Tag: Pawan Sehrawat

  • ಗೂಳಿಗಳ ಗುದ್ದಿಗೆ ಸೈಲೆಂಟ್ ಆದ ಗುಜರಾತ್ ಜೈಂಟ್ಸ್

    ಗೂಳಿಗಳ ಗುದ್ದಿಗೆ ಸೈಲೆಂಟ್ ಆದ ಗುಜರಾತ್ ಜೈಂಟ್ಸ್

    ಬೆಂಗಳೂರು: ಬೆಂಗಳೂರು ಬುಲ್ಸ್ ಕಬಡ್ಡಿ ಅಂಗಳದಲ್ಲಿ ತನ್ನ ಗೆಲುವಿನ ನಾಗಲೋಟ ಮುಂದುವರಿಸಿದೆ ಇಂದು ಗುಜರಾತ್ ಜೈಂಟ್ಸ್ ವಿರುದ್ಧ 9 ಅಂಕಗಳ ಅಂತರದ ಜಯ ಸಾಧಿಸಿದೆ. ಅಲ್ಲದೇ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

    ಬುಲ್ಸ್ ರೈಡಿಂಗ್ ಮೆಷಿನ್ ಪವನ್ ಶೆರವತ್ ಇಂದು ಕೂಡ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದಾರೆ. 16 ರೈಡ್, 3 ಬೋನಸ್ ಪಾಯಿಂಟ್ ಸಹಿತ 19 ಅಂಕ ಕಲೆಹಾಕಿದರು. ಅತ್ತ ಎದುರಾಳಿ ತಂಡದಲ್ಲಿ ರಾಕೇಶ್ ಸುಂಗ್ರೋಯಾ 8 ರೈಡ್, 6 ಬೋನಸ್ ಸಹಿತ 14 ಅಂಕ ಕಲೆಹಾಕಿರು. ಬೆಂಗಳೂರು ರೈಡಿಂಗ್ ಮತ್ತು ಉತ್ತಮ ಡಿಫೆನ್ಸ್ ಮೂಲಕ ಗುಜರಾತ್ ಜೈಂಟ್ಸ್‌ನ್ನು ಕಟ್ಟಿಹಾಕಿತು. ಇದನ್ನೂ ಓದಿ: 3ನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಸೋಲು – ಸರಣಿ ವಶಪಡಿಸಿಕೊಂಡ ಆಫ್ರಿಕಾ

    ಮೊದಲಾರ್ಧದಲ್ಲಿ 17-22 ಪಾಯಿಂಟ್‍ನೊಂದಿಗೆ ಬೆಂಗಳೂರು 5 ಅಂಕಗಳ ಮುನ್ನಡೆ ಪಡೆದುಕೊಂಡಿತು. ಅಂತಿಮವಾಗಿ ಬುಲ್ಸ್ 26 ರೈಡ್, 1 ಸೂಪರ್ ರೈಡ್, 10 ಟೇಕಲ್, 6 ಆಲೌಟ್, 4 ಇತರೆ ಅಂಕ ಸಹಿತ ಒಟ್ಟು 46 ಪಾಯಿಂಟ್ ಗಳಿಸಿದರೆ, ಗುಜರಾತ್ ಜೈಂಟ್ಸ್ 24 ರೈಡ್, 1 ಸೂಪರ್ ರೈಡ್, 11 ಟೇಕಲ್, 2 ಇತರೆ ಸಹಿತ  ಒಟ್ಟು 37 ಪಾಯಿಂಟ್  ಗಳಿಸಿ 9 ಅಂಕಗಳ ಸೋಲು ಕಂಡಿತು. ಇದನ್ನೂ ಓದಿ: ನೊವಾಕ್ ಜೊಕೊವಿಕ್ ವೀಸಾ 2ನೇ ಬಾರಿ ರದ್ದು – 3 ವರ್ಷ ಆಸ್ಟ್ರೇಲಿಯಾಗೆ ಪ್ರವೇಶವಿಲ್ಲ

