Tag: PCB

  • 17 ಆಟಗಾರರು, 60 ಐಷಾರಾಮಿ ರೂಮ್‌ – ಜಾಲಿ ಮೂಡಿನಲ್ಲಿ ಪಾಕ್‌ ಕ್ರಿಕೆಟಿಗರು!

    17 ಆಟಗಾರರು, 60 ಐಷಾರಾಮಿ ರೂಮ್‌ – ಜಾಲಿ ಮೂಡಿನಲ್ಲಿ ಪಾಕ್‌ ಕ್ರಿಕೆಟಿಗರು!

    – ನೀವೇನ್‌ ಕ್ರಿಕೆಟ್‌ ಆಡೋಕೆ ಹೋದ್ರಾ, ಮಜಾ ಮಾಡೋಕೆ ಹೋದ್ರಾ ಅಂತ ಟೀಕೆ

    ವಾಷಿಂಗ್ಟನ್‌: 2024ರ ಟಿ20 ವಿಶ್ವಕಪ್‌ (T20 World Cup) ಟೂರ್ನಿಯಲ್ಲಿ ಲೀಗ್‌ ಸುತ್ತಿನಲ್ಲೇ ಹೊರಬಿದ್ದಿರುವ ಪಾಕಿಸ್ತಾನ ಕ್ರಿಕೆಟ್‌ ಆಟಗಾರರ ವಿರುದ್ಧ ತಮ್ಮದೇ ದೇಶದ ಅಭಿಮಾನಿಗಳು (Pak Cricket Fans) ಹಾಗೂ ಹಿರಿಯ ಕ್ರಿಕೆಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

    ಹೌದು. ಸದ್ಯ ಟಿ20 ವಿಶ್ವಕಪ್‌ ಟೂರ್ನಿಯಿಂದ ಪಾಕ್‌ ತಂಡ ಹೊರಬಿದ್ದರೂ ಆಟಗಾರರು ಮರಳಿ ತವರಿಗೆ ಹಿಂದಿರುಗದೇ ಅಮೆರಿಕದಲ್ಲಿಯೇ ಉಳಿದಿದ್ದಾರೆ. ಐಷಾರಾಮಿ ರೂಮ್‌ಗಳನ್ನು (Luxury Rooms) ಬುಕ್ಕಿಂಗ್‌ ಮಾಡಿಕೊಂಡಿದ್ದು, ಯುಎಸ್‌ನಲ್ಲಿ ಹಾಲಿಡೆ ಎಂಜಾಯ್‌ ಮಾಡಿದ್ದಾರೆ ಎಂದು ವರದಿಯಾಗಿದೆ. ಇದರಿಂದ ಪಾಕ್‌ ಆಟಗಾರರ ವಿರುದ್ಧ ಹಿರಿಯ ಕ್ರಿಕೆಟಿಗರ ಆಕ್ರೋಶ ಮುಂದುವರಿದಿದೆ.

    ಈ ಕುರಿತು ಮಾತನಾಡಿರುವ ಪಾಕ್‌ ಕ್ರಿಕೆಟ್‌ ಮಂಡಳಿ ಸದಸ್ಯ (PCB Member) ಅತೀಕ್‌, ಯುಎಸ್‌ನಲ್ಲಿ ನೀವೇನು ನಾಟಕ ಆಡ್ತಿದ್ದೀರಾ, ಹಿಂದೆಲ್ಲ ನಮ್ಮ ತಂಡಕ್ಕೆ ಒಬ್ಬ ಕೋಚ್‌ ಮತ್ತು ಓರ್ವ ಮ್ಯಾನೇಜರ್‌ ಮಾತ್ರ ಇರುತ್ತಿದ್ದರು. ಈಗ ನಿಮಗೆ 17 ಆಟಗಾರರಿಗೆ 17 ಮ್ಯಾನೇಜರ್‌ಗಳಿದ್ದಾರೆ. ನೀವು 60 ಕೊಠಡಿಗಳನ್ನ ಬುಕ್‌ ಮಾಡಿದ್ದೀರಿ. ರಜೆಯ ಮೇಲೆ ಹೋಗಿರುವಂತೆ ಹೆಂಡತಿ ಮಕ್ಕಳೊಂದಿಗೆ ಸುತ್ತಾಡುತ್ತಿದ್ದೀರಿ. ಅಮೆರಿಕಕ್ಕೆ ಹೋಗಿದ್ದು ಏತಕ್ಕೆ? ಕ್ರಿಕೆಟ್‌ ಆಡಲು ಹೋಗಿದ್ದೀರೋ ಅಥವಾ ರಜೆಯ ಮಜಾ ಮಾಡಲು ಹೋಗಿದ್ದೀರೋ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

    ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಶಿಸ್ತು ಎಂದರೆ ಯಾರಿಗೂ ತಿಳಿಯದೇ ಇರುವಂತಹ ಸಂಸ್ಕೃತಿಯನ್ನ ಹುಟ್ಟುಹಾಕುತ್ತಿದ್ದಾರೆ. ವಿಶ್ವಕಪ್‌ ಆಡಲು ಹೋದವರ ಗಮನ ಎಲ್ಲಿರಬೇಕು? ಕ್ರಿಕೆಟ್‌ ಮಂಡಳಿ ನಿಮಗೆ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ, ಹೀಗಿರುವಾಗ ನೀವು ಯಾವ ರೀತಿ ನಡೆದುಕೊಳ್ಳುತ್ತಿದ್ದೀರಿ ಎಂದು ಕಟುವಾಗಿ ಟೀಕಿಸಿದ್ದಾರೆ. ಇದನ್ನೂ ಓದಿ: ಇದು ನಿನ್ನ ಭಾರತವಲ್ಲ- ಅಭಿಮಾನಿ ಮೇಲೆ ಹಲ್ಲೆಗೆ ಮುಂದಾದ ಪಾಕ್ ವೇಗಿ

    ಪ್ರಸಕ್ತ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಗ್ರೂಪ್‌-ಎ ನಲ್ಲಿದ್ದ ಪಾಕ್‌ ತಂಡ 4 ಪಂದ್ಯಗಳ ಪೈಕಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ, ಲೀಗ್‌ ಸುತ್ತಿನಲ್ಲೇ ಹೊರಬಿದ್ದಿತು. ಇದನ್ನೂ ಓದಿ: ವಿಶ್ವಕಪ್‌ನಿಂದ ಪಾಕ್‌ ಔಟ್‌ – ಬಾಬರ್‌, ರಿಜ್ವಾನ್‌ನನ್ನ ತಂಡದಿಂದ ಕಿತ್ತೊಗೆಯುವಂತೆ ಆಗ್ರಹ

  • ವಿಶ್ವಕಪ್‌ನಿಂದ ಪಾಕ್‌ ಔಟ್‌ – ಬಾಬರ್‌, ರಿಜ್ವಾನ್‌ನನ್ನ ತಂಡದಿಂದ ಕಿತ್ತೊಗೆಯುವಂತೆ ಆಗ್ರಹ

    ವಿಶ್ವಕಪ್‌ನಿಂದ ಪಾಕ್‌ ಔಟ್‌ – ಬಾಬರ್‌, ರಿಜ್ವಾನ್‌ನನ್ನ ತಂಡದಿಂದ ಕಿತ್ತೊಗೆಯುವಂತೆ ಆಗ್ರಹ

    – ತಮ್ಮದೇ ದೇಶದ ಅಭಿಮಾನಿಗಳಿಂದ ಪಾಕ್‌ ತಂಡದ ವಿರುದ್ಧ ವ್ಯಾಪಕ ಟೀಕೆ

    ಫ್ಲೋರಿಡಾ: 2024ರ ಟಿ20 ವಿಶ್ವಕಪ್‌ನಿಂದ (T20 World Cup) ಪಾಕಿಸ್ತಾನ ತಂಡ ಹೊರಬಿದ್ದ ಬಳಿಕ ತಮ್ಮದೇ ದೇಶದ ಕ್ರಿಕೆಟ್‌ ಅಭಿಮಾನಿಗಳು ಹಾಗೂ ಹಿರಿಯ ಕ್ರಿಕೆಟಿಗರು ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಬಾಬರ್‌ ಆಜಂ (Babar Azam), ಮೊಹಮ್ಮದ್‌ ರಿಜ್ವಾನ್‌ (Mohammad Rizwan) ಸೇರಿದಂತೆ ಹಿರಿಯ ಕ್ರಿಕೆಟಿಗರನ್ನು ರಾಷ್ಟ್ರೀಯ ತಂಡದಿಂದಲೇ ಕಿತ್ತೊಗೆಯುವಂತೆ ಆಗ್ರಹಗಳು ಕೇಳಿಬರುತ್ತಿವೆ.

    ಪಾಕ್‌ನ ಖಾಸಗಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಕ್‌ ಕ್ರಿಕೆಟಿಗ, ಅಹ್ಮದ್ ಶೆಹಜಾದ್ (Ahmed Shehzad) ಹಿರಿಯ ಆಟಗಾರರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಪಾಕ್‌ ತಂಡದಲ್ಲಿರುವ ನಾಯಕ ಬಾಬರ್‌ ಆಜಂ, ಮೊಹಮ್ಮದ್‌ ರಿಜ್ವಾನ್‌, ಶಾಹೀನ್‌ ಶಾ ಅಫ್ರಿದಿ ಸೇರಿದಂತೆ ಹಿರಿಯ ಕ್ರಿಕೆಟಿಗರನ್ನು ತಂಡದಿಂದ ಕಿತ್ತೊಗೆಯಬೇಕು ಎಂದು ಪಾಕ್‌ ಕ್ರಿಕೆಟ್‌ ಮಂಡಳಿಗೆ ಒತ್ತಾಯಿಸಿದ್ದಾರೆ.

    ಬಾಬರ್‌ ಕ್ರಿಕೆಟ್‌ ತಂಡದಲ್ಲಿ ಗುಂಪುಗಾರಿಕೆ ಮಾಡುತ್ತಿದ್ದಾರೆ, ತನ್ನ ಸ್ನೇಹಿತರನ್ನ ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ.‌ ಬಾಬರ್‌, ರಿಜ್ವಾನ್‌, ಅಫ್ರಿದಿ, ಫಖರ್‌ ಜಮಾನ್‌, ಹ್ಯಾರಿಸ್‌ ರೌಫ್‌ ಪಾಕಿಸ್ತಾನಕ್ಕಾಗಿ ಕಳೆದ 4-5 ವರ್ಷಗಳಿಂದ ನಿಯಮಿತವಾಗಿ ಆಡುತ್ತಿದ್ದಾರೆ. ಅವರ ಪ್ರದರ್ಶನ ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ನೀಡಲಾಗಿದೆ. ಆದರೂ ತಂಡದಲ್ಲಿ ಗುಂಪುಗಾರಿಕೆಯಿಂದ ಒಬ್ಬರನ್ನೊಬ್ಬರು ಸಮರ್ಥಿಸಿಕೊಳ್ಳುತ್ತಿದ್ದಾರೆ. ನಮ್ಮ ತಪ್ಪುಗಳಿಂದ ನಾವು ಕಲಿಯುತ್ತಿದ್ದೇವೆ ಅಂತ ಪ್ರತಿಬಾರಿಯೂ ಹೇಳ್ತಿದ್ದಾರೆ. ಕೆನಡಾ ವಿರುದ್ಧ ಸಹ ಕಡಿಮೆ ಎನ್‌ರೇಟ್‌ನಿಂದ ಗೆದ್ದು ನೀವು ಏನನ್ನು ಕಲಿಯುತ್ತಿದ್ದೀರಿ? ನಿಮ್ಮ ನಾಯಕತ್ವದಿಂದ ಪಾಕಿಸ್ತಾನದ ಕ್ರಿಕೆಟ್‌ ಹಾಳಾಗಿದೆ. ಬಾಬರ್‌ ಕೇವಲ ಸೋಷಿಯಲ್‌ ಮೀಡಿಯಾ ಸ್ಟಾರ್‌ಗಳಾಗಿದ್ದಾರೆ. ಬಾಬರ್‌ ವಿರುದ್ಧ ಪಿಸಿಬಿ (PCB) ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶೆಹಜಾದ್‌ ಒತ್ತಾಯಿಸಿದ್ದಾರೆ.

    ವಿಶ್ವಕಪ್‌ ನಿಂದ ಪಾಕ್‌ ಔಟ್‌:
    ಅಮೆರಿಕ (USA) ಮತ್ತು ಐರ್ಲೆಂಡ್‌ ನಡುವಿನ ಪಂದ್ಯ ಶುಕ್ರವಾರ ಮಳೆಯಿಂದ ರದ್ದಾದರಿಂದ ಪಾಕ್‌ ತಂಡ‌ 2024ರ ಆವೃತ್ತಿಗೆ ಗುಡ್‌ಬೈ ಹೇಳಿದೆ. ಭಾನುವಾರ ಐರ್ಲೆಂಡ್‌ ವಿರುದ್ಧ ತನ್ನ ಕೊನೆಯ ಪಂದ್ಯವನ್ನಾಡಿ, ಬಳಿಕ ತವರಿಗೆ ಮರಳಲಿದೆ. ಇನ್ನೂ ಚೊಚ್ಚಲ ಆವೃತ್ತಿಯಲ್ಲೇ ಸೂಪರ್‌ -8ರ ಘಟಕ್ಕೆ ಪ್ರವೇಶಿಸಿರುವ ಅಮೆರಿಕ ತಂಡ 2026ರ ವಿಶ್ವಕಪ್‌ ಟೂರ್ನಿಗೂ ಅರ್ಹತೆ ಗಿಟ್ಟಿಸಿಕೊಂಡಿದೆ.

  • ಯುಎಸ್‌ಎ-ಐರ್ಲೆಂಡ್‌ ಪಂದ್ಯ ಮಳೆಗೆ ಬಲಿಯಾದ್ರೆ ಪಾಕ್‌ ಮನೆಗೆ – ಏಕೆ ಗೊತ್ತೆ?

    ಯುಎಸ್‌ಎ-ಐರ್ಲೆಂಡ್‌ ಪಂದ್ಯ ಮಳೆಗೆ ಬಲಿಯಾದ್ರೆ ಪಾಕ್‌ ಮನೆಗೆ – ಏಕೆ ಗೊತ್ತೆ?

    – ಪಾಕ್‌ ತಂಡದ ವಿರುದ್ಧ ದೇಶದ್ರೋಹದ ಕೇಸ್‌!

    ಫ್ಲೋರಿಡಾ: ಅಮೆರಿಕ ಮತ್ತು ಐರ್ಲೆಂಡ್‌ ನಡುವೆ ನಡೆಯಲಿರುವ ಇಂದಿನ (ಶುಕ್ರವಾರ) ಟಿ20 ವಿಶ್ವಕಪ್‌ (T20 World Cup) ಪಂದ್ಯ ಮಳೆಯಿಂದ ರದ್ದಾದರೆ ಪಾಕಿಸ್ತಾನ ತಂಡ (Pakistan Team) ಮನೆಗೆ ತೆರಳುವುವುದು ಖಚಿತವಾಗಿದೆ.

    2024ರ ಟಿ20 ವಿಶ್ವಕಪ್‌ ಟೂರ್ನಿಯ ನಿರ್ಣಾಯಕ ಪಂದ್ಯ ಶುಕ್ರವಾರ ಅಮೆರಿಕದ (USA) ಲಾಡರ್ಹಿಲ್‌ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಯುಎಸ್‌ಎ-ಐರ್ಲೆಂಡ್‌ (USA vs Ireland) ತಂಡಗಳು ಕಾದಾಟ ನಡೆಸಲಿವೆ. ಸದ್ಯಕ್ಕೆ ಫ್ಲೋರಿಡಾ ನಗರದಲ್ಲಿ 89% ಸಾಂದ್ರತೆಯೊಂದಿಗೆ 23% ಮಳೆಯಾಗುವ ಸಾಧ್ಯತೆಯಿದ್ದು. 8 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಂದು ವೇಳೆ ಯುಎಸ್‌ ಹಾಗೂ ಐರ್ಲೆಂಡ್‌ ನಡುವಿನ ಪಂದ್ಯ ಮಳೆಯಿಂದ ರದ್ದಾದರೇ, ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ಸಿಗಲಿದೆ. ಇದನ್ನೂ ಓದಿ: ‌250 ಕೋಟಿ ರೂ. ವೆಚ್ಚದಲ್ಲಿ ಐದೇ ತಿಂಗಳಲ್ಲಿ ನಿರ್ಮಿಸಿದ್ದ ನಸ್ಸೌ ಕೌಂಟಿ ಸ್ಟೇಡಿಯಂ ನೆಲಸಮ?

    ಪಾಕ್‌ ಏಕೆ ಮನೆಗೆ?
    ಟಿ20 ವಿಶ್ವಕಪ್‌ನಲ್ಲಿ A ಗುಂಪಿನಲ್ಲಿರುವ 5 ತಂಡಗಳ ಪೈಕಿ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಟೀಂ ಇಂಡಿಯಾ 6 ಅಂಕಗಳೊಂದಿಗೆ ಸೂಪರ್‌-8‌ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. A ಗುಂಪಿನಲ್ಲಿ ಸೂಪರ್‌ 8 ಪ್ರವೇಶಿಸಲು ಇನ್ನೊಂದು ತಂಡಕ್ಕೆ ಮಾತ್ರ ಅವಕಾಶ ಇದೆ. ಯುಎಸ್‌ ತಂಡ ಈಗಾಗಲೇ 2 ಪಂದ್ಯಗಳಲ್ಲಿ ಗೆದ್ದು 4 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದೆ. ಪಾಕ್‌ ತಂಡ ಯುಎಸ್‌ಎಗಿಂತಲೂ ಉತ್ತಮ ನೆಟ್‌ ರನ್‌ರೇಟ್‌ ಹೊಂದಿದ್ದರೂ 2 ಪಂದ್ಯಗಳಲ್ಲಿ ಸೋತಿರುವುದರಿಂದ 2 ಅಂಕ ಪಡೆದು 3ನೇ ಸ್ಥಾನಕ್ಕೆ ಕುಸಿದಿದೆ. ಐರ್ಲೆಂಡ್‌ ವಿರುದ್ಧ ಯುಎಸ್‌ ಸೋತು, ಪಾಕ್‌ ಐರ್ಲೆಂಡ್‌ ವಿರುದ್ಧ ಮುಂದಿನ ಪಂದ್ಯದಲ್ಲಿ ಗೆದ್ದರೆ, ಸೂಪರ್‌-8ಗೆ ಅರ್ಹತೆ ಪಡೆದುಕೊಳ್ಳಲಿದೆ.

