Tag: Pawan Kumar

  • ‘ಗಾಳಿಪಟ 2’ ಟ್ರೇಲರ್ ಮೂಲಕ ಮತ್ತೊಮ್ಮೆ ಗೆದ್ದ ಯೋಗರಾಜ್ ಭಟ್

    ‘ಗಾಳಿಪಟ 2’ ಟ್ರೇಲರ್ ಮೂಲಕ ಮತ್ತೊಮ್ಮೆ ಗೆದ್ದ ಯೋಗರಾಜ್ ಭಟ್

    ಯೋಗರಾಜ್ ಭಟ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಹಾಗೂ ಪವನ್ ಕುಮಾರ್ ನಾಯಕರಾಗಿ ಅಭಿನಯಿಸಿರುವ, ರಮೇಶ್ ರೆಡ್ಡಿ ಅವರ ನಿರ್ಮಾಣದ “ಗಾಳಿಪಟ 2” ಚಿತ್ರದ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ರಮೇಶ್ ಅರವಿಂದ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ವಿತರಕರಾದ ವೆಂಕಟ್(ಕೆ.ವಿ.ಎನ್), ಸುಪ್ರೀತ್, ನಿರ್ಮಾಪಕರಾದ ಕೆ.ಮಂಜು, ಸಂಜಯ್ ಗೌಡ, ನಟ ಶ್ರೇಯಸ್ ಕೆ. ಮಂಜು ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭಕೋರಿದರು.

    “ಗಾಳಿಪಟ ೨” ಚಿತ್ರದ ಟ್ರೇಲರನ್ನು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಬಿಡುಗಡೆ ಮಾಡಿದರು. ಟ್ರೇಲರ್ ಸಖತಾಗಿದೆ. ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಶನ್ ಮತ್ತೊಮ್ಮೆ ಮೋಡಿ ಮಾಡಲಿದೆ. ದಿಗಂತ್, ಪವನ್ ಹಾಗೂ ನಾಯಕಿಯರು ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಅದರಲ್ಲೂ ಪವನ್ ತುಂಬಾ ಕ್ಯೂಟಾಗಿ ಕಾಣುತ್ತಾರೆ. ಅರ್ಜುನ್ ಜನ್ಯ ಸಂಗೀತ ಸೊಗಸಾಗಿದೆ. ನನಗೆ ಅವರನ್ನು ನೋಡಿದಾಗ ಎ.ಆರ್.ರೆಹಮಾನ್ ನೆನಪಾಗುತ್ತಾರೆ.‌ ಮುಂದೆ ಅರ್ಜುನ್ ಜನ್ಯ ನಿರ್ದೇಶಿಸುತ್ತಿರುವ “45” ಚಿತ್ರದ ನಾಯಕನಾಗಿ ನಾನು ನಟಿಸುತ್ತಿದ್ದೇನೆ. ರಮೇಶ್ ರೆಡ್ಡಿ ಅವರೆ ಆ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. “ಗಾಳಿಪಟ ೨” ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸಿದರು ಶಿವರಾಜಕುಮಾರ್. ಇದನ್ನೂ ಓದಿ:ಅಫೇರ್ ಆರೋಪ ಬೆನ್ನಲ್ಲೇ ಧಿಡೀರ್ ಸಂಭಾವನೆ ಹೆಚ್ಚಿಸಿಕೊಂಡ ಪವಿತ್ರಾ ಲೋಕೇಶ್

    ಈ ಚಿತ್ರದ ಸಂಭಾಷಣೆಯೊಂದರಂತೆ ನೋಡುಗರಿಗೆ ಉತ್ತಮ ಮನೋರಂಜನೆ ನೀಡುವ ಚಿತ್ರ ಇದಾಗಲಿದೆ. ಯೋಗರಾಜ್ ಭಟ್ ಹಾಗೂ ಗಣೇಶ್ ಜೋಡಿಯ “ಗಾಳಿಪಟ” ಯಶಸ್ಸು ಕಂಡಿತ್ತು. “ಗಾಳಿಪಟ 2” ಸಹ ಹಾಡುಗಳ ಹಾಗೂ ಟ್ರೇಲರ್ ಮೂಲಕ ಈಗಾಗಲೇ ಗೆದ್ದಿದೆ. ಚಿತ್ರ ಕೂಡ ಭರ್ಜರಿ ಗೆಲವು ಕಾಣಲಿದೆ ಎಂದು ರಮೇಶ್ ಅರವಿಂದ್ ಹಾರೈಸಿದರು. ಎಲ್ಲರೂ ಮಾತನಾಡಿದ್ದಾರೆ. ನಾನು ಇನೇನು ಹೇಳುವುದಿದೆ. ಯೋಗರಾಜ್ ಭಟ್ಟರು ನಿರ್ದೇಶಕರಾಗಿ, ಗೀತರಚನೆಕಾರರಾಗಿ ಹಾಗೂ ಸಂಭಾಷಣೆಕಾರರಾಗೂ ಜನಪ್ರಿಯ. ಅದಕ್ಕೆ ಈ ಚಿತ್ರದ ಟ್ರೇಲರ್ ಸಾಕ್ಷಿ. ಒಳ್ಳೆಯ ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರ ಸಮಾಗಮದಲ್ಲಿ ಮೂಡಿಬಂದಿರುವ ಈ ಚಿತ್ರ ಪ್ರಚಂಡ ಯಶಸ್ಸು ಕಾಣಲಿ ಎಂದರು ರಿಯಲ್ ಸ್ಟಾರ್ ಉಪೇಂದ್ರ.

    ನನ್ನ ಹಾಗೂ ಭಟ್ಟರ ಕಾಂಬಿನೇಶನ್ ನಲ್ಲಿ ಸಾಕಷ್ಟು ಚಿತ್ರಗಳು ಬಂದಿದೆ. ಆದರೆ ನಾನು ಯಾವತ್ತು ಯಾವ ಚಿತ್ರದ ಕುರಿತು  ಅವರಿಗೆ ಫೋನ್ ಮಾಡಿರಲಿಲ್ಲ. ಆದರೆ ಈ ಚಿತ್ರದ ಡಬ್ಬಿಂಗ್ ಆದ ಮೇಲೆ ಫೋನ್ ಮಾಡಿ ಅದ್ಭುತ ಚಿತ್ರ ಮಾಡಿದ್ದೀರಾ ಅಂತ ಹೇಳಿ ಅಭಿನಂದನೆಗಳನ್ನು ತಿಳಿಸಿದೆ. ನಿಜಕ್ಕೂ “ಗಾಳಿಪಟ 2” ತುಂಬಾ ಚೆನ್ನಾಗಿದೆ. ನೀವೆಲ್ಲಾ ನೋಡಿ ಹಾರೈಸಿ ಎಂದರು ಗೋಲ್ಡನ್ ಸ್ಟಾರ್ ಗಣೇಶ್. ರೋಡಿನಲ್ಲಿ ಸಿಗುವ ಸಂಬಂಧ, ರಕ್ತ ಸಂಬಂಧಕ್ಕಿಂತ ಹೆಚ್ಚು ಎಂದು ನಂಬಿರುವವನು ನಾನು. ಆ ಸ್ನೇಹದಿಂದಲೇ ಹದಿನಾಲ್ಕು ವರ್ಷಗಳ ಹಿಂದೆ “ಗಾಳಿಪಟ” ಚಿತ್ರ ನಿರ್ಮಾಣವಾಯಿತು. ಈಗ “ಗಾಳಿಪಟ ೨’” ಸಹ ಅದೇ ಸ್ನೇಹದಿಂದ ನಿರ್ಮಾಣವಾಗಿದೆ. ಕರ್ನಾಟಕದ ಎಲ್ಲಾ ಸ್ನೇಹಿತರು ಆಗಸ್ಟ್‌ 12ರಂದು ಬಿಡುಗಡೆಯಾಗುತ್ತಿರುವ ನಮ್ಮ “ಗಾಳಿಪಟ ೨” ಚಿತ್ರವನ್ನು ನೋಡಿ ಗೆಲಿಸುತ್ತಾರೆ ಎಂಬ ನಂಬಿಕೆಯಿದೆ ಎಂದರು ನಿರ್ದೇಶಕ ಯೋಗರಾಜ್ ಭಟ್.

    ಯೋಗರಾಜ್ ಭಟ್ ಒಳ್ಳೆಯ ಚಿತ್ರ  ಮಾಡಿ ಕೊಟ್ಟಿದ್ದಾರೆ. ಈ ಚಿತ್ರ ಇಷ್ಟು ಚೆನ್ನಾಗಿ ಬರಲು ಚಿತ್ರತಂಡ ತುಂಬಾ ಶ್ರಮಪಟ್ಟಿದೆ. ಎಲ್ಲರಿಗೂ ನನ್ನ ಧನ್ಯವಾದ. ನಮ್ಮ ಸಮಾರಂಭಕ್ಕೆ ಶಿವಣ್ಣ, ಉಪೇಂದ್ರ ಹಾಗೂ ರಮೇಶ್ ಸರ್ ಬಂದಿರುವುದು ನನಗೆ ತುಂಬಾ ಸಂತೋಷವಾಗಿದೆ. ಇವರನೆಲ್ಲಾ ನೋಡಿ ನಾನು “ಗಾಳಿಪಟ ೨” ಚಿತ್ರವನ್ನು ಮರೆತು ಬಿಟ್ಟಿದೆ.  ‌ನಮ್ಮ ಚಿತ್ರಕ್ಕೆ ಹಾರೈಸಲು ಬಂದಿರುವ ಎಲ್ಲರಿಗೂ ತುಂಬು ಹೃದಯದ ಧನ್ಯವಾದ ಎಂದರು ನಿರ್ಮಾಪಕ ರಮೇಶ್ ರೆಡ್ಡಿ. ಚಿತ್ರದಲ್ಲಿ ಅಭಿನಯಿಸಿರುವ ಪವನ್ ಕುಮಾರ್, ಶರ್ಮಿಳಾ ಮಾಂಡ್ರೆ, ನಿಶ್ವಿಕಾ, ವೈಭವಿ, ರಂಗಾಯಣ ರಘು, ಸುಧಾ ಬೆಳವಾಡಿ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ‌ಅರ್ಜುನ್ ಜನ್ಯ ಸಂಗೀತದ ಬಗ್ಗೆ , ಸಂತೋಷ್ ರೈ ಪಾತಾಜೆ ಛಾಯಾಗ್ರಹಣದ ಕುರಿತು ಹಾಗೂ ಧನು ಮಾಸ್ಟರ್ ನೃತ್ಯ ನಿರ್ದೇಶನದ ವಿವರಣೆ ನೀಡಿದರು.

    Live Tv
    [brid partner=56869869 player=32851 video=960834 autoplay=true]

  • ಗಣೇಶ್ ನಟನೆಯ ‘ಗಾಳಿಪಟ 2’ ಸಿನಿಮಾದ ಮತ್ತೊಂದು ಹಾಡು ರಿಲೀಸ್

    ಗಣೇಶ್ ನಟನೆಯ ‘ಗಾಳಿಪಟ 2’ ಸಿನಿಮಾದ ಮತ್ತೊಂದು ಹಾಡು ರಿಲೀಸ್

    ಯೋಗರಾಜ್ ಭಟ್  ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಗಾಳಿಪಟ 2” ಚಿತ್ರ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಚಿತ್ರ ಬಿಡುಗಡೆಗೆ ಅಭಿಮಾನಿ ಸಮೂಹ ಕಾತುರದಿಂದ ಕಾಯುತ್ತಿದೆ. ಈ ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಅವರು ಬರೆದಿರುವ “ನೀನು ಬಗೆಹರಿಯದ ಹಾಡು” ಎಂಬ ಗೀತೆ ಇತ್ತೀಚೆಗೆ ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು ಖ್ಯಾತ ಗಾಯಕ ನಿಹಾಲ್ ತಾವ್ರೋ ಹಾಡಿದ್ದಾರೆ.

    ಪವನ್ ಕುಮಾರ್ ಹಾಗೂ ಶರ್ಮಿಳಾ ಮಾಂಡ್ರೆ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಕುದುರೆಮುಖದ ಸುಂದರ ಪರಿಸರದಲ್ಲಿ ಈ ಹಾಡಿನ‌ ಚಿತ್ರೀಕರಣ ನಡೆದಿದೆ. ಧನು ನೃತ್ಯ ನಿರ್ದೇಶನ ಮಾಡಿದ್ದಾರೆ. ಸದ್ಯದಲ್ಲೇ ಟೀಸರ್, ಟ್ರೇಲರ್ ಹಾಗೂ ಇನ್ನೂ ಎರಡು ಹಾಡುಗಳ ಬಿಡುಗಡೆಯಾಗಲಿದೆ. ಆಗಸ್ಟ್ 12 ಕ್ಕೆ ಚಿತ್ರ ತೆರೆಗೆ ಬರಲಿದೆ. ಇದನ್ನೂ ಓದಿ: ಶಿವಣ್ಣನನ್ನೇ ಹಿಂದಿಕ್ಕಿದ ಶಿವಣ್ಣನ ಅಭಿಮಾನಿ ಕಾಫಿನಾಡು ಚಂದು!

    ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಅನಂತನಾಗ್, ಸುಧಾ ಬೆಳವಾಡಿ, ಬುಲೆಟ್ ಪ್ರಕಾಶ್, ಪದ್ಮಜಾರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಸಂತೋಷ್ ರೈ ಪಾತಾಜೆ ಈ ಚಿತ್ರದ ಛಾಯಾಗ್ರಹಕರು.

    Live Tv
    [brid partner=56869869 player=32851 video=960834 autoplay=true]

  • ಮತ್ತೆ ‘ಎಣ್ಣೆ ಹಾಡಿನ’ ಹಿಂದೆ ಬಿದ್ದ ಯೋಗರಾಜ್ ಭಟ್: ಜುಲೈ 14ರಂದು ಗಾಳಿಪಟ 2 ಚಿತ್ರದ ಎಣ್ಣೆ ಹಾಡು ರಿಲೀಸ್

    ಮತ್ತೆ ‘ಎಣ್ಣೆ ಹಾಡಿನ’ ಹಿಂದೆ ಬಿದ್ದ ಯೋಗರಾಜ್ ಭಟ್: ಜುಲೈ 14ರಂದು ಗಾಳಿಪಟ 2 ಚಿತ್ರದ ಎಣ್ಣೆ ಹಾಡು ರಿಲೀಸ್

    ಗಾಗಲೇ ಅನೇಕ ಎಣ್ಣೆ ಹಾಡುಗಳು ಮೂಲಕ ಫೇಮಸ್ ಆಗಿರುವ ನಿರ್ದೇಶಕ ಯೋಗರಾಜ್ ಭಟ್ ಗಾಳಿಪಟ 2 ಸಿನಿಮಾಗಾಗಿ ಮತ್ತೊಂದು ಎಣ್ಣೆ ಹಾಡು ರೆಡಿ ಮಾಡಿದ್ದಾರೆ. ನಿರ್ದೇಶಕರಾಗಿ ಜನಪ್ರಿಯರಾಗಿರುವ ಯೋಗರಾಜ್ ಭಟ್, ಗೀತರಚನೆಕಾರರಗಿಯೂ ಎಲ್ಲರಿಗೂ ಅಚ್ಚುಮೆಚ್ಚು. ಈ ಹಿಂದೆ ಇವರ ರಚನೆಯ ಎಣ್ಣೆ ಹಾಡುಗಳು ಇಂದಿಗೂ ಗುನಗುವಂತಿದೆ. ಭಟ್ಟರು ಬರೆದಿರುವ ಎಣ್ಣೆ ಹಾಡುಗಳನ್ನು ಹೆಚ್ಚಾಗಿ ಹಾಡಿರುವವರು ವಿಜಯ್ ಪ್ರಕಾಶ್ ಹಾಗೂ ಸಂಗೀತ ನೀಡಿರುವವರು ಅರ್ಜುನ್ ಜನ್ಯ.

    ಈ ಮೂವರ ಕಾಂಬಿನೇಶನ್ ನಲ್ಲಿ “ಗಾಳಿಪಟ 2” ಚಿತ್ರದ ಮತ್ತೊಂದು ಎಣ್ಣೆ ಸಾಂಗ್ ಜುಲೈ 14 ರಂದು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಲಿದೆ. ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ ಈ ಚಿತ್ರದ ಎರಡು ಹಾಡುಗಳು ಈಗಾಗಲೇ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಮುಂದೆ ಬಿಡುಗಡೆಯಾಗಲಿರುವ ಹಾಡಿನ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಇದನ್ನೂ ಓದಿ:ಶಿವರಾಜ್ ಕುಮಾರ್ ಬರ್ತಡೇ : ಏನೆಲ್ಲ ಸ್ಪೆಷಲ್ ಗೊತ್ತಾ?

    ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ರೆಡ್ಡಿ ಅವರು “ಗಾಳಿಪಟ 2” ಚಿತ್ರವನ್ನು ನಿರ್ಮಿಸಿದ್ದಾರೆ. ಯೋಗರಾಜ್ ಭಟ್ ನಿರ್ದೇಶಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್, ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ

    Live Tv
    [brid partner=56869869 player=32851 video=960834 autoplay=true]

  • Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್

    Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್

    ಅಂದುಕೊಂಡಂತೆ ಆಗಿದ್ದರೆ ಲೂಸಿಯಾ ಖ್ಯಾತಿಯ ಪವನ್ ಕುಮಾರ್ ದ್ವಿತ್ವ ಸಿನಿಮಾ ಮಾಡಬೇಕಿತ್ತು. ಪುನೀತ್ ರಾಜ್ ಕುಮಾರ್ ಬದುಕಿದ್ದರೆ, ಈ ಸಿನಿಮಾದ ಬಹುತೇಕ ಶೂಟಿಂಗ್ ಕೂಡ ಮುಗಿದಿರುತ್ತಿತ್ತು. ಆದರೆ, ವಿಧಿಯಾಟ ಬೇರೆಯೇ ಆಗಿತ್ತು. ಇನ್ನೇನು ಸಿನಿಮಾದ ಶೂಟಿಂಗ್ ಗೆ ಹೊರಡಬೇಕಿದ್ದ ಅಪ್ಪು ಲೋಕವನ್ನೇ ಬಿಟ್ಟು ನಡೆದು ಬಿಟ್ಟರು. ಹಾಗಾಗಿ ದ್ವಿತ್ವ ಸೇರಿದಂತೆ ಹಲವು ಸಿನಿಮಾಗಳು ಹಾಗೆಯೇ ಉಳಿದುಕೊಂಡವು.

    ದ್ವಿತ್ವ ಸಿನಿಮಾ ನಿಲ್ಲುತ್ತಿದ್ದಂತೆಯೇ ಈ ಕಥೆಯನ್ನು ಪವನ್ ಕುಮಾರ್ ಏನು ಮಾಡಲಿದ್ದಾರೆ ಎನ್ನುವ ಪ್ರಶ್ನೆಯೂ ಮೂಡಿ ಬಂತು. ಈ ಕುರಿತು ಪವನ್ ಕೆಲ ಮಾಧ್ಯಮಗಳಲ್ಲಿ ಸ್ಪಷ್ಟನೆಯನ್ನೂ ನೀಡಿದರು. ಸೂಕ್ತ ಕಲಾವಿದರನ್ನು ಹುಡುಕಿ ಇದೇ ಕಥೆಯನ್ನೇ ಸಿನಿಮಾ ಮಾಡುವುದಾಗಿಯೂ ಹೇಳಿಕೊಂಡಿದ್ದರು. ಬಹುಶಃ ಈ ಕಥೆಯನ್ನು ದಕ್ಷಿಣದ ಖ್ಯಾತ ನಟ ಫಹಾದ್ ಫಾಸಿಲ್ ಗಾಗಿ ಮಾಡುತ್ತಿದ್ದಾರಾ ಎನ್ನುವ ಕುತೂಹಲ ಮೂಡಿದೆ. ಕಾರಣ ಅವರು ಫಹಾದ್ ಗಾಗಿ ತಮಿಳಿನಲ್ಲಿ ಸಿನಿಮಾವೊಂದನ್ನು ಮಾಡಲಿದ್ದಾರಂತೆ. ಇದನ್ನೂ ಓದಿ : ಬಾಲಿವುಡ್ ನಲ್ಲಿ ಕನ್ನಡದ ರಂಗಿತರಂಗ ಸಿನಿಮಾ ರಿಮೇಕ್

