Tag: Pawan Kumar

  • ಬಡ್ಡಿಮಗನ್ ಲೈಫಿನ ತುಂಬಾ ಹಳ್ಳಿ ಬದುಕಿನ ಹರಿಕಥೆ!

    ಬಡ್ಡಿಮಗನ್ ಲೈಫಿನ ತುಂಬಾ ಹಳ್ಳಿ ಬದುಕಿನ ಹರಿಕಥೆ!

    ಪವನ್ ಮತ್ತು ಪ್ರಸಾದ್ ನಿರ್ದೇಶನ ಮಾಡಿರುವ ಬಡ್ಡಿ ಮಗನ್ ಲೈಫು ಚಿತ್ರ ಈ ವಾರವೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಯಾವುದೇ ಪ್ರಚಾರದ ಅಬ್ಬರವೂ ಇಲ್ಲದೇ ಒಂದೇ ಒಂದು ಹಾಡಿನ ಮೂಲಕವೇ ಈ ಚಿತ್ರ ಪ್ರದರ್ಶನ ಮಾಡಿರುವ ಪ್ರಚಾದ ವಿರಾಟ್ ರೂಪ ಪ್ರದರ್ಶಿಸಿರುವ ಈ ಸಿನಿಮಾದ ಖದರ್ ಕಂಡು ಎಲ್ಲರೂ ಅವಾಕ್ಕಾಗಿದ್ದಾರೆ. ಇಂಥಾ ಮಹಾ ಮೋಡಿ ಸಾಧ್ಯವಾದದ್ದು ನವೀನ್ ಸಜ್ಜು ಹಾಡಿರುವ ಏನ್ ಚಂದಾನೋ ತಕ್ಕೋ ಎಂಬೊಂದು ಹಾಡಿನಿಂದ. ಈ ಹಾಡು ಪಡೆದುಕೊಂಡಿರೋ ವೀಕ್ಷಣೆ ಮತ್ತು ಅದರ ಸುತ್ತಾ ಹುಟ್ಟಿಕೊಂಡಿದ್ದ ಚರ್ಚೆ ಹಾಗೂ ಅದು ವೈರಲ್ ಆಗಿರುವ ರೀತಿಗಳೇ ನಿಜಕ್ಕೂ ಅಚ್ಚರಿ.

    ಹೀಗೆ ಹಾಡುಗಳ ಮೂಲಕವೇ ಪ್ರಚಾರ ಪಡೆದುಕೊಂಡ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆದ ಅದೆಷ್ಟೋ ಉದಾಹರಣೆಗಳಿದ್ದಾವೆ. ಗ್ರೀನ್ ಚಿಲ್ಲಿ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಪವನ್ ನಿರ್ಮಾಣ ಮಾಡಿರುವ ಈ ಚಿತ್ರವೂ ಕೂಡಾ ಅಂಥಾದ್ದೇ ಗೆಲುವು ಕಾಣಲಿರುವ ಶುಭ ಸೂಚನೆಗಳೇ ದಟ್ಟವಾಗಿ ಕಾಣಿಸುತ್ತಿವೆ. ಈ ಚಿತ್ರದಲ್ಲಿ ಸಚಿನ್ ಶ್ರೀಧರ್ ಮತ್ತು ಐಶ್ವರ್ಯಾ ರಾವ್ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಬಲ ರಾಜವಾಡಿ ಬಡ್ಡಿ ಸೀನಪ್ಪನಾಗಿ ವಿಭಿನ್ನ ಪಾತ್ರಕ್ಕಿಲ್ಲಿ ಜೀವ ತುಂಬಿದ್ದಾರೆ. ಇದೆಲ್ಲದರ ಚಹರೆಗಳೂ ಕೂಡಾ ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್ ಮೂಲಕವೇ ಸ್ಪಷ್ಟವಾಗಿ ಅನಾವರಣಗೊಂಡಿದೆ. ಈ ಸಿನಿಮಾ ಬಗ್ಗೆ ಪ್ರೇಕ್ಷಕ ವಲಯದಲ್ಲಿ ಈ ಪಾಟಿ ಕ್ಯೂರಿಯಾಸಿಟಿ ಹುಟ್ಟಿಕೊಂಡಿರುವುದಕ್ಕೂ ಇದೇ ಕಾರಣ.

    ಈ ಟ್ರೇಲರ್ ಹರಿಕಥಾ ಸ್ವರೂಪದ ನಿರೂಪಣೆಯೊಂದಿಗೆ ಎಂಥವರನ್ನೂ ಸೆಳೆಯುವಂತೆ ಮೂಡಿ ಬಂದಿತ್ತು. ಇದನ್ನು ಈ ಶೈಲಿಯಲ್ಲಿ ನಿರೂಪಣೆ ಮಾಡಿರೋದಕ್ಕೂ ಕಥೆಗೂ ಕನೆಕ್ಷನ್ನುಗಳಿದ್ದಾವೆ. ಇದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಕಾಲ್ಪನಿಕ ಹಳ್ಳಿಯೊಂದರಲ್ಲಿ ಘಟಿಸೋ ಕಥೆಯನ್ನೊಳಗೊಂಡಿರುವ ಚಿತ್ರ. ಇಂಥಾ ಹಳ್ಳಿಗಳಲ್ಲಿ ಅವರಿವರ ಮನೆ ಮ್ಯಾಟರುಗಳನ್ನು ಕೆದಕೋ ಕಸುಬಿನ ಹರಿಕಥೆ ಸದಾ ಚಾಲ್ತಿಯಲ್ಲಿರುತ್ತದೆ. ಇಂಥಾ ಮಜವಾದ ಹರಿಕಥಾ ಕಾಲಕ್ಷೇಪ ಈ ಸಿನಿಮಾದಲ್ಲಿದೆ. ಅದನ್ನು ನಿರ್ದೇಶಕರುಗಳು ಅತ್ಯಂತ ಮಜವಾದ ಸ್ವರೂಪದಲ್ಲಿಯೇ ಕಟ್ಟಿ ಕೊಟ್ಟಿದ್ದಾರಂತೆ. ಒಟ್ಟಾರೆಯಾಗಿ ಬಡ್ಡಿಮಗನ್ ಲೈಫು ಸೂಪರ್ ಆಗಿಯೇ ಇರುತ್ತದೆಂಬ ನಂಬಿಕೆ ಪ್ರೇಕ್ಷಕರೆಲ್ಲರಲ್ಲಿ ಮನೆ ಮಾಡಿಕೊಂಡಿದೆ.

  • ನಮ್ಮದೇ ಮನಸ್ಥಿತಿಗೆ ಕನ್ನಡಿ ಹಿಡಿದಂಥಾ ಬಡ್ಡಿಮಗನ್ ಲೈಫು!

    ನಮ್ಮದೇ ಮನಸ್ಥಿತಿಗೆ ಕನ್ನಡಿ ಹಿಡಿದಂಥಾ ಬಡ್ಡಿಮಗನ್ ಲೈಫು!

    ಗ್ರೀನ್ ಚಿಲ್ಲಿ ಎಂಟರ್ ಟೈನ್ಮೆಂಟ್ ಬ್ಯಾನರಿನಡಿಯಲ್ಲಿ ಪವನ್ ನಿರ್ಮಾಣ ಮಾಡಿರುವ ಬಡ್ಡಿಮಗನ್ ಲೈಫು ಚಿತ್ರ ಈ ವಾರ ಡಿ.27 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಹಾಡು ಮತ್ತು ಟ್ರೇಲರ್ ಗಳ ಮೂಲಕ ಸಖತ್ ಕ್ರೇಜ್ ಸೃಷ್ಟಿ ಮಾಡಿರೋ ಈ ಚಿತ್ರ ಹಳ್ಳಿಗಾಡಿನ ಕಥೆಯೊಂದಿಗೆ, ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂಥಾ ಕಂಟೆಂಟಿನ ಸುಳಿವಿನೊಂದಿಗೆ ಸಮ್ಮೋಹಕವಾದ ವಾತಾವರಣವನ್ನೇ ನಿರ್ಮಿಸಿಕೊಂಡಿದೆ. ಯಶಸ್ವಿ ಸಿನಿಮಾವೊಂದು ಬಿಡುಗಡೆಯ ಹಂತದವರೆಗೆ ದಾಟಿಕೊಳ್ಳುವ ಘಟ್ಟಗಳಿವೆಯಲ್ಲಾ? ಅದೆಲ್ಲವನ್ನೂ ಸಮರ್ಥವಾಗಿಯೇ ದಾಟಿಕೊಂಡು ಬಂದಿರುವ ಈ ಸಿನಿಮಾದತ್ತ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಆಕರ್ಷಿತರಾಗಿದ್ದಾರೆ. ಅವರ ಮುಂದೆ ಬಡ್ಡಿಮಗನ್ ಲೈಫು ಈ ವಾರವೇ ಅನಾವರಣಗೊಳ್ಳಲಿದೆ.

    ಈ ಚಿತ್ರವನ್ನು ಪವನ್ ಮತ್ತು ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಜೊತೆಯಾಗಿಯೇ ಸಿನಿಮಾ ಕನಸು ಕಂಡು ಒಂದಷ್ಟು ಕ್ರಿಯೇಟಿವ್ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದ್ದ ಇವರಿಬ್ಬರೂ ಸೇರಿಕೊಂಡೇ ಮನುಷ್ಯ ಸಹಜ ಮನೋಭೂಮಿಕೆಯನ್ನು ಆಧಾರವಾಗಿಟ್ಟುಕೊಂಡಿರುವಂಥಾ ಪೊಗದಸ್ತಾದ ಕಥೆಯೊಂದನ್ನು ಸಿದ್ಧಡಿಸಿಕೊಂಡು ಈ ಕಥೆಯನ್ನು ರೂಪಿಸಿದ್ದಾರೆ. ಮನೋರಂಜನೆಯನ್ನೇ ಮೂಲ ಉದ್ದೇಶವಾಗಿಟ್ಟುಕೊಂಡು ಬದುಕಿಗೆ ಲಹತ್ತಿರಾದ ಅಂಶಗಳನ್ನೊಳಗೊಂಡಿರುವ ಈ ಚಿತ್ರ ಈಗಾಗಲೇ ಏನ್ ಚಂದಾನೋ ತಕ್ಕೋ ಎಂಬ ಹಾಡಿನ ಮೂಲಕವೇ ನೈಜ ಪ್ರಚಾರದ ವಿರಾಟ್ ರೂಪ ಪ್ರದರ್ಶಿಸಿದೆ.

    ಸಾಮಾನ್ಯವಾಗಿ ಜನರಿಗೆ ತಮ್ಮ ವಲಯದಲ್ಲಿ ಅದೆಂಥಾದ್ದೇ ವಾತಾವರಣ ಇದ್ದರೂ ಪರರ ಬದುಕಿನ ಬಗ್ಗೆ ಎಲ್ಲಿಲ್ಲದ ಕ್ಯೂರಿಯಾಸಿಟಿ ಇರುತ್ತದೆ. ಅದರಲ್ಲಿಯೂ ಒಂದಷ್ಟು ಕುಟುಂಬಗಳಿರುವ, ದಿನಾ ಬೆಳಗೆದ್ದು ಒಬ್ಬರ ಮುಖವನ್ನೊಬ್ಬರು ನೋಡಿಕೊಳ್ಳುವಂಥಾ ವಾತಾವರಣವಿರುವ ಹಳ್ಳಿಗಾಡುಗಳ ಕಡೆಯಲ್ಲಿ ಇಂಥಾದ್ದೆಲ್ಲ ಮತ್ತಷು ತೀವ್ರವಾಗಿರುತ್ತದೆ. ಇದೇ ಭೂಮಿಕೆಯಲ್ಲಿ ರೂಪುಗೊಂಡು ದೃಷ್ಯೀಕರಿಸಿರುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಇದರ ಒಟ್ಟಾರೆ ರೂಪುರೇಷೆಗಳೇನೆಂಬುದು ನವೀನ್ ಸಜ್ಜು ಹಾಡಿರುವ ಏನ್ ಚಂದಾನೋ ತಕ್ಕೋ ಎಂಬ ಹಾಡಿನ ರೂಪದಲ್ಲಿಯೇ ಅನಾವರಣಗೊಂಡಿದೆ. ಒಟ್ಟಾರೆಯಾಗಿ ಪ್ರತೀ ಕ್ಷಣಂವೂ ಭರ್ಜರಿ ಮನರಂಜನೆ ಮತ್ತು ಲವಲವಿಕೆಯಿಂದ ಕೂಡಿರುವ ಈ ಚಿತ್ರ ಈ ವಾರ ನಿಮ್ಮೆಲ್ಲರ ಮುಂದೆ ಅನಾವರಣಗೊಳ್ಳಲಿದೆ.

  • ಬಡ್ಡಿಮಗನ್ ಲೈಫು: ಟ್ರೇಲರ್ ತುಂಬಾ ಮಜವಾದ ಕಥೆಯ ಕಂಪು!

    ಬಡ್ಡಿಮಗನ್ ಲೈಫು: ಟ್ರೇಲರ್ ತುಂಬಾ ಮಜವಾದ ಕಥೆಯ ಕಂಪು!

    ಗ್ರೀನ್ ಚಿಲ್ಲಿ ಎಂಟರ್‍ಟೈನ್ಮೆಂಟ್ ಬ್ಯಾನರಿನಡಿಯಲ್ಲಿ ಪವನ್ ಕುಮಾರ್ ನಿರ್ಮಾಣ ಮಾಡಿರುವ ಚಿತ್ರ ಬಡ್ಡಿ ಮಗನ್ ಲೈಫು. ಬದುಕಿಗೆ ಹತ್ತಿರಾದ ಶೀರ್ಷಿಕೆಯ ಕಾರಣದಿಂದಲೇ ಆರಂಭದಿಂದಲೂ ಚರ್ಚೆಗೆ ಗ್ರಾಸವಾಗುತ್ತಾ ಅದನ್ನೇ ಕುತೂಹಲವಾಗಿ ಮಾರ್ಪಾಡು ಮಾಡುವಲ್ಲಿ ಚಿತ್ರತಂಡ ಯಶ ಕಂಡಿತ್ತು. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ `ಏನ್ ಚಂದಾನೊ ತಕ್ಕೋ’ ಎಂಬ ಹಾಡಿನ ಮೂಲಕವೇ ಭರ್ಜರಿ ಮೈಲೇಜು ಗಿಟ್ಟಿಸಿಕೊಂಡಿದ್ದ ಈ ಚಿತ್ರದ ಮಜವಾದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ.

    ಪವನ್-ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಸಿನಿಮಾ ಇದೇ ತಿಂಗಳ 27ರಂದು ಬಿಡುಗಡೆಯಾಗಲಿದೆ. ಈಗಾಗಲೇ ತುಂಬಾನೇ ನಿರೀಕ್ಷೆ ಮೂಡಿಸಿರೋ ಬಡ್ಡಿಮಗನ್ ಲೈಫು ಇದೀಗ ಮತ್ತೊಮ್ಮೆ ಟ್ರೇಲರ್ ಮೂಲಕ ಭಾರೀ ಸದ್ದು ಮಾಡುತ್ತಿದೆ. ಹರಿಕಥೆ ಶೈಲಿಯ ಪರಿಣಾಮಕಾರಿ ನಿರೂಪಣೆಯೊಂದಿಗೆ ತೆರೆದುಕೊಳ್ಳುವ ಈ ಟ್ರೇಲರ್ ಒಟ್ಟಾರೆ ಸಿನಿಮಾ ಕಥೆಯನ್ನು ಇಂಟರೆಸ್ಟಿಂಗ್ ಆಗಿ ತೆರೆದಿಟ್ಟಿದೆ. ಬಡ್ಡಿಮಗನ್ ಲೈಫು ಅದೆಷ್ಟು ಮನೋರಂಜನಾತ್ಮಕವಾಗಿ ಮೂಡಿ ಬಂದಿದೆ ಎಂಬುದಕ್ಕೂ ಈ ಟ್ರೇಲರ್ ನಲ್ಲಿ ಯಥೇಚ್ಛವಾಗಿಯೇ ಸಾಕ್ಷಿಗಳು ಸಿಕ್ಕಿವೆ.

    ಈ ಸಿನಿಮಾದಲ್ಲಿ ಬಡ್ಡಿ ಸೀನಪ್ಪ ಎಂಬ ಕ್ಯಾರೆಕ್ಟರ್ ಮೇಜರ್ ಆದ ಪಾತ್ರ ವಹಿಸುತ್ತೆ. ಊರಿಗೆಲ್ಲ ಬಡ್ಡಿಗೆ ಕಾಸು ಕೊಟ್ಟು ಜೀವ ತಿನ್ನೋ ಈತನ ಕೇಂದ್ರದಿಂದಲೇ ಇಡೀ ಕಥೆ ಕದಲುತ್ತದೆಯಂತೆ. ಬಡ್ಡಿ ಕೊಟ್ಟವನ ಕಾಟ, ತೆಗೆದುಕೊಂಡವರ ಪಡಿಪಾಟಲಿನ ಜೊತೆ ಜೊತೆಗೆ ಹಳ್ಳಿ ಬದುಕಿನ ದರ್ಶನ ಮಾಡಿಸಲಿರುವ ಈ ಚಿತ್ರದಲ್ಲಿ ಮುದ್ದು ಮುದ್ದಾದೊಂದು ಪ್ರೇಮಕಥೆಯೂ ಇದೆ. ಅದೆಲ್ಲದರ ಛಾಯೆಯೊಂದಿಗೆ ಭರ್ಜರಿ ಮನೋರಂಜನೆಯ ಕುರುಹುಗಳು, ವಿಭಿನ್ನವಾದ ಪಾತ್ರಗಳನ್ನು ಪರಿಚಯಿಸುತ್ತಾ ಈ ಟ್ರೇಲರ್ ಬಡ್ಡಿಮಗನ್ ಲೈಫನ್ನು ಬೇಗನೆ ನೋಡಬೇಕೆಂಬ ಕಾತರ ಮೂಡಿಸುವಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

    ಪ್ರತಿಭಾವಂತ ನಟ ಬಲ ರಾಜವಾಡಿ ಈ ಸಿನಿಮಾದಲ್ಲಿ ಬಡ್ಡಿ ಸೀಮಪ್ಪನಾಗಿ ಅಬ್ಬರದ ನಟನೆ ನೀಡಿದ್ದಾರೆ. ಅವರದ್ದಲ್ಲಿ ಈ ಹಿಂದೆಂದೂ ನಟಿಸಿರದಂತಹ, ಎಲ್ಲರಿಗೂ ತಟ್ಟುವಂತಹ ಪಾತ್ರವಂತೆ. ಐಶ್ವರ್ಯಾ ರಾವ್ ಮತ್ತು ಸಚಿನ್ ಶ್ರೀಧರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ಪೂರ್ಣಚಂದ್ರ ತೇಜಸ್ವಿ, ಮಂಡ್ಯ ವನಿತಾ, ಪದ್ಮನಾಭ, ರಜನೀಕಾಂತ್, ಮೈಮ್ ರಮೇಶ್ ಮುಂತಾದವರ ತಾರಾಗಣವಿದೆ. ಈ ಸಿನಿಮಾ ಇದೇ ತಿಂಗಳ 27ರಂದು ತೆರೆಗಾಣಲಿದೆ.

     

  • ತಣ್ಣಗಿನ ನಿರೂಪಣೆಯೊಂದಿಗೆ ಹೊಸತನದ ಅಚ್ಚೊತ್ತುವ `ಅಳಿದು ಉಳಿದವರು’!

    ತಣ್ಣಗಿನ ನಿರೂಪಣೆಯೊಂದಿಗೆ ಹೊಸತನದ ಅಚ್ಚೊತ್ತುವ `ಅಳಿದು ಉಳಿದವರು’!

    ಶು ಬೆದ್ರ ನಿರ್ಮಾಣ ಮಾಡಿ ನಾಯಕನಾಗಿಯೂ ನಟಿಸಿರುವ ಅಳಿದು ಉಳಿದವರು ಚಿತ್ರ ತನ್ನ ಶೀರ್ಷಿಕೆಯ ಮೂಲಕವೇ ಹೊಸತನದ ಕಂಪು ಹೊಮ್ಮಿಸುತ್ತಾ ಪ್ರೇಕ್ಷಕರನ್ನು ಆವರಿಸಿಕೊಂಡಿತ್ತು. ಪೋಸ್ಟರ್ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಪಡೆದ ಟ್ರೇಲರ್‌ಗಳ  ಹೊರತಾಗಿ ಚಿತ್ರತಂಡ ಯಾವ ಅಬ್ಬರದ ಪ್ರಚಾರದತ್ತಲೂ ಗಮನ ಹರಿಸಿರಲಿಲ್ಲ. ಅಷ್ಟಕ್ಕೂ ಅದು ತಣ್ಣಗೆ ಹೊತ್ತಿಸಿದ್ದ ನಿರೀಕ್ಷೆಗಳ ಕಾವಿನ ಮುಂದೆ ಅದೆಲ್ಲದರ ಅವಶ್ಯಕತೆಯೂ ಬಿದ್ದಿರಲಿಲ್ಲ. ಇದೆಲ್ಲದಕ್ಕೆ ತಕ್ಕುದಾದ ರೀತಿಯಲ್ಲಿಯೇ ನಿರ್ದೇಶಕ ಅರವಿಂದ್ ಶಾಸ್ತ್ರಿ ಈ ಚಿತ್ರವನ್ನು ಕಟ್ಟಿ ಕೊಡುತ್ತದೆ. ಯಾವ ಥರದಲ್ಲಿ ಈ ಸಿನಿಮಾ ಸದ್ದು ಮಾಡಿತ್ತೋ ಅದೇ ತಣ್ಣಗಿನ ಆವೇಗವನ್ನು ಆತ್ಮವಾಗಿಸಿಕೊಂಡಂತಿರುವ ಈ ಚಿತ್ರ ಎಲ್ಲರಿಗೂ ಹಿಡಿಸುವಂತೆ ಮೂಡಿ ಬಂದು ಪ್ರೇಕ್ಷಕರನ್ನು ಮುದಗೊಳಿಸಿದೆ.

    ಇಲ್ಲಿ ನಂಬಿಕೆ ಮತ್ತು ಮೂಢ ನಂಬಿಕೆಗಳನ್ನು ಮುಖಾಮುಖಿಯಾಗಿ ಡಿಕ್ಕಿ ಹೊಡೆಸಿ ಅದರ ಘರ್ಷಣೆಯಿಂದ ರೂಪುಗೊಂಡಂತಿರೋ ಕುತೂಹಲಕರವಾದ ಕಥೆಯನ್ನು ಹೇಳಲಾಗಿದೆ. ಒಂದು ಸಿನಿಮಾವನ್ನು ಮಾಮೂಲಿ ಜಾಡಿಗಿಂತ ಭಿನ್ನವಾಗಿ ರೂಪಿಸಬೇಕೆಂಬ ತುಡಿತ ಇದ್ದರೆ ಅಂಥಾ ಚಿತ್ರಗಳು ಎಲ್ಲ ರೀತಿಯಿಂದಲೂ ಡಿಫರೆಂಟೆಂಬಂತೆ ಮೂಡಿ ಬರುತ್ತವೆ. ಇಲ್ಲಿ ಪ್ರೀತಿ ಸೇರಿದಂತೆ ನಾನಾ ಛಾಯೆಯ ಕಥೆಯಿದೆ. ಆದರೆ ಎಲ್ಲಿಯೂ ಕೂಡಾ ಥ್ರಿಲ್ಲರ್ ಅಂಶಗಳನ್ನು ಬಿಟ್ಟುಕೊಡದಂಥಾ ಕಲೆಗಾರಿಕೆಯನ್ನು ನಿರ್ದೇಶಕ ಅರವಿಂದ ಶಾಸ್ತ್ರಿ ಪ್ರದರ್ಶಿಸಿದ್ದಾರೆ. ಹಾಗಂತ ಇಲ್ಲಿ ಬಿಲ್ಡಪ್ಪುಗಳಿಲ್ಲ. ಅದಿಲ್ಲದೆಯೂ ಒಂದು ದೃಷ್ಯವನ್ನು ಕಳೆಗಟ್ಟಿಸೋದು, ನೋಡುಗರನ್ನು ಕುತೂಹಲದ ಶಿಖರವೇರಿಕೊಳ್ಳುವಂತೆ ಮಾಡುವುದೆಲ್ಲ ಒಂದು ಕಲೆ. ನಿರ್ದೇಶಕರಿಲ್ಲಿ ಅದನ್ನು ಧಾರಾಳವಾಗಿಯೇ ಪ್ರದರ್ಶಿಸಿದ್ದಾರೆ. ಅಳಿದು ಉಳಿದವರ ಅಸಲಿ ಹೆಚ್ಚುಗಾರಿಕೆಯೇ ಅದು!

    ಈ ಚಿತ್ರದ ನಾಯಕನಾಗಿ ಅಶು ಬೆದ್ರ ಶೀಲಂ ಎಂಬ ನಿರೂಪಕನ ಪಾತ್ರದಲ್ಲಿ ನಟಿಸಿದ್ದಾರೆ. ಈತ ಎಲ್ಲರಿಗಿಂತಲೂ ತುಸು ಭಿನ್ನವಾದ ನಿರೂಪಕ. ಶೀಲಂ ನಂಬಿಕೆ ಮತ್ತು ಮೂಢನಂಬಿಕೆಗಳನ್ನೇ ಬೇಸ್ ಆಗಿಸಿಕೊಂಡಿರೋ ಕಾರಣ..? ಎಂಬೊಂದು ಕಾರ್ಯಕ್ರಮವನ್ನು ನಡೆಸುತ್ತಿರುತ್ತಾನೆ. ಪ್ರತೀ ಎಪಿಸೋಡಿನಲ್ಲಿಯೂ ವಿಷಯವೊಂದರ ಪಾತಾಳಗರಡಿಯಂಥಾ ವಿವರಗಳನ್ನು ಕಲೆ ಹಾಕುತ್ತಾ ಪ್ರತೀ ಎಪಿಸೋಡುಗಳಲ್ಲಿಯೂ ಆತ ದೆವ್ವ ಎಂಬುದಿಲ್ಲ ಎಂಬುದನ್ನೇ ಸಾಬೀತುಪಡಿಸುತ್ತಾ ಸಾಗುತ್ತಾನೆ. ಇದೇ ಥರದಲ್ಲಿ ತೊಬತ್ತೊಂಬತ್ತು ಎಪಿಸೋಡುಗಳನ್ನು ಪೈರೈಸಿಕೊಳ್ಳುವ ಆತನ ಮುಂದೆ ನೂರನೇ ಎಪಿಸೋಡನ್ನು ಎಲ್ಲಕ್ಕಿಂತ ವಿಶೇಷವಾಗಿ ರೂಪಿಸಬೇಕೆಂಬ ಸವಾಲು ಮೂಡಿಕೊಳ್ಳುತ್ತದೆ.

    ಹಾಗೆ ಹುಡುಕಿ ಹೊರಡೋ ಶೀಲಂಗೆ ಪವನ್ ಕುಮಾರ್ ನಿರ್ವಹಿಸಿರುವ ಪಾತ್ರ ಎದುರಾಗುತ್ತೆ. ಆ ಪಾತ್ರ ತನ್ನ ಸೇಲಾಗದೇ ಉಳಿದ ಮನೆಯಲ್ಲಿ ದೆವ್ವವಿಲ್ಲ ಅಂತ ನಿರೂಪಿಸುವಂತೆ ಶೀಲಂಗೆ ಸವಾಲೊಡ್ಡುತ್ತೆ. ಅದನ್ನು ಸ್ವೀಕರಿಸಿ ಆ ಮನೆಗೆ ಶೀಲಂ ಕಾಲಿಡುತ್ತಲೇ ಕಥೆ ಮತ್ತಷ್ಟು ರೋಚಕ ಆಯಾಮ ಪಡೆದುಕೊಳ್ಳುತ್ತದೆ. ಅಲ್ಲಿ ಶೀಲಂಗೆ ನಿಜವಾಗಿಯೂ ದೆವ್ವದ ದರ್ಶನವಾಗುತ್ತದಾ ಎಂಬುದರಿಂದ ಹಿಡಿದು ಎಲ್ಲರನ್ನು ಕಾಡ ಬಹುದಾದ ಪ್ರತೀ ಪ್ರಶ್ನೆಇಗಳಿಗೂ ಇಲ್ಲಿ ರೋಚಕ ಉತ್ತರವಿದೆ. ವಿಶೇಷವೆಂದರೆ ಇಲ್ಲಿ ಮೂಢ ನಂಬಿಕೆಯ ವಿರುದ್ಧದ ಅಂಶಗಳನ್ನೇ ನಿರ್ದೇಶಕರು ಪ್ರಧಾನವಾಗಿಸಿಕೊಂಡಿದ್ದಾರೆ. ಇದರೊಂದಿಗೆ ನಾನಾ ಛಾಯೆಗಳಿರೋ ಗಟ್ಟಿ ಕಥೆಯನ್ನೇ ಕಟ್ಟಿ ಕೊಟ್ಟಿದ್ದಾರೆ.

    ಸಾಮಾನ್ಯವಾಗಿ ಮನುಷ್ಯನಿಗೆ ಕಾಣಿಸೋದರ ಮೇಲಿರೋ ಕುತೂಹಲಕ್ಕಿಂತ ಕಾಣಿಸದಿರುವುದರ ಬಗ್ಗೆಯೇ ಆಸಕ್ತಿ ಹೆಚ್ಚು. ಅದುವೇ ಭ್ರಮೆಯ ರೂಪ ಧರಿಸಿ ಅದರ ಚಿಪ್ಪೊಳಗೆ ದೆವ್ವ ಭೂತಗಳಂಥವುಗಳು ನರ್ತನ ಶುರುವಿಟ್ಟುಕೊಳ್ಳುತ್ತವೆ. ಈ ಭೂಮಿಕೆಯಲ್ಲಿ ಸಿದ್ಧಗೊಂಡಿರೋ ಅಳಿದು ಉಳಿದವರು ಭರ್ಜರಿ ಎಂಟರ್‍ಟೈನ್ಮೆಂಟ್ ಪ್ಯಾಕೇಜಿನಂತೆ ಮೂಡಿ ಬಂದಿದೆ. ಇಲ್ಲಿ ಹಾಡುಗಳ ಆಡಂಬರವಿಲ್ಲ, ಸಂತದ ಅಬ್ಬರವೂ ಇಲ್ಲ. ಆದರೆ ಕಥೆಯೇ ಅದೆಲ್ಲದರ ಸ್ಥಾನವನ್ನು ಆಕ್ರಮಿಸಿಕೊಂಡು ತಣ್ಣಗೆ ವಿಜೃಂಭಿಸುತ್ತದೆ. ಅಶು ಬೆದ್ರ ನಾಯಕನಾಗಿ ಮೊದಲ ಪ್ರಯತ್ನದಲ್ಲಿಯೇ ಮೆಚ್ಚಿಕೊಳ್ಳುವಂತೆ ನಟಿಸಿದ್ದಾರೆ. ಸಂಗೀತಾ ಭಟ್ ಕೂಡಾ ಅದಕ್ಕೆ ಸರಿಯಾಗಿಯೇ ಸಾಥ್ ನೀಡಿದ್ದಾರೆ. ಅತುಲ್ ಕುಲಕರ್ಣಿ, ಪವನ್ ಕುಮಾರ್, ಬಿ ಸುರೇಶ್ ಅವರ ಪಾತ್ರಗಳೂ ಕಾಡುವಂತಿವೆ. ಅಂತೂ ಅತ್ಯಂತ ವಿಶಿಷ್ಟವಾದ ಚಿತ್ರವಾಗಿ ದಾಖಲಾಗುವಂತೆ ಅಳಿದು ಉಳಿದವರು ಚಿತ್ರ ಮೂಡಿ ಬಂದಿದೆ.

    ರೇಟಿಂಗ್: 3.5/5

  • ಪವನ್ ಕುಮಾರ್ ಬಗ್ಗೆ ಏನಂದ್ಳು ಗೊತ್ತಾ ಸಮಂತಾ?

    ಪವನ್ ಕುಮಾರ್ ಬಗ್ಗೆ ಏನಂದ್ಳು ಗೊತ್ತಾ ಸಮಂತಾ?

    ಹೈದರಾಬಾದ್: ಕನ್ನಡದಲ್ಲಿ ಕಥೆಗಳಿಲ್ಲ ಎಂಬ ಬಗ್ಗೆ ಆಗಾಗ ಚರ್ಚೆಗಳಾಗುತ್ತವೆ. ಇಂಥಾ ಮಾತಾಡುವವರನ್ನು ಜನ ಬೇಷರತ್ತಾಗಿಯೇ ತರಾಟೆಗೆ ತೆಗೆದುಕೊಳ್ಳುತ್ತಲೂ ಇದ್ದಾರೆ. ಆದರೆ ಕನ್ನಡದಲ್ಲಿ ಪರಭಾಷೆಗಳನ್ನೇ ಅದುರಿಸುವಂಥಾ ಚಮತ್ಕಾರಿಕ ಕಥೆಗಳಿದ್ದಾವೆಂಬ ಖದರ್ರೂ ಕೂಡಾ ಆಗಾಗ ಪ್ರದರ್ಶನಗೊಳ್ಳುತ್ತಿರುತ್ತವೆ. ಸದ್ಯ ತೆಲುಗು ಭಾಷೆಯಲ್ಲೂ ಕನ್ನಡದ ಹಿರಿಮೆಯನ್ನು ಪವನ್ ಕುಮಾರ್ ನಿರ್ದೇಶನದ ಯು ಟರ್ನ್ ಚಿತ್ರ ಎತ್ತಿ ಹಿಡಿದಿದೆ.

    ಯೂ ಟರ್ನ್ ಚಿತ್ರ ತೆಲುಗಿಗೆ ರೀಮೇಕ್ ಆಗುತ್ತಿರೋ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಯೂ ಟರ್ನ್ ಹೆಸರಿನಲ್ಲಿಯೇ ತೆಲುಗಿನಲ್ಲಿಯೂ ತಯಾರಾಗುತ್ತಿರೋ ಈ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ಅಭಿನಯಿಸಿದ್ದ ಪಾತ್ರದಲ್ಲಿ ಸಮಂತಾ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಕನ್ನಡದಲ್ಲಿ ನೋಡಿ ಬಹುವಾಗಿ ಇಷ್ಟಪಟ್ಟಿದ್ದ ಸಮಂತಾ ಇದೀಗ ಮೂಲ ನಿರ್ದೇಶಕ ಪವನ್ ಕುಮಾರ್ ಪರಿಶ್ರಮ, ಟ್ಯಾಲೆಂಟನ್ನು ಮೆಚ್ಚಿ ಕೊಂಡಾಡಿದ್ದಾಳೆ.

    ಈ ಚಿತ್ರ ತೆಲುಗಿಗೆ ರೀಮೇಕ್ ಆಗುವ ಮಾತುಕತೆ ನಡೆದು ಮುಖ್ಯ ಪಾತ್ರಕ್ಕೆ ಸಮಂತಾಳನ್ನು ಅಪ್ರೋಚ್ ಮಾಡಿದ್ದಾಗಲೇ ಆಕೆ ಥ್ರಿಲ್ ಆಗಿದ್ದಳಂತೆ. ಅದಾಗಲೇ ಕನ್ನಡದ ಯೂ ಟರ್ನ್ ಚಿತ್ರವನ್ನು ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದ ಸಮಂತಾ ಅದೇ ಚಿತ್ರದ ಪಾತ್ರ ತನಗೊಲಿದು ಬಂದಿದ್ದರ ಬಗ್ಗೆ ಖುಷಿಯಾಗಿದ್ದಳಂತೆ. ಅದಾದ ನಂತರದಲ್ಲಿ ಕೇವಲ ನಟಿಯಾಗಿ ತನ್ನ ಪಾತ್ರವನ್ನು ಮಾತ್ರವೇ ಮಾಡದೇ ಇದನ್ನು ತನ್ನ ಚಿತ್ರ ಎಂಬ ಕಕ್ಕುಲಾತಿಯಿಂದ ಪ್ರಮೋಷನ್ ನಲ್ಲೂ ತೊಡಗಿಕೊಂಡಿರೋ ಸಮಂತಾ ಬಗ್ಗೆ ಪವನ್ ಕೂಡಾ ಮೆಚ್ಚುಗೆಯ ಮಾತಾಡಿದ್ದಾರೆ.

    ಇಂಥಾದ್ದೊಂದು ಭಿನ್ನ ಆಲೋಚನೆಯ ಚಿತ್ರ ಮಾಡಿ ತನಗೆ ನಟಿಸಲು ಅನುವು ಮಾಡಿ ಕೊಟ್ಟಿರೋ ಪವನ್ ಕುಮಾರ್ ಅವರನ್ನು ಮೆಚ್ಚಿಕೊಳ್ಳುತ್ತಲೇ, ಒಂದು ಕಥೆಯನ್ನು ಡಿಫರೆಂಟಾಗಿ ನಿರೂಪಣೆ ಮಾಡಿರೋ ಪವನ್ ಕಲೆಗಾರಿಕೆಯನ್ನೂ ಕೂಡಾ ಸಮಂತಾ ಕೊಂಡಾಡಿದ್ದಾಳೆ.

    ಈ ಮೂಲಕವೇ ಒಂದಷ್ಟು ಕಾಲ ಖಾಸಗಿ ಜೀವನದಲ್ಲಿ ಕಳೆದು ಹೋಗಿದ್ದ ಸಮಂತಾಗೆ ಗ್ರ್ಯಾಂಡ್ ಎಂಟ್ರಿ ಸಿಕ್ಕಂತಾಗಿದೆ. ಮೊನ್ನೆಯಷ್ಟೇ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಅದಕ್ಕೆ ವ್ಯಾಪಕ ಮೆಚ್ಚುಗೆ ಸಿಕ್ಕಿದೆ. ಆ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದೆ.

    https://twitter.com/Samanthaprabhu2/status/1020941653442379776