Tag: peenya

  • ಪೇಯಿಂಟ್ ಮಿಕ್ಸರ್‌ಗೆ ಕೂದಲು ಸಿಲುಕಿ ಮಹಿಳೆ ಸಾವು

    ಪೇಯಿಂಟ್ ಮಿಕ್ಸರ್‌ಗೆ ಕೂದಲು ಸಿಲುಕಿ ಮಹಿಳೆ ಸಾವು

    ಬೆಂಗಳೂರು: ಬಣ್ಣ ಬೆರೆಸುವ ಪೇಯಿಂಟ್ ಮಿಕ್ಸರ್‌ಗೆ (Paint Mixer) ಕೂದಲು (Hair) ಸಿಲುಕಿ ಮಹಿಳೆ (Woman) ದಾರುಣವಾಗಿ ಸಾವನ್ನಪ್ಪಿದ ಘಟನೆ ನೆಲಗದರನಹಳ್ಳಿಯ ಕಾರ್ಖಾನೆಯೊಂದರಲ್ಲಿ (Factory) ನಡೆದಿದೆ.

    ಶ್ವೇತಾ (34) ಸಾವನ್ನಪ್ಪಿದ ಮಹಿಳೆ. ಗಂಡ ಮತ್ತು ಮಗನ ಜೊತೆ ಶ್ವೇತಾ ಮಲ್ಲತ್ತಹಳ್ಳಿಯಲ್ಲಿ ವಾಸವಾಗಿದ್ದರು. ಕಾರ್ಖಾನೆಯಲ್ಲಿ ಕೆಲಸ ಮಾಡುವ ವೇಳೆ ಬಣ್ಣ ಬೆರೆಸುವ ಮಿಕ್ಸರ್‌ಗೆ ಜಡೆ ಸಿಲುಕಿ ಘಟನೆ ನಡೆದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರೌಡಿಶೀಟರ್‌ ಬರ್ಬರ ಹತ್ಯೆ

    ಬಣ್ಣ ಗಟ್ಟಿಯಾಗುತ್ತಿದ್ದರಿಂದ ಪರಿಶೀಲಿಸಲು ಮಿಕ್ಸರ್ ಬಳಿ ಬಂದು ಬಗ್ಗಿದಾಗ ಈ ಅವಘಡ ಸಂಭವಿಸಿದೆ. ಜಡೆ ಸಿಲುಕಿದಾಗ ಮಹಿಳೆ ಕೂಗಿಕೊಂಡರೂ ಮಿಕ್ಸರ್ ಶಬ್ದದಿಂದಾಗಿ ಯಾರಿಗೂ ಕೇಳಿಸಿಲ್ಲ. ಬಳಿಕ ಉಳಿದ ಕೆಲಸಗಾರರು ಮಿಕ್ಸರ್ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಪೀಣ್ಯ (Peenya) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹನಿಟ್ರ್ಯಾಪ್ – ನಾಪತ್ತೆಯಾಗಿದ್ದ ನಿವೃತ್ತ ಯೋಧನ ಮೃತದೇಹ ಪಂಪಿನ ಕೆರೆಯಲ್ಲಿ ಪತ್ತೆ

  • ATMನಿಂದ ಹಣ ಡ್ರಾ ಮಾಡಿ ಕೊಟ್ಟು ವೃದ್ಧನಿಗೆ ವಂಚಿಸಿದ ಸೆಕ್ಯೂರಿಟಿ ಗಾರ್ಡ್ – ದೋಚಿದ್ದು 2.50 ಲಕ್ಷ ರೂ.!

    ATMನಿಂದ ಹಣ ಡ್ರಾ ಮಾಡಿ ಕೊಟ್ಟು ವೃದ್ಧನಿಗೆ ವಂಚಿಸಿದ ಸೆಕ್ಯೂರಿಟಿ ಗಾರ್ಡ್ – ದೋಚಿದ್ದು 2.50 ಲಕ್ಷ ರೂ.!

    ಬೆಂಗಳೂರು: ಹಣ ವಿತ್ ಡ್ರಾ ಮಾಡಲು ಎಟಿಎಂಗೆ (ATM) ಬರುತ್ತಿದ್ದ ವೃದ್ಧರೊಬ್ಬರಿಗೆ (Old Man) ಸೆಕ್ಯೂರಿಟಿ ಗಾರ್ಡ್ (Security Guard) ವಂಚಿಸಿ ಲಕ್ಷ, ಲಕ್ಷ ರೂ. (Money) ದೋಚಿರುವ ಘಟನೆ ಬೆಂಗಳೂರಿನ (Bengaluru) (ಪೀಣ್ಯದಲ್ಲಿ Peenya) ನಡೆದಿದೆ.

