Tag: Peenya flyover

  • ಇಂದು ಸಂಜೆಯಿಂದ ಲಘು ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್‌ ಮುಕ್ತ

    ಇಂದು ಸಂಜೆಯಿಂದ ಲಘು ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್‌ ಮುಕ್ತ

    ಬೆಂಗಳೂರು: ನಗರದಿಂದ ಹಲವು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಫ್ಲೈಓವರ್ ಕಾಮಗಾರಿ ಪೂರ್ಣಗೊಂಡಿದೆ. ಇಂದು ಸಂಜೆ 6 ಗಂಟೆಯಿಂದ ಲಘುವಾಹನಗಳ ಸಂಚಾರಕ್ಕೆ ಫ್ಲೈಓವರ್ ಮುಕ್ತಾವಾಗಲಿದೆ.

    ತಿಂಗಳ ಹಿಂದೆ ಕಾಮಗಾರಿಗಾಗಿ ಬಂದ್ ಮಾಡಲಾಗಿದ್ದ ಪೀಣ್ಯ ಫ್ಲೈಓವರ್ ಕಾಮಗಾರಿ ಪೂರ್ಣಗೊಂಡಿದ್ದು ಇಂದಿನಿಂದ ಕಾರು, ಬೈಕ್, ಆಟೋ ಸೇರಿದಂತೆ ಲೈಟ್ ವೇಟ್ ವಾಹನ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅನುಮತಿ ನೀಡಿದೆ. ಇದನ್ನೂ ಓದಿ: ಪೀಣ್ಯ ಫ್ಲೈಓವರ್‌ ಧ್ವಂಸವಾಗುತ್ತಾ?- ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂದ ಸಿಎಂ

    ಇಂದು ಸಂಜೆಯಿಂದ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಂಚಾರ ವಿಭಾಗದ ಡಿಸಿಪಿಗೆ ಪತ್ರದ ಮೂಲಕ ತಿಳಿಸಿದೆ. ಫ್ಲೈಓವರ್ ಕಾಮಗಾರಿ ಕುಂಟುತ್ತ ಸಾಗುತ್ತಿದ್ದರಿಂದಾಗಿ ಹಲವು ಸಮಸ್ಯೆಗಳು ಎದುರಾಗಿದ್ದವು. ಇದೀಗ ಕಾಮಗಾರಿ ಬಳಿಕ ರಸ್ತೆಗೆ ಹೆಚ್ಚಿನ ದೀಪಗಳ ಅಳವಡಿಕೆ, ತುರ್ತು ಸಂದರ್ಭದಲ್ಲಿ ಅಗತ್ಯ ವಾಹನ ವ್ಯವಸ್ಥೆ ಸೇರಿದಂತೆ ಕೆಲವು ಅಗತ್ಯ ಕ್ರಮ ವಹಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಧಿಕಾರಕ್ಕೆ ಪೊಲೀಸರಿಂದ ಮನವಿ ಸಲ್ಲಿಸಲಾಗಿದೆ.

    ಮಂಗಳವಾರ ಸಿಎಂ ಹೇಳಿದ್ದು ಏನು?
    ಎನ್‌ಎಚ್‌ಎಐ ಲೋಡ್‌ ಟೆಸ್ಟ್‌ನಲ್ಲಿ ಫ್ಲೈಓವರ್‌ ಸುರಕ್ಷಿತ ಅಲ್ಲ ಎನ್ನುವುದು ದೃಢಪಟ್ಟಿದೆ. ವಾಹನ ಸಂಚಾರಕ್ಕೆ ಅನುಮತಿ ನೀಡಿದರೆ ಫ್ಲೈಓವರ್‌ ಬಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹೊಸ ಫ್ಲೈಓವರ್‌ಗಾಗಿ ಕೇಂದ್ರ ಹೆದ್ದಾರಿ ಸಚಿವ ಗಡ್ಕರಿ ಅವರಿಗೆ ಪತ್ರ ಬರೆಯಲಾಗಿದೆ. ಇದನ್ನೂ ಓದಿ: ಕೆಂಪುಕೋಟೆ ಮೇಲೆ ಸಿಖ್‌ ಬಾವುಟ ಹಾರಿಸಿದ್ದ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವು

    ಎರಡು ಪಿಲ್ಲರ್‌ಗಳನ್ನು ಸಂಪರ್ಕಿಸುವ ಕೇಬಲ್‌ನಲ್ಲಿ ಕಂಡುಬಂದಿರುವ ದೋಷ ಸರಿಪಡಿಸಿದರೂ, ಇದು ವಾಹನ ಸಂಚಾರಕ್ಕೆ ಸುರಕ್ಷಿತವಲ್ಲವೆಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ತಜ್ಞರು ವರದಿ ನೀಡಿದ್ದಾರೆ. ಈ ಮಧ್ಯೆ ಲಘು ಲಘು ವಾಹನ ಬಿಡಲು ಹೇಳಿದ್ದೇವೆ. ಒಂದು ವಾರದಲ್ಲಿ ತೀರ್ಮಾನ ತೆಗೆದುಕೊಳ್ಳಲು ಮನವಿ ಮಾಡಲಾಗಿದೆ.

    ಭಾರೀ ವಾಹನಗಳ ಸಂಚಾರಕ್ಕೆ ಅನುಮತಿ ನೀಡುವ ಪ್ರಶ್ನೆಯೇ ಇಲ್ಲ. ಅನಾಹುತ ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಹೊರುತ್ತಾರೆ? ಹೊಸ ಫ್ಲೈ ಓವರ್‌ ನಿರ್ಮಾಣ ಮಾಡಬೇಕಿದೆ ಎಂದು ಎಂಜಿನಿಯರ್‌ ಹೇಳಿದ್ದಾರೆ. ಈ ಫ್ಲೈ ಓವರ್‌ ಯಾರ ಕಾಲದಲ್ಲಿ ಆಗಿದೆ? ಯಾರು ನಿರ್ಮಾಣ ಮಾಡಿದ್ದು ಎಂಬುದನ್ನು ನೋಡಬೇಕಿದೆ. ಕಳಪೆ ಕಾಮಗಾರಿಯಿಂದ ಈ ಸಮಸ್ಯೆ ನಿರ್ಮಾಣವಾಗಿದೆ ಎಂದು ಸಿಎಂ ಸದನಕ್ಕೆ ಮಾಹಿತಿ ನೀಡಿದರು.

  • ಪೀಣ್ಯ ಫ್ಲೈಓವರ್‌ ಧ್ವಂಸವಾಗುತ್ತಾ?- ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂದ ಸಿಎಂ

    ಪೀಣ್ಯ ಫ್ಲೈಓವರ್‌ ಧ್ವಂಸವಾಗುತ್ತಾ?- ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂದ ಸಿಎಂ

    ಬೆಂಗಳೂರು: ರಾಜಧಾನಿಯಿಂದ ರಾಜ್ಯ ಮತ್ತು ಹಲವು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪೀಣ್ಯ ಮೇಲ್ಸೇತುವೆಯನ್ನು ಧ್ವಂಸಗೊಳಿಸಲಾಗುತ್ತಾ ಎಂಬ ಗಂಭೀರ ಪ್ರಶ್ನೆ ಈಗ ಎದ್ದಿದೆ.

    ವಿಧಾನ ಸಭೆಯಲ್ಲಿ ಮುಖ್ಯಮತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಉತ್ತರದಿಂದ ಈ ಪ್ರಶ್ನೆ ಎದ್ದಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟವಾದ ನಿರ್ಧಾರ ಪ್ರಕಟವಾಗಲಿದೆ.

    ಒಂದು ವೇಳೆ ಧ್ವಂಸಗೊಳಿಸುವ ನಿರ್ಧಾರ ಪ್ರಕಟವಾದರೆ ರಾಜ್ಯದ ಇತಿಹಾಸದಲ್ಲೇ ಉದ್ಘಾಟನೆಗೊಂಡ 12 ವರ್ಷದಲ್ಲೇ ಕೆಡವಲಾದ ಮೊದಲ ಫ್ಲೈಓವರ್ ಎಂಬ ಕುಖ್ಯಾತಿಗೆ ಪಾತ್ರವಾಗಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) 4.5 ಕಿ.ಮೀ ಉದ್ದದ ಫ್ಲೈಓವರ್‌ ಅನ್ನು 775.70 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿತ್ತು.

    ಎನ್‌ಎಚ್‌ಎಐ ನಿರ್ಮಿಸಿದ್ದ ಈ ಮೇಲ್ಸೇತುವೆಯ ಸ್ಥಿತಿ ಹೀಗಾದರೆ ಇತರೆ ಸ್ಥಳೀಯ ಸಂಸ್ಥೆಗಳಿಂದ ನಿರ್ಮಾಣವಾಗಿರುವ ಮೇಲ್ಸೇತುವೆಗಳ ಗುಣಮಟ್ಟ, ಕ್ಷಮತೆಯ ಕತೆ ಏನು ಎಂಬ ಗಂಭೀರ ಪ್ರಶ್ನೆ ಎದ್ದಿದೆ.  ಇದನ್ನೂ ಓದಿ: ರಾಜೀನಾಮೆ ನೀಡಿದ ಬೆಂಗಳೂರು ಶಿಕ್ಷಕಿಗೆ ಬೇರೆ ಕಡೆ ಉದ್ಯೋಗ: ಸುರೇಶ್‌ ಕುಮಾರ್‌ ಭರವಸೆ

    ಜೆಡಿಎಸ್‌ ಶಾಸಕ ಆರ್‌.ಮಂಜುನಾಥ್‌ ಅವರು ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಮೇಲ್ಸೇತುವೆಯ ಬಗ್ಗೆ ಕೇಳಿದ ಪ್ರಶ್ನೆಗೆ ಸಿಎಂ ಬೊಮ್ಮಾಯಿ, ಮೇಲ್ಸೇತುವೆಯು ಭಾರೀ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಹೊಸದಾಗಿ ಮೇಲ್ಸೇತುವೆ ನಿರ್ಮಿಸಿಕೊಡುವಂತೆ ಮನವಿ ಮಾಡಲಾಗಿದೆ. ಸದ್ಯಕ್ಕೆ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡುವ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ತೀರ್ಮಾನಿಸುತ್ತದೆ ಎಂದು ಉತ್ತರಿಸಿದ್ದಾರೆ.

    ಸಿಎಂ ಹೇಳಿದ್ದು ಏನು?