲುವ ಎಲ್ಲಾ ಅಭ್ಯರ್ಥಿಗಳು ಇಟಾನಗರಕ್ಕೆ ಆಗಮಿಸುತ್ತಾರೆ. ದೆಹಲಿಯ ಹಿರಿಯ ನಾಯಕರು ಕೂಡ ಬರಬಹುದು. ಪಕ್ಷದ ಔಪಚಾರಿಕತೆಯ ನಂತರ ನಾವು ಹೊಸ ಸರ್ಕಾರ ರಚಿಸಲು ನಮ್ಮ ಹಕ್ಕು ಮಂಡಿಸುತ್ತೇವೆ ಎಂದರು.

    ಒಟ್ಟಿನಲ್ಲಿ ರಾಜ್ಯದ ಎರಡೂ ಲೋಕಸಭಾ ಸ್ಥಾನಗಳನ್ನು ಗೆಲ್ಲುವುದು ನಮಗೆ ಖಚಿತವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿಇಟಿ ಫಲಿತಾಂಶ ದಿಢೀರ್‌ ಪ್ರಕಟ: ಸ್ಪಷ್ಟನೆ ನೀಡಿದ ಕೆಇಎ

    ಬಿಜೆಪಿಯು ಅರುಣಾಚಲ ಪ್ರದೇಶದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳಿದೆ. ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ, 60 ಸದಸ್ಯರ ವಿಧಾನಸಭೆಯಲ್ಲಿ 46 ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷವು ಬಹುಮತವನ್ನು ಪಡೆದುಕೊಂಡಿತು. ಏಪ್ರಿಲ್ 19 ರಂದು ಈಶಾನ್ಯ ರಾಜ್ಯದಲ್ಲಿ ಚುನಾವಣೆ ನಡೆದ 50 ಸ್ಥಾನಗಳ ಮತ ಎಣಿಕೆ ಮುಕ್ತಾಯಗೊಂಡಿದೆ. ಉಳಿದ 10 ಸ್ಥಾನಗಳನ್ನು ಬಿಜೆಪಿಯು  ಅವಿರೋಧವಾಗಿ ಗೆದ್ದಿದೆ. 50 ಸ್ಥಾನಗಳ ಪೈಕಿ ಬಿಜೆಪಿ 36 ವಿಧಾನಸಭಾ ಸ್ಥಾನಗಳನ್ನು ಗೆದ್ದಿದೆ.

  • ವಿರೋಧಿಗಳೇ ಇಲ್ಲ – ಅರುಣಾಚಲ ಪ್ರದೇಶ ಸಿಎಂ ಸೇರಿ 5 ಬಿಜೆಪಿ ಅಭ್ಯರ್ಥಿಗಳು ಅವಿರೋಧ ಆಯ್ಕೆ

    ವಿರೋಧಿಗಳೇ ಇಲ್ಲ – ಅರುಣಾಚಲ ಪ್ರದೇಶ ಸಿಎಂ ಸೇರಿ 5 ಬಿಜೆಪಿ ಅಭ್ಯರ್ಥಿಗಳು ಅವಿರೋಧ ಆಯ್ಕೆ

    ಇಟಾನಗರ: ಅರುಣಾಚಲ ಪ್ರದೇಶದ (Arunachal Pradesh) ಮುಖ್ಯಮಂತ್ರಿ ಪೆಮಾ ಖಂಡು (CM Pema Khandu) ಸೇರಿದಂತೆ ಐವರು ಬಿಜೆಪಿ (BJP) ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

    ವಿಧಾನಸಭಾ ಚುನಾವಣೆಯ  ನಾಮಪತ್ರ ಸಲ್ಲಿಕೆಯ ಡೆಡ್‌ಲೈನ್‌ ಇಂದು ಮುಕ್ತಾಯವಾಗಿದ್ದು 5 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಚುನಾವಣಾ ಆಯೋಗ (Election Commission) ಇನ್ನೂ ಅಧಿಕೃತವಾಗಿ ಐವರು ವಿಜಯಿ ಆಗಿದ್ದಾರೆ ಎಂದು ಘೋಷಣೆ ಮಾಡಿಲ್ಲ. ಹಲವು ಕ್ಷೇತ್ರಗಳಲ್ಲಿ ವಿರೋಧ ಪಕ್ಷಗಳು ದುರ್ಬಲಗೊಂಡಿದ್ದು ಈ ಬಾರಿ ಆಡಳಿತ ಸರ್ಕಾರ ಕ್ಲೀನ್‌ ಸ್ವೀಪ್‌ ಮಾಡುವ ಸಾಧ್ಯತೆಯಿದೆ.  ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಕಿರಿಕ್‌ ಚೀನಾಗೆ ಠಕ್ಕರ್‌ – ವಿಶ್ವದ ಅತೀ ಉದ್ದದ ದ್ವಿಪಥ ಸುರಂಗ ಲೋಕಾರ್ಪಣೆಗೊಳಿಸಿದ ಮೋದಿ

    ಕೇಂದ್ರ ಸಚಿವ ಕಿರಣ್‌ ರಿಜಿಜು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ, ರಾಷ್ಟ್ರದ ಚಿತ್ತವನ್ನು ತೋರಿಸುವಲ್ಲಿ ಅರುಣಾಚಲ ಪ್ರದೇಶ ಮುಂದಿದೆ. ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕೊನೆಯ ದಿನ ಸಿಎಂ ನೇತೃತ್ವದಲ್ಲಿ ಬಿಜೆಪಿ 5 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಿಂದ ರಾಜ್ಯದಲ್ಲಿ ಅಗಾಧ ಅಭಿವೃದ್ಧಿಯಾಗಿದೆ ಎಂದು ಬರೆದುಕೊಂಡಿದ್ದಾರೆ.

  • ಬಿಹು ಹಬ್ಬದಲ್ಲಿ ಕುಣಿದು ಕುಪ್ಪಳಿಸಿದ ಅರುಣಾಚಲ ಪ್ರದೇಶದ ಸಿಎಂ

    ಬಿಹು ಹಬ್ಬದಲ್ಲಿ ಕುಣಿದು ಕುಪ್ಪಳಿಸಿದ ಅರುಣಾಚಲ ಪ್ರದೇಶದ ಸಿಎಂ

    ಇಟಾನಗರ: ಅಸ್ಸಾಮಿ ಹಬ್ಬ ಬಿಹು ಆಚರಣೆಯ ವೇಳೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ಕುಣಿದು ಕುಪ್ಪಳಿಸಿದ್ದಾರೆ.

    ಮುಖ್ಯಮಂತ್ರಿಗಳು ಇಟಾನಗರದಲ್ಲಿರುವ ತಮ್ಮ ನಿವಾಸದಲ್ಲಿ ಅಸ್ಸಾಮಿ ಸಮುದಾಯದ ಬಿಹು ಹಬ್ಬ ಆಚರಣೆಯಲ್ಲಿ ಪಾಲ್ಗೊಂಡರು. ಈ ಹಬ್ಬದ ಪುಟ್ಟ ವೀಡಿಯೋವೊಂದನ್ನು ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಬಿಹು ನೃತ್ಯವನ್ನು ಕಲಿಯಲು ಪ್ರಯತ್ನಿಸಿದ್ದೇನೆ. ಇಟಾನಗರದ ನನ್ನ ನಿವಾಸದಲ್ಲಿ ನಡೆದ ಬಿಹು ಹಬ್ಬದ ವೇಳೆ ಅಸ್ಸಾಮಿ ಸಮುದಾಯವರೊಂದಿಗೆ ಸೇರಿಕೊಂಡೆನು. ಇಂತಹ ಆಚರಣೆಯ ಮನೋಭಾವವು ಅರುಣಾಚಲ ಮತ್ತು ಅಸ್ಸಾಂ ನಡುವಿನ ಹಳೆಯ ಸಾಂಸ್ಕøತಿಕ ಬಾಂಧವ್ಯವನ್ನು ಪುನಃ ಸೃಷ್ಟಿಸುತ್ತದೆ. ಇದನ್ನೂ ಓದಿ: ಗೃಹ ಸಚಿವ ಆರಗ ಜ್ಞಾನೇಂದ್ರ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ: ಕೆ.ಜಿ ಬೋಪಯ್ಯ

