Tag: paython

  • ಕಚ್ಚಿದ ಹೆಬ್ಬಾವಿನೊಂದಿಗೇ ಆಸ್ಪತ್ರೆಗೆ ಬಂದ ಸ್ನೇಕ್ ಮಾಸ್ಟರ್!

    ಕಚ್ಚಿದ ಹೆಬ್ಬಾವಿನೊಂದಿಗೇ ಆಸ್ಪತ್ರೆಗೆ ಬಂದ ಸ್ನೇಕ್ ಮಾಸ್ಟರ್!

    ಉಡುಪಿ: ಹೆಬ್ಬಾವಿನಿಂದ ಕಚ್ಚಿಸಿಕೊಂಡು ಹೆಬ್ಬಾವಿನ ಜೊತೆಗೇ ವ್ಯಕ್ತಿ ಆಸ್ಪತ್ರೆಗೆ ಬಂದ ಘಟನೆ ಉಡುಪಿಯಲ್ಲಿ ನಡೆದಿದೆ.

    ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರಿನ ಕೋಟೆಬಾಗಿಲು ಪಾರ್ತಿಕಟ್ಟೆಯ ಬಳಿಯ ಮನೆಯೊಂದರಲ್ಲಿ ಬೃಹತ್ ಗಾತ್ರದ ಹಾವನ್ನು ಹೆಮ್ಮಾಡಿಯ ಸ್ನೇಕ್ ಮಾಸ್ಟರ್ ಜೋಸೆಫ್ ಲೂವಿಸ್ ಹಿಡಿಯಲು ಯತ್ನಿಸಿದ್ದರು. ಈ ಸಂದರ್ಭ ಅವರ ಬಲಗೈಗೆ ಹಾವು ಕಚ್ಚಿದ್ದು, ಅದೇ ಹಾವಿನ ಸಮೇತ ಜೋಸೆಫ್ ಆಸ್ಪತ್ರೆಗೆ ತೆರಳಿ ವೈದ್ಯರ ಮುಂದೆ ನಿಂತಿದ್ದಾರೆ.

    ಪಾರ್ತಿಕಟ್ಟೆಯ ನಿವಾಸಿಯೋರ್ವರ ಮನೆಯ ಹಿತ್ತಲಲ್ಲಿ ಕೊಳಕು ಮಂಡಲ ಇದೆಯೆಂದು ಫೋನ್ ಮಾಡಿದ್ದರು. ಹೆಮ್ಮಾಡಿಯ ಸ್ನೇಕ್ ಮಾಸ್ಟರ್ ಜೋಸೆಫ್ ಲೂವಿಸ್ ಸ್ಥಳಕ್ಕೆ ತೆರಳಿ ಹಾವು ಹಿಡಿಯಲು ಮುಂದಾಗಿದ್ದಾರೆ. ಸಂಪೂರ್ಣ ಹಾವು ಪೊದೆಯೊಳಗಿದ್ದು, ಪೊದೆಗಳನ್ನು ಬಿಡಿಸುತ್ತಿರುವಾಗ ಬೆದರಿದ ಹಾವು ಸ್ನೇಕ್ ಮಾಸ್ಟರ್ ಜೋಸೆಫ್ ಅವರ ಬಲಗೈಗೆ ಕಚ್ಚಿದೆ.

    ಕಚ್ಚಿದ ತಕ್ಷಣ ಶಾಕ್ ಆಗಿ ಜೋಸೆಫ್ ಹಾವನ್ನು ಬಿಟ್ಟಿದ್ದರು. ಬಳಿಕ ತಡಮಾಡದೆ ಕೈಗೊಂದು ಬಟ್ಟೆ ಕಟ್ಟಿಕೊಂಡು ಹಾವನ್ನು ಹಿಡಿದಿದ್ದಾರೆ. ಹಾವಿನೊಂದಿಗೆ ಸ್ಥಳೀಯರ ಸಹಕಾರದಿಂದ ಕುಂದಾಪುರ ಆಸ್ಪತ್ರೆಗೆ ಧಾವಿಸಿದ್ರು. ವೈದ್ಯರು ಚಿಕಿತ್ಸೆ ನೀಡಿದ ನಂತರ ಜೋಸೆಫ್ ಮನೆಗೆ ವಾಪಾಸ್ಸಾಗಿದ್ದಾರೆ.

    ಕೆಲವು ವರ್ಷಗಳಿಂದ ಹೆಮ್ಮಾಡಿಯಲ್ಲಿ ರಿಕ್ಷಾ ಚಾಲನೆ ವೃತ್ತಿಯ ಜೊತೆಗೆ ಹಾವು ಹಿಡಿಯುವ ಕಲೆ ಕರಗತ ಮಾಡಿಕೊಂಡಿದ್ದ ಜೋಸೆಫ್, ತಾಲೂಕಿನಲ್ಲಿ 2 ಸಾವಿರಕ್ಕೂ ಮಿಕ್ಕಿ ವಿಷಪೂರಿತ ಹಾವುಗಳನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

  • ಹೆಬ್ಬಾವಿನ ಹೊಟ್ಟೆ ಸೀಳಿ ಯುವಕನ ಮೃತ ದೇಹ ಹೊರ ತೆಗೆಯುವ ವೈರಲ್ ವಿಡಿಯೋ ನೋಡಿ

    ಹೆಬ್ಬಾವಿನ ಹೊಟ್ಟೆ ಸೀಳಿ ಯುವಕನ ಮೃತ ದೇಹ ಹೊರ ತೆಗೆಯುವ ವೈರಲ್ ವಿಡಿಯೋ ನೋಡಿ

    ಜಕರ್ತಾ: ಹೆಬ್ಬಾವು ನಿಜವಾಗ್ಲೂ ಮನುಷ್ಯನನ್ನ ನುಂಗುತ್ತಾ? ಇಂಥದ್ದೊಂದು ಅನುಮಾನ ಎಷ್ಟೋ ಜನರನ್ನ ಕಾಡ್ತಿದೆ. ಆದ್ರೆ ನಿಜವಾಗ್ಲೂ ಹೆಬ್ಬಾವು ಮನುಷ್ಯನನ್ನ ನುಂಗುತ್ತೆ ಅನ್ನೋದಕ್ಕೆ ಇಂಡೋನೇಶ್ಯಾದಲ್ಲಿ ನಡೆದ ಘಟನೆ ಪ್ರತ್ಯಕ್ಷ ಸಾಕ್ಷಿ.

    ಹೌದು. ಸುಲಾವೆಸಿ ಪೂರ್ವ ದ್ವೀಪದ ಸಾಲೋಬಿರೋ ಗ್ರಾಮದ ರೈತನನ್ನು ಹೆಬ್ಬಾವು ನುಂಗಿದ್ದು, 7 ಮೀಟರ್ ಉದ್ದದ ಹೆಬ್ಬಾವಿನ ಹೊಟ್ಟೆ ಸೀಳಿದಾಗ ರೈತನ ಶವ ಪತ್ತೆಯಾಗಿದೆ. ಮೃತ ರೈತನನ್ನು 25 ವರ್ಷದ ಅಕ್ಬರ್ ಎಂದು ಗುರುತಿಸಲಾಗಿದೆ. ಈ ಹೆಬ್ಬಾವನ್ನು ಸೀಳಿ ಅಕ್ಬರ್ ಮೃತ ದೇಹವನ್ನು ಹೊರತೆಗೆಯೋ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ನಡೆದಿದ್ದೇನು?: ತಾಳೆ ಹಣ್ಣು ಕೊಯ್ಯಲೆಂದು ಜಮೀನಿಗೆ ಹೋದಾಗ ದೈತ್ಯ ಹೆಬ್ಬಾವು ಆತನನ್ನ ನುಂಗಿದೆ. ಇತ್ತ ರಾತ್ರಿಯಾದ್ರೂ ರೈತ ಮನೆಗೆ ಬರದಿರುವುದರಿಂದ ಆತಂಕಗೊಂಡ ಪೋಷಕರು ಎಷ್ಟು ಹುಡುಕಾಡಿದ್ರು ಆತ ಸಿಗಲಿಲ್ಲ. ಆದ್ರೆ ಹೆಬ್ಬಾವೊಂದು ಜಮೀನಿನಲ್ಲಿ ಒದ್ದಾಡುತ್ತಿತ್ತು. ಕೊನೆಗೆ ರೈತ ಧರಿಸಿದ್ದ ಶೂಗಳು ಕೃಷಿ ಸಲಕರಣೆಗಳು ಹೆಬ್ಬಾವಿನ ಪಕ್ಕದಲ್ಲೇ ಇತ್ತು. ಇದರಿಂದ ಅನುಮಾನಗೊಂಡ ರೈತರು ಹೆಬ್ಬಾವಿನ ಹೊಟ್ಟೆ ಸೀಳಿದಾಗ ರೈತನ ಶವ ದೊರೆತಿದೆ.

    https://www.youtube.com/watch?v=XikZkwM_uNI

  • ಶಾಕಿಂಗ್: ಯುವತಿಯ ಕಿವಿಯಲ್ಲಿ ಸಿಲುಕಿಕೊಳ್ತು ಹೆಬ್ಬಾವು!