  • ಬುಲ್ಸ್ ಎದುರು ಡಲ್ ಹೊಡೆದ ದಬಾಂಗ್ ಡೆಲ್ಲಿ

    ಬುಲ್ಸ್ ಎದುರು ಡಲ್ ಹೊಡೆದ ದಬಾಂಗ್ ಡೆಲ್ಲಿ

    ಬೆಂಗಳೂರು: ದಬಾಂಗ್ ಡೆಲ್ಲಿ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ 61 – 22 ಪಾಯಿಂಟ್‍ಗಳೊಂದಿಗೆ 39 ಅಂಕಗಳ ಅಂತರದ ಜಯ ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಒಟ್ಟು 28 ಅಂಕಗಳಿಂದ ಮೂರನೇ ಸ್ಥಾನದಲ್ಲಿದೆ.

    ಏಕಮುಖಿಯಾಗಿ ಸಾಗಿದ ಪಂದ್ಯದಲ್ಲಿ ಪವನ್ ಶೆರವತ್ ಡೆಲ್ಲಿ ವಿರುದ್ಧ ರೈಡಿಂಗ್‍ನಲ್ಲಿ ಸವಾರಿ ಮಾಡಿದರು. ಒಟ್ಟು 22 ರೈಡ್ ಮತ್ತು 5 ಬೋನಸ್ ಪಾಯಿಂಟ್‍ನೊಂದಿಗೆ ಒಟ್ಟು 27 ಅಂಕಗಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಭರತ್ 3 ರೈಡ್, 2 ಟೇಕಲ್ ಮತ್ತು 2 ಬೋನಸ್ ಪಾಯಿಂಟ್ ಸೇರಿ ಒಟ್ಟು 7 ಅಂಕ ತಂಡಕ್ಕೆ ಕೊಡುಗೆ ನೀಡಿದರು. ಇದನ್ನೂ ಓದಿ: ಯಾದವ್ ಬೌಲಿಂಗ್‍ಗೆ ಕೇಶವ್ ಕ್ಲೀನ್ ಬೌಲ್ಡ್ – ಎಗರಿ ಮಾರುದ್ದ ಬಿದ್ದ ಮಿಡಲ್ ಸ್ಟಂಪ್

    ಮೊದಲಾರ್ಧದಿಂದಲೇ ಭಾರೀ ಮುನ್ನಡೆ ಪಡೆದುಕೊಂಡ ಬೆಂಗಳೂರು 27 – 11 ಅಂಕಗಳಿಂದ ಡೆಲ್ಲಿಗೆ ಟಕ್ಕರ್ ಕೊಟ್ಟಿತು. ನಂತರ ದ್ವಿತೀಯಾರ್ಧದಲ್ಲಿ ಪಾಯಿಂಟ್ ಹೆಚ್ಚಿಸಿದ ಬೆಂಗಳೂರು ತಂಡ ಒಟ್ಟು 35 ರೈಡಿಂಗ್, 1 ಸೂಪರ್ ರೈಡ್, 15 ಟೇಕಲ್, 10 ಆಲೌಟ್ ಮತ್ತು 1 ಇತರೆ ಅಂಕ ಸಹಿತ ಒಟ್ಟು 61 ಪಾಯಿಂಟ್ ಕಲೆ ಹಾಕಿತು. ಇತ್ತ ಡೆಲ್ಲಿ 16 ರೈಡಿಂಗ್, 4 ಟೇಕಲ್, 2 ಇತರೆ ಅಂಕಗಳಿಂದ 22 ಪಾಯಿಂಟ್ ಗಳಿಸಿ 39 ಅಂಕಗಳ ಅಂತರದ ದೊಡ್ಡ ಸೋಲು ಕಂಡಿತು. ಇದನ್ನೂ ಓದಿ: ವಾಷಿಂಗ್ಟನ್ ಸುಂದರ್‌ಗೆ ಕೊರೊನಾ – ಜಯಂತ್ ಯಾದವ್‌ಗೆ ಒಲಿದ ಅದೃಷ್ಟ

  • ಬೆಂಗಳೂರು ಬುಲ್ಸ್ ಎದುರು ಪಲ್ಟಿ ಹೊಡೆದ ಪುನೇರಿ ಪಲ್ಟನ್

    ಬೆಂಗಳೂರು ಬುಲ್ಸ್ ಎದುರು ಪಲ್ಟಿ ಹೊಡೆದ ಪುನೇರಿ ಪಲ್ಟನ್

    ಬೆಂಗಳೂರು: ಬೆಂಗಳೂರು ಬುಲ್ಸ್ ಮತ್ತು ಪುನೇರಿ ಪಲ್ಟನ್ ನಡುವಿನ ಪಂದ್ಯ ಏಕಮುಖಿಯಾಗಿ ಸಾಗಿ ಬೆಂಗಳೂರು ಬುಲ್ಸ್ 40-29 ಅಂಕಗಳಿಂದ ಗೆದ್ದು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ.

    ಆರಂಭದಿಂದಲೇ ಬುಲ್ಸ್, ಪುನೇರಿ ಪಲ್ಟನ್ ಮೇಲೆ ಸವಾರಿ ಮಾಡಿತು. ಬುಲ್ಸ್ ನಾಯಕ ಪವನ್ ಶೆರವತ್ ಮಿಂಚಿನ ರೈಡಿಂಗ್ ಮತ್ತೊಮ್ಮೆ ಗಮನಸೆಳೆದರು. ಒಟ್ಟು 9 ರೈಡ್, 2 ಬೋನಸ್ ಅಂಕಗಳೊಂದಿಗೆ 11 ಪಾಯಿಂಟ್ ಸಂಪಾದಿಸಿ ಗೆಲುವಿನ ರೂವಾರಿಯಾದರು. ಬೆಂಗಳೂರಿನ ಬಲಿಷ್ಠ ಡಿಫೆನ್ಸ್ ಮತ್ತು ರೈಡಿಂಗ್ ಮುಂದೆ ಮಂಕಾದ ಪುನೇರಿ 29-40 ಅಂತರದಿಂದ ಬೆಂಗಳೂರಿಗೆ ಶರಣಾಯಿತು. ಇದನ್ನೂ ಓದಿ: ಅಂಧತ್ವವನ್ನು ಮೆಟ್ಟಿನಿಂತು ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಮಿಂಚುತ್ತಿರುವ ಹಳ್ಳಿ ಪ್ರತಿಭೆ ಲೋಕೇಶ್

    ಪುನೇರಿ ಪಲ್ಟನ್ 17 ರೈಡ್, 10 ಟೇಕಲ್, 2 ಆಲ್‍ಔಟ್ ಪಾಯಿಂಟ್ ಸೇರಿ ಒಟ್ಟು 29 ಅಂಕ ಪಡೆದರೆ, ಬೆಂಗಳೂರು ಬುಲ್ಸ್ 23 ರೈಡ್, 1 ಸೂಪರ್ ರೈಡ್, 11 ಟೇಕಲ್, 4 ಆಲ್‍ಔಟ್, 2 ಇತರೆ ಅಂಕದೊಂದಿಗೆ ಒಟ್ಟು 40 ಅಂಕ ಸಂಪಾದಿಸಿ 11 ಅಂಕಗಳ ಅಂತರದ ಜಯ ಸಾಧಿಸಿದೆ.  ಇದನ್ನೂ ಓದಿ: 47ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದ ಕರ್ನಾಟಕ ತಂಡಕ್ಕೆ ಸನ್ಮಾನ

  • ಈ ಸಲ ಕಪ್ ನಮ್ದೇ ಸಂಭ್ರಮ – ಪವನ್ ಸೆಹ್ರಾವತ್ ಜೊತೆ ಸೆಲ್ಫೀಗಾಗಿ ಮುಗಿಬಿದ್ದ ಜನ!

    ಈ ಸಲ ಕಪ್ ನಮ್ದೇ ಸಂಭ್ರಮ – ಪವನ್ ಸೆಹ್ರಾವತ್ ಜೊತೆ ಸೆಲ್ಫೀಗಾಗಿ ಮುಗಿಬಿದ್ದ ಜನ!

    ಬೆಂಗಳೂರು: ಈ ಸಲ ಕಪ್ ನಮ್ದೇ ಎಂದು ಬೆಂಗಳೂರು ಬುಲ್ಸ್ ತಂಡ ವಿವೋ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಟಗಾರ ಪವನ್ ಸೆಹ್ರಾವತ್ ಇಂದು ಬೆಂಗಳೂರಿನಲ್ಲಿ ಕಬಡ್ಡಿ ಆಡಿದರು. ತಮ್ಮ ನೆಚ್ಚಿನ ಆಟಗಾರ ಹಾಗೂ ಬೆಂಗಳೂರು ಬುಲ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿದ ಗೆಲುವಿನಲ್ಲಿ 22 ಅಂಕ ಗಳಿಸಿ ನಿರ್ಣಾಯಕ ಪಾತ್ರ ವಹಿಸಿದ್ದ ಪವನ್ ಸೆಹ್ರಾವತ್ ನೋಡಿದ ಅಭಿಮಾನಿಗಳು ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

    68ನೇ ಅಖಿಲ ಭಾರತ ಅಂತರ್ ರೈಲ್ವೇ ಕಬಡ್ಡಿ ಪಂದ್ಯಾವಳಿಗೆ ಇಂದು ಬೆಂಗಳೂರಿನಲ್ಲಿ ಚಾಲನೆ ದೊರೆಯಿತು. ಈ ಪಂದ್ಯಾವಳಿಯಲ್ಲಿ ರವೀಂದ್ರ ಪಹಲ್, ವಿಠಲ್ ಮೇಟಿ ಸೇರಿದಂತೆ ಪ್ರಮುಖ ಆಟಗಾರರು ಭಾಗವಹಿಸಿದ್ದರು. ನಗರದ ಯಲಹಂಕ ರೈಲು ಗಾಲಿ ಕಾರ್ಖಾನೆ ಸ್ಟೇಡಿಯಂನಲ್ಲಿ 16 ರೈಲ್ವೇ ವಲಯಗಳ 16 ತಂಡಗಳು ಭಾಗವಹಿಸಿದ್ದವು. ಒಟ್ಟು 300 ಜನ ಆಟಗಾರರು ಪಾಲ್ಗೊಂಡಿರೋ ಈ ಕ್ರೀಡಾಕೂಟಕ್ಕೆ ರೈಲು ಗಾಲಿ ಕಾರ್ಖಾನೆಯ ಮುಖ್ಯ ಕಾರ್ಯದರ್ಶಿ ಮರಗುಬ್ ಹುಸೇನ್ ಚಾಲನೆ ನೀಡಿದ್ರು. ಇನ್ನೂ ಎರಡೂ ದಿನ ಈ ಕ್ರೀಡಾಕೂಟವಿದ್ದು, ಫೈನಲ್ ಮ್ಯಾಚ್ 10ರಂದು ನಡೆಯಲಿದೆ.

    ಇದೇ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪವನ್ ಸೆಹ್ರಾವತ್, ನಾನು ಕಳೆದ 4 ವರ್ಷಗಳಿಂದ ಈ ಪಂದ್ಯಾವಳಿಯಲ್ಲಿ ಆಟವಾಡುತ್ತಿದ್ದೇನೆ. ಅಖಿಲ ಭಾರತ ಮಟ್ಟದಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿ ಉತ್ತಮ ಪಂದ್ಯಾವಳಿ. ಇಲ್ಲಿ ಮೊದಲು ಆಟವಾಡಿದ ಬಳಿಕ ನಾನು ಪ್ರೊ ಕಬಡ್ಡಿಗೆ ಆಯ್ಕೆಯಾದೆ. ನನಗೆ ಇದೊಂದು ಉತ್ತಮ ಅನುಭವ. ಈ ಪಂದ್ಯಾವಳಿಯಲ್ಲಿ ಯಾರು ಚೆನ್ನಾಗಿ ಆಟವಾಡುತ್ತಾರೋ ಅವರು ಪ್ರೊ -ಕಬಡ್ಡಿಯಲ್ಲಿ ಆಡಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv