Tag: Pejavara Shree

  • ತಿರುಪತಿ ಲಡ್ಡು ವಿವಾದ; ಸರ್ಕಾರದ ಸ್ವಾಧೀನದಿಂದ ದೇಗುಲ ಮುಕ್ತಗೊಳಿಸಿ – ಪೇಜಾವರ ಶ್ರೀ

    ತಿರುಪತಿ ಲಡ್ಡು ವಿವಾದ; ಸರ್ಕಾರದ ಸ್ವಾಧೀನದಿಂದ ದೇಗುಲ ಮುಕ್ತಗೊಳಿಸಿ – ಪೇಜಾವರ ಶ್ರೀ

    – ಸರ್ಕಾರವೇ ಈ ಕೃತ್ಯ ನಡೆಸಿರುವುದು ಖಂಡನಾರ್ಹ

    ಅಯೋಧ್ಯೆ/ಉಡುಪಿ: ಲಡ್ಡು ಪ್ರಸಾದಕ್ಕೆ ಹಸುವಿನ ತುಪ್ಪದ ಬದಲು ಕಲಬೆರಕೆ ತುಪ್ಪ ಹಾಕಿದ್ದಾರೆ. ಅದನ್ನು ತುಪ್ಪ ಎಂದು ಕರೆಯಲು ಸಾಧ್ಯವಿಲ್ಲ. ಪ್ರಾಣಿಯ ಕೊಬ್ಬಿನ ಮಿಶ್ರಣದಿಂದ ಪ್ರಸಾದ ತಯಾರಿಸಿದ್ದಾರೆ. ಈ ಬೆಳವಣಿಗೆಯಿಂದ ಖೇದವಾಗಿದೆ ಎಂದು ಅಯೋಧ್ಯೆಯಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ಸ್ವಾಮೀಜಿ (Pejavara Shree) ಹೇಳಿದ್ದಾರೆ.

    ತಿರುಪತಿ ಲಡ್ಡು ವಿವಾದದ (Tirupati Laddu Row) ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸಾದದಲ್ಲಿ ಮೀನಿನ ಎಣ್ಣೆ, ಹಂದಿಯ ಕೊಬ್ಬು, ಹಸುವಿನ ಕೊಬ್ಬು ಬಳಸಿದ್ದಾರೆ. ಇದು ಹಿಂದೂ ಸಮಾಜಕ್ಕೆ ಬಗೆದಿರುವ ದೊಡ್ಡ ಅಪಚಾರ. ಇದು ದೇವರಿಗೆ ಬಗೆದಿರುವ ಅಪಚಾರ. ಸರ್ಕಾರವೇ ಈ ಕೃತ್ಯ ನಡೆಸಿರುವುದು ಖಂಡನಾರ್ಹ ಎಂದು ಕಿಡಿಕಾರಿದರು. ಇದನ್ನೂ ಓದಿ: ತಿರುಪತಿ ಲಡ್ಡಿಗೆ ದನದ ಕೊಬ್ಬು ಬೆರಸುವುದು ಘೋರ ಅಪರಾಧ – ಎಂ.ಬಿ ಪಾಟೀಲ್‌ ವಿಷಾದ

     

    ತಿರುಪತಿಯ ಶ್ರೀನಿವಾಸ ದೇವರು, ಗೋವಿನ ರಕ್ಷಣೆಗೆ ಅವತರಿಸಿದವ. ಕ್ಷೇತ್ರದಲ್ಲಿ ಹಸು ಹುತ್ತಕ್ಕೆ ಹಾಲು ಎರೆಯುತ್ತಿತ್ತಂತೆ. ಮಾಲೀಕ ಹಸುವಿನ ಮೂಲಕ ಹುತ್ತವನ್ನು ಹೊಡೆಯಲು ಬಂದನಂತೆ. ಆಗ ಹುತ್ತದಿಂದ ಮೇಲೆ ಬಂದ ಶ್ರೀನಿವಾಸ ಮಾಲೀಕನ ಏಟಿಗೆ ಮೈಯೊಡ್ಡಿದನಂತೆ. ಹಸುವನ್ನು ರಕ್ಷಿಸಿದ ಶ್ರೀನಿವಾಸ ಅನ್ನೋದು ಇತಿಹಾಸ. ಅಂತಹ ಶ್ರೀನಿವಾಸ ದೇವರಿಗೆ ಹಸುವಿನ ಕೊಬ್ಬಿನ ಪ್ರಸಾದ ನೀಡಿದ್ದೀರಿ. ಇದೊಂದು ಬಹುದೊಡ್ಡ ಅಪರಾಧವಾಗಿದೆ. ಹಿಂದೂಗಳ ಧಾರ್ಮಿಕ ಶ್ರದ್ಧೆಯ ಮೇಲಿನ ಹಲ್ಲೆ ಇದಾಗಿದೆ. ಮನೆಗಳಲ್ಲಿ ಕೂಡ ಇಂತಹ ತುಪ್ಪ ಬಳಸುವುದಿಲ್ಲ. ಉಪಯೋಗಕ್ಕೆ ಅನರ್ಹವಾದ ತುಪ್ಪವನ್ನು ದೇವಾಲಯಕ್ಕೆ ಬಳಸಿದ್ದೀರಿ. ಇಂತಹ ತುಪ್ಪ ತಯಾರಿಸುವ ಅಡ್ಡಗಳನ್ನು ಕಂಡುಹಿಡಿದು ತನಿಖೆ ನಡೆಸುವುದು ಸರ್ಕಾರದ ಕರ್ತವ್ಯ ಎಂದರು. ಇದನ್ನೂ ಓದಿ: ಹಿಂದೂಗಳ ಶ್ರದ್ಧೆಗೆ ಭಂಗ, ಜಗನ್ ಮೋಹನ್ ರೆಡ್ಡಿಯನ್ನು ಬಂಧಿಸಬೇಕು: ಈಶ್ವರಪ್ಪ ಆಗ್ರಹ

    ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಸರ್ಕಾರದ ಹಿಡಿತದಲ್ಲಿ ಇರಬಾರದು. ಶ್ರದ್ಧಾ ಕೇಂದ್ರಗಳು ಹಿಂದೂ ಸಮಾಜದ ಕೈಯಲ್ಲಿರಬೇಕು. ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೀಗೆ ಹೇಳಿದೆ. ತಡ ಮಾಡದೆ ಸರ್ಕಾರದ ಸ್ವಾಧೀನದಿಂದ ದೇಗುಲ ಮುಕ್ತಗೊಳಿಸಿ. ಹಿಂದೂಗಳ ಸಂಸ್ಥೆಗೆ ತಿರುಪತಿ ದೇವಾಲಯದ (Tirupati Temple) ಆಡಳಿತ ನೀಡಿ. ಇನ್ನು ಮುಂದೆ ಇಂತಹ ಘಟನೆ ಮರುಕಳಿಸಬಾರದು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಆಡಳಿತ ಯಂತ್ರದ ಮೇಲೆ ಹದ್ದಿನ ಕಣ್ಣು – ಅನಗತ್ಯ ಸಿಬ್ಬಂದಿಗೆ ಗೇಟ್‌ಪಾಸ್‌ ಕೊಡಲು ಸರ್ಕಾರ ಪ್ಲ್ಯಾನ್!‌

  • ಭಯ ಹುಟ್ಟಿಸುವವರು ಭಯೋತ್ಪಾದಕರು: ಹರಿಪ್ರಸಾದ್ ಹೇಳಿಕೆಗೆ ಪೇಜಾವರ ಶ್ರೀ ಕೆಂಡ

    ಭಯ ಹುಟ್ಟಿಸುವವರು ಭಯೋತ್ಪಾದಕರು: ಹರಿಪ್ರಸಾದ್ ಹೇಳಿಕೆಗೆ ಪೇಜಾವರ ಶ್ರೀ ಕೆಂಡ

    ವಿಜಯಪುರ: ಯಾರು ಹೇಳಿಕೆಗಳ ಮೂಲಕ ಭಯೋತ್ಪಾದನೆ ಮಾಡಬಾರದು. ಹೆಳಿಕೆಗಳಿಂದ ಭಯ ಹುಟ್ಟಿಸುವವರು ಭಯೋತ್ಪಾದಕರು ಎಂದು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ (B. K. Hariprasad) ವಿರುದ್ಧ ಪೇಜಾವರ ಶ್ರೀಗಳು (Pejavara shree) ಕಿಡಿಕಾರಿದ್ದಾರೆ.

    ನಗರದಲ್ಲಿ ( Vijayapura) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಧ್ರಾ ಮಾದರಿಯ ಘಟನೆ ಮರುಕಳಿಸಬಹುದು ಎಂಬ ಬಿ.ಕೆ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ, ಯಾಕೆ ನೇರವಾಗಿ ಇಲಾಖೆಗಳಿಗೆ ಹೋಗಿ ಮಾಹಿತಿ ನೀಡುತ್ತಿಲ್ಲ? ಇವರು ಯಾರನ್ನು ರಕ್ಷಣೆ ಮಾಡುತ್ತಿದ್ದಾರೆ? ಕೇಳಿದ್ರೆ ಹೇಳುತ್ತೇವೆ ಎನ್ನುವುದು ವಿಧ್ವಂಸಕ ಕೃತ್ಯ ನಡೆಯಲಿ ಎಂದಂತೆ ಅಲ್ಲವೇ? ಇವರು ವಿಧ್ವಂಸಕ ಕೃತ್ಯ ನಡೆಸುವವರನ್ನ ರಕ್ಷಣೆ ಮಾಡ್ತಿದ್ದಾರಾ ಎಂದು ಪ್ರಶ್ನೆಗಳ ಮಳೆ ಸುರಿಸಿದ್ದಾರೆ. ಇದನ್ನೂ ಓದಿ: ಗೋದ್ರಾ ದುರಂತದ ರೀತಿ ಮತ್ತೊಮ್ಮೆ ಏನಾದ್ರೂ ಆಗಬಹುದು: ಬಿ.ಕೆ.ಹರಿಪ್ರಸಾದ್‌

    ಜವಾಬ್ದಾರಿ ಸ್ಥಾನದಲ್ಲಿ ಇರುವವರು ಈ ರೀತಿ ಮಾತನಾಡಬಾರದು. ಈಗ ಭಯ ಹುಟ್ಟಿದೆ, ಈಗ ಭಯೋತ್ಪಾದಕರು ಯಾರು? ಯಾರು ಹೇಳ್ತಿದ್ದಾರೋ ಅವರು ಸ್ವತಃ ಭಯೋತ್ಪಾದಕರು ಎಂದು ಆಕ್ರೋಶ ಹೊರಹಾಕಿದ್ದಾರೆ.

    ರಾಮ ಭಕ್ತರನ್ನ ಹೆದರಿಸುವ ನೆಪದಲ್ಲಿ ಇಡೀ ದೇಶವನ್ನು ಹೆದರಿಸುತ್ತಿದ್ದಾರೆ. ಕೃತ್ಯ ನಡೆದರೆ ರಾಮಭಕ್ತರ ಮೇಲಷ್ಟೇ ಅಲ್ಲ, ಎಲ್ಲರ ಮೇಲೂ ಪರಿಣಾಮ ಬೀರಲಿದೆ. ತಮಗೆ ಮಾಹಿತಿ ಇದ್ದರೆ ಅದನ್ನು ಬಹಿರಂಗಪಡಿಸಬೇಕು. ಸಂಬಂಧಪಟ್ಟವರಿಗೆ ಹೋಗಿ ಮಾಹಿತಿ ಕೊಡಬೇಕು. ಅದನ್ನು ಬಿಟ್ಟು ಹೀಗೆ ಆಗಲಿದೆ ಎಂದು ಭಯ ಹುಟ್ಟಿಸುವುದಲ್ಲ. ಇವರು ಯಾರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ? ರಾಮಭಕ್ತರಿಗೋ, ದುಷ್ಕರ್ಮಿಗಳಿಗೋ ಎಂದು ಪ್ರಶ್ನಿಸಿದ್ದಾರೆ.

