Tag: Pejavar Sri

  • ರಾಮಮಂದಿರ ಶಿಲಾನ್ಯಾಸಕ್ಕೆ ಮುಹೂರ್ತ ನಿಗದಿ

    ರಾಮಮಂದಿರ ಶಿಲಾನ್ಯಾಸಕ್ಕೆ ಮುಹೂರ್ತ ನಿಗದಿ

    -ಅಯೋಧ್ಯಾ ಟ್ರಸ್ಟಿಗಳ ವಿಡಿಯೋ ಕಾನ್ಫರೆನ್ಸ್

    ಉಡುಪಿ: ಆಗಸ್ಟ್ ಮೂರು ಅಥವಾ ನಾಲ್ಕನೇ ತಾರೀಖಿನಂದು ರಾಮಮಂದಿರದ ಶಿಲಾನ್ಯಾಸ ನೆರವೇರುವ ಸಾಧ್ಯತೆಗಳಿವೆ.

    ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಂಬಂಧಿಸಿದ ವಿಡಿಯೋ ಕಾನ್ಫರೆನ್ಸ್ ಮೂಲಕ ಟ್ರಸ್ಟಿಗಳು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗಿಯಾಗಿದ್ದರು. ಇವತ್ತು ನಡೆದ ಸಭೆಯಲ್ಲಿ ಮಂದಿರ ನಿರ್ಮಾಣ ಕ್ಕೆ ಭೂಮಿಯ ಧಾರಣಾ ಸಾಮರ್ಥ್ಯ ಅಧ್ಯಯನ ಮತ್ತು ಮಂದಿರ ನಿರ್ಮಾಣ ಮೊತ್ತದ ಕ್ರೋಢೀಕರಣದ ಬಗ್ಗೆ ಚರ್ಚೆಯಾಗಿದೆ. ಈ ಬಗ್ಗೆ ಉಡುಪಿಯಲ್ಲಿ ಮಾಧ್ಯಮಗಳಿಗೆ ಪೇಜಾವರ ಶ್ರೀಗಳು ಮಾಹಿತಿ ಕೊಟ್ಟರು.

    ಎಲ್ ಆಂಡ್ ಟಿ ಕಂಪನಿ ಮೂಲಕ ನಿರ್ಮಾಣ ಕಾರ್ಯ ಆಗಲಿದೆ. ಮಂದಿರ ನಿರ್ಮಿಸುವ ಜಮೀನಿನ 200 ಅಡಿ ಆಳದಲ್ಲಿ ಭೂಮಿಯ ಸಾಮರ್ಥ್ಯ ಅಧ್ಯಯನ ನಡೆಸಲಾಗುವುದು. 200 ಅಡಿ ಆಳದಲ್ಲಿ ತಾಮ್ರ ಪತ್ರ ಇರಿಸಲು ತೀರ್ಮಾನ ಮಾಡಿದ್ದೇವೆ. ತಾಮ್ರ ಪತ್ರದಲ್ಲಿ ಬರೆಯಬೇಕಾದ ವಿವರದ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದೇವೆ. ಸುಮಾರು ಮುನ್ನೂರು ಕೋಟಿ ವೆಚ್ಚದಲ್ಲಿ ಮಂದಿರ ನಿರ್ಮಾಣ ಆಗಲಿದೆ ಎಂದು ಸ್ವಾಮೀಜಿ ಮಾಹಿತಿ ನೀಡಿದರು.

    ಎಪ್ಪತ್ತು ಎಕರೆ ಸುತ್ತಲ ಪರಿಸರ ಅಭಿವೃದ್ಧಿಗೆ ಒಂದು ಸಾವಿರ ಕೋಟಿ ರುಪಾಯಿ ಅವಶ್ಯಕತೆ ಇದೆ. ಬೇರೆ ಬೇರ ಕಂಪನಿಗಳ ಸಿಎಸ್ ಆರ್ ಫಂಡ್, ರಾಮಭಕ್ತರ ಪಾಲ್ಗೊಳ್ಳುವಿಕೆ ಮೂಲಕ ಹಣ ಸಂಗ್ರಹ, ಪ್ರತಿ ವ್ಯಕ್ತಿಯ ಮೂಲಕ ಹತ್ತು ರೂಪಾಯಿ, ಮನೆಯಿಂದ ನೂರು ರುಪಾಯಿ ಸಂಗ್ರಹಕ್ಕೆ ಚಿಂತನೆ ನಡೆಸಿದ್ದೇವೆ ಎಂದು ಪೇಜಾವರಶ್ರೀ ಹೇಳಿದ್ದಾರೆ.

    ನವೆಂಬರ್ 25 ರಿಂದ ಡಿಸೆಂಬರ್ 25 ತನಕ ಈ ಬಗ್ಗೆ ವ್ಯಾಪಕ ಆಂದೋಲನ ಮಾಡುತ್ತೇವೆ. ದೇಶಾದ್ಯಂತ ಆಂದೋಲನಕ್ಕೆ ತೀರ್ಮಾನಿಸಿದ್ದೇವೆ. ಭೂಮಿ ಪೂಜಾ ಕಾರ್ಯ ಯಾವಾಗ ನಡೆಸೋದು ಎಂದು ಶೀಘ್ರ ತೀರ್ಮಾನ ಮಾಡುತ್ತೇವೆ. ಭೂಮಿ ಪೂಜೆಗೆ ಹದಿನೈದು ದಿನಗಳಿರುವಾಗಲೇ ದಿನಾಂಕ ಘೋಷಣೆ ಮಾಡುತ್ತೇವೆ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದ್ದಾರೆ.

  • ಪೇಜಾವರ ಶ್ರೀಗಳು ಗಂಗಾನದಿ ಬಳಿ ಹೋಗಿಲ್ಲ, ನಾನು ಕರ್ಕೊಂಡು ಹೋಗ್ತಿನಿ: ಕೆ.ಎಸ್.ಈಶ್ವರಪ್ಪ

    ಪೇಜಾವರ ಶ್ರೀಗಳು ಗಂಗಾನದಿ ಬಳಿ ಹೋಗಿಲ್ಲ, ನಾನು ಕರ್ಕೊಂಡು ಹೋಗ್ತಿನಿ: ಕೆ.ಎಸ್.ಈಶ್ವರಪ್ಪ

    ಚಿಕ್ಕಮಗಳೂರು: ಪೇಜಾವರ ಶ್ರೀಗಳು ಇತ್ತೀಚೆಗೆ ಗಂಗಾನದಿ ಬಳಿ ಹೋಗಿಲ್ಲ ಅನ್ಸುತ್ತೆ, ಅವಕಾಶ ಸಿಕ್ಕರೆ ನಾನೇ ಅವರನ್ನ ಕರೆದುಕೊಂಡು ಹೋಗುತ್ತೇನೆ ಅಂತಾ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

    ಕೆಲವು ದಿನಗಳ ಹಿಂದೆ ಪೇಜಾವರ ಶ್ರೀಗಳು ಕೇಂದ್ರ ಸರ್ಕಾರದ ಕೆಲಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ರು. ಶ್ರೀಗಳ ಹೇಳಿಕೆ ಪ್ರತಿಕ್ರಿಯಿಸಿರುವ ಈಶ್ವರಪ್ಪ, ಕಪ್ಪು ಹಣ ಹಾಗೂ ಗಂಗಾ ನದಿ ಮಾಲಿನ್ಯದ ಬಗ್ಗೆ ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಈಗ ಗಂಗಾ ನದಿ ಸಾಕಷ್ಟು ಅಭಿವೃದ್ಧಿಯಾಗಿದೆ ಅಂತಾ ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿಯವರ ಅಚ್ಛೇ ದಿನ್ ಇನ್ನೂ ಪರಿಣಾಮಕಾರಿ ಆಗಬೇಕಿದೆ, ಗಂಗಾ ನದಿಯನ್ನು ಶುದ್ಧೀಕರಿಸಲಾಗುವುದು ಭರವಸೆ ನೀಡಿದರು. ಆದರೆ ಅದು ಸಹ ಸಂಪೂರ್ಣವಾಗಿ ಈಡೇರಿಲ್ಲ. :ಪೇಜಾವರ ಶ್ರೀ

    ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಅಧಿಕಾರದಾಹಿಗಳು. ಕರ್ನಾಟಕದಲ್ಲೀಗ ಅವಕಾಶವಾದಿ ರಾಜಕಾರಣ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯನ್ನ ಸೋಲಿಸಲು ಎಲ್ಲರೂ ಒಂದಾಗಿದ್ದಾರೆ. ಇದನ್ನ ದೇಶದ ಜನ ಒಪ್ಪುವುದಿಲ್ಲ, ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೆ ಸೋನಿಯಾ-ರಾಹುಲ್ ಕಾರಣ, ಸೋತರೆ ಎಸ್.ಆರ್.ಪಾಟೀಲ್ ಕಾರಣವಾ, ಇದು ಅವಕಾಶವಾದಿ ರಾಜಕಾರಣವಲ್ಲವೇ ಎಂದು ಕಿಡಿಕಾರಿದ್ರು.