Tag: Pejavara Sri

  • ಸೈನಿಕರ ಸುರಕ್ಷೆಗೆ ಉಡುಪಿ ಪೇಜಾವರ ಶ್ರೀ ಮಾರ್ಗದರ್ಶನದಲ್ಲಿ ಸುದರ್ಶನ ಯಾಗ

    ಸೈನಿಕರ ಸುರಕ್ಷೆಗೆ ಉಡುಪಿ ಪೇಜಾವರ ಶ್ರೀ ಮಾರ್ಗದರ್ಶನದಲ್ಲಿ ಸುದರ್ಶನ ಯಾಗ

    ಉಡುಪಿ: ಸೈನಿಕರ ಕ್ಷೇಮ, ದೇಶದ ಸುರಕ್ಷೆಗೆ ಪ್ರಾರ್ಥಿಸಿ ಉಡುಪಿ(Udupi) ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ(Muchlukodu Subramanya Swamy Temple) ಸುದರ್ಶನ ಮಂತ್ರ ಯಾಗ ನಡೆಯಿತು.

    ದೇಶದ ಗಡಿಭಾಗದಲ್ಲಿ ಶತ್ರುರಾಷ್ಟ್ರಗಳ ಸವಾಲುಗಳನ್ನೆದುರಿಸಿ ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ದಿಟ್ಟತನದಿಂದ ದೇಶವನ್ನು ಕಾಯುತ್ತಾ ಸೈನಿಕರ ಯೋಗಕ್ಷೇಮ ಮತ್ತು ದೇಶದ ಸುರಕ್ಷೆ ಸಮೃದ್ಧಿಗಾಗಿ ಪ್ರಾರ್ಥಿಸಿ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಸಂಕಲ್ಪನಾನುಸಾರ ಈ ಯಾಗ ಹಮ್ಮಿಕೊಳ್ಳಲಾಗಿತ್ತು. ಇದನ್ನೂ ಓದಿ: ಹಸೆಮಣೆ ಏರಿದ ‘ಬಿಗ್ ಬಾಸ್’ ಖ್ಯಾತಿಯ ಶಮಂತ್ ಗೌಡ

    ಉಡುಪಿಯ ಪ್ರಾಚೀನ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸಂಜೆ ಮಹಾಸುದರ್ಶನ ಮಂತ್ರ ಯಾಗ, ವಿದ್ವಾನ್ ಯಾಗ ಹೋಮ ನೆರವೇರಿದವು. ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡ ಶ್ರೀಗಳು ದೇವ ಸೇನಾಧಿಪತಿಯಾದ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ನಡೆಸಿದ ಈ ಯಾಗದ ಪೂರ್ಣ ಶ್ರೇಯಸ್ಸು ದೇಶದ ಗಡಿಕಾಯುವ ಸೈನಿಕರ ಶ್ರೇಯಸ್ಸಿಗಾಗಿ ಮತ್ತು ದೇಶದ ಸುರಕ್ಷತೆಗಾಗಿ ಅರ್ಪಿಸೋಣ ಎಂದರು. ಇದನ್ನೂ ಓದಿ: ಕಾಂಗ್ರೆಸ್‌ನ ಕೆಲ ಅಯೋಗ್ಯರು ದೇಶವಿರೋಧಿ ಹೇಳಿಕೆ ಕೊಡುತ್ತಿದ್ದಾರೆ – ಬಿವೈ ವಿಜಯೇಂದ್ರ ಕಿಡಿ

  • ಮಹಿಷಾಸುರ ದುರ್ಗುಣಗಳ ಪ್ರತೀಕ; ಮಹಿಷ ದಸರಾ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವುದಿಲ್ಲ: ಪೇಜಾವರ ಶ್ರೀ

    ಮಹಿಷಾಸುರ ದುರ್ಗುಣಗಳ ಪ್ರತೀಕ; ಮಹಿಷ ದಸರಾ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವುದಿಲ್ಲ: ಪೇಜಾವರ ಶ್ರೀ

    ಚಿಕ್ಕೋಡಿ: ಮಹಿಷಾಸುರ (Mahishasur) ದುರ್ಗುಣಗಳ ಪ್ರತೀಕ ಎಂದು ಮಹಿಷ ದಸರಾ ಉತ್ಸವ ಆಚರಣೆ ಕುರಿತು ಉಡುಪಿಯ ಪೇಜಾವರ ಶ್ರೀಗಳು (Pejavara Sri) ಪ್ರತಿಕ್ರಿಯೆ ನೀಡಿದ್ದಾರೆ.

    ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ (Hukkeri) ಪಟ್ಟಣದ ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ಭಾಗಿಯಾಗಿ ಪೇಜಾವರ ಶ್ರೀಗಳು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದರು. ಮಹಿಷಾಸುರ ಮರ್ದಿನಿ ಎಂದು ಚಾಮುಂಡೇಶ್ವರಿ ಪೂಜೆ ಮಾಡುತ್ತೇವೆ. ದುಷ್ಟ ಅಂತ ಹೇಳಿ ಚಾಮುಂಡೇಶ್ವರಿ ಮಹಿಷಾಸುರನನ್ನು ಮರ್ದನ ಮಾಡಿದ್ದಾಳೆ ಎಂದು ತಿಳಿಸಿದರು.

    ಚಾಮುಂಡೇಶ್ವರಿ ಉತ್ಸವವನ್ನು ಸರ್ಕಾರವೇ ಮಾಡುತ್ತಿದೆ. ಮತ್ತೊಂದು ಕಡೆ ಮಹಿಷಾಸುರನ ಉತ್ಸವ ಮಾಡುವಲ್ಲಿ ಅರ್ಥವಿಲ್ಲ. ದುರ್ಗುಣಗಳ ಉತ್ಸವ ಮಾಡುವುದು ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಭಾರತದಲ್ಲಿ ಇರಬೇಕೆಂದರೆ ಭಾರತ್ ಮಾತಾ ಕಿ ಜೈ ಎನ್ನಬೇಕು: ಕೇಂದ್ರ ಸಚಿವ

    ಪ್ರೋ.ಕೆಎಸ್ ಭಗವಾನ್ ಒಕ್ಕಲಿಗರ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಭಗವಾನ್ ಅವರ ವಿಚಾರಕ್ಕೆ ಬಿಟ್ಟಿದ್ದು. ಸಮಾಜದಲ್ಲಿ ಹೆಸರು ಬರಲು ದೊಡ್ಡವರ ಬಗ್ಗೆ ತುಚ್ಛವಾಗಿ ನಿಂದಿಸುವ, ಪ್ರಚಾರ ಪಡೆಯುವ ಹುನ್ನಾರ ಭಗವಾನ್ ಅವರದ್ದಾಗಿದೆ ಎಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಪಬ್ಲಿಕ್ ಟಿವಿಗೆ ಪೇಜಾವರ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಐಸಿಎಸ್‌ಐ ವಾಕಥಾನ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಲಿಂಗಿಗಳಿಗೆ ವೈವಾಹಿಕ ಜೀವನದ ಮುದ್ರೆ ಒತ್ತುವ ತೀರ್ಪು ಸಲ್ಲದು: ಪೇಜಾವರ ಶ್ರೀ

    ಸಲಿಂಗಿಗಳಿಗೆ ವೈವಾಹಿಕ ಜೀವನದ ಮುದ್ರೆ ಒತ್ತುವ ತೀರ್ಪು ಸಲ್ಲದು: ಪೇಜಾವರ ಶ್ರೀ

    – ಸುಪ್ರೀಂ ಗೌರವಿಸುವ ಜನತೆಗೆ ಈ ತೀರ್ಪು ಉಭಯ ಸಂಕಟವಾಗಬಾರದು

    ಬಾಗಲಕೋಟೆ: ವೈವಾಹಿಕ ಜೀವನಕ್ಕೆ ತನ್ನದೇ ಆದ ಪಾವಿತ್ರ‍್ಯವಿದೆ. ಈ ಸಲಿಂಗಿಗಳಿಗೆ ವೈವಾಹಿಕ ಜೀವನದ (Same-sex Marriage) ಮುದ್ರೆ ಒತ್ತುವುದು ಸಲ್ಲದು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Pejavara Sri) ಹೇಳಿದರು.

    ಶುಕ್ರವಾರ ಬಾಗಲಕೋಟೆಯಲ್ಲಿ (Bagalkote) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಸಮಾಜ ವಿದ್ವಾಂಸರನ್ನು, ಧರ್ಮಶಾಸ್ತ್ರ ಅರಿತವರನ್ನು ಜೊತೆ ಸೇರಿಸಿ ವಿಚಾರ ವಿಮರ್ಶೆ ಕೈಗೊಳ್ಳಬೇಕು. ಆದರೆ ಸುಪ್ರೀಂ ನೇರವಾಗಿ ತೀರ್ಪು ಕೊಡುವ ಮೂಲಕ ಸಮಾಜದ ಭಾವನಾತ್ಮಕ ವಿಚಾರಗಳು, ಶಾಸ್ತ್ರೀಗಳ ವಿಚಾರಗಳ ಮೇಲೆ ನೇರವಾಗಿ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿದರು.