    ಇನ್ನೂ ಹುಬ್ಬಳ್ಳಿ ಕರಸೇವಕನ ಬಂಧನ ಪ್ರಕರಣದ ವಿಚಾರವಾಗಿ, ತಪ್ಪು ಮಾಡಿದ್ರೆ ತಪ್ಪಿತಸ್ಥರಿದ್ದರೆ ಶಿಕ್ಷೆ ಕೊಡುವುದು ಸರಿ. ಇಂತಹ ಸಮಯ ಸಂದರ್ಭದಲ್ಲಿ ಈ ಘಟನೆ ನಡೆಯುತ್ತಿರುವಂತಹದು ಸರಿಯಲ್ಲ. ಇದು ತಪ್ಪು ಸಂದೇಶ ಕೊಡುತ್ತಿದೆ. ಹಾಗಾಗಿ ಈ ಬಗ್ಗೆ ಸರ್ಕಾರ ಜಾಗೃತವಾಗಿರಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಬಿ.ಕೆ ಹರಿಪ್ರಸಾದ್‌ಗೆ ಮಂಪರು ಪರೀಕ್ಷೆ ಮಾಡಿಸಬೇಕು: ಸಂಗಣ್ಣ ಕರಡಿ

  • ರಾಮಮಂದಿರ ಉದ್ಘಾಟನೆ ನಂತರ ಕೋಟ್ಯಂತರ ಭಕ್ತರಿಗೆ ಅವಕಾಶ: ಪೇಜಾವರ ಶ್ರೀ

    ರಾಮಮಂದಿರ ಉದ್ಘಾಟನೆ ನಂತರ ಕೋಟ್ಯಂತರ ಭಕ್ತರಿಗೆ ಅವಕಾಶ: ಪೇಜಾವರ ಶ್ರೀ

    – ಪ್ರಾಣಪತಿಷ್ಠೆಯಂದು ಸೀಮಿತ ಜನಕ್ಕಷ್ಟೇ ಅವಕಾಶ

    ಉಡುಪಿ: ದೇಶದಲ್ಲಿ ರಾಮನ ಭಕ್ತರು, ಸಂತರು-ಮಹಂತರು ಬಹಳ ಇದ್ದಾರೆ. ಜನಪ್ರತಿನಿಧಿಗಳು, ದಾನಿಗಳು ರಾಮ ಮಂದಿರದ (Ram Mandir) ಪ್ರಾಣ ಪ್ರತಿಷ್ಠೆಗೆ ಭಕ್ತರೆಲ್ಲಾ ಆಮಂತ್ರಿತರು. ಪ್ರಾಣಪ್ರತಿಷ್ಠೆಗೆ ಪ್ರಾತಿನಿಧ್ಯ ಇಟ್ಟುಕೊಂಡು ಆಮಂತ್ರಣ ನೀಡಲು ಆಯ್ಕೆ ಮಾಡಿ ಆಹ್ವಾನ ಕೊಡಲಾಗಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Pejavara Shree) ಹೇಳಿದರು.

    ಉಡುಪಿ (Udupi) ಪೇಜಾವರ ಮಠದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೀಮಿತ ಸ್ಥಳ ಇರುವುದರಿಂದ ಎಲ್ಲರೂ ಭಾಗಿಯಾಗಲು ಕಷ್ಟವಾಗಲಿದೆ. ಪ್ರತಿಷ್ಠಾಪನೆಯ ನಂತರ ಕೋಟ್ಯಂತರ ಭಕ್ತರಿಗೆ ಬಾಲರಾಮನ ದರ್ಶನಕ್ಕೆ ಅವಕಾಶ ಇದೆ. ಯಾವುದೇ ಗೊಂದಲಗಳು ಆಗದಿರಲಿ ಎಂಬುದು ಟ್ರಸ್ಟ್‌ನ ಉದ್ದೇಶ. ದೇಗುಲದ ಪ್ರತಿಷ್ಠಾಪನೆ ಆಗಿರುವುದರಿಂದ ಇದನ್ನು ಯಾವುದೋ ಮೈದಾನದಲ್ಲಿ ಕಾರ್ಯಕ್ರಮ ನೆರವೇರಿಸಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಕರ್ನಾಟಕದಲ್ಲಿ ತುಘಲಕ್ ಸರ್ಕಾರ ನಡೆಯುತ್ತಿದೆ: ರೇಣುಕಾಚಾರ್ಯ ಕಿಡಿ

    ಜನವರಿ 22 ರಂದು ಮೈದಾನದಲ್ಲಿ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲ. ಮಂದಿರದ ಸ್ಥಳಾವಕಾಶ ಬಹಳ ಸೀಮಿತವಾಗಿದೆ. ಭಕ್ತರು ಯಾರೂ ತಪ್ಪು ತಿಳಿಯಬಾರದು. ಆಹ್ವಾನ ಇದ್ದವರು ಖಂಡಿತಾ ಭಾಗಿಯಾಗಬೇಕು. ಉಳಿದವರೆಲ್ಲರೂ ಮುಂದಿನ ದಿನದಲ್ಲಿ ಅಯೋಧ್ಯೆಗೆ (Ayodhya) ಬರಬೇಕು. ಅಯೋಧ್ಯೆಯಲ್ಲಿ ಅನೇಕ ಟೆಂಟ್, ಶೆಡ್ ತಯಾರಾಗಿದ್ದು, ಧನುರ್ಮಾಸ ಇರುವುದರಿಂದ ಹೊರಗೆ ಮಲಗಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: INDIA ಒಕ್ಕೂಟಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್ ಸಂಚಾಲಕ?

  • ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜನಲ್ಲ, ದೊರೆ ರಾಮಭೋಜ ನೀಡಿದ್ದು- ಪೇಜಾವರ ಶ್ರೀ ಸ್ಪಷ್ಟನೆ

    ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜನಲ್ಲ, ದೊರೆ ರಾಮಭೋಜ ನೀಡಿದ್ದು- ಪೇಜಾವರ ಶ್ರೀ ಸ್ಪಷ್ಟನೆ

    ತುಮಕೂರು: ಉಡುಪಿ ಮಠಕ್ಕೆ ಯಾವ ಮುಸ್ಲಿಂ ದೊರೆಗಳು ಜಾಗ ಕೊಟ್ಟಿಲ್ಲ, ಜಾಗ ನೀಡಿದ್ದು ರಾಮ ಭೋಜ ಎಂಬ ಅರಸ ಎಂದು ಪೇಜಾವರ ಶ್ರೀಗಳು (Pejavara shree) ಸ್ಪಷ್ಟಪಡಿಸಿದ್ದಾರೆ.

