Tag: pavitra jayaram

  • ನಟಿ ಪವಿತ್ರಾ ಜಯರಾಮ್ ಸಾವಿನ ಬಳಿಕ ಸ್ನೇಹಿತ ಚಂದು ಆತ್ಮಹತ್ಯೆ

    ನಟಿ ಪವಿತ್ರಾ ಜಯರಾಮ್ ಸಾವಿನ ಬಳಿಕ ಸ್ನೇಹಿತ ಚಂದು ಆತ್ಮಹತ್ಯೆ

    ಧಾರಾವಾಹಿ ನಟಿ ಪವಿತ್ರಾ ಜಯರಾಮ್ (Pavitra Jayaram) ಅಪಘಾತ ಪ್ರಕರಣದಲ್ಲಿ ತಿರುವು ಸಿಕ್ಕಿದೆ. ಪವಿತ್ರಾ ಗೆಳೆಯ, ಸೀರಿಯಲ್‌ ನಟ ಚಂದು (Chandu) ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಮಣಿಕೊಂಡದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಇವತ್ತು ಪವಿತ್ರಾ ಹುಟ್ಟುಹಬ್ಬ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪವಿತ್ರಾ ಸಾವಿನ ನಂತರ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಚಂದು, ಮಿದುಳಿನ ಕಾಯಿಲೆ ಇದ್ದು ಸಾಯುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು.

    ಐದು ದಿನಗಳ ಹಿಂದಷ್ಟೇ ಮೆಹಬೂಬ್‌ನಗರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪವಿತ್ರಾ ಸಾವನ್ನಪ್ಪಿದ್ದರು. ಬೆಂಗಳೂರಿನಿಂದ ಹೈದರಾಬಾದ್‌ಗೆ ಬರುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಪವಿತ್ರಾ ಸಾವಿಗೀಡಾಗಿದ್ದರು. ಅದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಂದು ಅವರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

    ಚಂದು ತ್ರಿನಯನಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಚಂದುಗೆ ಶಿಲ್ಪಾ ಎಂಬವರ ಜೊತೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕಿರುತೆರೆ ನಟಿ ಪವಿತ್ರಾ ಜಯರಾಮ್ ಹಾಗೂ ಜಂದು ಸ್ನೇಹಿತರಾಗಿದ್ದರು ಎನ್ನಲಾಗಿದೆ.

    ರಾಧಮ್ಮ ಪೆಳ್ಳಿ ಮತ್ತು ಕಾರ್ತಿಕ ದೀಪಂ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಆತ್ಮಹತ್ಯೆಗೆ ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ನಾವು ಮನೆಗಿಂತ ಜಾಸ್ತಿ ಸೆಟ್‌ನಲ್ಲಿ ಇದ್ವಿ- ಚಂದು ಗೌಡ

    ನಾವು ಮನೆಗಿಂತ ಜಾಸ್ತಿ ಸೆಟ್‌ನಲ್ಲಿ ಇದ್ವಿ- ಚಂದು ಗೌಡ

    ‘ರಾಧಾ ರಮಣ’ (Radha Ramana) ಸೀರಿಯಲ್ ನಟಿ ಪವಿತ್ರಾ ಜಯರಾಂ (Pavitra Jayaram) ಕಾರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ನಟ ಚಂದು ಗೌಡ (Chandu Gowda) ಅವರು ಮಂಡ್ಯದ ಉಮ್ಮಡಹಳ್ಳಿಗೆ ಆಗಮಿಸಿ ಸಹನಟಿ ಪವಿತ್ರಾ ಅಂತಿಮ ದರ್ಶನ ಪಡೆದರು. ಈ ವೇಳೆ, ಪವಿತ್ರಾ ಜೊತೆಗಿನ ಒಡನಾಟದ ಬಗ್ಗೆ ಚಂದು ಗೌಡ ಮಾತನಾಡಿದ್ದರು.

