Tag: Peenya flyover

  • ಪೀಣ್ಯ ಫ್ಲೈಓವರ್ ಮೇಲೆ ಹೊತ್ತಿ ಉರಿದ ಲಾರಿ – ಚಾಲಕ ಪಾರು

    ಪೀಣ್ಯ ಫ್ಲೈಓವರ್ ಮೇಲೆ ಹೊತ್ತಿ ಉರಿದ ಲಾರಿ – ಚಾಲಕ ಪಾರು

    – ತಾತ್ಕಾಲಿಕವಾಗಿ ಪೀಣ್ಯ ಫ್ಲೈಓವರ್ ಬಂದ್

    ಬೆಂಗಳೂರು: ಫ್ಲೈಓವರ್ ಮೇಲೆ ಲಾರಿಯೊಂದು (Lorry) ಏಕಾಏಕಿ ಹೊತ್ತಿ ಉರಿದ ಘಟನೆ ಬೆಂಗಳೂರಿನ (Bengaluru) ಪೀಣ್ಯದಲ್ಲಿ ನಡೆದಿದೆ.

    ಗುರುವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಲಾರಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಕೂಡಲೇ ಲಾರಿಯಿಂದ ಕೆಳಗಿಳಿದಿದ್ದಾರೆ. ಬೆಂಕಿ ಹೊತ್ತಿಕೊಂಡ ಹಿನ್ನೆಲೆ ನಗರದ ಕಡೆಗೆ ಕೆಲಗಂಟೆಗಳ ಕಾಲ ಪೀಣ್ಯ ಫ್ಲೈಓವರ್ (Peenya Flyover) ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ನಗರದ ಕಡೆಗೆ ಬರುವವರು ಫ್ಲೈಓವರ್ ಕೆಳಗಡೆ ಬರುವಂತೆ ಸೂಚನೆ ನೀಡಲಾಗಿತ್ತು. ಇದನ್ನೂ ಓದಿ: ಬಿಜೆಪಿ ನೂತನ ರಾಷ್ಟ್ರಾಧ್ಯಕರ ಆಯ್ಕೆ ಪ್ರಕ್ರಿಯೆ ಚುರುಕು – ಶೀಘ್ರದಲ್ಲಿ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲೂ ಅಧ್ಯಕ್ಷರ ಬದಲಾವಣೆ?

    ಘಟನೆ ನಡೆದ ಕೂಡಲೇ ಸ್ಥಳೀಯರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದನ್ನೂ ಓದಿ:  ನಾವು ಹಿಂದೂಗಳಿಗಿಂತ ವಿಭಿನ್ನ – ಎರಡು ರಾಷ್ಟ್ರ ಥಿಯರಿ ಹೇಳಿ ಪಾಠ ಮಾಡಿದ ಪಾಕಿಸ್ತಾನ ಸೇನಾ ಮುಖ್ಯಸ್ಥ

  • 2 ವರ್ಷಗಳ ಬಳಿಕ ಭಾರೀ ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್‌ ಮುಕ್ತ – ಈ ಷರತ್ತು ಅನ್ವಯ

    2 ವರ್ಷಗಳ ಬಳಿಕ ಭಾರೀ ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್‌ ಮುಕ್ತ – ಈ ಷರತ್ತು ಅನ್ವಯ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಿಂದ (Bengaluru) 25 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು – ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆ 2 ವರ್ಷಗಳ ಬಳಿಕ ಭಾರೀ ವಾಹನಗಳ (Heavy Vehicles) ಸಂಚಾರಕ್ಕೆ ಮುಕ್ತವಾಗ್ತಿದೆ.

    ಇದೇ ಜುಲೈ 29ರ ಸೋಮವಾರದಿಂದ ಪೀಣ್ಯ ಫ್ಲೈಓವರ್‌ ಮೇಲೆ ಬಸ್, ಲಾರಿ, ಟ್ರಕ್ ಸೇರಿದಂತೆ ಭಾರೀ ವಾಹನಗಳು ಮುಕ್ತವಾಗಿ ಸಂಚರಿಸಬಹುದಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರೇಯಸಿ ಅವಾಯ್ಡ್ ಮಾಡಿದ್ದಕ್ಕೆ ಸ್ನೇಹಿತೆಯ ಕೊಲೆ – ಕೋರಮಂಗಲ ಪಿಜಿ ಯುವತಿ ಮರ್ಡರ್ ಕೇಸ್‌ಗೆ ಟ್ವಿಸ್ಟ್‌!

    ಈ ಹಿಂದೆ ಫ್ಲೈಓವರ್‌ನ (Peenya flyover) 2 ಪಿಲ್ಲರ್‌ಗಳಲ್ಲಿ ದೋಷ ಕಂಡು ಬಂದಿದ್ದರಿಂದ ಭಾರೀ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಿ ಲಘು ವಾಹನಗಳಿಗೆ ಅವಕಾಶ ಕಲ್ಪಿಸಲಾಗಿತ್ತು. 2 ಪಿಲ್ಲರ್‌ಗಳಿಂದಾಗಿ 120 ಪಿಲ್ಲರ್‌ಗಳ 240 ಕೇಬಲ್ ಅಳವಡಿಕೆ ಪರಿಶೀಲಿಸಿ, ಲೋಡ್ ಟೆಸ್ಟಿಂಗ್ ಎಲ್ಲಾ ಆದ ಬಳಿಕ ಸಂಚಾರಕ್ಕೆ ಅವಕಾಶ ನೀಡಬಹುದು ಅಂತ ತಜ್ಞರು ಹೆದ್ದಾರಿ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಿದ್ದರು. ತಜ್ಞರ ಅಭಿಪ್ರಾಯವನ್ನು ಪ್ರಾಧಿಕಾರ ಪೊಲೀಸರಿಗೆ ಸಲ್ಲಿಕೆ ಮಾಡಿತ್ತು. ಇದನ್ನೂ ಓದಿ: ನೀಟ್ ವ್ಯವಸ್ಥೆ ಬದಲು ಸಿಇಟಿ ಪ್ರವೇಶಾತಿಗೆ ನಿರ್ಣಯ; ಉಭಯ ಸದನಗಳಲ್ಲಿ ತೀರ್ಮಾನ

