Tag: Pavitra Gowda

  • ಈ ವಾರ ನಿರ್ಣಾಯಕ – ದರ್ಶನ್‌ ಸರ್ಜರಿ ಬಗ್ಗೆ ವೈದ್ಯರಿಂದ ಸ್ಫೋಟಕ ಮಾಹಿತಿ

    ಈ ವಾರ ನಿರ್ಣಾಯಕ – ದರ್ಶನ್‌ ಸರ್ಜರಿ ಬಗ್ಗೆ ವೈದ್ಯರಿಂದ ಸ್ಫೋಟಕ ಮಾಹಿತಿ

    – ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾದ ನಟ

    ಮೈಸೂರು: ಬೆನ್ನು ನೋವಿನಿಂದ ಬಳಲುತ್ತಿರುವ ಕೊಲೆ ಆರೋಪಿ ನಟ ದರ್ಶನ್ (Darshan) ಬುಧವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ (Treatment) ಒಳಗಾದರು.

    20 ದಿನಗಳ ಹಿಂದೆ ಬೆನ್ನು ನೋವಿಗೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ನಟ ದರ್ಶನ್, ಶಸ್ತ್ರಚಿಕಿತ್ಸೆಗೂ (Surgery) ಒಪ್ಪಿದ್ದರು. ಹೀಗಾಗಿ ಕೆಲವು ಮೆಡಿಸಿನ್ ನೀಡಿ ಫಿಸಿಯೋಥೆರಪಿಗೆ ಡಾ. ಅಜಯ್ ಹೆಗ್ಡೆ ಸೂಚಿಸಿದ್ದರು. ಆ ಅವಧಿ ಮುಗಿದ ಕಾರಣ ಇಂದು ನಟ ದರ್ಶನ್ ಆಸ್ಪತ್ರೆಗೆ ಬಂದು ತಪಾಸಣೆಗೆ ಒಳಗಾದರು. ಇದನ್ನೂ ಓದಿ: ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲೇ ಗರಿಷ್ಠ ರನ್‌ ದಾಖಲೆ – ಐರ್ಲೆಂಡ್‌ ವಿರುದ್ಧ ಸರಣಿ ಗೆದ್ದ ಸಿಂಹಿಣಿಯರು

    ನಟ ದರ್ಶನ್‌ಗೆ ಇವತ್ತು ಶಸ್ತ್ರಚಿಕಿತ್ಸೆ ಮಾಡಲಿಲ್ಲ. ಶಸ್ತ್ರಚಿಕಿತ್ಸೆಗೂ ಮುನ್ನ ನರ್ವ್ ರೂಟ್ ಬ್ಲಾಕ್‌ಗೆ ಎಪಿಡ್ಯೂರಲ್ ಇಂಜೆಕ್ಷನ್ (Epidural Injection) ಅನ್ನು ವೈದ್ಯರು ನೀಡಿದರು. ಈ ಇಂಜೆಕ್ಷನ್ ಹಿನ್ನೆಲೆಯಲ್ಲಿ ಒಂದು ವಾರ ನಿಗಾ ಇಡಲಾಗುತ್ತದೆ. 1 ವಾರದಲ್ಲಿ ಬ್ಲಾಕ್ ಕ್ಲಿಯರ್ ಆಗದಿದ್ದರೆ ಅಪರೇಷನ್‌ಗೆ ವೈದ್ಯರು ಸಿದ್ಧತೆ ನಡೆಸಲಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮದುವೆಗೆ 4 ದಿನ ಬಾಕಿಯಿರುವಾಗಲೇ ಪೊಲೀಸರ ಮುಂದೆ ಮಗಳನ್ನ ಗುಂಡಿಕ್ಕಿ ಕೊಂದ ತಂದೆ