    ಒಂದು ವೇಳೆ ಐರ್ಲೆಂಡ್‌ ವಿರುದ್ಧದ ಪಂದ್ಯ ಮಳೆಗೆ ಬಲಿಯಾದರೆ ಆಗ ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಪಡೆದುಕೊಳ್ಳಲಿದೆ. ಯುಎಸ್‌ 5 ಅಂಕದೊಂದಿಗೆ ಸೂಪರ್‌-8ಕ್ಕೆ ಅರ್ಹತೆ ಪಡೆದುಕೊಳ್ಳಲಿದೆ. ಪಾಕ್‌ ತಂಡ ಐರ್ಲೆಂಡ್‌ ವಿರುದ್ಧ ಗೆದ್ದರೂ ಟೂರ್ನಿಯಿಂದ ಹೊರಬೀಳಲಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಕಾಫಿನಾಡಿನ ಯುವಕ – ಕೊರೊನಾ ವೇಳೆ ಚಿಕ್ಕಮಗಳೂರಿನಲ್ಲಿ ಅಭ್ಯಾಸ!

    ಪಾಕ್‌ ತಂಡದ ವಿರುದ್ಧ ದೇಶದ್ರೋಹದ ಕೇಸ್‌:
    ಈ ಬಾರಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯ ಮಾಜಿ ಚಾಂಪಿಯನ್ ಪಾಕಿಸ್ತಾನ ತಂಡದ ವಿರುದ್ಧ ಪಾಕ್‌ನ ಗುಜ್ರಾನ್ವಾಲಾ ನಗರದ ವಕೀಲರೊಬ್ಬರು ದೇಶ ದ್ರೋಹ ಕೇಸ್ ದಾಖಲಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಕೇಸ್‌ನ ಬಗ್ಗೆ ಜೂ.21ಕ್ಕೆ ಮುನ್ನ ವರದಿ ಸಲ್ಲಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ ಎಂದು ತಿಳಿದುಬಂದಿದೆ. ಪಾಕ್ ತಂಡದ ಪ್ರದರ್ಶನದ ಬಗ್ಗೆ ಅರ್ಜಿದಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಹಣ ವ್ಯರ್ಥವಾಗುತ್ತಿದೆ ಮತ್ತು ರಾಷ್ಟ್ರದ ನಂಬಿಕೆಗೆ ದ್ರೋಹ ಬಗೆದಂತಾಗಿದೆ. ಆಟಗಾರರು ದೇಶದ ಬಗ್ಗೆ ಗೌರವಕ್ಕಿಂತ ಆರ್ಥಿಕ ಲಾಭಕ್ಕೆ ಆದ್ಯತೆ ನೀಡಿದ್ದಾರೆ ಎಂದು ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: India vs Pakistan: ಟ್ರ್ಯಾಕ್ಟರ್‌ ಮಾರಿ ಕ್ರಿಕೆಟ್‌ ನೋಡಲು ಬಂದ ಪಾಕ್ ಅಭಿಮಾನಿಗೆ ನಿರಾಸೆ

  • Champions Trophy: ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ ಭಾರತ ತಂಡವನ್ನು ಪಾಕ್‌ಗೆ ಕಳುಹಿಸುತ್ತೇವೆ: ಬಿಸಿಸಿಐ

    Champions Trophy: ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ ಭಾರತ ತಂಡವನ್ನು ಪಾಕ್‌ಗೆ ಕಳುಹಿಸುತ್ತೇವೆ: ಬಿಸಿಸಿಐ

    ಮುಂಬೈ: ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ, ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ (Rajeev Shukla) ಹೇಳಿದ್ದಾರೆ.

    2025ರ ಏಪ್ರಿಲ್‌ 7ರಿಂದ ಮೇ 20ರ ವರೆಗೆ ಪಾಕ್‌ ಆತಿಥ್ಯದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy) ನಡೆಯಲಿದ್ದು, ಪಾಕಿಸ್ತಾನದ (Pakistan) ಕರಾಚಿ, ಲಾಹೋರ್, ಮುಲ್ತಾನ್ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಪಾಕಿಸ್ತಾನಕ್ಕೆ ಟೀಂ ಇಂಡಿಯಾ ತೆರಳಲಿದೆಯೇ ಅನ್ನೋ ಬಗ್ಗೆ ಮಾತನಾಡಿದ ರಾಜೀವ್ ಶುಕ್ಲಾ, ಕೇಂದ್ರ ಸರ್ಕಾರ ನಮಗೆ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇವೆ. ಅನುಮತಿ ನೀಡಿದರೆ ಭಾರತ ತಂಡವನ್ನು (Team India) ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ ಎಂದು ತಿಳಿಸಿದ್ದಾರೆ.

    ಚಾಂಪಿಯನ್ಸ್‌ ಟ್ರೋಫಿಯ ಕರಡು ವೇಳಾಪಟ್ಟಿಯನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಗೆ ಕಳುಹಿಸಿದೆ ಎಂದು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಹೇಳಿದ್ದಾರೆ. ಇದನ್ನೂ ಓದಿ: PublicTV Explainer: ಇಂಡೋ-ಪಾಕ್‌ ಕದನ ಯಾಕಿಷ್ಟು ರಣರೋಚಕ – ನೀವು ತಿಳಿಯಲೇಬೇಕಾದ ಸಂಗತಿಗಳಿವು..

    ಹೈಬ್ರಿಡ್‌ ಮಾದರಿಯಲ್ಲಿ ಆಯೋಜನೆಯಾಗುತ್ತಾ?
    2023ರ ಏಕದಿನ ಏಷ್ಯಾಕಪ್‌ ಟೂರ್ನಿಯನ್ನಾಡಲು ಭಾರತ ತಂಡವನ್ನು ಪಾಕ್‌ಗೆ ಕಳುಹಿಸಲು ಬಿಸಿಸಿಐ ನಿರಾಕರಿಸಿದ ನಂತರ ACC (ಏಷ್ಯನ್‌ ಕ್ರಿಕೆಟ್‌ ಸಮಿತಿ) ಹೈಬ್ರಿಡ್‌ ಮಾದರಿಯಲ್ಲಿ ಆಡಿಸಲು ನಿರ್ಧರಿಸಿತು. ಏಷ್ಯಾಕಪ್‌ ಟೂರ್ನಿಯ ಹಕ್ಕು ಪಾಕಿಸ್ತಾನದ ಬಳಿಯಿದ್ದರೂ ಪಾಕ್‌ನಲ್ಲಿ ಕೇವಲ 4 ಪಂದ್ಯಗಳನ್ನಾಡಲು ಮಾತ್ರವೇ ಅನುಮತಿ ನೀಡಿತು. ಉಳಿದ 9 ಪಂದ್ಯಗಳನ್ನ ಶ್ರೀಲಂಕಾದಲ್ಲಿ ಆಡಿಸಲು ನಿರ್ಧರಿಸಿತು. ಈ ಬಾರಿಯೂ ಅದೇ ರೀತಿ ಹೈಬ್ರಿಡ್‌ ಮಾದರಿಯಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: T20 World Cup: ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಕ್ರಿಕೆಟಿಗರಿಗೆ ಲಕ್ಷ ಲಕ್ಷ ಬಹುಮಾನ ಘೋಷಿಸಿದ ಪಾಕ್‌!

    ಪಾಕ್‌ಗೆ ಪ್ರಯಾಣಿಸಲು ಭಾರತ ಹಿಂದೇಟು ಏಕೆ?
    ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾಗಿ ಬೇರ್ಪಟ್ಟ ನಂತರ ಭಾರತದ ವಿರುದ್ಧ ದ್ವೇಷ ಸಾಧಿಸುತ್ತಲೇ ಬಂದಿತು. 1947-48ರಲ್ಲಿ ರಾಜ ಹರಿಸಿಂಗ್‌ ಭಾರತದೊಂದಿಗೆ ಕಾಶ್ಮೀರ ವಿಲೀನ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇಂಡೋ ಪಾಕ್‌ ಯುದ್ಧ (Indo Pak War) ನಡೆಯಿತು. ಆ ನಂತರ 1965ರಲ್ಲಿ ಕಾಶ್ಮೀರಕ್ಕಾಗಿ ನಡೆದ ಯುದ್ಧ, 1971ರಲ್ಲಿ ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶ) ವಿಮೋಚನೆಗಾಗಿ ನಡೆದ ಯುದ್ಧ, 1999 ರಲ್ಲಿ ನಡೆದ ಕಾರ್ಗಿಲ್‌ ಯುದ್ಧ ಇವೆಲ್ಲವೂ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧವನ್ನ ಮತ್ತಷ್ಟು ಹದಗೆಡಿಸುತ್ತಾ ಹೋಯಿತು. ಆದ್ರೆ ಕ್ರೀಡೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಕಾರ್ಗಿಲ್‌ ಯುದ್ಧದ ನಂತರವೂ ಭಾರತ ಮತ್ತು ಪಾಕ್‌ ತಂಡಗಳು ದ್ವಿಪಕ್ಷಿಯ ಸರಣಿ, ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಮುಖಾಮುಖಿಯಾಗಿವೆ. ಭಾರತ ತಂಡವು ಸಹ ಪಾಕಿಸ್ತಾನದಲ್ಲೇ ದ್ವಿಪಕ್ಷಿಯ ಸರಣಿಗಳನ್ನಾಡಿದೆ. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿ (Mumbai Attack) ಎರಡು ರಾಷ್ಟ್ರಗಳ ಮೇಲೆ ಭಾರೀ ಪರಿಣಾಮ ಬೀರಿತು.