    ಶ್ರೀ ಮಠಕ್ಕೆ ಮುಸ್ಲಿಂ ದೊರೆಗಳು ಜಾಗ ಕೊಟ್ಟಿದ್ದಾರೆ. ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ (Congress) ಮುಖಂಡ ಮಿಥುನ್ ರೈ ಮಾತಿಗೆ ತುಮಕೂರಿನಲ್ಲಿ (Tumakuru) ಪ್ರತಿಕ್ರಿಯಿಸಿದ ಅವರು, ರೈ ತಪ್ಪಾಗಿ ಅರ್ಥೈಸಿಕೊಂಡು ಹೇಳಿಕೆ ನೀಡಿದ್ದಾರೆ ಎಂದರು. ಇದನ್ನೂ ಓದಿ: ಬೇಹುಗಾರಿಕೆ ಭೀತಿ – 11 ಚೀನಾ ಬ್ರ್ಯಾಂಡ್ ಮೂಬೈಲ್ ಬಳಸದಂತೆ ಸೈನಿಕರಿಗೆ ಸಲಹೆ

    ಮಧ್ವಾಚಾರ್ಯರು ಬದರಿ ಯಾತ್ರೆಗೆ ಹೋಗುವ ಸಂದರ್ಭದಲ್ಲಿ ಗಂಗಾ ನದಿಯ (Ganga River) ದಡದಲ್ಲಿ ತುರುಕರ ರಾಜ ಎದುರಾದಾಗ ಅರ್ಧ ರಾಜ್ಯ ದಾನ ಮಾಡಿದ್ದರು. ಆದರೆ ಉಡುಪಿಯ (Udupi) ಮಠಕ್ಕೆ ಮುಸ್ಲಿಂ ದೊರೆ ಜಾಗ ನೀಡಿದ್ದಲ್ಲ. ಈ ರೀತಿ ಆಧಾರ ರಹಿತ ಹೇಳಿಕೆಯನ್ನು ಮುಂದುವರಿಸುವುದು ಸೂಕ್ತವಲ್ಲ ಎಂದು ಶ್ರೀಗಳು ಕಿವಿಮಾತು ಹೇಳಿದ್ದಾರೆ.

    ಮಧ್ವಾಚಾರ್ಯರು (Madhvacharya) ಬದರಿಗೆ ಹೋಗುವಾಗ ಗಂಗಾ ನದಿ ದಾಟಿ ಹೋಗುವ ಪ್ರಸಂಗ ಎದುರಾಗಿತ್ತು. ಅಲ್ಲಿನ ತುರಕರ ದೊರೆ ನದಿಯನ್ನು ದಾಟಿ ಬರದಂತೆ ಸೇನೆ ನಿಯೋಜಿಸಿದ್ದ. ಆದರೆ ಮಧ್ವಾಚಾರ್ಯರು ತಮ್ಮ ಶಿಷ್ಯರೊಂದಿಗೆ ನದಿಯನ್ನು ಈಜಿಕೊಂಡು ದಾಟುವಾಗ ಸೇನೆ ಇವರನ್ನು ತಡೆಯಲು ಬಂತು. ಈಜುತ್ತಲೇ ನಾವು ಬರುವವರೆಗೆ ಅಲ್ಲೇ ಇರಿ, ನಾವು ನಿಶಸ್ತ್ರಧಾರಿಗಳು ಎಂದು ಸೈನಿಕರಿಗೆ ತಿಳಿಸಿದರು. ನಂತರ ದಡ ತಲುಪಿ ನಿರ್ಭೀತರಾಗಿ ಸೈನಿಕರ ಕಡೆ ನಡೆದರು. ಆಚಾರ್ಯರ ತೇಜಸ್ಸು ತುಂಬಿದ ಮಮತೆಯ ಕಣ್ಣುಗಳಿಗೆ ತುರ್ಕರ ದೊರೆ ಕೂಡ ಪ್ರಭಾವಕ್ಕೆ ಒಳಗಾದ. ಮತ್ತು ಅರ್ಧ ರಾಜ್ಯವನ್ನು ದಾನ ಮಾಡಿದ ಎಂದು ಮದ್ವಾಚಾರ್ಯರ ಉಲ್ಲೇಖವನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಉಡುಪಿ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು: ಮಿಥುನ್ ರೈ ವಿವಾದ

  • ದಲಿತ ಬಾಲಕನಿಗೆ ಸವರ್ಣೀಯರಿಂದ ದಂಡ- ಧರ್ಮ ಗ್ರಂಥಗಳು ಇದನ್ನು ಒಪ್ಪಲ್ಲ: ಪೇಜಾವರ ಶ್ರೀ

    ದಲಿತ ಬಾಲಕನಿಗೆ ಸವರ್ಣೀಯರಿಂದ ದಂಡ- ಧರ್ಮ ಗ್ರಂಥಗಳು ಇದನ್ನು ಒಪ್ಪಲ್ಲ: ಪೇಜಾವರ ಶ್ರೀ

    ಉಡುಪಿ: ಮಾಲೂರಿನಲ್ಲಿ ಉತ್ಸವದ ಸಂದರ್ಭ ಪಲ್ಲಕ್ಕಿ ಮುಟ್ಟಿದ್ದಕ್ಕೆ ಸವರ್ಣೀಯರಿಂದ (Upper Caste) ದಲಿತ ಬಾಲಕನಿಗೆ (Dalit Boy) ಬಹಿಷ್ಕಾರ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ (Udupi) ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ (Pejavara Shree) ತೀವ್ರ ಖೇದ ವ್ಯಕ್ತಪಡಿಸಿದರು.

    ಈ ಘಟನೆಯನ್ನು ಕೇಳಿ ನಮಗೆ ಬಹಳ ಖೇದವಾಗಿದೆ. ಧರ್ಮ ಗ್ರಂಥಗಳು ಇಂತಹ ಬೆಳವಣಿಗೆಯನ್ನು ಒಪ್ಪುವುದಿಲ್ಲ. ಉತ್ಸವ ಇಡೀ ಊರಿಗೆ ಸಂಬಂಧಿಸಿದ ಕಾರ್ಯಕ್ರಮ. ಬಹಿಷ್ಕಾರ ಶಿಕ್ಷೆ ದಂಡವನ್ನು ಯಾವ ಧರ್ಮ ಗ್ರಂಥವೂ ಒಪ್ಪುವುದಿಲ್ಲ. ಹಿಂದೂ ಸಂಘಟನೆಗಳು ಪಿಡುಗಿನ ವಿರುದ್ಧ ಜಾಗೃತಿ ಮೂಡಿಸುತ್ತಿದೆ. ಸರ್ಕಾರ ಕೂಡ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.