    ಇದೀಗ ಪ್ರತಿ ಶುಕ್ರವಾರ ಹೊರತುಪಡಿಸಿ ಉಳಿದ 6 ದಿನಗಳ ಕಾಲ ಭಾರೀ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಶುಕ್ರವಾರ ಫ್ಲೈಓವರ್‌ನ ನಿರ್ವಹಣೆ, ಪರಿಶೀಲನೆ ಆಗಲಿದ್ದು, ಆ ದಿನ ಮಾತ್ರ ಬೆಳಗ್ಗೆ 6 ಗಂಟೆಯಿಂದ ಶನಿವಾರ ಬೆಳಗ್ಗೆ 6 ಗಂಟೆವರೆಗೆ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಇರಲಿದೆ. ಉಳಿದ 6 ದಿನವೂ ಸಂಚಾರಕ್ಕೆ ಅವಕಾಶ ಕೊಟ್ಟು ಸಂಚಾರ ಪೊಲೀಸರು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ವಿಧಾನಸಭೆಯಲ್ಲಿ ಮುಂದುವರಿದ ಬಿಜೆಪಿ, ಜೆಡಿಎಸ್ ಧರಣಿ – ತುಳು ಸಂಭಾಷಣೆ ಸೊಗಡು, ವಿಧೇಯಕಗಳ ಅಂಗೀಕಾರ

  • ಪೀಣ್ಯ ಫ್ಲೈಓವರ್‌ ಲೋಡ್‌ ಪರೀಕ್ಷೆ ಪೂರ್ಣ; ಇಂದಿನಿಂದ ಲಘು ಮೋಟಾರ್‌, ಗೂಡ್ಸ್‌ ವಾಹನಗಳ ಸಂಚಾರಕ್ಕೆ ಅವಕಾಶ

    ಪೀಣ್ಯ ಫ್ಲೈಓವರ್‌ ಲೋಡ್‌ ಪರೀಕ್ಷೆ ಪೂರ್ಣ; ಇಂದಿನಿಂದ ಲಘು ಮೋಟಾರ್‌, ಗೂಡ್ಸ್‌ ವಾಹನಗಳ ಸಂಚಾರಕ್ಕೆ ಅವಕಾಶ

    ಬೆಂಗಳೂರು: ಪೀಣ್ಯ ಫ್ಲೈಓವರ್‌ (Peenya Flyover) ಲೋಡ್‌ ಪರೀಕ್ಷೆ ಪೂರ್ಣಗೊಂಡಿದ್ದು, ಇಂದಿನಿಂದ ಲಘು ಮೋಟಾರ್ ವಾಹನಗಳು ಮತ್ತು ಲಘು ಗೂಡ್ಸ್‌ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

    ಶುಕ್ರವಾರದಿಂದ (ಜ.19) ಬೆಳಗ್ಗೆ 11 ಗಂಟೆಯಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಲೋಡ್ ಟೆಸ್ಟಿಂಗ್ ವರದಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುತ್ತದೆ. ಇದನ್ನೂ ಓದಿ: ಕಲಬುರಗಿಗೆ ನಮೋ ಆಗಮನ – ಗಣ್ಯರಿಂದ ಸ್ವಾಗತ

    ಸುಮಾರು ಮೂರು ವರ್ಷದಿಂದ ಪೀಣ್ಯ ಫ್ಲೈಓವರ್ ಭಾರಿ ವಾಹನಗಳಿಗೆ ಬಂದ್ ಆಗಿದೆ. 2021ರಲ್ಲಿ ಪೀಣ್ಯ ಫ್ಲೈಓವರ್‌ನಲ್ಲಿ ತಾಂತ್ರಿಕ ತೊಂದರೆ ಉಂಟಾಗಿ ಭಾರಿ ವಾಹನಗಳ ಸಂಚಾರ ನಿಷೇಧ ಮಾಡಲಾಗಿತ್ತು. ಪೀಣ್ಯ ಫ್ಲೈಓವರ್‌ನ ಗುಣಮಟ್ಟ ಸರಿಯಿಲ್ಲ, ಕಳಪೆ ಕಾಮಾಗಾರಿ, ಇಡೀ ಫ್ಲೈಓವರ್ ಅನ್ನು ಕೆಡವಬೇಕು ಎಂಬ ಚರ್ಚೆ ಆರಂಭವಾಗಿತ್ತು. ಆದರೆ ಕೆಲ ದಿನಗಳ ನಂತರ ಸಣ್ಣಪುಟ್ಟ ಕಾಮಾಗಾರಿ ಮಾಡಿ ಕೆಲ ಕೇಬಲ್‌ಗಳನ್ನು ಅಳವಡಿಸಿ ಸಣ್ಣ ಪ್ರಮಾಣದ ವೆಹಿಕಲ್ ಓಡಾಟಕ್ಕೆ ಅವಕಾಶ ಮಾಡಲಾಗಿತ್ತು. ಫ್ಲೈಓವರ್ ಮೇಲೆ ಸಂಪೂರ್ಣವಾಗಿ ಹೆವಿ ವೆಹಿಕಲ್‌ಗಳ ಓಡಾಟ ನಿರ್ಬಂಧಿಸಲಾಗಿತ್ತು.

    ಲೋಡ್ ಟೆಸ್ಟಿಂಗ್‌ಗಾಗಿ (Load Testing) ಎನ್‌ಹೆಚ್‌ಎ (NHA) ಮನವಿ ಮಾಡಿಕೊಂಡಿತ್ತು. ಹೀಗಾಗಿ ಸಂಚಾರಿ ಪೊಲೀಸರು ಇಂದಿನಿಂದ ಫ್ಲೈಓವರ್ ಕ್ಲೋಸ್ ಮಾಡಿದ್ದರು. ಈಗ ಲೋಡ್‌ ಪರೀಕ್ಷೆ ಮುಗಿದಿದ್ದು, ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣಗೆ ಅಗ್ನಿ ಪರೀಕ್ಷೆ; ಚುನಾವಣೆಯಲ್ಲಿ ಅಕ್ರಮ ಆರೋಪ ಪ್ರಕರಣ ಸುಪ್ರೀಂನಲ್ಲಿ ಇಂದು ವಿಚಾರಣೆ

