Tag: peddi film

  • ರಾಮ್ ಚರಣ್ ಸಿನಿಮಾದಲ್ಲಿ ‘ಕಿಸ್ಸಿಕ್’ ಬೆಡಗಿ ಐಟಂ ಡ್ಯಾನ್ಸ್?

    ರಾಮ್ ಚರಣ್ ಸಿನಿಮಾದಲ್ಲಿ ‘ಕಿಸ್ಸಿಕ್’ ಬೆಡಗಿ ಐಟಂ ಡ್ಯಾನ್ಸ್?

    ನ್ನಡದ ನಟಿ ಶ್ರೀಲೀಲಾ (Sreeleela) ಪ್ರಸ್ತುತ ಬಾಲಿವುಡ್ ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಪುಷ್ಪ 2’ ಚಿತ್ರದಲ್ಲಿ ಸೊಂಟ ಬಳುಕಿಸಿದ ಮೇಲೆ ರಾಮ್ ಚರಣ್ (Ram Charan) ಹೊಸ ಸಿನಿಮಾದಲ್ಲಿಯೂ ಶ್ರೀಲೀಲಾ ಐಟಂ ಹಾಡಿಗೆ ಡ್ಯಾನ್ಸ್ ಮಾಡ್ತಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:ಭಾರತದ ವಿರುದ್ಧವೇ ಪೋಸ್ಟ್ – ಮಲಯಾಳಂ ನಟಿ ವಿರುದ್ಧ ಆಕ್ರೋಶ

    ಶ್ರೀಲೀಲಾ ಸಾಲು ಸಾಲು ಸಿನಿಮಾದಲ್ಲಿ ನಟಿಸುತ್ತಿದ್ದರೂ ಕೂಡ ಅವರಿಗೆ ಸಕ್ಸಸ್ ಸಿಕ್ಕಿಲ್ಲ. ಹಾಗಂತ ಅವರಿಗಿರುವ ಕ್ರೇಜ್ ಮತ್ತು ಬೇಡಿಕೆಯೇನು ಕಮ್ಮಿಯಾಗಿಲ್ಲ. ಅದರಲ್ಲೂ ನಟಿಯ ಡ್ಯಾನ್ಸ್ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಅದಕ್ಕೆ ‘ಪುಷ್ಪ 2’ (Pushpa 2) ಚಿತ್ರದ ‘ಕಿಸ್ಸಿಕ್’ ಸಾಂಗ್ ಸಾಕ್ಷಿಯಾಗಿದೆ. ಇದೀಗ ಅದೇ ರೀತಿಯ ಮತ್ತೊಂದು ಐಟಂ ಸಾಂಗ್ ಮಾಡುವ ಆಫರ್ ಅವರಿಗೆ ಅರಸಿ ಬಂದಿದೆ. ಇದನ್ನೂ ಓದಿ: ನಿರ್ಮಾಪಕನೊಂದಿಗೆ ಸಮಂತಾ ಲವ್‌ನಲ್ಲಿ ಬಿದ್ದಿರೋದು ನಿಜನಾ? – ಫ್ಯಾನ್ಸ್‌ಗೆ ಸಿಕ್ತು ಸಾಕ್ಷಿ

    ರಾಮ್ ಚರಣ್ ನಟನೆಯ ‘ಪೆಡ್ಡಿ’ (Peddi) ಚಿತ್ರದಲ್ಲಿ ಶ್ರೀಲೀಲಾಗೆ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲು ಚಿತ್ರತಂಡ ಮಾತುಕತೆ ನಡೆಸಿದೆಯಂತೆ. ಉತ್ತಮ ಸಂಭಾವನೆ ಕೊಟ್ಟು ಅವರನ್ನೇ ಹಾಕಿಕೊಳ್ಳುವ ಪ್ಲ್ಯಾನ್‌  ಚಿತ್ರತಂಡಕ್ಕಿದೆ. ಆದರೆ ಮತ್ತೊಮ್ಮೆ ಐಟಂ ಹಾಡಿಗೆ ಡ್ಯಾನ್ಸ್ ಮಾಡಲು ಒಪ್ಪಿಕೊಳ್ತಾರಾ ಎಂಬುದನ್ನು ಕಾದುನೋಡಬೇಕಿದೆ.

    ಆಶಿಕಿ 2, ಉಸ್ತಾದ್ ಭಗತ್ ಸಿಂಗ್, ಮಾಸ್ ಜಾತ್ರಾ ಸೇರಿದಂತೆ ಹಲವು ಸಿನಿಮಾಗಳು ನಟಿಯ ಕೈಯಲ್ಲಿವೆ.

  • ರಾಮ್ ಚರಣ್ ‘ಪೆದ್ದಿ’ ಚಿತ್ರದ ಗ್ಲಿಂಪ್ಸ್ ಔಟ್‌- ನಟನ ಮಾಸ್‌ ಅವತಾರಕ್ಕೆ ಫ್ಯಾನ್ಸ್‌ ಫಿದಾ

    ರಾಮ್ ಚರಣ್ ‘ಪೆದ್ದಿ’ ಚಿತ್ರದ ಗ್ಲಿಂಪ್ಸ್ ಔಟ್‌- ನಟನ ಮಾಸ್‌ ಅವತಾರಕ್ಕೆ ಫ್ಯಾನ್ಸ್‌ ಫಿದಾ

    ಗ್ಲೋಬಲ್ ಸ್ಟಾರ್ ರಾಮ್ ಚರಣ್ (Ram Charan) ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ‘ಪೆದ್ದಿ’ ಸಿನಿಮಾ ಬಗ್ಗೆ ಬಿಗ್‌ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ರಾಮನವಮಿ ಪ್ರಯುಕ್ತ ಫಸ್ಟ್ ಝಲಕ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ. ಈ ಚಿತ್ರದ ಬಿಡುಗಡೆ ದಿನಾಂಕ ಕೂಡ ರಿವೀಲ್ ಮಾಡಲಾಗಿದೆ. ಇದನ್ನೂ ಓದಿ:‘ರಾನಿ’ ಬಳಿಕ ಗುರುತೇಜ್ ಶೆಟ್ಟಿ ಜೊತೆ ಮತ್ತೆ ಕೈಜೋಡಿಸಿದ ಕಿರಣ್ ರಾಜ್

     

    View this post on Instagram

     

    A post shared by Ram Charan (@alwaysramcharan)

    ಪವರ್‌ಫುಲ್ ಡೈಲಾಗ್ ಹೊಡೆಯುತ್ತಾ ಸಿಗರೇಟ್ ಬಾಯಲ್ಲಿ ಕಚ್ಚಿಕೊಂಡು ಭರ್ಜರಿ ಆಕ್ಷನ್ ಮಾಡುತ್ತಾ ರಗಡ್ ಲುಕ್ ನಲ್ಲಿ ರಾಮ್ ಚರಣ್ ಎಂಟ್ರಿ ಕೊಟ್ಟಿದ್ದಾರೆ. ನಟನ ಅಬ್ಬರ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ‘ಪೆದ್ದಿ’ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ರಾಮ್‌ ಚರಣ್‌ ಹುಟ್ಟುಹಬ್ಬದ ತಿಂಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಮುಂದಿನ ವರ್ಷದ ಮಾರ್ಚ್ 27ಕ್ಕೆ ‘ಪೆದ್ದಿ’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಇದನ್ನೂ ಓದಿ:ಲೈಫ್‌ಲ್ಲಿ ಏನೇನೋ ಒಂದಷ್ಟು ಆದ್ಮೇಲೆ ನಾನು ಇಷ್ಟು ಗಟ್ಟಿಯಾಗಿರೋಕೆ ತಂದೆಯೇ ಕಾರಣ- ನಿವೇದಿತಾ ಭಾವುಕ

    ರಾಮ್ ಚರಣ್‌ಗೆ ಜೋಡಿಯಾಗಿ ಜಾನ್ವಿ ಕಪೂರ್ ನಟಿಸಿದ್ದಾರೆ. ಹ್ಯಾಟ್ರಿಕ್‌ ಹೀರೋ ಶಿವಣ್ಣ, ಜಗಪತಿ ಬಾಬು ಪವರ್‌ಫುಲ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎ.ಆರ್. ರೆಹಮಾನ್ ಸಂಗೀತ, ನವೀನ್ ನೂಲಿ‌ ಸಂಕಲನ, ಆರ್ ರತ್ನವೇಲು ಛಾಯಾಗ್ರಹಣ ಚಿತ್ರಕ್ಕಿದೆ.

