Tag: Peanuts

  • ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ

    ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ

    ಕೇಂದ್ರದಿಂದ 2, ರಾಜ್ಯ ಸರ್ಕಾರದಿಂದ 4 ಖರೀದಿ ಏಜನ್ಸಿ ನೇಮಕ: ಸಚಿವ ಶಿವಾನಂದ ಪಾಟೀಲ

    ಬೆಂಗಳೂರು: ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಗೆ ಅನುಮತಿ ನೀಡಬೇಕು ಎಂಬ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ (Shivananda Patil) ತಿಳಿಸಿದ್ದಾರೆ.

    ಪ್ರತಿ ಕ್ವಿಂಟಾಲ್‌ಗೆ 6,783 ರೂ. ನಿಗದಿಪಡಿಸಿದ್ದು, ಬೆಂಬಲ ಬೆಲೆಯ ಮಾರ್ಗಸೂಚಿ ಅನ್ವಯ ಕೊಪ್ಪಳ, ಧಾರವಾಡ, ಹಾವೇರಿ, ಬಳ್ಳಾರಿ, ಚಿತ್ರದುರ್ಗ, ಗದಗ ಮತ್ತು ಬಾಗಲಕೋಟೆ, ದಾವಣಗೆರೆ, ರಾಯಚೂರು, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳ ರೈತರಿಂದ ಶೇಂಗಾ ಖರೀದಿಗೆ ಅನುಮತಿ ದೊರೆತಿದೆ ಎಂದು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಬಿಎಂಪಿಗೆ ಡಿಸಿಎಂ ಖಡಕ್ ವಾರ್ನಿಂಗ್ – ಸೋಮವಾರದಿಂದ ಅನಧಿಕೃತ ಕಟ್ಟಡಗಳ ಸರ್ವೆ ಆರಂಭ

    ಈಗ ಅನುಮತಿ ದೊರೆತಿರುವ ಶೇಂಗಾ ಸೇರಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಟ್ಟು ಎಂಟು ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಮಾಡಲಾಗಿದೆ. ಇದುವರೆಗೆ ಉಂಡೆ ಕೊಬ್ಬರಿ, ಮಿಲ್ಲಿಂಗ್ ಕೊಬ್ಬರಿ, ಹೆಸರುಕಾಳು, ಉದ್ದಿನಕಾಳು, ಸೋಯಾಬಿನ್, ಸೂರ್ಯಕಾಂತಿ, ಹತ್ತಿಯನ್ನು ಖರೀದಿಸಲಾಗಿದೆ. ಬೆಲೆ ಕುಸಿತದ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸಲು ರಾಜ್ಯ ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಗೆ ಅನುಮತಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ರಾಜ್ಯದ ಮನವಿಯನ್ನು ಕೇಂದ್ರ ಪುರಸ್ಕರಿಸಿದ್ದು, ಶೇಂಗಾ ಖರೀದಿಗೆ ಕೇಂದ್ರ ಸರ್ಕಾರದಿಂದ ಎರಡು, ರಾಜ್ಯ ಸರ್ಕಾರದಿಂದ ನಾಲ್ಕು ಏಜನ್ಸಿಗಳನ್ನು ಗುರುತಿಸಲಾಗಿದೆ. ಅವಶ್ಯಕತೆಗನುಗುಣವಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಲು ನಾಫೆಡ್ ಸಂಸ್ಥೆ, ಎನ್ಸಿಸಿಎಫ್ ಸಂಸ್ಥೆ ಹಾಗೂ ಖರೀದಿ ಏಜನ್ಸಿಗಳೊಂದಿಗೆ ಸಮಾಲೋಚನೆ ನಡೆಸಿ ಖರೀದಿ ಕೇಂದ್ರಗಳನ್ನು ತೆರೆದು ನೋಂದಣಿ ಪ್ರಕ್ರಿಯೆ ಆರಂಭಿಸಬೇಕು ಎಂದು ಜಿಲ್ಲಾ ಟಾಸ್ಕ್‌ಫೋರ್ಸ್‌ ಸಮಿತಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

    ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಖರೀದಿ ಪ್ರಕ್ರಿಯೆಯಲ್ಲಿ ರೈತರಿಗೆ ಯಾವುದೇ ರೀತಿ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ನೋಂದಣಿ ಮತ್ತು ಖರೀದಿ ಪ್ರಕ್ರಿಯೆ ಆರಂಭಿಸುವ ಪೂರ್ವದಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಯಾವುದೇ ಖರೀದಿ ಕೇಂದ್ರದಿಂದ ದೂರುಗಳು ಬರಬಾರದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನಾಗಮಂಗಲದಲ್ಲಿ ಕೋಟೆ ವಿದ್ಯಾಗಣಪತಿ ವಿಸರ್ಜನೆ – ಕೋಮು ಗಲಭೆ ನಡೆದ ಸ್ಥಳದಲ್ಲೇ ಇಂದು ಬೃಹತ್ ಶೋಭಾಯಾತ್ರೆ

  • ಕಡಲೆಕಾಯಿ ಬೀಜದ ಚಮತ್ಕಾರಗಳು ನಿಮಗೂ ತಿಳಿದಿರಲಿ

    ಕಡಲೆಕಾಯಿ ಬೀಜದ ಚಮತ್ಕಾರಗಳು ನಿಮಗೂ ತಿಳಿದಿರಲಿ

    ವಾಲ್‍ನಟ್ಸ್ ಮತ್ತು ಬಾದಾಮಿಯಂತಹ ವಿವಿಧ ಒಣ ಬೀಜಗಳು ಹೃದಯಕ್ಕೆ ಆರೋಗ್ಯಕರ ಆಹಾರಗಳಾಗಿವೆ. ಇದರೊಟ್ಟಿಗೆ ಕಡಲೆಕಾಯಿಯೂ ಅಷ್ಟೇ ಪರಿಣಾಮಕಾರಿಯಾಗಿದೆ. ನಾವು ಪ್ರತಿನಿತ್ಯ ಸಿಹಿ ಅಥವಾ ಖಾರದ ತಿನಿಸಿನೊಡನೆ ಕಡಲೇಕಾಯಿ ಬೀಜವನ್ನು ಸೇವನೆ ಮಾಡುತ್ತೇವೆ. ಇದರಲ್ಲಿ ಆರೋಗ್ಯಕ್ಕೆ ಅಗತ್ಯವಾದ ಪ್ರೋಟೀನ್, ಆರೋಗ್ಯಕರ ಕೊಬ್ಬು, ಪೋಷಕಾಂಶಗಳು ಹೇರಳವಾಗಿದೆ. ಹೀಗಾಗಿ ನಿಮ್ಮ ಆಹಾರ ಪದ್ದತಿಯಲ್ಲಿ ಕಡಲೆಕಾಯಿಯನ್ನು ಸೆರ್ಪಡೆ ಮಾಡಿಕೊಳ್ಳುವುದರ ಮೂಲಕವಾಗಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದಾಗಿದೆ.

    * ಕಡಲೆಕಾಯಿ ಕೊಲೆಸ್ಟ್ರಾಲ್ ನಿಯಂತ್ರಿಸಿ ಹೃದಯಕ್ಕೆ ರಕ್ಷಾ ಕವಚವಾಗುತ್ತದೆ. ರಕ್ತ ಹೆಪ್ಪುಗಟ್ಟುವಿಕೆ ಕಡಿಮೆ ಮಾಡುವ ಮೂಲಕ ಪಾಶ್ರ್ವವಾಯು ಬಾರದಂತೆ ಆರೋಗ್ಯ ಕಾಪಾಡುತ್ತದೆ. ಇದನ್ನೂ ಓದಿ: USನಿಂದ 157 ಪುರಾತನ ಕಲಾಕೃತಿಗಳನ್ನು ವಾಪಸ್ ಭಾರತಕ್ಕೆ ತಂದ ಪ್ರಧಾನಿ ಮೋದಿ

    * ಸರಿಯಾದ ಪ್ರಮಾಣದಲ್ಲಿ ಕಡಲೇಕಾಯಿ ಸೇವಿಸುವುದರಿಂದ ಪುರುಷ ಮತ್ತು ಮಹಿಳೆಯರ ಪಿತ್ತಕೋಶದಲ್ಲಿ ಕಲ್ಲುಗಳು ಕಂಡು ಬರುವುದಿಲ್ಲ.

