Tag: peacock

  • ತುಮಕೂರಲ್ಲಿ 19 ನವಿಲುಗಳ ಸಾವು – ತನಿಖೆಗೆ ಈಶ್ವರ್ ಖಂಡ್ರೆ ಆದೇಶ

    ತುಮಕೂರಲ್ಲಿ 19 ನವಿಲುಗಳ ಸಾವು – ತನಿಖೆಗೆ ಈಶ್ವರ್ ಖಂಡ್ರೆ ಆದೇಶ

    – 5 ದಿನಗಳ ಒಳಗಾಗಿ ವರದಿ ಸಲ್ಲಿಸಲು ಸೂಚನೆ

    ಬೆಂಗಳೂರು: ತುಮಕೂರು (Tumakuru) ಜಿಲ್ಲೆ ಮಧುಗಿರಿ (Madhugiri) ತಾಲೂಕು ಮಿಡಿಗೇಶಿಯ (Midigeshi) ಬಳಿ ರೈತರೊಬ್ಬರ ಜಮೀನಿನಲ್ಲಿ 19 ನವಿಲುಗಳು ಮೃತಪಟ್ಟಿರುವ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ (Eshwar Khandre), ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿಸಿಎಫ್ ನೇತೃತ್ವದ ತನಿಖೆಗೆ ಆದೇಶ ನೀಡಿದ್ದಾರೆ.

    ಮುಖ್ಯ ವನ್ಯಜೀವಿ ಪರಿಪಾಲಕರಿಗೆ ನೀಡಿರುವ ಸೂಚನೆಯಲ್ಲಿ, ಒಂದೂವರೆ ತಿಂಗಳ ಹಿಂದೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಮ್ಮ ರಾಷ್ಟ್ರಪ್ರಾಣಿಯಾದ ಹುಲಿ ಮತ್ತು ಅದರ ನಾಲ್ಕು ಮರಿಗಳು ವಿಶಪ್ರಾಶನದಿಂದ ಮೃತಪಟ್ಟಿದ್ದವು. ನಂತರ ಕೋತಿಗಳನ್ನು ಕೊಂದು ಬಂಡೀಪುರದ ಬಳಿ ಎಸೆದಿದ್ದ ಘಟನೆ ನಡೆದಿತ್ತು. ಈಗ ನಮ್ಮ ರಾಷ್ಟ್ರಪಕ್ಷಿ ನವಿಲಿನ ಮಾರಣ ಹೋಮ ನಡೆದಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನೇಹಾ ಹತ್ಯೆ ಕೇಸ್ – ಆರೋಪಿ ಫಯಾಜ್ ಜಾಮೀನು ಅರ್ಜಿ ವಜಾ

    ನವಿಲುಗಳ ಸಾವಿಗೆ ಕೀಟನಾಶಕ ಸೇವನೆ ಕಾರಣ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಈ ಕೀಟನಾಶಕವನ್ನು ನವಿಲುಗಳನ್ನು ಸಾಯಿಸಲೆಂದೇ ಹಾಕಲಾಗಿತ್ತೆ ಅಥವಾ ಬೆಳೆಗಳಿಗೆ ಸಿಂಪಡಿಸಿದ ಕೀಟನಾಶಕಯುಕ್ತ ಫಸಲು ತಿಂದು ನವಿಲುಗಳು ಮೃತಪಟ್ಟಿವೆಯೇ ಎಂಬ ಬಗ್ಗೆ ಡಿಸಿಎಫ್ ನೇತೃತ್ವದ ತಂಡದಿಂದ ತನಿಖೆ ನಡೆಸಿ 5 ದಿನಗಳ ಒಳಗಾಗಿ ವರದಿ ಸಲ್ಲಿಸಲು ಮತ್ತು ನಿಯಮಾನುಸಾರ ಕ್ರಮ ಜರುಗಿಸಲು ಸೂಚಿಸಿದ್ದಾರೆ. ಇದನ್ನೂ ಓದಿ: 1 ಜಯ, 12 ಅಂಕ ಪಡೆದು ಮೂರನೇ ಸ್ಥಾನಕ್ಕೆ ಭಾರತ ಹೈಜಂಪ್‌!

