Tag: peacock

  • ರಾಮನಗರದಲ್ಲಿ ನವಿಲುಗಳಿಗೆ ತಾಯಿಯಾದ ಕೋಳಿ!

    ರಾಮನಗರದಲ್ಲಿ ನವಿಲುಗಳಿಗೆ ತಾಯಿಯಾದ ಕೋಳಿ!

    ರಾಮನಗರ: ಕೋಳಿಯೊಂದು ನವಿಲಿನಿ ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡಿರುವ ಅಚ್ಚರಿಯ ಘಟನೆಯೊಂದು ಚನ್ನಪಟ್ಟಣ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರಘು ಎಂಬವರು ತಮ್ಮ ಜಮೀನಿನಲ್ಲಿದ್ದ ಹುಲ್ಲು ತರಲು ಹೋದಾಗ ನವಿಲಿನ ಮೊಟ್ಟೆಗಳನ್ನು ನಾಯಿಗಳು ದಾಳಿ ಮಾಡಿ ತಿನ್ನುತ್ತಿದ್ದವು. ಇದನ್ನು ಗಮನಿಸಿದ ರಘು ಅವರು ನಾಯಿಗಳನ್ನ ಓಡಿಸಿ ಆ ಮೊಟ್ಟೆಗಳನ್ನ ರಕ್ಷಿಸಿ, ತಮ್ಮ ಮನೆಯ ಕೋಳಿ ಮೊಟ್ಟೆಗಳ ಜೊತೆ ಇಟ್ಟಿದ್ದರು.

    ಇದೀಗ ಕೋಳಿ ಆ ಮೊಟ್ಟೆಗಳಿಗೂ ಕಾವು ಕೊಟ್ಟು ಮರಿ ಮಾಡಿದೆ. ಜೊತೆಗೆ ನವಿಲಿನ ಮರಿಗಳನ್ನೂ ತನ್ನ ಮರಿಗಳಂತೆಯೇ ಅತ್ಯಂತ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದೆ.

  • ವಿಧಾನಸೌಧ ಆವರಣದಲ್ಲಿ ರಾಷ್ಟ್ರಪಕ್ಷಿ ನವಿಲುಗಳನ್ನ ತಂದು ಬಿಡಲು ಚಿಂತನೆ

    ವಿಧಾನಸೌಧ ಆವರಣದಲ್ಲಿ ರಾಷ್ಟ್ರಪಕ್ಷಿ ನವಿಲುಗಳನ್ನ ತಂದು ಬಿಡಲು ಚಿಂತನೆ

    ಬೆಂಗಳೂರು: ವಿಧಾನಸೌಧ ಆವರಣದಲ್ಲಿ ಇನ್ಮುಂದೆ ನವಿಲುಗಳ ನರ್ತನ ಕಾಣಬಹುದಾದ ನಿರೀಕ್ಷೆ ಇದೆ. ವಿಧಾನಸೌಧದ ಮುಂದೆ ರಾಷ್ಟ್ರಪಕ್ಷಿ ನವಿಲು ತಂದು ಬಿಡುವ ಯೋಜನೆ ಕುರಿತು ಚಿಂತನೆ ನಡೆದಿದೆ.

    ದಿಲ್ಲಿಯ ಸಂಸತ್ ಭವನ, ರಾಷ್ಟ್ರಪತಿ ಭವನದ ಮಾದರಿಯಲ್ಲಿ ನವಿಲುಗಳನ್ನ ತಂದು ಬಿಡುವ ಬಗ್ಗೆ ಯೋಚಿಸಲಾಗಿದ್ದು, ಪರಿಷತ್ ಸದಸ್ಯ ಉಗ್ರಪ್ಪ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಈ ಬಗ್ಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳುವಂತೆ ತೋಟಗಾರಿಕೆ ಇಲಾಖೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.