    ಅಧಿಕೃತವಾಗಿ ಪವನ್ ಕುಮಾರ್ ಈ ವಿಷಯವನ್ನು ಹೇಳದೇ ಇದ್ದರೂ, ಅವರ ಆಪ್ತರ ಖಚಿತ ಮಾಹಿತಿ ಪ್ರಕಾರ ಫಹಾದ್ ಫಾಸಿಲ್ ಜೊತೆ ಈಗಾಗಲೇ ಮಾತುಕತೆ ಮಾಡಿದ್ದಾರಂತೆ. ಅದೇ ಸಿನಿಮಾದ ಕೆಲಸಗಳಲ್ಲೇ ಪವನ್ ಕುಮಾರ್ ಸದ್ಯ ಬ್ಯುಸಿಯಾಗಿದ್ದಾರೆ. ಕೆಲವೇ ದಿನಗಳಲ್ಲೇ ಈ ಸಿನಿಮಾ ಸೆಟ್ಟೇರಲಿದೆಯಂತೆ. ಆದರೆ, ಫಾಸಿಲ್ ಗಾಗಿ ದ್ವಿತ್ವ ಕಥೆಯನ್ನೇ ಮಾಡುತ್ತಾರಾ ಅಥವಾ ಹೊಸ ಕಥೆಯನ್ನು ಬರೆದುಕೊಂಡಿದ್ದಾರಾ ಎನ್ನುವುದೇ ಸಸ್ಪೆನ್ಸ್.

    Live Tv
    [brid partner=56869869 player=32851 video=960834 autoplay=true]

  • ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ‘ಗಾಳಿಪಟ 2’ ತಂಡದಿಂದ ಹಾಡಿನ ಉಡುಗೊರೆ

    ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ‘ಗಾಳಿಪಟ 2’ ತಂಡದಿಂದ ಹಾಡಿನ ಉಡುಗೊರೆ

    ಜುಲೈ 2 ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ. ಇದರ ಸವಿನೆನಪಿಗಾಗಿ “ಗಾಳಿಪಟ ೨” ಚಿತ್ರತಂಡ ಹಾಡೊಂದನ್ನು ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬದ ಉಡುಗೊರೆ ನೀಡಿದೆ. ಜಯಂತ ಕಾಯ್ಕಿಣಿ ಅವರು ಬರೆದಿರುವ “ನಾನಾಡದ ಮಾತೆಲ್ಲವ ಕದ್ದಾಲಿಸು” ಎಂಬ ಹಾಡನ್ನು ಸೋನು ನಿಗಮ್ ಸುಶ್ರಾವ್ಯವಾಗಿ ಹಾಡಿದ್ದಾರೆ . “ಗಾಳಿಪಟ” ಮೊದಲ ಭಾಗದ “ಮಿಂಚಾಗಿ ನೀನು ಬರಲು” ಹಾಡು ಕೂಡ ಜಯಂತ ಕಾಯ್ಕಿಣಿ, ಸೋನು ನಿಗಮ್, ಗಣೇಶ್ ಹಾಗೂ ಯೋಗರಾಜ್ ಭಟ್ ಅವರ ಕಾಂಬಿನೇಶನ್ ನಲ್ಲಿ ಬಂದು ಭರ್ಜರಿ ಯಶಸ್ಸು ಕಂಡಿತ್ತು. ಈಗ “ಗಾಳಿಪಟ ೨” ಚಿತ್ರದ ಈ ಹಾಡು ಕೂಡ ಅದೇ‌ ರೀತಿ ಯಶಸ್ಸು ಕಾಣಲಿದೆ.

    ನಮ್ಮ ಚಿತ್ರದ ನಾಯಕ ಗಣೇಶ್ ಅವರ ಹುಟ್ಟುಹಬ್ಬದ ಸಂದರ್ಭ. ಈ ಸುಂದರ ಕ್ಷಣಕ್ಕೆ ನಮ್ಮ ಹಾಡಿನ ಉಡುಗೊರೆ. ಜುಲೈ 2 ಗಣೇಶ್  ಹುಟ್ಟುಹಬ್ಬ. ಅಂದು ಅವರು ಊರಿನಲ್ಲಿರದ ಕಾರಣ ಈಗ ಮಾಧ್ಯಮ ಮಿತ್ರರ ಮುಂದೆ ಈ ಹಾಡು ಬಿಡುಗಡೆ ಮಾಡಿದ್ದೇವೆ. ಜುಲೈ 2 ರಂದು ಆನಂದ್ ಆಡಿಯೋ ಮೂಲಕ ಈ ಹಾಡು ಎಲ್ಲರಿಗೂ ತಲುಪಲಿದೆ ಎಂದು ನಿರ್ದೇಶಕ ಯೋಗರಾಜ್ ಭಟ್ ತಿಳಿಸಿದರು ಹಾಗೂ ಹಾಡಿನ  ಪದಪದದ ಅರ್ಥ ವಿವರಿಸಿ, ಹಾಡು ಬರೆದಿರುವ  ಜಯಂತ ಕಾಯ್ಕಿಣಿ ಕಾಯ್ಕಿಣಿ, ಹಾಡಿರುವ ಸೋನು ನಿಗಂ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಧನ್ಯವಾದ ಹೇಳಿದರು. ಇದನ್ನೂ ಓದಿ:ಮದುವೆಯ ವದಂತಿಗೆ ಸ್ಪಷ್ಟನೆ ನೀಡಿದ ರಾಮ್ ಪೋತಿನೇನಿ

    ಮತ್ತೆ ಕೋವಿಡ್ ಹೆಚ್ಚುತ್ತಿರುವ ಕಾರಣ, ನಾನು ಈ ಬಾರಿ ನನ್ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿಲ್ಲ. ನಾನು ಅಂದು ಬೆಂಗಳೂರಿನಲ್ಲಿ ಇರುವುದಿಲ್ಲ. ಈ ಹಾಡನ್ನು ಕೇಳಿ ಮತ್ತೆ ಹದಿನೈದು ವರ್ಷಗಳ ಹಿಂದೆ ಹೋದೆ. ಅದೇ ಕಾಂಬಿನೇಷನ್ ನಲ್ಲಿ ಮತ್ತೆ ಇಂಪಾದ ಹಾಡು ಬಂದಿದೆ. ಅಷ್ಟೇ ಜನಪ್ರಿಯವಾಗಲಿದೆ ಎಂಬ ಭರವಸೆಯಿದೆ. ನನ್ನ ಹುಟ್ಟುಹಬ್ಬಕ್ಕೆ ಇದೊಂದು ವಿಶೇಷ ಉಡುಗೊರೆ. ನಿರ್ಮಾಪಕ ರಮೇಶ್ ರೆಡ್ಡಿ ಅವರು ಯಾವುದಕ್ಕೂ ಕೊರತೆ ಇಲ್ಲದೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಕುದುರೆಮುಖದಲ್ಲಿ ಸುಮಾರು 200 ಜನರ ತಂಡ ಇದ್ದೆವು. ಕಲಾ ನಿರ್ದೇಶಕ‌ ಪಂಡಿತ್ ಅವರಂತೂ ಅದ್ಭುತ ಸೆಟ್ ಹಾಕಿದ್ದರು. ಯೋಗರಾಜ್ ಸರ್ ಬಗ್ಗೆ ಎಷ್ಟು ಹೇಳಿದರು ಕಡಿಮೆ. ನೀರಿನಲ್ಲಿ ಐರನ್ ಬಾಕ್ಸ್ ಇಟ್ಟು ಹೊಗೆ ಬರೆಸಿದ್ದಾರೆ ಅವರು.  ಇದರ ಬಗ್ಗೆ ಕೇಳಿದಾಗ ಹುಡುಗ ಹೀಟ್ ಆಗಿರುತ್ತಾನೆ. ಇದು ಅದರ ಸಂಕೇತವೆಂದರು. ಧನು ಮಾಸ್ಟರ್ ಸುಂದರವಾಗಿ ನೃತ್ಯ ಸಂಯೋಜನೆ ಮಾಡಿದ್ದಾರೆ ಎಂದರು ನಾಯಕ ಗಣೇಶ್.

    ಹಾಡು ಚೆನ್ನಾಗಿದೆ. ಈ ಹಾಡಿಗೆ ಬಳಿಸಿದ ವಸ್ತುಗಳನ್ನು ನೆನಪಿಗಾಗಿ ನಮ್ಮ ಮನೆಯ ಬಳಿ ತರಿಸಿಟ್ಟುಕೊಂಡಿದ್ದೀನಿ. ಈ ಹಾಡನ್ನು ನನ್ನ ಮಗಳು ದಿನ ಕೇಳುತ್ತಿರುತ್ತಾಳೆ. ಬಿಡುಗಡೆ ಮುಂಚೆಯೇ ಈ ಹಾಡು ಗೆದ್ದಿದೆ ಎನ್ನಬಹುದು. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಿರ್ಮಾಪಕ ರಮೇಶ್ ರೆಡ್ಡಿ.

    Live Tv

  • ಸಂಚಿನ ಸುಳಿಯಲಿ ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ

    ಸಂಚಿನ ಸುಳಿಯಲಿ ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ

    ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ ಮತ್ತು ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಪವನ್ ಕುಮಾರ್ ಜೊತೆಯಾಗಿ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಈ ಚಿತ್ರಕ್ಕೆ ‘ಸಂಚಿನ ಸುಳಿಯಲಿ’ ಎಂದು ಹೆಸರಿಡಲಾಗಿದೆ. ಭಾನುವಾರದಂದು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಸ್ಟಾರ್ ನಿರ್ದೇಶಕ ನಂದಕಿಶೋರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಧರ್ಮಸ್ಥಳದ ರಿಯಲ್ ಎಸ್ಟೇಟ್ ಉದ್ಯಮಿ ಕೆ.ಎನ್.ನಾಗೇಗೌಡ್ರು ಮತ್ತು ಮೈಸೂರಿನ ಫ್ಯಾಶನ್ ಡಿಸೈನರ್ ಹಂಸರವಿಶಂಕರ್ ಜಂಟಿಯಾಗಿ ಮಾನ್ಯ ಕ್ರಿಯೇಶನ್ಸ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಅನಿಲ್‌ ಮೂಡಲಗಿ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ’ಅಚಲ’ ’ಯಾರವಳು’ ಹಾಗೂ ಬಿಡುಗಡೆಯಾಗಬೇಕಾದ ಎರಡು ಚಿತ್ರಗಳಿಗೆ ನಿರ್ದೇಶನ ಮಾಡಿರುವ ಚನ್ನರಾಯಪಟ್ಟಣದ ಪ್ರಮೋದ್.ಎಸ್.ಆರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

    2014ರಂದು ಮೈಸೂರಿನಲ್ಲಿ ನಡೆದ ಘಟನೆಯೊಂದು ದಿನಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಅದರ ಏಳೆಯನ್ನು ತೆಗೆದುಕೊಂಡು ನಿರ್ದೇಶಕರು ಕಥೆಯನ್ನು ಏಣೆದಿದ್ದಾರೆ. ಶೀರ್ಷಿಕೆ ಹೇಳುವಂತೆ ಪ್ರೀತಿಯಲ್ಲಿ ಮುಳುಗಿದ ಕಾಲೇಜು ಹುಡುಗರ ತಂಡವೊಂದು ನಿರ್ಜನ ಪ್ರದೇಶಕ್ಕೆ ತೆರೆಳುತ್ತಾರೆ. ಅಲ್ಲಿಗೆ ಹೋದಾಗ ಸಂಚಿನ ಸುಳಿಯಲ್ಲಿ ಸಿಲುಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹುಡುಗ ಹುಡುಗಿಯರ ಪರಿಸ್ಥಿತಿ ಏನಾಗುತ್ತದೆ. ಅಲ್ಲಿಂದ ತಪ್ಪಿಸಿಕೊಂಡು ಬರುತ್ತಾರಾ? ಅದನ್ನು ಭೇದಿಸುತ್ತಾರಾ? ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಇದನ್ನೂ ಓದಿ:ವಿಕ್ರಾಂತ್ ರೋಣ ಸಿನಿಮಾ ಆಗೋಕೆ ಇವರೇ ಸ್ಪೂರ್ತಿ: ಕಿಚ್ಚ ಹೀಗಂದಿದ್ದು ಯಾರ ಬಗ್ಗೆ?