    ತಪ್ಪು ಮಾಡಿದವರನ್ನು ಶಿಕ್ಷಿಸಿದರೆ ಸಾಲದು, ಜಾಗೃತ ಕಾರ್ಯಕ್ರಮ ಆಗಬೇಕು. ಸಮಾಜ ಮತ್ತು ಧರ್ಮ ಒಪ್ಪದ ಚಟುವಟಿಕೆಗಳಿಗೆ ಯಾರೂ ಇಳಿಯಬಾರದು ಎಂದು ಪೇಜಾವರ ಶ್ರೀಗಳು ಹೇಳಿದರು. ಇದನ್ನೂ ಓದಿ: ದಲಿತ ಬಾಲಕ ದೇವರ ಮೂರ್ತಿ ಮುಟ್ಟಿದ್ದಕ್ಕೆ 60 ಸಾವಿರ ರೂ. ದಂಡ ಹಾಕಿದ ಗ್ರಾಮಸ್ಥರು

    ಶಿವಮೊಗ್ಗಕ್ಕೆ ಉಗ್ರರ ಪ್ರವೇಶವಾಗಿದೆ ಎಂದು ಕೇಳಿ ನಮಗೆ ಆಘಾತವಾಗಿದೆ. ಮಂಗಳೂರು, ಉಡುಪಿ ಭಾಗದಲ್ಲೂ ಇಂತಹ ಚಟುವಟಿಕೆ ನಡೆದಿದೆ. ಸ್ಯಾಟಲೈಟ್ ಫೋನ್‌ಗಳ ಮೂಲಕ ಸಂಭಾಷಣೆ ನಡೆಯುವುದು ನಮ್ಮ ಗಮನಕ್ಕೆ ಬಂದಿತ್ತು. ನಿಖರವಾದ ಮಾಹಿತಿಗಳ ಜೊತೆಗೆ ಇದನ್ನು ಪರಿಶೀಲನೆ ಮಾಡಬೇಕು. ಪ್ರಕರಣದಲ್ಲಿ ಹತ್ತು ಹಲವು ಜನ ಭಾಗಿ ಆಗಿರುವ ಸಾಧ್ಯತೆ ಇದೆ ಎಂದು ಪೇಜಾವರ ಶ್ರೀ ಸಂಶಯ ವ್ಯಕ್ತಪಡಿಸಿದರು.

    ಉಗ್ರರ ವಿರುದ್ಧ ಕೂಂಬಿಂಗ್ ಮಾದರಿಯಲ್ಲಿ ಪರಿಶೀಲನೆ ಆಗಬೇಕು. ಸಮಾಜದ ಶಾಂತಿ ಕದಡುವುದನ್ನು ತಪ್ಪಿಸಬೇಕು. ಉಗ್ರರಿಂದ ಸಮಾಜದಲ್ಲಿ ಯಾರಿಗೂ ನೆಮ್ಮದಿ ಇಲ್ಲ. ಸಮಾಜದ ಶಾಂತಿ ಕದಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮವಾಗಲಿ. ಯಾವುದೇ ಕೋಮಿನ ಬಣ್ಣ ನೀಡದೆ ಇದನ್ನು ನಿಗ್ರಹ ಮಾಡಬೇಕು. ಭಾರತ ದೇಶದ ಒಳಗೆ ಇರುವವರು ಭಾರತೀಯರು ದೇಶದ ಯಾವುದೇ ಭಾಗದಲ್ಲಿ ಉಗ್ರರ ಕರಿನೆರಳು ಹಾಯಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಹಾಸ್ಟೆಲ್‍ನ ಕಿಟಕಿ ರಾಡ್ ಮುರಿದು ಮೂವರು ವಿದ್ಯಾರ್ಥಿನಿಯರು ಪರಾರಿ

    Live Tv
    [brid partner=56869869 player=32851 video=960834 autoplay=true]

  • ಪೇಜಾವರ ಶ್ರೀಗಳ ಎದೆ ಮೇಲೆ ಕಾಲಿಟ್ಟು ಸೊಪ್ಪು ತಿಂದ ಆಡು

    ಪೇಜಾವರ ಶ್ರೀಗಳ ಎದೆ ಮೇಲೆ ಕಾಲಿಟ್ಟು ಸೊಪ್ಪು ತಿಂದ ಆಡು

    ಉಡುಪಿ: ಪೇಜಾವರ ಶ್ರೀ(Pejavara Shree) ವಿಶ್ವ ಪ್ರಸನ್ನ ತೀರ್ಥರನ್ನು ಕಂಡರೆ ಭಕ್ತರು ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ. ಉಡುಪಿಯ ನೀಲಾವರ ಗೋಶಾಲೆಯ ಆಡೊಂದು ತನ್ನೆರಡು ಕಾಲನ್ನು ಶ್ರೀಗಳ ಎದೆಗಿಟ್ಟು ಮೇವು ತಿಂದಿದೆ.

    ಪೇಜಾವರ ಶ್ರೀಗಳಿಗೆ ಪ್ರಾಣಿಗಳು ಅಂದ್ರೆ ವಿಶೇಷ ಪ್ರೀತಿ. ಉಡುಪಿಯ ನೀಲಾವರ ಗೋಶಾಲೆಯಲ್ಲಿ ಸಾವಿರಾರು ದೇಶಿಯ ಗೋವುಗಳನ್ನು ಸಾಕಿ ಸಲ ಹುತ್ತಿರುವುದು ಇದಕ್ಕೆ ಸಾಕ್ಷಿ. ನೀಲಾವರ ಗೋಶಾಲೆಯಲ್ಲಿ, ಎರಡು ಆಡುಗಳನ್ನು ಸಾಕಲಾಗುತ್ತಿದೆ. ಮಠದ ಅಧೀನದ ಪೆಣರ್ಂಕಿಲ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಂದರ್ಭದಲ್ಲಿ ಕುಟುಂಬವೊಂದು ಅಜದಾನ ಕೊಟ್ಟಿತ್ತು. ಆ ಎರಡು ಆಡುಗಳನ್ನು ನೀಲಾವರ ಗೋಶಾಲೆಗೆ ತಂದು ಸಾಕಲಾಗುತ್ತಿದೆ.

