Tag: Peenya Police

  • ಕುಡಿಯಲು ನೀರು ನೀಡದ್ದಕ್ಕೆ ಲಟ್ಟಣಿಗೆಯಿಂದ ಹಲ್ಲೆ- ಪತ್ನಿ ಸಾವು, ಪತಿ ಅರೆಸ್ಟ್

    ಕುಡಿಯಲು ನೀರು ನೀಡದ್ದಕ್ಕೆ ಲಟ್ಟಣಿಗೆಯಿಂದ ಹಲ್ಲೆ- ಪತ್ನಿ ಸಾವು, ಪತಿ ಅರೆಸ್ಟ್

    ಬೆಂಗಳೂರು: ಕುಡಿಯಲು ನೀರು ಕೊಡಲಿಲ್ಲ ಎಂದಿದ್ದಕ್ಕೆ ಪತ್ನಿ (Wife) ಮೇಲೆ ಪತಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಇದೀಗ ಪತ್ನಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ಪೀಣ್ಯದ (Peenya) ಬಳಿಯ ಚೊಕ್ಕಸಂದ್ರದಲ್ಲಿ ನಡೆದಿದೆ.

    ಮಧ್ಯಪ್ರದೇಶ ಮೂಲದ ಪ್ರೀತಿ ಸಿಂಗ್(26) ಮೃತ ಪತ್ನಿ. ಛೋಟೆಲಾಲ್ ಸಿಂಗ್ ಕೊಲೆ ಆರೋಪಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಕ್ರಿಕೆಟ್‌ ನೋಡಿ ಮರಳುತ್ತಿದ್ದಾಗ ಬಿತ್ತು ಮರ – ಯುವತಿಯ ಮೃತದೇಹ ವಿಕ್ಟೋರಿಯಾಗೆ ರವಾನೆ

    ಛೋಟೆಲಾಲ್ ಸಿಂಗ್ ಹಾಗೂ ಪ್ರೀತಿ ಸಿಂಗ್ ಇಬ್ಬರೂ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಸೆ.24 ರಂದು ಕುಡಿದು ಮನೆಗೆ ಬಂದ ಛೋಟೆಲಾಲ್ ಹೆಂಡತಿ ಬಳಿ ನೀರು ಕೇಳಿದ್ದ. ನಾನು ಕೆಲಸಕ್ಕೆ ಹೋಗ್ಬೇಕು, ನೀನೇ ನೀರು ತಗೊಂಡು ಕುಡಿ ಎಂದು ಪತ್ನಿ ಹೇಳಿದ್ದಳು ಎನ್ನಲಾಗಿದೆ.

    ಇದರಿಂದ ಕೋಪಗೊಂಡ ಛೋಟೆಲಾಲ್ ಲಟ್ಟಣಿಗೆಯಿಂದ ಪತ್ನಿಯ ತಲೆಗೆ ಹೊಡೆದಿದ್ದ. ಈ ವೇಳೆ ಗಂಭೀರ ಗಾಯಗೊಂಡ ಪ್ರೀತಿ ಅಲ್ಲೇ ಕೋಮಾಗೆ ಜಾರಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೂಡ ನೀಡಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

    ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡ ಪೀಣ್ಯ ಪೊಲೀಸರು, ಆರೋಪಿ ಛೋಟೆಸಿಂಗ್‌ನನ್ನು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.

  • ಬಿಎಂಟಿಸಿ ಬಸ್ ಅಪಘಾತದಲ್ಲಿ ಯುವತಿ ಬಲಿ ಪ್ರಕರಣ – ಕಂಡಕ್ಟರ್‌ ಅಮಾನತು, ಚಾಲಕ ವಜಾ

    ಬಿಎಂಟಿಸಿ ಬಸ್ ಅಪಘಾತದಲ್ಲಿ ಯುವತಿ ಬಲಿ ಪ್ರಕರಣ – ಕಂಡಕ್ಟರ್‌ ಅಮಾನತು, ಚಾಲಕ ವಜಾ

    – ಕಂಡಕ್ಟರ್, ಡ್ರೈವರ್ ವಿರುದ್ಧ FIR ದಾಖಲು

    ಬೆಂಗಳೂರು: ಬಿಎಂಟಿಸಿ (BMTC) ಎಲೆಕ್ಟ್ರಿಕ್ ಬಸ್ ಹೋಟೆಲ್‌ಗೆ ಡಿಕ್ಕಿಯಾದ ಪರಿಣಾಮ ಯುವತಿಯೊಬ್ಬಳು ಬಲಿಯಾಗಿರುವ ಪ್ರಕರಣ ಸಂಬಂಧ ಕಂಡಕ್ಟರ್ ಹಾಗೂ ಡ್ರೈವರ್ ವಿರುದ್ಧ ಪೀಣ್ಯ ಪೊಲೀಸ್ (Peenya Police) ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