  • ಪೀಣ್ಯ ಫ್ಲೈಓವರ್‌ ಮೇಲೆ ಭಾರೀ ವಾಹನಗಳ ಓಡಾಟಕ್ಕೆ ನಿರ್ಬಂಧ – ಮುಂದಿನ 125 ದಿನ ನೋ ಎಂಟ್ರಿ

    ಪೀಣ್ಯ ಫ್ಲೈಓವರ್‌ ಮೇಲೆ ಭಾರೀ ವಾಹನಗಳ ಓಡಾಟಕ್ಕೆ ನಿರ್ಬಂಧ – ಮುಂದಿನ 125 ದಿನ ನೋ ಎಂಟ್ರಿ

    ಬೆಂಗಳೂರು: ತುಮಕೂರು ರಾಷ್ಟ್ರೀಯ ಹೆದ್ದಾರಿಯ ವಾಹನ ಸವಾರರಿಗೆ ಇದು ಕಹಿ ಸುದ್ದಿ. ಪೀಣ್ಯ ಫ್ಲೈಓವರ್ (Peenya Flyover) ಮೇಲೆ ಮತ್ತೆ ಘನ ವಾಹನಗಳ (Heavy Vehicles) ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ.

    ಕಳೆದ ವರ್ಷ ಪೀಣ್ಯ ಫ್ಲೈಓವರ್‌ನ ಎರಡು ಪಿಲ್ಲರ್‌ನ ಕೇಬಲ್‍ಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಕಾರಣ ಎರಡ್ಮೂರು ತಿಂಗಳುಗಳ ಕಾಲ ಹೆವಿ ವೆಹಿಕಲ್ ಓಡಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಪಿಲ್ಲರ್‌ಗಳಿಗೆ ಕೇಬಲ್ ಅಳವಡಿಸಿದ ಬಳಿಕ ಭಾರತೀಯ ವಿಜ್ಞಾನ ಸಂಸ್ಥೆ (IISC) ಭಾರಿ ವಾಹನಗಳ ಓಡಾಡಿಸಿ ತಪಾಸಣೆ ಮಾಡಿ ಸಂಚಾರಕ್ಕೆ ಗ್ರಿನ್ ಸಿಗ್ನಲ್ ನೀಡಿತ್ತು. ಆದರೆ ಈಗ ಮತ್ತೆ ಹೆವಿ ವೆಹಿಕಲ್ ಓಡಾಟಕ್ಕೆ ನಿರ್ಬಂಧಿಸಲಾಗಿದೆ. ಕಾರಣ ಫ್ಲೈಓವರ್‌ನ ಎಲ್ಲಾ ಪಿಲ್ಲರ್‌ಗಳಲ್ಲಿ ಕೇಬಲ್ ಕಿತ್ತು ಬರುವ ಆತಂಕ ಇದೆಯಂತೆ. ಹಾಗಾಗಿ ಕೇಬಲ್ ಕಿತ್ತು ಬರುವುದಕ್ಕೂ ಮುಂಚೆಯೇ ಹೊಸ ಕೇಬಲ್‍ಗಳನ್ನು ಅಳವಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧಾರಿಸಿದೆ. ಇದನ್ನೂ ಓದಿ: ಕೋರಮಂಗಲ ಕಿಡ್ನಾಪ್ ಸ್ಟೋರಿಗೆ ಟ್ವಿಸ್ಟ್- ಹಣಕ್ಕಾಗಿ ಅಪಹರಿಸಿ ಹುಡುಗಿಗಾಗಿ ಡಿಮ್ಯಾಂಡ್

    ಇದಕ್ಕಾಗಿ ಟೆಂಡರ್ ಕೂಡ ನೀಡಿದ್ದು ಫೆಬ್ರವರಿ ತಿಂಗಳಲ್ಲಿ ಕೆಲಸ ಶುರುವಾಗುವ ಸಾಧ್ಯತೆ ಇದೆ. ಹಾಗಾಗಿ ಹೆವಿ ವೆಹಿಕಲ್ ಓಡಾಟ ನಡೆಸಿದರೆ ಪಿಲ್ಲರ್ ಮತ್ತು ಫ್ಲೈಓವರ್ ಕೇಬಲ್‍ಗಳು ಕಿತ್ತು ಬರುವ ಸಾಧ್ಯತೆ ಇರೋದ್ರಿಂದ ಮುಂದಿನ ನಾಲ್ಕು ತಿಂಗಳವರೆಗೂ ಹೆವಿ ವೆಹಿಕಲ್‍ಗಳಿಗೆ ನಿರ್ಬಂಧಿಸಲಾಗಿದೆ. ಫ್ಲೈಓವರ್‌ನ ಪ್ರವೇಶ ದ್ವಾರದಲ್ಲೇ ಟ್ರಾಫಿಕ್ ಪೊಲೀಸ್ರು ಮತ್ತು ಹೋಂಗಾರ್ಡ್‍ಗಳು ಬ್ಯಾರಿಕೇಡ್ ಹಾಕಿ ಹೆವಿ ವೆಹಿಕಲ್ ಓಡಾಟಕ್ಕೆ ಬ್ರೇಕ್ ಹಾಕುತ್ತಿದ್ದಾರೆ. ಇದನ್ನೂ ಓದಿ: ಪಿಲ್ಲರ್ ದುರಂತ ಬಳಿಕ ಮತ್ತೊಂದು ಎಡವಟ್ಟು – ಬ್ರಿಗೇಡ್ ರಸ್ತೆಯಲ್ಲಿ 30 ಅಡಿ ಆಳಕ್ಕೆ ಕುಸಿದ ರಸ್ತೆ

    ಪೀಣ್ಯ ಫ್ಲೈಓವರ್ 120 ಪಿಲ್ಲರ್‌ಗಳನ್ನು ಒಳಗೊಂಡಿದೆ. 240 ಕೇಬಲ್‍ಗಳನ್ನು ಅಳವಡಿಸಬೇಕಾಗಿದೆಯಂತೆ. ಪ್ರತಿ ಪಿಲ್ಲರ್‌ಗೂ ಎರಡೆರಡು ಕೇಬಲ್‍ಗಳನ್ನು ಅಳವಡಿಸಬೇಕಿದ್ದು ಮೂರು ತಿಂಗಳ ಸಮಯ ತೆಗೆದುಕೊಳ್ಳಲಿದೆ. ಕೇಬಲ್ ಅಳವಡಿಸಿದ ಬಳಿಕ ಐಐಎಸ್‍ಸಿ ಅವರು ಫ್ಲೈಓವರ್ ಮೇಲೆ ಪ್ರಾಯೋಗಿಕವಾಗಿ ಹೆವಿ ವೆಹಿಕಲ್‍ಗಳನ್ನು ಓಡಾಡಿಸಿ ತಪಾಸಣೆ ಮಾಡಲಿದ್ದಾರೆ. ಆ ತಪಾಸಣೆಯಲ್ಲಿ ಪಾಸ್ ಆದರೆ ಹೆವಿ ವೆಹಿಕಲ್‍ಗೆ ಅವಕಾಶ ಕೊಡಬಹುದು.