    ಪವಿತ್ರಾ ಸಾವಿನ ಸುದ್ದಿ ನಿಜಕ್ಕೂ ನೋವು ಕೊಟ್ಟಿದೆ. ‘ತ್ರಿನಯನಿ’ (Trinayani) ಸೀರಿಯಲ್‌ನಲ್ಲಿ 5 ವರ್ಷಗಳ ಕಾಲ ನಾವು ಒಟ್ಟಿಗೆ ಕೆಲಸ ಮಾಡಿದ್ವಿ. ಮನೆಗಿಂತ ನಾವು ಜಾಸ್ತಿ ಸೆಟ್‌ನಲ್ಲಿ ಜೀವನ ಮಾಡಿದ್ವಿ. ತಿಂಗಳಲ್ಲಿ 15 ದಿನ ನಾವು ಹೈದರಾಬಾದ್‌ನಲ್ಲಿ ಕೆಲಸ ಮಾಡಿದ್ದೇವೆ. ಪವಿತ್ರಾ ಜೊತೆ ಉತ್ತಮ ಒಡನಾಟ ಇತ್ತು. ಅವರು ಬೇರೆ ಅಲ್ಲ, ನಮ್ಮ ಮನೆಯವರು ಬೇರೆ ಅಲ್ಲ. ಇಷ್ಟು ಹತ್ತಿರದವರು ತೀರಿಕೊಂಡಾಗ ಅದು ಬೇರೇ ತರಹನೇ ನೋವಾಗುತ್ತದೆ. ಅವರ ಆತ್ಮಕ್ಕೆ ಶಾಂತಿ ಕೊಡಲಿ ಅಂತ ದೇವರಲ್ಲಿ ಕೇಳಿ ಕೇಳುತ್ತೇನೆ ಎಂದು ಕಿರುತೆರೆ ನಟ ಚಂದು ಗೌಡ ಭಾವುಕರಾಗಿದ್ದಾರೆ.

    ದೇವರು ಇಷ್ಟು ಚಿಕ್ಕ ವಯಸ್ಸಿಗೆ ಅವರನ್ನು ಕರೆದುಕೊಂಡು ಬಿಟ್ಟರು. ಅವರ ಸಾವು ನಾವು ನಿರೀಕ್ಷೆ ಮಾಡಿರಲಿಲ್ಲ. ಸಾಕಷ್ಟು ಸಮಯದಿಂದ ಒಟ್ಟಿಗೆ ಕೆಲಸ ಮಾಡಿದ್ದೇವೆ. ಈಗ ಅವರು ಇಲ್ಲ ಅಂದರೆ ಬೇಸರವಾಗುತ್ತೆ. ಆಕ್ಸಿಡೆಂಟ್ ಆದಾಗ ಅಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಬರಲಿಲ್ಲ. ಈಗ ಅವರೇ ಇಲ್ಲ ಅಂದಾಗ ಯಾರನ್ನು ದೂರಿ ಏನು ಉಪಯೋಗ ಎಂದು ಪವಿತ್ರಾ ಅಂತಿಮ ದರ್ಶನ ಪಡೆದ ವೇಳೆ ಚಂದು ಗೌಡ ಮಾತನಾಡಿದ್ದಾರೆ. ಇದನ್ನೂ ಓದಿ:ಒಕ್ಕಲಿಗ ಸಂಪ್ರದಾಯದಂತೆ ನೆರವೇರಿದ ಪವಿತ್ರಾ ಜಯರಾಂ ಅಂತ್ಯಕ್ರಿಯೆ

    ಇತ್ತೀಚೆಗೆ ಮದರ್ಸ್‌ ಡೇಗೆ ಎಂದು ಕಾರ್ಯಕ್ರಮ ಮಾಡಿದ್ವಿ. ಎಷ್ಟು ಚೆನ್ನಾಗಿ ಕುಣಿದಿದ್ವಿ. ಆಕ್ಟ್ ಮಾಡಿದ್ವಿ ಎಂದು ಪವಿತ್ರಾ ಜೊತೆಗಿನ ಒಡನಾಟವನ್ನು ಚಂದು ಗೌಡ ವಿವರಿಸಿದ್ದರು.

    ಪವಿತ್ರಾ ಅವರು ಬೆಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದ ಕಾರು ನಿನ್ನೆ (ಮೇ 12) ಆಂಧ್ರ ಪ್ರದೇಶದ ಕರ್ನೂಲಿನ ಬಳಿ ಅಪಘಾತಕ್ಕೆ ಈಡಾಗಿತ್ತು. ಇಂದು (ಮೇ 13) ಹುಟ್ಟುರಾದ ಉಮ್ಮಡಹಳ್ಳಿಯಲ್ಲಿ ಪವಿತ್ರಾ ಅಂತ್ಯಕ್ರಿಯೆ ನೆರವೇರಿದೆ.