    ದರ್ಶನ್ ಬೆನ್ನು ನೋವಲ್ಲಿ ಸ್ವಲ್ಪ ಗುಣಮುಖ
    ಫಿಸಿಯೋಥೆರಪಿಯಲ್ಲಿ ದರ್ಶನ್‌ಗೆ ಬೆನ್ನು ನೋವು ಸ್ವಲ್ಪ ಗುಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 20 ದಿನಗಳ ಹಿಂದೆ ಇದ್ದ ನೋವಿಗೂ ಇಂದಿಗೂ ಬಹಳ ವ್ಯತ್ಯಾಸ ಕಂಡುಬಂದಿದೆ. 20% ನಷ್ಟು ಚೇತರಿಕೆ ಆಗಿದೆ. ವೈದ್ಯರು ಹೇಳಿದ ಈ ಮಾತು ಕೇಳಿ ನಟ ದರ್ಶನ್ ಖುಷಿ ಆಗಿದ್ದಾರೆ. ಆದ್ದರಿಂದ ಫಿಸಿಯೋಥೆರಪಿ ಮುಂದುವರೆಸುವಂತೆ ವೈದ್ಯರು ನಟ ದರ್ಶನ್‌ಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಸಚಿವ ಕೃಷ್ಣ ಬೈರೇಗೌಡರ ವಿರುದ್ಧ ಭ್ರಷ್ಟಾಚಾರ ಆರೋಪ – ರಾಜ್ಯಪಾಲರಿಗೆ ದೂರು

    ಎಪಿಡ್ಯೂರಲ್ ಇಂಜೆಕ್ಷನ್ ಕೊಡುವ ಮುನ್ನ ದರ್ಶನ್‌ಗೆ ಇಂಜೆಕ್ಷನ್ ಸೈಡ್ ಎಫೆಕ್ಟ್ ವರ್ಕ್ ಆಗುವ ರೀತಿ ಎಲ್ಲವನ್ನು ವೈದ್ಯ ಡಾ. ಅಜಯ್ ಹೆಗ್ಡೆ ವಿವರಿಸಿದ್ದಾರೆ. ವೈದ್ಯರ ವಿವರಣೆ ಕೇಳಿ ಇಂಜೆಕ್ಷನ್ ಕೊಡಲು ದರ್ಶನ್ ಸಮ್ಮತಿ ಸೂಚಿಸಿದರು. ಒಂದು ವೇಳೆ ಅಪರೇಷನ್ ನಿಶ್ಚಿತವಾದರೆ ದರ್ಶನ್, ಪತ್ನಿ ವಿಜಯಲಕ್ಷ್ಮಿ, ದರ್ಶನ್ ಸಹೋದರ ದಿನಕರ್, ಮಗ ವಿನೀಶ್ ನಾಲ್ವರನ್ನು ಕರೆಸಿ ಅಪರೇಷನ್ ಬಗ್ಗೆ, ಅಪರೇಷನ್ ನಂತರ ಆಗುವ ಪರಿಣಾಮಗಳ ಬಗ್ಗೆ ಕೌನ್ಸಿಲಿಂಗ್ ರೂಪದಲ್ಲಿ ವೈದ್ಯರು ಮಾಹಿತಿ ನೀಡಲಿದ್ದಾರೆ. ಈ ಬಗ್ಗೆ ದರ್ಶನ್‌ಗೂ ವೈದ್ಯರು ತಿಳಿಸಿದ್ದಾರೆ. ಬಳಿಕ ಒಂದು ವಾರದ ನಂತರ ಕುಟುಂಬದ ಸಮೇತ ಆಸ್ಪತ್ರೆಗೆ ಬರುತ್ತೇನೆ ಎಂದು ದರ್ಶನ್ ತಿಳಿಸಿದ್ದಾರೆ. ಇದನ್ನೂ ಓದಿ: ದಕ್ಷಿಣದ ಕುಂಭಮೇಳ ಗವಿಸಿದ್ದೇಶ್ವರ ಜಾತ್ರಾಮಹೋತ್ಸವ – ರಥೋತ್ಸವಕ್ಕೆ ಭಕ್ತರ ದಂಡು 

    ಅಲ್ಲಿಗೆ ಈ ಒಂದು ವಾರ ದರ್ಶನ್ ಪಾಲಿಗೆ ಬಹಳ ಮಹತ್ತರವಾದದ್ದು. ಇಂಜೆಕ್ಷನ್ ವರ್ಕ್ ಆದರೆ ಆಪರೇಷನ್ ಇಲ್ಲ. ವರ್ಕ್ ಆಗದೆ ಇದ್ದರೆ ಮುಂದಿನ ವಾರ ಆಪರೇಷನ್ ಮಾಡಿಸಿಕೊಳ್ಳುತ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