    ಲಾಸ್ ಏಂಜಲಿಸ್: ಕೆಲವೊಮ್ಮೆ ಕಿವಿಯೊಳಗೆ ಇರುವೆಯೋ, ಜಿರಲೆಯೋ ಹೋಗಿ ಸಿಲುಕಿಕೊಂಡಿರೋ ಘಟನೆ ಬಗ್ಗೆ ಕೇಳಿರ್ತೀವಿ. ಆದ್ರೆ ಅಮೆರಿಕದಲ್ಲಿ ಯುವತಿಯೊಬ್ಬಳ ಕಿವಿಯ ರಂಧ್ರದಲ್ಲಿ ಹೆಬ್ಬಾವೊಂದು ಸಿಕ್ಕಿ ಹಾಕಿಕೊಂಡ ಘಟನೆ ನಡೆದಿದೆ.

    ನಂಬಲು ಅಸಾಧ್ಯವಾದ್ರೂ ಇದು ನಿಜ. ಇಲ್ಲಿನ ಒರೆಗಾನ್ ನಿವಾಸಿಯಾದ 17 ವರ್ಷದ ಆಶ್ಲೀ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಆಕೆ ಸಾಕಿದ್ದ ಬಾಲ್ ಪೈಥಾನ್ ಜಾತಿಯ ಬಾರ್ಟ್ ಎಂಬ ಹೆಬ್ಬಾವು ಕಿವಿಯಲ್ಲಿ ಸಿಲುಕಿಕೊಂಡಿದೆ. ಈ ವೇಳೆ ಆಕೆ ಗಾಬರಿಗೊಂಡು ಹಾವನ್ನು ಹೊರಗೆಳೆಯಲು ಹರಸಾಹಸ ಪಟ್ಟಿದ್ದಾಳೆ. ಆದ್ರೆ ಅದು ಸಾಧ್ಯವಾಗದಿದ್ದಾಗ ಎಮರ್ಜೆನ್ಸಿ ನಂಬರ್ ಗೆ ಕರೆ ಮಾಡಿದ್ದಾಳೆ. ಕೂಡಲೇ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದಿದ್ದು, ಅವರೂ ಕೂಡ ಹಾವನ್ನು ತೆಗೆಯಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ಬಳಿಕ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದು, ವೈದ್ಯರು ಆಕೆಯ ಕಿವಿಯನ್ನು ಮರಗಟ್ಟುವಂತೆ ಔಷಧಿ ನೀಡಿ ಹಾವನ್ನು ಹೊರತೆಗೆದಿದ್ದಾರೆ.

    ಕಿವಿಯ ರಂಧ್ರದೊಳಗೆ ಹಾವು ಹೋಗಲು ಹೇಗೆ ಸಾಧ್ಯ?: ಕಿವಿಯಲ್ಲಿ ದೊಡ್ಡದಾದ ರಂಧ್ರವಾಗುವಂತೆ ಕಿವಿ ಚುಚ್ಚಿಸುವುದು ಇತ್ತೀಚಿನ ಫ್ಯಾಶನ್. ಇದಕ್ಕೆ ಸ್ಟ್ರೆಚ್ ಪಿಯರ್ಸಿಂಗ್ ಅಂತಾರೆ. ರಿಂಗ್‍ವೊಂದನ್ನು ಕಿವಿಯ ಆಲೆಗೆ ಹಾಕಲಾಗಿರುತ್ತದೆ. ಆಶ್ಲೀ ಕೂಡ ಇದೇ ರೀತಿ ಕಿವಿ ಚುಚ್ಚಿಸಿಕೊಂಡಿದ್ದರಿಂದ ಹಾವು ಒಳಗೆ ಸಿಲುಕಿ ಈ ಫಜೀತಿ ಅನುಭವಿಸಬೇಕಾಯ್ತು.