    ಪೇಜಾವರ ಶ್ರೀಗಳು ನೀಲಾವರ ಗೋಶಾಲೆಗೆ ಬಂದಾಗೆಲ್ಲ ಆ ಆಡುಗಳಿಗೆ(Goat) ಆಹಾರ ತಿನ್ನಿಸುತ್ತಾ ಅವುಗಳನ್ನು ಮುದ್ದು ಮಾಡುತ್ತಾರೆ. ಶ್ರೀಗಳು, ಇತ್ತೀಚೆಗೆ ನೀಲಾವರ ಗೋಶಾಲೆಗೆ ಬಂದಾಗ ಆಡಿಗೆ ಸೊಪ್ಪು ನೀಡಿದಾಗ ಆಡು ಪೇಜಾವರ ಶ್ರೀಗಳ ಎದೆ ಮೇಲೆ ತನ್ನ ಎರಡು ಕಾಲನ್ನಿಟ್ಟು, ಸೊಪ್ಪು ತಿಂದಿದೆ. ಸ್ಥಳದಲ್ಲೇ ಇದ್ದ ಭಕ್ತರೊಬ್ಬರು ತಮ್ಮ ಮೊಬೈಲ್‍ನಿಂದ ಇದನ್ನು ಸೆರೆ ಹಿಡಿದು ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋ ನೋಡಿದವರು ಶ್ರೀಗಳ ಪ್ರಾಣಿ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯಾವುದೇ ಮುಲಾಜಿಲ್ಲದೆ ರಾಜಕಾಲುವೆ ತೆರವು: ಬೊಮ್ಮಾಯಿ‌

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಗೋಶಾಲೆಯ ಎಲ್ಲ ಗೋವುಗಳು ಇಲ್ಲಿನ ದೇವಸ್ಥಾನ ಕಚೇರಿ ಸುತ್ತಮುತ್ತಲಿನ ಪರಿಸರದಲ್ಲಿ ಓಡಾಡಿಕೊಂಡಿರುತ್ತವೆ. ಎರಡು ಆಡುಗಳು ಕೂಡ ನಮ್ಮ ಮೇಲೆ ಬಹಳ ಪ್ರೀತಿ ತೋರುತ್ತವೆ. ಗೋವುಗಳು ಸೇರಿದಂತೆ ಎಲ್ಲಾ ಪ್ರಾಣಿಗಳು ತೋರುವ ಪ್ರೀತಿ ಅದು ನಿಷ್ಕಲ್ಮಶ ಎಂದು ಸ್ವಾಮೀಜಿ ಹೇಳಿದರು. ಇದನ್ನೂ ಓದಿ: BBMP ಜೆಸಿಬಿ ಆಪರೇಷನ್ – ಒಂದೇ ವಾರದಲ್ಲಿ ನಲಪಾಡ್ ನಾಟಕ ಬಯಲು

    Live Tv
    [brid partner=56869869 player=32851 video=960834 autoplay=true]

  • ಎಚ್ಚೆತ್ತುಕೊಳ್ಳದಿದ್ದರೆ ನಮಗೂ ಕಾಶ್ಮೀರಿ ಪಂಡಿತರದ್ದೇ ಪರಿಸ್ಥಿತಿ ಬರಬಹುದು – ಪೇಜಾವರ ಶ್ರೀ ಎಚ್ಚರಿಕೆ

    ಎಚ್ಚೆತ್ತುಕೊಳ್ಳದಿದ್ದರೆ ನಮಗೂ ಕಾಶ್ಮೀರಿ ಪಂಡಿತರದ್ದೇ ಪರಿಸ್ಥಿತಿ ಬರಬಹುದು – ಪೇಜಾವರ ಶ್ರೀ ಎಚ್ಚರಿಕೆ

    ಉಡುಪಿ: ದೇಶದ ಪರ-ವಿರೋಧ ಬಹು ಚರ್ಚಿತ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಎಲ್ಲಾ ಭಾಷೆಗಳಲ್ಲೂ ಬರಲಿ. ಸುಳ್ಳಿನ ಸರಮಾಲೆಯಲ್ಲಿ ಮರೆಯಾಗಿದ್ದ ಸತ್ಯವನ್ನು ಸಮಾಜದ ಮುಂದೆ ಬಿಚ್ಚಿಡುವ ಅವಶ್ಯಕತೆ ಇದೆ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

    ಮಣಿಪಾಲದ ಭಾರತದಲ್ಲಿ ಚಿತ್ರ ವೀಕ್ಷಿಸಿದ ಸ್ವಾಮೀಜಿ, ಸತ್ಯದ ಆವಿಷ್ಕಾರ ಮಾಡಿದ ನಿರ್ದೇಶಕರಿಗೆ ಅಭಿನಂದನೆ. ನಾವು ಸದಾ ಕಾಲ ಜಾಗೃತರಾಗಿರಬೇಕು ಎಂಬುದು ಈ ಚಿತ್ರದ ಸಂದೇಶ. ಇದು ಆಗಿ ಹೋಗಿದ್ದಲ್ಲ, ಮುಂದಿನ ದಿನ ನಮಗೂ ಈ ಪರಿಸ್ಥಿತಿ ಬರಬಹುದು. ಹೀಗಾಗಿ ಹಿಂದೂಗಳು ಬಹಳ ಎಚ್ಚರವಾಗಿ ಇರಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಮಾಲ್‍ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಿಸಿದ ಪೇಜಾವರ ಶ್ರೀ, ಕಾಣಿಯೂರು ಶ್ರೀ

    ಈ ಸಿನಿಮಾ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಅನುವಾದವಾಗಲಿ. ಆ ಕಾಲದಲ್ಲಿ ಪಂಡಿತರು ಉಟ್ಟ ಬಟ್ಟೆಯಲ್ಲಿ ಬದುಕುಳಿದರೆ ಸಾಕೆಂದು ಊರು ಬಿಟ್ಟಿದ್ದರು. ಕಾಶ್ಮೀರ ಪಂಡಿತರು ಸ್ವಸ್ಥಾನಕ್ಕೆ ಮರಳಬೇಕು. ಕಾಶ್ಮೀರದಲ್ಲಿದ್ದ ಹಿಂದಿನ ವೈಭವವನ್ನು ಮತ್ತೆ ನಾವೆಲ್ಲರೂ ಕಾಣಬೇಕು. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ದಾಖಲೆಪತ್ರಗಳು ಮತ್ತಿತರ ವ್ಯವಸ್ಥೆಗಳನ್ನು ಅಲ್ಲಿನ ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾಡಬೇಕು ಎಂದರು. ಇದನ್ನೂ ಓದಿ: ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ- ತಪ್ಪಿದ ಭಾರೀ ಅನಾಹುತ

    ಭಾನುವಾರ ಮಣಿಪಾಲದ ಮಾಲ್‌ಗೆ ತೆರಳಿದ್ದ ಉಡುಪಿಯ ಪೇಜಾವರ ಶ್ರೀ ಹಾಗೂ ಕಾಣಿಯೂರು ಸ್ವಾಮೀಜಿ ಜೊತೆಯಾಗಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ವೀಕ್ಷಣೆ ಮಾಡಿದ್ದರು. ಮೊಟ್ಟಮೊದಲ ಬಾರಿಗೆ ಮಾಲ್‌ಗೆ ತೆರಳಿದ್ದ ಸ್ವಾಮೀಜಿಗಳು ನೈಜ ಕಥೆಯಾಧಾರಿತ ಚಿತ್ರ ವೀಕ್ಷಣೆ ಮಾಡಿದ್ದರು.

  • ಹಂಸಲೇಖಾ ವಿರುದ್ಧ ನೀಡಿದ್ದ ದೂರನ್ನು ಹಿಂಪಡೆದ ಕೃಷ್ಣರಾಜ್

    ಹಂಸಲೇಖಾ ವಿರುದ್ಧ ನೀಡಿದ್ದ ದೂರನ್ನು ಹಿಂಪಡೆದ ಕೃಷ್ಣರಾಜ್

    ಬೆಂಗಳೂರು: ಸ್ಯಾಂಡಲ್‍ವುಡ್ ಖ್ಯಾತ ಸಂಗೀತಾ ನಿರ್ದೇಶಕ ಹಂಸಲೇಖಾ ವಿರುದ್ಧ ದಾಖಲಿಸಿದ್ದ ದೂರನ್ನು ಕೃಷ್ಣರಾಜ್ ಅವರು ಹಿಂಪಡೆದುಕೊಂಡಿದ್ದಾರೆ.

    ಇತ್ತೀಚೆಗಷ್ಟೇ ಮೈಸೂರಿನ ಮಾನಸಗಂಗೋತ್ರಿಯಲ್ಲಿಯಲ್ಲಿ ನಡೆದಿದ್ದ ಪ್ರಶಸ್ತಿ ಸಮಾರಂಭವೊಂದರ ಕಾರ್ಯಕ್ರಮದಲ್ಲಿ ಹಂಸಲೇಖ ಅವರು, ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿ ಕುಳಿತುಕೊಂಡು ಬಂದಿದ್ದಾರೆ. ಆದರೆ ದಲಿತರು ಕೋಳಿ ಕೊಟ್ರೆ ತಿಂತಾರಾ.? ಕುರಿ ರಕ್ತ ಪ್ರೈ ಮಾಡಿ ಕೊಟ್ರೆ ತಿಂತಾರಾ. ಲಿವರ್ ಕೊಟ್ರೆ ತಿಂತಾರಾ? ದಲಿತರ ಮನೆಗೆ ಹೋಗುವುದು ದೊಡ್ಡ ವಿಷಯ ಅಲ್ಲ, ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವರು ತಿಂದ ಲೋಟ, ತಟ್ಟೆ ತೊಳೆಯೋದು ದೊಡ್ಡ ವಿಷಯ ಎಂದು ಹೇಳಿದ್ದರು

    ಹೀಗಾಗಿ ಪೇಜಾವರ ಶ್ರೀಗಳ ವಿರುದ್ಧ ಹಂಸಲೇಖ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಕೃಷ್ಣರಾಜ್ ಅವರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಬ್ರಾಹ್ಮಣ ಸಂಘದ ದೂರಿಗೆ ನಾನು ಬೆಂಬಲಿಸ್ತೇನೆ ಅದಕ್ಕಾಗಿ ತನ್ನ ದೂರನ್ನು ಹಿಂಪಡೆಯುವುದಾಗಿ ಸಮಜಾಯಿಷಿ ನೀಡಿ ದೂರನ್ನು ಹಿಂಪಡೆದಿದ್ದಾರೆ. ಇದನ್ನೂ ಓದಿ:  ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ?: ಕ್ಷಮೆ ಕೇಳಿದ ಹಂಸಲೇಖ

  • ವಿಶ್ವ ಹಿಂದೂ ಪರಿಷತ್ ಪುಂಡು ಪೋಕರಿಗಳ ಸಂಸ್ಥೆ ಅಲ್ಲ: ಪೇಜಾವರ ಶ್ರೀ

    ವಿಶ್ವ ಹಿಂದೂ ಪರಿಷತ್ ಪುಂಡು ಪೋಕರಿಗಳ ಸಂಸ್ಥೆ ಅಲ್ಲ: ಪೇಜಾವರ ಶ್ರೀ

    ಉಡುಪಿ: ವಿಶ್ವ ಹಿಂದೂ ಪರಿಷತ್ ಪುಂಡು ಪೋಕರಿಗಳ ಸಂಸ್ಥೆಯಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪೇಜಾವರ ಶ್ರೀ ತಿರುಗೇಟು ಕೊಟ್ಟಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮಜನ್ಮಭೂಮಿ ಟ್ರಸ್ಟ್ ಬೇನಾಮಿ ಸಂಸ್ಥೆ ಅಲ್ಲ. ಟ್ರಸ್ಟ್ ನೋಂದಣಿಯಾಗಿರುವ ಸಂಸ್ಥೆ. ಟ್ರಸ್ಟ್ ನೊಂದಾವಣೆಗೆ ಅದರದ್ದೇ ಆದ ನೀತಿ ನಿಯಮಗಳಿವೆ. ದೇಣಿಗೆ ಸಂಗ್ರಹ ಮಾಡಲು ಅದರದ್ದೇ ಆದ ಕಾನೂನಿದೆ. ನಮಗೆ ಸಂವಿಧಾನವೇ ಅಧಿಕಾರ ಕೊಟ್ಟಿದೆ, ಪಾರರ್ದಶಕತೆ ಖಂಡಿತವಾಗಿ ಬೇಕೆ ಬೇಕು. ಸಂಶಯಗಳನ್ನು ಮುಂದಿಟ್ಟರೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿ ಮುಚ್ಚುಮರೆ ಮಾಡಲು ಯಾವುದೇ ವಿಷಯಗಳು ನಡೆಯುವುದಿಲ್ಲ. ಕಾನೂನಾತ್ಮಕವಾಗಿ ಅದಕ್ಕೆ ಬೇಕಾಗಿರುವಂತ ಪುರಾವೆಗಳನ್ನು ಕೊಡಲು ಸಾಧ್ಯವಿದೆ ಎಂದರು.

    ಯಾವುದೇ ಸಂಶಯಗಳನ್ನು ಇಟ್ಟು ಆರೋಪ ಮಾಡುವುದು ಸೂಕ್ತವಲ್ಲ. ರಾಮ ಜನ್ಮಭೂಮಿ ಟ್ರಸ್ಟ್ ನಂತೆ ಅಧಿಕೃತವಾಗಿರುವ ವಿಶ್ವ ಪರಿಷತ್ ಕಾರ್ಯಕರ್ತರು ದೇಣಿಗೆ ಸಂಗ್ರಹ ಮಾಡುತ್ತಿದೆ. ವಿಶ್ವ ಹಿಂದೂ ಪರಿಷತ್‍ನ ಕಾರ್ಯರ್ತರಿಗೆ ದೇಣಿಗೆ ಸಂಗ್ರಹದ ಜವಾಬ್ದಾರಿ ನೀಡಲಾಗಿದೆ. ವಿಹಿಂಪನ ಮುಖ್ಯಸ್ಥ ಆಯಾ ಊರಿನಲ್ಲಿ ಸಂಗ್ರಹ ನಿರತರಾಗಿದ್ದಾರೆ. ಹಿರಿಯ, ಮುಂದಾಳುಗಳ ನೇತೃತ್ವದಲ್ಲಿ ಕಾರ್ಯಕರ್ತರು ನಿಧಿ ಸಂಗ್ರಹ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

    ವಿಹಿಂಪ ಪುಂಡು ಪೋಕರಿಗಳ ಸಂಸ್ಥೆಯಲ್ಲ, ಇದು ಅಧಿಕೃತ ಸಂಸ್ಥೆ. ಹಾಗಾಗಿ ಇಂತಹ ಮಾತು ಬಳಸುವುದು ಯುಕ್ತವಲ್ಲ. ಸಂಶಯಕ್ಕೆ ಪರಿಹಾರ ಇದೆ. ಸಂಶಯ ಇದೆ ಎಂದು ಅರೋಪ ಮಾಡಿದರೆ, ಆರೋಪದಲ್ಲಿಯೇ ಮುಗಿಯುತ್ತದೆ. ಆರೋಪಕ್ಕೆ ಪ್ರತ್ಯಾರೋಪ ಸಿಗುತ್ತದೆ, ಪ್ರಶ್ನೆಗೆ ಉತ್ತರ ಸಿಗುವುದಿಲ್ಲ, ಪ್ರಶ್ನೆ ಮಾಡಿದರೆ ಉತ್ತರ ಕೊಡಬಹುದು ಎಂದು ಉಡುಪಿಯಲ್ಲಿ ಪೇಜಾವರ ಶ್ರೀ ಖಡಕ್ ಪ್ರತಿಕ್ರಿಯೆ ನೀಡಿದರು.

     

  • ಎಸ್‍ಪಿಬಿ ಮತ್ತೆ ಈ ನಾಡಿನಲ್ಲಿ ಜನಿಸಲೆಂದು ಪ್ರಾರ್ಥಿಸುತ್ತೇನೆ: ಪೇಜಾವರ ಶ್ರೀ

    ಎಸ್‍ಪಿಬಿ ಮತ್ತೆ ಈ ನಾಡಿನಲ್ಲಿ ಜನಿಸಲೆಂದು ಪ್ರಾರ್ಥಿಸುತ್ತೇನೆ: ಪೇಜಾವರ ಶ್ರೀ

    ಹಾಸನ: ಎಸ್‍ಪಿಬಿ ನಿಧನಕ್ಕೆ ಉಡುಪಿಯ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

    ಎಸ್‍ಪಿ ಬಾಲಸುಬ್ರಹ್ಮಣ್ಯಂ ರವರ ಸಾವು ಅಪಾರ ನೋವು ತಂದಿದೆ. ದಿಗ್ಗಜ ಹಾಡುಗಾರರನ್ನು ಕಳೆದುಕೊಂಡಿದ್ದೇವೆ. ಎದೆ ತುಂಬಿ ಹಾಡುವೆನು ಕಾರ್ಯಕ್ರಮದಿಂದ ಮನೆ ಮಾತಾಗಿದ್ದರು. ಮನೆ ಮನೆ ಮಕ್ಕಳಲ್ಲಿ ಕೂಡ ಎಸ್‍ಪಿ ಬಾಲಸುಬ್ರಹ್ಮಣ್ಯಂ ಚಿರಪರಿಚಿತರಾಗಿದ್ದವರು. ಮತ್ತೆ ಎಸ್‍ಪಿಬಿ ಈ ನಾಡಿನಲ್ಲಿ ಜನಿಸಲಿ ಎಂದು ಪ್ರಾರ್ಥಿಸುತ್ತೇನೆ. ಶ್ರೀ ಕೃಷ್ಣ ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಲಿ ಎಂದು ಸಂತಾಪ ಸೂಚಿಸಿದ್ದಾರೆ.

    ರಾಮ ಮಂದಿರ ಎರಡು ಮೂರು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಕೊರೊನಾ ಸಂದರ್ಭದಲ್ಲಿಯೂ ರಾಮ ಮಂದಿರ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ರಾಮ ಮಂದಿರ ಹಣ ಬೇರೆ ಖಾತೆಗೆ ವರ್ಗಾವಣೆಯಾಗಿದೆ ಎಂಬ ವಿಷ್ಯವಾಗಿ ಪ್ರತಿಕ್ರಿಯಿಸಿದ ಅವರು, ಯಾವುದೇ ರೀತಿಯಲ್ಲಿ ಅಂತಹ ಕೆಲಸ ಆಗಿಲ್ಲ. ಈ ಬ್ಯಾಕಿಂಗ್ ನಲ್ಲಿ ಆ ರೀತಿ ವ್ಯತ್ಯಯ ಆಗಿರಬಹುದು. ಆ ಬಗ್ಗೆಯೂ ವಿಚಾರಣೆ ನಡೆಯಲಿದೆ. ಕೊರೊನಾ ದಿನದಿಂದ ದಿನಕ್ಕೆ ಹೆಚ್ಚು ಪಸರಿಸುತ್ತಿದ್ದು ಈ ಬಗ್ಗೆ ಜನ ಜಾಗೃತರಾಗಿರಬೇಕು ಎಂದು ತಿಳಿಸಿದ್ದಾರೆ.