    * ಕಡಲೆಕಾಯಿಯಲ್ಲಿ ಹೆಚ್ಚಿನ ಅಂಶದ ಕ್ಯಾಲೋರಿ ಮತ್ತು ಕೊಬ್ಬು ಕಂಡು ಬಂದರೂ ಅವು ತೂಕ ಹೆಚ್ಚಿಸುವುದಿಲ್ಲ ,ಆರೋಗ್ಯಕರ ಕೊಬ್ಬು ಮತ್ತು ತೂಕ ಕಾಯ್ದುಕೊಳ್ಳುವ ಮೂಲಕ ಬೊಜ್ಜಿನ ದೇಹದ ಅಪಾಯ ತಡೆಯುತ್ತವೆ. ಇದನ್ನೂ ಓದಿ: ಹೂವಿನ ಬೆಲೆ ಕುಸಿತ, ಗುಲಾಬಿ ತೋಟಕ್ಕೆ ಬೆಂಕಿ ಇಟ್ಟ ರೈತ

    * ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಿಸುವುದಿಲ್ಲ. ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಟೈಪ್ 2 ಡಯಾಬಿಟೀಸ್ ಅಪಾಯವನ್ನು ಕಡಿಮೆ ಮಾಡುತ್ತದೆ ಎನ್ನುತ್ತವೆ ಸಂಶೋಧನೆಗೆಳು.

    * ವಯಸ್ಸಾದವರಲ್ಲಿ ಗ್ಯಾಸ್ಟ್ರಿಕ್ ಅಲ್ಲದ ಅಡೆನೊಕಾರ್ಸಿನೋಮ ಎನ್ನುವ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ.

    * ಅತ್ಯಧಿಕ ನಾರಿನಾಂಶವನ್ನು ಒಳಗೊಂಡ ಕಾರಣ ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಊರಿಯೂತವನ್ನು ನಿಯಂತ್ರಣದಲ್ಲಿಡುತ್ತದೆ.

  • ಶೇಂಗಾ ಸೇವನೆಯಿಂದ ಆರೋಗ್ಯಕ್ಕೆ ಸಿಗಲಿದೆ ಹಲವು ಲಾಭ

    ಶೇಂಗಾ ಸೇವನೆಯಿಂದ ಆರೋಗ್ಯಕ್ಕೆ ಸಿಗಲಿದೆ ಹಲವು ಲಾಭ

    ತ್ತಮವಾದ ಆರೋಗ್ಯ ಎಲ್ಲರಿಗೂ ಬೇಕು. ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ನಾವು ಸೇವಿಸುವ ಆಹಾರಗಳು ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ನೀವು ಮನೆಯಲ್ಲಿ ಕೆಲವು ಪೌಷ್ಟಿಕಾಂಶವುಳ್ಳ ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

    ನಮ್ಮಲ್ಲಿ ಹೆಚ್ಚಿನವರು ಕಡಲೆಕಾಯಿಯನ್ನು ತಿನ್ನಲು ಇಷ್ಟಪಡುತ್ತಾರೆ. ಅದರಲ್ಲೂ ಕಡಲೆಕಾಯಿಯನ್ನು ಬಡವರ ಬಾದಮಿ ಎಂದು ಕೂಡ ಕರೆಯುವುದುಂಟು. ಕಡಲೆಕಾಯಿಯನ್ನು ಹಸಿ, ಹುರಿದು, ಬೇಯಿಸಿ ತಿನ್ನಬಹುದು.

    *ಕಡಲೆಕಾಯಿಯ ಸಿಪ್ಪೆಯಲ್ಲಿರುವ ಬಯೋಆಕ್ಟಿವ್ಸ್ ಮತ್ತು ಫೈಬರ್ ರೋಗದಿಂದ ರಕ್ಷಿಸುತ್ತದೆ ಮತ್ತು ಚರ್ಮದಲ್ಲಿನ ಕಾಯಿಲೆಯನ್ನು ದೂರ ಮಾಡಿ ಚರ್ಮವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ದ್ವಿದಳ ಧಾನ್ಯವಾಗಿದ್ದು ಇದರಲ್ಲಿ ಸಾಕಷ್ಟು ಪ್ರಮಾಣದ ಪೋಷಕಾಂಶಗಳು, ಪ್ರೋಟೀನ್ ಇದೆ.

    * ದೇಹದಲ್ಲಿನ ಉರಿಯೂತ ಮತ್ತು ತುರಿಕೆ ಕಡಿಮೆ ಮಾಡಲು ಇದು ಉಪಯುಕ್ತವಾಗಿದೆ.