    ವಿಧಾನಸೌಧವನ್ನ ಆಕರ್ಷಣೀಯ ತಾಣವನ್ನಾಗಿಸಲು ಪರಿಷತ್ ಸದಸ್ಯ ಉಗ್ರಪ್ಪರಿಂದ ಮುಖ್ಯ ಕಾರ್ಯದರ್ಶಿಗಳಿಗೆ ಈ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಈಗಾಗಲೇ ಸಂಸತ್ ಭವನ ಹಾಗೂ ರಾಷ್ಟ್ರಪತಿ ಭವನದ ಆವರಣಗಳ ಬಳಿ ಈ ಯೋಜನೆ ಇದೆ.

    ನವಿಲು ವಾಸಿಸಲು ಅನುಕೂಲವಾಗುವ ಈಚಲು ಗಿಡ ನೆಡಲು ತೋಟಗಾರಿಕೆ ಇಲಾಖೆ ನಿರ್ಧಾರ ಮಾಡಿದೆ. ನವಿಲಿಗೆ ತಾತ್ಕಾಲಿಕ ವಾತಾವರಣ ನಿರ್ಮಿಸಲು ತೋಟಗಾರಿಕಾ ಇಲಾಖೆ ಭರವಸೆ ನೀಡಿದ್ದು, ವಿಧಾನಸೌಧದ ನಾಲ್ಕು ಭಾಗಗಳಲ್ಲಿ ಈಚಲು ಗಿಡ ನೆಡಲು ನಿರ್ಧಾರಿಸಲಾಗಿದೆ ಎಂದು ತಿಳಿದುಬಂದಿದೆ.

  • ನವಿಲು ಕಚ್ಚಿ ಗಾಯಗೊಂಡಿದ್ದ ಅನಾಥ ನವಜಾತ ಶಿಶುವಿಗೆ ಮರುಜೀವ ನೀಡಿದ ಕೂಲಿ ಕಾರ್ಮಿಕ ಮಹಿಳೆ

    ನವಿಲು ಕಚ್ಚಿ ಗಾಯಗೊಂಡಿದ್ದ ಅನಾಥ ನವಜಾತ ಶಿಶುವಿಗೆ ಮರುಜೀವ ನೀಡಿದ ಕೂಲಿ ಕಾರ್ಮಿಕ ಮಹಿಳೆ

    ಹಾಸನ: ಮಂಡ್ಯದಲ್ಲಿ ನವಜಾತ ಹೆಣ್ಣು ಶಿಶುವೊಂದು ತನ್ನದಲ್ಲದ ತಪ್ಪಿಗೆ ನಾಯಿದಾಳಿಗೆ ಸಿಕ್ಕಿ ಅನಾಥ ಶವವಾಗಿದ್ದರೆ, ಹಾಸನದಲ್ಲಿ ಸ್ಥಳೀಯರು ಮತ್ತು ಜಿಲ್ಲಾಸ್ಪತ್ರೆ ವೈದ್ಯರ ಸಮಯ ಪ್ರಜ್ಞೆಯಿಂದಾಗಿ ನವಜಾತ ಹೆಣ್ಣು ಶಿಶುವೊಂದು ಮರುಹುಟ್ಟು ಪಡೆದಿದೆ.

    ಹೊಳೆನರಸೀಪುರ ತಾಲೂಕು ಶ್ರೀರಾಮದೇವರ ಕಟ್ಟೆ ರಸ್ತೆಯ ಪೊದೆಯೊಂದರಲ್ಲಿ ಕಳೆದ ಜುಲೈ 13 ರಂದು ಹೆಣ್ಣು ಮಗು ಚೀರಾಡುವ ದನಿ ಕೇಳುತ್ತಿತ್ತು. ಯಾರೋ ಮಗುವನ್ನು ಪೊದೆಯಲ್ಲಿ ಬಿಸಾಡಿ ಹೋಗಿದ್ದರು. ಅನಾಥ ಮಗುವನ್ನು ನವಿಲು ಕುಕ್ಕಿ ಕುಕ್ಕಿ ಕಚ್ಚಿದ್ದರಿಂದ ಮಗು ದೇಹದ ಬಹುತೇಕ ಭಾಗದಲ್ಲಿ ಗಾಯಗಳಾಗಿ ರಕ್ತ ಸೋರುತ್ತಿತ್ತು. ಇದನ್ನು ಆಲಿಸಿದ ಕೂಲಿ ಕಾರ್ಮಿಕ ಮಹಿಳೆ ಸ್ಥಳೀಯರಿಗೆ ಸುದ್ದಿ ಮುಟ್ಟಿಸಿದರು.