    ಸುಪ್ರೀಂ ಕೋರ್ಟ್‌ಗೆ (Supreme Court) ಅದರದೇ ಆದ ಗೌರವ ಸ್ಥಾನಮಾನವಿದೆ. ಹಾಗಾಗಿ ತೀರ್ಪನ್ನು ಒಪ್ಪುತ್ತೇವೆ. ಆದರೆ ತೀರ್ಪು ಕೊಡುವ ಮುಂಚೆ ರಾಜಪ್ರಭುತ್ವ ನಮ್ಮಲ್ಲಿಲ್ಲ. ಆ ತೀರ್ಪು ಅಡ್ಡ ಬಾಗಿಲಿನಿಂದ ಬಂದಿದೆ ಎಂಬ ಭಾವ ಸಮಾಜಕ್ಕೆ ಬರಬಾರದು ಎಂಬುದು ನಮ್ಮ ಭಾವನೆ ಎಂದರು. ಇದನ್ನೂ ಓದಿ: ಶನಿವಾರ ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ – ಪರ್ಯಾಯ ರಸ್ತೆಗಳ ಪೂರ್ಣ ವಿವರ ಇಲ್ಲಿದೆ

    ಸುಪ್ರೀಂ ಕೋರ್ಟ್ ರಾಜಪ್ರಭುತ್ವ ಇನ್ನೊಂದು ಮುಖ ಆಗಬಾರದು. ನ್ಯಾಯಾಲಯ ಗೌರವಿಸುವ ಜನತೆಗೆ ಈ ತೀರ್ಪು ಉಭಯ ಸಂಕಟವಾಗಬಾರದು ಎಂದು ತಿಳಿಸಿದರು.

    ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕೆಂದು ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಸಲಿಂಗಿ ವಿವಾಹಕ್ಕೆ ಮಾನ್ಯತೆ ನೀಡಬಾರದು ಎಂದು ಧಾಮಿರ್ಕ ಮುಖಂಡರು ವಾದಿಸುತ್ತಿದ್ದಾರೆ. ಇದನ್ನೂ ಓದಿ: ಮತಯಾಚನೆ ವೇಳೆ ಪರಮೇಶ್ವರ್‌ ತಲೆಗೆ ಕಲ್ಲೇಟು, ರಕ್ತಸ್ರಾವ

  • ಪೇಜಾವರ ಶ್ರೀಗಳ ಆರೋಗ್ಯಕ್ಕಾಗಿ ರಾಯಚೂರಿನಲ್ಲಿ ವಿಶೇಷ ಪ್ರಾರ್ಥನೆ

    ಪೇಜಾವರ ಶ್ರೀಗಳ ಆರೋಗ್ಯಕ್ಕಾಗಿ ರಾಯಚೂರಿನಲ್ಲಿ ವಿಶೇಷ ಪ್ರಾರ್ಥನೆ

    ರಾಯಚೂರು: ಉಡುಪಿಯ ಪೇಜಾವರ ಶ್ರೀಗಳು ಅನಾರೋಗ್ಯದಿಂದ ಆಸ್ಪತ್ರೆ ದಾಖಲಾದ ಹಿನ್ನೆಲೆ ಬೇಗ ಗುಣಮುಖರಾಗಲಿ ಎಂದು ಅವರ ಶಿಷ್ಯ ಬಳಗ ರಾಯಚೂರಿನಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ.

    ರಾಯಚೂರು ನಗರದ ಕೋಟೆ ಪ್ರದೇಶದಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಪ್ರ ಯುವಕ ಸಂಘ ಹಾಗೂ ರಾಘವೇಂದ್ರ ವಿದ್ಯಾರ್ಥಿ ವಸತಿ ನಿಲಯದ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು.

    ಹಿಂದು ಧರ್ಮದ ಉನ್ನತಿಗೆ ಶ್ರಮಿಸಿ ಹಿಂದು ಧರ್ಮದ ಪ್ರಮುಖರಾಗಿರುವ ಶ್ರೀ ವಿಶ್ವೇಶತೀರ್ಥ ಸ್ವಾಮಿಗಳು ಬೇಗ ಗುಣಮುಖರಾಗಲಿ ಇನ್ನಷ್ಟು ದಿನ ಭಕ್ತರಿಗೆ ಶಿಷ್ಯರಿಗೆ ಮಾರ್ಗದರ್ಶನ ನೀಡಲಿ ಎಂದು ಪ್ರಾರ್ಥಿಸಿದರು. ನೂರಾರು ಜನರು ವಿಷ್ಣು ಸಹಸ್ರ ಪರಾಯಣ, ಮನ್ನಿಸೋತ್ರು, ಸುಂದರಕಾಂಡ, ಗುರುಸ್ತ್ರೋತ್ರ ಪಾರಾಯಣ ಮಾಡಿದರು. ಸ್ವಾಮಿಗಳ ಆರೋಗ್ಯ ವೃದ್ಧಿಯಾಗಲಿ ಎಂದು ಶ್ರೀರಾಘವೇಂದ್ರ ಸ್ವಾಮಿಗಳು ಹಾಗೂ ಟೀಕಾರಾಯರ ಸನ್ನಿದಿಯಲ್ಲಿ ಪ್ರಾರ್ಥಿಸಿದರು.

  • ಉರಿ ಸಿನಿಮಾ ನೋಡಿ ಪೇಜಾವರಶ್ರೀ ಕಣ್ಣೀರು!

    ಉರಿ ಸಿನಿಮಾ ನೋಡಿ ಪೇಜಾವರಶ್ರೀ ಕಣ್ಣೀರು!

    ಉಡುಪಿ: ದೇಶಭಕ್ತಿ ಮತ್ತು ಸೈನಿಕರ ಜೀವನಗಾಥೆಯನ್ನು ಸಾರುವ ‘ಉರಿ ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರವನ್ನು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ನೋಡಿದ್ದಾರೆ. ಚಿತ್ರ ವೀಕ್ಷಣೆ ವೇಳೆ ಮೂರ್ನಾಲ್ಕು ಬಾರಿ ಸ್ವಾಮೀಜಿ ಕಣ್ಣೀರು ಹಾಕಿದ್ದಾರೆ.

    ಸ್ವಾಮೀಜಿ ಗುರುವಾರ ರಾತ್ರಿ 10 ಗಂಟೆಗೆ ಮಣಿಪಾಲದ ಭಾರತ್ ಮಾಲ್ ನಲ್ಲಿ ಚಿತ್ರ ವೀಕ್ಷಣೆ ಮಾಡಿದ್ದಾರೆ. ದೇಶಭಕ್ತಿ ಸಾರುವ ಚಿತ್ರ ಇದಾಗಿದ್ದು, ಪೇಜಾವರ ಶಿಷ್ಯ ವಿಶ್ವ ಪ್ರಸನ್ನ ತೀರ್ಥರು, ಸೋದೆ ಮಠದ ವಿಶ್ವವಲ್ಲಭ ತೀರ್ಥರ ಜೊತೆಯಾಗಿ ಸಿನಿಮಾವನ್ನು ವೀಕ್ಷಿಸಿದ್ದಾರೆ. ನೂರಾರು ಶಿಷ್ಯರ ಜೊತೆಗೆ ಚಿತ್ರ ವೀಕ್ಷಿಸುವ ವೇಳೆ ಸ್ವಾಮೀಜಿ ಅವರು ಎರಡು ಮೂರು ಬಾರಿ ಕಣ್ಣೀರು ಹಾಕಿದ್ದಾರೆ.

    ಚಿತ್ರ ವೀಕ್ಷಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮೀಜಿ, ಉರಿ ಸಿನಿಮಾವನ್ನು ನೋಡಿದೆ. ಸಿನಿಮಾ ನೋಡಿ, ಸೈನಿಕರ ಬಗ್ಗೆ ಬಹಳ ಅಭಿಮಾನ ಗೌರವ ಬೆಳೆಯಿತು. ಸಿನಿಮಾದಲ್ಲಿ ಯೋಧರ ಕೆಲಸದ ಚಿತ್ರಣ ಸಿಕ್ಕಿತು. ಯೋಧರ ಕುಟುಂಬದವರು ಸರ್ಕಾರದ ಸಂಬಳ ಪಡೆಯುವವರು ಬಹಳ ಜನ ಇದ್ದಾರೆ. ಯೋಧರಷ್ಟು ಶ್ರಮ ವೇದನೆ ಪಡುವವರು ಯಾರೂ ಇಲ್ಲ ಎಂಬ ಅನುಭವವಾಯಿತು ಎಂದರು.