    23 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಈ ಫ್ಲೈಓವರ್ ಬೆಂಗಳೂರು ಮತ್ತು ರಾಜ್ಯದ ಜಿಲ್ಲೆಗಳಿಗೆ ಒಂದು ರೀತಿ ಆರ್ಥಿಕ ಚೇತರಿಕೆಯ ಕೊಂಡಿ ಆಗಿದ್ದು, ಇದರ ದುರಸ್ಥಿ ಕಾರ್ಯ ಆದಷ್ಟು ಬೇಗ ಆಗಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪೀಣ್ಯ ಫ್ಲೈಓವರ್ ಮೇಲೆ ಸರಣಿ ಅಪಘಾತ – ಟ್ರಾಫಿಕ್ ಜಾಮ್

    ಪೀಣ್ಯ ಫ್ಲೈಓವರ್ ಮೇಲೆ ಸರಣಿ ಅಪಘಾತ – ಟ್ರಾಫಿಕ್ ಜಾಮ್

    ಬೆಂಗಳೂರು: ಶಾಸಕರ ಜನ್ಮದಿನದ ಬ್ಯಾನರ್ ತೆರವುಗೊಳಿಸುವ ವೇಳೆ ಪೀಣ್ಯ ಫ್ಲೈಓವರ್ ಮೇಲೆ ಸರಣಿ ವಾಹನಗಳ ಅಪಘಾತವಾಗಿದೆ.

    ಬೆಂಗಳೂರಿನಿಂದ ತುಮಕೂರು ಕಡೆ ವಾಹನಗಳು ಹೋಗುವಂತಹ ಸಂದರ್ಭದಲ್ಲಿ ಶಾಸಕ ವಿಶ್ವನಾಥ್ ಹುಟ್ಟು ಹಬ್ಬಕ್ಕೆ ಹಾಕಿದ್ದ ಬ್ಯಾನರ್‍ನನ್ನು ಹೈವೇ ಪ್ಯಾಟ್ರೋಲಿಂಗ್ ಸಿಬ್ಬಂದಿ ತೆರವುಗೊಳಿಸುತ್ತಿದ್ದರು. ಆ ವಾಹನವನ್ನು ತಪ್ಪಿಸಲು ಹೋಗಿ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ವಾಹನಗಳು ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಒಪ್ಪಿಗೆಯಿಲ್ಲದೆ ಮದುವೆಯಾಗಿದ್ದ ಅಳಿಯ, ಮಗಳನ್ನ ಕುಡುಗೋಲಿನಿಂದ ಕೊಚ್ಚಿ ಕೊಂದ ತಂದೆ 

    ಘಟನೆಯಲ್ಲಿ ಸುಮಾರು ಹತ್ತು ಕಾರುಗಳು ಜಖಂಗೊಂಡಿದ್ದು, ಕಾರಿನಲ್ಲಿದ್ದ ಅಜ್ಜಿಗೆ ಗಂಭೀರ ಗಾಯವಾಗಿದೆ. ಪ್ರಸ್ತುತ ಸ್ಥಳಕ್ಕೆ ಭೇಟಿ ಕೊಟ್ಟ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗ್ಳೂರಿನ ಇನ್ನೊಂದು ಫ್ಲೈಓವರ್‌ಗೆ ಕಂಟಕ – ಮೇಲ್ಸೇತುವೆ ಮೇಲೆಯೇ ದೊಡ್ಡ ಗುಂಡಿ

    ಬೆಂಗ್ಳೂರಿನ ಇನ್ನೊಂದು ಫ್ಲೈಓವರ್‌ಗೆ ಕಂಟಕ – ಮೇಲ್ಸೇತುವೆ ಮೇಲೆಯೇ ದೊಡ್ಡ ಗುಂಡಿ

    ಬೆಂಗಳೂರು: ಪೀಣ್ಯ ಫ್ಲೈಓವರ್ ಆಯ್ತು ಈಗ ಬೆಂಗಳೂರಿನ ಮತ್ತೊಂದು ಫ್ಲೈಓವರ್‍ನ ಕಳಪೆ ಕಾಮಗಾರಿ ಬಯಲಾಗಿದೆ. ಫ್ಲೈಓವರ್ ನ ಗ್ರಿಲ್ ಕಟ್ಟಾಗಿ ಬೃಹತ್ ಆಳ ಬಿದ್ದು ಕುಸಿಯುವ ಆತಂಕ ನಿರ್ಮಾಣ ಆಗಿದೆ.