    * ಕಡಲೆಕಾಯಿ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಲು ತುಂಬಾ ಉಪಯುಕ್ತವಾಗಿದೆ.

    * ಶೇಂಗಾ ತಿನ್ನುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಅಲ್ಲದೇ ಸುಸ್ತು, ಆಯಾಸವನ್ನು ಕಡಿಮೆ ಮಾಡುತ್ತದೆ.

    * ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

    * ಹುರಿದ ಕಡಲೆಕಾಯಿಯಲ್ಲಿ ವಿಟಮಿನ್ ಸಿ ಮತ್ತು ಗ್ರೀನ್ ಟೀಗಿಂತ ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶವಿದೆ.

    * ಕಡಲೆಕಾಯಿ ಹೃದ್ರೋಗ, ಕ್ಯಾನ್ಸರ್ ಮತ್ತು ಹೃದಯಾಘಾತವನ್ನು ತಡೆಗಟ್ಟುವ ಗುಣಗಳನ್ನು ಹೊಂದಿದೆ.

  • ಶೇಂಗಾ ಬೀಜ ಗಂಟಲಲ್ಲಿ ಸಿಲುಕಿ ಮಗು ಸಾವು- ಮೊಮ್ಮಗನನ್ನು ಬದುಕಿಸಿ ಕೊಡುವಂತೆ ದೇವರ ಮುಂದೆ ಶವವಿಟ್ಟು ಅಜ್ಜಿ ರೋಧನೆ

    ಶೇಂಗಾ ಬೀಜ ಗಂಟಲಲ್ಲಿ ಸಿಲುಕಿ ಮಗು ಸಾವು- ಮೊಮ್ಮಗನನ್ನು ಬದುಕಿಸಿ ಕೊಡುವಂತೆ ದೇವರ ಮುಂದೆ ಶವವಿಟ್ಟು ಅಜ್ಜಿ ರೋಧನೆ

    ಕಾರವಾರ: ಮಗುವಿನ ಗಂಟಲಲ್ಲಿ ಶೇಂಗಾ ಬೀಜ ಸಿಲುಕಿ ಉಸಿರುಗಟ್ಟಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಗಣಪತಿ ಗಲ್ಲಿಯಲ್ಲಿ ನಡೆದಿದೆ. ಮಗು ಸಾವನ್ನಪ್ಪಿದ ತಕ್ಷಣ ದಿಕ್ಕೇ ತೋಚದ ಮಗುವಿನ ಅಜ್ಜಿ, ಸಮೀಪದ ದೇವಸ್ಥಾನಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗಿ ಬದುಕಿಸಿಕೊಡುವಂತೆ ಅಂಗಲಾಚಿದ ಮನ ಕಲುಕುವ ಘಟನೆ ನಡೆದಿದೆ.

    ಯಲ್ಲಾಪುರದ ರಾಮನಾಥ ಆಚಾರಿ ಅವರ ಎರಡೂವರೆ ವರ್ಷದ ಸಾತ್ವಿಕ್ ಮೃತ ಮಗುವಾಗಿದ್ದು, ಬಾಲಕ ಮನೆಯಲ್ಲಿ ಇಂದು ಸಂಜೆ ಶೇಂಗಾ ಬೀಜಗಳನ್ನು ತಿನ್ನುತ್ತಿದ್ದಾಗ ಅಚಾನಕ್ ಆಗಿ ಗಂಟಲಲ್ಲಿ ಸಿಲುಕಿಕೊಂಡಿವೆ. ಇದರಿಂದ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿತು. ಮನೆಯವರು ತಕ್ಷಣವೇ ಹಾಗೂ ಹೀಗೂ ಪ್ರಯತ್ನ ಮಾಡಿ ಗಂಟಲಿನಿಂದ ಎರಡು ಶೇಂಗಾ ಬೀಜಗಳನ್ನು ಹೊರ ತೆಗೆದರು. ಆದರೂ ಉಸಿರಾಟ ಸುಧಾರಿಸದ ಕಾರಣ ಪಟ್ಟಣದ ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ತಕ್ಷಣ ವೈದ್ಯರು ಗಂಟಲಲ್ಲಿದ್ದ ಮತ್ತೊಂದು ಶೇಂಗಾ ಬೀಜವನ್ನು ಹೊರತೆಗೆದರು. ಆದರೆ ಅಷ್ಟರಲ್ಲಿ ಮಗುವಿನ ಉಸಿರು ನಿಂತಿತ್ತು. ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸುತ್ತಿದ್ದಂತೆ ತಾಯಿ ಮತ್ತು ಅಜ್ಜಿಯ ಆಕ್ರಂದನ ಮುಗಿಲು ಮುಟ್ಟಿತ್ತು.

