Tag: PBKS

  • ಪ್ಲೇ ಆಫ್ ಸನಿಹಕ್ಕೆ ಡೆಲ್ಲಿ – ಪಂಜಾಬ್ ಕನಸು ನುಚ್ಚುನೂರು

    ಪ್ಲೇ ಆಫ್ ಸನಿಹಕ್ಕೆ ಡೆಲ್ಲಿ – ಪಂಜಾಬ್ ಕನಸು ನುಚ್ಚುನೂರು

    ಮುಂಬೈ: ಪ್ಲೇ ಆಫ್‍ಗೇರಲು ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಉತ್ತಮ ನಿರ್ವಹಣೆ ತೋರಿದ ಡೆಲ್ಲಿ ತಂಡ ಪಂಜಾಬ್ ವಿರುದ್ಧ 17 ರನ್‍ಗಳ ಅಂತರದ ಗೆಲುವು ದಾಖಲಿಸಿತು. ಈ ಮೂಲಕ ಡೆಲ್ಲಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡರೆ, ಇತ್ತ ಪಂಜಾಬ್ ಈ ಸೋಲಿನೊಂದಿಗೆ ಬಹತೇಕ ಟೂರ್ನಿಯಿಂದ ಹೊರಬಿದ್ದಿದೆ.

    ಡೆಲ್ಲಿ ನೀಡಿದ 160 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡದ ಗೆಲುವಿಗಾಗಿ ಜಿತೇಶ್ ಶರ್ಮಾ ಮತ್ತು ರಾಹುಲ್ ಚಾಹರ್ ಹೋರಾಟ ನಡೆಸಿದರು. ಕೊನೆಯಲ್ಲಿ ಡೆಲ್ಲಿ ಬೌಲರ್‌ಗಳ ವೇಗಕ್ಕೆ ಥಂಡಾ ಹೂಡಿದ ಪಂಜಾಬ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 142 ರನ್ ಸಿಡಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

    ಅಲ್ಪಮೊತ್ತವನ್ನು ಬೆನ್ನಟ್ಟುವ ವಿಶ್ವಾಸದಲ್ಲಿ ಕಣಕ್ಕಿಳಿದ ಪಂಜಾಬ್‍ನ ಆರಂಭಿಕ ಆಟಗಾರರಾದ ಜಾನಿ ಬೈರ್‌ಸ್ಟೋವ್ ಮತ್ತು ಶಿಖರ್ ಧವನ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಬೈರ್‌ಸ್ಟೋವ್ ಸಿಡಿಯುವ ಸೂಚನೆ ನೀಡಿ 28 ರನ್ (15 ಎಸೆತ, 4 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು. ಆ ಬಳಿಕ ವಿಕೆಟ್ ಒಂದರ ಹಿಂದೆ ಒಂದು ಬೀಳತೊಡಗಿತು. ಈ ನಡುವೆ ಉತ್ತಮವಾಗಿ ಬ್ಯಾಟ್‍ಬೀಸುತ್ತಿದ್ದ ಧವನ್ 19 ರನ್ (16 ಎಸೆತ, 3 ಬೌಂಡರಿ) ವಿಕೆಟ್ ಕಳೆದುಕೊಂಡರು. ಆ ಬಳಿಕ ಡೆಲ್ಲಿ ಚೇತರಿಸಿಕೊಳ್ಳಲಿಲ್ಲ.

    ಈ ಮೊದಲು ಟಾಸ್ ಗೆದ್ದ ಪಂಜಾಬ್ ಎದುರಾಳಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಡೆಲ್ಲಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು. ಇನ್ನೋರ್ವ ಆರಂಭಿಕ ಆಟಗಾರ ಸರ್ಫರಾಜ್ ಖಾನ್ ಸ್ಫೋಟಕ 32 ರನ್ (16 ಎಸೆತ, 5 ಬೌಂಡರಿ, 1 ಸಿಕ್ಸ್) ಚಚ್ಚಿ ಔಟ್ ಆದರು.

    ಇನ್ನೊಂದೆಡೆ ಮಿಚೆಲ್ ಮಾರ್ಷ್ ಡೆಲ್ಲಿ ರನ್ ಏರಿಸುವ ಹೊಣೆ ಹೊತ್ತರು. ಇವರಿಗೆ ಕೆಲ ಹೊತ್ತು ಲಲಿತ್ ಯಾದವ್ 24 ರನ್ (21 ಎಸೆತ, 1 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆದರು. ಆ ಬಳಿಕ ಪಟಪಟನೇ ವಿಕೆಟ್ ಕಳೆದುಕೊಂಡು ಸಾಗಿದ ಡೆಲ್ಲಿಗೆ ಮಾರ್ಷ್ ಮಾತ್ರ ಏಕಾಂಗಿ ಹೋರಾಟ ನಡೆಸಿ ಅರ್ಧಶತಕ ಸಿಡಿಸಿ ಮಿಂಚಿದರು.