  • ಒಕ್ಕಲಿಗ ಸಂಪ್ರದಾಯದಂತೆ ನೆರವೇರಿದ ಪವಿತ್ರಾ ಜಯರಾಂ ಅಂತ್ಯಕ್ರಿಯೆ

    ಒಕ್ಕಲಿಗ ಸಂಪ್ರದಾಯದಂತೆ ನೆರವೇರಿದ ಪವಿತ್ರಾ ಜಯರಾಂ ಅಂತ್ಯಕ್ರಿಯೆ

    ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಕಿರುತೆರೆ ನಟಿ ಪವಿತ್ರಾ ಜಯರಾಂ (Pavitra Jayaram) ಅಂತ್ಯಕ್ರಿಯೆ ಹುಟ್ಟುರಾದ ಮಂಡ್ಯದ ಉಮ್ಮಡಹಳ್ಳಿಯಲ್ಲಿ ಜರುಗಿದೆ. ಒಕ್ಕಲಿಗ ಸಂಪ್ರದಾಯದಂತೆ ಪವಿತ್ರಾ ಕಾರ್ಯ ನೆರವೇರಿದೆ. ಇದನ್ನೂ ಓದಿ:ಸೀರಿಯಲ್‌ ಚಿತ್ರೀಕರಣದ ವೇಳೆ ಮಾಡಿದ ತಪ್ಪು – ʻಸೀತಾರಾಮʼ ನಟಿ ವೈಷ್ಣವಿ ಗೌಡಗೆ ಟ್ರಾಫಿಕ್‌ ಫೈನ್‌!

    ಪವಿತ್ರಾರ ಅಂತ್ಯಕ್ರಿಯೆ ವೇಳೆ ಸಹನಟ ಚಂದ್ರಶೇಖರ್, ‘ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಚಂದು ಗೌಡ ಕೂಡ ಭಾಗಿಯಾಗುವ ಮೂಲಕ ಅಂತಿಮ ದರ್ಶನ ಪಡೆದರು.

    ಪವಿತ್ರಾ ಅವರು ಬೆಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದ ಕಾರು ನಿನ್ನೆ (ಮೇ 12) ಆಂಧ್ರ ಪ್ರದೇಶದ ಕರ್ನೂಲಿನ ಬಳಿ ಅಪಘಾತಕ್ಕೆ ಈಡಾಗಿತ್ತು. ಇದೀಗ ನಟಿಯ ಸಾವು ಕುಟುಂಬಕ್ಕೆ, ಆಪ್ತರಿಗೆ ಶಾಕ್‌ ಕೊಟ್ಟಿದೆ.

  • ಸೋಮವಾರ ಮಂಡ್ಯದಲ್ಲಿ ಪವಿತ್ರಾ ಜಯರಾಂ ಅಂತ್ಯಕ್ರಿಯೆ

    ಸೋಮವಾರ ಮಂಡ್ಯದಲ್ಲಿ ಪವಿತ್ರಾ ಜಯರಾಂ ಅಂತ್ಯಕ್ರಿಯೆ

    ‘ರಾಧಾ ರಮಣ’ ನಟಿ ಪವಿತ್ರಾ ಜಯರಾಂ (Pavitra Jayaram) ಕಾರು ಅಪಘಾತದಲ್ಲಿ ಇಂದು (ಮೇ 12) ಕೊನೆಯುಸಿರೆಳೆದಿದ್ದಾರೆ. ಮೇ 13ರಂದು ಪವಿತ್ರಾ ಮೃತದೇಹ ಆಂಧ್ರ ಪ್ರದೇಶದ ಕರ್ನೂಲಿನಿಂದ ಮಂಡ್ಯ ತಾಲೂಕಿನ ಹನಕೆರೆ ಗ್ರಾಮಕ್ಕೆ ತಲುಪಲಿದ್ದು, ಅವರ ಸ್ವಗೃಹದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

    ನಟಿ ಪವಿತ್ರಾ ಅವರು ಪ್ರಯಾಣಿಸುತ್ತಿದ್ದ ಕಾರು ಇಂದು (ಮೇ 12) ಬೆಳಿಗ್ಗೆ ಆಂಧ್ರ ಪ್ರದೇಶದ ಕರ್ನೂಲಿನ ಬಳಿ ಅಪಘಾತಕ್ಕೆ ಈಡಾಗಿದೆ. ಭೀಕರ ಅಪಘಾತದಲ್ಲಿ ನಟಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಗಬೇಕಿದೆ. ಇದನ್ನೂ ಓದಿ:ತಾಯಂದಿರ ದಿನ ಆಚರಿಸಿದ ಸ್ಯಾಂಡಲ್‌ವುಡ್ ಸ್ಟಾರ್ಸ್

    ಮೂಲತಃ ಮಂಡ್ಯದವರಾದ ಪವಿತ್ರಾ ಅವರು ರೋಬೋ ಫ್ಯಾಮಿಲಿ, ನೀಲಿ, ರಾಧಾ ರಮಣ, ಜೋಕಾಲಿ ಸೀರಿಯಲ್‌ನಲ್ಲಿ ಪವಿತ್ರಾ ನಟಿಸಿದ್ದರು. ತೆಲುಗಿನ ‘ತ್ರಿನಯನಿ’ ಸೀರಿಯಲ್‌ನಲ್ಲಿ ವಿಲನ್ ಆಗಿ ಪವಿತ್ರಾ ಪ್ರೇಕ್ಷಕರ ಗಮನ ಸೆಳೆದಿದ್ದರು.