    ಜೊತೆಗೆ ಪರಿಶಿಷ್ಟ 1 ಮತ್ತು 2ರ ಯಾವುದೇ ವನ್ಯಜೀವಿ ಮೃತಪಟ್ಟರೂ ಆಡಿಟ್ ಮಾಡಿಸಿ ತಕ್ಷಣವೇ ಸಚಿವರ ಕಾರ್ಯಾಲಯಕ್ಕೆ ಮಾಹಿತಿ ನೀಡಲು ಕ್ರಮ ವಹಿಸಲು ನಿರ್ದೇಶನ ನೀಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ಅರಣ್ಯದಲ್ಲಿ ಮತ್ತೊಂದು ಅಸ್ಥಿಪಂಜರ ಪತ್ತೆ

  • ರಾಷ್ಟ್ರಪಕ್ಷಿ ನವಿಲು ಮಾಂಸ ಭಕ್ಷಣೆಗೆ ಮುಂದಾಗಿದ್ದ ಮೂವರ ಬಂಧನ

    ರಾಷ್ಟ್ರಪಕ್ಷಿ ನವಿಲು ಮಾಂಸ ಭಕ್ಷಣೆಗೆ ಮುಂದಾಗಿದ್ದ ಮೂವರ ಬಂಧನ

    ತುಮಕೂರು: ರಾಜ್ಯದಲ್ಲಿ ಹುಲಿ ಉಗುರಿನ ಪೆಂಡೆಂಟ್ (Tiger Claw Pendent) ಪ್ರಕರಣ ಸದ್ದು ಮಾಡುತ್ತಿರುವ ಬೆನ್ನಲ್ಲೇ, ರಾಷ್ಟ್ರಪಕ್ಷಿ ನವಿಲು (Peacock) ಮಾಂಸ ಭಕ್ಷಣೆಗೆ ಮುಂದಾಗಿದ್ದ ಮೂವರನ್ನು ಬಂಧಿಸಿದ ಘಟನೆ ತುಮಕೂರಿನ (Tumakuru) ಮಾರನಾಯಕನಪಾಳ್ಯದಲ್ಲಿ (Maranayakanapalya) ನಡೆದಿದೆ.

    ಒಡಿಶಾ (Odisha) ಮೂಲದ ಬಿಟ್ಟಿಂಗ್ ನಾಯಕ್, ಬೈಷಾಕ್ ದಾವು, ದುಬಾ ಕಾಪತ್ ಬಂಧಿತ ಆರೋಪಿಗಳು. ಬಂಧಿತರು ಮಾರನಾಯಕನಪಾಳ್ಯದ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಹಲವು ದಿನಗಳಿಂದ ಆರೋಪಿಗಳು ನವಿಲುಗಳನ್ನ ಕೊಂದು ಭಕ್ಷಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ- ಕೊಲೆ ಶಂಕೆ

    ದಾಳಿಯ ವೇಳೆ 1.5 ಕೆ.ಜಿ ನವಿಲಿನ ಹಸಿ ಮಾಂಸ, ನವಿಲಿನ ಎರಡು ಕಾಲುಗಳು, ಬೇಯಿಸಿದ ಮಾಂಸ, ನವಿಲು ಹಿಡಿಯಲು ಬಳಸಿದ್ದ ಬಲೆಗಳು, ಉರುಳುಗಳು ಮತ್ತು ಮಾಂಸ ಬೇಯಿಸಿದ್ದ ಪಾತ್ರೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಮಾಂಸವನ್ನು ಅಧಿಕಾರಿಗಳು ಎಫ್‌ಎಸ್‌ಎಲ್‌ಗೆ (FSL) ಕಳುಹಿಸಿದ್ದಾರೆ. ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಹುಲಿ ಉಗುರಿನ ಡಾಲರ್ ಹಾಕಿಕೊಂಡಿದ್ದ ಇಬ್ಬರು ಅರ್ಚಕರ ಬಂಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಾಳಿ ಮಾಡಿದ ನವಿಲಿನ ವಿರುದ್ಧ ಮಹಿಳೆ ದೂರು!

    ದಾಳಿ ಮಾಡಿದ ನವಿಲಿನ ವಿರುದ್ಧ ಮಹಿಳೆ ದೂರು!