    ಹೌದು. ಬೆಂಗಳೂರಿನಂತಹ ಮಹಾನಗರದಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ಲೈಓವರ್‍ಗಳಿವೆ. ಅದರಲ್ಲಿ ಕಳಪೆ ಕಾಮಗಾರಿಯಿಂದ ಬೇರಿಂಗ್‍ನಲ್ಲಿ ಬಿರುಕು ಬಿಟ್ಟಿದೆ ಅಂತಾ ಸುದ್ದಿ ಆದದ್ದು ಪೀಣ್ಯ ಮತ್ತು ಎಂಇಎಸ್ ಪ್ಲೈಓವರ್. ಗೊರಗುಂಟೆ ಪಾಳ್ಯದಿಂದ ಹೆಬ್ಬಾಳದ ಕಡೆಗೆ ಸಾಗುವ ಎಂಇಎಸ್ ಪ್ಲೈಓವರ್ ಈಗ ಮತ್ತೆ ಸುದ್ದಿಯಲ್ಲಿದೆ. ಕಳೆದ ನಾಲ್ಕು ತಿಂಗಳಷ್ಠೆ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಸರಿಪಡಿಸಿದ್ರು. ಈಗ ಮತ್ತೆ ಎಂಇಎಸ್ ಪ್ಲೈಓವರ್ ಮೇಲೆ ಕಬ್ಬಿಣದ ಗ್ರಿಲ್ ಕಟ್ಟಾಗಿ ಬೃಹತ್ ಆಳ ಬಿದ್ದಿದೆ. ಮೇಲೆ ನಿಂತು ನೋಡಿದ್ರೆ ಕೆಳಗಿನ ಅಂಡರ್ ಪಾಸ್ ಕಾಣುತ್ತೆ. ಹೀಗಿದ್ರು ವಾಹನ ಸವಾರರು ಅಪಾಯದಲ್ಲೆ ಓಡಾಡ್ತಿದ್ದಾರೆ. ಬೃಹತ್ ಗುಂಡಿ ಬಿದ್ದ ಜಾಗಕ್ಕೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಲಾಗಿದೆ.

    ರೈಲ್ವೆ ಇಲಾಖೆ ಪ್ಲೈಓವರ್ ನಿರ್ಮಾಣ ಮಾಡಿದ್ದು ಬಿಬಿಎಂಪಿ ನಿರ್ವಹಣೆ ಮಾಡ್ತಿದೆ. ಆದರೆ ಕಳಪೆ ಕಾಮಗಾರಿ ಮತ್ತು ಅಸಮರ್ಪಕ ನಿರ್ವಹಣೆಯಿಂದ ಕಾಂಕ್ರೀಟ್ ಕಿತ್ತು ಬಂದು ಆಳ ಬಿದ್ದಿರೋದು ಅಪಾಯಕ್ಕೆ ದಾರಿ ಮಾಡಿಕೊಡ್ತಿದೆ. ಏಕೆ ಈ ರೀತಿ ಆಯ್ತು ಅಂತಾ ಬಿಬಿಎಂಪಿ ಮತ್ತು ರೈಲ್ವೆ ಇಲಾಖೆ ಅವರನ್ನ ಪ್ರಶ್ನೆ ಮಾಡಿದ್ರೆ ಉತ್ತರ ಕೊಡದೇ ಹೋಗ್ತಾರೆ. ಇದನ್ನೂ ಓದಿ: ನೂಪುರ್ ಹೇಳಿಕೆಯಿಂದ ಕೋಮು ಉದ್ವಿಗ್ನತೆ ಸೃಷ್ಟಿಸಿದ್ದು ಕೇವಲ ವೋಟಿಗಾಗಿ – ಸಿನ್ಹಾ ಗುಡುಗು

    ಇನ್ನೂ ಬೃಹತ್ ಗುಂಡಿಯನ್ನ ಬಿಬಿಎಂಪಿ ಡಾಂಬಾರು ಹಾಕಿ ಮುಚ್ಚಿದ್ದಾರೆ. ತಾತ್ಕಾಲಿಕ ವ್ಯವಸ್ಥೆ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇವತ್ತು ರಾತ್ರಿ ಕಾಂಕ್ರೀಟ್ ಹಾಕಿ ಸರಿಪಡಿಸುತ್ತೆವೆ ಅಂತಾ ಪಬ್ಲಿಕ್ ಟಿವಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಟ್ಟಾರೆ ದಿನಕ್ಕೆ ಲಕ್ಷಾಂತರ ವೆಹಿಕಲ್ ಓಡಾಡೋ ಪ್ಲೈಓವರ್ ಮೇಲೆ ಈ ರೀತಿ ಕುಸಿತ ಆಗಿರೋದು ಆತಂಕ ಹೆಚ್ಚಿಸಿದೆ. ಎಚ್ಚೆತ್ತುಕೊಳ್ಳದೆ ಇದ್ರೆ ಅಪಾಯಕಟ್ಟಿಟ್ಟ ಬುತ್ತಿ.

    Live Tv
    [brid partner=56869869 player=32851 video=960834 autoplay=true]

  • ಪೀಣ್ಯ ಫ್ಲೈಓವರ್ ಮೇಲೆ ಶೀಘ್ರದಲ್ಲೆ ಹೆವಿ ವೆಹಿಕಲ್ ಓಡಾಟ !

    ಪೀಣ್ಯ ಫ್ಲೈಓವರ್ ಮೇಲೆ ಶೀಘ್ರದಲ್ಲೆ ಹೆವಿ ವೆಹಿಕಲ್ ಓಡಾಟ !

    ಬೆಂಗಳೂರು: ರಾಜ್ಯದ 18 ಜಿಲ್ಲೆಗಳನ್ನು ಬೆಂಗಳೂರಿನಿಂದ ಸಂಪರ್ಕಿಸುವ ಪೀಣ್ಯ ಫ್ಲೈಓವರ್ ಮೇಲೆ ಶೀಘ್ರದಲ್ಲೇ ಹೆವಿ ವೆಹಿಕಲ್ ಓಡಾಟ ಕೊಡಲು ತಜ್ಞರು ಸಮ್ಮತಿ ನೀಡಿದ್ದಾರೆ.

    ಕಳೆದ ಡಿ. 25 ರಂದು 6 ತಿಂಗಳ ಬಳಿಕ ಫ್ಲೈಓವರ್‌ನ ಎರಡು ಪಿಲ್ಲರ್‌ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಹೆವಿ ವೆಹಿಕಲ್ ನಿರ್ಬಂಧ ಮಾಡಲಾಗಿತ್ತು. ಇದರಿಂದಾಗಿ ಪೀಣ್ಯ ಫ್ಲೈಓವರ್ ಮೇಲೆ ಹೆವಿ ವೆಹಿಕಲ್ ಓಡಾಟಕ್ಕೆ ನಿರ್ಬಂಧದಿಂದ ಫುಲ್ ಟ್ರಾಫಿಕ್ ಜಾಮ್ ತುಮಕೂರು ರಸ್ತೆ, ಗೊರುಗುಂಟೆಪಾಳ್ಯ ಜಂಕ್ಷನ್ ಬಳಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿತ್ತು. ಬಳಿಕ ರಾಷ್ಟ್ರೀಯ ಹೆದ್ದಾರಿ ಪಾಧಿಕಾರದವರು ಮತ್ತು ಐಐಎಸ್ ಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

    ಇದೀಗ ಹೆವಿ ವೆಹಿಕಲ್ ಓಡಾಟಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ. ಈ ಬಗ್ಗೆ ಐಐಎಸ್‍ಸಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, 20 ಟನ್‍ವರೆಗಿನ ವೆಹಿಕಲ್ ಓಡಾಟಕ್ಕೆ ಅವಕಾಶ ನೀಡಬಹುದು ಎಂದು ಮಾಹಿತಿ ನೀಡಿದ್ದಾರೆ. ಒಂದು ಟ್ರಕ್ ಭಾರ 10 ರಿಂದ 20 ಟನ್ ಇರುತ್ತದೆ. 20 ಟನ್‍ಗಿಂತ ಹೆಚ್ಚು ಭಾರ ಹಾಕುವ ವೆಹಿಕಲ್‍ಗಳನ್ನು ಹಾಕಬಾರದು. ಫ್ಲೈ ಓವರ್ ಮುಂಭಾಗದಲ್ಲಿ ಲೋಡಿಂಗ್ ಮಿಷನ್ ಇಟ್ಟು ಚೆಕ್ ಮಾಡಿ ವೆಹಿಕಲ್ ಬಿಡಬೇಕಾಗುತ್ತದೆ. ಒಂದು ವಾಹನ 20 ಟನ್‍ಗಿಂತ ಹೆಚ್ಚು ಭಾರ ಹಾಕಬಾರದು. ಅದನ್ನ ಪರಿಶೀಲನೆ ಮಾಡಿ ವೆಹಿಕಲ್ ಮೂಮೆಂಟ್‍ಗೆ ಐಐಎಸ್‍ಸಿ ಸಮ್ಮತಿ ನೀಡಿದೆ. ಇದನ್ನೂ ಓದಿ: ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ 20 ರೂ. ಚಹಾಗೆ 50 ರೂ. ಸೇವಾಶುಲ್ಕ – ಪ್ರಯಾಣಿಕ ಶಾಕ್

    ಬುಧವಾರ ವಿವಿಧ ಏಜೆನ್ಸಿಗಳ ತಜ್ಞರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು, ಪರಿಶೀಲನೆ ಬಳಿಕ ಹೆವಿ ವೆಹಿಕಲ್ ಓಡಾಟಕ್ಕೆ ಅವಕಾಶ ಕೊಡಬಹುದು ಅಂತಾ ವರದಿ ಸಿದ್ಧ ಪಡಿಸಿದೆ. ಇದರ ಅನುಸಾರ ಗೂಡ್ಸ್ ಟ್ರಕ್ಸ್, ಬಸ್, ಖಾಲಿ ಲಾರಿ ಓಡಾಡಬಹುದು. ಟ್ರಕ್‍ಗಳು 20 ಟನ್‍ಗಿಂತ ಮೇಲ್ಪಟ್ಟು ಇರಬಾರದು ಎಂದು ತಿಳಿಸಿದೆ. ಇದನ್ನೂ ಓದಿ: ಲಾರಿ ಚಾಲಕರನ್ನು ಬೆದರಿಸಿ ದರೋಡೆ ನಡೆಸುತ್ತಿದ್ದ ಮೂವರ ಬಂಧನ

    Live Tv

  • 20 ದಿನದಲ್ಲಿ ಪೀಣ್ಯ ಫ್ಲೈಓವರ್‌ ಮೇಲೆ ಬಸ್‌, ಲಾರಿ ಓಡಾಟಕ್ಕೆ ಅವಕಾಶ?

    20 ದಿನದಲ್ಲಿ ಪೀಣ್ಯ ಫ್ಲೈಓವರ್‌ ಮೇಲೆ ಬಸ್‌, ಲಾರಿ ಓಡಾಟಕ್ಕೆ ಅವಕಾಶ?

    ಬೆಂಗಳೂರು: ರಾಜ್ಯದ 18 ಜಿಲ್ಲೆಗಳನ್ನು ಬೆಂಗಳೂರಿನಿಂದ ಸಂಪರ್ಕಿಸುವ ಪೀಣ್ಯ ಮೇಲ್ಸೇತುವೆಯಲ್ಲಿ ಮಲ್ಟಿ ವ್ಹೀಲ್‌ ವೆಹಿಕಲ್‌ ಹೊರತುಪಡಿಸಿ(ಎಂವಿವಿ) ಬಸ್‌, ಲಾರಿ ಓಡಾಟಕ್ಕೆ 20 ದಿನದಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ.

    ಫ್ಲೈ ಓವರ್‌ ಭಾರ ತಡೆಯುವ ಸಾಮರ್ಥ್ಯದ ಸಾಮರ್ಥ್ಯದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ(ಎನ್‌ಎಚ್‌ಎಐ) ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್‌ಸಿ) ತಜ್ಞರು ವರದಿ ನೀಡಿದ್ದಾರೆ.

    ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಎನ್‌ಎಚ್ಎಐ ಉನ್ನತ ಅಧಿಕಾರಿಗಳ ತಂಡ ತ್ರಿಸದಸ್ಯ ಸಮಿತಿ ರಚಿಸಿದ್ದು ಸಾಧಕ ಬಾಧಕವನ್ನ ಪರಿಶೀಲಿಸಿ ಮತ್ತೊಂದು ವರದಿ ನೀಡುವಂತೆ ಕೋರಿದೆ.

    ಐಐಎಸ್‌ಸಿಯ ತಜ್ಞ ಚಂದ್ರ ಕಿಶನ್, ಟ್ಯಾಂಡನ್ ಕನ್ಸಲ್ಟೆನ್ಸಿಯ ಬ್ರಿಡ್ಜ್ ಎಂಜಿನಿಯರ್ ದೆಹಲಿಯ ಮಹೇಶ್ ಟೆಂಡನ್, ದೆಹಲಿ ಸೆಂಟ್ರಲ್ ರೋಡ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ನಿವೃತ್ತ ಇಂಜಿನಿಯರ್ ಡಾ. ಶರ್ಮಾ ನೇತೃತ್ವದ ತ್ರಿಸದಸ್ಯ ಸಮಿತಿ ಜೂನ್‌ ಮೊದಲ ವಾರದಲ್ಲಿ ಎನ್‌ಎಚ್‌ಎಐಗೆ ಶಿಫಾರಸು ಇರುವ ವರದಿ ಸಲ್ಲಿಸಲಿದೆ. ಈ ವರದಿಯನ್ನು ಎನ್‌ಎಚ್‌ಎಐ ಒಪ್ಪುವ ಸಾಧ್ಯತೆಯಿದೆ. ಇದನ್ನೂ ಓದಿ: ನಾವೆಲ್ಲಾ ಪೋಸ್ಟ್ ಮ್ಯಾನ್ ಕೆಲಸ ಮಾಡ್ತೇವೆ- ಬಿಜೆಪಿ ಕುರಿತು ನಟ ಜಗ್ಗೇಶ್ ಹೇಳಿದ್ದಿಷ್ಟು

    ಜೂನ್ 15 ರ ವರದಿ ಸಲ್ಲಿಕೆಯ ಬಳಿಕ ನಂತರ ಬಸ್ , ಲಾರಿ ಗಳ ಓಡಾಟಕ್ಕೆ ಅವಕಾಶ ಸಿಗಲಿದೆ. ಆದರೆ ಫ್ಲೈಓವರ್‌ನಲ್ಲಿ ಅತ್ಯಂತ ಭಾರದ ವಾಹನ(ಎಂವಿವಿ) ಸಂಚಾರ ನಿರ್ಬಂಧ ಮುಂದುವರೆಯಲಿದೆ.

    ಮೇಲ್ಸೇತುವೆ ಸಾಮರ್ಥ್ಯದ ಬಗ್ಗೆ ವಿಸ್ತೃತ ಪರಿಶೀಲನೆಗೆ 6 ರಿಂದ 9 ತಿಂಗಳು ಬೇಕಾಗುವ ಸಾಧ್ಯತೆ ಇದ್ದು, ಅಲ್ಲಿಯವರೆಗೆ ಟ್ರಕ್‌ ಸೇರಿದಂತೆ ಘನ ವಾಹನಗಳಿಗೆ ನಿರ್ಬಂಧ ಮುಂದುವರೆಯಲಿದೆ.

    ಭಾರಿ ವಾಹನಗಳ ಓಡಾಟದಿಂದ 7 ತಿಂಗಳ ಹಿಂದೆ 102, ಮತ್ತು 103 ಪಿಲ್ಲರ್ ನಡುವೆ ಕೇಬಲ್ ಬಾಗಿತ್ತು. ಹೀಗಾಗಿ ಈ ಫ್ಲೈ ಓವರ್‌ ಮೇಲೆ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಬಳಿಕ ಕೆಲ ತಿಂಗಳ ಬಳಿಕ ಕೇಬಲ್ ಸರಿಪಡಿಸಿ ತಜ್ಞರ ವರದಿ ಬಳಿಕ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.

  • ಪೀಣ್ಯ ಫ್ಲೈಓವರ್ ದುರಸ್ತಿಗೆ ಬಂದು 3 ತಿಂಗಳು ಕಳೆದ್ರೂ ಸರ್ಕಾರ ಮೌನ..!

    ಪೀಣ್ಯ ಫ್ಲೈಓವರ್ ದುರಸ್ತಿಗೆ ಬಂದು 3 ತಿಂಗಳು ಕಳೆದ್ರೂ ಸರ್ಕಾರ ಮೌನ..!

    – RTI ಮಾಹಿತಿಯಲ್ಲಿ ಹೈವೆ ಹೈಡ್ರಾಮ ಬಟಾಬಯಲು

    ಬೆಂಗಳೂರು: ಪೀಣ್ಯ ಫ್ಲೈಓವರ್ ಕಳಪೆ ಕಾಮಗಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಸ್ವತಃ ಸಿಎಂ ಇದು ಹೆವಿ ಲೋಡೆಡ್ ವಾಹನಗಳಿಗೆ ಸಂಚಾರಿ ಯೋಗ್ಯವಲ್ಲ, ಕಳಪೆ ಅಂದಿದ್ರು. ಭಾರತೀಯ ವಿಜ್ಞಾನ ಸಂಸ್ಥೆ ವರದಿ ಕೊಟ್ಟಿದೆ ಅಂತಾ ಶಾಸಕರು ಹೇಳಿದ್ರು. ಆದರೆ ಇನ್ನೂ ಹೆವಿಲೋಡೆಡ್ ವಾಹನಕ್ಕೆ ಅನುವು ಮಾಡಿಕೊಡ್ತಿಲ್ಲ. ಈ ಮಧ್ಯೆ ಇದಕ್ಕೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ.

    ಹೌದು. ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪೀಣ್ಯ ಶಿವಕುಮಾರ ಸ್ವಾಮೀಜಿ ಮೇಲ್ಸೆತುವೆ ಸುರಕ್ಷತೆ ಮತ್ತು ಗುಣಮಟ್ಟ ಪರಿಶೀಲನೆಗೆ ಯಾವುದೇ ತಜ್ಞರ ಸಮಿತಿಯನ್ನು ನೇಮಕ ಮಾಡಿಲ್ವಂತೆ. ಹೀಗಂತ ಸ್ವತಃ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪಿಕೊಂಡಿದೆ. ಈ ಹಿಂದೆ ಸದನದಲ್ಲಿ ಸಿಎಂ ಪಿಲ್ಲರ್ ಕೇಬಲ್ ದೋಷ ಇದೆ. ಭಾರೀ ವಾಹನ ಸಂಚಾರಕ್ಕೆ ರಸ್ತೆ ಯೋಗ್ಯವಲ್ಲ ಅಂತಾ ಭಾರತೀಯ ವಿಜ್ಞಾನ ಸಂಸ್ಥೆ ವರದಿ ನೀಡಿದೆ ಅಂದ್ರು.

