Tag: PBKSVSRCB

  • IPL 2024: ಕೊಹ್ಲಿ ಸ್ಫೋಟಕ ಬ್ಯಾಟಿಂಗ್; ಆರ್​ಸಿಬಿಗೆ 60 ರನ್‌ಗಳ ಭರ್ಜರಿ ಜಯ

    IPL 2024: ಕೊಹ್ಲಿ ಸ್ಫೋಟಕ ಬ್ಯಾಟಿಂಗ್; ಆರ್​ಸಿಬಿಗೆ 60 ರನ್‌ಗಳ ಭರ್ಜರಿ ಜಯ

    ಧರ್ಮಶಾಲಾ: ಇಲ್ಲಿನ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳ ನಡುವೆ ನಡೆದ ಐಪಿಎಲ್‌ (IPL 2024) ಪಂದ್ಯದಲ್ಲಿ ಆರ್​ಸಿಬಿ ತಂಡ 60 ರನ್‌ಗಳ ಭರ್ಜರಿ ಜಯಗಳಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 241 ರನ್‌ಗಳನ್ನು ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 17 ಓವರ್‌ಗಳಲ್ಲಿ 181 ರನ್‌ ಗಳಿಸಿ ಆಲೌಟ್‌ ಆಯಿತು.

    ತಂಡದ ಪರ ರಿಲೀ ರೋಸೌವ್ 27 ಎಸೆತಗಳಲ್ಲಿ 3 ಸಿಕ್ಸರ್‌ 9 ಬೌಂಡರಿ ನೆರವಿನಿಂದ 61 ರನ್‌ ಕಲೆ ಹಾಕಿದರು. ಜಾನಿ ಬೈರ್‌ಸ್ಟೋವ್ 16 ಎಸೆತಗಳಲ್ಲಿ 27 ರನ್‌ ಕಲೆ ಹಾಕಿದರು. ಶಶಾಂಕ್‌ ಸಿಂಗ್‌ 19 ಎಸೆತಗಳಲ್ಲಿ 37 ರನ್‌ ಗಳಿಸಿರದು.

    ಆರ್‌ಸಿಬಿ ಪರ ಸ್ವಪ್ನಿಲ್ ಸಿಂಗ್, ಕರ್ಣ್ ಶರ್ಮಾ, ಲಾಕಿ ಫರ್ಗುಸನ್ ತಲಾ 2 ಮೊಹಮ್ಮದ್ ಸಿರಾಜ್ 3 ವಿಕೆಟ್‌ ಕಿತ್ತರು.

    ಆರ್‌ಸಿಬಿ ಪರ ವಿರಾಟ್‌ ಕೊಹ್ಲಿ (Virat Kohli) 47 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್‌ಗಳ ನೆರವಿನಿಂದ 92 ರನ್ ಗಳಿಸಿ ಶತಕ ವಂಚಿತರಾದರು. ರಜತ್ ಪಾಟಿದಾರ್ 23 ಎಸೆತಗಳಲ್ಲಿ 6 ಸಿಕ್ಸರ್‌ 3 ಬೌಂಡರಿ ಸಿಡಿಸಿ 55 ರನ್‌ಗಳನ್ನು ಕಲೆ ಹಾಕಿದರು. ಕ್ಯಾಮೆರಾನ್ ಗ್ರೀನ್ 27 ಎಸೆತಗಳಲ್ಲಿ ತಂಡಕ್ಕೆ 46 ರನ್‌ಗಳ ಕೊಡುಗೆ ನೀಡಿದರು.

    ಪಂಜಾಬ್ ಪರ ಹರ್ಷಲ್ ಪಟೇಲ್ 3, ವಿದ್ವತ್ ಕಾವೇರಪ್ಪ 2, ಸ್ಯಾಮ್ ಕರನ್ ಹಾಗೂ ಅರ್ಷ್‌ದೀಪ್ ಸಿಂಗ್ ವಿಕೆಟ್‌ ಕಿತ್ತರು.