    ರಾಮನಗರ: ಜಿಲ್ಲೆಯಲ್ಲಿ ಇತ್ತೀಚಿಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ನಿತ್ಯ ಒಂದಲ್ಲ ಒಂದು ಕಡೆ ಆನೆ, ಚಿರತೆ ,ಕರಡಿ ದಾಳಿ ಮಾಡುತ್ತಿರುವ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಈ ನಡುವೆ ರಾಷ್ಟ್ರೀಯ ಪಕ್ಷಿಯಾಗಿರುವ ನವಿಲು (Peacock attack on Woman) ಮಹಿಳೆ ಮೇಲೆ ದಾಳಿ ಮಾಡಿದೆ.

    ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ಈಗ ನವಿಲಿನ ಕಾಟ ಶುರುವಾಗಿದೆ. ಕಳೆದ ಒಂದುವಾರದಿಂದ ಗ್ರಾಮದ ಸುತ್ತಮುತ್ತ ನವಿಲುಗಳ ಕಾಟ ಜಾಸ್ತಿಯಾಗಿದೆ. ಗ್ರಾಮದ ಲಿಂಗಮ್ಮ ಎಂಬವರ ಮೇಲೆ ನವಿಲು ದಾಳಿ ಮಾಡಿ ಗಾಯಗೊಳಿಸಿದೆ.

    ಮನೆ ಹಿಂಭಾಗದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ನವಿಲು, ಲಿಂಗಮ್ಮನ ಎಡಭಾಗ ಕಣ್ಣಿನ ಮೇಲ್ಭಾಗಕ್ಕೆ ಗಾಯವಾಗಿದೆ. ನವಿಲುಗಳು ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸಿ ಗಾಯಗೊಳಿಸ್ತಿವೆ.

    ಈ ಸಂಬಂಧ ಅರಣ್ಯ ಇಲಾಖೆಗೆ ನವಿಲು ದಾಳಿ ವಿರುದ್ಧ ದೂರು ನೀಡಲಾಗಿದೆ. ಇದನ್ನೂ ಓದಿ: ಅಕ್ರಮ ಸಂಬಂಧ ಇಟ್ಟುಕೊಂಡು ಚಿತ್ರಹಿಂಸೆ ಕೊಟ್ಟ: ಪವಿತ್ರಾ ಬರೆದ ಡೆತ್‍ನೋಟ್‍ನಲ್ಲೇನಿದೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಾಣದ ಹಂಗು ತೊರೆದು ನೀರಿನಲ್ಲಿ ತೇಲುತ್ತಿದ್ದ ನವಿಲಿನ ರಕ್ಷಣೆ

    ಪ್ರಾಣದ ಹಂಗು ತೊರೆದು ನೀರಿನಲ್ಲಿ ತೇಲುತ್ತಿದ್ದ ನವಿಲಿನ ರಕ್ಷಣೆ

    ಬಾಗಲಕೋಟೆ: ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಜನರಿಗಷ್ಟೇ ಅಲ್ಲ, ಜಲಚರಗಳಿಗೂ ಆತಂಕ ಮೂಡಿಸಿದೆ. ಮಲಪ್ರಭಾ ನದಿಯಲ್ಲಿ ತೇಲುತ್ತಾ ಹೋಗುತ್ತಿದ್ದ ನವಿಲನ್ನು ರಕ್ಷಣೆ ಮಾಡಲಾಗಿದೆ.

    ಮಲಪ್ರಭೆ ಜಿಲ್ಲೆಯ ಬಾದಾಮಿ ತಾಲೂಕಿನ ಚೊಳಚಗುಡ್ಡ ಅಂತರ್ ಜಿಲ್ಲಾ ಸೇತುವೆ ಬಳಿ ಭಾರೀ ರಭಸದಿಂದ ನೀರು ಹರಿಯುತ್ತಿದೆ. ಈ ಪ್ರವಾಹ ಭೀತಿ ರಾಷ್ಟ್ರಪಕ್ಷಿಗೂ ತಟ್ಟಿದೆ. ಮಲಪ್ರಭಾ ನದಿಯ ನಡುಗಡ್ಡೆಯಲ್ಲಿ ಸಿಲುಕಿ ನವಿಲೊಂದು ನರಳಾಡುತ್ತಿತ್ತು.