    2008ರ ನವೆಂಬರ್ 26 ರಂದು ಪಾಕ್‌ ಭಯೋತ್ಪಾದಕರು ಮುಂಬೈನಲ್ಲಿ ದಾಳಿ ನಡೆಸಿದ ಬಳಿಕ ಭಾರತ ಮತ್ತು ಪಾಕಿಸ್ತಾನದ ರಾಜತಾಂತ್ರಿಕ ಸಂಬಂಧಗಳು ಮತ್ತಷ್ಟು ಹದಗೆಟ್ಟಿತು. ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ ಟೂರ್ನಿ ಅಥವಾ ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ. ಕಳೆದ ವರ್ಷ ಪಾಕಿಸ್ತಾನ ತಂಡ ಭಾರತದಲ್ಲಿ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ ಪಾಕ್‌ ತಂಡ ಪಾಲ್ಗೊಂಡಿತ್ತು. ಇದನ್ನೂ ಓದಿ: ನೋವಿನಿಂದ ಬಳಲುತ್ತಿದ್ದರೂ ಸಿಎಸ್‌ಕೆಗಾಗಿ ಆಡ್ತಿದ್ದಾರೆ ಧೋನಿ – ಮಹಿಗೆ ಇರೋ ಆರೋಗ್ಯ ಸಮಸ್ಯೆ ಏನು?

  • 2011ರ ವಿಶ್ವಕಪ್‌ ವೇಳೆ ಟೀಂ ಇಂಡಿಯಾಗೆ ಮಾರ್ಗದರ್ಶನ ನೀಡಿದ್ದ ಗ್ಯಾರಿ ಈಗ ಪಾಕ್‌ ತಂಡದ ಮುಖ್ಯಕೋಚ್‌!

    2011ರ ವಿಶ್ವಕಪ್‌ ವೇಳೆ ಟೀಂ ಇಂಡಿಯಾಗೆ ಮಾರ್ಗದರ್ಶನ ನೀಡಿದ್ದ ಗ್ಯಾರಿ ಈಗ ಪಾಕ್‌ ತಂಡದ ಮುಖ್ಯಕೋಚ್‌!

    – ಟಿ20 ವಿಶ್ವಕಪ್‌ಗೆ ರಣತಂತ್ರ ರೂಪಿಸಲು ಪಿಸಿಬಿ ಪ್ಲ್ಯಾನ್‌

    ಇಸ್ಲಾಮಾಬಾದ್‌: 2011ರ ವಿಶ್ವಕಪ್‌ (World Cup 2011) ಗೆಲುವಿನ ವೇಳೆ ಭಾರತ ತಂಡಕ್ಕೆ ಮಾರ್ಗದರ್ಶನ ನೀಡಿದ್ದ ಮಾಜಿ ಮುಖ್ಯಕೋಚ್‌ ಗ್ಯಾರಿ ಕರ್ಸ್ಟನ್ ಪಾಕಿಸ್ತಾನ ಕ್ರಿಕೆಟ್‌ ತಂಡದ ಮುಖ್ಯಕೋಚ್‌ (New Head Coaches) ಆಗಿ ನೇಮಕಗೊಂಡಿದ್ದಾರೆ.

    ಭಾನುವಾರ (ಇಂದು) ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ವಿಷಯವನ್ನು ಪ್ರಕಟಿಸಿದ್ದಾರೆ. ಇದನ್ನೂ ಓದಿ: ಕುಟುಂಬದೊಂದಿಗೆ ವಿದ್ಯಾರ್ಥಿ ಭವನಕ್ಕೆ ಆಗಮಿಸಿ ದೋಸೆ ಸವಿದ ಕುಂಬ್ಳೆ

    ಗ್ಯಾರಿ ಕರ್ಸ್ಟನ್ (Gary Kirsten) ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಪಾಕ್‌ ತಂಡಕ್ಕೆ ಮುಖ್ಯಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇನ್ನೂ ಆಸ್ಟ್ರೇಲಿಯಾದ ಮಾಜಿ ವೇಗಿ ಜೇಸನ್ ಗಿಲ್ಲೆಸ್ಪಿ ಟೆಸ್ಟ್ ಕ್ರಿಕೆಟ್‌ನ ಮುಖ್ಯಕೋಚ್‌ ಆಗಿದ್ದು, ಪಾಕ್‌ ತಂಡದ ಮಾಜಿ ಆಲ್‌ರೌಂಡರ್ ಅಜರ್ ಮಹಮೂದ್ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್‌ಗೂ ಸಹಾಯ ಕೋಚ್‌ ಆಗಿ ನೇಮಿಸಲಾಗಿದೆ. 2011ರಲ್ಲಿ ಎಂ.ಎಸ್‌ ಧೋನಿ ನಾಯಕತ್ವದಲ್ಲಿ ಭಾರತ ತಂಡ ಏಕದಿನ ವಿಶ್ವಕಪ್‌ ಗೆದ್ದಿತ್ತು.

    ದಕ್ಷಿಣ ಆಫ್ರಿಕಾ ಮೂಲದ ಗ್ಯಾರಿ ಕರ್ಸ್ಟನ್ ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ ಆಶೀಶ್‌ ನೆಹ್ರಾ ಅವರೊಂದಿಗೆ ಗುಜರಾತ್‌ ಟೈಟಾನ್ಸ್‌ ತಂಡದ ಮೆಂಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಪಿಎಲ್‌ ಟೂರ್ನಿ ಮುಗಿಯುತ್ತಿದ್ದಂತೆ ಪಾಕಿಸ್ತಾನ ಕ್ರಿಕೆಟ್‌ ತಂಡವನ್ನು ಸೇರಿಕೊಳ್ಳಲಿದ್ದು, ಟಿ20 ವಿಶ್ವಕಪ್‌ ವೇಳೆಗೆ ತಂಡವನ್ನು ಅಣಿಗೊಳಿಸಲಿದ್ದಾರೆ. ಇದನ್ನೂ ಓದಿ: T20 ವಿಶ್ವಕಪ್‌ಗೆ ಶೀಘ್ರದಲ್ಲೇ ಭಾರತ ತಂಡ ಪ್ರಕಟ; ರೋಹಿತ್‌ ಜೊತೆಗೆ ಆರಂಭಿಕ ಯಾರಾಗ್ತಾರೆ ಅನ್ನೋದೇ ಸಸ್ಪೆನ್ಸ್‌!

    ಅಲ್ಲದೇ ಮುಂದೆ ನಡೆಯುವ ಏಕದಿನ ಹಾಗೂ ಟಿ20 ದ್ವಿಪಕ್ಷೀಯ ಸರಣಿಗಳಿಗೆ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. 2025ಕ್ಕೆ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿ-2025, 2025ರ ಐಸಿಸಿ ಟಿ20 ಏಷ್ಯಾಕಪ್‌, 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ ಟೂರ್ನಿಗಳಿಗೆ ಪಾಕ್‌ ತಂಡದ ಮುಖ್ಯಕೋಚ್‌ ಆಗಿ ಗ್ಯಾರಿ ಕೆಲಸ ಮಾಡಲಿದ್ದಾರೆ ಎಂದು ಪಿಸಿಬಿ ಹೇಳಿದೆ.

    WTCಗೆ ತಯಾರಿ ಮಾಡುವ ಹೊಣೆ:
    2023-25ರ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ಗೆ ಪಾಕ್‌ ತಂಡವನ್ನು ಅಣಿಗೊಳಿಸುವ ಜವಾಬ್ದಾರಿಯೂ ಗ್ಯಾರಿ ಅವರ ಹೆಗಲಿಗಿದೆ. ಜೊತೆಗೆ ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ, ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ ಟೆಸ್ಟ್‌ ಪಂದ್ಯಗಳಿಗೂ ಪಾಕ್‌ ತಂಡವನ್ನು ಮುನ್ನಡೆಸಲಿದ್ದಾರೆ ಮಂಡಳಿ ಹೇಳಿದೆ.

  • ಟಿ20 ವಿಶ್ವಕಪ್‌ಗೆ ಭರ್ಜರಿ ತಯಾರಿ – ಪಾಕಿಸ್ತಾನ ತಂಡಕ್ಕೆ ಸೇನೆಯಿಂದ ತರಬೇತಿ!

    ಟಿ20 ವಿಶ್ವಕಪ್‌ಗೆ ಭರ್ಜರಿ ತಯಾರಿ – ಪಾಕಿಸ್ತಾನ ತಂಡಕ್ಕೆ ಸೇನೆಯಿಂದ ತರಬೇತಿ!

    – ಹಿಗ್ಗಾಮುಗ್ಗಾ ಜಾಡಿಸಿದ ಟೀಂ ಇಂಡಿಯಾ ಫ್ಯಾನ್ಸ್‌

    ಇಸ್ಲಾಮಾಬಾದ್‌: ಜೂನ್‌‌ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ (T20 World Cup 2024) ಟೂರ್ನಿಗಾಗಿ ಪಾಕ್‌ ಕ್ರಿಕೆಟ್‌ ತಂಡ (Pakistan Cricket Team) ಈಗಿನಿಂದಲೇ ಭರ್ಜರಿ ತಯಾರಿ ಶುರು ಮಾಡಿದೆ. ಈ ಬಾರಿ ವಿಶ್ವಕಪ್‌ ಮೇಲೆ ಕಣ್ಣಿಟ್ಟಿರುವ ಪಾಕ್‌ ತಂಡಕ್ಕೆ ಸೇನೆಯಿಂದ ಕಠಿಣ ತರಬೇತಿ ಕೊಡಿಸಲಾಗುತ್ತಿದೆ. ಕ್ರಿಕೆಟ್‌ ಆಟಗಾರರಿಗೆ ಗನ್ ತರಬೇತಿ (Gun Training) ನೀಡಲಾಗುತ್ತಿದೆ.

    ಪಾಕಿಸ್ತಾನ ಕ್ರಿಕೆಟಿಗರು ವಿಶ್ವಕಪ್‌ ಟೂರ್ನಿಗಾಗಿ ಸ್ನೈಪರ್ ಶೂಟಿಂಗ್, ಭಾರವಾದ ಕಲ್ಲು ಹೊತ್ತು ನಡೆಯುವುದು, ಸೈನಿಕರನ್ನ ಬೆನ್ನ ಮೇಲೆ ಹೊತ್ತುಕೊಂಡು ಮುಂದೆ ಸಾಗುವ ಅಭ್ಯಾಸಗಳನ್ನ ಮಾಡುತ್ತಿದ್ದಾರೆ. ಈ ಕುರಿತ ವೀಡಿಯೋ ಮತ್ತು ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ, ಟೀಂ ಇಂಡಿಯಾ ಕ್ರಿಕೆಟ್‌ ಫ್ಯಾನ್ಸ್‌ (Team India Cricket Fans) ಪಾಕ್‌ ಕ್ರಿಕೆಟಿಗರನ್ನ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಅಲ್ಲದೇ ನೆಟ್ಟಿಗರು ಇದೆಲ್ಲಾ ಬೇಕಿತ್ತಾ? ಅನಗತ್ಯ ತರಬೇತಿ ನೀಡಿ ಆಟಗಾರರ ಸಮಯವನ್ನೂ ವ್ಯರ್ಥಮಾಡಿಕೊಳ್ಳುತ್ತಿದೆ ಎಂದು ಕಿಡಿ ಕಾರಿದ್ದಾರೆ.

    ಟಿ20 ವಿಶ್ವಕಪ್​​ಗೆ ಮುಂಚಿತವಾಗಿ ರಾಷ್ಟ್ರೀಯ ಕ್ರಿಕೆಟಿಗರು ಗಾಯಗೊಳ್ಳಬಾರದು ಎಂಬ ಉದ್ದೇಶದಿಂದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ, ಸೇನೆಯ ಮೂಲಕ ಅವರಿಗೆ ತರಬೇತಿ ನೀಡುತ್ತಿದೆ. ಆದ್ರೆ ಪಾಕ್‌ ಸೇನೆಯು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ಕ್ರಿಕೆಟಿಗರು ಸಂಬಂಧವಿಲ್ಲದ ಫಿಟ್ನೆಸ್​ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಆಟಗಾರರು ಸೈನಿಕರಿಗಿಂತ ಭಿನ್ನ. ಆದರೆ ಪಾಕಿಸ್ತಾನ ಕ್ರಿಕೆಟ್​​ ಆಡಳಿತ ಮಂಡಳಿ ಇಂತಹ ಸಾಮಾನ್ಯ ಜ್ಞಾನವನ್ನೂ ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ಆಟಗಾರರಿಗೆ ಅಸಾಧಾರಣ ಸವಾಲು ನೀಡಿದೆ ಎಂದು ದೂರಿದ್ದಾರೆ.

    ಸೈನಿಕರಿಗೆ ಕೊಡುವ ತರಬೇತಿಯನ್ನು ಆಟಗಾರರಿಗೆ ಕೊಟ್ಟರೆ ಅವರು ಗಾಯಗೊಳ್ಳುವುದರಲ್ಲಿ ಯಾವುದೇ ಸಂದೇಹ ಇಲ್ಲ. ಹೀಗಾಗಿ ಅವರಿಗೆ ಬೇರೆ ರೀತಿಯ ತರಬೇತಿ ನೀಡಬೇಕು ಎಂಬುದಾಗಿ ಕ್ರಿಕೆಟ್​ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಇದನ್ನೂ ಓದಿ: T20 World Cup 2024 ವೇಳಾಪಟ್ಟಿ ಬಿಡುಗಡೆ; ಜೂ.9ಕ್ಕೆ ನ್ಯೂಯಾರ್ಕ್‌ನಲ್ಲಿ ಇಂಡೋ-ಪಾಕ್‌ ಕದನ

    ಟಿ20 ವಿಶ್ವಕಪ್‌ ಟೂರ್ನಿ ಎಲ್ಲಿ-ಯಾವಾಗ?
    2024ರ ಟಿ20 ವಿಶ್ವಕಪ್‌ ಟೂರ್ನಿಯು ವೆಸ್ಟ್ ಇಂಡೀಸ್ (West Indies) ಮತ್ತು ಅಮೆರಿಕದ (USA) ಆತಿಥ್ಯದಲ್ಲಿ ಜೂನ್‌ 1 ರಿಂದ ಜೂನ್‌ 29ರ ವರೆಗೆ ನಡೆಯಲಿದೆ. ಈ ಬಾರಿ 16 ರಿಂದ 20ಕ್ಕೆ ತಂಡಗಳ ಸಂಖ್ಯೆಯನ್ನು ಹೆಚ್ಚಿಸಿದ್ದು, ಒಟ್ಟು 4 ಗುಂಪುಗಳಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ. ಅಲ್ಲದೇ ಸೂಪರ್‌-12 ಹಂತವನ್ನು ಸೂಪರ್‌-8ಗೆ ಇಳಿಸಲಾಗಿದೆ. ಸೂಪರ್‌-8 ಗುಂಪಿನಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ.

    ಜೂನ್‌ 1 ರಿಂದ 18ರ ವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದೆ. ಜೂನ್‌ 19 ರಿಂದ 24ರ ವರೆಗೆ ಸೂಪರ್‌-8 ಪಂದ್ಯಗಳು, ಜೂನ್‌ 26 ಮತ್ತು ಜೂನ್‌ 27 ರಂದು ಸೆಮಿಫೈನಲ್‌ ಪಂದ್ಯಗಳು ನಡೆಯಲಿದ್ದು, ಜೂನ್‌ 29ರಂದು ಬಾರ್ಬಡೋಸ್ ಮೈದಾನದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ. ಇದನ್ನೂ ಓದಿ: T20 World Cup 2024: ಟೀಂ ಇಂಡಿಯಾ ಆಯ್ಕೆಗೆ ಡೆಡ್‌ಲೈನ್‌ ಫಿಕ್ಸ್‌

  • ಕಳಪೆ ಪ್ರದರ್ಶನದಿಂದ ಶಾಹೀನ್‌ ಶಾಗೆ ತಲೆದಂಡ – ಮತ್ತೆ ನಾಯಕನ ಪಟ್ಟಕ್ಕೇರಿದ ಬಾಬರ್‌ ಆಜಂ

    ಕಳಪೆ ಪ್ರದರ್ಶನದಿಂದ ಶಾಹೀನ್‌ ಶಾಗೆ ತಲೆದಂಡ – ಮತ್ತೆ ನಾಯಕನ ಪಟ್ಟಕ್ಕೇರಿದ ಬಾಬರ್‌ ಆಜಂ

    ಇಸ್ಲಾಮಾಬಾದ್‌: 2023ರ ಏಕದಿನ ವಿಶ್ವಕಪ್‌ ಟೂರ್ನಿ ಬಳಿಕ ನಾಯಕತ್ವದಿಂದ ಕೆಳಗಿಳಿದಿದ್ದ ಪಾಕ್‌ ಕ್ರಿಕೆಟಿಗ ಬಾಬರ್‌ ಆಜಂ (Babar Azam) ಅವರಿಗೆ ಮತ್ತೆ ವೈಟ್‌ಬಾಲ್‌ ಕ್ರಿಕೆಟ್‌ (T20 and ODI) ನಾಯಕತ್ವದ ಹೊಣೆ ನೀಡಲಾಗಿದೆ.

    ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಇದೇ ವರ್ಷ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್ ಟೂರ್ನಿ ಗಮನದಲ್ಲಿಟ್ಟು ವೇಗಿ ಶಾ ಅಫ್ರಿದಿ ಅವರನ್ನ ಕೆಳಗಿಳಿಸಿದೆ. ಮತ್ತೆ ಸ್ಟಾರ್‌ ಬ್ಯಾಟರ್‌ ಬಾಬರ್‌ ಆಜಂಗೆ ನಾಯಕತ್ವದ ಹೊಣೆ ನೀಡಿದೆ.  

    ನ್ಯೂಜಿಲೆಂಡ್‌ ವಿರುದ್ಧ ಟಿ20 ಸರಣಿಯಲ್ಲಿ ಎದುರಿಸಿದ ಹೀನಾಯ ಸೋಲು ಹಾಗೂ 2024ರ ಪಾಕಿಸ್ತಾನ್‌ ಸೂಪರ್‌ ಲೀಗ್‌ (PSL) ಟೂರ್ನಿಯಲ್ಲಿ ನೀಡಿರುವ ಕಳಪೆ ಪ್ರದರ್ಶನದಿಂದಾಗಿ ಪಿಸಿಬಿ, ಶಾಹೀನ್‌ ಶಾ ಅಫ್ರಿದಿ ಅವರನ್ನ ಕ್ಯಾಪ್ಟನ್‌ ಪಟ್ಟದಿಂದ ಕಿತ್ತೊಗೆದಿದೆ. ಶಾಹೀನ್‌ ಶಾ ಅಫ್ರಿದಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ಯಾಪ್ಟನ್ಸಿ ಅಭಿಯಾನ ಬಹುಬೇಗ ಅಂತ್ಯಗೊಂಡಿದ್ದು, ಕೇವಲ ಒಂದು ಸರಣಿಗೆ ಮಾತ್ರವೇ ಸೀಮಿತವಾಗಿದೆ. ಇದೇ ವರ್ಷ ಆರಂಭದಲ್ಲಿ ನ್ಯೂಜಿಲೆಂಡ್‌ ಎದುರು 5 ಪಂದ್ಯಗಳ ಟಿ20 ಕ್ರಿಕೆಟ್‌ (T20 Cricket) ಸರಣಿಯಲ್ಲಿ ಅಫ್ರಿದಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ್ದರು. ಸರಣಿಯಲ್ಲಿ ಪಾಕ್ 1-4 ಅಂತರದ ಹೀನಾಯ ಸೋಲನುಭವಿಸಿತ್ತು.

    ಕಳೆದೆ ಬಾರಿ ಲಾಹೋರ್‌ ಕಲಂದರ್ಸ್‌ ತಂಡಕ್ಕೆ ಪಾಕಿಸ್ತಾನ್‌ ಸೂಪರ್‌ ಲೀಗ್‌ ಕಿರೀಟ ಗೆದ್ದುಕೊಟ್ಟಿದ್ದ ಶಾಹೀನ್‌ ಶಾ ಅಫ್ರಿದಿ ಈ ಬಾರಿ ಅಂಥದ್ದೇ ಫಲಿತಾಂಶ ತರಲು ಸಂಪೂರ್ಣ ವಿಫಲರಾದರು. ಪಿಎಸ್‌ಎಲ್‌ 2024 ಟೂರ್ನಿಯಲ್ಲಿ ಲಾಹೋರ್‌ ಕಲಂದರ್ಸ್‌ ತಂಡ ಆಡಿದ 10 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಮಾತ್ರವೇ ಗೆಲ್ಲಲು ಶಕ್ತವಾಯಿತು. ಪರಿಣಾಮ ಶಾಹೀನ್‌ ಶಾ ಅಫ್ರಿದಿ ಪಾಕಿಸ್ತಾನ ತಂಡದ ಕ್ಯಾಪ್ಟನ್ಸಿ ಕಳೆದುಕೊಂಡಿದ್ದಾರೆ.

    ಕಳಪೆ ಪ್ರದರ್ಶನದಿಂದ ತಲೆದಂಡ:
    ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಬಾಬರ್‌ ಆಜಂ ನಾಯಕತ್ವದ ಪಾಕ್‌ ತಂಡ ಲೀಗ್‌ ಸುತ್ತಿನಲ್ಲೇ ಹೊರಬಿದ್ದಿತ್ತು. ಬಾಬರ್‌ ಆಜಂ 9 ಪಂದ್ಯಗಳಲ್ಲಿ 40 ಸರಾಸರಿಯೊಂದಿಗೆ 82.90 ಸ್ಟ್ರೈಕ್‌ರೇಟ್‌ನಲ್ಲಿ 320 ರನ್ ಗಳಿಸಿದ್ದರು. ಇದಕ್ಕೆ ತಲೆದಂಡವಾಗಿ ಬಾಬರ್‌ ಅವರನ್ನ ನಾಯಕ ಸ್ಥಾನದಿಂದ ಕಿತ್ತೊಗೆಯಲಾಗಿತ್ತು.

  • ಇನ್ಮುಂದೆ ನಿಮ್ಮ ಅದ್ಭುತ ಪ್ರತಿಭೆ ಪ್ರದರ್ಶಿಸಬಹುದು – ಬಾಬರ್‌ ಆಜಂ ಹೊಗಳಿದ ಬೆಂಗ್ಳೂರು ಮೂಲದ ರಚಿನ್‌

    ಇನ್ಮುಂದೆ ನಿಮ್ಮ ಅದ್ಭುತ ಪ್ರತಿಭೆ ಪ್ರದರ್ಶಿಸಬಹುದು – ಬಾಬರ್‌ ಆಜಂ ಹೊಗಳಿದ ಬೆಂಗ್ಳೂರು ಮೂಲದ ರಚಿನ್‌

    ಮುಂಬೈ: 2023ರ ವಿಶ್ವಕಪ್ (2023 World Cup) ಟೂರ್ನಿಯಲ್ಲಿ ಪಾಕಿಸ್ತಾನ ಕಳಪೆ ಪ್ರದರ್ಶನ ತೋರಿದ್ದು, ಲೀಗ್ ಸುತ್ತಿನಲ್ಲೇ ಹೊರಬಿದ್ದಿತು. ಇನ್ನೂ ಸೋಲಿನ ಹೊಣೆಹೊತ್ತು ಬಾಬರ್‌ ಆಜಂ (Babar Azam) ಪಾಕ್‌ ತಂಡದ ಎಲ್ಲಾ ಸ್ವರೂಪದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಬೆಂಗಳೂರು ಮೂಲದ ಹಾಗೂ ಕಿವೀಸ್‌ ಸ್ಟಾರ್‌ ಪ್ಲೇಯರ್‌ ರಚಿನ್‌ ರವೀಂದ್ರ (Rachin Ravindr) ಪ್ರತಿಕ್ರಿಯಿಸಿದ್ದಾರೆ.

    ಈ ಬಗ್ಗೆ ಸೋಶಿಯಲ್‌ ಮೀಡಿಯಾ X ಖಾತೆಯಲ್ಲಿ ಬರೆದುಕೊಂಡಿರುವ ರಚಿನ್‌ ರವೀಂದ್ರ, ನೀವು ಅತ್ಯುತ್ತಮ ಬ್ಯಾಟ್ಸ್‌ಮ್ಯಾನ್‌ ನಾಯಕತ್ವದಿಂದ ಕೆಳಗಿಳಿಯುವುದು ಬುದ್ಧಿವಂತಿಕೆಯ ಲಕ್ಷಣ. ಈಗ ನಿಮಗೆ ಹೆಚ್ಚಿನ ಒತ್ತಡವಿಲ್ಲ. ನಿಮ್ಮ ಅದ್ಭುತ ಪ್ರತಿಭೆಯನ್ನ ಪ್ರದರ್ಶಿಸಲು ಮತ್ತು ಆಟಗಾರನಾಗಿ ಸಾಧನೆಗಳನ್ನು ಮಾಡಲು ಗಮನಹರಿಸಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: World Cup Semifinal: 48 ವರ್ಷಗಳ ವಿಶ್ವಕಪ್‌ ಇತಿಹಾಸದಲ್ಲಿ ಹೊಸ ಮೈಲುಗಲ್ಲು‌ ಸ್ಥಾಪಿಸಿದ ಶಮಿ.!

    ಬಾಬರ್‌ ಆಜಂ ನವೆಂಬರ್‌ 15 ರಂದು ಪಾಕಿಸ್ತಾನ ಕ್ರಿಕೆಟ್‌ ತಂಡದ ಎಲ್ಲಾ ಸ್ವರೂಪದ (ಟೆಸ್ಟ್, ಏಕದಿನ, ಟಿ20) ನಾಯಕತ್ವಕ್ಕೂ ರಾಜೀನಾಮೆ ನೀಡಿದ್ದರು. ಈ ಮಾಹಿತಿಯನ್ನು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯನ್ನೂ ಹಂಚಿಕೊಂಡಿದ್ದರು.

    ಅಫ್ರಿದಿಗೆ ಟಿ20 ನಾಯಕನ ಪಟ್ಟ: ಬಾಬರ್‌ ಆಜಂ ಮೂರು ಸ್ವರೂಪದ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಬಳಿಕ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ವೇಗಿ ಶಾಹೀನ್‌ ಶಾ ಅಫ್ರಿದಿ (Shaheen Shah Afridi) ಅವರಿಗೆ ಟಿ20 ತಂಡದ ನಾಯಕತ್ವದ ಹೊಣೆ ನೀಡಿದೆ. ಶಾನ್‌ ಮಸೂದ್‌ (Shan Masood) ಟೆಸ್ಟ್‌ ತಂಡವನ್ನು ಮುನ್ನಡೆಸಲಿದ್ದಾರೆ. ಏಕದಿನ ಕ್ರಿಕೆಟ್‌ ತಂಡಕ್ಕೆ ಶೀಘ್ರದಲ್ಲೇ ನಾಯಕನನ್ನ ನೇಮಿಸುವುದಾಗಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 34 ವರ್ಷದ ಶಾನ್‌ ಮಸೂದ್‌ ಪಾಕಿಸ್ತಾನ ತಂಡದ ಪರ 30 ಟೆಸ್ಟ್‌ ಪಂದ್ಯಗಳನ್ನಾಡಿದ್ದಾರೆ. 28.52 ಸರಾಸರಿಯಲ್ಲಿ 1,597 ರನ್‌ ಗಳಿಸಿದ್ದಾರೆ. 156 ರನ್‌ ಶಾನ್‌ ಮಸೂದ್‌ ಅವರ ಗರಿಷ್ಠ ಸ್ಕೋರ್‌ ಆಗಿದ್ದಾರೆ. ಇನ್ನೂ ಶಾಹೀನ್‌ ಶಾ ಅಫ್ರಿದಿ ಅವರು 53 ಏಕದಿನ ಪಂದ್ಯ ಮತ್ತು 52 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 104 ರನ್‌ ಗಳಿಸಿ 64 ವಿಕೆಟ್‌ಗಳನ್ನು ಪಡೆದಿದ್ದಾರೆ.

    ಬಾಬರ್‌ ಹೇಳಿಕೆಯಲ್ಲಿ ಏನಿತ್ತು?
    2019ರಲ್ಲಿ ಪಾಕಿಸ್ತಾನ ತಂಡವನ್ನು (Pakistan Cricket Team) ಮುನ್ನಡೆಸಲು ನಾನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನಿಂದ ಕರೆ ಸ್ವೀಕರಿಸಿದ ಕ್ಷಣವನ್ನು ನಾನು ಈಗಲೂ ನೆನಪಿಸಿಕೊಳ್ಳುತ್ತೇನೆ. ಕಳೆದ 4 ವರ್ಷಗಳಲ್ಲಿ ನಾನು ಮೈದಾನದಲ್ಲಿ ಮತ್ತು ಮೈದಾನದ ಹೊರೆಗೆ ಅನೇಕ ಏಳು-ಬೀಳುಗಳನ್ನು ಅನುಭವಿಸಿದ್ದೇನೆ. ಆದಾಗ್ಯೂ ಕ್ರಿಕೆಟ್ ಜಗತ್ತಿನಲ್ಲಿ ತುಂಬು ಹೃದಯದಿಂದ ಅದೇ ಉತ್ಸಾಹ ಮತ್ತು ಪಾಕಿಸ್ತಾನದ ಘನತೆ ಉಳಿಸಿಕೊಳ್ಳುವ ಸದುದ್ದೇಶ ಹೊಂದಿದ್ದೇನೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ರಾತ್ರಿ ನಾನು ಭಾರತ – ನ್ಯೂಜಿಲೆಂಡ್‌ ಸೆಮಿಫೈನಲ್‌ ವೀಕ್ಷಿಸಿದ್ದೆ: ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ

    ಸಹ ಆಟಗಾರರು, ಕೋಚ್‌ಗಳು ಮತ್ತು ನಿರ್ವಹಣಾ ಮಂಡಳಿಯ ಸಾಮೂಹಿಕ ಪ್ರಯತ್ನದ ಫಲವಾಗಿ ವೈಟ್‌ಬಾಲ್ ಮಾದರಿಯ ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಸ್ಥಾನವನ್ನೂ ತಲುಪಿದ್ದೆ. ಈ ಜರ್ನಿ ಸಮಯದಲ್ಲಿ ನನಗೆ ಬೆಂಬಲ ನೀಡಿದ್ದನ್ನು ನಾನು ಎಂದಿಗೂ ಮರೆಯುವುದಿಲ್ಲ. ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ನನ್ನ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ ಎಂದು ಭಾವುಕವಾಗಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ನಾನಿಂದು ಪಾಕಿಸ್ತಾನ ಕ್ರಿಕೆಟ್ ತಂಡದ ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ. ಇದು ಕಠಿಣ ನಿರ್ಧಾರ ಆದರೆ ಈ ಕರೆಗೆ ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ನಾನು ಮೂರು ಮಾದರಿಗಳಲ್ಲಿ ಆಟಗಾರನಾಗಿ ಪಾಕಿಸ್ತಾನ ತಂಡ ಪ್ರತಿನಿಧಿಸುವುದನ್ನು ಮುಂದುವರಿಸುತ್ತೇನೆ. ನನ್ನ ಅನುಭವ ಮತ್ತು ಸಮರ್ಪಣೆಯೊಂದಿಗೆ ಹೊಸ ನಾಯಕ ಮತ್ತು ತಂಡವನ್ನು ಬೆಂಬಲಿಸುತ್ತೇನೆ. ಇಷ್ಟು ದಿನ ಈ ಮಹತ್ವದ ಜವಾಬ್ದಾರಿ ನನಗೆ ವಹಿಸಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನನ್ನ ಪ್ರಾಮಾಣಿಕ ಧನ್ಯವಾದ ತಿಳಿಸುತ್ತೇನೆ ಎಂಬುದಾಗಿ ತಮ್ಮ ಹೇಳಿಕೆಯಲ್ಲಿ ತಿಳಿದ್ದಾರೆ. ಇದನ್ನೂ ಓದಿ: ತುಮಕೂರಿನಲ್ಲೊಂದು ಕ್ರಿಕೆಟ್ ಪ್ರೇಮಿಗಳ ಮದುವೆ – ಮಂಟಪದಲ್ಲೇ ಇಂಡೋ-ಕಿವೀಸ್ ಸೆಮಿ ಫೈನಲ್ ವೀಕ್ಷಣೆ

    2023ರ ವಿಶ್ವಕಪ್ ಟೂರ್ನಿಯಲ್ಲಿ 9ರ ಪೈಕಿ ಕೇವಲ 4 ಲೀಗ್ ಪಂದ್ಯಗಳಲ್ಲಿ ಮಾತ್ರವೇ ಗೆಲುವು ಸಾಧಿಸಿತು. ಇದರಿಂದ ಲೀಗ್ ಸುತ್ತಿನಲ್ಲೇ ಹೊರಬಿದ್ದಿತು. ಬಾಬರ್ ಆಜಂ 9 ಪಂದ್ಯಗಳಲ್ಲಿ 40 ಸರಾಸರಿಯೊಂದಿಗೆ 82.90 ಸ್ಟ್ರೈಕ್‌ರೇಟ್‌ನಲ್ಲಿ 320 ರನ್ ಗಳಿಸಿದ್ದರು.

  • ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನಕ್ಕೆ ತಲೆದಂಡ – ಪಾಕ್‌ ತಂಡದ ನಾಯಕತ್ವಕ್ಕೆ ಬಾಬರ್‌ ಆಜಂ ಗುಡ್‌ಬೈ

    ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನಕ್ಕೆ ತಲೆದಂಡ – ಪಾಕ್‌ ತಂಡದ ನಾಯಕತ್ವಕ್ಕೆ ಬಾಬರ್‌ ಆಜಂ ಗುಡ್‌ಬೈ

    ಇಸ್ಲಾಮಾಬಾದ್‌: ವಿಶ್ವಕಪ್‌-2023ರ ಟೂರ್ನಿಯಲ್ಲಿ (World Cup 2023) ಪಾಕಿಸ್ತಾನ ಕಳಪೆ ಪ್ರದರ್ಶನ ತೋರಿದ್ದು, ಲೀಗ್‌ ಸುತ್ತಿನಲ್ಲೇ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಸೋಲಿನ ಹೊಣೆ ಹೊತ್ತಿರುವ ಪಾಕ್‌ ತಂಡದ ನಾಯಕ ಬಾಬರ್‌ ಆಜಂ (Babar Azam) ತನ್ನ ಎಲ್ಲಾ ಸ್ವರೂಪದ (ಟೆಸ್ಟ್‌, ಏಕದಿನ, ಟಿ20) ನಾಯಕತ್ವಕ್ಕೂ ರಾಜೀನಾಮೆ ನೀಡಿದ್ದಾರೆ.

    ಬಾಬಾರ್‌ ಆಜಂ ಈ ಮಾಹಿತಿಯನ್ನು ತಮ್ಮ ಸೋಶಿಯಲ್‌ ಮೀಡಿಯಾ (Social Media) X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಂದು ನಕ್ಕಿದ್ದೆ, ನೀವಿಂದು ನನ್ನ ಹೃದಯ ಮುಟ್ಟಿದ್ದೀರಿ – ತನ್ನ ದಾಖಲೆ ಮುರಿದ ಕೊಹ್ಲಿ ಅಭಿನಂದಿಸಿದ ಕ್ರಿಕೆಟ್‌ ದೇವರು

    2019ರಲ್ಲಿ ಪಾಕಿಸ್ತಾನ ತಂಡವನ್ನು (Pakistan Team) ಮುನ್ನಡೆಸಲು ನಾನು ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ನಿಂದ ಕರೆ ಸ್ವೀಕರಿಸಿದ ಕ್ಷಣವನ್ನು ನಾನು ಈಗಲೂ ನೆನಪಿಸಿಕೊಳ್ಳುತ್ತೇನೆ. ಕಳೆದ 4 ವರ್ಷಗಳಲ್ಲಿ ನಾನು ಮೈದಾನದಲ್ಲಿ ಮತ್ತು ಮೈದಾನದ ಹೊರೆಗೆ ಅನೇಕ ಏಳು-ಬೀಳುಗಳನ್ನು ಅನುಭವಿಸಿದ್ದೇನೆ. ಆದಾಗ್ಯೂ ಕ್ರಿಕೆಟ್‌ ಜಗತ್ತಿನಲ್ಲಿ ತುಂಬು ಹೃದಯದಿಂದ ಅದೇ ಉತ್ಸಾಹ ಮತ್ತು ಪಾಕಿಸ್ತಾನದ ಘನತೆ ಉಳಿಸಿಕೊಳ್ಳುವ ಸದುದ್ದೇಶ ಹೊಂದಿದ್ದೇನೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

