ಇಂದು ನವದೆಹಲಿಯಲ್ಲಿ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಕನ್ನಡದ ಸಿನಿಮಾಗಳಿಗೂ ಹಲವು ಪ್ರಶಸ್ತಿಗಳು ಸಂದಿವೆ. ಈಗಾಗಲೇ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಸಾಗರ್ ಪುರಾಣಿಕ್ ನಿರ್ದೇಶನದ, ಪವನ್ ಒಡೆಯರ್ ನಿರ್ಮಾಣದ ಡೊಳ್ಳು ಚಿತ್ರಕ್ಕೆ ಎರಡು ಪ್ರಶಸ್ತಿಗಳು ಸಂದಿದ್ದು, ಸಂಚಾರಿ ವಿಜಯ್ ನಟನೆಯ ‘ತಲೆದಂಡ’ ಸಿನಿಮಾಗೂ ರಾಷ್ಟ್ರ ಪ್ರಶಸ್ತಿ ಸಂದಿದೆ. ಅಲ್ಲದೇ, ಗಿರೀಶ್ ಕಾಸರವಳ್ಳಿ ನಿರ್ದೇಶನದ, ವಾರ್ತಾ ಇಲಾಖೆ ನಿರ್ಮಿಸಿರುವ ಡಾ.ಪಿ.ಟಿ ವೆಂಕೇಶ್ ಕುಮಾರ್ ಬದುಕಿನ ‘ನಾದದ ನವನೀತ’ ಚಿತ್ರಕ್ಕೂ ರಾಷ್ಟ್ರೀಯ ಪ್ರಶಸ್ತಿ ಸಂದಿದೆ.
ಅತ್ಯುತ್ತಮ ಪರಿಸರ ಕಾಳಜಿ ಚಿತ್ರವಾಗಿ ಕೃಪಾಕರ್ ನಿರ್ದೇಶನದ, ಸಂಚಾರಿ ವಿಜಯ್ ನಟನೆಯ ‘ತಲೆದಂಡ’ ಚಿತ್ರ ರಾಷ್ಟ್ರೀಯ ಪ್ರಶಸ್ತಿ ದೊರೆತರೆ, ಲೋಕೇಷನ್ ಸೌಂಡ್ ಡಿಸೈನಿಂಗ್ ವಿಭಾಗದಲ್ಲಿ ಡೊಳ್ಳು ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ. ಅತ್ಯುತ್ತಮ ಪ್ರಾದೇಶಿಕ ಚಿತ್ರ ಡೊಳ್ಳು ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡರೆ, ಅತ್ಯುತ್ತಮ ಪ್ರಾದೇಶಿಕ ತುಳು ಸಿನಿಮಾ ಪ್ರಶಸ್ತಿಯು ಸಂತೋಷ್ ನಿರ್ದೇಶನದ ‘ಜೀಟಿಗೆ’ ದೊರೆತಿದೆ. ಕಲೆ ಮತ್ತು ಸಾಂಸ್ಕೃತಿಕ ಚಿತ್ರವಾಗಿ ಗಿರೀಶ್ ಕಾಸರವಳ್ಳಿ ನಿರ್ದೇಶನ ಮಾಡಿರುವ ‘ನಾದದ ನವನೀತ’ ಚಿತ್ರಕ್ಕೆ ಪ್ರಶಸ್ತಿ ಸಂದಿದೆ. ಇದನ್ನೂ ಓದಿ:`ಮಾರ್ಟಿನ್’ ಆ್ಯಕ್ಷನ್ ಸೀನ್‌ಗಾಗಿ ಧ್ರುವಾ ಸರ್ಜಾ- ಎ.ಪಿ ಅರ್ಜುನ್ ಭರ್ಜರಿ ತಯಾರಿ
ಅತ್ಯುತ್ತಮ ಪರಿಸರ ಕಾಳಜಿ ಚಿತ್ರ : ತಲೆದಂಡ
ಅತ್ಯುತ್ತಮ ಲೋಕೆಷನ್ ಸೌಂಡ್ ಡಿಸೈನ್ ಚಿತ್ರ : ಡೊಳ್ಳು
ಅತ್ಯುತ್ತಮ ಕಲೆ ಮತ್ತು ಸಾಂಸ್ಕೃತಿಕ ಚಿತ್ರ : ನಾದದ ನವನೀತ
ಅತ್ಯುತ್ತಮ ಪ್ರಾದೇಶಿಕ ಸಿನಿಮಾ : ಡೊಳ್ಳು
ಅತ್ಯುತ್ತಮ ಪ್ರಾದೇಶಿಕ ತುಳು ಸಿನಿಮಾ : ಜೀಟಿಗೆ
Live Tv
[brid partner=56869869 player=32851 video=960834 autoplay=true]
ಈಗಾಗಲೇ ಅನೇಕ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿರುವ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಡೊಳ್ಳು ಸಿನಿಮಾದ ಟೀಸರ್ ಇಂದು ರಿಲೀಸ್ ಆಗಿದೆ. ಪವನ್ ಒಡೆಯರ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಾಗರ್ ಪುರಾಣಿಕ್ ಈ ಚಿತ್ರದ ನಿರ್ದೇಶಕ.ಈಗಾಗಲೇ ಹತ್ತಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ ಈ ಸಿನಿಮಾದ್ದು.
ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಜನಜೀವನ ಮತ್ತು ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳ ಎಂಬ ಸಾರಂಶದೊಂದಿಗೆ ಹಳ್ಳಿಯಲ್ಲಿ ತೆರೆದುಕೊಳ್ಳುವ ಟೀಸರ್ ನಲ್ಲಿ ಡೊಳ್ಳಿನ ಮಹತ್ವದ ಬಗ್ಗೆ ತಿಳಿಸಲಾಗಿದೆ. ಕೈಲಾಸದಲ್ಲಿ ಕುಳಿತಿರುವ ಶಿವಪ್ಪನನ್ನು ಒಲಿಸಿಕೊಳ್ಳುವ ಭಕ್ತಿ ಮಾರ್ಗ ಕೂಡ ಡೊಳ್ಳು ಅಂತಾ ನಂಬಿರುವ ಹಳ್ಳಿ ಮಂದಿ ಸುತ್ತಾ, ಜನಪದ ಕಲೆ ಡೊಳ್ಳಿನ ಸುತ್ತಾ ಟೀಸರ್ ನ್ನು ಕಟ್ಟಿಕೊಡಲಾಗಿದೆ.
ಡೊಳ್ಳು ಕುಣಿತ ಕಂಟೆಂಟ್ ಹೊಂದಿರುವ ಈ ಸಿನ್ಮಾ ಈಗಾಗ್ಲೇ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅಲ್ಲದೇ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಯೂ ಪ್ರದರ್ಶನಗೊಂಡಿದೆ. ಗೋವಿಂದಾಯ ನಮಃ, ಗೂಗ್ಲಿ, ರಣ ವಿಕ್ರಮ, ಜೆಸ್ಸಿ, ನಟರಾಜ ಸರ್ವೀಸ್ ಮತ್ತು ನಟ ಸಾರ್ವಭೌಮ ಸಿನಿಮಾಗಳನ್ನು ನಿರ್ದೇಶಿಸಿರುವ ಪವನ್ ಒಡೆಯರ್, ತಮ್ಮದೇ ಒಡೆಯರ್ ಮೂವಿಸ್’ ನಿರ್ಮಾಣ ಸಂಸ್ಥೆಯಡಿ ಡೊಳ್ಳು ಚಿತ್ರ ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ : ಜೈ ಶ್ರೀರಾಮ್ ಎನ್ನುತ್ತಾ ಮುಸ್ಲಿಮರನ್ನು ಹತ್ಯೆ ಮಾಡುವುದು, ಕಾಶ್ಮೀರ ಪಂಡಿತರ ಹತ್ಯೆಗೆ ಸಮ: ಸಾಯಿ ಪಲ್ಲವಿ ವೀಡಿಯೋ ವೈರಲ್
ಮಹಾನ್ ಹುತಾತ್ಮ ಕಿರುಚಿತ್ರದ ಸಾರಥಿ ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಡೊಳ್ಳು ಸಿನಿಮಾದಲ್ಲಿ . ಕಿರುತೆರೆ ನಟ ಕಾರ್ತಿಕ್ ಮಹೇಶ್ ನಾಯಕನಾಗಿ, ನಿಧಿ ಹೆಗ್ಡೆ ನಾಯಕಿ ಪಾತ್ರ ನಿರ್ವಹಿಸಲಿದ್ದಾಪರೆ. ಉಳಿದಂತೆ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್ ಮತ್ತು ಶರಣ್ ಸುರೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀನಿಧಿ ಡಿಎಸ್ ಚಿತ್ರಕಥೆ ಬರೆದಿದ್ದು, ಅನಂತ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ. ಅಭಿಲಾಸ್ ಕಲಾಥಿ ಛಾಯಾಗ್ರಹಣ, ಬಿಎಸ್ ಕೆಂಪರಾಜು ಸಂಕಲನವಿದೆ.
ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ಪವನ್ ಒಡೆಯರ್, ತಮ್ಮದೇ ಒಡೆಯರ್ ಮೂವೀಸ್ ಚೊಚ್ಚಲ ಬಾರಿಗೆ ನಿರ್ಮಾಣ ಮಾಡಿರುವ ಸಿನಿಮಾ ಡೊಳ್ಳು. ಡೊಳ್ಳು ಕುಣಿತದ ಸುತ್ತ ಎಣೆದಿರುವ ಈ ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆಯೇ ಹರಿದು ಬಂದಿದೆ. ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಡೊಳ್ಳು ಸಿನಿಮಾ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದುಕೊಂಡಿದೆ. ಇಷ್ಟೆಲ್ಲಾ ಯಶಸ್ಸಿಗೆ ಕಾರಣದವರಿಗೆ ಇಡೀ ಚಿತ್ರತಂಡ ಧನ್ಯವಾದ ಅರ್ಪಿಸಿದೆ.
ಒಡೆಯರ್ ಮೂವೀಸ್ ನಡಿ ನಿರ್ಮಾಣದ ಮಾಡಿರುವ ಮೊದಲ ಸಿನಿಮಾವಾಗಿದ್ದು, ನಾನು ನನ್ನ ಪತ್ನಿ, ಸ್ನೇಹಿತರಾದ ಹರೀಶ್ ನಾರಾ, ಸಚಿನ್ ತಪಶೆಟ್ಟಿ, ನರಸಿಂಹ ಜೊತೆಗೂಡಿ ಚಿತ್ರ ನಿರ್ಮಾಣ ಮಾಡಿದ್ದೇವೆ. ಇದು ನಿಜವಾದ ಸಿನಿಮಾ. ಇಡೀ ತಂಡ ಸೇರಿಕೊಂಡು ತುಂಬಾ ಅದ್ಭುತ ಸಿನಿಮಾ ಮಾಡಿದ್ದಾರೆ. ನಿರ್ಮಾಪಕನಾಗಿ ನನಗೂ ಇದು ಹೊಸ ಅನುಭವ. ಸಿನಿಮಾದ ವಿಶೇಷ ಅಂದ್ರೆ ಇಡೀ ಡೊಳ್ಳು ಕಲಾವಿದರು ಅಭಿನಯಿಸಿರುವ ಚಿತ್ರ ಇದಾಗಿದೆ ಎಂದು ನಿರ್ಮಾಪಕ ಪವನ್ ಒಡೆಯರ್ ಅಭಿಪ್ರಾಯ ಹಂಚಿಕೊಂಡರು. ಇದನ್ನೂ ಓದಿ: ಮೂಸೆವಾಲಾ ರೀತಿಯಲ್ಲೇ ಹತ್ಯೆ ಮಾಡೋದಾಗಿ ಸಲ್ಮಾನ್‌ಖಾನ್‌ಗೆ ಬೆದರಿಕೆ – ಕೃಷ್ಣಮೃಗ ಬೇಟೆಯೇ ಮುಳುವಾಯ್ತ?
ಇಂತಹ ಅವಕಾಶ ಮಾಡಿಕೊಟ್ಟಿದ್ದಕ್ಕೆ ಪವನ್ ಸರ್ ಗೆ ಧನ್ಯವಾದ. ಕಿರುಚಿತ್ರಗಳನ್ನು ನಿರ್ದೇಶನ ಮಾಡಿದವರಿಗೆ ಸಿನಿಮಾ ಮಾಡುವುದು ದೊಡ್ದ ಸಾಹಸ. ಆ ಸಾಹಸ ಮಾಡುವುದಕ್ಕೆ ಇಡೀ ತಂಡ ಸಪೋರ್ಟ್ ಮಾಡಿದೆ. ಈ ಯಶಸ್ಸಿಗೆ ಕಾರಣವರಾದ ಎಲ್ಲರಿಗೂ ಧನ್ಯವಾದ ಎಂದು ನಿರ್ದೇಶಕ ಸಾಗರ್ ಪುರಾಣಿಕ್ ತಮ್ಮ ಅನಿಸಿಕೆ ಹಂಚಿಕೊಂಡರು.
ಸಾಗರ್ ಪುರಾಣಿಕ್ ನಿರ್ದೇಶನದ ಚೊಚ್ಚಲ ಸಿನಿಮಾವಾಗಿರುವ ಡೊಳ್ಳು ಚಿತ್ರದಲ್ಲಿ ಕಿರುತೆರೆ ನಟ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ, ನಾಯಕ-ನಾಯಕಿಯಾಗಿ ನಟಿಸಿದ್ದು, ಬಾಬು ಹಿರಣಯ್ಯ, ಚಂದ್ರ ಮಯೂರ್ ಶರಣ್ ಸುರೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅನಂತ್ ಕಾಮತ್ ಸಂಗೀತ, ಅಭಿಲಾಷ್ ಕಲಾಥಿ ಕ್ಯಾಮೆರಾವಿರುವ ಡೊಳ್ಳು ಸಿನಿಮಾ ಸದ್ಯದಲ್ಲಿಯೇ ಥಿಯೇಟರ್ ಅಂಗಳಕ್ಕೆ ಲಗ್ಗೆ ಇಡಲಿದೆ.
ಕನ್ನಡ ಚಿತ್ರರಂಗದ ಟ್ಯಾಲೆಂಟೆಂಡ್ ಡೈರೆಕ್ಟರ್, ಲಿರಿಕ್ಸ್ ರೈಟರ್, ನಿರ್ಮಾಪಕ ಪವನ್ ಒಡೆಯರ್ ಈಗ ಬಾಲಿವುಡ್‍ನತ್ತ ಹೆಜ್ಜೆ ಇಟ್ಟಿದ್ದಾರೆ. ಚಂದನವನದ ಚಿತ್ರರಸಿಕರ ಮಡಿಲಿಗೆ ‘ಗೋವಿಂದಾಯ ನಮಃ’, ‘ರಣವಿಕ್ರಮ’, ‘ಗೂಗ್ಲಿ’ ಮತ್ತು ‘ನಟಸಾರ್ವಭೌಮ’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಪವನ್ ಒಡೆಯರ್ ನಟನೆಯಲ್ಲಿಯೂ ಛಾಪೂ ಮೂಡಿಸಿದ್ದಾರೆ. ಕಳೆದ 10 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಗೂಗ್ಲಿ ಡೈರೆಕ್ಟರ್ ಈಗ ಡೈರೆಕ್ಟ್ ಆಗಿ ಬಾಲಿವುಡ್‍ಗೆ ಲ್ಯಾಂಡ್ ಆಗಿದ್ದಾರೆ.
‘ನೋಟರಿ’ ಚಿತ್ರಕ್ಕೆ ಪವನ್ ಸಾರಥಿ
ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮೊದಲ ಬಾಲಿವುಡ್ ಸಿನಿಮಾಗೆ ‘ನೋಟರಿ’ ಎಂದು ಟೈಟಲ್ ಇಡಲಾಗಿದ್ದು, ಇದೊಂದು ಕಾಮಿಡಿ ಡ್ರಾಮಾ ಸಿನಿಮಾವಾಗಿದೆ. ಬೆಂಗಾಳಿಯ ಖ್ಯಾತ ಕಲಾವಿದ, ನಿರ್ದೇಶಕ, ಬಿ’ಟೌನ್ ಬ್ಯೂಟೀಸ್‍ಗಳಾದ ವಿದ್ಯಾ ಬಾಲನ್, ಅನುಷ್ಕಾ ಶರ್ಮಾ ಹಾಗೂ ರವೀನಾ ಟಂಡನ್ ಜೊತೆ ಪರಂಬ್ರತ ಚಟ್ಟೋಪಾಧ್ಯಾಯ ಅವರು ನಟಿಸಿದ್ದಾರೆ. ಓಟಿಟಿಯಲ್ಲಿ ರಿಲೀಸ್ ಆಗಿರುವ ಸೂಪರ್ ಹಿಟ್ ಶೋ ‘ಅರಣ್ಯಕಾ’ದಲ್ಲಿ ಈ ನಟ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಹಳದಿ ಶೆರ್ವಾನಿ ಹಾಕಿಕೊಂಡು ಆಲಿಯಾ-ರಣಬೀರ್ ಅರಿಶಿಣ ಶಾಸ್ತ್ರಕ್ಕೆ ಹೊರಟ ಕರಣ್ ಜೋಹರ್
‘ನೋಟರಿ’ ಸಿನಿಮಾಗೆ ಪವನ್ ಒಡೆಯರ್ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆ ಸಹ ಹೊತ್ತಿದ್ದಾರೆ. ಗುಪ್ತ್, ಮೋಹರಾ, ಶೆರ್ ಷಾ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳ ಖ್ಯಾತ ನಿರ್ಮಾಪಕ ಶಬೀರ್ ಬಾಕ್ಸ್ ವಾಲ್ ಅವರ ‘ಕಾಶ್ ಎಂಟರ್ ಟೈನ್ ಮೆಂಟ್’ ಜೊತೆಗೂಡಿ ಪವನ್ ತಮ್ಮದೇ ಒಡೆಯರ್ ಮೂವೀಸ್ ಬ್ಯಾನರ್ ನಡಿ ಸಿನಿಮಾಗೆ ಹಣ ಹಾಕಿದ್ದಾರೆ.
ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಆಗಸ್ಟ್ ತಿಂಗಳಲ್ಲಿ ಮಧ್ಯಪ್ರದೇಶ ಅಥವಾ ಛತ್ತೀಸ್‌ಗಢದಲ್ಲಿ ಶೂಟಿಂಗ್ ಮಾಡಲು ಪ್ಲ್ಯಾನ್ ಹಾಕಿಕೊಂಡಿದೆ. ಸದ್ಯದಲ್ಲಿಯೇ ಉಳಿದ ತಾರಾಗಣ ಮತ್ತಿತರ ಅಪ್ಡೇಟ್‍ಗಳನ್ನು ಪ್ರಚಂಚದ ಎದುರು ತೆರೆದಿಡಲಿದ್ದಾರೆ. ಇದನ್ನೂ ಓದಿ: ರಾಖಿ ಸಾವಂತ್ ಗೆ ದುಬಾರಿ ಕಾರು ಕೊಡಿಸಿದ್ದು ಯಾರು? ವೀಡಿಯೋ ಸಮೇತ ಸಾಕ್ಷಿ ಇದೆ
ಪ್ರಸ್ತುತ ಪವನ್ ಒಡೆಯರ್ ‘ರೆಮೋ’ ಸಿನಿಮಾ ರಿಲೀಸ್‍ಗೆ ಎದುರು ನೋಡ್ತಿದ್ದಾರೆ. ಮೇ ತಿಂಗಳಲ್ಲಿ ಈ ಚಿತ್ರವನ್ನು ತೆರೆಗೆ ತರುವ ತಯಾರಿಯಲ್ಲಿದ್ದಾರೆ. ಇದರ ಜೊತೆಗೆ ವಿವಿಧ ದೇಶಗಳಲ್ಲಿ ಪ್ರದರ್ಶನ ಕಂಡು 12 ಪ್ರಶಸ್ತಿಗೆ ಭಜನವಾಗಿರುವ ‘ಡೊಳ್ಳು’ ಸಿನಿಮಾವನ್ನು ಬಿಗ್ ಸ್ಕ್ರೀನ್ ಗೆ ತರಲಿದ್ದಾರೆ.
ಕನ್ನಡ ಖ್ಯಾತ ನಿರ್ದೇಶಕ ಪವನ್ ಒಡೆಯರ್ ನಿರ್ಮಾಣದ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಾಗರ್ ಪುರಾಣಿಕ್ ನಿರ್ದೇಶನದ ಡೊಳ್ಳು ಸಿನಿಮಾಗೆ ಇದೀಗ ಮತ್ತೊಂದು ಅಂತಾರಾಷ್ಟ್ರೀಯ ಸಿನಿಮೋತ್ಸವದ ಪ್ರಶಸ್ತಿ ಸಂದಿದೆ. ರಾಜಸ್ಥಾನದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕನ್ನಡದ ಡೊಳ್ಳು ಚಿತ್ರಕ್ಕೆ ಸ್ಪೆಷಲ್ ಜೂರಿ ಅವಾರ್ಡ್ ಬೆಸ್ಟ್ ರಿಜಿನಲ್ ಫ್ಯೂಚರ್ ಫಿಲ್ಮ್ ಮತ್ತು ಬೆಸ್ಟ್ ಡೆಬ್ಯುಟಿ ಡೈರೆಕ್ಷನ್ ಆಫ್ ರಿಜಿನಲ್ ಫೀಚರ್ ಫಿಲ್ಮ್ ಎರಡು ಪ್ರಶಸ್ತಿಗಳ ಗೌರವ ದೊರೆತಿದೆ. ಈ ಸಂದರ್ಭದಲ್ಲಿ ನಿರ್ದೇಶಕ ಸಾಗರ್ ಪುರಾಣಿಕ್ ಪಬ್ಲಿಕ್ ಟಿವಿ ಡಿಜಿಟಲ್ ಜತೆ ಮಾತನಾಡಿದ್ದಾರೆ.
“ರಾಜಸ್ಥಾನ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವೆಲ್ ನಲ್ಲಿ ಸಿನಿಮಾಗೆ ಮತ್ತು ವೈಯಕ್ತಿಕವಾಗಿ ನನಗೆ ಪ್ರಶಸ್ತಿ ಬಂದಿದ್ದು ತುಂಬಾ ಖುಷಿ ತಂದಿದೆ. ಕನ್ನಡದ ಸಿನಿಮಾವೊಂದಕ್ಕೆ ಇಂತಹ ರಾಷ್ಟ್ರೀಯ ಮನ್ನಣೆ ಸಿಕ್ಕಾಗ ಸಹಜವಾಗಿಯೇ ಸಂಭ್ರಮ ಆಗುತ್ತದೆ. ಈಗಾಗಲೇ ಹತ್ತಾರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಪ್ರಶಸ್ತಿಗಳು ಡೊಳ್ಳು ಚಿತ್ರಕ್ಕೆ ಬಂದಿವೆ. ನನ್ನ ಸಂಸ್ಕೃತಿಯನ್ನು ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನಕ್ಕೆ ಎಲ್ಲ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆ’ ಎನ್ನುತ್ತಾರೆ ಸಾಗರ್ ಪುರಾಣಿಕ್. ಇದನ್ನೂ ಓದಿ : ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ
ನಾನಾ ನೆಲದಲ್ಲಿ ಡೊಳ್ಳಿನ ಸೌಂಡು
ಸಾಗರ್ ಪುರಾಣಿಕ್ ನಿರ್ದೇಶನದ ಡೊಳ್ಳು ಚಿತ್ರಕ್ಕೆ ಈಗಾಗಲೇ ಅಮೆರಿಕಾದ ಬಾಸ್ಟನ್ ನಗರಿಯಲ್ಲಿ ನಡೆದ ಕಲೈಡೋಸ್ಕೋಪ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಭಾರತೀಯ ಸಿನಿಮಾ ಪ್ರಶಸ್ತಿ ಮತ್ತು ಅತ್ಯುತ್ತಮ ತಾಂತ್ರಿಕ ಸಿನಿಮಾ ಹೀಗೆ ಎರಡು ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ಅಮೆರಿಕಾದ ಡಲ್ಲಾಸ್- ನ್ಯೂಯಾರ್ಕ್ ನಗರದ ದಕ್ಷಿಣ ಏಷ್ಯಾ ಚಿತ್ರೋತ್ಸವಕ್ಕೂ ಈ ಸಿನಿಮಾ ಅಧಿಕೃತವಾಗಿ ಆಯ್ಕೆಯಾಗಿ ವಿದೇಶಿ ನೆಲದಲ್ಲಿ ಕನ್ನಡ ಧ್ವಜ ಹಾರಿಸಿತ್ತು. ಅಲ್ಲದೇ, ಪ್ರತಿಷ್ಠಿತ ಧಾಕಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೂ ಡೊಳ್ಳು ಅಧಿಕೃತವಾಗಿ ಆಯ್ಕೆಯಾಗಿ ಹೆಮ್ಮೆ ಮೂಡಿಸಿತ್ತು.
ಗೋವಾದಲ್ಲಿ ನಡೆಯುವ 52 ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದಿಂದ ನಾಲ್ಕು ಚಿತ್ರಗಳು ಆಯ್ಕೆಯಾಗಿದ್ದವು. ಅದರಲ್ಲಿ ಡೊಳ್ಳು ಕೂಡ ಒಂದಾಗಿತ್ತು. ನೇಪಾಳ ಅಂತಾರಾಷ್ಟ್ರೀಯ ಸಿನಿಮೋತ್ಸವ, ಇನೋವೇಟಿವಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ದಾದಾ ಸಾಹೇಬ್ ಫಾಲ್ಕೆ ಹೆಸರಿನ ಅವಾರ್ಡ್, ಗೋವಾ ಫಿಲ್ಮ್ ಫೆಸ್ಟಿವಲ್ ನಲ್ಲಿ ಡೆಬ್ಯು ಕಾಂಪಿಟೇಷನ್ ವಿಭಾದಲ್ಲೂ ಆಯ್ಕೆ ಆಗಿತ್ತು. ಚೆನ್ನೈನಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವ, ಕೇಂದ್ರ ಸರಕಾರದಿಂದ ಬೆರ್ನಾಲ್ ಫೆಸ್ಟಿವೆಲ್ ಆಯ್ಕೆಯಾದ 9 ಭಾರತೀಯ ಸಿನಿಮಾಗಳ್ಲಲಿ ಡೊಳ್ಳು ಕೂಡ ಒಂದು ಎನ್ನುವ ಹೆಗ್ಗಳಿಕೆ ಈ ಸಿನಿಮಾ ಪಾತ್ರವಾಗಿತ್ತು.
ಅನಿರೀಕ್ಷಿತ ಅವಕಾಶ
ಡೊಳ್ಳು ಸಾಗರ್ ಪುರಾಣಿಕ್ ಅವರಿಗೆ ಬಂದ ಅನಿರೀಕ್ಷಿತ ಅವಕಾಶವಂತೆ. ಅಂದುಕೊಂಡಂತೆ ಆಗಿದ್ದರೆ, ನಿರ್ದೇಶಕ ಪವನ್ ಒಡೆಯರ್ ಮತ್ತು ಸಾಗರ್ ಒಂದು ಸಿನಿಮಾ ಮಾಡಬೇಕಿತ್ತು. ಅದು ಮುಂದುವರೆಯಲಿಲ್ಲ. ಈ ವೇಳೆಯಲ್ಲಿ ಸಾಗರ್ ಮತ್ತೊಂದು ಸಿನಿಮಾ ತಯಾರಿ ಮಾಡಿಕೊಳ್ಳುತ್ತಿದ್ದರಂತೆ. ಆಗ ತಮ್ಮ ಹೊಸ ಪ್ರೊಡಕ್ಷನ್ ಕಂಪೆನಿ ಶುರು ಮಾಡಿ, ಒಂದೊಳ್ಳೆ ಸಿನಿಮಾ ಮಾಡಬೇಕು ಎನ್ನುವುದು ಪವನ್ ಒಡೆಯರ್ ಆಸೆ ಆಗಿತ್ತು. ಸಡನ್ನಾಗಿ ನೆನಪಾಗಿದ್ದು ಸಾಗರ್ ಪುರಾಣಿಕ್. ಪವನ್ ಒಡೆಯರ್ ನಿರ್ಮಾಣದ ಮೊದಲ ಸಿನಿಮಾವನ್ನು ಸಾಗರ್ ಕಡೆಯಿಂದಲೇ ನಿರ್ದೇಶನ ಮಾಡಿಸಬೇಕು ಎನ್ನುವ ಆಸೆ ಮತ್ತು ಪವನ್ ಸಿನಿಮಾದಲ್ಲಿ ಕೆಲಸ ಮಾಡಬೇಕು ಎನ್ನುವ ಸಾಗರ್ ಆಸೆಯನ್ನು ಡೊಳ್ಳು ಸಿನಿಮಾ ಈಡೇರಿಸಿದೆ. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ: ವಕ್ಫ್ ಮಂಡಳಿಯ ಸುತ್ತೋಲೆಯಲ್ಲಿ ಏನಿದೆ? ಸುಪ್ರೀಂ ಕೋರ್ಟ್ ಹೇಳಿದ್ದೇನು?
ಡೊಳ್ಳಿನ ಸೌಂಡೇ ಸಿನಿಮಾಗೆ ಪ್ರೇರಣೆ
ನಿರ್ದೇಶಕ ಸಾಗರ್ ಪುರಾಣಿಕ್ ಅವರು ಡೊಳ್ಳು ಬಾರಿಸುವುದನ್ನು ಹಲವಾರು ಬಾರಿ ನೋಡಿದ್ದರೂ, ಅವತ್ತು ಕಾರ್ಯಕ್ರಮವೊಂದಕ್ಕೆ ಹೋದಾಗ ಸಡನ್ನಾಗಿ ಶುರುವಾದ ಡೊಳ್ಳಿನ ಸೌಂಡ್ ಗೆ ಮಾರು ಹೋಗಿ, ಅದನ್ನೇ ಮೂಲವಾಗಿಟ್ಟುಕೊಂಡು ಕಥೆ ಬರೆಯುವುದಕ್ಕೆ ಶುರು ಮಾಡಿದರಂತೆ. ಬರಹಗಾರ ಶ್ರೀನಿಧಿ ಡಿ.ಎಸ್ ಇದಕ್ಕೆ ಸಾಥ್ ನೀಡಿದ್ದಾರೆ. ನಗರೀಕರಣ ಮತ್ತು ವಾಸ್ತವತೆಯನ್ನು ಡೊಳ್ಳಿನೊಂದಿಗೆ ಸಮೀಕರಿಸಿ ಸಿನಿಮಾ ಮಾಡಿದ್ದಾರೆ. ಅದೇ ಕಾರಣಕ್ಕಾಗಿಯೇ ಡೊಳ್ಳು ಇಷ್ಟೊಂದು ಅಂತಾರಾಷ್ಟ್ರೀಯ ಮನ್ನಣೆ ದೊರೆತಿದೆ. ಸಿನಿಮಾ ಮಾಡುವಾಗ ಮಳೆ ಸೇರಿದಂತೆ ಹಲವು ಅಡೆತಡೆಗಳು ಎದುರಾದವು. ಯಾವುದನ್ನೂ ಲೆಕ್ಕಿಸದೇ ಬಜೆಟ್ ಹಿಗ್ಗಿದರೂ, ತಲೆಕಡೆಸಿಕೊಳ್ಳದೇ ಡೊಳ್ಳು ಚಿತ್ರವನ್ನು ಮಾಡಿದೆ ಸಾಗರ್ ಮತ್ತು ಪವನ್ ಟೀಮ್.