  • ಪವಿತ್ರಾಗೌಡ ಬರ್ತ್‌ಡೇಗೆ ವೀಡಿಯೋ ಹಂಚಿಕೊಂಡು ವಿಶ್ ಮಾಡಿದ ಮಗಳು ಖುಷಿ ಗೌಡ

    ಪವಿತ್ರಾಗೌಡ ಬರ್ತ್‌ಡೇಗೆ ವೀಡಿಯೋ ಹಂಚಿಕೊಂಡು ವಿಶ್ ಮಾಡಿದ ಮಗಳು ಖುಷಿ ಗೌಡ

    ಪವಿತ್ರಾಗೌಡ ಹುಟ್ಟುಹಬ್ಬಕ್ಕೆ ಮಗಳು ಖುಷಿ ಗೌಡ ವೀಡಿಯೋ ಹಂಚಿಕೊಳ್ಳುವ ಮೂಲಕ ತಾಯಿಗೆ ಬರ್ತ್‌ಡೇಗೆ ವಿಶ್ ತಿಳಿಸಿದ್ದಾರೆ.ಇದನ್ನೂ ಓದಿ: ನವಜಾತ ಶಿಶುಗಳ ಸರಣಿ ಸಾವು – ಎರಡು ವಾರದ ಅಂತರದಲ್ಲಿ ಮೂರು ಶಿಶುಗಳ ಮರಣ

    ಇನ್ಸ್‌ಸ್ಟಾಗ್ರಾಂನಲ್ಲಿ ಪವಿತ್ರಾಗೌಡ ಮಗಳು ಖುಷಿ ಗೌಡ ವೀಡಿಯೋ ಹಂಚಿಕೊಂಡಿದ್ದು, ಕಳೆದ ವರ್ಷ ನಿನಗೆ ಬಹಳ ಕಷ್ಟದಾಯಕವಾಗಿತ್ತು ಅನ್ನೋದು ನನಗೆ ಗೊತ್ತಿದೆ. ಆದರೆ 2025 ನಿಮ್ಮ ಜೀವನದ ಹೊಸ ಹೆಜ್ಜೆಯಾಗಿ, ನಿಮ್ಮನ್ನ ಸಂಪೂರ್ಣವಾಗಿ ಬದಲಾಯಿಸುತ್ತದೆ. ನಾನು ಪ್ರಾಮಿಸ್ ಮಾಡ್ತೀನಿ. ಒಂದಿನ ನೀವು ಹೆಮ್ಮೆ ಪಡುವಂತೆ ನಾನು ಮಾಡ್ತೀನಿ. ಇವಳು ನನ್ನ ಮಗಳು ಎಂದು ಹೆಮ್ಮೆಯಿಂದ ಹೇಳುವಂತೆ ಮಾಡ್ತೀನಿ. ನಿನ್ನನ್ನು ಹೆಮ್ಮೆ ಪಡಿಸುವುದೇ ನನ್ನ ಜೀವನದ ಏಕೈಕ ಕನಸು ಅಮ್ಮ ಎಂದು ವಿಶ್ ಮಾಡಿದ್ದಾರೆ.

    ಮಗಳು ಖುಷಿ ಗೌಡ ಹಂಚಿಕೊಂಡಿರುವ ವೀಡಿಯೋವನ್ನು ತಾಯಿ ಪವಿತ್ರಾ ಗೌಡ ಕೂಡ ಇನ್ಸ್‌ಸ್ಟಾಗ್ರಾಂನಲ್ಲಿ ರೀಪೋಸ್ಟ್ ಮಾಡಿದ್ದಾರೆ.ಇದನ್ನೂ ಓದಿ: ಹೆಚ್ಚುವರಿ ಪರಿಹಾರ ನೀಡದ್ದಕ್ಕೆ ಸಣ್ಣ ನೀರಾವರಿ ಇಲಾಖೆಯ 1.43 ಲಕ್ಷ ರೂ. ಮೌಲ್ಯದ ಪೀಠೋಪಕರಣ ಜಪ್ತಿ

    :

  • ಇನ್ನೂ ರಿಟ್ರೀವ್ ಆಗಿಲ್ಲ ದರ್ಶನ್, ಪವಿತ್ರಾಗೌಡ ಮೊಬೈಲ್!