    ಸಹ ಆಟಗಾರರು, ಕೋಚ್‌ಗಳು ಮತ್ತು ನಿರ್ವಹಣಾ ಮಂಡಳಿಯ ಸಾಮೂಹಿಕ ಪ್ರಯತ್ನದ ಫಲವಾಗಿ ವೈಟ್‌ಬಾಲ್‌ ಮಾದರಿಯ ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಸ್ಥಾನವನ್ನೂ ತಲುಪಿದ್ದೆ. ಈ ಜರ್ನಿ ಸಮಯದಲ್ಲಿ ನನಗೆ ಬೆಂಬಲ ನೀಡಿದ್ದನ್ನು ನಾನು ಎಂದಿಗೂ ಮರೆಯುವುದಿಲ್ಲ. ಪಾಕಿಸ್ತಾನ ಕ್ರಿಕೆಟ್‌ ಅಭಿಮಾನಿಗಳಿಗೆ (Pakistan Cricket Fans) ನನ್ನ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ ಎಂದು ಭಾವುಕವಾಗಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: World Cup 2023: ಗೆದ್ದು ಆಟ ಮುಗಿಸಿದ ಇಂಗ್ಲೆಂಡ್‌ – ಹೀನಾಯ ಸೋಲಿನೊಂದಿಗೆ ಪಾಕ್‌ ಮನೆಗೆ

    ನಾನಿಂದು ಪಾಕಿಸ್ತಾನ ಕ್ರಿಕೆಟ್‌ ತಂಡದ ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ. ಇದು ಕಠಿಣ ನಿರ್ಧಾರ ಆದರೆ ಈ ಕರೆಗೆ ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ನಾನು ಮೂರು ಮಾದರಿಗಳಲ್ಲಿ ಆಟಗಾರನಾಗಿ ಪಾಕಿಸ್ತಾನ ತಂಡ ಪ್ರತಿನಿಧಿಸುವುದನ್ನು ಮುಂದುವರಿಸುತ್ತೇನೆ. ನನ್ನ ಅನುಭವ ಮತ್ತು ಸಮರ್ಪಣೆಯೊಂದಿಗೆ ಹೊಸ ನಾಯಕ ಮತ್ತು ತಂಡವನ್ನು ಬೆಂಬಲಿಸುತ್ತೇನೆ. ಇಷ್ಟು ದಿನ ಈ ಮಹತ್ವದ ಜವಾಬ್ದಾರಿ ನನಗೆ ವಹಿಸಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನನ್ನ ಪ್ರಾಮಾಣಿಕ ಧನ್ಯವಾದ ತಿಳಿಸುತ್ತೇನೆ ಎಂಬುದಾಗಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    2023ರ ವಿಶ್ವಕಪ್‌ ಟೂರ್ನಿಯಲ್ಲಿ 9ರ ಪೈಕಿ ಕೇವಲ 4 ಲೀಗ್‌ ಪಂದ್ಯಗಳಲ್ಲಿ ಮಾತ್ರವೇ ಗೆಲುವು ಸಾಧಿಸಿತು. ಇದರಿಂದ ಲೀಗ್‌ ಸುತ್ತಿನಲ್ಲೇ ಹೊರಬಿದ್ದಿತು. ಬಾಬರ್‌ ಆಜಂ 9 ಪಂದ್ಯಗಳಲ್ಲಿ 40 ಸರಾಸರಿಯೊಂದಿಗೆ 82.90 ಸ್ಟ್ರೈಕ್‌ರೇಟ್‌ನಲ್ಲಿ 320 ರನ್ ಗಳಿಸಿದ್ದರು.

  • ಹೀನಾಯ ಸೋಲಿನ ಬೆನ್ನಲ್ಲೇ ಪಾಕ್‌ಗೆ ಮತ್ತೆ ಶಾಕ್‌ – ಗುಡ್‌ಬೈ ಹೇಳಿದ ಬೌಲಿಂಗ್‌ ಕೋಚ್‌

    ಹೀನಾಯ ಸೋಲಿನ ಬೆನ್ನಲ್ಲೇ ಪಾಕ್‌ಗೆ ಮತ್ತೆ ಶಾಕ್‌ – ಗುಡ್‌ಬೈ ಹೇಳಿದ ಬೌಲಿಂಗ್‌ ಕೋಚ್‌

    ಇಸ್ಲಾಮಾಬಾದ್‌: 2023ರ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ಹೀನಾಯ ಸೋಲಿನೊಂದಿಗೆ ತವರಿಗೆ ಮರಳಿದ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ತಂಡದ ಮಾಜಿ ವೇಗಿ ಹಾಗೂ ಪಾಕ್‌ ತಂಡಕ್ಕೆ ಬೌಲಿಂಗ್‌ ಕೋಚ್‌ ಆಗಿದ್ದ ಮೊರ್ನೆ ಮೊರ್ಕೆಲ್ (Morne Morkel) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ಪ್ರಕಟಿಸಿದೆ.

    ದಕ್ಷಿಣ ಆಫ್ರಿಕಾ ತಂಡದ ಮಾಜಿ ವೇಗಿಯೂ ಆಗಿದ್ದ ಮೊರ್ಕೆಲ್‌ ಪ್ರಸಕ್ತ ವರ್ಷದ ಜೂನ್‌ ತಿಂಗಳಲ್ಲಿ 6 ತಿಂಗಳ ಒಪ್ಪಂದದ ಮೇರೆಗೆ ಪಾಕಿಸ್ತಾನ ತಂಡಕ್ಕೆ ಬೌಲಿಂಗ್‌ ಕೋಚ್‌ (Pakistans Bowling Coach) ಆಗಿ ನೇಮಕಗೊಂಡಿದ್ದರು. ಶೀಘ್ರದಲ್ಲೇ ಮೊರ್ಕೆಲ್‌ ಸ್ಥಾನಕ್ಕೆ ಬದಲಿ ಕೋಚ್‌ ನೇಮಿಸುವುದಾಗಿ ಮಂಡಳಿ ತಿಳಿಸಿದೆ. ಇದನ್ನೂ ಓದಿ: Six In Six – ಒಂದೇ ಓವರ್‌ನಲ್ಲಿ 6 ವಿಕೆಟ್‌ ಕಿತ್ತು ಇತಿಹಾಸ ಸೃಷ್ಟಿಸಿದ ಆಸೀಸ್‌ ಕ್ರಿಕೆಟಿಗ

    ಪಾಕಿಸ್ತಾನ ತಂಡವು ಇದೇ ವರ್ಷದ ಡಿಸೆಂಬರ್‌ 14 ರಿಂದ 2024ರ ಜನವರಿ 7ರ ವರೆಗೆ ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ. ಅಷ್ಟರಲ್ಲಿ ಬದಲಿ ಕೋಚ್‌ ನೇಮಕ ಮಾಡುವುದಾಗಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: World Cup: ಈ ದಾಖಲೆ ಬರೆದ ಭಾರತದ ಮೊದಲ ಕ್ಯಾಪ್ಟನ್‌ ರೋಹಿತ್‌ ಶರ್ಮಾ

    ಮೊರ್ಕೆಲ್‌ ಬೌಲಿಂಗ್‌ ಕೋಚ್‌ ಆಗಿ ನಿಯೋಜನೆಗೊಂಡ ಬಳಿಕ ಶ್ರೀಲಂಕಾ ವಿರುದ್ಧ ನಡೆದ 2 ಟೆಸ್ಟ್‌ ಸರಣಿಗೆ ಕೋಚ್‌ ಆಗಿದ್ದರು. ಆಗ ಪಾಕಿಸ್ತಾನ 2-0 ಅಂತರದಲ್ಲಿ ಲಂಕಾ ವಿರುದ್ಧ ಸರಣಿ ಗೆದ್ದುಕೊಂಡಿತ್ತು. ಆ ನಂತರ ಅಫ್ಘಾನಿಸ್ತಾನ ವಿರುದ್ಧ ನಡೆದ ಏಕದಿನ ಸರಣಿಯಲ್ಲೂ ತವರಿನಲ್ಲೇ ವೈಟ್‌ವಾಶ್‌ ಮಾಡಿತ್ತು. ಆ ಬಳಿಕ ಮೊರ್ಕೆಲ್‌ ಏಕದಿನ ಏಷ್ಯಾಕಪ್‌ ಸಂದರ್ಭದಲ್ಲೂ ಕೋಚ್‌ ಆಗಿದ್ದರು. ಆದ್ರೆ ಪಾಕ್‌ ಏಷ್ಯಾಕಪ್‌ನಲ್ಲಿ ಸೂಪರ್‌ ಫೋರ್‌ ಹಂತದಲ್ಲಿ ಶ್ರೀಲಂಕಾ ವಿರುದ್ಧ ಸೋತು ಫೈನಲ್‌ ಪ್ರವೇಶಿಸದೇ ಹಿಂದಿರುಗಿತ್ತು. ಇದೀಗ ವಿಶ್ವಕಪ್‌ ಟೂರ್ನಿಯಲ್ಲಿ ಲೀಗ್‌ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿದೆ.

    ವಿಶ್ವಕಪ್‌ ಟೂರ್ನಿಯಲ್ಲಿ 9 ಲೀಗ್‌ ಪಂದ್ಯಗಳನ್ನಾಡಿದ ಪಾಕ್‌ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ 5ರಲ್ಲಿ ಸೋಲನುಭವಿಸಿತು. ಕೊನೆಯ ಪಂದ್ಯದಲ್ಲೂ ಗ್ಲೆಂಡ್‌ ವಿರುದ್ಧ ಹೀನಾಯ ಸೋಲಿನೊಂದಿಗೆ ವಿಶ್ವಕಪ್‌ ಟೂರ್ನಿಗೆ ವಿದಾಯ ಹೇಳಿತ್ತು. ಇದನ್ನೂ ಓದಿ: World Cup 2023: ಅರ್ಧಶತಕ ಸಿಡಿಸಿದ್ರೂ ಸಚಿನ್‌ ದಾಖಲೆ ಸರಿಗಟ್ಟಿದ ಚೇಸ್‌ ಮಾಸ್ಟರ್‌