    ಹಾರಲು ಸುತ್ತಲೂ ಯಾವುದೇ ಸ್ಥಳವಿಲ್ಲದೆ, ಮುಳ್ಳಿನ ಕಂಟಿಯಲ್ಲೇ ಸುಮಾರು ಹೊತ್ತು ಕುಳಿತಿತ್ತು. ನಂತರ ಹಾರಲು ಹೋಗಿ ಮಲಪ್ರಭಾ ನದಿಯಲ್ಲಿ ತೇಲುತ್ತಾ ಸಾವು ಬದುಕಿನ ಮಧ್ಯೆ ನವಿಲು ಹೋರಾಟ ನಡೆಸುತ್ತಿತ್ತು. ನವಿಲಿನ ಪರಿಸ್ಥಿತಿ ಕಂಡು ಸ್ಥಳದಲ್ಲಿದ್ದ ಇಬ್ಬರು ಚೊಳಚಗುಡ್ಡ ಸೇತುವೆ ಬಳಿ ಪ್ರಾಣದ ಹಂಗು ತೊರೆದು ರಾಷ್ಟ್ರ ಪಕ್ಷಿ ನವಿಲನ್ನು ರಕ್ಷಣೆ ಮಾಡಿದ್ದಾರೆ.

  • ಕಾಡು ಮೊಲ, ನವಿಲು ಹಿಡಿದು ಟಿಕ್ ಟಾಕ್- ಆರೋಪಿ ಅಂದರ್

    ಕಾಡು ಮೊಲ, ನವಿಲು ಹಿಡಿದು ಟಿಕ್ ಟಾಕ್- ಆರೋಪಿ ಅಂದರ್

    ಬಾಗಲಕೋಟೆ: ಕಾಡು ಮೊಲ ಹಾಗೂ ನವಿಲು ಹಿಡಿದು ಟಿಕ್ ಟಾಕ್ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಜಿಲ್ಲೆ ನಡೆದಿದೆ.

    ಹುನಗುಂದ ತಾಲೂಕಿನ ಅಮೀನಗಡ ಬಳಿಯ ಮದಾಪುರ ಗ್ರಾಮದ ವಿಠ್ಠಲ್ ವಾಲಿಕಾರ ಬಂಧಿತ ಆರೋಪಿ. ವಿಠ್ಠಲ್ ರಾಷ್ಟ್ರಪಕ್ಷಿಯಾದ ನವಿಲು ಹಾಗೂ ಕಾಡು ಮೊಲವನ್ನು ಬೇಟೆಯಾಡುತ್ತಿದ್ದ. ಅಷ್ಟೇ ಅಲ್ಲದೆ ಅದನ್ನು ಹಿಡಿದು ವಿಡಿಯೋ ಮಾಡಿ ಟಿಕ್ ಟಾಕ್‍ನಲ್ಲಿ ಅಪ್ಲೋಡ್ ಮಾಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಹುನಗುಂದ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ಆರೋಪಿ ವಿಠ್ಠಲ್‍ಗೆ ಬಲೆ ಬೀಸಿ ಬಂಧಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿ ಆರೋಪಿಯನ್ನ ಬಂಧಿಸಿ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ರಕ್ಷಣೆಗಾಗಿ ಕಾಡಿಂದ ನಾಡಿಗೆ ಬಂದ ನವಿಲಿಗೆ ಗ್ರಾಮಸ್ಥರ ನೆರವು

    ರಕ್ಷಣೆಗಾಗಿ ಕಾಡಿಂದ ನಾಡಿಗೆ ಬಂದ ನವಿಲಿಗೆ ಗ್ರಾಮಸ್ಥರ ನೆರವು

    ಬೀದರ್: ಕಾಲಿಗೆ ಪೆಟ್ಟಾಗಿದ್ದ ನವಿಲೊಂದು ರಕ್ಷಣೆಗಾಗಿ ಕಾಡಿನಿಂಡ ನಾಡಿಗೆ ಬಂದು ಆಂಜಿನೇಯನ ದೇವಸ್ಥಾನದ ಬಳಿ ಆಶ್ರಯ ಪಡೆದಿದ್ದ ನವಿಲಿಗೆ ಗ್ರಾಮಸ್ಥರು ನೆರವಾಗಿರುವ ಘಟನೆ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮಂಗಲಿಗಿ ಗ್ರಾಮದಲ್ಲಿ ನಡೆದಿದೆ.

    ಕಾಲಿಗೆ ಪೆಟ್ಟಾಗಿದ್ದು ದಿಕ್ಕು ದೋಚದೇ ನವಿಲೊಂದು ಪರದಾಡುತ್ತಿತ್ತು, ಬಳಿಕ ಕಾಡಿನಿಂದ ಹೊರಬಂದು ಮಂಗಲಿಗಿ ಗ್ರಾಮದ ಆಂಜನೇಯನ ದೇವಸ್ಥಾನದ ಬಳಿ ಆಶ್ರಯ ಪಡೆದಿತ್ತು. ಆದರೆ ಕಾಲಿಗಾದ ಪೆಟ್ಟಿನಿಂದ ನವಿಲು ಒದ್ದಾಡುತ್ತಿತ್ತು. ಈ ವೇಳೆ ನವಿಲಿನ ಕಾಲಿಗೆ ಪೆಟ್ಟಾಗಿದ್ದನ್ನ ಗಮನಿಸಿದ ಗ್ರಾಮಸ್ಥರು ಅದಕ್ಕೆ ಚಿಕಿತ್ಸೆ ಕೊಡಿಸಿ, ಆರೈಕೆ ಮಾಡಿದ್ದಾರೆ.

    ಸದ್ಯ ಗ್ರಾಮಸ್ಥರ ನೆರವಿನಿಂದ ನವಿಲು ಕೊಂಚ ಚೇತರಿಸಿಕೊಂಡಿದ್ದು, ಈಗಲೂ ದೇವಸ್ಥಾನದ ಬಳಿಯೇ ತಂಗಿದೆ. ಈಗಿನ ಕಾಲದಲ್ಲಿ ಒಬ್ಬರಿಗೆ ಒಬ್ಬರು ಕಷ್ಟಕಾಲದಲ್ಲಿ ಸಹಾಯ ಮಾಡದ ಜನೆ ಮಧ್ಯೆ ಮಂಗಲಿಗಿ ಗ್ರಾಮಸ್ಥರು ಒಂದು ಪಕ್ಷಿಗೆ ನೆರವಾಗಿ ಮಾನವೀಯತೆ ಮೆರೆದಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

  • ಗಾಯಗೊಂಡಿದ್ದ ನವಿಲನ್ನು ರಕ್ಷಿಸಿದ ಗ್ರಾಮಸ್ಥರು

    ಗಾಯಗೊಂಡಿದ್ದ ನವಿಲನ್ನು ರಕ್ಷಿಸಿದ ಗ್ರಾಮಸ್ಥರು

    ಬೆಂಗಳೂರು: ಗಾಯಗೊಂಡಿದ್ದ ನವಿಲಿಗೆ ಆರೈಕೆ ಮಾಡುವ ಮೂಲಕ ನೆಲಮಂಗಲ ತಾಲೂಕಿನ ಬಿಲ್ಲಿನಕೋಟೆಯ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದಾರೆ.

    ಕಾಡಿನಿಂದ ನಾಡಿಗೆ ಬಂದಿದ್ದ ಗಂಡು ನವಿಲಿನ ಕಾಲಿಗೆ ಗಾಯವಾಗಿತ್ತು. ಹೀಗಾಗಿ ಹಾರಲು ಸಾಧ್ಯವಾಗದೇ ಬಿಲ್ಲಿನಕೋಟೆಯ ಅಂಗಡಿಯೊಂದರ ಮುಂದೆ ಬಿದ್ದಿತ್ತು. ಅದನ್ನು ನೋಡಿದ ಸ್ಥಳೀಯರು ಎತ್ತಿಕೊಂಡು ನೀರು ಕುಡಿಸಿ ಆರೈಕೆ ಮಾಡಿದ್ದಾರೆ.

    ಆರೈಕೆಗೂ ಮುನ್ನ ಜನರನ್ನು ಕಂಡ ನವಿಲು ಭಯಗೊಂಡಿತ್ತು. ಇದನ್ನು ಗಮನಿಸಿದ ಕೆಲವರು ನವಿಲನ್ನು ಎತ್ತಿಕೊಂಡು ನಿಲ್ಲಿಸುವ ಪ್ರಯತ್ನಿಸಿದರು. ಎಲ್ಲ ರೀತಿಯ ಉಪಚಾರ ಮಾಡಿದ ಸಾರ್ವಜನಿಕರು ನಂತರ ಅರಣ್ಯ ಇಲಾಖೆ ಸಿಬ್ಬಂದಿಗೆ ನವಿಲನ್ನು ಒಪ್ಪಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ರಾಷ್ಟ್ರಗೀತೆ ಹಾಡಿ ಗ್ರಾಮಸ್ಥರಿಂದ ನವಿಲಿನ ಅಂತ್ಯಸಂಸ್ಕಾರ

    ರಾಷ್ಟ್ರಗೀತೆ ಹಾಡಿ ಗ್ರಾಮಸ್ಥರಿಂದ ನವಿಲಿನ ಅಂತ್ಯಸಂಸ್ಕಾರ

    ಧಾರವಾಡ: ಅನಾರೋಗ್ಯ ಪೀಡಿತ ರಾಷ್ಟ್ರ ಪಕ್ಷಿ ನವಿಲು ಮೃತಪಟ್ಟ ಹಿನ್ನೆಲೆ ಧಾರವಾಡದ ಗ್ರಾಮವೊಂದರಲ್ಲಿ ಅದಕ್ಕೆ ಸಕಲ ಗೌರವ ನೀಡಿ ವಿಧಿ ವಿಧಾನಗಳಂತೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

    ನವಲಗುಂದ ತಾಲೂಕಿನ ಬ್ಯಾಲಾಳ ಗ್ರಾಮದ ನೀರಿನ ಟ್ಯಾಂಕ್‍ನ ಮೇಲೆ ಅಸ್ವಸ್ಥಗೊಂಡಿದ್ದ ನವಿಲೊಂದು ಪತ್ತೆಯಾಗಿತ್ತು. ಇದನ್ನು ನೋಡಿದ ಗ್ರಾಮಸ್ಥರು ಅದಕ್ಕೆ ಆರೈಕೆ ಮಾಡಿ ನೀರು ಕುಡಿಸಿ, ಆಹಾರ ಕೊಟ್ಟಿದ್ದಾರೆ. ಆದರೆ ಇದ್ಯಾವುದಕ್ಕೂ ಸ್ಪಂದಿಸದ ನವಿಲು ಕೆಲ ಸಮಯದ ನಂತರ ಅಸುನೀಗಿದೆ.

    ನವಿಲು ರಾಷ್ಟ್ರ ಪಕ್ಷಿಯಾದ್ದರಿಂದ ಗ್ರಾಮಸ್ಥರೆಲ್ಲರೂ ಸೇರಿ ಅದಕ್ಕೆ ಸಕಲ ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡಲು ನಿರ್ಧರಿಸಿ, ಅದರಂತೆ ಶಾಲಾ ಮಕ್ಕಳು ಸೇರಿದಂತೆ ಗ್ರಾಮಸ್ಥರೆಲ್ಲರು ಸೇರಿ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿದ್ದಾರೆ. ಈ ವೇಳೆ ರಾಷ್ಟ್ರಗೀತೆಯನ್ನು ಹೇಳಿ ನವಿಲಿಗೆ ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ.

  • ಕೋಳಿಗಳ ಜೊತೆ ನವಿಲ ಸ್ನೇಹ ಸಂಬಂಧ

    ಕೋಳಿಗಳ ಜೊತೆ ನವಿಲ ಸ್ನೇಹ ಸಂಬಂಧ

    -ಕೋಳಿಗಳ ಜೊತೆ ನವಿಲಿಗೂ ಪೋಷಕನಾದ ಯುವ ರೈತ

    ಚಿಕ್ಕಬಳ್ಳಾಪುರ: ತೀವ್ರ ಬರದಿಂದ ಕಂಗೆಟ್ಟ ನವಿಲುಗಳು ಕಾಡಿನಲ್ಲಿ ಆಹಾರ ನೀರು ಸಿಗದೆ ಪರದಾಡುತ್ತಿದೆ. ಹೀಗೆ ಆಹಾರ ಅರಸಿ ಕಾಡಿನ ಸನಿಹದಲ್ಲಿದ್ದ ತೋಟವೊಂದರಲ್ಲಿ ನವಿಲೊಂದಕ್ಕೆ ಆಹಾರ ಸಿಕ್ಕ ಮೇಲೆ ಅಲ್ಲಯೇ ಠಿಕಾಣಿ ಹೂಡಿದೆ. ಅಲ್ಲದೆ ಕೋಳಿಗಳ ಜೊತೆ ನವಿಲ ಸ್ನೇಹ ಬಾಂಧವ್ಯಕ್ಕೆ ಎಲ್ಲರ ಮನ ಸೋತಿದೆ.

    ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಾಳಪಲ್ಲಿ ಗ್ರಾಮದ ನಿವಾಸಿ ಗೌತಮ್ ಅವರ ತೋಟದಲ್ಲಿ ಕೋಳಿಗಳ ಹಿಂಡಿನ ಮಧ್ಯೆ ನವಿಲಿನ ವೈಯಾರದ ಚಿತ್ತಾರ ನೋಡಿಗರನ್ನು ಬೇರಗಾಸಿಸುತ್ತದೆ. ಹೊಟ್ಟೆ ಪಾಡಿಗೆ ನಾಟಿ ಕೋಳಿಗಳನ್ನು ಸಾಕಿಕೊಂಡು, ಗೌತಮ್ ತನ್ನ ತೋಟದಲ್ಲಿರುವ ಮಾವಿನ ಮರದ ಕೆಳಗೆ ಕೋಳಿಗಳಿಗೆ ಆಹಾರ ನೀರನ್ನು ಇಡುತ್ತಾರೆ. ಆದರೆ ಆಹಾರ ಅರಸಿ ಬರುವ ನವಿಲುಗಳು ತೋಟಕ್ಕೆ ಬಂದು ಕೊಳಿಗಳ ಆಹಾರ ತಿಂದು ಹೋಗುತ್ತವೆ. ಹೀಗೆ ಆಕಸ್ಮಿಕವಾಗಿ ಆಹಾರ ಅರಸಿ ಬಂದ ನವಿಲೊಂದು ಈಗ ಗೌತಮ್ ತೋಟದಲ್ಲಿಯೇ ಠಿಕಾಣಿ ಹೂಡಿದೆ.

    ಇನ್ನೂ ಕೋಳಿಗಳ ಹಿಂಡಿನ ಮಧ್ಯೆ ಆಹಾರ ನೀರು ಸೇವಿಸುತ್ತಾ, ಗರಿಗೆದರಿ ನೃತ್ಯ ಮಾಡುವುದನ್ನ ನೋಡಿದರೆ ಕೋಳಿಗಳ ಹಿಂಡೇ ನಾಚುತ್ತಿವೆ. ಯುವ ರೈತನ ಕೊಳಿಗಳ ಜೊತೆ ಕಾಳು ತಿನ್ನುತ್ತಾ ಈ ನವಿಲು ಸ್ವಚ್ಚಂದವಾಗಿ ತನ್ನ ಪಾಡಿಗೆ ಯಾರ ಭಯಯೂ ಇಲ್ಲದೆ ಬದುಕು ನಡೆಸುತ್ತಿದೆ. ಕೋಳಿಗಳ ಮಧ್ಯೆ ಕಾಲಕಳೆದು ನವಿಲು ಹಾಗೂ ಕೋಳಿ ಮಧ್ಯೆ ಉತ್ತಮ ಸ್ನೇಹ ಬೆಳೆದಿದೆ.

    ಗೌತಮ್ ಅವರ ತೋಟದ ಸುತ್ತಮುತ್ತ ಬೆಟ್ಟ ಗುಡ್ಡಗಳಿದ್ದು, ಮಳೆಯಿಲ್ಲದೆ ಕಾಡು ಪ್ರಾಣಿಗಳಿಗೆ ನೀರು ಸಿಗದೇ ಒದ್ದಾಡುತ್ತಿವೆ. ಇನ್ನೂ ನವಿಲುಗಳಂತೂ ನೆರಳಿಗೆ ರೈತನ ಮಾವಿನ ಮರಗಳನ್ನೆ ಆಸರೆ ಮಾಡಿಕೊಂಡು ಕೋಳಿಗಳಿಗೆ ಹಾಕೊ ಕಾಳು-ನೀರು ಸೇವಿಸಿಕೊಂಡು ಸ್ವಚ್ಚಂದವಾಗಿ ನರ್ತಿಸುತ್ತವೆ. ನವಿಲುಗಳ ನರಳಾಟ ನೋಡಿದ ಕೋಳಿಗಳು ಸಹ ಪುಣ್ಯಕೋಟಿ ಕಥೆಯಂತೆ ನವಿಲುಗಳನ್ನು ತಮ್ಮವರಂತೆ ನೋಡಿಕೊಳ್ಳುತ್ತಿವೆ ಎಂದು ಯುವ ರೈತ ತಿಳಿಸಿದ್ದಾರೆ.