    ಯೋಧರು ಜೀವನವನ್ನೇ ದೇಶದ ಜನಕ್ಕೆ ಮುಡಿಪಾಗಿಟ್ಟಿದ್ದಾರೆ. ಅವರ ಕೆಲಸಕ್ಕೆ ನಾವೆಲ್ಲ ತಲೆಬಾಗಬೇಕು. ಉರಿ ಚಿತ್ರ ನೋಡುತ್ತಾ ಮೂರ್ನಾಲ್ಕು ಬಾರಿ ಕಣ್ಣೀರು ಬಂತು ಎಂದು ಸ್ವಾಮೀಜಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೇಜಾವರ ಶ್ರೀಗಳ ಗುರುವಂದನೆ ಕಾರ್ಯಕ್ರಮ – ವಿಶ್ವೇಶತೀರ್ಥ ಸ್ವಾಮೀಜಿಗೆ ರಾಷ್ಟ್ರಪತಿ ದಂಪತಿ ಅಭಿನಂದನೆ

    ಪೇಜಾವರ ಶ್ರೀಗಳ ಗುರುವಂದನೆ ಕಾರ್ಯಕ್ರಮ – ವಿಶ್ವೇಶತೀರ್ಥ ಸ್ವಾಮೀಜಿಗೆ ರಾಷ್ಟ್ರಪತಿ ದಂಪತಿ ಅಭಿನಂದನೆ

    ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳ ಗುರುವಂದನೆ ಕಾರ್ಯಕ್ರಮ ಹಿನ್ನೆಲೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉಡುಪಿಗೆ ಆಗಮಿಸಿದ್ದರು. ಸನ್ಯಾಸ ಸ್ವೀಕರಿಸಿ 80 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪೇಜಾವರ ಸ್ವಾಮಿಗಳನ್ನು ಗೌರವಿಸಿ, ಕೃಷ್ಣನ ದರ್ಶನ ಪಡೆದು ರಾಮಜಪ ಮಾಡಿದರು.

    ದೇಶದ ಹಿರಿಯ ಸಂತ ಪೇಜಾವರ ಶ್ರೀಗಳು ಸನ್ಯಾಸ ಸ್ವೀಕರಿಸಿ 80 ವರ್ಷಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ಉಡುಪಿಯ ಕೃಷ್ಣನ ಅಂಗಳದಲ್ಲಿ ಯತಿಶ್ರೇಷ್ಠ ಪೇಜಾವರ ಶ್ರೀ ಪಾದರಿಗೆ ಗುರುವಂದನೆ ಕಾರ್ಯಕ್ರಮ ಆಯೋಜನೆಯಾಗಿತ್ತು. ಪೇಜಾವರ ಶ್ರೀಗಳ ನೆಚ್ಚಿನ ಶಿಷ್ಯೆ ಸಾದ್ವಿ ಉಮಾ ಭಾರತಿ ಆಶಯದಂತೆ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶದ ಪ್ರಥಮ ಪ್ರಜೆ ಇವತ್ತು ಕೃಷ್ಣನಗರಿಗೆ ಆಗಮಿಸಿದ್ದರು.

    ಪೇಜಾವರ ಮಠಕ್ಕೆ ಆಗಮಿಸಿದ ರಾಷ್ಟ್ರಪತಿಗಳು, ಸ್ವಾಮೀಜಿಗೆ ಶಾಲು ಹೊದಿಸಿ ಗೌರವ ಸಲ್ಲಿಸಿದರು. ಇದೇ ವೇಳೆ ಮಠದ ವತಿಯಿಂದಲೂ ರಾಷ್ಟ್ರಪತಿಗಳಿಗೆ ಯಕ್ಷ ಕಿರೀಟ ತೊಡಿಸಿ ಸನ್ಮಾನ ಮಾಡಲಾಯಿತು. ಈ ವೇಳೆ ಮಾತನಾಡಿದ ರಾಷ್ಟ್ರಪತಿಗಳು, ಶ್ರೀರಾಮ ಈ ದೇಶದ ಮರ್ಯಾದಾ ಪುರುಷೋತ್ತಮ. ರಾಮನ ಜೀವನಾದರ್ಶ ನಮಗೆಲ್ಲಾ ಮಾದರಿ. ರಾಮ ರಾಜ್ಯವೇ ಆದರ್ಶ ರಾಜ್ಯ. ರಾಮನ ಆದರ್ಶ ಪಾಲಿಸಿದರೆ ದೇಶ ಸುಖಿಯಾಗಿರುತ್ತದೆ ಎಂದರು.

    ಗುರುವಂದನೆ ಕಾರ್ಯಕ್ರಮವನ್ನು ಆಯೋಜಿಸಿದ್ದ, ಪೇಜಾವರ ಸ್ವಾಮಿಗಳ ಶಿಷ್ಯೆ, ಕೇಂದ್ರ ಸಚಿವೆ ಉಮಾಭಾರತಿ ಅವರು ಸಂಸತ್ತಿನಲ್ಲಿ ವಿಪ್ ಜಾರಿಯಾದ ಕಾರಣ ಇಂದಿನ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಉಳಿದಂತೆ ಕರ್ನಾಟಕ ರಾಜ್ಯಪಾಲ ವಜೂಭಾಯಿ ವಾಲಾ ಮತ್ತು ನಾಗಾಲ್ಯಾಂಡ್ ರಾಜ್ಯಪಾಲ ಉಡುಪಿ ಮೂಲದ ಪಿ.ಬಿ ಆಚಾರ್ಯ ಅವರು ರಾಷ್ಟ್ರಪತಿಗಳಿಗೆ ಸಾಥ್ ನೀಡಿದರು.

    ಕಾರ್ಯಕ್ರಮದ ಬಳಿಕ ಕೆಲ ಸಮಯ ಪೇಜಾವರ ಶ್ರೀಗಳ ಜೊತೆ ಸಮಾಲೋಚನೆ ನಡೆಸಿದ ರಾಷ್ಟ್ರಪತಿಗಳು ಕೃಷ್ಣಮಠಕ್ಕೆ ಭೇಟಿ ನೀಡಿ, ಅಷ್ಠಮಠಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಪೇಜಾವರ ಶ್ರೀಗಳು ರಾಷ್ಟ್ರಪತಿಗಳನ್ನು ಗೌರವಿಸಿ, ಅವರಿಗೆ ಶ್ರೀಕೃಷ್ಣ ಸಹಿತ ಬೆಳ್ಳಿ ಪ್ರಭಾವಳಿ ನೀಡಿ ಗೌರವಿಸಿದರು. ಈ ವೇಳೆ ಪೇಜಾವರ ಕಿರಿಯ ಶ್ರೀಗಳು, ಪರ್ಯಾಯ ಶ್ರೀಗಳು ಉಪಸ್ಥಿತರಿದ್ದರು. ಪಾಜಕ ಕ್ಷೇತ್ರದಲ್ಲಿ ಮಧ್ವ ಯುನಿವರ್ಸಿಟಿ ಸ್ಥಾಪನೆಗೆ ಸಹಕಾರ ಮತ್ತು ಮಧ್ವ ದಿನಾಚರಣೆ ಪ್ರಾರಂಭಿಸುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದೇನೆ ಎಂದು ಪೇಜಾವರ ಶ್ರೀಗಳು ತಿಳಿಸಿದರು.

    ಈ ಮೊದಲು ಮಠದ ಆವರಣದಲ್ಲಿ ಸಾರ್ವಜನಿಕ ಸಭೆ ನಡೆಸುವ ಯೋಚನೆ ಇತ್ತು. ಆದರೆ ಭದ್ರತೆಯ ಕಾರಣಕ್ಕಾಗಿ ಉಡುಪಿಯಲ್ಲಿ ಸಾರ್ವಜನಿಕ ಸಭೆ ನಡೆಸಲು ಅವಕಾಶ ನೀಡಿಲ್ಲ. ಉಮಾ ಭಾರತಿ ನೇತೃತ್ವದಲ್ಲಿ ನಡೆಯಬೇಕಿದ್ದ ಸಾರ್ವಜನಿಕ ಗುರುವಂದನೆಯನ್ನು ಮುಂದಿನ ದಿನಗಳಲ್ಲಿ ಬೆಂಗಳೂರು ಅಥವಾ ನವದೆಹಲಿಯಲ್ಲಿ ಆಯೋಜಿಸುವ ಚಿಂತನೆ ನಡೆದಿದೆ. ರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ಕೃಷ್ಣಮಠದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ನಿರ್ಭಂದ ವಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv