Tag: Pavithragowda

  • ʻಯಾವ ಸೌಲಭ್ಯವೂ ಇಲ್ಲ, ನೀವೇ ಬಂದು ನೋಡಿʼ – ಜಡ್ಜ್‌ಗೆ ದರ್ಶನ್‌ ಮನವಿ ಮಾಡಿದ್ದ ಅರ್ಜಿ ವಿಚಾರಣೆ ಅ.10ಕ್ಕೆ ಮುಂದೂಡಿಕೆ

    ʻಯಾವ ಸೌಲಭ್ಯವೂ ಇಲ್ಲ, ನೀವೇ ಬಂದು ನೋಡಿʼ – ಜಡ್ಜ್‌ಗೆ ದರ್ಶನ್‌ ಮನವಿ ಮಾಡಿದ್ದ ಅರ್ಜಿ ವಿಚಾರಣೆ ಅ.10ಕ್ಕೆ ಮುಂದೂಡಿಕೆ

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ಜೈಲು ಸೇರಿರೋ ನಟ ದರ್ಶನ್, ಜೈಲಲ್ಲಿ ಯಾವುದೇ ಸೌಕರ್ಯ ನೀಡುತ್ತಿಲ್ಲ. ನ್ಯಾಯಾಧೀಶರೇ ಖುದ್ದು ಪರಿಶೀಲಿಸಬೇಕೆಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಅ.10ಕ್ಕೆ ಮುಂದೂಡಲಾಗಿದೆ.

    ದರ್ಶನ್ ಪರ ವಕೀಲ ಸುನಿಲ್ ಕುಮಾರ್ ವಾದ ಮಂಡಿಸಿ, ನಮಗೆ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಹಾಗಾಗಿ ಪದೇ ಪದೇ ಅರ್ಜಿ ಹಾಕುತ್ತಿದ್ದೇವೆ. ಈ ಬಗ್ಗೆ ಜಡ್ಜ್ ಪರಿಶೀಲನೆ ಮಾಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದಕ್ಕೆ ಎಸ್‍ಪಿಪಿ, ಅರ್ಜಿಯೇ ಊರ್ಜಿತವಲ್ಲ. ಯೋಗ್ಯವಲ್ಲದ ಅರ್ಜಿ ಇದು, ವಜಾ ಮಾಡುವಂತೆ ಮನವಿ ಮಾಡಿದರು. ಇದು ಟ್ರಯಲ್ ತಪ್ಪಿಸಿಕೊಳ್ಳುವ ಪ್ರಯತ್ನ ಎಂದು ಆರೋಪಿಸಿದರು. ಇದನ್ನೂ ಓದಿ: ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಕೇಸ್‌ – ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

    ರೇಣುಕಾಸ್ವಾಮಿ ಕೊಲೆ ಕೇಸಿನ ವಿಚಾರಣೆ ಸಂಬಂಧ, ಎಲ್ಲಾ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟಿಗೆ ಹಾಜರುಪಡಿಸಲಾಗಿತ್ತು. ಮೂವರು ಆರೋಪಿಗಳು ಗೈರು ಹಾಜರಾಗಿದ್ದರಿಂದ ಅರ್ಜಿಯ ವಿಚಾರಣೆಯನ್ನು ಅ.18ಕ್ಕೆ ಮುಂದೂಡಿಕೆ ಮಾಡಲಾಗಿದೆ. ಇದನ್ನೂ ಓದಿ: ಮುಡಾ ಕೇಸ್ – 2 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಕೋರ್ಟ್‌ ಆದೇಶ

  • ನಟ ದರ್ಶನ್‌ ಗನ್‌ ಲೈಸೆನ್ಸ್‌ ತಾತ್ಕಾಲಿಕ ಅಮಾನತು

    ನಟ ದರ್ಶನ್‌ ಗನ್‌ ಲೈಸೆನ್ಸ್‌ ತಾತ್ಕಾಲಿಕ ಅಮಾನತು

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಆರೋಪಿಯಾಗಿರುವ ನಟ ದರ್ಶನ್ (Darshan) ಬಳಿಯಿರುವ ಗನ್ ಲೈಸೆನ್ಸ್ ತಾತ್ಕಾಲಿಕವಾಗಿ ಅಮಾನತ್ತು ಮಾಡಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ದಯಾನಂದ್‌ ತಿಳಿಸಿದ್ದಾರೆ.