    ಶುಕ್ರವಾರ ಟ್ವಿಟ್ಟರ್‌ನಲ್ಲಿ ಶ್ರೀ ಖಂಡು ಬರೆದುಕೊಂಡಿದ್ದಾರೆ, “ಬಿಹು ನೃತ್ಯದ ನನ್ನ ಪ್ರಯತ್ನವು ಚಲಿಸುತ್ತದೆ. ನನ್ನ ನಿವಾಸದಲ್ಲಿ ಬಿಹು ಹಬ್ಬಕ್ಕಾಗಿ ಇಟಾನಗರದ ಅಸ್ಸಾಮಿ ಸಮುದಾಯವನ್ನು ಸೇರಿಕೊಂಡಿದ್ದೇನೆ. ಅಂತಹ ಆಚರಣೆಯ ಮನೋಭಾವವು ಅರುಣಾಚಲ ಮತ್ತು ಅಸ್ಸಾಂ ನಡುವಿನ ಹಳೆಯ ಸಾಂಸ್ಕೃತಿಕ ಬಾಂಧವ್ಯವನ್ನು ಪುನಃ ಹುಟ್ಟುಹಾಕಲಿ. ಸದಾ ಅಭಿವೃದ್ಧಿಯಾಗುವುದಕ್ಕೆ ಮುಂದುವರಿಸಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಆಡಳಿತ ಟೀಕಿಸಿದ ಸಿಧು- ಭಗವಂತ್ ಮಾನ್‍ಗೆ ಬೆಂಬಲ

    ಬೋಹಾಗ್ ಬಿಹು ಅಥವಾ ರೊಂಗಾಲಿ ಬಿಹು, ಅಸ್ಸಾಂನ ದೊಡ್ಡ ಹಬ್ಬಗಳಲ್ಲಿ ಒಂದಾಗಿದ್ದು, ಪ್ರತಿ ವರ್ಷ ಏಪ್ರಿಲ್ ಎರಡನೇ ವಾರದಲ್ಲಿ ಬರುತ್ತದೆ. ಇದು ಸುಗ್ಗಿಯ ಅವಧಿಯ ಆರಂಭವನ್ನು ಸೂಚಿಸುತ್ತದೆ. ಈ ವರ್ಷ ಬೋಹಾಗ್ ಬಿಹುವನ್ನು ಏಪ್ರಿಲ್ 14 ರಿಂದ ಏಪ್ರಿಲ್ 16ರವರೆಗೆ ಆಚರಿಸಲಾಯಿತು.

  • 50 ಜನರ ಸಮಸ್ಯೆ ಆಲಿಸಲು 24 ಕಿ.ಮೀ. ನಡೆದ ಅರುಣಾಚಲ ಸಿಎಂ

    50 ಜನರ ಸಮಸ್ಯೆ ಆಲಿಸಲು 24 ಕಿ.ಮೀ. ನಡೆದ ಅರುಣಾಚಲ ಸಿಎಂ

    – ರಸ್ತೆಯಿಲ್ಲದ ಕಾರಣ 11 ಗಂಟೆಗಳ ಕಾಲ ಕಾಲ್ನಡಿಗೆ
    – ಜನರ ಜೊತೆ 2 ದಿನ ಕಳೆದು, ಸಮಸ್ಯೆ ಅರಿತ ಸಿಎಂ

    ಇಟಾನಗರ: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ತಮ್ಮ ಜನರನ್ನು ಭೇಟಿ ಮಾಡಲು ಸುಮಾರು 11 ಗಂಟೆಗಳ ಕಾಲ 24 ಕಿ.ಮೀ ದೂರ ನಡೆದುಕೊಂಡು ಹೋಗುವ ಮೂಲಕ ಮಾದರಿಯಾಗಿದ್ದಾರೆ.

