Tag: Pavithra Lokesh

  • ನಾನು ವುಮನೈಸರ್ ಆಗಿದ್ದರೆ ರಮ್ಯಾ ನನ್ನಿಂದ ದೂರವಾಗಲಿ :  ನಟ ನರೇಶ್

    ನಾನು ವುಮನೈಸರ್ ಆಗಿದ್ದರೆ ರಮ್ಯಾ ನನ್ನಿಂದ ದೂರವಾಗಲಿ : ನಟ ನರೇಶ್

    ನ್ನ ಪತಿ ನರೇಶ್ ವುಮನೈಸರ್. ಅವರೊಂದಿಗೆ ಯಾರೆಲ್ಲ ಸಂಪರ್ಕವಿಟ್ಟುಕೊಂಡಿದ್ದರು ಅಂತ ನನಗೆ ಗೊತ್ತು. ಅದಕ್ಕಾಗಿಯೇ ನಾನು ಅವರಿಂದ ದೂರವಾದೆ ಎಂದು ನಟ ನರೇಶ್ ಅವರ ಪತ್ನಿ ರಮ್ಯಾ ಆರೋಪ ಮಾಡಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ನರೇಶ್. ನಾನು ನೂರಾರು ಕಲಾವಿದೆಯರ ಜೊತೆ ನಟಿಸಿದ್ದೇನೆ. ಅನೇಕರು ನನಗೆ ಮಹಿಳಾ ಸ್ನೇಹಿತೆಯರು ಇದ್ದಾರೆ. ನಾನು ಹೆಣ್ಣುಬಾಕ ಆಗಿದ್ದರೆ, ಅವರಲ್ಲಿ ಯಾರಾದರೂ ನನ್ನ ಬಗ್ಗೆ ಆರೋಪ ಮಾಡಬೇಕಿತ್ತು. ವುಮನೈಸರ್ ಪದದ ಅರ್ಥವೇನು? ಎಂದು ನರೇಶ್ ತಿರುಗೇಟು ನೀಡಿದ್ದಾರೆ.

    ಪತಿ ರಮ್ಯಾ ಬಗ್ಗೆಯೂ ಆರೋಪ ಮಾಡಿರುವ ಅವರು ‘ನನ್ನ ಸ್ನೇಹಿತರೊಬ್ಬರು ನನಗೆ ಕರೆ ಮಾಡಿ, ನಿಮ್ಮಿಂದ ರಮ್ಯಾ ದೂರವಾಗಿದ್ದಾರಾ ಅಂತ ಕೇಳಿದರು. ಅವರು ದೈಹಿಕ ಅಗತ್ಯತೆಗಾಗಿ ಬೆಂಗಳೂರಿನಲ್ಲಿ ಇದ್ದಾರೆ ಎಂದರು. ಅದನ್ನು ಕೇಳಿ ನನಗೆ ಶಾಕ್ ಆಯಿತು. ನಾನು ಆ ಹೆಣ್ಣಮಗಳ ಬಗ್ಗೆ ಹೆಚ್ಚೇನೂ ಹೇಳಲಾರೆ. ನಾನು ವುಮನೈಸರ್ ಆಗಿದ್ದರೆ, ಯಾಕೆ ಅವರು ನನ್ನೊಂದಿಗೆ ಬದುಕುತ್ತೇನೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಾರೆ? ಡಿವೋರ್ಸ್ ಕೊಡಬಹುದಲ್ಲ? ಎಂದು ನರೇಶ್ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ : ಎಪ್ರಿಲ್ 2ನೇ ವಾರದಲ್ಲಿ ನಟಿ ಕಾವ್ಯ ಶಾ ಮದ್ವೆ : ಮಾಧ್ಯಮ ಲೋಕದ ಹುಡುಗನ ಜತೆ ಸಪ್ತಪದಿ