    ಕೂಡಲೇ ಜಾಗೃತರಾದ ಜನರು, ಆಂಬುಲೆನ್ಸ್ ಮೂಲಕ ಮಗುವನ್ನು ಹೊಳೆನರಸೀಪುರ ತಾಲೂಕು ಆಸ್ಪತ್ರೆ ಅಲ್ಲಿಂದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದರು. ಆಗ ಮಗು ತೀವ್ರ ಅಸ್ವಸ್ಥಗೊಂಡು, ಆರೋಗ್ಯ ಸ್ಥಿತಿ ವಿಷಮವಾಗಿತ್ತು. ಆತಂಕದ ವಿಷಯ ಎಂದ್ರೆ ಮಗುವಿನ ಶ್ವಾಸಕೋಶಕ್ಕೂ ಗಂಭೀರವಾದ ತೊಂದರೆಯಾಗಿತ್ತು. ಮಗುವನ್ನು ಉಳಿಸಿಕೊಳ್ಳಲು ಜಿಲ್ಲಾಸ್ಪತ್ರೆ ವೈದ್ಯರು ಮತ್ತು ತಾಯಿ ಸ್ಥಾನದಲ್ಲಿ ಶುಶ್ರೂಷಕಿಯರು ಮಾಡಿದ ಆರೈಕೆಯಿಂದಾಗಿ 10 ದಿನಗಳ ಮಗು ಅದೃಷ್ಟವಶಾತ್ ಬದುಕುಳಿದಿದೆ.

    ವಿಪರ್ಯಾಸ ಎಂದ್ರೆ ಹೋಗುವ ಜೀವವೇನೊ ಉಳಿದಿದೆ. ಆದರೆ, ಎಳೆಯ ಕಂದನ ಪಾಲಿಗೆ ನಿಜ ತಾಯಿ ಇಲ್ಲವಾಗಿದ್ದಾಳೆ.

    ಇದನ್ನೂ ಓದಿ: ಮಂಡ್ಯದಲ್ಲಿ ಹೃದಯವಿದ್ರಾವಕ ಘಟನೆ: ನವಜಾತ ಹೆಣ್ಣು ಶಿಶುವನ್ನ ಆಸ್ಪತ್ರೆ ಆವರಣದಲ್ಲೇ ಕಚ್ಚಿ ಕೊಂದ ನಾಯಿಗಳು

  • ದೇವಿಗೆ ಪೂಜೆ ಶುರುವಾಗ್ತಿದ್ದಂತೆ ಬಂದು ಪ್ರದಕ್ಷಿಣೆ ಹಾಕಿ ಕುಣಿಯುತ್ತೆ ಈ ನವಿಲು!

    ದೇವಿಗೆ ಪೂಜೆ ಶುರುವಾಗ್ತಿದ್ದಂತೆ ಬಂದು ಪ್ರದಕ್ಷಿಣೆ ಹಾಕಿ ಕುಣಿಯುತ್ತೆ ಈ ನವಿಲು!

    ಚಿತ್ರದುರ್ಗ: ನೀವು ಎಂತೆಂಥ ಭಕ್ತರನ್ನೋ ನೋಡಿದ್ದೀರಿ. ಆದ್ರೆ ಇಲ್ಲೊಬ್ಬ ವಿಚಿತ್ರ ಭಕ್ತನಿದ್ದಾನೆ. ತಾನು ಎಲ್ಲೇ ಇರಲಿ, ದೇವಿಗೆ ಪೂಜೆ ಶುರುವಾಗ್ತಿದ್ದಂತೆ ಬಂದು ಪ್ರದಕ್ಷಿಣೆ ಹಾಕಿ ಕುಣಿಯುತ್ತಾನೆ.

    ಹೌದು. ದೇವಸ್ಥಾನದ ಒಳಗೆ ಮಾರಮ್ಮನಿಗೆ ಪೂಜೆ. ಹೊರಗೆ ಗರಿ ಬಿಚ್ಚಿ ಕುಣಿಯುತ್ತಿರುವ ನವಿಲು. ಇದು ಚಿತ್ರದುರ್ಗದ ಚಳ್ಳಕೆರೆಯ ಮದಕರಿ ನಗರದ ಕಣಿವೆ ಮಾರಮ್ಮ ದೇವಸ್ಥಾನದಲ್ಲಿ ಕಂಡುಬಂದ ದೃಶ್ಯ. ನಾಲ್ಕು ವರ್ಷಗಳ ಹಿಂದೆ ಈ ನವಿಲು ಕಾಲು ಮುರಿದುಕೊಂಡು ಜೀವನ್ಮರಣದ ನಡುವೆ ಹೋರಾಡುತ್ತಿತ್ತು. ಆಗ ಈ ದೇವಸ್ಥಾನದ ಅರ್ಚಕಿ ಗೋಪಮ್ಮ ಶೃಶ್ರೂಷೆ ಮಾಡಿದ್ರು. ಅಂದಿನಿಂದ ಇಲ್ಲೇ ಉಳಿದುಕೊಂಡಿರುವ ಈ ನವಿಲು ಬೇವಿನ ಮರವನ್ನ ತನ್ನ ವಾಸಸ್ಥಾನ ಮಾಡಿಕೊಂಡಿದೆ. ನಿತ್ಯವೂ ಪೂಜೆಯ ವೇಳೆ ದೇವಸ್ಥಾನದ ಮುಂದೆ ಪ್ರದಕ್ಷಿಣೆ ಹಾಕಿ ನೃತ್ಯ ಮಾಡುತ್ತೆ.

    ತಾನು ಎಲ್ಲೇ ಇರಲಿ, ಪೂಜೆ ಸಮಯಕ್ಕೆ ಸರಿಯಾಗಿ ಎಲ್ಲಿದ್ರೂ ಬಂದು ದೇವಿಯ ಮುಂದೆ ಕುಣಿಯುತ್ತೆ. ಜನರು ದೇವರಿಗಿಂತ ಹೆಚ್ಚಾಗಿ ನವಿಲಿನ ಮನಮೋಹಕ ಕುಣಿತ ನೋಡಲು ದೇವಸ್ಥಾನಕ್ಕೆ ಬರುತ್ತಿದ್ದಾರೆ. ಒಟ್ಟಿನಲ್ಲಿ ನವಿಲಿನ ಈ ನರ್ತನ ದೇವಸ್ಥಾನದ ಕಳೆಯನ್ನು ಹೆಚ್ಚಿಸಿರೋದಂತೂ ಸುಳ್ಳಲ್ಲ.

    https://www.youtube.com/watch?v=Tzj83gjLhqY&feature=youtu.be

  • ಹಾಸನ: ಅಪಘಾತವಾಗಿ ಕಾಲು ಮುರಿದ ನವಿಲಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ್ರು

    ಹಾಸನ: ಅಪಘಾತವಾಗಿ ಕಾಲು ಮುರಿದ ನವಿಲಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ್ರು

    ಹಾಸನ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ರಾಷ್ಟ್ರೀಯ ಪಕ್ಷಿ ನವಿಲಿಗೆ ಸಾರ್ವಜನಿಕರು ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆತ್ತೂರು ಬಳಿ ನವಿಲು ಆಹಾರಕ್ಕಾಗಿ ರಸ್ತೆಯ ಬಳಿ ಓಡಾಡುತಿತ್ತು. ಈ ಸಂದರ್ಭದಲ್ಲಿ ಅಪರಿಚಿತ ವಾಹನವೊಂದು ನವಿಲಿಗೆ ಡಿಕ್ಕಿ ಹೊಡೆದು ಪಾರಾರಿಯಾಗಿದೆ. ಪರಿಣಾಮ ಕಾಲು ಮುರಿತಕ್ಕೊಳಾಗಾದ ನವಿಲು ನೆಡಯಲು ಆಗದೇ ಪರಿತಪಿಸುತ್ತಿತ್ತು.

    ಇದನ್ನು ಗಮನಿಸಿದ ಗ್ರಾಮಸ್ಥರು ನವಿಲನ್ನು ಹಿಡಿದು ತಕ್ಷಣ ಸ್ಥಳೀಯ ಪಶು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಬಳಿಕ ಸಕಲೇಶಪುರ ಅರಣ್ಯ ಇಲಾಖೆಗೆ ನವಿಲನ್ನು ಓಪ್ಪಿಸಿದ್ದಾರೆ.

  • ದಾವಣಗೆರೆಯಲ್ಲಿ ನವಿಲು ಬೇಟೆಯಾಡಿದ ಇಬ್ಬರ ಬಂಧನ

    ದಾವಣಗೆರೆಯಲ್ಲಿ ನವಿಲು ಬೇಟೆಯಾಡಿದ ಇಬ್ಬರ ಬಂಧನ

    ದಾವಣಗೆರೆ: ರಾಷ್ಟ್ರ ಪಕ್ಷಿ ನವಿಲನ್ನು ಬೇಟೆಯಾಡಿದ ಆರೋಪದ ಮೇಲೆ ಹರಿಹರ ಪೆÇಲೀಸರು ಇಬ್ಬರನ್ನು ಬಂಧಿಸಿದ್ದಾರೆ.

    ದಾವಣಗೆರೆ ನಗರದ ಎಸ್‍ಎಸ್ ಲೇಔಟ್ ನಿವಾಸಿ ಮೆಹಬೂಬ್ ಬಾಷಾ (55), ಟಿಪ್ಪು ನಗರದ ನಿವಾಸಿ ಇಕ್ಬಾಲ್ (28) ಬಂಧಿತ ಆರೋಪಿಗಳು. ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಬಳಿ ಶುಕ್ರವಾರ ತಡ ರಾತ್ರಿ ನವಿಲನ್ನು ಬೇಟೆಯಾಡಲಾಗಿದ್ದು, ಹೆಣ್ಣು ನವಿಲನ್ನು ಗುಂಡಿಟ್ಟು ಕೊಲ್ಲಾಗಿದೆ.

    ಬಂಧಿತರಿಂದ ಲೈಸ್ಸನ್ಡ್ ಎಸ್‍ಬಿಬಿಎಲ್ ಗನ್ (ಸಿಂಗಲ್ ಬ್ಯಾರಲ್ ಬ್ರೀಚ್ ಲೋಡಿಂಗ್ ರೈಫಲ್) ವಶಪಡಿಸಿಕೊಳ್ಳಲಾಗಿದೆ. ಈ ಇಬ್ಬರು ನವಿಲು ಮಾಂಸ ಮಾರಾಟಕ್ಕಾಗಿ ಬೇಟೆಗೆ ಇಳಿದಿದ್ದು, ಹರಿಹರ ಸಿಪಿಐ ಜಯಣ್ಣ ಎಸ್.ನೇಮಗೌಡ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.

    ಈ ಬಗ್ಗೆ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.