    ಮೂರು ವರ್ಷಕ್ಕಿಂತ ಮೇಲ್ಪಟ್ಟ ಶಿಕ್ಷೆ ವಿಧಿಸಬಹುದಾದ ಕೇಸ್‍ನಲ್ಲಿ ಆರೋಪಿಯಾಗಿರುವ ವ್ಯಕ್ತಿಯ ಬಳಿ ಲೈಸೆನ್ಸ್ ಇರುವ ಗನ್ ಇದ್ದರೆ ಅದನ್ನು ಕೂಡಲೇ ವಶಕ್ಕೆ ಪಡೆಯಲಾಗುತ್ತದೆ. ಅಲ್ಲದೇ ಆ ವ್ಯಕ್ತಿಯ ಲೈಸೆನ್ಸ್ ರದ್ದು ಮಾಡಬಹುದಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‍ನಲ್ಲಿ ಲೈಸೆನ್ಸ್ ಗನ್ ಬಳಕೆ ಮಾಡಿರೊದು ಎಲ್ಲಿಯೂ ಕಂಡುಬರದ ಕಾರಣ ತಾತ್ಕಾಲಿಕವಾಗಿ ಅಂದರೆ ಕೇಸ್ ಮುಗಿಯುವತನಕ ಅಮಾನತ್ತಿನಲ್ಲಿಡಲು ಪೊಲೀಸರು ನಿರ್ಧರಿಸಿದ್ದಾರೆ.

    ನಟ ದರ್ಶನ್ ಗನ್ ಲೈಸೆನ್ಸ್ ರದ್ದು ಮಾಡಲು ಈಗಾಗಲೇ ಪೊಲೀಸರು ನೋಟಿಸ್ ನೀಡಿದ್ದರು. ನೋಟಿಸ್‍ನಲ್ಲಿ, ನೀವು ಕೊಲೆ ಪ್ರಕರಣದ ಆರೋಪಿಯಾಗಿದ್ದೀರಿ. ಜಾಮೀನಿನ ಮೇಲೆ ಹೊರಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಗನ್ ಇರೋದ್ರಿಂದ ಸಾಕ್ಷಿಗಳನ್ನು ಬೆದರಿಸುವ ಬಗ್ಗೆ ಅನುಮಾನ ಇದೆ. ಆದ್ದರಿಂದ ನಿಮ್ಮ ಲೈಸೆನ್ಸ್ ರದ್ದು ಮಾಡಬೇಕಿದೆ. ಈ ಬಗ್ಗೆ ಒಂದು ವಾರದೊಳಗೆ ಉತ್ತರಿಸಬೇಕು. ನೋಟಿಸ್‍ಗೆ ಉತ್ತರ ನೀಡಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದರು.

    ಪೊಲೀಸರ ನೋಟಿಸ್‍ಗೆ ಉತ್ತರಿಸಿದ್ದ ದರ್ಶನ್, ನಾನು ಸೆಲೆಬ್ರಿಟಿ ಆಗಿರುವುದರಿಂದ ಆತ್ಮರಕ್ಷಣೆಗೆ ಗನ್ ಅವಶ್ಯಕತೆ ಇದೆ. ನನ್ನ ಮೇಲಿರೋ ಕೇಸ್‍ನ ಸಮಯದಲ್ಲಿ ಆ ಗನ್ ಬಳಕೆ ಮಾಡಿಲ್ಲ. ಯಾವುದೇ ಕಾರಣಕ್ಕೂ ಗನ್ ದುರ್ಬಳಕೆ ಮಾಡಿಕೊಳ್ಳಲ್ಲ. ಹಾಗಾಗಿ ಗನ್ ಲೈಸೆನ್ಸ್ ಮುಂದುವರೆಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಇದೀಗ ಗನ್‌ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡಲಾಗಿದೆ.

  • ಕಾನೂನು ಹೋರಾಟಕ್ಕೆ ತೊಡಕಾಗುವ ಆತಂಕ – ಜೈಲಲ್ಲಿ ಕಿರಿಕ್ ಮಾಡದಂತೆ ದರ್ಶನ್‍ಗೆ ಲಾಯರ್ ಪತ್ರ?

    ಕಾನೂನು ಹೋರಾಟಕ್ಕೆ ತೊಡಕಾಗುವ ಆತಂಕ – ಜೈಲಲ್ಲಿ ಕಿರಿಕ್ ಮಾಡದಂತೆ ದರ್ಶನ್‍ಗೆ ಲಾಯರ್ ಪತ್ರ?

    ಬಳ್ಳಾರಿ: ಇಲ್ಲಿನ ಸೆಂಟ್ರಲ್ ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್  (Darshan) ನಿತ್ಯವೂ ಒಂದೊಂದು ರೀತಿಯ ಕಿರಿಕ್ ಮಾಡಿಕೊಳ್ತಿದ್ದಾರೆ. ದರ್ಶನ್ ಅವರ ಈ ವರ್ತನೆ ಮುಂದಿನ ಕಾನೂನು ಹೋರಾಟಕ್ಕೆ ತೊಡಕಾಗಬಹುದು ಎಂಬ ಆತಂಕ ಇದೀಗ ಅವರ ವಕೀಲರಿಗೆ ಕಾಡ್ತಿದೆ. ಇದೇ ಕಾರಣಕ್ಕೆ ದರ್ಶನ್‍ಗೆ ವಕೀಲರು ಪತ್ರ ಬರೆದು ಎಚ್ಚರಿಸಿದ್ದಾರೆ ಎನ್ನಲಾಗಿದೆ.

    ಜೈಲಿನಲ್ಲಿ ಆರೋಪಿ ದರ್ಶನ್ ಅವರನ್ನು ಸಾಮಾನ್ಯ ಕೈದಿಯಂತೆ ನೋಡಿಕೊಳ್ಳಲಾಗುತ್ತಿದೆ. ಇಲ್ಲಿ ಯಾವುದೇ ವಿಶೇಷ ಸವಲತ್ತನ್ನು ಕೊಡುತ್ತಿಲ್ಲ. ಇದೇ ಕಾರಣಕ್ಕೆ ದರ್ಶನ್ ಜೈಲಿನಲ್ಲಿ ಒದ್ದಾಡುತ್ತಿದ್ದಾರೆ. ಹೀಗಾಗಿ ಮಾಧ್ಯಮಗಳ ಎದುರು ಅಸಭ್ಯ ವರ್ತನೆ ತೋರಿದ್ದರು. ಅಲ್ಲದೇ ಟಿವಿ ಬೇಕು. ಒಳ್ಳೆ ಟಿವಿ ಕೊಡಿ. ನಾನೇನು ಇಲ್ಲಿ ಅಪರಾಧಿ ಅಲ್ಲ, ಆರೋಪಿ ಅಷ್ಟೇ. ಇಷ್ಟೊಂದು ಕಟುವಾಗಿ ನಡೆಸಿಕೊಳ್ಳಬೇಡಿ ಎಂದು ಜೈಲಿನಲ್ಲಿ ಕಿರಿಕ್ ಮಾಡಿದ್ದರು. ಇದನ್ನೂ ಓದಿ: Nagamangala Violence | ಪಿಎಫ್‌ಐ ಸಂಘಟನೆಯವರು ಮಾತ್ರವಲ್ಲ, ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆ – ಸುರೇಶ್‌ಗೌಡ

    ಇದರ ನಡುವೆ ಬಾಡಿ ಫಿಟ್ನೆಸ್‍ಗಾಗಿ ಪ್ರೋಟಿನ್ ಹಾಗೂ ವಿಟಮಿನ್ ಮಾತ್ರೆಗಳು ಬೇಕೆಂದು ಕ್ಯಾತೆ ತೆಗೆದಿದ್ದರು. ಈ ವೇಳೆ ಜೈಲಾಧಿಕಾರಿಗಳು ಕಾನೂನಿನ ಪ್ರಕಾರ ವಿಚಾರಾಣಾಧಿನ ಕೈದಿಗೆ ಏನೆಲ್ಲಾ ಕೊಡಲು ಅವಕಾಶ ಇದೆಯೋ ಅಷ್ಟನ್ನು ಮಾತ್ರ ಕೊಡ್ತೀವಿ. ಹೆಚ್ಚಿಗೆ ಏನನ್ನೂ ಕೊಡೋದಕ್ಕೆ ಆಗಲ್ಲ ಎಂದಿದ್ದರು.‌

    ಇದೆಲ್ಲವನ್ನು ಗಮನಿಸಿದ್ದ ವಕೀಲರು ಜೈಲಿನಲ್ಲಿ ದುರ್ನಡತೆ ಹಾಗೂ ಕಿರಿ ಕಿರಿ ಮಾಡದಂತೆ ಆರೋಪಿ ದರ್ಶನ್‍ಗೆ ನೀತಿ ಪಾಠ ಮಾಡಿದ್ದಾರೆ. ಇದರಿಂದ ಕಾನೂನು ಹೋರಾಟಕ್ಕೆ ತೊಡಕಾಗುತ್ತೆ. ಜಾಮೀನು ಸಿಗುವುದು ಕಷ್ಟವಾಗಲಿದೆ ಎಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಡಿ.ಕೆ.ಶಿವಕುಮಾರ್‌ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಕೇಸ್‌- ಇಂದು ಸುಪ್ರೀಂನಲ್ಲಿ ವಿಚಾರಣೆ

  • ಜೈಲಲ್ಲಿ ಫಿಟ್ನೆಸ್ ಬಗ್ಗೆಯೇ ಚಿಂತೆ – ವಿಟಮಿನ್ ಪೌಡರ್‌ಗೆ ಬೇಡಿಕೆ ಇಟ್ಟ ದರ್ಶನ್

    ಜೈಲಲ್ಲಿ ಫಿಟ್ನೆಸ್ ಬಗ್ಗೆಯೇ ಚಿಂತೆ – ವಿಟಮಿನ್ ಪೌಡರ್‌ಗೆ ಬೇಡಿಕೆ ಇಟ್ಟ ದರ್ಶನ್

    – ದೇಹದಾರ್ಢ್ಯ ಉಳಿಸಿಕೊಳ್ಳದಿದ್ರೆ ಕಷ್ಟ ಎಂದು ಅಳಲು
    – ದರ್ಶನ್ ಬೇಡಿಕೆ ನಿರಾಕರಿಸಿದ ಜೈಲಾಧಿಕಾರಿ

    ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಕೇಸ್‍ನಲ್ಲಿ (Renukaswamy Murder case) ಜೈಲಲ್ಲಿರುವ ದರ್ಶನ್ (Darshan) ಜೈಲಾಧಿಕಾರಿಗಳ ಮುಂದೆ ಬಾಡಿ ಮೇಂಟೆನ್ಸ್ ಪೌಡರ್ ಹಾಗೂ ವಿಟಮಿನ್ ಪೌಡರ್‌ಗೆ ಬೇಡಿಕೆ ಇಟ್ಟಿದ್ದು, ಜೈಲಾಧಿಕಾರಿಗಳು ಸಾರಾಸಗಟಾಗಿ ಬೇಡಿಕೆ ತಿರಸ್ಕರಿಸಿದ್ದಾರೆ.

    ಜೈಲಿಲ್ಲಿ (Bellary jail) ಫಿಟ್ನೆಸ್ ಬಗ್ಗೆಯೇ ದರ್ಶನ್ ಚಿಂತೆ ಮಾಡುತ್ತಿದ್ದಾರೆ. ದೇಹದಾರ್ಢ್ಯ ಸರಿಯಾಗಿ ಉಳಿಸಿಕೊಳ್ಳದಿದ್ದರೆ ನನಗೆ ಕಷ್ಟ ಆಗುತ್ತದೆ. ವಿಟಿಮಿನ್ ಪೌಡರ್‍ನ್ನು ಕುಟುಂಬಸ್ಥರ ಮೂಲಕ ತರಿಸಿಕೊಡಿ ಎಂದು ಜೈಲಿನ ಸಿಬ್ಬಂದಿ ಹಾಗೂ ವಾರ್ಡನ್ ಬಳಿ ಪದೇ ಪದೇ ಕೇಳಿಕೊಂಡಿದ್ದಾರೆ. ದರ್ಶನ್ ಮನವಿಯನ್ನು ಜೈಲಾಧಿಕಾರಿಗಳು ತಿರಸ್ಕರಿಸಿದ್ದಾರೆ.

    ನೀವು ಏನ್ ಅಂದುಕೊಂಡಿದ್ದೀರಿ?
    ಜೈಲಲ್ಲಿ ನೀವು ಕೇಳಿದ್ದನ್ನು ಕೊಡೋಕೆ ಅವಕಾಶ ಇಲ್ಲ. ನಿಯಮದ ಅನುಸಾರ ವಿಚಾರಣಾಧೀನ ಖೈದಿಗೆ ಯಾವ ಸೌಲಭ್ಯಗಳನ್ನು ಕೊಡಲು ಅವಕಾಶ ಇದೆಯೋ ಆ ಸೌಲಭ್ಯಗಳನ್ನು ಮಾತ್ರ ಕೊಡಲು ಸಾಧ್ಯ ಎಂದು ಹೇಳಿದ್ದಾರೆ.

    ಈ ಹಿಂದೆ ದರ್ಶನ್ ಆರೋಗ್ಯದ ನೆಪ ಹೇಳಿ ಮನೆಯೂಟ ಕೇಳಿ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಹೈಕೋರ್ಟ್‍ನಲ್ಲಿ ವಿಚಾರಣೆ ಹಂತದಲ್ಲಿದೆ.

  • `ಡಿ’ಗ್ಯಾಂಗ್ ವಿರುದ್ಧ ಪ್ರಮುಖ ಸಾಕ್ಷ್ಯವಾದ ಮಣ್ಣು – ದೇಶದಲ್ಲೇ ಮೊದಲ ಪ್ರಕರಣ!

    `ಡಿ’ಗ್ಯಾಂಗ್ ವಿರುದ್ಧ ಪ್ರಮುಖ ಸಾಕ್ಷ್ಯವಾದ ಮಣ್ಣು – ದೇಶದಲ್ಲೇ ಮೊದಲ ಪ್ರಕರಣ!

    – ಚಾರ್ಜ್‍ಶೀಟ್‍ನಲ್ಲಿ ಸ್ಫೋಟಕ ರಹಸ್ಯ ಬಯಲು

    ಬೆಂಗಳೂರು: ದರ್ಶನ್ (Darshan)& ಗ್ಯಾಂಗ್‍ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder case) ಹಂತಕರು ಇವರೇ ಎಂದು ಮಣ್ಣು ಸಹ ಬೊಟ್ಟು ಮಾಡಿ ತೋರಿಸಿದೆ ಎಂಬ ಅಂಶ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖವಾಗಿದೆ

    ಹೌದು, ಅಪರೂಪ ಎಂಬಂತೆ ಮಣ್ಣನ್ನು ಈ ಪ್ರಕರಣದಲ್ಲಿ ಪೊಲೀಸರು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿದ್ದಾರೆ. ತನಿಖೆ ವೇಳೆ ಆರೋಪಿಗಳು ಧರಿಸಿದ್ದ ಶೂ ಮತ್ತು ಚಪ್ಪಲಿಯಲ್ಲಿದ್ದ ಮಣ್ಣನ್ನು ಹಾಗೂ ಶೆಡ್ ಬಳಿಯ ಮಣ್ಣನ್ನು ಪೊಲೀಸರು ಸಂಗ್ರಹಿಸಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಕಳಿಸಿ ವರದಿ ಪಡೆದಿದ್ದಾರೆ. ರಿಪೋರ್ಟ್‍ನಲ್ಲಿ ಆರೋಪಿಗಳು ಧರಿಸಿದ್ದ ಶೂ ಮತ್ತು ಚಪ್ಪಲಿಯಲ್ಲಿ ಇರುವ ಮಣ್ಣು ಹಾಗೂ ಶೆಡ್ ಬಳಿಯ ಮಣ್ಣು ಎರಡೂ ಒಂದೇ ಎಂದು ಕೃಷಿ ಅಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂಬುದನ್ನು ಪೊಲೀಸರು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿದ್ದಾರೆ.