  • ರಾಮ್ ಚರಣ್ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ ಶಿವಣ್ಣ

    ರಾಮ್ ಚರಣ್ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ ಶಿವಣ್ಣ

    ಗ್ಲೋಬಲ್ ಸ್ಟಾರ್ ರಾಮ್ ಚರಣ್‌ಗೆ (Ram Charan) ಇಂದು (ಮಾ.27) ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ರಾಮ್ ಚರಣ್‌ಗೆ ಶಿವಣ್ಣ ವಿಶೇಷವಾಗಿ ಹುಟ್ಟುಹಬ್ಬಕ್ಕೆ (Birthday) ಶುಭಕೋರಿದ್ದಾರೆ. ಇದನ್ನೂ ಓದಿ:ಸಂಕ್ರಾಂತಿಗೆ ಸ್ಟಾರ್ ವಾರ್- ವಿಜಯ್ ನಟನೆಯ ‘ಜನ ನಾಯಗನ್’ ಎದುರು ಅಬ್ಬರಿಸಲಿದೆ ಜ್ಯೂ.ಎನ್‌ಟಿಆರ್ ಸಿನಿಮಾ

    ‘ರಾಮ್ ಚರಣ್ ಯುವ ಶಕ್ತಿ’ ಎಂಬ ಬೆಂಗಳೂರು ಫ್ಯಾನ್ಸ್ ಟೀಮ್‌ವೊಂದು ಶಿವಣ್ಣ ನಿವಾಸಕ್ಕೆ ಭೇಟಿ ನೀಡಿದೆ. ರಾಮ್ ಚರಣ್ ಹುಟ್ಟುಹಬ್ಬದ ಪ್ರಯುಕ್ತ ಶಿವಣ್ಣ ಕೈಯಲ್ಲಿ ಕೇಕ್ ಕಟ್ ಮಾಡಿಸಿದ್ದಾರೆ. ಅದಷ್ಟೇ ಅಲ್ಲ, ನಟನ ಹುಟ್ಟುಹಬ್ಬಕ್ಕೆ ಬ್ಲಡ್ ಕ್ಯಾಂಪ್ ಕೂಡ ಮಾಡುತ್ತಿದ್ದಾರೆ.

    ಈ ವೇಳೆ ಅಭಿಮಾನಿಗಳ ಜೊತೆ ರಾಮ್ ಚರಣ್ ಜೊತೆಗಿನ ಬಾಂಧವ್ಯದ ಬಗ್ಗೆ ಶಿವಣ್ಣ ಮಾತನಾಡಿ, ರಾಮ್ ಚರಣ್ ಸರ್‌ಗೆ ದೇವರು ಆರೋಗ್ಯ ಕೊಟ್ಟು ಕಾಪಾಡಲಿ. ಫಸ್ಟ್ ಟೈಮ್ ಅವರೊಂದಿಗೆ ‘ಪೆಡ್ಡಿ’ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂಬುದು ಖುಷಿಯಾದ ವಿಷಯ. ನನಗೆ ಅವರು ತುಂಬಾ ಇಷ್ಟವಾದ ವ್ಯಕ್ತಿ. ಅವರಿಗೆ ಆ್ಯಕ್ಟಿಂಗ್ ಅನ್ನು ಸರಾಗವಾಗಿ ಮಾಡುತ್ತಾರೆ. ತಂದೆಯ ಗುಣವೇ ಅವರಿಗೆ ಬಂದಿದೆ. ಅವರ ಕುಟುಂಬ ಜೊತೆಗಿನ ನಮ್ಮ ಒಡನಾಟ ಎಂದಿಗೂ ನಾನು ಮರೆಯೋದಿಲ್ಲ. ರಾಮ್ ಚರಣ್ ಸರ್ ದೇವರು ನಿಮಗೆ ಒಳ್ಳೆಯದು ಮಾಡಲಿ, ವಿ ಲವ್ ಯೂ ಎಂದು ಶಿವಣ್ಣ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.

    ಇನ್ನೂ ರಾಮ್ ಚರಣ್ ಹುಟ್ಟುಹಬ್ಬದ ಹಿನ್ನೆಲೆ ‘ಆರ್‌ಸಿ 16’ ಚಿತ್ರದ ಟೈಟಲ್ ರಿವೀಲ್ ಆಗಿದೆ. ‘ಪೆಡ್ಡಿ’ (Peddi) ಎಂದು ಚಿತ್ರಕ್ಕೆ ಟೈಟಲ್ ಇಡಲಾಗಿದೆ. ರಾಮ್‌ಗೆ ನಾಯಕಿಯಾಗಿ ಜಾನ್ವಿ ಕಪೂರ್ (Janhvi Kapoor) ನಟಿಸುತ್ತಿದ್ದಾರೆ. ಶಿವಣ್ಣ ಕೂಡ ಪವರ್‌ಫುಲ್ ರೋಲ್ ಮಾಡುವ ಮೂಲಕ ಸಾಥ್ ನೀಡುತ್ತಿದ್ದಾರೆ. ಈ ಚಿತ್ರವನ್ನು ‘ಉಪ್ಪೇನ’ (Uppena) ಖ್ಯಾತಿಯ ನಿರ್ದೇಶಕ ಬುಚ್ಚಿ ಬಾಬು ಸನಾ ನಿರ್ದೇಶನ ಮಾಡ್ತಿದ್ದಾರೆ.

  • ರಾಮ್ ಚರಣ್ ಸಿನಿಮಾಗೆ ‘ಪೆಡ್ಡಿ’ ಟೈಟಲ್ ಫಿಕ್ಸ್- ಮಾಸ್ ಗೆಟಪ್‌ನಲ್ಲಿ ನಟ

    ರಾಮ್ ಚರಣ್ ಸಿನಿಮಾಗೆ ‘ಪೆಡ್ಡಿ’ ಟೈಟಲ್ ಫಿಕ್ಸ್- ಮಾಸ್ ಗೆಟಪ್‌ನಲ್ಲಿ ನಟ

    ಟಾಲಿವುಡ್ ನಟ ರಾಮ್ ಚರಣ್ (Ram Charan) ನಟನೆಯ ‘ಆರ್ 16’ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ‘ಪೆಡ್ಡಿ’ (Peddi) ಎಂದು ಚಿತ್ರಕ್ಕೆ ಕ್ಯಾಚಿ ಟೈಟಲ್ ಅನ್ನೇ ಸಿನಿಮಾಗೆ ಇಡಲಾಗಿದೆ. ಇದನ್ನೂ ಓದಿ:ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ – ರನ್ಯಾ ರಾವ್‌ ಜಾಮೀನು ಅರ್ಜಿ ಆದೇಶ ಇಂದು

    ‘ಆರ್‌ಆರ್‌ಆರ್’ (RRR) ಸಿನಿಮಾದ ಬಳಿಕ ಡೈರೆಕ್ಟರ್ ಬುಚ್ಚಿ ಬಾಬು ಸನಾ ಜೊತೆ ರಾಮ್ ಚರಣ್ ಕೈಜೋಡಿಸಿದ್ದಾರೆ. ಈ ಸಿನಿಮಾಗೆ ‘ಪೆಡ್ಡಿ’ ಎಂದು ಮಸ್ತ್ ಆಗಿರೋ ಟೈಟಲ್ ಅನ್ನೇ ಇಡಲಾಗಿದೆ. ರಾಮ್ ಚರಣ್ ಅವರು ಉದ್ದ ಕೂದಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬಾಯಲ್ಲಿ ಬೀಡಿ ಇದೆ. ಅವರ ಲುಕ್ ಸಖತ್ ರಗಡ್ ಆಗಿದೆ. ನಟನ ಲುಕ್ ನೋಡಿ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಾಗಿದೆ.

     

    View this post on Instagram

     

    A post shared by Ram Charan (@alwaysramcharan)

    ಇನ್ನೂ ಈ ಚಿತ್ರದಲ್ಲಿ ರಾಮ್ ಚರಣ್‌ಗೆ (Ram Charan) ನಾಯಕಿಯಾಗಿ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ನಟಿಸಿದ್ದಾರೆ. ಕನ್ನಡದ ನಟ ಶಿವರಾಜ್‌ಕುಮಾರ್ ಕೂಡ ಪವರ್‌ಫುಲ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಹೈದರಾಬಾದ್, ಮೈಸೂರು ಸೇರಿದಂತೆ ಹಲವೆಡೆ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.

    ಮೂರು ವರ್ಷಗಳ ಬಳಿಕ ‘ಪೆಡ್ಡಿ’ ಚಿತ್ರದ ಮೂಲಕ ಬರುತ್ತಿರೋ ರಾಮ್ ಚರಣ್‌ರನ್ನು ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.