Tag: Payanigaru

  • ‘ಪಯಣಿಗರು’ ಪಯಣ ಏಪ್ರಿಲ್ 17ಕ್ಕೆ ಶುರು

    ‘ಪಯಣಿಗರು’ ಪಯಣ ಏಪ್ರಿಲ್ 17ಕ್ಕೆ ಶುರು

    ಬೆಂಗಳೂರು: ಕೋಳನ್‍ಕಲ್ ಮಹಾಗಣಪತಿ ಪ್ರೊಡಕ್ಷನ್ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ‘ಪಯಣಿಗರು’ ಚಿತ್ರವು ಇದೇ ಏಪ್ರಿಲ್ 17ರ ಬುಧವಾರ ಬಿಡುಗಡೆಯಾಗುತ್ತಿದೆ. ಜೀವನದಲ್ಲಿ ಸುಖ-ದುಃಖಗಳನ್ನೆಲ್ಲಾ ಅನುಭವಿಸಿ ನೆಮ್ಮದಿ ಪಡೆಯಲು ಗೋವಾ ಟ್ರಿಪ್ ಹೊರಡುವ ನಾಲ್ವರು ಗೆಳೆಯರು ಅಲ್ಲಿ ಏನೆಲ್ಲಾ ಅನುಭವಿಸುತ್ತಾರೆ ಎನ್ನುವ ಕಥಾಹಂದರವಿರುವ ಈ ಚಿತ್ರವನ್ನು ಡೀಲ್ ರಾಜ, ಸಡಗರ ಚಿತ್ರಗಳನ್ನು ನಿರ್ದೇಶಿಸಿದ್ದ ರಾಜ್ ಗೋಪಿ ನಿರ್ದೇಶನ ಮಾಡಿದ್ದಾರೆ.

    ವಿನುಮನಸ್ಸು ಸಂಗೀತ, ರಾಜಶಿವಶಂಕರ್ ಛಾಯಾಗ್ರಹಣ, ರವಿಚಂದ್ರಕುಮಾರ್ ಸಂಕಲನ, ಕೆ.ಕಲ್ಯಾಣ ಸಾಹಿತ್ಯ, ರಾಜಗೋಪಿ ಸಂಭಾಷಣೆ ರಚಿಸಿದ್ದಾರೆ. ಲಕ್ಷ್ಮಣ್, ಶಿವಶಂಕರ್, ಅಶ್ವಿನ್ ಹಾಸನ್, ರಾಘವೇಂದ್ರ ನಾಯಕ್, ಸುಧೀರ್ ಮೈಸೂರು, ರಾಘವೇಂದ್ರ ಬೂದನೂರು, ನಾಗರಾಜರಾವ್, ಸುಜಾತ, ಭಾಸ್ಕರ್ ಕೆ.ಆರ್, ರಘುಕುಮಾರ್, ಚೇತನ್ ಮುಂತಾದವರ ತಾರಾಬಳಗವಿದೆ.

  • ಗೋವಾ ಟ್ರಿಪ್ ಹೊರಟ ಪಯಣಿಗರ ಟ್ರೇಲರ್ ಅನಾವರಣ

    ಗೋವಾ ಟ್ರಿಪ್ ಹೊರಟ ಪಯಣಿಗರ ಟ್ರೇಲರ್ ಅನಾವರಣ

    ಬೆಂಗಳೂರು: ಈ ಹಿಂದೆ ಸಡಗರ, ಡೀಲ್ ರಾಜ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ರಾಜ್ ಗೋಪಿ ಈಗ ಮತ್ತೊಂದು ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಪಯಣಿಗರು ಎಂಬ ವಿಭಿನ್ನ ಶೀರ್ಷಿಕೆ ಹೊಂದಿರುವ ಈ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಬಿಗ್‍ಬಾಸ್ ಹಾಗೂ ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಟ್ರೈಲರ್ ಅನಾವರಣಗೊಳಿಸಿದರು. ಜೀವನದಲ್ಲಿ ಸುಖ-ದುಃಖಗಳನ್ನೆಲ್ಲ ಅನುಭವಿಸಿ ನೆಮ್ಮದಿ ಪಡೆಯಲು ಗೋವಾ ಟ್ರಿಪ್ ಹೊರಡುವ ನಾಲ್ವರು ಗೆಳೆಯರ ಕಥೆ ಇದಾಗಿದೆ. ನಲವತ್ತು ದಾಟಿದ ಈ ಸ್ನೇಹಿತರು ಮನೆಯಲ್ಲಿ ಹೆಂಡತಿಯರ ವಿರೋಧದ ನಡುವೆಯೂ ಗೋವಾ ಪಯಾಣ ಆರಂಭಿಸುತ್ತಾರೆ. ನಂತರ ಈ ನಾಲ್ವರ ಜರ್ನಿಯಲ್ಲಿ ಏನೆಲ್ಲಾ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ ಎಂಬುದೇ ಪಯಣಿಗರ ಚಿತ್ರದ ಕಥೆ. ಕೆಂಪಿರುವೆ ಖ್ಯಾತಿಯ ಲಕ್ಷ್ಮಣ್, ಶಿವಶಂಕರ್ ಅಶ್ವಿನ್ ಹಾಸನ್, ರಾಘವೇಂದ್ರ ಹಾಗೂ ಇತರರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

    ಈ ಸಂದರ್ಭದಲ್ಲಿ ಚಿತ್ರದ ಕುರಿತಂತೆ ಮಾತನಾಡಿದ ರಾಜ್‍ಗೋಪಿ ಅವರವರ ಜೀವನದಲ್ಲಿ ಪ್ರತಿಯೊಬ್ಬರು ಪಯಣಿಗರೇ. ಆ ಪಯಣ ಮುಗಿಯುವವರೆಗೆ ನಾವು ಸಂತೋಷವಾಗಿದ್ದು ಇತರರನ್ನು ಸಂತೋಷವಾಗಿಡಿ ಅನ್ನೋದೆ ಈ ಚಿತ್ರದ ಕಥೆ. ಈ ಚಿತ್ರದಲ್ಲಿ ಲವ್ ಜರ್ನಿ, ಕಾಮಿಡಿ ಜರ್ನಿ ಎರಡೂ ಇದೆ. ಸಂಸಾರದ ನೊಗವನ್ನು ಹೊತ್ತ ಈ ನಾಲ್ವರು ಗೋವಾ ಪ್ರಯಾಣಕ್ಕೆ ಅಲ್ಲಿ ಏನೋ ಒಂದು ಎಡವಟ್ಟಿನಲ್ಲಿ ಸಿಕ್ಕಿಹಾಕಿಕೊಂಡು ಮತ್ತೆ ಅದರಿಂದ ಹೇಗೆ ಹೊರಬರುತ್ತಾರೆ. ಪ್ರತಿಯೊಬ್ಬರ ಜೀವನಕ್ಕೆ ಬೆಲೆ ಕೊಡಬೇಕು, ಕುಟುಂಬಕ್ಕೆ ಬೆಲೆ ಕೊಡಬೇಕು. ಮನೆಯವರಿಗೆ ಒಂದಷ್ಟು ಕಾಲವನ್ನು ಮೀಸಲಿಡಿ ಎಂದು ಈ ಚಿತ್ರದ ಮೂಲಕ ಸಂದೇಶ ಹೇಳಹೊರಟಿದ್ದೇವೆ ಎಂದು ಹೇಳಿದರು. ವಿನು ಮನಸ್ಸು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. 60-70 ಭಾಗದಷ್ಟು ಚಿತ್ರದ ಕಥೆ ಕಾರಿನಲ್ಲೇ ನಡೆಯುತ್ತದೆ.