    ರಮ್ಯಾ ಅವರು ಉದ್ಯಮಿ. ನನ್ನ ಹೆಸರು ಹೇಳಿದರೆ ಅವರು ಹೆಚ್ಚು ಪ್ರಚಾರ ಸಿಗುತ್ತದೆ. ಪ್ರಚಾರಕ್ಕಾಗಿ ಅವರು ನನ್ನನ್ನು ಮತ್ತು ನನ್ನ ಕುಟುಂಬವನ್ನು ಬಳಸಿಕೊಳ್ಳುತ್ತಿದ್ದಾರೆ. ಒಬ್ಬ ಮನುಷ್ಯ ಅವರಿಗೆ ಅಗತ್ಯ ಇಲ್ಲವೆಂದ ಮೇಲೆ ದೂರು ಇದ್ದು ಬಿಡಬೇಕು. ಅವರು ದೂರವಿದ್ದು ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಲಿ ನನಗೂ ನೆಮ್ಮದಿಯಿಂದ ಇರಲಿ ಬಿಡಲಿ ಎಂದು ನರೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

    Live Tv

  • ನಾನಾ ತಿರುವು ಪಡೆದುಕೊಂಡ ತೆಲುಗು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಪ್ರಕರಣ

    ನಾನಾ ತಿರುವು ಪಡೆದುಕೊಂಡ ತೆಲುಗು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಪ್ರಕರಣ

    ತೆಲುಗು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಪ್ರಕರಣ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಿನ್ನೆಯಷ್ಟೇ ನರೇಶ್ ಅವರ ಮೂರನೇ ಪತ್ನಿ ಬೆಂಗಳೂರು ಮೂಲದ ರಮ್ಯಾ, ಪತಿಯ ಬಗ್ಗೆ ನಾನಾ ಆರೋಪಗಳನ್ನು ಮಾಡಿದ್ದರು. ಈ ಆರೋಪಗಳಿಗೆ ಉತ್ತರ ಕೊಡಲೆಂದೇ ನರೇಶ್ ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಿದ್ದರು. ಆದರೆ, ದಿಢೀರ್ ಅಂತ ಪತ್ರಿಕಾಗೋಷ್ಠಿಯನ್ನೇ ರದ್ದು ಮಾಡಿದ್ದಾರೆ ನರೇಶ್.

    ಪಬ್ಲಿಕ್ ಟಿವಿಯ ಎಕ್ಸಕ್ಲೂಸಿವ್ ಸಂದರ್ಶನಕ್ಕಾಗಿ ಕಚೇರಿಗೆ ಬಂದಿದ್ದ ನರೇಶ್, ಹತ್ತು ಹಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ರಮ್ಯಾ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ರಮ್ಯಾ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಪವಿತ್ರಾ ಲೋಕೇಶ್ ನನ್ನ ಆತ್ಮೀಯರು, ವೆಲ್ ವಿಶರ್. ನಮ್ಮಿಬ್ಬರ ಸಂಬಂಧ ಬಗ್ಗೆ ರಮ್ಯಾ ಅವರಿಗೆ ಮಾತನಾಡಲು ಯಾವುದೇ ಹಕ್ಕಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ : ಎಪ್ರಿಲ್ 2ನೇ ವಾರದಲ್ಲಿ ನಟಿ ಕಾವ್ಯ ಶಾ ಮದ್ವೆ : ಮಾಧ್ಯಮ ಲೋಕದ ಹುಡುಗನ ಜತೆ ಸಪ್ತಪದಿ

    ಅಲ್ಲದೇ, ತಮ್ಮ ಕುಟುಂಬದ ಹೆಸರಿನಲ್ಲಿ ರಮ್ಯಾ ಹಣ ಮಾಡುತ್ತಿದ್ದಾರೆ ಎಂದೂ ಆರೋಪಿಸಿರುವ ನರೇಶ್, ತಮ್ಮ ಹೆಸರಿನಲ್ಲೂ ರಮ್ಯಾ ಸಾಲ ಪಡೆದಿದ್ದಾರೆ ಎಂದಿದ್ದಾರೆ. ನಮ್ಮ ಕುಟುಂಬದ ಹೆಸರನ್ನು ಹೇಳಿಕೊಂಡು ರಮ್ಯಾ ದುಡ್ಡು ಕೇಳಿದರೆ, ಯಾರೂ ಕೊಡದಂತೆ ಮನವಿಯನ್ನೂ ಮಾಡಿದ್ದಾರೆ. ನಾನು ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ. ರಮ್ಯಾ ಅವರು ನನ್ನಿಂದ ದೂರವಾಗಿ ಚೆನ್ನಾಗಿರಲಿ ಎಂದೂ ಅವರು ಸಂದರ್ಶನದಲ್ಲಿ ಹೇಳಿದ್ದಾರೆ.

    Live Tv

  • ಪವಿತ್ರಾ ಲೋಕೇಶ್ ದೂರು : ತನಿಖೆ ಆರಂಭಿಸಿದ ಪೊಲೀಸರು

    ಪವಿತ್ರಾ ಲೋಕೇಶ್ ದೂರು : ತನಿಖೆ ಆರಂಭಿಸಿದ ಪೊಲೀಸರು

    ತೆಲುಗು ನಟ ನರೇಶ್ ಜೊತೆಗಿನ ಸಂಬಂಧದ ಕುರಿತಾಗಿ ಅವಹೇಳನಕಾರಿ ಪೋಸ್ಟ್ ಮಾಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ನಟಿ ಪವಿತ್ರಾ ಲೋಕೇಶ್ ಎರಡು ದಿನಗಳ ಹಿಂದೆ ಮೈಸೂರಿನಲ್ಲಿ ಸೈಬರ್ ಠಾಣೆಗೆ ದೂರು ದಾಖಲಿಸಿದ್ದರು. ದೂರು ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಸೈಬರ್ ಪೊಲೀಸರಿಂದ ತನಿಖೆ ಆರಂಭವಾಗಿದೆ. ಪವಿತ್ರ ಲೋಕೇಶ್ ಮನೆ ಬಳಿ ಬಂದು ವಿಚಾರಿಸಿರುವ ಪೊಲೀಸರು, ಅವರು ಮನೆಯಲ್ಲಿ ಇಲ್ಲದೆ ಕಾರಣ ವಾಪಸ್ ಆಗಿದ್ದಾರೆ.

    ಈ ಕುರಿತು ಮಾತನಾಡಿರುವ ಪವಿತ್ರಾ ಲೋಕೇಶ್ ತಾಯಿ, “ಎರಡು ದಿನಗಳ ಹಿಂದೆ ಮೈಸೂರಿಗೆ ಬಂದು ಪವಿತ್ರ ಲೋಕೇಶ್ ದೂರು ದಾಖಲಿಸಿದ್ದರು. ಸದ್ಯ ಮಗಳು ಹೈದರಾಬಾದ್ ನಲ್ಲಿ‌ ಇದ್ದಾಳೆ. ದೂರು ದಾಖಲಿಸಲೆಂದೇ ಶೂಟಿಂಗ್ ನಿಲ್ಲಿಸಿ ಬಂದಿದ್ದಳು. ಏನು ದೂರು ಕೊಟ್ಟಿದ್ದಾಳೆ ನನಗೆ ಗೊತ್ತಿಲ್ಲ. ದೂರು ಕೊಟ್ಟರೂ ಯಾವ ವಿಚಾರವನ್ನೂ ನನ್ನ ಬಳಿ ಹೇಳಿಲ್ಲ. ಈಗಿನ ಮಕ್ಕಳು ನಮಗೆ ಏನಾದ್ರು ಹೇಳುತ್ತಾರಾ?” ಎಂದಿದ್ದಾರೆ. ಇದನ್ನೂ ಓದಿ:ಜಸ್ವಂತ್ ಗಿಲ್ ಬಯೋಪಿಕ್‌ನಲ್ಲಿ ಅಕ್ಷಯ್ ಕುಮಾರ್

    ಸದ್ಯ ಪವಿತ್ರಾ ಲೋಕೇಶ್  ತೆಲುಗು ಭಾಷೆಯ ಚಲನಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದು, ಹಳೆ ಶೂಟಿಂಗ್ ‌ನ ಪ್ಯಾಚ್ ವರ್ಕ್‌ಗೆ ಹೋಗಿದ್ದಾರಂತೆ. ಅವರು ಯಾವ ಸಿನಿಮಾದ ಶೂಟಿಂಗ್ ನಲ್ಲಿ ಇದ್ದಾರೆ ಎನ್ನುವುದು ತಾಯಿಗೆ ಗೊತ್ತಿಲ್ಲವಂತೆ. “ಯಾವ ಚಿತ್ರ ಏನು ಎಂಬುದು ನನಗೆ ಗೊತ್ತಿಲ್ಲ. ಜುಲೈ5 ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮ ಇದೆ. ಅದಕ್ಕೆ ಬರುವುದಾಗಿ ಹೇಳಿದ್ದಾಳೆ. ಇದಕ್ಕಿಂತ ನನಗೆ ಏನೂ ಗೊತ್ತಿಲ್ಲ. ಮಾಧ್ಯಮಗಳ ಮುಂದೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ” ಎಂದಿದ್ದಾರೆ ಪವಿತ್ರ ಲೋಕೇಶ್ ತಾಯಿ ಪಾರ್ವತಿ ಲೋಕೇಶ್.

    Live Tv

  • ಪವಿತ್ರಾ ಲೋಕೇಶ್ 3ನೇ ಮದುವೆ ಗಾಸಿಪ್ : ಕಾನೂನು ಸಮರಕ್ಕೆ ಮುಂದಾದ ನಟಿ

    ಪವಿತ್ರಾ ಲೋಕೇಶ್ 3ನೇ ಮದುವೆ ಗಾಸಿಪ್ : ಕಾನೂನು ಸಮರಕ್ಕೆ ಮುಂದಾದ ನಟಿ

    ಳೆದ ಒಂದು ವಾರದಿಂದ ಕನ್ನಡದ ಖ್ಯಾತ ನಟಿ ಪವಿತ್ರಾ ಲೋಕೇಶ್ ಅವರ ವೈಯಕ್ತಿಕ ಜೀವನದ ಕುರಿತಾಗಿ ಅಂತೆ-ಕಂತೆ ಕಥೆಗಳು ಕೇಳಿ ಬರುತ್ತಿವೆ. ಅದರಲ್ಲೂ ಅವರ ದಾಂಪತ್ಯ ಜೀವನ ಮುರಿದು ಬಿದ್ದಿದೆ ಎಂದು, ಅವರು ಮತ್ತೊಂದು ಮದುವೆ ಆಗಿದ್ದಾರೆ ಅಂತಲೋ ಜೊತೆಗೆ ತೆಲುಗಿನ ಖ್ಯಾತ ನಟ ನರೇಶ್ ಅವರೊಂದಿಗೆ ಮದುವೆ ಕೂಡ ಆಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಬರೆಯಲಾಗುತ್ತಿದೆ ಎಂದು ಅವರು ಮೈಸೂರಿನಲ್ಲಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಪವಿತ್ರ ಲೋಕೇಶ್ ಅವರ ಹೆಸರಿನಲ್ಲೂ ಕೆಲವರು ನಕಲಿ ಖಾತೆಗಳನ್ನು ತೆರೆದಿದ್ದಾರಂತೆ. ಆ ಖಾತೆಗಳಲ್ಲಿ  ಕಳೆದ ಎರಡು ವರ್ಷಗಳಿಂದ ಪತಿ ಸುಚೇಂದ್ರ ಪ್ರಸಾದ್ ಅವರ ಜೊತೆ ಪವಿತ್ರಾ ಲೋಕೇಶ್ ಇಲ್ಲವೆಂದು , ನರೇಶ್ ಅವರ ಜೊತೆ ಲೀವ್ ಇನ್ ಸಂಬಂಧ ಹೊಂದಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರಂತೆ. ಈ ಕುರಿತೂ ಅವರ ಸೈಬರ್ ಠಾಣೆಗೆ ದೂರು ದಾಖಲಿಸಿದ್ದಾರೆ. ಮೈಸೂರಿನ ಸೈಬರ್ ಪೊಲೀಸ್ ರು ಎಫ್‍ಐಆರ್ ಕೂಡ ದಾಖಲಿಸಿದ್ದಾರೆ. ಇದನ್ನೂ ಓದಿ: ಈ ಬಾರಿ ಖಾಕಿ ಕಣ್ಗಾವಲಿನಲ್ಲಿ ಬಕ್ರೀದ್ ಆಚರಣೆ

    ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಪವಿತ್ರಾ ಲೋಕೇಶ್, ಬಹುಬೇಡಿಕೆಯ ನಟಿ. ಅವರ ಬಾಳಲ್ಲಿ ದಾಂಪತ್ಯದ ಬಿರುಗಾಳಿ ಎದ್ದಿದೆ ಎಂದು ಹಲವು ದಿನಗಳಿಂದ ಸುದ್ದಿಗಳು ಹರಿದಾಡುತ್ತಿವೆ. ಅದಕ್ಕಾಗಿಯೇ ಅವರು ಸೈಬರ್ ಕ್ರೈಂ ಠಾಣೆಗೆ ಮೊರೆ ಹೋಗಿದ್ದಾರೆ.

    Live Tv

  • ಸಿನಿ ಶುಕ್ರವಾರ ‘ವೆಡ್ಡಿಂಗ್ ಗಿಫ್ಟ್’ ಚಿತ್ರದಿಂದ ಪ್ರೇಕ್ಷಕರಿಗೆ ಡ್ಯುಯೆಟ್ ಸಾಂಗ್ ಗಿಫ್ಟ್

    ಸಿನಿ ಶುಕ್ರವಾರ ‘ವೆಡ್ಡಿಂಗ್ ಗಿಫ್ಟ್’ ಚಿತ್ರದಿಂದ ಪ್ರೇಕ್ಷಕರಿಗೆ ಡ್ಯುಯೆಟ್ ಸಾಂಗ್ ಗಿಫ್ಟ್

    ಕೆಲವು ಸಿನಿಮಾಗಳ ಟೈಟಲ್‍ಗಳೇ ಸಿನಿಮಾದತ್ತ ವಿಶೇಷ ಗಮನ ಹರಿಸುವಂತೆ ಮಾಡುತ್ತವೆ. ಅದರ ಅಪ್ಡೇಟ್‍ಗಳನ್ನು ನೋಡುವಂತೆ ಮಾಡುತ್ತೆ. ಅಂತಹ ಸಿನಿಮಾಗಳ ಪೈಕಿ ‘ವೆಡ್ಡಿಂಗ್ ಗಿಫ್ಟ್’ ಕೂಡ ಒಂದು. ವಿಕ್ರಂ ಪ್ರಭು ಚೊಚ್ಚಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ಮಾಣ ಸಾಹಸಕ್ಕೂ ಇಳಿದಿರುವ ಚಿತ್ರ ‘ವೆಡ್ಡಿಂಗ್ ಗಿಫ್ಟ್’. ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿರುವ ಈ ಚಿತ್ರದ ಚಿತ್ರೀಕರಣ ಮುಗಿಸಿ ಒಂದೊಂದೇ ಸ್ಯಾಂಪಲ್‍ಗಳ ಮೂಲಕ ಎಲ್ಲರ ಚಿತ್ತ ಸೆಳೆಯುತ್ತಿದೆ.

    ‘ಮೊದಲ ಪ್ರೀತಿಯ ಪಯಣ’ ಹಾಡಿನ ಬಿಡುಗಡೆಯಾದ ಮೇಲೆ ‘ವೆಡ್ಡಿಂಗ್ ಗಿಫ್ಟ್’ ಚಿತ್ರದ ಬಗ್ಗೆ ಗಾಂಧೀನಗರದಲ್ಲಿ ಟಾಕ್ ಜೋರಾಗಿದೆ. ಸಾಂಗ್, ಕ್ವಾಲಿಟಿ, ಮ್ಯೂಸಿಕ್, ಮೇಕಿಂಗ್ ಎಲ್ಲದರಲ್ಲೂ ನೋಡುಗರ ಮನಸೂರೆ ಮಾಡಿದೆ. ಇದೀಗ ಮೊದಲ ಹಾಡಿಗೆ ಸಿಕ್ಕಾಪಟ್ಟೆ ಮೆಚ್ಚುಗೆ ಬಂದ ಮೇಲೆ ಚಿತ್ರದ ಬಹುನಿರೀಕ್ಷಿತ ಡ್ಯುಯೆಟ್ ಸಾಂಗ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯ ಸವಿ ಇರುವ ಈ ಹಾಡು ಇದೇ ಸಿನಿ ಶುಕ್ರವಾರ ರಿಲೀಸ್ ಆಗುತ್ತಿದೆ. ಬಾಲಚಂದ್ರ ಪ್ರಭು ಮ್ಯೂಸಿಕ್ ಮೊದಲ ಹಾಡಿನಲ್ಲೇ ಕಮಾಲ್ ಮಾಡಿದೆ. ಇದೀಗ ಎರಡನೇ ಹಾಡು ಬಿಡುಗಡೆಯಾಗುತ್ತಿದ್ದು, ನಿರೀಕ್ಷೆ ಕೂಡ ಹೆಚ್ಚಿಸಿದೆ. ಇದನ್ನೂ ಓದಿ: ಮದುವೆ, ಪಾರ್ಟಿ ಸಮಾರಂಭಕ್ಕೆ ಗನ್ ನಿಷೇಧ

    ‘ವೆಡ್ಡಿಂಗ್ ಗಿಫ್ಟ್’ ಥ್ರಿಲ್ಲರ್ ಜಾನರ್ ಸಿನಿಮಾ. ಹೆಣ್ಣುಮಕ್ಕಳು ಕಾನೂನನ್ನೇ ಅಸ್ತ್ರವಾಗಿಸಿಕೊಂಡು ಗಂಡು ಸಂತತಿಯನ್ನು ವಿನಾ ಕಾರಣ ಕಷ್ಟದ ಕಮರಿಗೆ ತಳ್ಳುತ್ತಿದ್ದಾರೆ. ಮೂಲ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇಂಥಾ ಸೂಕ್ಷ್ಮ ಎಳೆ ಮತ್ತು ಮನೋರಂಜನೆಯ ಎಲಿಮೆಂಟುಗಳೊಂದಿಗೆ ಚಿತ್ರ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ನಿಶಾನ್, ಸೋನುಗೌಡ ನಾಯಕ ಹಾಗೂ ನಾಯಕಿ.

    ನಟನೆಯಿಂದ ದೂರ ಉಳಿದಿದ್ದ ಪ್ರೇಮ ಈ ಚಿತ್ರದ ಮೂಲಕ ಮತ್ತೆ ಕಂಬ್ಯಾಕ್ ಮಾಡಿರೋದು ‘ವೆಡ್ಡಿಂಗ್ ಗಿಫ್ಟ್’ ವಿಶೇಷತೆಗಳಲ್ಲೊಂದು. ಪವಿತ್ರಾ ಲೋಕೇಶ್, ಅಚ್ಯುತ್ ಕುಮಾರ್ ಸೇರಿದಂತೆ ಹಲವು ಕಲಾವಿದರು ತಾರಾಬಳಗವನ್ನು ಈ ಸಿನಿಮಾ ಹೊಂದಿದೆ. ಉದಯ್ ಲೀಲಾ ಛಾಯಾಗ್ರಹಣ, ಬಾಲಚಂದ್ರ ಪ್ರಭು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಇದನ್ನೂ ಓದಿ: ಸರ್ಕಾರಿ ಶಾಲೆ ಬಾಗಿಲು ಮುರಿದು ಪುಂಡರ ಎಣ್ಣೆ ಪಾರ್ಟಿ

