Tag: Payal Rohtagi

  • ಮಕ್ಕಳಾದ್ಮೇಲೆ ಮದ್ವೆ ಆಗೋಣ : ಕಂಗನಾ ರಣಾವತ್ ಶೋನಲ್ಲಿ ಭಾವುಕ ಮಾತು

    ಮಕ್ಕಳಾದ್ಮೇಲೆ ಮದ್ವೆ ಆಗೋಣ : ಕಂಗನಾ ರಣಾವತ್ ಶೋನಲ್ಲಿ ಭಾವುಕ ಮಾತು

    ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ನಡೆಸಿಕೊಡುವ ಶೋನಲ್ಲಿ ಏನೆಲ್ಲ ಆವಾಂತರಗಳು ನಡೆಯುತ್ತಿವೆ. ಪೂನಂ ಪಾಂಡೆ ಸೇರಿದಂತೆ ಹಲವು ಕಲಾವಿದರು ನಾಲಿಗೆಗೆ ಫಿಲ್ಟರ್ ಇಲ್ಲದೇ ಮಾತನಾಡುತ್ತಿದ್ದಾರೆ. ಪೂನಂ ಈ ಹಿಂದೆ ಟಾಪ್ ಲೆಸ್ ಆಗಿ ನಿಲ್ಲುತ್ತೇನೆ ಎಂದು ಹೇಳಿಕೆ ನೀಡಿ, ಅದರಂತೆ ನಡೆದುಕೊಂಡರು. ತಮ್ಮ ಅನೈತಿಕ ಸಂಬಂಧ, ತಮಗಾದ ಮೋಸ, ಬಾಯ್ ಫ್ರೆಂಡ್, ಗರ್ಲ್ ಫೆಂಡ್ ಹೀಗೆ ಏನೇನೋ ನೆನಪುಗಳು ಈ ಶೋನಲ್ಲಿ ಬರುತ್ತಲೇ ಇರುತ್ತವೆ. ಈ ಬಾರಿ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿ ಆಯಿತು ಲಾಕ್ ಅಪ್ ಶೋ. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ: ಅಜಯ್ ದೇವಗನ್ ಪ್ರಶ್ನೆಗೆ ಕಿಚ್ಚ ಸುದೀಪ್ ಖಡಕ್ ಉತ್ತರ

    ನಟಿ ಪಾಯಲ್ ರೊಹಟಗಿ ಮಾತನಾಡುತ್ತಾ, ‘ತಮಗೆ ಮಕ್ಕಳು ಆಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ನನ್ನ ಬಾಯ್ ಫ್ರೆಂಡ್ ಸಂಗ್ರಾಮ್ ಗೆ ಮಕ್ಕಳೆಂದರೆ ತುಂಬಾ ಪ್ರೀತಿ. ಐವಿಎಫ್ ಮಾಡಿಸಿರುವುದು ಫೇಲ್ ಆಯಿತು. ಹಾಗಾಗಿ ನಾವು ಇನ್ನೂ ಮದುವೆ ಆಗಿಲ್ಲ. ಮಕ್ಕಳಾದ ಮೇಲೆಯೇ ಮದುವೆ ಆಗೋಣ ಅಂತ ತೀರ್ಮಾನಿಸಿದೆ. ಅಲ್ಲದೇ, ಮಕ್ಕಳಾಗುವ ಹುಡುಗಿಯೊಂದಿಗೆ ಮದುವೆಯಾಗು ಅಂತ ಸಂಗ್ರಾಮ್ ಗೆ ಹೇಳಿರುವೆ’ ಎಂದು ಹೇಳುವ ಮೂಲಕ ಇಡೀ ಶೋ ಅನ್ನು ಭಾವುಕ ಪ್ರಪಂಚಕ್ಕೆ ಕರೆದುಕೊಂಡು ಹೋದರು. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ : ಸುದೀಪ್ ಸರಣಿ ಟ್ವಿಟ್ ಗೆ ತಪ್ಪಾಗಿ ತಿಳ್ಕೊಂಡಿದ್ದೆ ಎಂದ ಅಜಯ್ ದೇವಗನ್

    ತನ್ನ ಪ್ರೇಮಿಗಾಗಿ ಹುಡುಗಿಯೊಬ್ಬಳು ಏನು ಬೇಕಾದರೂ ತ್ಯಾಗಕ್ಕೆ ಸಿದ್ಧಳಾಗಿರುತ್ತಾಳೆ ಎಂದು ಮತ್ತೆ ಮಾತು ಮುಂದುವರಿಸಿದ ರೊಹಟಗಿ ‘ಸಂಗ್ರಾಮ್ ಗೆ ಮಕ್ಕಳ ಜತೆ ಹೇಗೆ ಇರುತ್ತಾರೆ ಎನ್ನುವುದನ್ನು ನಾನು ಬಲ್ಲೆ. ಅವರೊಂದಿಗೆ ಮಕ್ಕಳು ಸದಾ ಇರಬೇಕು ಎಂದು ಬಯಸುತ್ತಾರೆ. ಆದರೆ, ನನ್ನಿಂದ ಅದು ಸಾಧ್ಯವಾಗುತ್ತಿಲ್ಲ. ಆ ನೋವಿನೊಂದಿಗೆ ನಾನು ಇರಲಾರೆ. ಈ ಶೋ ಮೂಲಕವೂ ಅವರನ್ನು ಕೇಳಿಕೊಳ್ಳುತ್ತೇನೆ. ಮತ್ತೊಂದು ಹುಡುಗಿಯನ್ನು ನೋಡಿಕೊಂಡು ಖುಷಿಯಾಗಿರಿ’ ಎಂದು ರೊಹಟಗಿ ಮನವಿ ಮಾಡಿದ್ದಾರೆ. ಇದನ್ನೂ ಓದಿ : ನಟ ಶಾರುಖ್ ಖಾನ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದ ಗುಜರಾತ್ ಹೈಕೋರ್ಟ್

    ಈ ಶೋ ಕುರಿತು ಪ್ರತಿಕ್ರಿಯೆ ನೀಡಿರುವ ಸಂಗ್ರಾಮ್ ‘ಅವಳು ಮತ್ತು ನಾನು ಈಗ ಹೇಗಿದ್ದೆವೋ ಹಾಗೆ ಇರುವುದಕ್ಕೆ ಬಯಸುತ್ತೇವೆ. ಇನ್ನೊಂದು ಮದ್ವೆ ಆಗುವುದು ಮತ್ತು ಹುಡುಗಿಯನ್ನು ನೋಡುವುದನ್ನು ನನ್ನಿಂದ ಕೇಳುವುದಕ್ಕೂ ಆಗುವುದಿಲ್ಲ. ಮಕ್ಕಳಾಗದಿದ್ದರೆ ಏನಾಯಿತು? ನಾವೇ ಮಕ್ಕಳಂತೆ ಇರೋಣ’ ಎಂದಿದ್ದಾರೆ.

  • ಸಿನಿಮಾ ರಂಗದಲ್ಲಿ ಬೆಳೆಯೋಕೆ ಮಾಟ-ಮಂತ್ರ ಮಾಡಿಸ್ತಿದ್ದರಂತೆ ಕಂಗನಾ ರಣಾವತ್

    ಸಿನಿಮಾ ರಂಗದಲ್ಲಿ ಬೆಳೆಯೋಕೆ ಮಾಟ-ಮಂತ್ರ ಮಾಡಿಸ್ತಿದ್ದರಂತೆ ಕಂಗನಾ ರಣಾವತ್

    ದಿನದಿಂದ ದಿನಕ್ಕೆ ಕಂಗನಾ ರಣಾವತ್ ನಡೆಸಿಕೊಡುತ್ತಿರುವ ರಿಯಾಲಿಟಿ ಶೋ ಸಾಕಷ್ಟು ಸದ್ದು ಮಾಡುತ್ತಿದೆ. ಒಂದೊಂದು ಸಲ ಆ ಶೋ ಸ್ಪರ್ಧಿಯಿಂದಲೋ ಅಥವಾ ಮತ್ತೊಂದು ಸಲ ಸ್ವತಃ ಕಂಗನಾ ಹಾಡುವ ಮಾತಿನಿಂದಲೂ ವಿವಾದವಂತೂ ಆಗುತ್ತದೆ. ಪ್ರತಿ ಬಾರಿಯೂ ಪೂನಂ ಪಾಂಡೆ ಒಂದಿಲ್ಲೊಂದು ಗೋಳು ತೋಡಿಕೊಂಡು ಸುದ್ದಿ ಆಗುತ್ತಿದ್ದರು. ಈ ಬಾರಿ ಖ್ಯಾತ ನಟಿ ಪಾಯಲ್ ಸರದಿ. ಅವರ ಬದುಕಿನಲ್ಲಿ ಆದ ಅಚ್ಚರಿಯ ಸುದ್ದಿಯೊಂದನ್ನು ಹೇಳಿ ಸ್ವತಃ ಕಂಗನಾ ರಣಾವತ್ ಗೆ ಬೆಚ್ಚಿ ಬೀಳಿಸಿದ್ದಾಳೆ. ಇದನ್ನೂ ಓದಿ : ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ಈ ಶೋನಲ್ಲಿ ಪಾಯಲ್ ಎಲಿಮಿನೇಷನ್ ಹಂತ ತಲುಪಿದ್ದಾರೆ. ಹಾಗಾಗಿ ಇದರಿಂದ ತಪ್ಪಿಸಿಕೊಳ್ಳಲು ಯಾರಿಗೂ ಗೊತ್ತಿರದ ಸತ್ಯ ಸಂಗತಿಯೊಂದನ್ನು ತಿಳಿಸಿ ಎಂದು ಕಂಗನಾ ಕೇಳಿದರು. ಅದಕ್ಕೆ ಉತ್ತರವಾಗಿ ಪಾಯಲ್, ತಾವು ಮಾಟ-ಮಂತ್ರ ಮಾಡಿಸಿದ್ದನ್ನು ಬಹಿರಂಗಪಡಿಸಿದರು. ಇದನ್ನೂ ಓದಿ : ಕೆಜಿಎಫ್ ಸಿನಿಮಾ ಆಗೋಕೆ ಮೂವರು ಮಹಿಳೆಯರು ಕಾರಣ: ವಿಜಯ್ ಕಿರಗಂದೂರು

    “ನಾನು ಸಿನಿಮಾ ರಂಗದಲ್ಲಿ 15 ವರ್ಷಗಳಿಂದ ಇರುವೆ. ಇಲ್ಲಿ ಸೋಲು ಮತ್ತು ಗೆಲುವನ್ನೂ ಕಂಡಿರುವೆ. ಒಂದು ಹಂತದಲ್ಲಿ ನನ್ನ ವೃತ್ತಿ ಜೀವನ ಮುಳುಗತೊಡಗಿತ್ತು. ಆವಾಗ ನಾನು ಮಾಟ ಮಾಡಿಸಲು ಮುಂದಾದೆ. ಮುಂಬಯಿನಲ್ಲಿ ವಶೀಕರಣ ಮಾಡುವಂತಹ ವ್ಯಕ್ತಿಯನ್ನು ಸಂಪರ್ಕಿಸಿ ಒಬ್ಬ ನಿರ್ಮಾಪಕನ ಜತೆ ಕೆಲಸ ಮಾಡುವುದಕ್ಕಾಗಿ ನಾನು ವಶೀಕರಣ ಮಾಡಿದೆ’’ ಎಂದು ಹೇಳಿದರು ಪಾಯಲ್. ಇದನ್ನೂ ಓದಿ : ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

    ಇದೇ ಸಂದರ್ಭದಲ್ಲಿ ಕಂಗನಾ ರಣಾವತ್ ಕೂಡ ತಮ್ಮ ಜೀವನದಲ್ಲಿ ನಡೆದ ಬ್ಲ್ಯಾಕ್ ಮ್ಯಾಸಿಕ್ ವಿಷಯವೊಂದನ್ನು ಹಂಚಿಕೊಂಡರು. ‘ಕಂಗನಾ ರಣಾವತ್ ಕೂಡ ಬ್ಲ್ಯಾಕ್ ಮ್ಯಾಸಿಕ್ ಮೂಲಕ ಬಾಲಿವುಡ್ ನ ಅನೇಕರನ್ನು ವಶೀಕರಣ ಮಾಡುತ್ತಾರೆ ಎನ್ನುವ ಸುದ್ದಿಯಿತ್ತು. ನನ್ನ ಬಾಯ್ ಫ್ರೆಂಡ್ ಕೂಡ ನನ್ನ ಮೇಲೆ ಇದೇ ರೀತಿ ಆರೋಪ ಮಾಡಿದ್ದ. 2016ರಲ್ಲಿ ನಾನೂ ಕೂಡ ಮಾಟ ಮಂತ್ರದ ಕಾರಣಕ್ಕಾಗಿ ಸಾಕಷ್ಟು ಸುದ್ದಿ ಆದೆ’ ಎಂದು ಹೇಳಿದರು. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು

    ಕೊನೆಗೆ ಇದೆಲ್ಲವನ್ನೂ ಮಾಡಬೇಡಿ. ನಿಮಗೆ ಸೌಂದರ್ಯವಿದೆ. ಸೆಳೆಯುವಂತಹ ಶಕ್ತಿಯಿದೆ. ಬುದ್ಧಿವಂತರು, ಪ್ರತಿಭಾವಂತರು ಅದರ ಮೂಲಕ ಜನರನ್ನು ಗೆಲ್ಲಿರಿ. ಈ ಗೆಲುವು ಯಾವತ್ತಿಗೂ ಶಾಶ್ವತವಾಗಿ ಇರುತ್ತದೆ ಎಂದು ಪಾಯಲ್ ಗೆ ಬುದ್ದಿ ಹೇಳಿದರು ಕಂಗನಾ ರಣಾವತ್.

  • ಮೋತಿಲಾಲ್ ನೆಹರು ವಿಡಿಯೋ ಪೋಸ್ಟ್- ನಟಿ ಪಾಯಲ್ ರೊಹ್ಟಗಿ ಬಂಧನ

    ಮೋತಿಲಾಲ್ ನೆಹರು ವಿಡಿಯೋ ಪೋಸ್ಟ್- ನಟಿ ಪಾಯಲ್ ರೊಹ್ಟಗಿ ಬಂಧನ

    ಮುಂಬೈ: ಬಾಲಿವುಡ್ ನಟಿ ಬಿಗ್‍ಬಾಸ್ ಮಾಜಿ ಸ್ಪರ್ಧಿ ಪಾಯಲ್ ರೊಹ್ಟಗಿ ಅವರು ಮತ್ತೆ ಸುದ್ದಿಯಾಗಿದ್ದು, ಮಾಜಿ ಪ್ರಧಾನಿ ಜವಾಹರ್‍ಲಾಲ್ ನೆಹರು ತಂದೆ ಮೋತಿಲಾಲ್ ನೆಹರು ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಪೊಲೀಸರು ಬಂಧಿಸಿದ್ದಾರೆ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಮೋತಿಲಾಲ್ ನೆಹರು ಅವರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನನ್ನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಆದರೆ ನಾನು ಈ ಮಾಹಿತಿಯನ್ನು ಗೂಗಲ್‍ನಿಂದ ಪಡೆದು ವಿಡಿಯೋ ಮಾಡಿದ್ದೇನೆ. ವಾಕ್ ಸ್ವಾತಂತ್ರ್ಯ ಎಂಬುದು ಇಲ್ಲಿ ಹಾಸ್ಯಾಸ್ಪದವಾಗಿದೆ ಎಂದು ಬರೆದಿದ್ದಾರೆ. ಈ ಟ್ವೀಟ್‍ಗೆ ಪ್ರಧಾನಿ ಕಾರ್ಯಾಲಯ ಹಾಗೂ ಗೃಹ ಸಚಿವಾಲಯದ ಟ್ವಿಟ್ಟರ್ ಖಾತೆಗಳನ್ನು ಇದಕ್ಕೆ ಟ್ಯಾಗ್ ಮಾಡಿದ್ದಾರೆ.

    https://twitter.com/Payal_Rohatgi/status/1206074851276083200?

    ಅಲ್ಲದೆ ಈ ಕುರಿತು ಎಸ್‍ಪಿ ಮಮತಾ ಗುಪ್ತಾ ಅವರು ಸಹ ಸ್ಪಷ್ಟಪಡಿಸಿದ್ದು, ಪ್ರಕರಣ ದಾಖಲಾದ ಹಿನ್ನೆಲೆ ಪಾಯಲ್ ರೊಹ್ಟಗಿ ಅವರನ್ನು ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

    ಜವಾಹರಲಾಲ್ ನೆಹರು ಹಾಗೂ ಇಂದಿರಾ ಗಾಂಧಿ ಕುರಿತು ಆಕ್ಷೇಪಾರ್ಹ ವಿಡಿಯೋಗಳನ್ನು ಮಾಡಿದ್ದಕ್ಕಾಗಿ ಡಿ.5ರಂದು ರಾಜಸ್ಥಾನ ಪೊಲೀಸರು ನಟಿ ಪಾಯಲ್ ರೊಹ್ಟಗಿ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ಜವಾಹರ್‍ಲಾಲ್ ನೆಹರು ಕುರಿತು ಪಾಯಲ್ ಆಕ್ಷೇಪಾರ್ಹ ವಿಡಿಯೋ ಮಾಡಿದ್ದಾರೆ ಎಂದು ಆರೋಪಿಸಿ ರಾಜಸ್ಥಾನದ ಯುತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚರ್ಮೆಶ್ ಶರ್ಮಾ ಅವರು ಈ ಕುರಿತು ದೂರು ದಾಖಲಿಸಿದ್ದರು.

    ತನಿಖೆ ನಡೆಸಲು ನಮ್ಮ ತಂಡ ಮುಂಬೈನಲ್ಲಿರುವ ಅವರ ಮನೆಗೆ ತೆರಳಿತು. ನಂತರ ರೊಹ್ಟಗಿ ಅವರನ್ನು ಗುಜರಾತ್‍ನ ಅವರ ಪೋಷಕರ ಮನೆಯಲ್ಲಿ ಭೇಟಿ ಮಾಡಿದೆವು. ನೋಟಿಸ್ ಜಾರಿ ಮಾಡಿ, ಇದಕ್ಕೆ ಉತ್ತರಿಸುವಂತೆ ತಿಳಿಸಿದ್ದೆವು ಎಂದು ಸದರ್ ಪೊಲೀಸ್ ಠಾಣೆಯ ತನಿಖಾಧಿಕಾರಿ ಲೋಕೆಂದ್ರ ಪಾಲಿವಾಲ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದರು.

    ಶರ್ಮಾ ಅವರು ಅಕ್ಟೋಬರ್‍ನಲ್ಲಿ ಬುಂಡಿ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಂತೆ ಪೊಲೀಸರು ಐಟಿ ಕಾಯ್ದೆಯ ಸೆಕ್ಷನ್ 66 ಹಾಗೂ 67 ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ರೊಹ್ಟಗಿ ಅವರು ಈ ಕುರಿತು ಕ್ಷಮೆಯಾಚಿಸಿ ಪೋಸ್ಟ್ ಮಾಡಿದ್ದರು.

    ಸದಾ ಕಾಂಗ್ರೆಸ್ ವಿರುದ್ಧ ಪೋಸ್ಟ್ ಮಾಡುವ ಪಾಯಲ್, ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಾರೆ. ಪೊಲೀಸರು ಪಾಯಲ್ ಅವರಿಗೆ ಐದು ಬಾರಿ ನೋಟಿಸ್ ನೀಡಿದ್ದು, ಉತ್ತರಿಸದ್ದಕ್ಕೆ ಬಂಧಿಸಿದ್ದಾರೆ ಎನ್ನಲಾಗಿದೆ.