    ಅಜ್ಜಿ ಮೊಮ್ಮಗನ ಮೃತದೇಹವನ್ನು ಸಮೀಪದಲ್ಲಿರುವ ಲೋಕೋಪಯೋಗಿ ಇಲಾಖೆ ಕಚೇರಿಯ ಆವರಣದಲ್ಲಿರುವ ಗಣಪತಿ ಮಂದಿರಕ್ಕೆ ತೆಗೆದುಕೊಂಡು ಹೋದರು. ಗರ್ಭಗುಡಿಯೆದುರು ಮಲಗಿಸಿದ ಅಜ್ಜಿ, ದೇವಸ್ಥಾನದ ಘಂಟೆಯನ್ನು ಬಾರಿಸುತ್ತಾ, ಮಗುವನ್ನು ಬದುಕಿಸು ಎಂದು ಮೊರೆ ಹೋದರು. ಈ ಸನ್ನಿವೇಶಗಳನ್ನು ಅಸಹಾಯಕರಾಗಿ ನೋಡುತ್ತಿದ್ದವರೂ ಭಾವುಕರಾಗಿ ಅವರ ಕಣ್ಣುಗಳಲ್ಲಿ ಹನಿಗೂಡಿದ್ದವು. ನಂತರ ಕುಟುಂಬದವರು ಅಜ್ಜಿಯನ್ನು ಸಮಾಧಾನ ಪಡಿಸಿ ಅಲ್ಲಿಂದ ಕರೆದುಕೊಂಡು ಹೋದರು.

  • ಉತ್ತಮ ಆರೋಗ್ಯಕ್ಕಾಗಿ ನೆನೆಸಿದ ನೆಲಗಡಲೆ ತಿನ್ನಿ

    ಉತ್ತಮ ಆರೋಗ್ಯಕ್ಕಾಗಿ ನೆನೆಸಿದ ನೆಲಗಡಲೆ ತಿನ್ನಿ

    ಡವರ ಬಾದಾಮಿ ಎಂದು ಕರೆಯಲ್ಪಡುವ ನೆಲಗಡಲೆ ಒಂದು ಆರೋಗ್ಯಕರ ಸ್ನ್ಯಾಕ್ಸ್ ಎನ್ನಬಹುದು. ಕೆಲವರಿಗೆ ನೆಲಗಡೆಲೆಯನ್ನು ಬೇಯಿಸಿ ತಿನ್ನಲು ಇಷ್ಟವಾದರೆ, ಇನ್ನು ಕೆಲವರಿಗೆ ಅದನ್ನು ಹುರಿದು ತಿನ್ನಲು ಇಷ್ಟ. ಅಲ್ಲದೇ ಅವಲಕ್ಕಿ, ಚಿತ್ರನ್ನ, ಪುಳಿಯೋಗರೆ ಸೇರಿದಂತೆ ಅನೇಕ ಅಡುಗೆ ಮಾಡುವಾಗ ಸ್ವಲ್ಪ ನೆಲಗಡೆಲೆ ಹಾಕಿದರೆ ಅಡುಗೆಯ ರುಚಿಯೂ ಹೆಚ್ಚುತ್ತದೆ. ಇದರಲ್ಲಿ ಅತ್ಯುತ್ತಮವಾದ ಕೊಬ್ಬಿನಂಶ, ನಾರಿನಂಶ, ಪೊಟಾಷ್ಯಿಯಂ, ರಂಜಕ, ವಿಟಮಿನ್ ಬಿ, ಮೆಗ್ನಿಷ್ಯಿಯಂ ಇದೆ. ಹೀಗಾಗಿ ನೆಲಗಡೆಲೆಯನ್ನು ನೆನೆಸಿ ತಿಂದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.