    ’ಪುಟ್ಟಕ್ಕನ ಮಕ್ಕಳು’ ಧಾರವಾಹಿ ಖ್ಯಾತಿಯ ಪವನ್‌ಕುಮಾರ್ ನಾಯಕ. ’ಕಿನ್ನರಿ’ ಬಿಗ್ ಬಾಸ್ ಸ್ಪರ್ಧಿ ಭೂಮಿಶೆಟ್ಟಿ ನಾಯಕಿ. ಗೆಳಯನಾಗಿ ನವೀನ್, ಸ್ವಪ್ನಶೆಟ್ಟಿಗಾರ್ ಮತ್ತೋಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಶೋಭರಾಜ್, ಕಿಲ್ಲರ್‌ವೆಂಕಟೇಶ್ ಹಾಗೂ ಹೆಸರು ಮಾಡಿರುವ ಪೋಷಕ ಕಲಾವಿದರೊಂದಿಗೆ ಮಾತು ಕತೆ ನಡೆಯುತ್ತಿದೆ. ಖಚಿತವಾದ ನಂತರ ಮಾಹಿತಿ ನೀಡಲಾಗುವುದು. ಕಥೆಗ ಅನುಗುಣವಾಗಿ ಶೇಕಡ 90 ಚಿತ್ರೀಕರಣವನ್ನು ಕಾಡಿನ ಸ್ಥಳವಾದ ಉಡುಪಿ, ಉಳಿದುದನ್ನು ಬೆಂಗಳೂರು ಸುತ್ತಮುತ್ತ ಎರಡು ಹಂತದಲ್ಲಿ ನಡೆಸಲಾಗುವುದು. ಮೂರು ಹಾಡುಗಳಿಗೆ ಕೆವೀನ್.ಎಂ ಸಂಗೀತ, ವಿನೋದ್.ಆರ್ ಛಾಯಾಗ್ರಹಣ ಚಿತ್ರಕ್ಕಿದೆ.  ಅಂದುಕೊಂಡಂತೆ ಆದರೆ ಸಿನಿಮಾವನ್ನು ಡಿಸೆಂಬರ್‌ದಲ್ಲಿ ಬಿಡುಗಡೆ ಮಾಡಲು ತಂಡವು ಯೋಜನೆ ರೂಪಿಸಿಕೊಂಡಿದೆ.

    Live Tv

  • ಡಾಲಿ ಧನಂಜಯ್ ವರ್ಸಸ್ ಗೋಲ್ಡನ್ ಸ್ಟಾರ್ ಗಣೇಶ್

    ಡಾಲಿ ಧನಂಜಯ್ ವರ್ಸಸ್ ಗೋಲ್ಡನ್ ಸ್ಟಾರ್ ಗಣೇಶ್

    ಭಾರೀ ಬಜೆಟ್ ಮತ್ತು ಸ್ಟಾರ್ ನಟರ ಚಿತ್ರಗಳು ಒಂದೇ ದಿನಕ್ಕೆ ತೆರೆಗೆ ಬಂದಾಗ, ಅಲ್ಲೊಂದು ಗೊಂದಲ ಶುರುವಾಗುತ್ತದೆ. ಅದರಲ್ಲೂ ಎರಡೂ ಚಿತ್ರಗಳು ನಿರೀಕ್ಷೆ ಮೂಡಿಸಿದಾಗ ನೋಡುಗರಿಗೆ ಇನ್ನೂ ತಿಕ್ಕಾಟವಾಗುತ್ತದೆ. ಇಂಥದ್ದೊಂದು ಗೊಂದಲಕ್ಕೆ ಕಾರಣರಾಗಿದ್ದಾರೆ ಡಾಲಿ ಧನಂಜಯ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?

    ನಿನ್ನೆಯಷ್ಟೇ ಡಾಲಿ ಧನಂಜಯ್ ನಟನೆಯ ‘ಮನ್ಸೂನ್ ರಾಗ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿತ್ತು. ಆಗಸ್ಟ್ 12 ರಂದು ಥಿಯೇಟರ್ ಗೆ ಬರುವುದಾಗಿ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿತ್ತು. ಇದೀಗ ಗಣೇಶ್ ನಟನೆಯ ‘ಗಾಳಿಪಟ 2’ ಸಿನಿಮಾ ಟೀಮ್ ಕೂಡ ಅದೇ ದಿನದಂದು  ತಮ್ಮ ಚಿತ್ರವನ್ನು ರಿಲೀಸ್ ಮಾಡುವುದಾಗಿ ಘೋಷಿಸಿದೆ. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

    ಗಾಳಿಪಟ 2 ಸಿನಿಮಾವನ್ನು ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದು, ಗಣೇಶ್, ದಿಗಂತ್ ಮತ್ತು ಲೂಸಿಯಾ ಪವನ್ ಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಹಿರಿಯ ನಟ ಅನಂತ್ ನಾಗ್ ಕೂಡ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ರಮೇಶ್ ರೆಡ್ಡಿ ಅವರ ಅದ್ದೂರಿ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿದೆ. ಹೀಗಾಗಿ ಈ ಚಿತ್ರದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇದನ್ನೂ ಓದಿ : ಹೆಸರಾಂತ ಹಾಸ್ಯ ಕಲಾವಿದ ಮೋಹನ್ ಜೂನೇಜ ಇನ್ನಿಲ್ಲ

    ಡಾಲಿ ಧನಂಜಯ್ ಈಗಾಗಲೇ ಗೆಲುವಿನ ಕುದುರೆ ಏರಿ ಕೂತಿದ್ದಾರೆ. ಬಡವ ರಾಸ್ಕಲ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಕೂಡ ಮಾಡಿದೆ. ಡಾಲಿ ಮತ್ತು ರಚಿತಾ ರಾಮ್ ಕಾಂಬಿನೇಷನ್ ನ ‘ಮನ್ಸೂನ್ ರಾಗ’ ಚಿತ್ರದ ಟ್ರೇಲರ್ ಕೂಡ ಈಗಾಗಲೇ ಸದ್ದು ಮಾಡಿದೆ. ಒಳ್ಳೆಯ ಮೇಕಿಂಗ್ ಇರುವಂತಹ ಸಿನಿಮಾ ಎಂದು ಪ್ರೇಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಈ ಸಿನಿಮಾ ಕೂಡ ನಿರೀಕ್ಷೆ ಮೂಡಿಸಿದೆ.

    ಎರಡು ಚಿತ್ರಗಳು ಹೀಗೆ ಒಟ್ಟೊಟ್ಟಿಗೆ ಬಂದಾಗ, ಯಾವ ಸಿನಿಮಾ ನೋಡಬೇಕು, ಯಾವುದನ್ನು ಬಿಡಬೇಕು ಎನ್ನುವ ಪ್ರಶ್ನೆ ಮೂಡುವುದು ಸಹಜ. ಅಲ್ಲದೇ, ಈ ಸಂದರ್ಭದಲ್ಲಿ ಬೇರೆ ನಟರ ಅಥವಾ ಭಾಷೆಯ ಸಿನಿಮಾಗಳು ಬಂದಾಗ ಥಿಯೇಟರ್ ಕೊರತೆಯೂ ಎದುರಾಗಬಹುದು. ಇಂತಹ ಸಮಸ್ಯೆಗಳಿಂದ ದಾಟಿಕೊಳ್ಳುವಂತಹ ವ್ಯವಸ್ಥೆಯು ತುರ್ತಾಗಿ ಸಿನಿಮಾ ರಂಗದಲ್ಲಿ ಆಗಬೇಕಿದೆ. ಎರಡೂ ಚಿತ್ರಗಳಿಗೂ ನಿರೀಕ್ಷೆ ಇರುವುದರಿಂದ ಪ್ರೇಕ್ಷಕ ಯಾರ ಕೈ ಹಿಡಿಯುತ್ತಾನೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.