    ಪೀಣ್ಯದ ಚಿಕ್ಕರಂಗಯ್ಯ ಕಳೆದ ವರ್ಷ ಖಾಸಗಿ ಕಂಪನಿಯಿಂದ ನಿವೃತ್ತಿಯಾಗಿದ್ದರು. ನಿವೃತ್ತಿ ಬಳಿಕ ಗ್ರಾಜುಟಿ ಪಂಡ್ ಅಂತಾ ಬಂದ ಹಣದಲ್ಲಿ ಹೇಗೋ ಜೀವನ ಸಾಗಿಸಬಹುದು ಅಂತಾ ಇದ್ದ ಇವರಿಗೆ ಮನೆ ಬಳಿಯ ಎಟಿಎಂನ ಸೆಕ್ಯೂರಿಟಿ ಗಾರ್ಡ್ ಚಳ್ಳೆಹಣ್ಣು ತಿನ್ನಿಸಿದ್ದಾನೆ. ಅನಕ್ಷರಸ್ಥರಾಗಿರೋ ಚಿಕ್ಕರಂಗಯ್ಯಗೆ ಎಟಿಎಂನಿಂದ ಹಣ ಡ್ರಾ ಮಾಡಲು ಕಷ್ಟವಾಗುತ್ತಿತ್ತು. ಹಾಗಾಗಿ ಹಣ ಡ್ರಾ ಮಾಡಿಕೊಡುವಂತೆ ತಮ್ಮ ಮನೆಯ ಬಳಿಯೇ ಇರುವ ಎಟಿಎಂನ ಸೆಕ್ಯೂರಿಟಿ ಗಾರ್ಡ್‍ಗೆ ಹೇಳುತ್ತಿದ್ದರು. ಹೀಗೆ ಇವರು ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದಾಗಲೆಲ್ಲಾ ಸೆಕ್ಯೂರಿಟಿ ಗಾರ್ಡ್ ಹಣ ಡ್ರಾ ಮಾಡಿ ಕೊಟ್ಟು ಚಿಕ್ಕರಂಗಯ್ಯಗೆ ಗೊತ್ತಾಗದಂತೆ ಬರೋಬ್ಬರಿ 2.50 ಲಕ್ಷದಷ್ಟು ರೂ. ಖಾತೆಯಿಂದ ಎಗರಿಸಿದ್ದಾನೆ. ಇದನ್ನೂ ಓದಿ: ಕಿಲ್ಲರ್ BMTCಗೆ ಮತ್ತೊಂದು ಬಲಿ – ಮೂವರ ಸ್ಥಿತಿ ಗಂಭೀರ

    ಇದೀಗ ಅನಾರೋಗ್ಯದಿಂದ ಆಸ್ಪತ್ರೆಗೆ (Hospital) ಸೇರಿದ ಸಂದರ್ಭ ಚಿಕ್ಕರಂಗಯ್ಯಗೆ ತನ್ನ ಖಾತೆಯಿಂದ ಇಷ್ಟೊಂದು ಹಣ ಡ್ರಾ ಆಗಿದೆ ಅನ್ನೋದು ಗೊತ್ತಾಗಿದೆ. ಕೂಡಲೇ ಯಶವಂತಪುರ (Yeswanthpur) ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡಿ 4 ತಿಂಗಳು ಆದ್ರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಠಾಣೆಗೆ ಬಂದು ಬಂದು ಸಾಕಾಗಿ ಹೋಗಿದೆ. ನನಗೆ ನನ್ನ ಹಣ ಹಿಂತಿರುಗಿಸಿ ಕೊಡಿ ಎಂದು ಕಣ್ಣೀರಿಡುತ್ತಿದ್ದಾರೆ. ಇದನ್ನೂ ಓದಿ: ಸ್ನೇಹಿತರಿಗೆ 1 ಲಕ್ಷ ರೂ. ಸಾಲ ಕೊಡಿಸಲು ಮಧ್ಯಸ್ಥಿಕೆ- ಕಿರುಕುಳದಿಂದ ಮಹಿಳೆ ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಕಲಿ ಪೊಲೀಸ್ ಹೆಸ್ರಲ್ಲಿ ಯುವತಿ ಮಾವನಿಗೆ ಕಾಲ್- ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಸಾಕ್ಷಿ ಸೂಸೈಡ್..!

    ನಕಲಿ ಪೊಲೀಸ್ ಹೆಸ್ರಲ್ಲಿ ಯುವತಿ ಮಾವನಿಗೆ ಕಾಲ್- ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಸಾಕ್ಷಿ ಸೂಸೈಡ್..!

    ಬೆಂಗಳೂರು: ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಮಿತಿಯೇ ಇರಲಿಲ್ಲ ಅನ್ಸುತ್ತೆ. ಮಾಜಿ ಪ್ರಿಯಕರನ ಹುಚ್ಚಾಟಕ್ಕೆ ಯುವತಿಯೊಬ್ಬಳು ನೇಣಿಗೆ ಕೊರಳೊಡ್ಡಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಮೃತ ಯುವತಿ ಸಾಕಮ್ಮ(ಸಾಕ್ಷಿ). ಮೂಲತ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವಳು. ಬೆಂಗಳೂರಿನ ದೊಡ್ಡಬಿದರಕಲ್ಲು ಗ್ರಾಮದಲ್ಲಿರುವ ತನ್ನ ಅಕ್ಕನ ಮನೆಯಲ್ಲಿದ್ದುಕೊಂಡು, ಯಶವಂತಪುರದ ಮೆಟ್ರೋ ಕ್ಯಾಸ್ ಅಂಡ್ ಕ್ಯಾರಿಂ ಮಾರ್ಕೆಟ್‍ನಲ್ಲಿ ಕೆಲಸ ಮಾಡ್ತಿದ್ದಳು. ಅಲ್ಲಿ ಸಾಕ್ಷಿಗೆ ಅರುಣ್ ಎಂಬಾತನ ಪರಿಚಯವಾಗಿತ್ತು. ಸಾಕ್ಷಿ ಸಲುಗೆಯಿಂದ ಇರೋದನ್ನ ನೋಡಿ ಅರುಣ್, ಆಕೆಯ ಹಿಂದೆ ಬಿದ್ದಿದ್ದ. ಹಾಗೂ ಕೆಲದಿನಗಳಿಂದ ಮದುವೆ ಆಗುವಂತೆ ಪೀಡಿಸುತ್ತಿದ್ದ. ಈ ವಿಷಯವನ್ನ ಸಾಕ್ಷಿ ಮನೆಯಲ್ಲೂ ತಿಳಿಸಿದ್ದಳಂತೆ. ಮದುವೆ ಮಾಡಿದ್ರೆ ಸಮಸ್ಯೆ ಸರಿ ಹೋಗುತ್ತೆ ಎಂದು ಸಾಕ್ಷಿ ಮನೆಯವರು ಮದುವೆಗೆ ತಯಾರಿ ಮಾಡಿಕೊಳ್ಳುತ್ತಿದ್ದರು. ಇದನ್ನೂ ಓದಿ: ಅಪಘಾತದಲ್ಲಿ ವಿದ್ಯಾರ್ಥಿ ಸಾವು – ನುಚ್ಚು ನೂರಾದ ಮೆಡಿಕಲ್ ಕನಸು

    ಪಾಗಲ್ ಪ್ರೇಮಿ ಸ್ನೇಹಿತ ಮಾಡಿದ ಎಡವಟ್ಟು..!
    ಸಾಕ್ಷಿಗೆ ಮದುವೆ ಮಾಡಲು ಓಡಾಡ್ತಿರೋ ವಿಷಯ ತಿಳಿದ ಅರುಣ್, ಸಾಕ್ಷಿಯ ಭಾವ ಪ್ರಜ್ವಲ್‍ಗೆ ತನ್ನ ಸ್ನೇಹಿತ ಗೋಪಾಲನ ಕಡೆಯಿಂದ ಪೊಲೀಸರ ಸೋಗಿನಲ್ಲಿ ಕರೆ ಮಾಡಿಸಿದ್ದ. ಬಸವೇಶ್ವರ ಪೊಲೀಸ್ ಠಾಣೆಯಿಂದ ಕರೆ ಮಾಡ್ತಿದ್ದೀನಿ. ಅರುಣ್ ಎಂಬ ಯುವಕ ನಿಮ್ಮ ಹೆಸರೇಳಿ ಸೂಸೈಡ್ ಅಟೆಂಮ್ಟ್ ಮಾಡ್ಕೊಂಡಿದ್ದಾನೆ. ಅವನನ್ನ ಮದುವೆ ಮಾಡಿಕೊಳ್ಳಿ, ಇಲ್ಲವಾದ್ರೆ ಎಫ್‍ಐಆರ್ ದಾಖಲಿಸುತ್ತೇವೆ ಅಂತ ಬೆದರಿಸಿದ್ದ. ಈ ಸುದ್ದಿ ಕೇಳಿ ಬೆದರಿದ ಸಾಕ್ಷಿ, ಅಕ್ಕನ ಮನೆಯಲ್ಲೇ ಫ್ಯಾನ್‍ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾಳೆ.

    ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೀಣ್ಯಾ ಪೊಲೀಸರು ಆರೋಪಿಗಳಾದ ಪಾಗಲ್ ಪ್ರೇಮಿ ಅರುಣ್ ಹಾಗೂ ನಕಲಿ ಪೊಲೀಸ್ ಗೋಪಾಲ್‍ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಕೊಂದ – ಕೊನೆಗೆ ತಾನೂ ಸತ್ತ

  • ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಆನಂದ್ ಬರ್ಬರ ಕೊಲೆ

    ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಆನಂದ್ ಬರ್ಬರ ಕೊಲೆ

    ಬೆಂಗಳೂರು: ಪೀಣ್ಯದಲ್ಲಿ ರೌಡಿಶೀಟರೊಬ್ಬನ ಭೀಕರ ಹತ್ಯೆಯಾಗಿದೆ. ಜೆ.ಸಿ ಆನಂದ್ (36) ಕೊಲೆಯಾದ ರೌಡಿಶೀಟರ್.

    ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನೆಲಗದರನಹಳ್ಳಿಯ ಶಿವಪುರ ಬಳಿ ಈತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಘಟನೆ ರಾತ್ರಿ 8 ಗಂಟೆ ಸಮಯದಲ್ಲಿ ನಡೆದಿದೆ.

    ಪೀಣ್ಯ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ ಕೊಲೆಯಾದ ಆನಂದ್, ಕಳೆದ ಮೂರು ದಿನಗಳಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಇದೀಗ ಐದಾರು ಜನ ಬೈಕ್ ನಲ್ಲಿ ಬಂದು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆಗೈದು ಎಸ್ಕೇಪ್ ಆಗಿದ್ದಾರೆ.

    ಸ್ಥಳಕ್ಕೆ ಪೀಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಹೀನಾಯ ಸೋಲು – ಪಾಕಿಸ್ತಾನಕ್ಕೆ 10 ವಿಕೆಟ್ ಜಯ

  • ಬಸ್ಸಿನಲ್ಲಿ ‘ಗೀತ ಗೋವಿಂದಂ’ ಸೀನ್ – ನಿದ್ದೆಗೆ ಜಾರಿದ್ದ ಯುವತಿಗೆ ಮುತ್ತಿಟ್ಟ ಅಪರಿಚಿತ ಯುವಕ!

    ಬಸ್ಸಿನಲ್ಲಿ ‘ಗೀತ ಗೋವಿಂದಂ’ ಸೀನ್ – ನಿದ್ದೆಗೆ ಜಾರಿದ್ದ ಯುವತಿಗೆ ಮುತ್ತಿಟ್ಟ ಅಪರಿಚಿತ ಯುವಕ!

    ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ‘ಗೀತ ಗೋವಿಂದಂ’ ಚಿತ್ರ ಸೀನ್ ರೀಕ್ರಿಯೆಟ್ ಆಗಿರುವ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಹೌದು. ಬಳ್ಳಾರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ಸಿನಲ್ಲಿದ್ದ ಯುವತಿಗೆ ಅಪರಿಚಿತ ಯುವಕನೊಬ್ಬ ಮುತ್ತುಕೊಟ್ಟಿದ್ದಾನೆ. ಈ ಘಟನೆ ಸೇಮ್ ‘ಗೀತ ಗೋವಿಂದಂ’ ಸೀನ್ ತರಾನೇ ಇತ್ತು ಎನ್ನಲಾಗಿದೆ.

    ಯುವತಿ ಬೆಂಗಳೂರಿನಲ್ಲಿ ಆರ್ಕಿಟೆಕ್ಚರ್ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ನಿನ್ನೆ ರಾತ್ರಿ 10.40ಕ್ಕೆ ಬಳ್ಳಾರಿಯಿಂದ ಬೆಂಗಳೂರಿಗೆ ಹೊರಟಿದ್ದ ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಕೆಟ್ಟ ದಾಖಲೆ ಬರೆದ ಸಿಕ್ಸರ್ ಕಿಂಗ್ ಕ್ರಿಸ್ ಗೇಲ್

    21 ವರ್ಷದ ಯುವತಿ ಬಸ್ ಹತ್ತಿದ ಸಂದರ್ಭದಲ್ಲಿಯೇ ಯುವಕ ಆಕೆಯನ್ನ ಫಾಲೋ ಮಾಡಿಕೊಂಡು ಬಂದು ಬಸ್ಸಿನಲ್ಲಿ ಕುಳಿತಿದ್ದಾನೆ. ಬಳಿಕ ಯುವತಿಯನ್ನೇ ನೋಡಿ ಕೆಟ್ಟ ಕೆಟ್ಟ ಸನ್ನೆ ಮಾಡಿದ್ದಾನೆ. ಇತ್ತ ಬಸ್ ಬೆಂಗಳೂರಿಗೆ ಬರುತ್ತಿದ್ದಂತೆಯೇ ಪೀಣ್ಯ ಬಳಿ ಯುವತಿ ನಿದ್ದೆಗೆ ಜಾರಿದಾಗ ಆಸಾಮಿ, ಯುವತಿಗೆ ಫಿಲಂ ಸ್ಟೈಲಿನಲ್ಲಿ ಕಿಸ್ ಕೊಟ್ಟಿದ್ದಾನೆ. ಬೆಳಗ್ಗಿನ 5 ಗಂಟೆಯ ವೇಳೆಗೆ ಬಸ್ ಪೀಣ್ಯ ನಿಲ್ದಾಣಕ್ಕೆ ಬರುತ್ತಿದ್ದ ವೇಳೆ ಯುವಕ, ಯುವತಿಗೆ ಮುತ್ತು ಕೊಟ್ಟಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

    ಇತ್ತ ಯುವಕನ ಮುತ್ತಿನಿಂದ ಆತಂಕಗೊಂಡ ಯುವತಿ ಬಸ್ಸಿನಿಂದ ಇಳಿದು ನೇರವಾಗಿ ಪೀಣ್ಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಸದ್ಯ ಯುವತಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಎಫ್‍ಐಆರ್ ದಾಖಲಿಸಿ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ವೋಟ್ ಮಾಡಿ ಎಲ್ಲೆಂದರಲ್ಲಿ ಗ್ಲೌಸ್ ಬಿಸಾಕಿದ ಮತದಾರರು!

    ವೋಟ್ ಮಾಡಿ ಎಲ್ಲೆಂದರಲ್ಲಿ ಗ್ಲೌಸ್ ಬಿಸಾಕಿದ ಮತದಾರರು!

    ಬೆಂಗಳೂರು: ತುಮಕೂರಿನ ಶಿರಾ ಹಾಗೂ ಬೆಂಗಳೂರಿನ ಆರ್‍ಆರ್ ನಗರದ ಉಪಚುನಾವಣೆಗೆ ಈಗಾಗಲೇ ಮತದಾನ ಆರಂಭವಾಗಿದ್ದು, ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಪೀಣ್ಯ ರಸ್ತೆಯಲ್ಲಿ ಹ್ಯಾಂಡ್ ಗ್ಲೌಸ್ ಗಳನ್ನು ಎಲ್ಲೆಂದರಲ್ಲಿ ಬಿಸಾಕಿರುವುದು ಕಂಡು ಬಂದಿದೆ.

    ಹೌದು. ರಸ್ತೆಯಲ್ಲಿ ಹ್ಯಾಂಡ್ ಗ್ಲೌಸ್ ಗಳನ್ನು ಬಿಸಾಡಲಾಗಿದೆ. ಮತದಾನ ಮಾಡಿದ ಬಳಿಕ ಜನ ಎಲ್ಲೆಂದರಲ್ಲಿ ಹಾಕಿಹೋಗಿದ್ದಾರೆ. ಮತದಾನ ಮಾಡಲು ಒಬ್ಬ ವ್ಯಕ್ತಿಗೆ ಒಂದು ಗ್ಲೌಸ್ ವಿತರಣೆ ಮಾಡಲಾಗುತ್ತಿದೆ. ಆದರೆ ಸಿಬ್ಬಂದಿ ಮತದಾರರಲ್ಲಿ ಜಾಗೃತಿ ಮೂಡಿಸಿಲ್ಲ. ಹೀಗಾಗಿ ಜನ ಮತದಾನ ಮಾಡಿ ಬಳಿಕ ಗ್ಲೌಸ್ ಗಳನ್ನು ಸಿಕ್ಕ ಸಿಕ್ಕ ಕಡೆ ಬಿಸಾಡಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಡಸ್ಟ್‍ಬಿನ್ ವ್ಯವಸ್ಥೆ ಮಾಡಬೇಕಿದೆ.

    ಪೀಣ್ಯದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮತದಾನ ಕೇಂದ್ರದಲ್ಲಿ ಆಗ್ಗಾಗ್ಗೆ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಮತದಾನ ಕೇಂದ್ರದ ಹೊರಗೆ, ಕಾರಿಡಾರ್ ನಲ್ಲಿ ಸ್ಯಾನಿಟೈಸರ್ ಸಿಂಪಡಿಸಲಾಗುತ್ತಿದೆ. ಬಿಬಿಎಂಪಿ ಸಿಬ್ಬಂದಿ ಪ್ರತೀ ಗಂಟೆಗೊಮ್ಮೆ ಸ್ಯಾನಿಟೈಸ್ ಮಾಡ್ತಿದ್ದಾರೆ.

  • ರ‌್ಯಾಂಪ್‌ ವಾಕ್ ಪ್ರಾಕ್ಟೀಸ್ ಮಾಡ್ತಿದ್ದಾಗ ಎಂಬಿಎ ವಿದ್ಯಾರ್ಥಿನಿ ಸಾವು

    ರ‌್ಯಾಂಪ್‌ ವಾಕ್ ಪ್ರಾಕ್ಟೀಸ್ ಮಾಡ್ತಿದ್ದಾಗ ಎಂಬಿಎ ವಿದ್ಯಾರ್ಥಿನಿ ಸಾವು

    ಬೆಂಗಳೂರು: ಕಾಲೇಜ್ ಫ್ರೆಶರ್ಸ್ ಡೇಗೆ ರ‌್ಯಾಂಪ್‌ ವಾಕ್ ಪ್ರಾಕ್ಟೀಸ್ ಮಾಡುತ್ತಿದ್ದ ವೇಳೆ ಎಂಬಿಎ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಪೀಣ್ಯದಲ್ಲಿ ನಡೆದಿದೆ.

    21 ವರ್ಷದ ಶಾಲಿನಿ ಸಾವನ್ನಪ್ಪಿರುವ ವಿದ್ಯಾರ್ಥಿನಿ. ಪೀಣ್ಯದ ಏಮ್ಸ್ ಇನ್ಸ್ ಟಿಟ್ಯೂಟ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.

    ಸೋಮವಾರ ಕಾಲೇಜ್ ಫ್ರೆಶರ್ಸ್ ಡೇ ಇತ್ತು. ಈ ಹಿನ್ನೆಲೆಯಲ್ಲಿ ಶಾಲಿನಿ ಸೇರಿದಂತೆ ಕೆಲ ವಿದ್ಯಾರ್ಥಿಗಳು ರ‌್ಯಾಂಪ್‌ ವಾಕ್ ಪ್ರಾಕ್ಟೀಸ್ ಮಾಡುತ್ತಿದ್ದರು. ಈ ವೇಳೆ ಶಾಲಿನಿ ಸ್ಟೇಜ್ ಮೇಲೆಯೇ ಕುಸಿದು ಬಿದ್ದಿದ್ದಳು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದ್ರೂ ಚಿಕಿತ್ಸೆ ಫಲಿಸದೆ ಶಾಲಿನಿ ಮೃತಪಟ್ಟಿದ್ದಾಳೆ.

    ಹೃದಯಘಾತದಿಂದ ಸಾವನ್ನಪ್ಪಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.

  • ನೆಲಕ್ಕೆ ಬಿದ್ರೂ ಬಿಡ್ಲಿಲ್ಲ..ಚೈನ್ ಕಸಿದೇ ಬಿಟ್ಟ- ಬೆಳ್ಳಂಬೆಳಗ್ಗೆ ಇನ್ಸ್ ಪೆಕ್ಟರ್ ಪತ್ನಿಯ ಸರಗಳವು -ವಿಡಿಯೋ ನೋಡಿ

    ನೆಲಕ್ಕೆ ಬಿದ್ರೂ ಬಿಡ್ಲಿಲ್ಲ..ಚೈನ್ ಕಸಿದೇ ಬಿಟ್ಟ- ಬೆಳ್ಳಂಬೆಳಗ್ಗೆ ಇನ್ಸ್ ಪೆಕ್ಟರ್ ಪತ್ನಿಯ ಸರಗಳವು -ವಿಡಿಯೋ ನೋಡಿ

    ಬೆಂಗಳೂರು: ನಗರದಲ್ಲಿ ಸರಗಳ್ಳವರ ಹಾವಳಿಗೆ ಕೊನೆಯೇ ಇಲ್ಲ ಎನ್ನುವುದಕ್ಕೆ ಇಂದು ಮತ್ತೊಮ್ಮೆ ಸಾಕ್ಷಿಯಾಗಿದೆ. ನಗರದ ಮೂರು ಕಡೆಗಳಲ್ಲಿ ಸರಗಳ್ಳತನ ಪ್ರಕರಣ ನಡೆದಿದೆ.

    ಸಂಕ್ರಾಂತಿ ಹಬ್ಬದ ದಿನವಾದ ಇಂದೇ ಪೊಲೀಸ್ ಇನ್ಸ್ ಪೆಕ್ಟರ್ ಪತ್ನಿಯದ್ದೇ ಸರಗಳ್ಳತನ ಮಾಡಿದ ಘಟನೆ ಬೆಂಗಳೂರಿನ ಪೀಣ್ಯದ ಎಚ್‍ಎಮ್‍ಟಿ ಲೇಔಟ್‍ನಲ್ಲಿ ನಡೆದ್ರೆ, ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೌಗಂಧಿಕ 45 ಗ್ರಾಂ ಸರ ಕಸಿದು ಪರಾರಿಯಾಗಿದ್ದಾರೆ.

    ಇನ್ಸ್ ಪೆಕ್ಟರ್ ಕೆಂಚೇಗೌಡ ಪತ್ನಿ ಗಂಗಮ್ಮ ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ವೇಳೆ ಏಕಾಏಕಿ ಮಹಿಳೆಯ ಮೇಲೆರಗಿದ ಸರಗಳ್ಳ ಕತ್ತಿಗೆ ಕೈ ಹಾಕಿ ಮಹಿಳೆ ಸಮೇತ 70 ಗ್ರಾಂ ಸರವನ್ನು ಎಳೆದೊಯ್ದಿದ್ದಾನೆ. ಕಳ್ಳ ಸರ ಎಳೆಯುವ ವೇಳೆ ಮಹಿಳೆ ನೆಲಕ್ಕೆ ಬಿದ್ದರೂ ಬಿಡದ ಸರಗಳ್ಳ ಕೊನೆಗೆ ಸರ ಕಸಿದು ಎಸ್ಕೇಪ್ ಆಗಿದ್ದಾನೆ.

    ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಕಳ್ಳನನ್ನು ಒಂದು ಕಿಲೋಮೀಟರ್‍ನಷ್ಟು ದೂರ ಇನ್ಸ್ ಪೆಕ್ಟರ್ ಕೆಂಚೇಗೌಡ ಓಡಿ ಬೆನ್ನತ್ತಿದ್ದಾರೆ. ಆದರೂ ಆತ ಕೂದಳೆಲೆ ಅಂತರದಲ್ಲಿ ಓಡಿ ಪಲ್ಸರ್‍ನಲ್ಲಿ ಪರಾರಿಯಾಗಿದ್ದಾನೆ.

    ಪೀಣ್ಯದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಆದ್ರೆ ಶಾರದಮ್ಮನ ಸಮಯ ಪ್ರಜ್ಞೆಯಿಂದ ಕಳ್ಳತನ ಕೈ ತಪ್ಪಿದೆ. 80 ಗ್ರಾಂ ತೂಕದ ಸರಗಳ್ಳತನಕ್ಕೆ ಯತ್ನಿಸಿದ್ದು, ಪತಿ ಹನುಮಂತರಾಯಪ್ಪ ಪತ್ನಿಯ ರಕ್ಷಣೆಗೆ ಧಾವಿಸಿದ್ದಾರೆ. ಪರಿಣಾಮ ಸರಗಳ್ಳತನ ಕೈತಪ್ಪಿದ್ದು, ಪತ್ನಿಯ ರಕ್ಷಣೆಗೆ ಬಂದ ಪತಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂಬುದಾಗಿ ತಿಳಿದುಬಂದಿದೆ.

    ಈ ಮೂರು ಘಟನೆ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=70qyeBboCWY

     

  • ಮದ್ವೆಯಾಗಲು ನಿರಾಕರಿಸಿದ ಯುವತಿ ಮೇಲೆ ಆಸಿಡ್ ಹಾಕಿದ ಯುವಕನಿಗೆ ಬಿತ್ತು ಗೂಸಾ

    ಮದ್ವೆಯಾಗಲು ನಿರಾಕರಿಸಿದ ಯುವತಿ ಮೇಲೆ ಆಸಿಡ್ ಹಾಕಿದ ಯುವಕನಿಗೆ ಬಿತ್ತು ಗೂಸಾ

    ಬೆಂಗಳೂರು: ನಗರದಲ್ಲಿ ಹಾಡಹಗಲೇ ಯುವತಿಯ ಮೇಲೆ ಆಸಿಡ್ ದಾಳಿ ಮಾಡಲು ಯತ್ನಿಸಿರುವ ಘಟನೆ ಪೀಣ್ಯಾ 2ನೇ ಹಂತದ ಪ್ರದೇಶದಲ್ಲಿ ನಡೆದಿದೆ.

    ಚಂದನ್ ಎಂಬ ಯುವಕ ಯುವತಿಯೊಬ್ಬಳ ಮೇಲೆ ಆಸಿಡ್ ದಾಳಿಯನ್ನು ಮಾಡಲು ಯತ್ನಿಸಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

    ಚಂದನ್ ಹಲವು ದಿನಗಳಿಂದ ಯುವತಿಯೊಬ್ಬಳನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಅಲ್ಲದೇ ತನ್ನನ್ನು ಮದುವೆಯಾಗಲು ಒಪ್ಪದೇ ಇದ್ದರೆ ಆಸಿಡ್ ಹಾಕುವುದಾಗಿ ಬೆದರಿಕೆಯನ್ನು ಹಾಕಿದ್ದ. ಆದರೆ ಯುವತಿ ಚಂದನ್‍ನನ್ನು ಮದುವೆಯಾಗಲು ನಿರಾಕರಿಸಿದ್ದಳು.

    ತನ್ನ ಕೋರಿಕೆಯನ್ನು ನಿರಾಕರಿಸಿದ ಕಾರಣ ಚಂದನ್ ಕೋಪಗೊಂಡು ಇಂದು ಏಕಾಏಕಿ ಯುವತಿಯ ಮೇಲೆ ಆಸಿಡ್ ನಿಂದ ದಾಳಿ ಮಾಡಲು ಯತ್ನಿಸಿದ್ದಾನೆ. ಆದರೆ ಸ್ಥಳದಲ್ಲಿದ್ದ ಸಾರ್ವಜನಿಕರು ಸಮಯ ಪ್ರಜ್ಞೆ ಪ್ರದರ್ಶಿಸಿ ಯುವತಿಯನ್ನು ರಕ್ಷಿಸಿದ್ದಾರೆ. ನಂತರ ಚಂದನ್‍ನನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿ ಥಳಿಸಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.

    ಸಾರ್ವಜನಿಕರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಚಂದನ್‍ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.

  • 5 ಲಕ್ಷ ರೂ. ನೀಡಿಯೂ ಉದ್ಯೋಗ ಸಿಗದ್ದಕ್ಕೆ ಬೇಸತ್ತು ಯುವಕ ಆತ್ಮಹತ್ಯೆ

    5 ಲಕ್ಷ ರೂ. ನೀಡಿಯೂ ಉದ್ಯೋಗ ಸಿಗದ್ದಕ್ಕೆ ಬೇಸತ್ತು ಯುವಕ ಆತ್ಮಹತ್ಯೆ

    ಬೆಂಗಳೂರು: ದೇವಸ್ಥಾನದ ಆವರಣದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ವಿರೇಶ್ ಆತ್ಮಹತ್ಯೆಗೆ ಶರಣಾದ ಯುವಕ. ನಗರದ ಪೀಣ್ಯದ ಬಡಾವಣೆಯ ದೇವಾಸ್ಥಾನದಲ್ಲಿ ವಿರೇಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿರೇಶ್ ಐಟಿಐ ಓದಿಕೊಂಡಿದ್ದನು. ನಗರದ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಲು ತನಗೆ ಪರಿಚಯದ ವ್ಯಕ್ತಿಗೆ ಸುಮಾರು 5 ಲಕ್ಷ ರೂ. ಹಣವನ್ನು ನೀಡಿದ್ದನು.

    ಹಣ ನೀಡಿದ ಮೇಲೆ ವಿರೇಶನಿಗೆ ಯಾವುದೇ ಉದ್ಯೋಗ ಸಿಕ್ಕಿರಲಿಲ್ಲ, ಇದ್ರಿಂದ ಮನನೊಂದ ವಿರೇಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.