    ಸಿಎಂ ಪೆಮಾ ಖಂಡು ತವಾಂಗ್ ಜಿಲ್ಲೆಯ ಮುಕ್ತೋ ಕ್ಷೇತ್ರದ ಹಳ್ಳಿಯ ಜನರನ್ನು ಭೇಟಿ ಮಾಡಲು 24 ಕಿ.ಮೀ ದೂರ ಪ್ರಯಾಣ ಮಾಡಿದ್ದಾರೆ. 41 ವರ್ಷದ ಮುಖ್ಯಮಂತ್ರಿ ಪರ್ವತ ಭೂ ಪ್ರದೇಶಗಳು ಮತ್ತು ಕಾಡುಗಳ ಮೂಲಕ ನಡೆದು ತವಾಂಗ್‍ನಿಂದ 97 ಕಿ.ಮೀ ದೂರದಲ್ಲಿರುವ ಲುಗುಥಾಂಗ್ ಗ್ರಾಮಕ್ಕೆ ಹೋಗಿದ್ದರು.

    ಸಿಎಂ ಪೆಮಾ ಖಂಡು ತವಾಂಗ್ ಜಿಲ್ಲೆಯ ಮುಕ್ತೋ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಅವರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಲುಗುಥಾಂಗ್ ಗ್ರಾಮ ಭಾರತ ಮತ್ತು ಚೀನಾ ಗಡಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿನ ಕುಗ್ರಾಮವಾಗಿದೆ. ಸಮುದ್ರ ಮಟ್ಟದಿಂದ 14,500 ಅಡಿ ಎತ್ತರದಲ್ಲಿರುವ ಈ ಗ್ರಾಮದಲ್ಲಿ 10 ಮನೆಗಳಿದ್ದು, ಅದರಲ್ಲಿ 50 ಜನರು ವಾಸ ಮಾಡುತ್ತಿದ್ದಾರೆ.

    ಲುಗುಥಾಂಗ್ ಗ್ರಾಮಕ್ಕೆ ಯಾವುದೇ ರಸ್ತೆ ಸಂಪರ್ಕ ಇಲ್ಲ. ಹೀಗಾಗಿ ಸಿಎಂ ಖಂಡು ತಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನು ಅರಿಯಲೆಂದು 3 ದಿನಗಳ ಹಿಂದೆ ಪ್ರವಾಸ ಕೈಗೊಂಡಿದ್ದರು. ಬಸ್ ಇಲ್ಲದ ಕಾರಣ ಸುಮಾರು 11 ಗಂಟೆಗಳ ಕಾಲ ನಿರಂತರವಾಗಿ ನಡೆದುಕೊಂಡು 24 ಕಿ.ಮೀ. ದೂರವನ್ನು ಕಾಲ್ನಡಿಗೆಯ ಮೂಲಕ ತಲುಪಿದ್ದರು. ನಂತರ ಎರಡು ದಿನ ಗ್ರಾಮದಲ್ಲೇ ಉಳಿದುಕೊಂಡು ಅವರ ಸಮಸ್ಯೆಗಳನ್ನು ಆಲಿಸಿ ವಾಪಸ್ ಬಂದಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಖಂಡು, “24 ಕಿ.ಮೀ. ಕಾಲ್ನಡಿಗೆ. 11 ಗಂಟೆಗಳ ತಾಜಾ ಗಾಳಿ ಮತ್ತು ಪ್ರಕೃತಿ ಅತ್ಯುತ್ತಮ. ತವಾಂಗ್ ಜಿಲ್ಲೆಯ ಕಾರ್ಪು-ಲಾ (16,000 ಅಡಿ) ದಿಂದ ಲುಗುಥಾಂಗ್ (14,500 ಅಡಿ) ದಾಡಿದೆ. ಸ್ವರ್ಗ ಸ್ಪರ್ಶಿಸಿದ ಅನುಭವವಾಗಿದೆ” ಎಂದು ಬರೆದುಕೊಂಡಿದ್ದಾರೆ. ಮುಖ್ಯಮಂತ್ರಿ ಜೊತೆ ತವಾಂಗ್ ಶಾಸಕ, ಗ್ರಾಮಸ್ಥರು ಮತ್ತು ಒಬ್ಬ ಭದ್ರತಾ ಸಿಬ್ಬಂದಿ ಇದ್ದರು.