    ಇನ್ನೂ ರಿಟ್ರೀವ್ ಆಗಿಲ್ಲ ದರ್ಶನ್, ಪವಿತ್ರಾಗೌಡ ಮೊಬೈಲ್!

    – ಕಳೆದ 2 ತಿಂಗಳಿನಿಂದ ಮೊಬೈಲ್ ರಿಟ್ರೀವ್‌ಗಾಗಿ ಕಾದಿರುವ ಪೊಲೀಸರು

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಹಿನ್ನೆಲೆ ಸಿಎಫ್‌ಎಸ್‌ಎಲ್ ವರದಿ (CFSL Report) ಇನ್ನೊಂದು ವಾರದಲ್ಲಿ ಬರಲಿದ್ದು, ಮೊಬೈಲ್ ರಿಟ್ರೀವ್ ಆಗುವ ಸಾಧ್ಯತೆಯಿದೆ. ವರದಿಯ ಬಳಿಕ ಪೊಲೀಸರು ಹೆಚ್ಚುವರಿ ಚಾರ್ಜ್‌ಶೀಟ್‌ (Chargesheet) ಸಲ್ಲಿಸಲಿದ್ದಾರೆ.

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಕಾಮಾಕ್ಷಿಪಾಳ್ಯ ಪೊಲೀಸರಿಂದ 3991 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿತ್ತು. ಈ ವೇಳೆ ಹತ್ತು ಆರೋಪಿಗಳ ಮೊಬೈಲ್ ರಿಟ್ರೀವ್‌ಗಾಗಿ ಹೈದಾರಬಾದ್‌ಗೆ ಕಳುಹಿಸಲಾಗಿತ್ತು. ಆದರೆ ನಟ ದರ್ಶನ್ ಹಾಗೂ ಪವಿತ್ರಾಗೌಡ ಇಬ್ಬರದ್ದು ಐಪೋನ್ ಆಗಿರುವ ಹಿನ್ನೆಲೆ ಮೊಬೈಲ್ ರಿಟ್ರೀವ್ ಆಗಿರಲಿಲ್ಲ.ಇದನ್ನೂ ಓದಿ: Women’s T20 World Cup; ಭಾರತ vs ಪಾಕಿಸ್ತಾನ ಫೈಟ್‌ – ಟೀಂ ಇಂಡಿಯಾಗೆ ಇಂದು ನಿರ್ಣಾಯಕ ಪಂದ್ಯ

    ಹತ್ತು ಆರೋಪಿಗಳ ಪೈಕಿ ಎಲ್ಲರ ಫೋನ್‌ಗಳು ರಿಟ್ರೀವ್ ಆಗಿದ್ದು, ನಟ ದರ್ಶನ್ ಹಾಗೂ ಪವಿತ್ರಾಗೌಡ ಅವರ ಫೋನ್ ರಿಟ್ರೀವ್ ಆಗಬೇಕಿದೆ. ಎರಡು ಐಪೋನ್ ಆಗಿರುವ ಹಿನ್ನೆಲೆ ಮೊಬೈಲ್ ರಿಟ್ರೀವ್ ಕಷ್ಟವಾಗಿದೆ. ಕಳೆದ ಎರಡು ತಿಂಗಳಿನಿಂದ ಮೊಬೈಲ್ ರಿಟ್ರೀವ್‌ಗಾಗಿ ಪೊಲೀಸರು ಕಾದಿದ್ದಾರೆ. ಹೀಗಾಗಿ ತಜ್ಞರ ಅಭಿಪ್ರಾಯ ಪಡೆದು ಪೊಲೀಸರು ರಿಟ್ರೀವ್‌ಗೆ ಮುಂದಾಗಿದ್ದಾರೆ.