  • ಇದಕ್ಕೆ ಉತ್ತರ ದೇವರೇ ಕೊಡಬೇಕು: ಪವಿತ್ರ ಲೋಕೇಶ್

    ಇದಕ್ಕೆ ಉತ್ತರ ದೇವರೇ ಕೊಡಬೇಕು: ಪವಿತ್ರ ಲೋಕೇಶ್

    ಬೆಂಗಳೂರು: ದೊಡ್ಮನೆ ಹುಡುಗ ನಮ್ಮೊಂದಿಗೆ ಇರಬೇಕಾಗಿತ್ತು. ಅವರಿದ್ದರೇನೆ ನಮಗೆಲ್ಲ ಸಂತೋಷ. ಇದೀಗ ಈ ರೀತಿ ಆಗಿದೆ, ಇದಕ್ಕೆಲ್ಲ ಉತ್ತರ ದೇವರೇ ಕೊಡಬೇಕೆಂದು ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರ ಅಗಲಿಕೆಗೆ ನಟಿ ಪವಿತ್ರ ಲೋಕೇಶ್ ಸಂತಾಪ ಸೂಚಿಸಿದ್ದಾರೆ.

    PUNEET RAJKUMAR

    ಪಬ್ಲಿಕ್ ಟಿವಿ ಜೊತೆ ಮಾತನಾಡಿದದ ಅವರು, ಪುನೀತ್ ಅವರದ್ದು ಚಿಕ್ಕ ವಯಸ್ಸು ಆದರೆ ಇದೀಗ ಈ ರೀತಿ ಆಗಿದೆ ಈ ಬಗ್ಗೆ ನಾವು ಯಾರನ್ನು ಕೇಳುವುದು? ಇದಕ್ಕೆಲ್ಲ ಉತ್ತರ ಮಾತ್ರ ದೇವರೇ ಕೊಡಬೇಕು. ದೊಡ್ಮನೆ ಅವರು ನಮ್ಮೊಂದಿಗೆ ಚಿತ್ರರಂಗದಲ್ಲಿ ಇದ್ದರೆ ನಮಗೆ ಒಂದು ರೀತಿಯ ಧೈರ್ಯ ಎಂದರು. ಇದನ್ನೂ ಓದಿ: ಅಪ್ಪು ಅಗಲಿಕೆ ಬಗ್ಗೆ ಶಿವಣ್ಣ ಸುದೀಪ್‍ಗೆ ಹೇಳಿದ್ದೇನು?

    ಪುನೀತ್ ಅವರೊಂದಿಗೆ ನಾನು ಆಕಾಶ್ ಸಿನಿಮಾದಲ್ಲಿ ನಟಿಸಿದ್ದೇನೆ. ತುಂಬಾ ಒಳ್ಳೆಯ ನಟ ಅವರೊಬ್ಬ ಜಂಟಲ್‍ಮ್ಯಾನ್ ಅವರಂತಹ ಒತ್ತಮ ಮನೋಭಾವದ ಇನ್ನೊಬ್ಬ ಮನುಷ್ಯನನ್ನು ನಾವು ನೋಡಿಲ್ಲ. ಅಷ್ಟು ದೊಡ್ಡ ನಟನಾಗಿದ್ದರೂ ಕೂಡ ಎಲ್ಲರೊಂದಿಗೆ ತುಂಬಾ ಅನ್ಯೋನ್ಯತೆಯಿಂದ ಇದ್ದರು. ಎಲ್ಲರೊಂದಿಗೆ ಬೆರೆತು ಉತ್ತಮ ಸಿನಿಮಾಗಳನ್ನು ಮಾಡುತ್ತಿದ್ದರು ಎಂದು ಪುನೀತ್ ಅವರನ್ನು ನೆನಪಿಸಿಕೊಂಡರು. ಇದನ್ನೂ ಓದಿ: ಅಪ್ಪು ಅಗಲಿಕೆ ವಿಚಾರ ಸೋದರತ್ತೆಗೆ ಗೊತ್ತೆ ಇಲ್ಲ