Tag: peenya traffiv police

  • ಪೊಲೀಸ್ ಟೋಯಿಂಗ್ ವಾಹನಕ್ಕೆ ಬ್ರೇಕ್ ತಪ್ಪಿ ಸರಣಿ ಅಪಘಾತ-  ಕಾರು ಜಖಂ, ಇಬ್ಬರಿಗೆ ಗಾಯ

    ಪೊಲೀಸ್ ಟೋಯಿಂಗ್ ವಾಹನಕ್ಕೆ ಬ್ರೇಕ್ ತಪ್ಪಿ ಸರಣಿ ಅಪಘಾತ- ಕಾರು ಜಖಂ, ಇಬ್ಬರಿಗೆ ಗಾಯ

    ಬೆಂಗಳೂರು: ಪೊಲೀಸ್ ಟೋಯಿಂಗ್ ವಾಹನಕ್ಕೆ ಬ್ರೇಕ್ ತಪ್ಪಿ ಸರಣಿ ಅಪಘಾತವಾಗಿರುವ ಘಟನೆ ನಗರದ ಪೀಣ್ಯ ಸಿಗ್ನಲ್ ಬಳಿ ನಡೆದಿದೆ.

    ತುಮಕೂರು ರಸ್ತೆಯ ಪೀಣ್ಯ ಸಿಗ್ನಲ್ ಹಾದು ಹೋಗಲು ಹಲವಾರು ವಾಹನಗಳು ಕಾಯುತ್ತಿದ್ದವು. ಈ ವೇಳೆ ಹಿಂದಿನಿಂದ ಬಂದ ಪೊಲೀಸ್ ಟೋಯಿಂಗ್ ವಾಹನ ಒಂದು ಕಾರು, ಎರಡು ಆಟೋ ಮತ್ತು ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಇಂಡಿಕಾ ಕಾರು ಜಖಂಗೊಂಡಿದ್ದು ಇಬ್ಬರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಫತ್ರೆಗೆ ದಾಖಲಿಸಿದ್ದಾರೆ.

    ಘಟನೆ ಬಳಿಕ ಪೀಣ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಟೋಯಿಂಗ್ ವಾಹನದ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಘಟನೆಯಲ್ಲಿ ಜಖಂಗೊಂಡ  ಕಾರನ್ನು ಪೀಣ್ಯ ಪೊಲೀಸ್ ಠಾಣೆ ಮುಂದೆ ನಿಲ್ಲಿಸಿ ಟೋಯಿಂಗ್ ವಾಹನದಿಂದ ಆದ ಅವಾಂತರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.