  • ದ್ವಿತ್ವ ಲುಕ್‍ನಲ್ಲಿ ಪವರ್ ಸ್ಟಾರ್ – ಫಸ್ಟ್ ಲುಕ್‍ನಲ್ಲಿ ಸಂಚಲನ ಸೃಷ್ಟಿಸಿದ ಪವನ್ ಕುಮಾರ್

    ದ್ವಿತ್ವ ಲುಕ್‍ನಲ್ಲಿ ಪವರ್ ಸ್ಟಾರ್ – ಫಸ್ಟ್ ಲುಕ್‍ನಲ್ಲಿ ಸಂಚಲನ ಸೃಷ್ಟಿಸಿದ ಪವನ್ ಕುಮಾರ್

    ಬೆಂಗಳೂರು: ಸ್ಯಾಂಡಲ್‍ವುಡ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮುಂದಿನ ಚಿತ್ರದ ಟೈಟಲ್ ಘೋಷಣೆಯಾಗಿದೆ. ಟೈಟಲ್ ಜೊತೆ ಚಿತ್ರತಂಡ ಫಸ್ಟ್ ಲುಕ್ ಅನಾವರಣಗೊಳಿಸಿದೆ. ವಿಶೇಷ ಶೀರ್ಷಿಕೆಯಿಂದಲೇ ಗಾಂಧಿನಗರದಲ್ಲಿ ದ್ವಿತ್ವ ಹೆಚ್ಚು ಸದ್ದು ಮಾಡ್ತಿದೆ. ಚಿತ್ರದ ಫಸ್ಟ್ ಲುಕ್ ಹೊರ ಬೀಳುತ್ತಿದ್ದಂತೆ ಟೈಟಲ್ ಬಗೆಗಿನ ಕುತೂಹಲ ಹೆಚ್ಚಾಗಿದೆ.

    ದ್ವಿತ್ವ ಅಂದ್ರೆ ಎರಡು ಎಂದರ್ಥ. ದ್ವಿ ಪಾತ್ರದಲ್ಲಿ ಅಂದ್ರೆ ಲೂಸಿಯಾ ರೀತಿಯ ಕಥೆಯನ್ನ ಹೆಣೆಯಲಾಗಿದೆ ಎಂಬ ಚರ್ಚೆಗಳು ಚಂದನವನದಲ್ಲಿ ಆರಂಭಗೊಂಡಿವೆ. ಚಿತ್ರದ ಡ್ಯೂಯಲ್ ಪರ್ಸನಾಲಿಟಿಯ ಸುಳಿವು ನೀಡುತ್ತಿರುವ ಫಸ್ಟ್ ಲುಕ್ ಈ ಚರ್ಚೆಗಳಿಗೆ ಕಾರಣ. ಸೈಕಲಾಜಿಕಲ್ ಥ್ರಿಲ್ ಕಥೆಯನ್ನು ದ್ವಿತ್ವ ಹೊಂದಿದೆ. ಈ ಹಿಂದೆ ಲೂಸಿಯಾ ಮತ್ತು ಯೂಟರ್ನ್ ಎಂಬ ಅದ್ಭುತ್ ಚಿತ್ರಗಳನ್ನ ನೀಡಿದ ಪವನ್ ಕುಮಾರ್ ನಿರ್ದೇಶನದಲ್ಲಿಯೇ ದ್ವಿತ್ವ ಮೂಡಿ ಬರಲಿದೆ.

    ಹೊಂಬಾಳೆ ಫಿಲ್ಮ್ಸ್ ಚಿತ್ರ ನಿರ್ಮಾಣ ಮಾಡುತ್ತಿದೆ. ಛಾಯಾಗ್ರಹಣ ಪ್ರೀತಾ ಜಯರಾಮನ್ ಮತ್ತು ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ಚಿತ್ರಕ್ಕಿರಲಿದೆ. ಇದೇ ಸೆಪ್ಟೆಂಬರ್ ನಲ್ಲಿ ದ್ವಿತ್ವ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.

  • ಮದುವೆ ಕಾರ್ಡ್ ಮೇಲೆ ಲಾಲು ಪ್ರಸಾದ್ ಫೋಟೋ ಹಾಕಿಸಿದ ಅಭಿಮಾನಿ

    ಮದುವೆ ಕಾರ್ಡ್ ಮೇಲೆ ಲಾಲು ಪ್ರಸಾದ್ ಫೋಟೋ ಹಾಕಿಸಿದ ಅಭಿಮಾನಿ

    ಪಾಟ್ನಾ: ಬಿಹಾರದ ವೈಶಾಕಿ ಜಿಲ್ಲೆಯ ವರನೋರ್ವ ತನ್ನ ಮದುವೆಯ ಕಾರ್ಡ್ ಮೇಲೆ ಲಾಲು ಪ್ರಸಾದ್ ಯಾದವ್ ಫೋಟೋವನ್ನು ಮುದ್ರಿಸುವ ಮೂಲಕ ಆರ್‌ಜೆಡಿ ಮುಖ್ಯಸ್ಥನ ಮೇಲಿರುವ ಪ್ರೀತಿ ಹಾಗೂ ನಿಷ್ಠೆಯನ್ನು ತೋರಿಸಿದ್ದಾರೆ. ಅಲ್ಲದೆ ಆರ್‌ಜೆಡಿಯು ಪಕ್ಷದ ಚಿಹ್ನೆ ಜೊತೆಗೆ ಲಾಲು ಯಾದವ್‍ನನ್ನು ಬಿಡುಗಡೆಗೊಳಿಸುವಂತೆ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ.

    ಹೌದು, ವೈಶಾಲಿಯ ರಾಹುವಾ ಗ್ರಾಮದ ನಿವಾಸಿಯಾಗಿರುವ ಪವನ್ ಕುಮಾರ್ ಏಪ್ರಿಲ್ 23ರಂದು ವಿವಾಹವಾಗಲಿದ್ದಾರೆ. ಹಾಗಾಗಿ ತಮ್ಮ ಮದುವೆ ಆಹ್ವಾನ ಪತ್ರಿಕೆಯನ್ನು ಆರ್‌ಜೆಡಿ  ಮುಖ್ಯಸ್ಥ ಲಾಲು ಪ್ರಸಾದ್ ಅವರ ಪುತ್ರ ಲಾಲು ಪ್ರಸಾದ್ ತೇಜಸ್ವಿ ಯಾದವ್, ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಮಾಜಿ ಆರೋಗ್ಯ ಸಚಿವ ತೇಜ್ ಮಗ ಪವನ್, ಪ್ರತಾಪ್ ಯಾದವ್ ರಾಜ್ಯ ಅಧ್ಯಕ್ಷ ಜಗದಾನಂದ್ ಸಿಂಗ್ ಸೇರಿದಂತೆ ಆರ್‍ಜೆಡಿ ಪ್ರಮುಖ ನಾಯಕರಿಗೆ ಆಹ್ವಾನ ಪತ್ರಿಕೆಯನ್ನು ಕಳುಹಿಸಿಕೊಟ್ಟಿದ್ದಾರೆ.

    ಲಾಲು ಪ್ರಸಾದ್ ಬಡಕುಟುಂಬದಿಂದ ಬಂದಿದ್ದಾರೆ. ನನಗೆ ಉನ್ನತ ಅಧಿಕಾರಿಗಳೊಂದಿಗೆ ಯಾವುದೇ ಸಂಬಂಧವಿಲ್ಲ. ಹೀಗಾಗಿ ಅವರನ್ನು ಬಿಡುಗಡೆಗೊಳಿಸುವ ಉದ್ದೇಶದಿಂದ ಈ ಮಾರ್ಗವನ್ನು ಆರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಲಾಲು ಪ್ರಸಾದ್ ಖಂಡಿತವಾಗಿ ಶೀಘ್ರವೇ ಬಿಡುಗಡೆಯಾಗುತ್ತಾರೆ ಮತ್ತು ಆರೋಗ್ಯವಾಗಿರುತ್ತಾರೆ ಎಂದು ಭರವಸೆ ಹೊಂದಿದ್ದಾರೆ. ಜೊತೆಗೆ ತಮ್ಮ ಮದುವೆಗೆ ಲಾಲು ಪ್ರಸಾದ್ ಹಾಗೂ ಅವರ ಇಡೀ ಕುಟುಂಬ ಆಗಮಿಸಿ ಆಶೀರ್ವದಿಸುತ್ತಾರೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

  • ಯುಗಾದಿ ಹಬ್ಬಕ್ಕೆ ಅಭಿಮಾನಿಗಳಿಗೆ ಅಪ್ಪು ಭರ್ಜರಿ ಸಿಹಿ ಸುದ್ದಿ

    ಯುಗಾದಿ ಹಬ್ಬಕ್ಕೆ ಅಭಿಮಾನಿಗಳಿಗೆ ಅಪ್ಪು ಭರ್ಜರಿ ಸಿಹಿ ಸುದ್ದಿ

    – ಹೊಂಬಾಳೆ ಫಿಲಂಸ್ ಬ್ಯಾನರಿ ಅಡಿ ಮತ್ತೊಂದು ಸಿನಿಮಾ

    ಬೆಂಗಳೂರು: ಯುಗಾದಿ ಹಬ್ಬದಂದು ನಟ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಯುವರತ್ನ ಸಿನಿಮಾ ಬಳಿಕ ಮತ್ತೆ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿ ಪುನೀತ್ ರಾಜ್‍ಕುಮಾರ್ ಅಭಿನಯಿಸುತ್ತಿದ್ದಾರೆ.

    ಈ ಕುರಿತು ಹೊಂಬಾಳೆ ಫಿಲಂಸ್‍ನ ವಿಜಯ್ ಕಿರಗಂದೂರ್ ಟ್ವೀಟ್ ಮಾಡಿ ಖಚಿತಪಡಿಸಿದ್ದು, ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿ ಪುನೀತ್ ರಾಜ್‍ಕುಮಾರ್ ಅವರಿಗೆ ಮತ್ತೊಂದು ಸಿನಿಮಾ ನಿರ್ಮಿಸುತ್ತಿರುವುದಾಗಿ ಘೋಷಿಸಿದ್ದಾರೆ. ಅಪ್ಪು ಸಹ ಇದನ್ನು ರೀ ಟ್ವೀಟ್ ಮಾಡಿದ್ದಾರೆ.

    ಇನ್ನೂ ವಿಶೇಷ ಎಂಬಂತೆ ಈ ಸಿನಿಮಾಗೆ ಯು ಟರ್ನ್ ಖ್ಯಾತಿಯ ಪವನ್ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಯಾವ ರೀತಿಯ ಸಿನಿಮಾ ಇರಬಹುದು, ಥ್ರಿಲ್ಲರ್ ಮೂವಿನಾ ಎಂದು ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ. ಆದರೆ ಚಿತ್ರದ ಬಗ್ಗೆ ಮುಂದಿನ ದಿನಗಳಲ್ಲಿ ಅಪ್‍ಡೇಟ್ ಸಿಗಲಿದೆ. ನಿರ್ದೇಶಕ ಪವನ್ ಕುಮಾರ್ ಅವರು ಯು ಟರ್ನ್ ಹಾಗೂ ಲೂಸಿಯಾ ಸಿನಿಮಾಗಳ ಮೂಲಕ ಪರಿಚಿತರಾಗಿದ್ದಾರೆ, ಹೀಗಾಗಿ ನಿರೀಕ್ಷೆ ಹೆಚ್ಚಿದೆ.

    ಇನ್ನೂ ಸಂತಸ ಸಂಗತಿ ಎಂದರೆ ಜುಲೈ ತಿಂಗಳಲ್ಲಿ ಪ್ರಿನ್ಸಿಪಲ್ ಫೋಟೋಗ್ರಫಿ ಆರಂಭವಾಗಲಿದೆ ಎಂದು ವಿಜಯ್ ಕಿರಗಂದೂರ್ ತಮ್ಮ ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಫೋಟೋ ಶೂಟ್ ಬಳಿಕ ಯಾವ ರೀತಿಯ ಸಿನಿಮಾ ಎಂಬ ಬಗ್ಗೆ ಸುಳಿವು ಸಿಗಲಿದೆಯೇ ಕಾದು ನೋಡಬೇಕಿದೆ. ಯುವರತ್ನ ಸಕ್ಸಸ್ ಬಳಿಕ ಜೇಮ್ಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಪುನೀತ್ ರಾಜ್‍ಕುಮಾರ್, ಇದೀಗ ಮತ್ತೊಂದು ಸಿನಿಮಾ ಒಪ್ಪಿಕೊಳ್ಳುವ ಮೂಲಕ ಮತ್ತೆ ಬ್ಯುಸಿಯಾಗುತ್ತಿದ್ದಾರೆ.