Tag: PayTM Payments Bank

  • ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಮೇಲೆ ವಿಧಿಸಿದ್ದ ನಿರ್ಬಂಧ ವಿಸ್ತರಣೆ

    – ಮಾ.15 ರವರೆಗೆ ವಿಸ್ತರಿಸಿದ ಆರ್‌ಬಿಐ

    ನವದೆಹಲಿ: ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ (Paytm Payments Bank) ಫೆ.29 ರೊಳಗೆ ಎಲ್ಲಾ ಬಗೆಯ ಸೇವೆಗಳನ್ನು ಸ್ಥಗಿತಗೊಳಿಸಬೇಕು ಎಂದು ವಿಧಿಸಿದ್ದ ನಿರ್ಬಂಧವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಮಾ.15 ರವರೆಗೆ ವಿಸ್ತರಿಸಿದೆ.

    ಬಡ್ಡಿ, ಕ್ಯಾಶ್‌ಬ್ಯಾಕ್‌ಗಳು, ಪಾಲುದಾರ ಬ್ಯಾಂಕ್‌ಗಳಿಂದ ಸ್ವೀಪ್ ಅಥವಾ ಯಾವುದೇ ಸಮಯದಲ್ಲಿ ಕ್ರೆಡಿಟ್ ಮಾಡಬಹುದಾದ ಮರುಪಾವತಿಗಳನ್ನು ಹೊರತುಪಡಿಸಿ, ಮಾರ್ಚ್ 15 ರ ನಂತರ ಯಾವುದೇ ಗ್ರಾಹಕರ ಖಾತೆಗಳು, ಪ್ರಿಪೇಯ್ಡ್ ಉಪಕರಣಗಳು, ವ್ಯಾಲೆಟ್‌ಗಳು, ಫಾಸ್ಟ್‌ಟ್ಯಾಗ್‌ಗಳು, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ಗಳು ಇತ್ಯಾದಿಗಳಲ್ಲಿ ಯಾವುದೇ ಹೆಚ್ಚಿನ ಠೇವಣಿ ಅಥವಾ ಕ್ರೆಡಿಟ್ ವಹಿವಾಟುಗಳು ಅಥವಾ ಟಾಪ್-ಅಪ್‌ಗಳನ್ನು ಅನುಮತಿಸಲಾಗುವುದಿಲ್ಲ ಎಂದು ಆರ್‌ಬಿಐ ಹೇಳಿದೆ. ಇದನ್ನೂ ಓದಿ: ರಾಮ ಕಾಲ್ಪನಿಕ ಎಂದಿದ್ದ ಕಾಂಗ್ರೆಸ್‌ ಈಗ ಜೈ ಶ್ರೀರಾಮ್‌ ಜಪಿಸ್ತಿದೆ: ಮೋದಿ ವಾಗ್ದಾಳಿ

    ಪರ್ಯಾಯ ವ್ಯವಸ್ಥೆ ಮಾಡಲು ಸಮಯ ಬೇಕಾಗಬಹುದು. ಗ್ರಾಹಕರು ಮತ್ತು ವ್ಯಾಪಾರಿಗಳ ಹಿತದೃಷ್ಟಿಯಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಗ್ರಾಹಕರು ಪದೇ ಪದೇ ಕೇಳಲಾಗಿರುವ ಪ್ರಶ್ನೆಗಳಿಗೆ ಆರ್‌ಬಿಐ ಉತ್ತರವನ್ನೂ ಬಿಡುಗಡೆ ಮಾಡಿದೆ.

  • ಹೊಸ ಗ್ರಾಹಕರನ್ನು ಸೇರಿಸದಂತೆ Paytm ಗೆ ಆರ್‌ಬಿಐ ಸೂಚನೆ

    ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಶುಕ್ರವಾರ ಹೊಸ ಗ್ರಾಹಕರನ್ನು ಸೇರ್ಪಡೆಗೊಳಿಸದಂತೆ ಸೂಚಿಸಿದೆ.

    ವರದಿಗಳ ಪ್ರಕಾರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಸೆಕ್ಷನ್ 35ಎ ಹಾಗೂ ಬ್ಯಾಂಕಿಂಗ್ ರೆಗ್ಯುಲೇಶನ್ ಆ್ಯಕ್ಟ್ 1949 ಅನ್ನು ವಿಧಿಸಿದೆ. ಹೀಗಾಗಿ ಆರ್‌ಬಿಐ ಪೇಟಿಎಂ ಹೊಸ ಗ್ರಾಹಕರನ್ನು ನಿರ್ಬಂಧಿಸುವಂತೆ ಆದೇಶಿಸಿದೆ. ಇದನ್ನೂ ಓದಿ: ಚುನಾವಣೆಯಲ್ಲಿ ಸೋಲು- ಪಂಜಾಬ್, ಮಣಿಪುರ ಸಿಎಂ ರಾಜೀನಾಮೆ

    RBI

    ಪೇಟಿಎಂನಲ್ಲಿ ಸದ್ಯ ಐಟಿ ಲೆಕ್ಕ ಪರಿಶೋಧನೆ ನಡೆಯುತ್ತಿದ್ದು, ಈ ಕ್ರಮ ಮುಗಿದ ಬಳಿಕ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಲಾಗುವುದು ಎಂದು ಆರ್‌ಬಿಐ ತಿಳಿಸಿದೆ. ಇದನ್ನೂ ಓದಿ: ಮನೆಯ ಸುತ್ತ ಕಂದಕ ತೋಡಿ ಕಾರ್ಮಿಕನಿಗೆ ಹಿಂಸೆ – ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ

    ಪೇಟಿಎಂ ಡಿಸೆಂಬರ್‌ನಲ್ಲಿ ನಿಗದಿತ ಪಾವತಿ ಬ್ಯಾಂಕ್ ಆಗಿ ಕಾರ್ಯನಿರ್ವಹಿಸಲು ಆರ್‌ಬಿಐ ಅನುಮೋದನೆಯನ್ನು ಪಡೆದಿತ್ತು. ಹೀಗೆ ತನ್ನ ಹಣಕಾಸು ಸೇವೆಗಳ ಕಾರ್ಯಾಚರಣೆಯನ್ನು ವಿಸ್ತರಿಸಲು ಮುಂದಾಗಿತ್ತು. ಇದೀಗ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಶೇ.51 ರಷ್ಟು ಪಾಲನ್ನು ಹೊಂದಿದ್ದಾರೆ.