    ಬಾದಾಮಿಯನ್ನು ನೆನೆಸಿ ತಿಂದರೆ ಆರೋಗ್ಯಕ್ಕೆ ಒಳ್ಳೆದು ಎನ್ನುವುದು ಸಮಾನ್ಯವಾಗಿ ಗೊತ್ತಿರುವ ವಿಚಾರ. ಆದರೆ ನೆಲಗಡಲೆಯನ್ನು ನೆನೆಸಿ ತಿಂದರೆ ಎಷ್ಟು ಆರೋಗ್ಯಕರ ಲಾಭ ಸಿಗುತ್ತದೆ ಎಂದು ಹಲವರಿಗೆ ತಿಳಿದಿಲ್ಲ. ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ.

    ನೆನೆ ಹಾಕಿದ ನೆಲಗಡೆಲೆಯ ಆರೋಗ್ಯಕರ ಲಾಭವೇನು?

    1. ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ
    ಸಾಮಾನ್ಯವಾಗಿ ಹಲವರಿಗೆ ಅಜೀರ್ಣ ಸಮಸ್ಯೆ ಕಾಡುತ್ತಿರುತ್ತದೆ. ಈ ರೀತಿ ಸಮಸ್ಯೆ ಇರುವವರು ಪ್ರತಿದಿನ ಸ್ವಲ್ಪ ನೆಲಗಡಲೆ ನೆನೆ ಹಾಕಿ ತಿಂದರೆ ಹೊಟ್ಟೆ ಉಬ್ಬುವ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ. ಅಲ್ಲದೆ ಜೀರ್ಣಕ್ರಿಯೆ ಸರಿಯಾಗುವಂತೆ ನೋಡಿಕೊಳ್ಳುತ್ತದೆ.

    2. ಹೃದಯ ಸಮಸ್ಯೆಗೆ
    ನೆಲಗಡಲೆಯಲ್ಲಿ ಹೃದಯದ ಆರೋಗ್ಯ ವೃದ್ಧಿಸುವ ಗುಣವಿದೆ. ಹೃದಯ ಸಂಬಂಧಿ ಸಮಸ್ಯೆ ಇರುವವರು ಆಹಾರಕ್ರಮದ ಕಡೆಗೆ ಹೆಚ್ಚಿಗೆ ನಿಗಾ ವಹಿಸಬೇಕು. ನೆಲಗಡಲೆಯನ್ನು ನೀರಿನಲ್ಲಿ ನೆನೆ ಹಾಕಿ ತಿಂದರೆ, ಅದು ಹೃದಯದ ಸಮಸ್ಯೆ ತಡೆಗಟ್ಟುವಲ್ಲಿ ಸಹಕರಿಸುತ್ತದೆ. ಅಲ್ಲದೇ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯುವಂತೆ ಮಾಡುತ್ತದೆ.

    3. ಬೆನ್ನು ನೋವುಗೆ
    ಇತ್ತೀಚಿನ ಜೀವನ ಶೈಲಿಯಿಂದ ಬೆನ್ನುನೋವು ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಬೆನ್ನು ನೋವು ಬರಲು ವಯಸ್ಸಾಗಬೇಕು ಎನ್ನುವ ಹಾಗಿಲ್ಲ, ಚಿಕ್ಕ ಪ್ರಾಯದಲ್ಲಿಯೇ ಬೆನ್ನು ನೋವಿನ ಸಮಸ್ಯೆ ಹಲವರಿಗೆ ಕಾಡುತ್ತದೆ. ನಾವು ಕೂರುವ ಭಂಗಿ ಮತ್ತಿತರ ಕಾರಣಗಳಿಂದ ಬೆನ್ನು ನೋವು ಬರುತ್ತದೆ. ನೆನೆ ಹಾಕಿದ ನೆಲಗಡಲೆ ಜೊತೆ ಸ್ವಲ್ಪ ಬೆಲ್ಲ ಸೇರಿಸಿ ತಿಂದರೆ ಇಂತಹ ಬೆನ್ನು ನೋವು ಕಡಿಮೆ ಆಗುತ್ತದೆ.

    4. ಕಟ್ಟು ಮಸ್ತಿನ ಮೈಕಟ್ಟಿಗಾಗಿ
    ಕಟ್ಟು ಮಸ್ತಿನ ಮೈಕಟ್ಟು ಬೇಕೆಂದು ಹಲವರು ಜಿಮ್‍ನಲ್ಲಿ ತಾಸುಗಟ್ಟೆಲೆ ವರ್ಕೌಟ್ ಮಾಡುತ್ತಾರೆ. ಹೀಗೆ ವರ್ಕೌಟ್ ಮಾಡುವವರು ತಾವು ಸೇವಿಸುವ ಪೌಷ್ಠಿಕ ಆಹಾರಗಳ ಜೊತೆಗೆ ಸ್ವಲ್ಪ ನೆನೆಸಿದ ನೆಲಗಡಲೆಯನ್ನು ಸೇವಿಸುವುದು ಒಳ್ಳೆದು. ಸದೃಢ ಮೈಕಟ್ಟು ಪಡೆಯುವಲ್ಲಿ ನೆಲಗಡಲೆಯಲ್ಲಿರುವ ಪೋಷಕಾಂಶ ಸಹಾಯ ಮಾಡುತ್ತದೆ. ಇದನ್ನು ನೀರಿನಲ್ಲಿ ಹಾಕಿ ಮೊಳಕೆ ಬರಿಸಿ ತಿಂದರೆ ಆರೋಗ್ಯಕ್ಕೆ ಇನ್ನೂ ಉತ್ತಮ.

    5. ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ತಡೆಯುತ್ತದೆ
    ಕಲುಷಿತ ವಾತಾವರಣ ಹಾಗೂ ರಾಸಾಯನಿಕ ಸಿಂಪಡಿಸಿದ ಆಹಾರ ವಸ್ತುಗಳ ಸೇವನೆಯಿಂದ ಕ್ಯಾನ್ಸರ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ನಮ್ಮ ದೇಹದಲ್ಲಿರುವ ಫ್ರೀ ರ‌್ಯಾಡಿಕಲ್ಸ್ ಹೋಗಲಾಡಿಸುವಲ್ಲಿ ನೆನೆಸಿದ ನೆಲಗಡಲೆ ಸೇವನೆ ಉಪಯುಕ್ತವಾಗಿದೆ. ಇದರಲ್ಲಿ ಕಬ್ಬಿಣದಂಶ, ಫೋಲೆಟ್, ಕ್ಯಾಲ್ಸಿಯಂ ಇದ್ದು ಕ್ಯಾನ್ಸರ್ ಕಣಗಳು ದೇಹದಲ್ಲಿ ಉತ್ಪತ್ತಿಯಾಗದಂತೆ ತಡೆದು, ಆರೋಗ್ಯವಾಗಿರಲು ಸಹಕರಿಸುತ್ತದೆ.

  • ರಿಕ್ಷಾದಲ್ಲಿ ಬಿತ್ತನೆ ಬೀಜ ಸಾಗಾಟಕ್ಕೆ ಯತ್ನ – ರೈತರಿಂದ ದಿಢೀರ್ ದಾಳಿ

    ರಿಕ್ಷಾದಲ್ಲಿ ಬಿತ್ತನೆ ಬೀಜ ಸಾಗಾಟಕ್ಕೆ ಯತ್ನ – ರೈತರಿಂದ ದಿಢೀರ್ ದಾಳಿ

    ದಾವಣಗೆರೆ: ಬಿತ್ತನೆಗೆ ವಿತರಣೆ ಮಾಡಬೇಕಿದ್ದ ಶೇಂಗಾ ಬೀಜಗಳನ್ನು ಕಳ್ಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಜಾಲದವರ ಮೇಲೆ ರೈತರು ದಾಳಿ ನಡೆಸಿದ್ದಾರೆ.

    ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಚಿಕ್ಕ ಮಲ್ಲನಹೊಳೆ ಗ್ರಾಮದಲ್ಲಿ ದಾಳಿ ನಡೆಸಲಾಗಿದೆ. ಶೇಂಗಾ ಬೀಜವನ್ನು ಬೇರೆಡೆಗೆ ಗೂಡ್ಸ್ ಆಟೋ ಮೂಲಕ ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ರೈತರು ದಾಳಿ ನಡೆಸಿದ್ದಾರೆ. ಗೂಡ್ಸ್ ಆಟೋ ಚಾಲಕ ಸೇರಿ ಇಬ್ಬರನ್ನು ರೈತರು ಜಗಳೂರು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೈತರಿಗೆ ಸೇರಬೇಕಿದ್ದ ಬಿತ್ತನೆ ಶೇಂಗಾ ಬೀಜಗಳು ಎಲ್ಲಿಂದ ಎಲ್ಲಿಗೆ ತೆಗೆದುಕೊಂಡು ಹೋಗಲಾಗುತಿತ್ತು ಎಂಬುದರ ಕುರಿತಾಗಿ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.