    ಪ್ರಕರಣ ಸಂಬಂಧ ಈಗಾಗಲೇ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದ್ದರೂ ಸಿಎಫ್‌ಎಸ್‌ಎಲ್ ವರದಿ ಇನ್ನೂ ಬಂದಿಲ್ಲ. ಮೊಬೈಲ್ ರಿಟ್ರೀವ್ ಆದ ಬಳಿಕ ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗುವ ಸಾಧ್ಯತೆಯಿದ್ದು, ಇನ್ನೊಂದು ವಾರದಲ್ಲಿ ರಿಟ್ರೀವ್ ಆಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.ಇದನ್ನೂ ಓದಿ: ಶಬರಿಮಲೆ ಯಾತ್ರೆಗೆ ಆನ್‌ಲೈನ್‌ ಬುಕ್ಕಿಂಗ್‌ ಕಡ್ಡಾಯ – ದಿನಕ್ಕೆ 80,000 ಭಕ್ತರಿಗೆ ದರ್ಶನಕ್ಕೆ ಅವಕಾಶ

     

  • ಠಾಣೆಯಲ್ಲಿ ಕೊಲೆ ಆರೋಪಿ ಪವಿತ್ರಾಗೌಡ ಕಣ್ಣೀರು – ಫೋಟೋ ರಿವೀಲ್

    ಠಾಣೆಯಲ್ಲಿ ಕೊಲೆ ಆರೋಪಿ ಪವಿತ್ರಾಗೌಡ ಕಣ್ಣೀರು – ಫೋಟೋ ರಿವೀಲ್

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Murder Case) ಹಿನ್ನೆಲೆ ಪೊಲೀಸ್ ಕಸ್ಟಡಿಯಲ್ಲಿದ್ದ ಪವಿತ್ರಾ ಗೌಡ (Pavitra Gowda) ಕಣ್ಣೀರು ಹಾಕ್ತಿರುವ ಫೋಟೋ ಸದ್ಯ ರಿವೀಲ್ ಆಗಿದೆ.

    ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಿಂದ ಒಂದೊಂದಾಗಿ ವಿಷಯಗಳು ಹೊರಬರುತ್ತಿವೆ. ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಹತ್ಯೆಯ ಕುರಿತಾದ ಹಲವು ಫೋಟೋಗಳು ಇತ್ತೀಚಿಗಷ್ಟೇ ಲಭ್ಯವಾಗಿದ್ದವು.ಇದನ್ನೂ ಓದಿ: ರೇಣುಕಾಸ್ವಾಮಿ ಮಾಡಿದ್ದು ಒಳ್ಳೆಯ ಕೆಲಸ ಅಲ್ಲ: ದರ್ಶನ್ ಪರ ನಿಂತ ಪ್ರೇಮ್

    ಕೊಲೆ ಪ್ರಕರಣದಲ್ಲಿ ಭಾಗಿಯಾದ ಹಲವರ ಫೋನ್ ರಿಟ್ರೀವ್ ಮಾಡಿದ ಬಳಿಕ ಒಂದೊಂದಾಗಿ ಫೋಟೋಗಳು ಲಭ್ಯವಾಗುತ್ತಲೇ ಇವೆ. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಜೀವ ಭಿಕ್ಷೆ ಬೇಡಿದ ಫೋಟೋ, ಸಾವನ್ನಪ್ಪಿದ ಬಳಿಕ ಮೃತದೇಹ ಬಿಸಾಕಿದ್ದ ಫೋಟೋ, ಸ್ಥಳ ಮಹಜರು ಸಮಯದಲ್ಲಿ ಆರೋಪಿ ದರ್ಶನ್ ಇದ್ದ ಫೋಟೋ, ಹತ್ಯೆಗಾಗಿ ಬಳಸಿದ ಉಪಕರಣಗಳ ಫೋಟೋ ಹೀಗೆ ಹಲವಾರು ಫೋಟೋಗಳು ಹೊರಬಂದಿವೆ.

    ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪವಿತ್ರಾಗೌಡ ಪೊಲೀಸ್ ಕಸ್ಟಡಿಯ ಫೋಟೋ ಒಂದು ಲಭ್ಯವಾಗಿದೆ. ಎಪಿನಗರ ಪೊಲೀಸ್ ಠಾಣೆಯಲ್ಲಿ ಪವಿತ್ರಾಗೌಡ ಕಣ್ಣೀರಿಡುತ್ತಿದ್ದ ಫೋಟೋ ರಿವೀಲ್ ಆಗಿದೆ.ಇದನ್ನೂ ಓದಿ: ದರ್ಶನ್ ಹೊಡೆತದಿಂದಲೇ ರೇಣುಕಾಸ್ವಾಮಿ ಸಾವು? – ಆ 3 ಹೊಡೆತಗಳ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

  • ಪವಿತ್ರಾ ಗೌಡ ತಾಯಿ ಜೈಲಿಗೆ ತಂದಿದ್ದ ಬಾಕ್ಸ್ ವಾಪಸ್

    ಪವಿತ್ರಾ ಗೌಡ ತಾಯಿ ಜೈಲಿಗೆ ತಂದಿದ್ದ ಬಾಕ್ಸ್ ವಾಪಸ್

    ರೇಣುಕಾಸ್ವಾಮಿ ಕೊಲೆ ಕೇಸ್‍ ನಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರೀತಾ ಇರೋ ದರ್ಶನ್ ಅವರ ಆಪ್ತ ಸ್ನೇಹಿತೆ ಪವಿತ್ರಾ ಗೌಡಗಾಗಿ ತಂದಿದ್ದ ಬಾಕ್ಸ್ ಅನ್ನು ಜೈಲು ಸಿಬ್ಬಂದಿ ವಾಪಸ್ಸು ಕಳುಹಿಸಿದ್ದಾರೆ. ಜೈಲಿನಲ್ಲಿ ತಿಂಡಿ ಇಟ್ಟುಕೊಳ್ಳುವುದಕ್ಕಾಗಿ ಪವಿತ್ರಾ ಗೌಡ ತಾಯಿ ಬಾಕ್ಸ್ ತಂದಿದ್ದರು.

    ಪವಿತ್ರಾ ಗೌಡ ಇರೋ ಕೋಣೆಯಲ್ಲಿ 13ಕ್ಕೂ ಹೆಚ್ಚು ಕೈದಿಗಳು ಇದ್ದಾರೆ ಎನ್ನೋ ಮಾಹಿತಿ ಇದೆ. ಹಾಗಾಗಿ ಮನೆಯಿಂದ ತಂದ ತಿಂಡಿಯನ್ನು ಇಟ್ಟುಕೊಳ್ಳಲು ಬಾಕ್ಸ್ ಬೇಕು ಅಂತ ತಾಯಿಗೆ ಪವಿತ್ರ ಗೌಡ ಹೇಳಿದ್ದರಂತೆ. ಮಗಳ ಮಾತಿನಂತೆ ಇಂದು ಜೈಲಿಗೆ ಬಾಕ್ಸ್ ಸಮೇತ ಬಂದಿದ್ದರು ಪವಿತ್ರಾ ಗೌಡ ತಾಯಿ. ಆದರೆ, ಬಾಕ್ಸ್ ಅನ್ನು ಒಳಗೆ ಕಳುಹಿಸಲು ಜೈಲು ಸಿಬ್ಬಂದಿ ಒಪ್ಪಿಲ್ಲ.

     

    ಜೈಲು ನಿಯಮದ ಪ್ರಕಾರ ಹೊರಗಿನ ಪಾತ್ರೆಗಳಿಗೆ ಅವಕಾಶವಿಲ್ಲ. ಇದನ್ನು ಪವಿತ್ರಾ ತಾಯಿಗೆ ತಿಳಿಹೇಳಿ ವಾಪಸ್ಸು ಕಳುಹಿಸಿದ್ದಾರೆ. ಪವಿತ್ರಾ ನೋಡಲು ತಾಯಿ, ತಂದೆ ಮತ್ತು ಮಗಳು ಪಾತ್ರ ಬರುತ್ತಿರುವುದು ಸಹಜವಾಗಿಯೇ ಪವಿತ್ರಾಗೆ ಆತಂಕ ತಂದೊಡ್ಡಿದೆ. ತನ್ನ ಸಪೋರ್ಟಿಗೆ ದರ್ಶನ್ ನಿಲ್ಲುತ್ತಾರೆ ಎಂದು ಪವಿತ್ರಾ ಅಂದುಕೊಂಡಿದ್ದಳು. ಆದರೆ, ದರ್ಶನ್ ಅಂತರ ಕಾಪಾಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ.