Tag: Peel

  • ಬಾಯಲ್ಲಿ ನೀರೂರಿಸುವ ಹೀರೆಕಾಯಿ ಸಿಪ್ಪೆಯ ಚಟ್ನಿ ನೀವು ಮಾಡಿ

    ಬಾಯಲ್ಲಿ ನೀರೂರಿಸುವ ಹೀರೆಕಾಯಿ ಸಿಪ್ಪೆಯ ಚಟ್ನಿ ನೀವು ಮಾಡಿ

    ಟ್ನಿಯಲ್ಲಿ ಹಲವು ಬಗೆಗಳಿವೆ. ಟೊಮೆಟೊ, ಈರುಳ್ಳಿ, ಶೇಂಗಾ ಚಟ್ನಿಯನ್ನು ಮಾಡಲಾಗುತ್ತದೆ. ಹೀರೆಕಾಯಿಂದ ದೋಸೆ,  ಹುಳಿ, ಪಲ್ಯ, ಚಟ್ನಿ ಹೀಗೆ ನಾನಾ ಬಗೆಯ ಅಡುಗೆಗಳನ್ನು ತಯಾರಿಸುತ್ತೇವೆ. ಆದರೆ ಹೀರೆಕಾಯಿ ಸಿಪ್ಪೆಯಿಂದ ಚಟ್ನಿಯನ್ನು ತಯಾರಿಸಬಹುದು. ನಾವು ಇಂದು ಹೀರೆಕಾಯಿ ಸಿಪ್ಪೆಯಿಂದ ಚಟ್ನಿಯನ್ನು ಮಾಡುವ ಸರಳ ವಿಧಾನ ಹೇಳುತ್ತೇವೆ.


    ಬೇಕಾಗುವ ಸಾಮಗ್ರಿಗಳು:
    * ಹೀರೆಕಾಯಿ ಸಿಪ್ಪೆ-1 ಕಪ್
    * ಒಣ ಮೆಣಸು 4-5
    * ಉದ್ದಿನ ಬೇಳೆ -ಅರ್ಧ ಚಮಚ
    * ತೆಂಗಿನ ತುರಿ – ಅರ್ಧ ಕಪ್
    * ಹುಣಸೆ ಹಣ್ಣು- ಸ್ವಲ್ಪ
    * ರುಚಿಗೆ ತಕ್ಕ ಉಪ್ಪು
    * ಇಂಗು ಚಿಟಿಕೆಯಷ್ಟು
    * ಕರಿಬೇವಿನ ಎಲೆ ಇದನ್ನೂ ಓದಿ:  ಬಿಸಿ ಬಿಸಿ ಬೇಳೆ ಹೋಳಿಗೆ ಮಾಡಿ ತುಪ್ಪದ ಜೊತೆಗೆ ಸವಿಯಿರಿ


    ಮಾಡುವ ವಿಧಾನ:
    * ಹೀರೆಕಾಯಿ ಸಿಪ್ಪೆಯನ್ನು ಚಿಕ್ಕ ಬಾಣಲೆಯಲ್ಲಿ ಹಾಕಿ ಸ್ವಲ್ಪ ಎಣ್ಣೆ ಹಾಕಿ ಹುರಿಯಬೇಕು.

    * ನಂತರ ಅದನ್ನು ತಟ್ಟೆಗೆ ತೆಗೆದಿಟ್ಟು, ಅದೇ ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ಕೂಡಲೇ ಸ್ವಲ್ಪ ಉದ್ದಿನಬೇಳೆ, ಒಣಮೆಣಸು ಹಾಕಿ ಹುರಿಯಬೇಕು.

    * ಹುರಿದು ಹೀರೆಕಾಯಿ ಸಿಪ್ಪೆ, ಒಮಮೆಣಸು, ಉದ್ದಿನಬೇಳೆ, ಹುಣಸೆಹಣ್ಣು, ತೆಂಗಿನಕಾಯಿ ಸೇರಿಸಿ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.

    * ನಂತರ ಒಗ್ಗರಣೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ಇದಕ್ಕೆ ಚಿಟಿಕೆಯಷ್ಟು ಇಂಗು ಮತ್ತು ಕರಿಬೇವಿನ ಎಲೆ ಹಾಕಿ ಚಟ್ನಿಗೆ ಒಗ್ಗರಣೆ ಕೊಟ್ಟರೆ ಸೂಪರ್ ಚಟ್ನಿ ಸವಿಯಲು ಸಿದ್ಧವಾಗುತ್ತದೆ.

  • ಅಡಿಕೆ ಸಿಪ್ಪೆಗೆ ಬೆಂಕಿ – ಗ್ರಾಮದ ತುಂಬಾ ಆವರಿಸಿದ ಹೊಗೆ

    ಅಡಿಕೆ ಸಿಪ್ಪೆಗೆ ಬೆಂಕಿ – ಗ್ರಾಮದ ತುಂಬಾ ಆವರಿಸಿದ ಹೊಗೆ

    ಚಿಕ್ಕಮಗಳೂರು: ರಸ್ತೆ ಬದಿ ಹಾಕಿದ್ದ ಅಡಿಕೆ ಸಿಪ್ಪೆಗೆ ಆಕಸ್ಮಿಕ ಬೆಂಕಿ ತಗುಲಿದ ಗ್ರಾಮದ ತುಂಬಾ ಹೊಗೆ ಆವರಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದೆ.

    ಮಲೆನಾಡ ಹೆಬ್ಬಾಗಿಲು ಎಂದೇ ಕರೆಯುವ ತರೀಕೆರೆ ತಾಲೂಕಿನ ಬಹುತೇಕ ಭಾಗ ಅಡಿಕೆ ಉದ್ಯಮವನ್ನೇ ಆಶ್ರಯಿಸಿದೆ. ಈಗ ಅಡಿಕೆ ಕೊಯ್ಲಿನ ಸಮಯ ಮುಗಿದಿದೆ. ಸುಲಿದ ಅಡಿಕೆಯ ಸಿಪ್ಪೆಯನ್ನ ಒಣಗಲೆಂದು ಕೆಲವರು ರಸ್ತೆ ಬದಿ ಸುರಿಯುತ್ತಾರೆ. ಹೀಗೆ ಸುರಿದ ಅಡಿಕೆ ಸಿಪ್ಪೆಗೆ ಆಕಸ್ಮಿಕ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ.

    ಅಡಿಕೆ ಸಿಪ್ಪೆ ಜೋರಾಗಿ ಹೊತ್ತಿ ಉರಿಯದಿದ್ದರೂ ಬಾವಿಕೆರೆ ಗ್ರಾಮದ ತುಂಬಾ ಹೊಗೆ ಆವರಿಸಿದೆ. ಇದರಿಂದ ಸ್ಥಳಿಯರು ಆತಂಕಕ್ಕೀಡಾಗಿದ್ದಾರೆ. ಗ್ರಾಮದಲ್ಲಿ ಅಕ್ಕಪಕ್ಕ ನಿಂತಿದ್ದವರೂ ಕಾಣದಂತೆ ಆಗಿದ್ದು, ಹೊಗೆಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಕೂಡ ಹರಸಾಹಸ ಪಟ್ಟಿದ್ದಾರೆ.

    ಈ ಮಧ್ಯೆ ಸ್ಥಳಿಯರು ಕೂಡ ರಸ್ತೆ ಬದಿ ಅಡಿಕೆ ಸಿಪ್ಪೆಯನ್ನು ಸುರಿಯುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆ ಬದಿ ಅಡಿಕೆ ಸಿಪ್ಪೆ ಸುರಿಯಲು ಬಿಡಬಾರದು ಎಂದು ಸ್ಥಳೀಯ ಆಡಳಿತಕ್ಕೆ ಆಗ್ರಹಿಸಿದ್ದಾರೆ.