    ಇದೀಗ ಶೂ ಹಾಗೂ ಚಪ್ಪಲಿಯಲ್ಲಿದ್ದ ಶೆಡ್‍ನಲ್ಲಿನ ಮಣ್ಣು ಸಹ `ಡಿ’ಗ್ಯಾಂಗ್‍ಗೆ ಕಂಟಕವಾಗಿ ಪರಿಣಮಿಸಿದೆ. ಚಾರ್ಜ್‍ಶೀಟ್‍ನಲ್ಲಿ ಮಣ್ಣಿನ ಅಂಶವನ್ನು ಪೊಲೀಸರು ಉಲ್ಲೇಖಿಸಿದ್ದಾರೆ.

    ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದರ್ಶನ್, ವಿನಯ್, ರಾಘವೇಂದ್ರನ ಶೂ ಹಾಗೂ ನಾಗರಾಜ್‍ನ ಚಪ್ಪಲಿಗೆ ಅಂಟಿದ್ದ ಮಣ್ಣನ್ನ ಸಂಗ್ರಹ ಮಾಡಿದ್ದರು. ಇದೀಗ ದೇಶದಲ್ಲೇ ಮೊದಲ ಬಾರಿಗೆ ಮಣ್ಣಿನ ವರದಿ ಪಡೆದು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ಪ್ರಕರಣ ಇದಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  • ದರ್ಶನ್‍ಗೆ ಜೈಲಲ್ಲಿ ರಾಜಾತಿಥ್ಯ | ಸಿಎಂ- ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ: ಪ್ರಲ್ಹಾದ್ ಜೋಶಿ

    ದರ್ಶನ್‍ಗೆ ಜೈಲಲ್ಲಿ ರಾಜಾತಿಥ್ಯ | ಸಿಎಂ- ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ: ಪ್ರಲ್ಹಾದ್ ಜೋಶಿ

    – ಸರ್ಕಾರ ಏನೋ ಸಂಚು ಮಾಡುತ್ತಿದೆ

    ಹುಬ್ಬಳ್ಳಿ: ನಟ ದರ್ಶನ್ (Darshan) ಪ್ರಕರಣದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಪತ್ರ ಬರೆಯುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿಳಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈಲಿನಲ್ಲಿ ಇರುವ ಕೊಲೆ ಆರೋಪಿ ದರ್ಶನ್‍ಗೆ ರಾಜಾತಿಥ್ಯ ನೀಡುತ್ತಿರವ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದರು. ದರ್ಶನ್ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಗಂಭೀರತೆಯೇ ಇಲ್ಲ ಎಂದು ಕಿಡಿಕಾರಿದ್ದಾರೆ.

    ರಾಜಾತಿಥ್ಯ ನೀಡಿದ ಹಿನ್ನೆಲೆಯಲ್ಲಿ ಈಗ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ. ಇಷ್ಟು ದಿನ ಸರ್ಕಾರ ಏನು ಕತ್ತೆ ಕಾಯುತ್ತಿತ್ತಾ? ಇದರಲ್ಲಿ ಕೆಲವು ರಾಜಕಾರಣಿಗಳ ಹಸ್ತಕ್ಷೇಪವೂ ಇದೆ ಎಂದು ಆರೋಪಿಸಿದ್ದಾರೆ.

    ದರ್ಶನ್ ಪ್ರಕರಣದಲ್ಲಿ ಸಾಕ್ಷಿ ನಾಶ ಮಾಡಲು ಪ್ಲ್ಯಾನ್ ಮಾಡಿದಂತಿದೆ. ಇದನ್ನು ನೋಡಿದರೆ ಸರ್ಕಾರವೇ ದರ್ಶನ್ ರಕ್ಷಣೆಗೆ ನಿಂತಿದೆ ಅನಿಸುತ್ತದೆ. ಸರ್ಕಾರ ಏನೋ ಸಂಚು ಮಾಡುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.