    ಈ ಬಗ್ಗೆ ತಜ್ಞರ ಸಮಿತಿ ಯಾವ ವರದಿ ಕೊಟ್ಟಿದೆ, ಈ ಫ್ಲೈಓವರ್ ನಲ್ಲಿ ದೋಷ ಏನು ಅಂತಾ ತಿಳಿದುಕೊಳ್ಳಲು ಕೆಆರ್ ಎಸ್ ಪಕ್ಷದ ಜೀವನ್ ಅನ್ನೋರು ಆರ್‍ಟಿ ಐ ಮಾಹಿತಿ ಕೇಳಿದ್ರು. ಆದರೆ ಇದಕ್ಕೆ ಉತ್ತರ ಕೊಟ್ಟಿರುವ ಎನ್‍ಎನ್ ಅಧಿಕಾರಿಗಳು ಯಾವ ತಜ್ಞರ ಕಮಿಟಿಯೂ ರಚನೆಯಾಗಿಲ್ಲ ಯಾವ ವರದಿಯ ಕೊಟ್ಟಿಲ್ಲ ಅಂತಾ ಶಾಕಿಂಗ್ ಉತ್ತರ ಕೊಟ್ಟಿದ್ದಾರೆ.

    ಹಾಗಿದ್ರೆ ತಜ್ಞರ ವರದಿ ಇಲ್ಲದೇ ಮೇಲ್ಸೇತುವೆ ಬಂದ್ ಆಯ್ತಾ ಅಥವಾ ಉದ್ದೇಶಪೂರ್ವಕವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಎನ್ ಎಚ್ ಅಧಿಕಾರಿಗಳು ಮುಚ್ಚಿಹಾಕುತ್ತಿದ್ದಾರಾ ಅನ್ನೋ ಪ್ರಶ್ನೆ ಮೂಡಿದೆ. ಇನ್ನು ಕೂಡ ಹೆವಿಲೋಡೆಡ್ ವಾಹನಕ್ಕೆ ಪ್ರವೇಶ ಯಾವಾಗ ದುರಸ್ತಿ ಹೇಗೆ ಯಾವ ಮಾಹಿತಿಯೂ ಲಭ್ಯವಿಲ್ಲ. ಆದ್ರೇ ಸುಂಕ ಮಾತ್ರ ಪ್ಲೈಓವರ್‍ನಲ್ಲಿ ಹೋಗದ ವಾಹನಗಳಿಗೂ ತೆಗೆದುಕೊಳ್ತಾ ಇದ್ದಾರೆ ಅಂತಾ ಆರ್ ಟಿಐ ಮಾಹಿತಿ ತೆಗೆದುಕೊಂಡ ಜೀವನ್ ಕಿಡಿಕಾರಿದ್ದಾರೆ.

    ಒಟ್ಟಿನಲ್ಲಿ ಕಳಪೆ ಕಾಮಗಾರಿ ಬಗ್ಗೆ ಗಂಭೀರ ಆರೋಪ ಇರೋದ್ರಿಂದ ಇದನ್ನು ಮುಚ್ಚಿ ಹಾಕೋದಕ್ಕೆ ಪ್ರಯತ್ನ ಪಡ್ತಾ ಇದ್ದಾರಾ ಅನ್ನೋ ಅನುಮಾನ ಈಗ ಮೂಡಿದೆ.

     

  • ಗೊರಗುಂಟೆಪಾಳ್ಯ ಫ್ಲೈಓವರ್‌ನಲ್ಲಿ ರಾತ್ರಿ ಸಂಚಾರ ಬಂದ್

    ಗೊರಗುಂಟೆಪಾಳ್ಯ ಫ್ಲೈಓವರ್‌ನಲ್ಲಿ ರಾತ್ರಿ ಸಂಚಾರ ಬಂದ್

    ಬೆಂಗಳೂರು: ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲೆ ರಾತ್ರಿ ವೇಳೆ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ.

    ಮೇಲ್ಸೇತುವೆಯಲ್ಲಿ ಭಾರೀ ವಾಹನ ಹಾಗೂ ಲಘು ವಾಹನ ಪ್ರತ್ಯೇಕಿಸಿ ಕಳುಹಿಸುವುದಕ್ಕೆ ಪೊಲೀಸರಿಗೆ ಕಷ್ಟವಾಗುತ್ತಿರುವ ಹಿನ್ನೆಲೆ, ಜೊತೆಗೆ ಭಾರೀ ವಾಹನಗಳ ತಡೆಗಟ್ಟಲು ಅಳವಡಿಸಿರುವ ಗ್ಯಾಂಟ್ರಿ ಪದೇ, ಪದೇ ಡ್ಯಾಮೇಜ್ ಆಗುತ್ತಿರುವ ಕಾರಣ ರಾತ್ರಿ 12 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಟ್ರಾಫಿಕ್ ಪೊಲೀಸರು ನಿರ್ಬಂಧ ಹೇರಿದ್ದಾರೆ. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ವ್ಯಕ್ತಿ ಸಹಿತ ಕಾರು ಸುಟ್ಟು ಕರಕಲು

    ರಾತ್ರಿ 12 ಗಂಟೆ ನಂತರ ಸರ್ವಿಸ್ ರಸ್ತೆ ಮೂಲಕ ದಾಸರಹಳ್ಳಿ, ಪೀಣ್ಯ, ಜಾಲಹಳ್ಳಿ ಕ್ರಾಸ್ ಮೂಲಕ ಗೊರಗುಂಟೆಪಾಳ್ಯ ತಲುಪಬಹುದಾಗಿದೆ. ಗೊರಗುಂಟೆಪಾಳ್ಯದಿಂದ ಔಟರ್ ರಿಂಗ್ ರೋಡ್ ಬಳಸಿ ನಗರದಿಂದ ಹೊರ ಹೋಗಬಹುದು ಮತ್ತು ನಗರಕ್ಕೆ ಬರುವ ವಾಹನಗಳು ಮಾದಾವಾರ ಬಳಿ ನೈಸ್ ರಸ್ತೆ ಬಳಸಿಕೊಂಡು ಬರಬಹುದು ಎಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ. ಇದನ್ನೂ ಓದಿ: ಮದುವೆಗಾಗಿ ಕೂದಲು ಕಸಿ ಮಾಡಿಸಿಕೊಂಡು ಮಸಣ ಸೇರಿದ