    ಮೊದಲೇ ತೀವ್ರ ಬರದಿಂದ ತತ್ತರಿಸಿರುವ ಕಾಡಿನ ಪ್ರಾಣಿಗಳು ಅದೆಲ್ಲಿ ಹೊದವೋ ಗೊತ್ತಿಲ್ಲ. ಆದರೆ ಅಳಿದುಳಿದ ನವಿಳುಗಳಂಥ ವೈಯಾರಿ ಪಕ್ಷಿಗಳು ಮಾತ್ರ ಅನಿವಾರ್ಯವಾಗಿ ಹೊಟ್ಟೆ ಪಾಡಿಗೆ ಕಾಡನಂಚಿನ ತೋಟಗಳಿಗೆ ಆಹಾರ ಅರಸಿ ಬರುತ್ತವೆ. ಅಲ್ಲದೆ ಗೌತಮ ಅವರ ತೋಟಕ್ಕೆ ಆಗಾಗ ಬರುವ ನವಿಲುಗಳು ಕೋಳಿಗಳ ಜೊತೆ ಹೊಂದಿಕೊಂಡು ಸ್ವಚ್ಚಂದವಾಗಿ ಬದುಕುತ್ತಿವೆ, ಇನ್ನೂ ತಮ್ಮ ಆಶ್ರಯ ಬಯಸಿ ಬಂದಿರುವ ನವಿಲುಗಳನ್ನು ಮುತುವರ್ಜಿಯಿಂದ ಯುವ ರೈತ ನೋಡಿಕೊಳ್ಳುತ್ತಿರುವುದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಅಪಘಾತಕ್ಕೆ ಸಿಲುಕಿ ಒದ್ದಾಡಿದ ನವಿಲು- ಯುವಕರಿಂದ ರಕ್ಷಣೆ

    ಅಪಘಾತಕ್ಕೆ ಸಿಲುಕಿ ಒದ್ದಾಡಿದ ನವಿಲು- ಯುವಕರಿಂದ ರಕ್ಷಣೆ

    ದಾವಣಗೆರೆ: ವಾಹನ ಡಿಕ್ಕಿಯಾಗಿ ನವಿಲು ಗಂಭೀರ ಗಾಯಗೊಂಡ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಳಚೋಡು ಗ್ರಾಮದ ರಸ್ತೆಯಲ್ಲಿ ನಡೆದಿದೆ.

    ಗ್ರಾಮದ ಹೊರ ವಲಯದಲ್ಲಿ ನವಿಲು ರಸ್ತೆ ದಾಟುವಾಗ ವಾಹನಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಕಾಲಿಗೆ ಗಂಭೀರ ಗಾಯಗಳಾಗಿ ರಸ್ತೆಯಲ್ಲಿ ಒದ್ದಾಡುತ್ತಿತ್ತು. ಅದೇ ಸಂದರ್ಭದಲ್ಲಿ ಕಾರಿನಲ್ಲಿ ಬಂದ ಯುವಕರ ತಂಡ, ನವಿಲು ನರಳಾಡುತ್ತಿರುವುದನ್ನು ಗಮನಿಸಿದ್ದಾರೆ.

    ಕೂಡಲೇ ಯುವಕರೆಲ್ಲರು ಕಾರಿನಿಂದ ಇಳಿದು ನವಿಲಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪೊಲೀಸರ ಸಹಾಯದಿಂದ ಗಾಯಗೊಂಡ ನವಿಲನ್ನು ಯುವಕರು ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

    ಯುವಕರ ಕಾರ್ಯಕ್ಕೆ ಬಿಳಚೋಡ್ ಪೊಲೀಸ್ ಠಾಣೆಯ ಪಿಎಸ್‍ಐ ಉಮೇಶ್ ಬಾಬು ಅಭಿನಂಧನೆ ಸಲ್ಲಿಸಿದರು.