    ಈಗಾಗ್ಲೇ ಕಂಡಕ್ಟರ್‌ನನ್ನು ಬಿಎಂಟಿಸಿ ಅಮಾನತು ಮಾಡಿದೆ. ಇದೀಗ ಬಸ್ ಚಾಲಕನನ್ನೂ ಕೆಲಸದಿಂದ ವಜಾ ಮಾಡಲು ಟಾಟಾ ಮೋಟರ್ ಸಂಸ್ಥೆ ನಿರ್ಧಾರ ಮಾಡಿದೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ- ಎಸ್‍ಐಟಿ ರಚಿಸಿದ ಸರ್ಕಾರ

    ಏನಿದು ಪ್ರಕರಣ?
    ಜುಲೈ 18ರಂದು ಬೆಳಗ್ಗೆ ಪೀಣ್ಯ (Peenya) 2ನೇ ಹಂತದಲ್ಲಿ ಬಸ್ ಡ್ರೈವರ್ ಮತ್ತು ಕಂಡಕ್ಟರ್ ನಡುವೆ ಜಗಳವಾಗಿತ್ತು. ಈ ವೇಳೆ ಡ್ರೈವರ್ ಬಸ್‌ನಿಂದ ಕೆಳಗಿಳಿದು ಹೋಗಿದ್ದ. ಈ ವೇಳೆ ಕಂಡಕ್ಟರ್ ಬಸ್ ಚಲಾಯಿಸಿದ್ದ. ಈ ಸಂದರ್ಭ ಬಸ್ ನಿಯಂತ್ರಣ ತಪ್ಪಿ, ಫುಟ್‌ಪಾತ್ ಏರಿ ಹೋಟೆಲ್‌ಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಹೋಟೆಲ್ ಬಳಿ ನಿಂತಿದ್ದ ಓರ್ವ ಯುವತಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದರು.

  • ಬೆಂಗಳೂರು| ಕೌಟುಂಬಿಕ ಕಲಹ – ಮಚ್ಚಿನಿಂದ ಪತ್ನಿ, ಇಬ್ಬರು ಮಕ್ಕಳ ಹತ್ಯೆಗೈದ ಪತಿ

    ಬೆಂಗಳೂರು| ಕೌಟುಂಬಿಕ ಕಲಹ – ಮಚ್ಚಿನಿಂದ ಪತ್ನಿ, ಇಬ್ಬರು ಮಕ್ಕಳ ಹತ್ಯೆಗೈದ ಪತಿ

    ಬೆಂಗಳೂರು: ಮಚ್ಚಿನಿಂದ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಚ್ಚಿ ಪತಿ ಹತ್ಯೆಗೈದಿರುವ ಘಟನೆ ನಗರದ ಜಾಲಹಳ್ಳಿ ಕ್ರಾಸ್ (Jalahalli Cross) ಬಳಿ ನಡೆದಿದೆ.

    ಮೃತರನ್ನು ಪತ್ನಿ ಭಾಗ್ಯಮ್ಮ, ನವ್ಯ (19), ಹೇಮಾವತಿ (22) ಹಾಗೂ ಆರೋಪಿಯನ್ನು ಪತಿ ಗಂಗರಾಜು ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಗಂಗಾವತಿಯಲ್ಲಿ ಬೆಂಕಿ ಅವಘಡ – ನಾಲ್ವರ ಜೀವ ಉಳಿಸಿದ ಸಾಕು ನಾಯಿ

    ಇಂದು ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಆರೋಪಿ ಗಂಗರಾಜು ಹೋಮ್ ಗಾರ್ಡ್ ಕೆಲಸ ಮಾಡಿಕೊಂಡಿದ್ದ. ಮಚ್ಚಿನಿಂದ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಚ್ಚಿಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಬಳಿಕ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಪೀಣ್ಯಾ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

    ಕೌಟುಂಬಿಕ ಕಲಹದಿಂದಾಗಿ ಕೊಲೆ ಮಾಡಿದ್ದು, ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಇದನ್ನೂ ಓದಿ: ರಿಯಲ್ ಎಸ್ಟೇಟ್ ಜೊತೆ ಪೊಲೀಸರು ಕೈ ಜೋಡಿಸಿದ್ರೆ ಸಹಿಸೊಲ್ಲ- ಸಿಎಂ ಎಚ್ಚರಿಕೆ