ಅಪ್ಪ ಅಧ್ಯಕ್ಷರಾಗಿದ್ದು ಸಂಭ್ರಮ ಸಂಕಟ
ಸಾಗರ್ ಪುರಾಣಿಕ್, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ಪುತ್ರ. ಒಂದು ಕಡೆ ತಂದೆಯವರು ಅಧ್ಯಕ್ಷರಾಗಿ ಸಿನಿಮಾ ರಂಗಕ್ಕೆ ಸಾಕಷ್ಟು ಒಳ್ಳೆಯ ಕೆಲಸವನ್ನು ಮಾಡುತ್ತಿರುವುದಕ್ಕೆ ಸಂಭ್ರಮವಾದರೆ, ಮತ್ತೊಂದು ಕಡೆ ತಂದೆಯು ಅಕಾಡಮಿಯಲ್ಲಿ ಇದ್ದಾರೆ ಅನ್ನುವ ಕಾರಣಕ್ಕಾಗಿ ಸಾಗರ್ ಚಿತ್ರಕ್ಕೆ ಅನೇಕ ಅಡೆತಡೆಗಳು ಎದುರಾಗುತ್ತಿವೆಯಂತೆ. ‘ನಾನೊಬ್ಬ ಸಿನಿಮಾ ಮೇಕರ್ ಎಂದು ಪರಿಗಣಿಸದೇ ಅಪ್ಪನು ಅಕಾಡಮಿ ಅಧ್ಯಕ್ಷೆ ಅನ್ನುವ ಕಾರಣಕ್ಕೆ ನನ್ನ ಚಿತ್ರಕ್ಕೆ ಅನೇಕ ಸಂಕಷ್ಟಗಳು ಎದುರಾಗುತ್ತವೆ’ ಎನ್ನುತ್ತಾರೆ ಸಾಗರ್.
ಡೊಳ್ಳು ಸಿನಿಮಾವನ್ನು ಪ್ರೇಕ್ಷಕರಿಗೆ ಅರ್ಪಿಸಿ ಇದೀಗ ಮತ್ತೊಂದು ಹೊಸ ಸಿನಿಮಾದತ್ತ ಮುಖ ಮಾಡಿದ್ದಾರಂತೆ ಸಾಗರ್. ಕಥೆ ಸಿದ್ಧವಾಗುತ್ತಿದೆಯಂತೆ. ಮುಂದಿನ ದಿನಗಳಲ್ಲಿ ಈ ಸಿನಿಮಾದ ಮಾಹಿತಿ ನೀಡುವುದಾಗಿ ಹೇಳುತ್ತಾರೆ.
ಯುವರತ್ನ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇಂದು ದೈಹಿಕವಾಗಿ ಇಲ್ಲ. ಆದರೆ ಅಭಿಮಾನಿಗಳ ಮನಸ್ಸಿನಲ್ಲಿ, ಸಿನಿಪ್ರಿಯರಲ್ಲಿ ಅಪ್ಪು ಎಂದೂ ಅಜರಾಮರಾಗಿರುತ್ತಾರೆ. ಅಪ್ಪು ನೆನಪಿಗಾಗಿ ಸಾಹಿತ್ಯ ಬರೆದು ಹಾಡುವ ಮೂಲಕ ತಮ್ಮ ಅಭಿಮಾನವನ್ನು ಅಭಿಮಾನಿಗಳು ಸೇರಿದಂತೆ ಸೆಲೆಬ್ರೆಟಿಗಳು ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಹಿಂದೊಮ್ಮೆ ಅಪ್ಪು ಬೇಡ ಎಂದಿದ್ದ ಸಾಂಗ್ ಈಗ ಮತ್ತೆ ರಿಲೀಸ್ ಆಗುತ್ತಿದೆ.
ಅಪ್ಪು ಹುಟ್ಟುಹಬ್ಬಕ್ಕೆ ಇಡೀ ಚಿತ್ರರಂಗವೇ ಕಾಯುತ್ತಿದೆ. ಇವರ ಹುಟ್ಟುಹಬ್ಬಕ್ಕಾಗಿ ಅಭಿಮಾನಿಗಳು ಸೇರಿ ಸೆಲೆಬ್ರೆಟಿಗಳು ತುಂಬಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅಪ್ಪುಗೆ ನಟನೆ ಜೊತೆಗೆ ಹಾಡು, ಡ್ಯಾನ್ಸ್ ಎಂದರೆ ಸಖತ್ ಇಷ್ಟವಿತ್ತು. ಈ ಹಿನ್ನೆಲೆ ಅಪ್ಪುಗಾಗಿ ಅಭಿಮಾನಿಗಳು ಅವರು ಅಗಲುದಾಗಿನಿಂದ ಇಲ್ಲಿವರೆಗೂ ಹೊಸ-ಹೊಸ ಸಾಂಗ್ ಬರೆದು ರಿಲೀಸ್ ಮಾಡುತ್ತಿದ್ದಾರೆ. ಆದರೆ ಈಗ ಅಪ್ಪು ಬೇಡ ಎಂದಿದ್ದ ಸಾಂಗ್ ರಿಲೀಸ್ ಆಗುತ್ತಿದೆ. ಇದನ್ನೂ ಓದಿ: ಪುನೀತ್ ಮಾಡಬೇಕಾದ ಸಿನಿಮಾ ಈಗ ವಿರಾಟ್ ಪಾಲು! – ಕೊನೆಗೂ ಈಡೇರಲಿಲ್ಲ ದಿನಕರ್ ಕನಸು!
ಈ ಸಾಂಗ್ ಅಪ್ಪು ನಟನೆಯ ‘ನಟಸಾರ್ವಭೌಮ’ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಅಪ್ಪು ಸಾಂಗ್‍ನಲ್ಲಿ ಹೆಚ್ಚು ತನ್ನ ಬಗ್ಗೆಯೇ ಹೇಳಿದ್ದು, ತುಂಬಾ ವಿಜೃಂಭಿಸಿಕೊಂಡು ಬರೆದಿದ್ದರಿಂದ ಸಾಂಗ್ ಬಿಡುಗಡೆ ಮಾಡುವುದು ಬೇಡ ಎಂದು ಮುಜುಗರಪಟ್ಟಿದ್ದರು.
ಈ ವಿಶೇಷ ಸಾಂಗ್‍ನನ್ನು ಪವನ್ ಒಡೆಯರ್ ರಚಿಸಿದ್ದು, ಪವರ್ ಸ್ಟಾರ್ ಅಭಿಮಾನಿಗಳೆಲ್ಲ ಅಪ್ಪಲಿ ಎಂದೇ ಸಾಂಗ್ ರೆಡಿಯಾಗಿತ್ತು. ಆದರೆ ಅಂದು ಅಪ್ಪು ಈ ಸಾಂಗ್ ಬೇಡ ಎಂದಿದ್ದರು. ಈಗ ಈ ಸಾಂಗ್ ರಿಲೀಸ್ ಆಗುತ್ತಿದೆ.
ಮಾ.17 ರಿಲೀಸ್ ಆಗುವ ‘ಜೇಮ್ಸ್’ ಸಿನಿಮಾಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಈ ಸಿನಿಮಾ ರಿಲೀಸ್ ಆಗುವ ಮುನ್ನವೇ ಸಾಂಗ್ ಬಿಡುಗಡೆ ಮಾಡುಲು ಪವನ್ ಫುಲ್ ರೆಡಿಯಾಗಿದ್ದಾರೆ. ಇದೇ ಮಾ.15ರಂದು ಈ ಸಾಂಗ್ ರಿಲೀಸ್ ಆಗುತ್ತೆ ಎಂದು ಘೋಷಣೆಯನ್ನು ಮಾಡಿದ್ದಾರೆ.
ಈ ಸಾಂಗ್ ಝಲಕ್ ಮೊದಲೇ ರಿಲೀಸ್ ಆಗಿದ್ದು, ರಾಕ್‍ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಾಂಗ್‍ನಲ್ಲಿ ಪುನೀತ್ ರಾಜ್‍ಕುಮಾರ್, ರಚಿತಾ ರಾಮ್, ಪರಮೇಶ್ವರನ್ ಮತ್ತು ಚಿಕ್ಕಣ್ಣ ಸೇರೆ ಬಹುದೊಡ್ಡ ತಾರಾಗಣವಿದೆ. ಇದನ್ನೂ ಓದಿ: ಸೋನಂ ಕಪೂರ್ ಮಾವನಿಗೆ 27 ಕೋಟಿ ರೂ. ವಂಚಿಸಿದ ಸೈಬರ್ ಕ್ರಿಮಿನಲ್ಸ್!
ಮಾ.3 ರಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಇಂದು ಪುನೀತ್ ರಾಜ್ ಕುಮಾರ್ ಗಾಗಿಯೇ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿತ್ತು. ಪುನೀತ್ ಸ್ಮರಣೆಯ ಜತೆಗೆ ಪುನೀತ್ ಅವರ ಜತೆ ಕೆಲಸ ಮಾಡಿದ ನಿರ್ದೇಶಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆ ಕಲ್ಪಿಸಲಾಗಿತ್ತು. ಇದನ್ನೂ ಓದಿ : ತಮಿಳಿನತ್ತ ಲವ್ ಗುರು ನಿರ್ದೇಶಕ ಪ್ರಶಾಂತ್ ರಾಜ್
ಪುನೀತ್ ರಾಜ್ ಕುಮಾರ್ ನಟನೆಯ ಚಿತ್ರಗಳಿಗೆ ನಿರ್ದೇಶನ ಮಾಡಿರುವ ಪವನ್ ಒಡೆಯರ್, ಸಂತೋಷ್ ಆನಂದ್ ರಾಮ್, ಚೇತನ್ ಕುಮಾರ್ ಮತ್ತು ಹಿರಿಯ ನಿರ್ದೇಶಕ ಭಗವಾನ್, ಪುನೀತ್ ಅವರ ಜತೆಗಿನ ತಮ್ಮ ಒಡನಾಟವನ್ನು ಬಿಚ್ಚಿಟ್ಟರು. ಒಂದು ರೀತಿಯಲ್ಲಿ ಈ ಕಾರ್ಯಕ್ರಮ ಭಾವುಕತೆಯಿಂದಲೇ ಶುರುವಾಗಿ, ಭಾವುಕತೆಯಿಂದಲೇ ಮುಕ್ತಾಯವಾಯಿತು. ಇದನ್ನೂ ಓದಿ : ಸಾಯಿ ಪಲ್ಲವಿಗೆ ‘ಸಾಯಿ’ ಹೆಸರು ಬಂದಿದ್ದು ಹೇಗೆ?
ಪುನೀತ್ ನಟನೆಯ ಚಿತ್ರಗಳನ್ನು ವಿಶ್ಲೇಷಿಸುವುದರ ಜತೆಗೆ ಅವರು ಪಾತ್ರಕ್ಕಾಗಿ ಮಾಡಿಕೊಳ್ಳುತ್ತಿದ್ದ ತಯಾರಿ, ಅವರಿಗಾಗಿಯೇ ಪಾತ್ರಗಳನ್ನು ಬರೆಯುತ್ತಿದ್ದ ರೀತಿ ಮತ್ತು ಅವರು ಶೂಟಿಂಗ್ ಸೆಟ್ ನಲ್ಲಿ ಹೇಗೆಲ್ಲ ಇರುತ್ತಿದ್ದರು ಎನ್ನುವ ಕುರಿತು ನಿರ್ದೇಶಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಕೂಡ ಉಪಸ್ಥಿತರಿದ್ದರು.
ಹೊಸ ಹುಡುಗನನ್ನು ಸಿನಿಮಾ ರಂಗಕ್ಕೆ ಲಾಂಚ್ ಮಾಡಲು ಹೊರಟಿರುವ ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಸಿನಿಮಾದ ಕಥೆ ಇದೀಗ ರಿವಿಲ್ ಆಗಿದೆ. ಈ ಸಿನಿಮಾದಲ್ಲಿ ವಾಸ್ಕೋಡಿಗಾಮನ ಕಥೆಯೂ ಇದೆಯಂತೆ. ಇಂದು ಗತವೈಭವ ಸಿನಿಮಾದ ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಸುನಿ, “ಗತವೈಭವ ಎಂದರೆ ಗತಿಸಿ ಹೋದ ವೈಭವ ಎಂದು. ಈ ನಮ್ಮ ಚಿತ್ರದಲ್ಲಿ ವಾಸ್ಕೋಡಿಗಾಮನ ಕಥೆ ಸೇರಿದಂತೆ ಕೆಲವು ಐತಿಹಾಸಿಕ ಸನ್ನಿವೇಶಗಳಿರುತ್ತದೆ. ಫನ್, ಸೆಂಟಿಮೆಂಟ್ ಹಾಗೂ ಮೈಂಡ್ ಗೇಮ್ ನ ಮಿಶ್ರಣ ಅನ್ನಬಹುದು” ಎನ್ನುವ ಮೂಲಕ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದ್ದಾರೆ ನಿರ್ದೇಶಕರು. ಇದನ್ನೂ ಓದಿ : ತೆಲುಗು ಸೂಪರ್ ಸ್ಟಾರ್ ಬಾಲಯ್ಯ ಜತೆ ನಟಿಸಲ್ಲ ಅಂದ ಕನ್ನಡತಿ
ಮೊನ್ನೆಯಷ್ಟೇ ಈ ಸಿನಿಮಾದ ನಾಯಕನನ್ನು ಪರಿಚಯಿಸುವ ಟೀಸರ್ ಒಂದನ್ನು ಸುನಿ ಬಿಡುಗಡೆ ಮಾಡಿದ್ದರು. ಅದಕ್ಕೆ ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದನ್ನೂ ಓದಿ : ಮಹಾಶಿವರಾತ್ರಿಗೆ ಶಿವಾಜಿ ಸುರತ್ಕಲ್ ಪೋಸ್ಟರ್
ಮೂಲತಃ ತುಮಕೂರಿನವರಾದ ದುಶ್ಯಂತ್ ಈ ಸಿನಿಮಾದ ನಾಯಕ. ಇವರು ಗುಬ್ಬಿ ಶಾಸಕ ಶ್ರೀನಿವಾಸ್ ಪುತ್ರ. ವಿದೇಶದಲ್ಲಿ ಎಲ್.ಎಲ್.ಬಿ ಮುಗಿಸಿಕೊಂಡು ಬಂದು, ಇದೀಗ ಸಿನಿಮಾ ರಂಗದತ್ತ ಮುಖ ಮಾಡಿದ್ದಾರೆ. ಸಿನಿಮಾ ರಂಗಕ್ಕೆ ದುಶ್ಯಂತ್ ಬರುವುದು ತಂದೆ ತಾಯಿಗೆ ಇಷ್ಟವಿಲ್ಲದಿದ್ದರೂ, ಈ ರಂಗದ ಮೇಲಿನ ಆಸಕ್ತಿ ಇಲ್ಲಿಗೆ ಬರುವಂತೆ ಮಾಡಿದೆಯಂತೆ. ಇದನ್ನೂ ಓದಿ : ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ
ಈ ಕುರಿತು ಮಾತನಾಡಿದ ದುಶ್ಯಂತ್ ‘ಕೆಲವರು ಹೇಳುತ್ತಾರೆ ದುಡ್ಡಿರುವವರ ಮಕ್ಕಳು ಹೀರೋ ಆಗುತ್ತಾರೆ ಅಂತ. ನಾನು ಗುಬ್ಬಿ ಶಾಸಕ ಶ್ರೀನಿವಾಸ್ ಅವರ ಪುತ್ರ. ಆದರೆ ನಮ್ಮ ತಂದೆಗೆ ನಾನು ಚಿತ್ರರಂಗಕ್ಕೆ ಬರಲು ಇಷ್ಟವಿಲ್ಲ. ನನಗೆ ಇದಲ್ಲದೆ ಬೇರೆ ಇಷ್ಟವಿಲ್ಲ ಹಾಗಾಗಿ ನಾನು ನಿರ್ಮಾಪಕರ ಹುಡುಕಿ ಹಣ ಹೊಂದಿಸಲು ಒಂದು ವರ್ಷಕ್ಕೂ ಅಧಿಕ ಸಮಯ ತೆಗೆದುಕೊಂಡೆ’ ಎನ್ನುತ್ತಾರೆ. ಇದನ್ನೂ ಓದಿ : ಜೇಮ್ಸ್ ಟ್ರೇಡ್ ಮಾರ್ಕ್ ಹಾಡಿಗೆ ಪುನೀತ್ ಭರ್ಜರಿ ಸ್ಟೆಪ್: ಭಾವುಕರಾದ ಅಭಿಮಾನಿಗಳು
ಅಂದಹಾಗೆ ಈ ಸಿನಿಮಾವನ್ನು ನಿರ್ದೇಶಕ ಸುನಿ ಜೊತೆಗೆ ದೀಪಕ್ ತಿಮ್ಮಪ್ಪ ನಿರ್ಮಾಣ ಮಾಡುತ್ತಿದ್ದಾರೆ. ಏಪ್ರಿಲ್ ಕೊನೆಯ ವಾರದಿಂದ ಚಿತ್ರೀಕರಣ ಶುರುವಾಗಲಿದೆ.
– ಪುನೀತ್, ಉಪ್ಪಿ, ಗಣೇಶ್, ರವಿಚಂದ್ರನ್ ಬಗ್ಗೆ ಒಡೆಯರ್ ಮಾತು
ಬೆಂಗಳೂರು: ಎಂತಹ ಕಷ್ಟ ಬಂದರೂ ಅದನ್ನು ಧೈರ್ಯವಾಗಿ ಎದುರಿಸುವುದನ್ನು ಕಲಿಸಿರುವುದೇ ದರ್ಶನ್ ಸರ್ ಎಂದು ನಿರ್ದೇಶಕ ಪವನ್ ಒಡೆಯರ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಹಾಡಿಹೊಗಳಿದ್ದಾರೆ.
‘ಬದಲಾಗು ನೀನು ಬದಲಾಯಿಸು ನೀನು’ ಎಂಬ ಶೀರ್ಷಿಕೆ ಅಡಿಯಲ್ಲಿ ಸ್ಯಾಂಡಲ್‍ವುಡ್ ಸ್ಟಾರ್ ಗಳು ಸೇರಿ ಕೊರೊನಾ ವಿರುದ್ಧ ದೃಶ್ಯ ರೂಪಕವನ್ನು ಸಿದ್ಧ ಮಾಡುತ್ತಿದ್ದಾರೆ. ಇದರ ಹೊಣೆ ಹೊತ್ತಿರುವ ಪವನ್ ಒಡೆಯರ್, ಎಲ್ಲ ಸ್ಟಾರ್ ನಟರನ್ನು ಭೇಟಿಯಾಗಿ ಅವರ ಜೊತೆ ಫೋಟೋ ತೆಗೆದುಕೊಂಡು ಕೆಲ ಸಾಲುಗಳೊಂದಿಗೆ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಎಂತಹ ಸಂಕಷ್ಟ ಎದುರಾದರೂ,ಅದನ್ನು ಎದುರಿಸಿ ಮೆಟ್ಟಿ ನಿಲ್ಲುವುದನ್ನು ಕಲಿಸಿರುವುದೇ ದರ್ಶನ್ ಸರ್ ಅವರ ವ್ಯಕ್ತಿತ್ವ. ಮಾತೃ ಮಮತೆ,ಸದಾ ಎಲ್ಲರಿಗೂ ಒಳ್ಳೆದಾಗಲಿ ಅನ್ನುವ ಅವರ ಗುಣ ಅತ್ಯದ್ಭುತ,ಜಗನ್ಮಾತೆ ಚಾಮುಂಡೇಶ್ವರಿಯ ಪುತ್ರ @dasadarshan ಸರ್ #ಬದಲಾಗುನೀನುಬದಲಾಯಿಸುನೀನು ದೃಶ್ಯ ರೊಪಕಕ್ಕೆ ನಿಮ್ಮ ಸಮಯ ನೀಡಿದ್ದಕೆ ಥ್ಯಾಂಕ್ಸ್ ಸರ್. pic.twitter.com/Oyw2R7hQTz
ಈ ವಿಚಾರವಾಗಿ ದರ್ಶನ್ ಅವರ ಬಗ್ಗೆ ಟ್ವೀಟ್ ಮಾಡಿರುವ ಒಡೆಯರ್, ಎಂತಹ ಸಂಕಷ್ಟ ಎದುರಾದರೂ, ಅದನ್ನು ಎದುರಿಸಿ ಮೆಟ್ಟಿ ನಿಲ್ಲುವುದನ್ನು ಕಲಿಸಿರುವುದೇ ದರ್ಶನ್ ಸರ್ ಅವರ ವ್ಯಕ್ತಿತ್ವ. ಮಾತೃ ಮಮತೆ, ಸದಾ ಎಲ್ಲರಿಗೂ ಒಳ್ಳೆದಾಗಲಿ ಅನ್ನುವ ಅವರ ಗುಣ ಅತ್ಯದ್ಭುತ, ಜಗನ್ಮಾತೆ ಚಾಮುಂಡೇಶ್ವರಿಯ ಪುತ್ರ ದರ್ಶನ್ ಸರ್ ಅವರು, ಬದಲಾಗು ನೀನು ಬದಲಾಯಿಸು ನೀನು ದೃಶ್ಯ ರೂಪಕಕ್ಕೆ ನಿಮ್ಮ ಸಮಯ ನೀಡಿದ್ದಕೆ ಥ್ಯಾಂಕ್ಸ್ ಸರ್ ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಬಗ್ಗೆಯೂ ಟ್ವೀಟ್ ಮಾಡಿದ್ದು, ದೇವರುಗಳು ದೇವಲೋಕಕ್ಕೆ ಹೋಗಬೇಕಾದರೆ, ಒಂದು ದೈವಾಂಶವನ್ನು ಭೂಲೋಕದಲ್ಲಿ ಬಿಟ್ಟು ಹೋಗುತ್ತಾರೆ. ಅದೇ ಅಪ್ಪು ಸರ್ ಅವರ ನಗು. ಮಗುವಿನ ಮನಸ್ಸು, ಮುತ್ತಿನಂತಹ ನಗು ಹೊತ್ತಿರುವ ನಮ್ಮ ಅಪ್ಪು ಸರ್ ಯಾವಾಗಲೂ, ಎಲ್ಲರಿಗೂ ಹತ್ತಿರ. ‘ಬದಲಾಗು ನೀನು ಬದಲಾಯಿಸು ನೀನು’ ದೃಶ್ಯ ರೂಪಕಕ್ಕೆ ನಿಮ್ಮ ಸಮಯ ನೀಡಿದ್ದಕ್ಕಾಗಿ ಲವ್ ಯೂ ಸರ್ ಎಂದು ಬರೆದುಕೊಂಡಿದ್ದಾರೆ.
ಚಂದನವನದ ಚೆಲುವ, ಚಿನ್ನದ ಹುಡುಗ ಗಣೇಶ್ ಸರ್ ಅವ್ರಿಗೆ ಒಂದೇ ಒಂದು ಕರೆ ಮಾಡಿದ್ದೂ, ಮುಂದಿನ 10 ನಿಮಿಷದಲ್ಲಿ ಅವರ ಮನೆಯಲ್ಲಿ ಇದ್ದೆವು. ಇಂತಹ ಹೃದಯ ಶ್ರೀಮಂತಿಕೆಯುಳ್ಳ ನೀವು ‘ಬದಲಾಗು ನೀನು ಬದಲಾಯಿಸು ನೀನು’ ದೃಶ್ಯ ರೂಪಕಕ್ಕೆ ದನಿಗೂಡಿಸಿದ್ದಕ್ಕೆ ಧನ್ಯವಾದಗಳು ಸರ್ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
ಕರುನಾಡಿನ ಕನಸುಗಾರನ ಜೊತೆ ಹೀಗೆ ಒಂದು ಫೋಟೋ ತೆಗೆದುಕೊಳ್ಳಬೇಕು ಎಂಬ ನನ್ನ ಕನಸು ನನಸಾದ ಕ್ಷಣ. ರವಿ ಸರ್ ‘ಬದಲಾಗು ನೀನು ಬದಲಾಯಿಸು ನೀನು’ ದೃಶ್ಯ ರೂಪಕಕ್ಕೆ ನಿಮ್ಮ ಸಮಯ ನೀಡಿದ್ದಕ್ಕೆ ಧನ್ಯವಾದಗಳು ಎಂದು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಬಗ್ಗೆ ಬರೆದರೆ, ನಂತರ ಉಪ್ಪಿ ಸರ್ ಜೊತೆ ಸಮಯ ಕಳೆದಾಗಲೆಲ್ಲ ಅನಿಸುವುದು ಒಂದೇ, ಹೊಸದೊಂದು ಆಲೋಚನೆಗೆ ನಾಂದಿ ಹಾಡಲಿಕ್ಕೆ ನಿರ್ಧಾರ ಮಾಡಿಸೋ ಅದ್ಭುತ ವ್ಯಕ್ತಿತ್ವಕ್ಕೆ ಸಾವಿರ ಸಲಾಂ. ನೀವು ನಮಗೆ ಸ್ಫೂರ್ತಿ ಸರ್ ಎಂದು ಉಪೇಂದ್ರ ಅವರ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಗೂಗ್ಲಿ ಸಿನಿಮಾ ಮೂಲಕ ಹೆಚ್ಚು ಪರಿಚಿತರಾದ ನಟಿ ಕೃತಿ ಕರಬಂಧ, ಇದೀಗ ಬಾಲಿವುಡ್‍ನಲ್ಲಿ ಮಿಂಚುತ್ತಿದ್ದು, ಸಾಲು ಸಾಲು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇಷ್ಟೆಲ್ಲ ಆಫರ್‍ಗಳು ಬರುತ್ತಿದ್ದರೂ ಇನ್ನೊಂದು ಆಸೆಯನ್ನು ಪವನ್ ಒಡೆಯರ್ ಬಳಿ ಹೇಳಿಕೊಂಡಿದ್ದಾರೆ.
ಕೃತಿ ಕರಬಂಧ ಗೂಗ್ಲಿ ಸಿನಿಮಾ ಮೂಲಕ ಯುವಕರ ಕನಸಿನ ರಾಣಿಯಾಗಿದ್ದಾರೆ. ಇವರಿಗಾಗಿಯೇ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಅಲ್ಲದೆ ಅದಕ್ಕೆ ತಕ್ಕಂತೆ ಹಿಂದಿ ಹಾಗೂ ತಮಿಳು ಸಿನಿಮಾಗಳಲ್ಲಿ ಸಹ ನಟಿಸುತ್ತಿದ್ದಾರೆ. ಹೀಗೆ ಸಾಲು ಸಾಲು ಆಫರ್ ಗಳನ್ನು ಪಡೆಯುತ್ತಿದ್ದರೂ ಕೃತಿ ಅವರು ಇದೀಗ ಕನ್ನಡದ ನಿರ್ದೇಶಕ ಪವನ್ ಒಡೆಯರ್ ಅವರ ಮುಂದೆ ಒಂದು ಆಸೆಯನ್ನು ಬಿಚ್ಚಿಟ್ಟಿದ್ದಾರೆ.
ನಿರ್ದೇಶಕ ಪವನ್ ಒಡೆಯರ್ ಅವರು ಗೂಗ್ಲಿ ಸಿನಿಮಾದ ಮೇಕಿಂಗ್ ಹಾಡನ್ನು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ, ಓ ಮೈ ಗಾಡ್, ಈ ವಿಡಿಯೋ ಸಿಕ್ಕಿತು. ಗೂಗ್ಲಿ ಮೂವಿ ಮೇಕಿಂಗ್ ಸಾಂಗ್, ಈ ವಿಡಿಯೋವನ್ನು ಹಿಂದೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರಲಿಲ್ಲ. ವಂಡರ್‍ಫುಲ್ ಮೆಮೋರೀಸ್ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಯಶ್ ಹಾಗೂ ಕೃತಿ ಕರಬಂಧ ಅವರಿಗೆ ಇದನ್ನು ಟ್ಯಾಗ್ ಮಾಡಿದ್ದಾರೆ.
ಈ ಟ್ವೀಟ್‍ಗೆ ಪ್ರತಿಯಾಗಿ ಕೃತಿ ಕರಬಂಧ ಇದನ್ನು ರೀಟ್ವೀಟ್ ಮಾಡುವ ಮೂಲಕ ಉತ್ತರಿಸಿದ್ದು, ನನ್ನನ್ನು ಮತ್ತೆ ಹಿಂದಕ್ಕೆ ಕರೆದೊಯ್ದಿರಿ. ಈ ರೀತಿಯ ಸಿನಿಮಾ ಮತ್ತೆ ಮಾಡುವ ಎಂದು ಲವ್ ಸಿಂಬಲ್‍ನ ಎಮೋಜಿಗಳನ್ನು ಹಾಕಿದ್ದಾರೆ.
ಪವನ್ ಹಾಗೂ ಕೃತಿ ಕರಬಂಧ ಟ್ವೀಟ್‍ಗೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಗೂಗ್ಲಿ-2 ಬರಲಿ ಎಂದು ಒತ್ತಾಯಿಸುತ್ತಿದ್ದಾರೆ. ಸ್ವಾತಿ ಹಾಗೂ ಶರತ್ ಮತ್ತೆ ತೆರೆ ಮೇಲೆ ನೋಡಬೇಕು ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಒಬ್ಬ ಅಭಿಮಾನಿ ಕಮೆಂಟ್ ಮಾಡಿ ನಾನು ಬೆಂಗಳೂರಿಗೆ ಬಂದಾಗ ನೋಡಿದ ಮೊದಲ ಸಿನಿಮಾ, ಯಾರೇ ಬರಲಿ, ಯಾರೇ ಹೋಗಲಿ ನಮ್ಮ ಬಾಸ್ ಯಶ್ ಹಾಗೂ ಕೃತಿ ರೀತಿಯ ಜೋಡಿ ಇರಲು ಸಾಧ್ಯವಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.
Oh my god. Found this video. #Googly movie making song. Its never put on any social media before. Wonderful memories. @TheNameIsYash@kriti_official
ವೀಕೆಂಡಿನಲ್ಲಿ ನನ್ನ ಹೋಮ್ ಟೌನಿಗೆ ಹೋಗುವಾಗ ನನ್ನ ತಲೆಗೆ ಬಂದಿತ್ತು ಒಂದು ಲವ್ ಸ್ಟೋರಿ. ಕನಸಲ್ಲಿ ಕಾಡಿದ ಕಥೆಯನ್ನು ನಾನು ಹೇಗೆ ಪಿಕ್ಚರ್ ಮಾಡಿದೆಯಂಥ ಹೇಳ್ತಿನ್ರಿ ಎಂಬ ಸಾಲುಗಳು ಈ ಮೇಕಿಂಗ್ ವೀಡಿಯೋದಲ್ಲಿವೆ. ಸ್ಕ್ರೀನ್ ಪ್ಲೇನೂ ಮಾಡಿಕೊಂಡೆ, ಡೈಲಾಗ್ಸ್ ಬರೆದುಕೊಂಡೆ, ಹೀರೋ ಯಾರೆಂದು ಗೊತ್ತಿರಲಿಲ್ಲ. ರಾಕಿಂಗ್ ಸ್ಟಾರ್ ಕೇಳಿಬಿಟ್ಟರು. ಜಯಣ್ಣ ಕಂಬೈನ್ಸ್ ಅಡಿಯಲ್ಲಿ ಖುಷಿಯಾಗಿ ಮಾಡಿ ಎಂದೇ ಬಿಟ್ಟರು ಎಂಬ ಸಾಲುಗಳು ಮೇಕಿಂಗ್ ವೀಡಿಯೋದಲ್ಲಿವೆ.
ವಿಡಿಯೋ ನೋಡಿದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗೂಗ್ಲಿ-2 ಸಿನಿಮಾ ಆಗಬೇಕು. ಮತ್ತೆ ಈ ಜೋಡಿಯೇ ನಟಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅದರಂತೆ ಕೃತಿ ಕರಬಂಧ ಸಹ ಇದೇ ರೀತಿ ಬರೆದುಕೊಂಡಿದ್ದಾರೆ. ಟೇಕ್ ಮಿ ಬ್ಯಾಕ್ ಎಂದು ಹೇಳಿದ್ದಾರೆ.
ಇತ್ತೀಚೆಗೆ ಹೌಸ್‍ಫುಲ್-4 ಸಿನಿಮಾದಲ್ಲಿ ಕೃತಿ ಕರಬಂಧ ನಟಿಸಿದ್ದು, ಹಲವು ತಮಿಳು ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇದೀಗ ಕೊರೊನಾ ವೈರಸ್ ಭೀತಿಯಿಂದಾಗಿ ಶೂಟಿಂಗ್ ಸ್ಥಗಿತಗೊಂಡಿದ್ದು, ಮನೆಯಲ್ಲೇ ತಮ್ಮ ಭಾವಿ ಪತಿಯೊಂದಿಗೆ ಕಾಲ ಕಳೆಯುತ್ತಿದ್ದಾರೆ.