    ಪಂಜಾಬ್ ಬೌಲರ್‌ಗಳಿಗೆ ಕಾಡಿದ ಮಾರ್ಷ್ 63 ರನ್ (48 ಎಸೆತ, 4 ಬೌಂಡರಿ, 3 ಸಿಕ್ಸ್) ಬಾರಿಸಿ ವಿಕೆಟ್ ಕಳೆದುಕೊಂಡರು. ಕೊನೆಯಲ್ಲಿ ಅಕ್ಷರ್ ಪಟೇಲ್ ಅಜೇಯ 17 ರನ್ (20 ಎಸೆತ, 2 ಬೌಂಡರಿ) ಸಿಡಿಸಿ ತಂಡದ ಮೊತ್ತವನ್ನು 150ರ ಗಡಿದಾಟಿಸಿದರು.

    ಅಂತಿಮವಾಗಿ ಡೆಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಒಟ್ಟುಗೂಡಿಸಿತು. ಪಂಜಾಬ್ ಪರ ಲಿವಿಂಗ್‍ಸ್ಟೋನ್ ಮತ್ತು ಅರ್ಷದೀಪ್ ಸಿಂಗ್ ತಲಾ 3 ವಿಕೆಟ್ ಕಿತ್ತು ಡೆಲ್ಲಿ ರನ್ ಓಟಕ್ಕೆ ಬ್ರೇಕ್ ಹಾಕಿದರು.

  • ಕೊನೆಯವರೆಗೆ ಹೋರಾಡಿ ಸೋತ ಚೆನ್ನೈ – ಪಂಜಾಬ್‌ಗೆ 11 ರನ್‌ಗಳ ಜಯ

    ಕೊನೆಯವರೆಗೆ ಹೋರಾಡಿ ಸೋತ ಚೆನ್ನೈ – ಪಂಜಾಬ್‌ಗೆ 11 ರನ್‌ಗಳ ಜಯ

    ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 187 ರನ್‌ಗಳಿಸಿದ ಕಿಂಗ್ಸ್ ಪಂಜಾಬ್ ತಂಡವು ಶಿಖರ್ ಧವನ್(88) ಹಾಗೂ ಬನುಕಾ ರಾಜಪಕ್ಸ ಅವರ ಅಬ್ಬರ ಆಟದಿಂದ 11 ರನ್‌ಗಳ ಗೆಲುವು ದಾಖಲಿಸಿದೆ.

    ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲ ಬ್ಯಾಟಿಂಗ್ ಅವಕಾಶ ಪಡೆದ ಪಂಜಾಬ್ ಕಿಂಗ್ಸ್, 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 187 ರನ್‌ಗಳ ಮೊತ್ತಗಳಿಸಿತು. 187 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ತಂಡವು 20 ಓವರ್‌ಗಳಲ್ಲಿ 176 ರನ್‌ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು. ಇದನ್ನೂ ಓದಿ: ವಿಕೆಟ್ ನೀಡಿದ ಪೋಲಾರ್ಡ್‍ಗೆ ಮುತ್ತು ಕೊಟ್ಟು ಸಂಭ್ರಮಿಸಿದ ಕೃನಾಲ್ ಪಾಂಡ್ಯ

    Dhavan

    ಚೆನ್ನೈ ಮೊದಲ 6 ಎಸೆತಗಳಲ್ಲಿ 10 ರನ್‌ಗಳನ್ನು ಗಳಿಸಿತು. ನಂತರದಲ್ಲಿ ರಾಬಿನ್ ಉತ್ತಪ್ಪ. ಶಿವಂ ದುಬೆ ಬಹುಬೇಗನೇ ನಿರ್ಗಮಿಸಿದರು. ಆದರೆ 2ನೇ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ ಆಗಿ ಕ್ರೀಸ್‌ಗಿಳಿದ ಅಂಬಟಿ ರಾಯುಡು 78ರನ್ (39 ಎಸೆತ, 7 ಬೌಂಡರಿ, 6 ಸಿಕ್ಸರ್) ಗಳನ್ನು ಚಚ್ಚುವ ಮೂಲಕ ಪಂಜಾಬ್ ಬೌಲರ್‌ಗಳ ಬೆವರಳಿಸಿದ್ದರು. ಇದರಿಂದಾಗಿ ಚೆನ್ನೈ ತಂಡಕ್ಕೆ ಗೆಲುವಿನ ಕನಸು ಚಿಗುರಿತ್ತು. ಇದನ್ನೂ ಓದಿ: 3.10 ಕೋಟಿ ರೂಪಾಯಿಯ ಐಷಾರಾಮಿ ಕಾರು ಖರೀದಿಸಿದ ಹಿಟ್ ಮ್ಯಾನ್

    RAYUDU CSK.png IPl

    ರಾಯುಡು ಆಟಕ್ಕೆ ಬ್ರೇಕ್ ಹಾಕುವಲ್ಲಿ ರಬಾಡಾ ಯಶಸ್ವಿಯಾದರು. 39ನೇ ಎಸೆತದಲ್ಲಿ ತಮ್ಮ ವಿಕೆಟ್ ಒಪ್ಪಿಸಿ ಹೊರನಡೆದರು. 5ನೇ ಕ್ರಮಾಂಕದಲ್ಲಿ ಬಂದ ಮಹೇಂದ್ರ ಸಿಂಗ್ ಧೋನಿ ಅವರು ಬಿರುಸಿನ ಆಟವನ್ನೇ ಆಡಿದರು. ಕೊನೆಯ 7ನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡ ಧೋನಿ ಕೊನೆಯ ಓವರ್‌ನಲ್ಲಿ ತಮ್ಮಲ್ಲೇ ಸ್ಟ್ರೈಕ್‌ ಉಳಿಸಿಕೊಂಡರು. 6 ಎತೆಗಳಿಗೆ 28 ರನ್‌ಗಳಷ್ಟೇ ಬೇಕಿತ್ತು. ಮೊದಲ ಬಾಲ್‌ಗೆ ಸಿಕ್ಸರ್ ಬಾರಿಸಿದರು. ಆದರೆ, 2ನೇ ಎಸೆತ ಬೌನ್ಸ್ ಆದ ಹಿನ್ನೆಲೆ ಮತ್ತೊಂದು ಸಿಕ್ಸ್ ಹೊಡೆಯುವ ಪ್ರಯತ್ನವೂ ಕೈತಪ್ಪಿತು. 3ನೇ ಎಸೆತವೂ ವಿಫಲವಾಯಿತು. ನಾಲ್ಕನೆ ಎಸೆತದಲ್ಲಿ ಸಿಕ್ಸ್ ಎತ್ತುವ ಪ್ರಯತ್ನದಲ್ಲಿದ್ದ ಧೋನಿ ಕ್ಯಾಚ್ ನೀಡಿ ನಿರ್ಗಮಿಸಿದರು. ಚೆನ್ನೈ ಅನಿವಾರ್ಯವಾಗಿ ಸೋಲಿನ ಹೊಣೆ ಹೊರಬೇಕಾಯಿತು. ಋತುರಾಜ್ ಗಾಯಕ್ವಾಡ್ 30(27), ರಾಬಿನ್ ಉತ್ತಪ್ಪ 1 (7), ಮಿಚೆಲ್ ಸ್ಯಾಟ್ನರ್ 9 (15), ಶಿವಂ ದುಬೆ 8 (7) ರನ್‌ಗಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಪರ ಡ್ವೇನ್ ಬ್ರಾವೋ(2/42) ಹಾಗೂ ಮಹೀಶ್ ತೀಕ್ಷಣ(1/32) ವಿಕೆಟ್ ಪಡೆದರು.

    CSK

    ಟಾಸ್ ಸೋತು ಬ್ಯಾಂಟಿಂಗ್ ಇಳಿದ ಪಂಜಾಬ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್(88) ಹಾಗೂ ಬನುಕಾ ರಾಜಪಕ್ಸ(42) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ 187 ರನ್‌ಗಳ ಪೈಪೋಟಿಯ ಮೊತ್ತ ಕಲೆಹಾಕಿತು.

    ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಪರ ನಾಯಕ ಮಯಾಂಕ್ ಅಗರ್ವಾಲ್(18) ಬಹುಬೇಗನೆ ನಿರ್ಗಮಿಸಿದರು. ಆದರೆ 2ನೇ ಜೊತೆಯಾದ ಶಿಖರ್ ಧವನ್ 88 ರನ್(59 ಬಾಲ್, 9 ಬೌಂಡರಿ, 2 ಸಿಕ್ಸ್) ಐಪಿಎಲ್‌ನಲ್ಲಿ ಮತ್ತೊಂದು ಅರ್ಧಶತಕ ಬಾರಿಸಿ ಅಬ್ಬರಿಸಿದರು. ಇವರಿಗೆ ಸಾಥ್ ನೀಡಿದ ಬನುಕಾ ರಾಜಪಕ್ಸ 42 ರನ್(32 ಬಾಲ್, 2 ಬೌಂಡರಿ, 2 ಸಿಕ್ಸ್) ಬ್ಯಾಟಿಂಗ್ ಪ್ರದರ್ಶಿಸಿದರು. ಸಿಎಸ್‌ಕೆ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ 2ನೇ ವಿಕೆಟ್‌ಗೆ 110(71) ರನ್‌ಗಳ ಜೊತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.

    panjab

    ರಾಜಪಕ್ಸ ವಿಕೆಟ್ ಪತನದ ನಂತರ ಬಂದ ಲಿಯಮ್ ಲಿವಿಂಗ್‌ಸ್ಟೋನ್ 19 ರನ್ (7 ಬಾಲ್, 1 ಬೌಂಡರಿ, 2 ಸಿಕ್ಸ್) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೇ ಧವನ್ ಹಾಗೂ ಲಿವಿಂಗ್‌ಸ್ಟೋನ್ 3ನೇ ವಿಕೆಟ್‌ಗೆ 27(11 ಎಸೆತ) ಜೊತೆಯಾಟದ ಕಾಣಿಕೆ ನೀಡಿದರು. ನಂತರ ಬಂದ ಇಂಗ್ಲೆಂಡ್ ಟೀಂನ ಆರಂಭಿಕ ಆಟಗಾರ ಜಾನಿ ಬ್ರೈಸ್ಟೋ 3 ಎಸೆತಗಳಲ್ಲಿ ಕೇವಲ 6 ರನ್‌ಗಳನ್ನು ಗಳಿಸಿ ರನೌಟ್‌ನಲ್ಲಿ ತಮ್ಮ ವಿಕೆಟ್ ಒಪ್ಪಿಸಿ ನಡೆದರು. ಬೌಲಿಂಗ್‌ನಲ್ಲಿ ಕಾಗಿಸೋ ರಬಾಡಾ ಹಾಗೂ ರಿಶಿ ಧವನ್ ತಲಾ 2 ವಿಕೆಟ್‌ಗಳನ್ನು ಪಡೆದುಕೊಳ್ಳುವ ಮೂಲಕ ತಂಡದ ಗೆಲುವಿಗೆ ನೆರವಾದರು.

    IPL 2022 PBKS VS CSK

    ರನ್ ಏರಿಕೆಯಾಗಿದ್ದು ಹೇಗೆ?
    74 ಎಸೆತಗಳಲ್ಲಿ 50 ರನ್
    75 ಎಸೆತಗಳಲ್ಲಿ 100 ರನ್
    108 ಎಸೆತಗಳಲ್ಲಿ 150 ರನ್
    120 ಎಸೆತಗಳಲ್ಲಿ 187 ರಬ್

  • ಜ್ಯೂನಿಯರ್ ಎಬಿಡಿ ಅಬ್ಬರದಾಟ ವ್ಯರ್ಥ – ಮುಂಬೈ ವಿರುದ್ಧ ಪಂಜಾಬ್‍ಗೆ 12 ರನ್‌ಗಳ ಜಯ

    ಜ್ಯೂನಿಯರ್ ಎಬಿಡಿ ಅಬ್ಬರದಾಟ ವ್ಯರ್ಥ – ಮುಂಬೈ ವಿರುದ್ಧ ಪಂಜಾಬ್‍ಗೆ 12 ರನ್‌ಗಳ ಜಯ

    ಪುಣೆ: ಪಂಜಾಬ್ ನೀಡಿದ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ತಂಡಕ್ಕೆ ಜ್ಯೂನಿಯರ್ ಎಬಿಡಿ ಖ್ಯಾತಿಯ ಬ್ರೆವಿಸ್ ಮತ್ತು ಸೂರ್ಯಕುಮಾರ್ ಯಾದವ್ ಹೋರಾಟದ ನಡುವೆಯು ಗೆಲುವು ಮರಿಚಿಕೆಯಾಯಿತು.

    198 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ತಂಡಕ್ಕೆ ಆರಂಭದಲ್ಲೇ ಆಫಾತ ಎದುರಾಯಿತು ಇಶಾನ್ ಕಿಶನ್ 3 ರನ್‍ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ರೋಹಿತ್ ಶರ್ಮಾ 28 ರನ್ (17 ಎಸೆತ, 3 ಬೌಂಡರಿ, 2 ಸಿಕ್ಸ್) ಬಾರಿಸಿ ಔಟ್ ಆದರು. ನಂತರ ಬಂದ ಜ್ಯೂನಿಯರ್ ಎಬಿಡಿ ಖ್ಯಾತಿಯ ಬ್ರೆವಿಸ್ ಮುಂಬೈ ಬೌಲರ್‌ಗಳಿಗೆ ಅಷ್ಟ ದಿಕ್ಕುಗಳನ್ನು ಪರಿಚಯಿಸುವಂತೆ ಬ್ಯಾಟ್ ಬೀಸಲು ಆರಂಭಿಸಿ 8ನೇ ಓವರ್‌ನ ಕೊನೆಯ 4 ಎಸೆತಗಳನ್ನು ಸತತ ಸಿಕ್ಸರ್‌ಗಟ್ಟಿ ಅಬ್ಬರಿಸಿ ಬೊಬ್ಬಿರಿದರು. ಇನ್ನೇನು ಅರ್ಧಶತಕದ ಹೊಸ್ತಿಲಲ್ಲಿದ್ದ ವೇಳೆ ಬ್ರೆವಿಸ್ 49 ರನ್ (25 ಎಸೆತ, 4 ಬೌಂಡರಿ, 5 ಸಿಕ್ಸ್) ಸಿಡಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟ್ ಆದರು. ನಂತರ ಸೂರ್ಯ ಕುಮಾರ್ ಯಾದವ್ 43 ರನ್ (30 ಎಸೆತ, 1 ಬೌಂಡರಿ, 4 ಸಿಕ್ಸ್) ಸಿಡಿಸಿ ವಿಕೆಟ್ ಕೈ ಚೆಲ್ಲಿಕೊಂಡಂತೆ ಮುಂಬೈ ಗೆಲುವು ಮತ್ತಷ್ಟು ದೂರವಾಯಿತು. ಅಂತಿಮವಾಗಿ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 186 ರನ್ ಪೇರಿಸಲಷ್ಟೆ ಶಕ್ತವಾಗಿ 13 ರನ್‍ಗಳಿಂದ ಸೋಲು ಕಂಡಿತು.

    ಈ ಮೊದಲು ಟಾಸ್ ಗೆದ್ದ ಮುಂಬೈ ಕ್ಯಾಪ್ಟನ್ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡರು. ಇತ್ತ ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡ ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮೊರೆ ಹೋಯಿತು. ಮಯಾಂಕ್ ಅಗರ್‌ವಾಲ್ ಮತ್ತು ಶಿಖರ್ ಧವನ್ ಮುಂಬೈ ಬೌಲರ್‌ಗಳ ದಾಳಿಯನ್ನು ಬೌಂಡರಿ, ಸಿಕ್ಸರ್‌ಗೆ ಬಡಿದಟ್ಟಿದರು. ಈ ಜೋಡಿ ಮೊದಲ ವಿಕೆಟ್‍ಗೆ 97 ರನ್ (57 ಎಸೆತ)ಗಳ ಜೊತೆಯಾಟವಾಡಿದರು. ಈ ಜೋಡಿಯನ್ನು ಬೇರ್ಪಡಿಸಲು ಮುರುಗನ್ ಅಶ್ವಿನ್ ಬರಬೇಕಾಯಿತು. ಮಯಾಂಕ್ ಅಗರ್‌ವಾಲ್ 52 ರನ್ (32 ಎಸೆತ, 6 ಬೌಂಡರಿ, 2 ಸಿಕ್ಸ್) ಬಾರಿಸಿ ವಿಕೆಟ್ ಒಪ್ಪಿಸಿದರು.

    ಬಳಿಕ ಬಂದ ಬ್ಯಾಟ್ಸ್‌ಮ್ಯಾನ್‌ಗಳು ಮುಂಬೈ ಬೌಲರ್‌ಗಳ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದರು. ಆದರೆ ಇತ್ತ ಧವನ್ ಮಾತ್ರ ತಮ್ಮ ಹೊಡಿಬಡಿ ಆಟ ಮುಂದುವರಿಸಿದರು. ಅಂತಿಮವಾಗಿ 70 ರನ್ (50 ಎಸೆತ, 5 ಬೌಂಡರಿ, 3 ಸಿಕ್ಸ್) ಸಿಡಿಸಿ ವಿಕೆಟ್ ಕೈಚೆಲ್ಲಿಕೊಂಡರು. ಕೊನೆಗೆ ಜಿತೇಶ್ ಶರ್ಮಾ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಅಜೇಯ 30 ರನ್ (15 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 190ರ ಗಡಿದಾಟಿಸಿದರು. ಅಂತಿಮವಾಗಿ ಪಂಜಾಬ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 198 ರನ್ ಗಳಿಸಿತು.

  • ಪಂಜಾಬ್‍ಗೆ ಪಂಚ್ ನೀಡಿದ ರಾಹುಲ್ ತೆವಾಟಿಯಾ – ಗುಜರಾತ್‍ಗೆ ರೋಚಕ ಜಯ

    ಪಂಜಾಬ್‍ಗೆ ಪಂಚ್ ನೀಡಿದ ರಾಹುಲ್ ತೆವಾಟಿಯಾ – ಗುಜರಾತ್‍ಗೆ ರೋಚಕ ಜಯ

    ಮುಂಬೈ: ಕೊನೆಯ ಎಸೆತದವರೆಗೆ ರೋಚಕವಾಗಿ ಕೂಡಿದ್ದ ಪಂದ್ಯದಲ್ಲಿ ರಾಹುಲ್ ತೆವಾಟಿಯಾ ಸಿಡಿಸಿದ ಬ್ಯಾಕ್ ಟು ಬ್ಯಾಕ್ ಸಿಕ್ಸರ್‌ಗಳ ನೆರವಿನಿಂದ ಪಂಜಾಬ್ ವಿರುದ್ಧ ಗುಜರಾತ್ 6 ವಿಕೆಟ್‍ಗಳ ರೋಚಕ ಜಯ ಸಾಧಿಸಿತು.

    ಗೆದ್ದಿದ್ದು ಹೇಗೆ:
    ಕೊನೆಯ 12 ಎಸೆತಗಳಲ್ಲಿ 32 ರನ್ ಬೇಕಾಗಿತ್ತು 18ನೇ ಓವರ್‌ನಲ್ಲಿ 13 ರನ್ ಬಂತು. 6 ಎಸೆತಗಳಲ್ಲಿ 19 ರನ್ ಬೇಕಿತ್ತು. ಕೊನೆಯ ಓವರ್ ಎಸೆದ ಓಡನ್ ಸ್ಮಿತ್ ಅವರ ಮೊದಲ ಎಸೆತದಲ್ಲಿ 1 ರನ್ ಬಂತು. ಎರಡನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಔಟ್ ಆದರು. ಮೂರನೇ ಎಸೆತದಲ್ಲಿ 4 ರನ್, 4ನೇ ಎಸೆತದಲ್ಲಿ 1 ರನ್ ಬಂತು. ಕೊನೆಯ 2 ಎಸೆತಗಳಲ್ಲಿ ಗುಜರಾತ್ ಗೆಲುವಿಗೆ 12 ರನ್ ಬೇಕಿತ್ತು. ರಾಹುಲ್ ತೆವಾಟಿಯಾ ಕೊನೆಯ 2 ಎಸೆತಗಳನ್ನು ಸಿಕ್ಸರ್‌ಗಟ್ಟಿ ಗುಜರಾತ್‍ಗೆ 6 ವಿಕೆಟ್‍ಗಳ ಜಯ ತಂದುಕೊಟ್ಟರು.

    ಪಂಜಾಬ್ ನೀಡಿದ 190 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ ತಂಡ ಆರಂಭದಲ್ಲೇ ಆರಂಭಿಕ ಆಟಗಾರ ಮ್ಯಾಥ್ಯೂ ವೇಡ್ 6 ರನ್ (7 ಎಸೆತ, 1 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಒಂದಾದ ಗಿಲ್ ಮತ್ತು ಸಾಯಿ ಸುದರ್ಶನ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಸಾಯಿ ಸುದರ್ಶನ್ 35 ರನ್ (30 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆಗುವ ಮುನ್ನ 2ನೇ ವಿಕೆಟ್‍ಗೆ ಗಿಲ್ ಜೊತೆ 101 ರನ್ (68 ಎಸೆತ)ಗಳ ಜೊತೆಯಾಟವಾಡಿದರು. ಗಿಲ್ 96 ರನ್ (59 ಎಸೆತ, 11 ಬೌಂಡರಿ, 1 ಸಿಕ್ಸ್) ವೇಳೆ ಔಟ್ ಆಗಿ ಶತಕ ವಂಚಿತರಾದರು.

    ಈ ಮೊದಲು ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಆದರೆ ಈ ಪಂದ್ಯದಲ್ಲೂ ಕೂಡ ನಾಯಕ ಮಯಾಂಕ್ ಅಗರ್‌ವಾಲ್ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿ ಕೇವಲ 5 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಇನ್ನೋರ್ವ ಆರಂಭಿಕ ಆಟಗಾರ ಶಿಖರ್ ಧವನ್ 35 ರನ್ (30 ಎಸೆತ, 4 ಬೌಂಡರಿ) ಬಾರಿಸಿ ಔಟ್ ಆದರು.


    ಆ ಬಳಿಕ ಲಿಯಾಮ್ ಲಿವಿಂಗ್ಸ್ಟೋನ್ ಪಂಜಾಬ್ ಪರ ಬ್ಯಾಟಿಂಗ್‍ನಲ್ಲಿ ಧೂಳೆಬ್ಬಿಸಿದರು. ಗುಜರಾತ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಲಿವಿಂಗ್ಸ್ಟೋನ್ ಬೌಂಡರಿ, ಸಿಕ್ಸರ್‌ಗಳ ಅಬ್ಬರದ ಆಟದ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದರು. ಆದರೆ 64 ರನ್ (27 ಎಸೆತ, 7 ಬೌಂಡರಿ, 4 ಸಿಕ್ಸ್) ವೇಳೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು. ಆ ಬಳಿಕ ಮತ್ತೆ ಪಂಜಾಬ್ ಕುಸಿತ ಕಂಡಿತು. ಅಂತಿಮವಾಗಿ ರಾಹುಲ್ ಚಹರ್ ಬಿರುಸಿನ ಅಜೇಯ 22 ರನ್ (14 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 180ರ ಗಡಿದಾಟಿಸಿದರು.

    ಅಂತಿಮವಾಗಿ 20 ಓವರ್‌ಗಳಲ್ಲಿ ಪಂಜಾಬ್ ತಂಡ 9 ವಿಕೆಟ್ ಕಳೆದುಕೊಂಡು 189 ರನ್ ಕಲೆ ಹಾಕಿತು. ಗುಜರಾತ್ ಪರ ರಶೀದ್ ಖಾನ್ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ದರ್ಶನ್ ನಲ್ಕಂಡೆ 2, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ಮತ್ತು ಲಾಕಿ ಫರ್ಗುಸನ್ ತಲಾ 1 ವಿಕೆಟ್ ಪಡೆದರು.

  • ಪಂಜಾಬ್ ರಾಜರ ಮುಂದೆ ನಡೆಯಲಿಲ್ಲ ಸೂಪರ್ ಕಿಂಗ್ಸ್ ಆಟ – ಚೆನ್ನೈಗೆ ಹ್ಯಾಟ್ರಿಕ್‌ ಸೋಲು

    ಪಂಜಾಬ್ ರಾಜರ ಮುಂದೆ ನಡೆಯಲಿಲ್ಲ ಸೂಪರ್ ಕಿಂಗ್ಸ್ ಆಟ – ಚೆನ್ನೈಗೆ ಹ್ಯಾಟ್ರಿಕ್‌ ಸೋಲು

    ಮುಂಬೈ: ಚೆನ್ನೈಗೆ ಬೃಹತ್ ಮೊತ್ತ ಟಾರ್ಗೆಟ್ ನೀಡಿ ಬೌಲಿಂಗ್ ಮೂಲಕ ಕಟ್ಟಿಹಾಕಿದ ಪಂಜಾಬ್ ಕಿಂಗ್ಸ್ 54 ರನ್‍ಗಳ ಭರ್ಜರಿ ಜಯ ದಾಖಲಿಸಿದೆ.

    ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿದ ಚೆನ್ನೈ ತಂಡ 18 ಓವರ್‌ಗಳಲ್ಲಿ 126 ರನ್‍ಗಳಿಗೆ ಆಲೌಟ್ ಆಯಿತು. ಅಲ್ಲದೇ ಟೂರ್ನಿಯಲ್ಲಿ ಸತತ ಮೂರನೇ ಸೋಲನುಭವಿಸಿತು.

    180 ರನ್‍ಗಳ ಬೃಹತ್ ಮೊತ್ತ ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಪಂಜಾಬ್ ಬೌಲರ್‌ಗಳು ಶಾಕ್ ಮೇಲೆ ಶಾಕ್ ನೀಡಿದರು. ಚೆನ್ನೈ ತಂಡದ ಅಗ್ರಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳಾದ ರಾಬಿನ್ ಉತ್ತಪ್ಪ 13 ರನ್, ಗಾಯಕ್ವಾಡ್ 1, ಅಂಬಾಟಿ ರಾಯುಡು 13 ರನ್, ಮೊಯಿನ್ ಅಲಿ ಮತ್ತು ಜಡೇಜಾ ಶೂನ್ಯ ಸುತ್ತಿ ಪೆವಿಲಿಯನ್ ಸೇರಿಕೊಂಡರು.

    ಬಳಿಕ ಒಂದಾದ ಶಿವಂ ದುಬೆ ಮತ್ತು ಮಹೇಂದ್ರ ಸಿಂಗ್ ತಂಡಕ್ಕೆ ಚೇತರಿಕೆ ನೀಡದರು ಕೂಡ ಯಾವುದೇ ಪ್ರಯೋಜನ ಸಿಗಲಿಲ್ಲ. ದುಬೆ 57 ರನ್ (30 ಎಸೆತ, 6 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟ್ ಆದರು. ಬಳಿಕ ಧೋನಿ 23 ರನ್ (28 ಎಸೆತ,1 ಬೌಂಡರಿ, 1 ಸಿಕ್ಸ್) ಸಿಡಿಸಿ ವಿಕೆಟ್‌ ಒಪ್ಪಿಸಿದರು. ಅಂತಿಮವಾಗಿ ಚೆನ್ನೈ 17.6 ಎಸೆತಗಳಲ್ಲಿ 126 ರನ್‍ಗಳಿಗೆ ಸರ್ವಪತನ ಕಂಡಿತು.

    ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್ ತಂಡ ನಾಯಕ ಮಯಾಂಕ್ ಅಗರ್ವಾಲ್ ಕೇವಲ 4 ರನ್ (2 ಎಸೆತ, 1 ಬೌಂಡರಿ) ಸಿಡಿಸಿ ವಿಕೆಟ್ ಕೈಚೆಲ್ಲಿದರು. ಆದರೆ ಇತ್ತ ಶಿಖರ್ ಧವನ್ ಎಂದಿನಂತೆ ಬ್ಯಾಟಿಂಗ್ ಮುಂದುವರಿಸಿ 33 ರನ್ (24 ಎಸೆತ, 4 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆದರು.

    ಆ ಬಳಿಕ ಲಿಯಾಮ್ ಲಿವಿಂಗ್ಸ್ಟೋನ್ ಚೆನ್ನೈ ಬೌಲರ್‌ಗಳನ್ನು ಬೆಂಡೆತ್ತಿದ್ದರು. ಬೌಂಡರಿ, ಸಿಕ್ಸರ್‌ಗಳನ್ನು ಮನಬಂದಂತೆ ಚಚ್ಚಿದ ಲಿವಿಂಗ್ಸ್ಟೋನ್ ಬಿರುಸಿನ ಬ್ಯಾಟಿಂಗ್‍ಗೆ ಮುಂದಾದರು. ಅಲ್ಲದೆ ಶಿಖರ್ ಧವನ್ ಜೊತೆ 3ನೇ ವಿಕೆಟ್‍ಗೆ 95 ರನ್ (52 ಎಸೆತ) ಜೊತೆಯಾಟವಾಡಿ ಮಿಂಚಿದರು. ಲಿವಿಂಗ್ಸ್ಟೋನ್ ಆಟ 60 ರನ್ (32 ಎಸೆತ, 5 ಬೌಂಡರಿ, 5 ಸಿಕ್ಸ್) ಬಾರಿಸಿ ಆಟ ಕೊನೆಗೊಳಿಸಿದರು. ನಂತರ ಜಿತೇಶ್ ಶರ್ಮಾ 26 ರನ್ (17 ಎಸೆತ, 3 ಸಿಕ್ಸ್) ಸಿಡಿಸಿ ಗಮನ ಸೆಳೆದರು. ಅಂತಿಮವಾಗಿ ಪಂಜಾಬ್ ತಂಡ 20 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 180 ರನ್ ಸಿಡಿಸಿತು.

     

  • ನಾಳೆ ನನಗೆ ಎಕ್ಸಾಂ ಇದೆ ಅದಕ್ಕಿಂತ ಮುಖ್ಯ ಕೊಹ್ಲಿ ಆಟ ನೋಡುವುದು: ಬಾಲಕನ ಪೋಸ್ಟರ್ ವೈರಲ್

    ನಾಳೆ ನನಗೆ ಎಕ್ಸಾಂ ಇದೆ ಅದಕ್ಕಿಂತ ಮುಖ್ಯ ಕೊಹ್ಲಿ ಆಟ ನೋಡುವುದು: ಬಾಲಕನ ಪೋಸ್ಟರ್ ವೈರಲ್

    ಮುಂಬೈ: ವಿರಾಟ್ ಕೊಹ್ಲಿ ಫ್ಯಾನ್ಸ್‌ಗೆ ಅವರ ಆಟ ನೋಡುವುದೆ ಹಬ್ಬ. ಇದೀಗ ಐಪಿಎಲ್‍ನಲ್ಲಿ ಆರ್​ಸಿಬಿ ಪರ ಆಡುತ್ತಿರುವ ಕೊಹ್ಲಿ ಆಟ ನೋಡಲು ಒಬ್ಬ ಬಾಲಕ ಮರುದಿನ ಇದ್ದ ಪರೀಕ್ಷೆ ಬಿಟ್ಟು ಬಂದು ಸ್ಟೇಡಿಯಂನಲ್ಲಿ ಪೋಸ್ಟರ್ ಹಿಡಿದು ವೈರಲ್ ಆಗಿದ್ದಾನೆ.

    ನಿನ್ನೆ ಬೆಂಗಳೂರು ಮತ್ತು ಪಂಜಾಬ್ ನಡುವೆ ಮುಂಬೈನಲ್ಲಿ ಪಂದ್ಯ ನಡೆಯುತ್ತಿತ್ತು. ಈ ಪಂದ್ಯ ನೋಡಲು ಮೈದಾನಕ್ಕೆ ಬಂದಿದ್ದ ಬಾಲನೋರ್ವ ಹಿಡಿದಿದ್ದ ಪೋಸ್ಟರ್ ಒಂದು ಗಮನಸೆಳೆಯಿತು. ಈ ಪೋಸ್ಟರ್‌ನಲ್ಲಿ ನನಗೆ ನಾಳೆ ಎಕ್ಸಾಂ ಇದೆ. ಆದರೆ ಕಿಂಗ್ ಕೊಹ್ಲಿ ಆಟ ನೋಡುವುದು ತುಂಬಾ ಮುಖ್ಯ ಎಂದು ಬರೆದುಕೊಂಡ ಪೋಸ್ಟರ್‌ ಹಿಡಿದು ಬಾಲಕ ಕಾಣಿಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಬಿಗ್ ಹಿಟ್ಟರ್‌ಗಳ ಪಂಚ್ ಹಿಟ್ – ಆರ್​ಸಿಬಿ ವಿರುದ್ಧ ಪಂಜಾಬ್‍ಗೆ ರೋಚಕ ಗೆಲುವು

    ನಿನ್ನೆ ಪಂಜಾಬ್ ವಿರುದ್ಧ ಬೃಹತ್ ಮೊತ್ತ ಕಲೆ ಹಾಕಿದರು ಆರ್​ಸಿಬಿ ಸೋಲು ಕಂಡಿತ್ತು. ಆದರೆ ಪಂದ್ಯದಲ್ಲಿ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ನಾ ಮುಂದು ತಾ ಮುಂದು ಎಂಬಂತೆ ಬೌಂಡರಿ, ಸಿಕ್ಸರ್ ಸಿಡಿಸಲು ಮುಂದಾದರು ಅದರಲ್ಲೂ ನಾಯಕ ಡು ಪ್ಲೆಸಿಸ್ ಸಿಕ್ಸರ್‌ಗಳ ಸುರಿಮಳೆ ಗೈದರು. ಈ ಜೋಡಿ 2ನೇ ವಿಕೆಟ್‍ಗೆ 118 ರನ್ (61 ಎಸೆತ) ಜೊತೆಯಾಟವಾಡಿತು. ಪ್ಲೆಸಿಸ್ ಬಿರುಸಿನ ಬ್ಯಾಟಿಂಗ್ ನೋಡುತ್ತಿದ್ದಂತೆ ಅಭಿಮಾನಿಗಳು ಸಂತಸ ಪಟ್ಟರು ಆದರೆ ಅವರ ಆಟ 88 ರನ್ (57 ಎಸೆತ, 3 ಬೌಂಡರಿ, 7 ಸಿಕ್ಸ್)ಗೆ ಕೊನೆಗೊಂಡಿತು. ಬಳಿಕ ಬಂದ ದಿನೇಶ್ ಕಾರ್ತಿಕ್ ಸ್ಲಾಗ್ ಓವರ್‌ಗಳಲ್ಲಿ ಕೊಹ್ಲಿ ಜೊತೆಗೂಡಿ ರನ್ ಮಳೆ ಸುರಿಸಿದರು. ಕೊಹ್ಲಿ ಅಜೇಯ 41 ರನ್ (29 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿ ಮಿಂಚಿದರು. ಇದನ್ನೂ ಓದಿ: ಹೊಸ ತಂಡಗಳಿಗಿಂದು ಮೊದಲ ಪಂದ್ಯ – ಗೆಲುವು ಯಾರಿಗೆಂಬುದೇ ಕುತೂಹಲ?

    ಆರ್‌ಸಿಬಿಯ 205 ರನ್ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಬಿಗ್ ಹಿಟ್ಟರ್‌ಗಳಾದ ಶಾರೂಖ್ ಖಾನ್ ಮತ್ತು ಓಡೆನ್ ಸ್ಮಿತ್ ಸೇರಿ 19 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 208 ರನ್ ಸಿಡಿಸಿ 5 ವಿಕೆಟ್‍ಗಳ ಅಂತರದ ಗೆಲುವು ಸಾಧಿಸಿತು.