ಕನ್ನಡದ ಸಿನಿಮಾರಂಗದಲ್ಲಿ ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದ ಆದಿ ಲೋಕೇಶ್ (Adi Lokesh) ಅವರು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಮತ್ತೆ ಟಿವಿ ಪರದೆಗೆ ಖಡಕ್ ವಿಲನ್ ಆದಿ ಲೋಕೇಶ್ ಅವರು ಮರಳಿದಿದ್ದಾರೆ. ಇದನ್ನೂ ಓದಿ:ಅಭಿಮಾನಿ ವರ್ತನೆಗೆ ಬೆಚ್ಚಿಬಿದ್ದ ವಿಜಯ್ ದೇವರಕೊಂಡ
‘ಪೂಜಾರಿ’ (Poojari) ಸಿನಿಮಾದಲ್ಲಿ ನೀತುಗೆ ನಾಯಕನಾಗಿ ಆದಿ ಲೋಕೇಶ್ ನಟಿಸಿದ್ದರು. ಆದರೆ ಹೀರೋಗಿಂತ ಖಳನಟನ ಪಾತ್ರಗಳು ಅವರ ಕೈ ಹಿಡಿದಿತ್ತು. ಕನ್ನಡದ ಸಾಕಷ್ಟು ಸ್ಟಾರ್ ನಟರಿಗೆ ವಿಲನ್ ಆಗಿ ಆದಿ ಲೋಕೇಶ್ ಅಬ್ಬರಿಸಿದ್ದರು. ಕೊರೋನಾ ಬಳಿಕ ಗರುಡ, ಚಾಂಪಿಯನ್, ಪ್ರಭುತ್ವ, ಸೇರಿದಂತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಮಿಂಚಿದ್ದರು. ಈಗ ‘ಒಲವಿನ ನಿಲ್ದಾಣ’ (Olavina Nildana) ಸೀರಿಯಲ್ ಮೂಲಕ ಪವಿತ್ರಾ ಲೋಕೇಶ್ ಸಹೋದರ, ಆದಿ ಟಿವಿ ಪರದೆಗೆ ಕಮ್ ಬ್ಯಾಕ್ ಆಗುತ್ತಿದ್ದಾರೆ. ಬಿಗ್ ಬಾಸ್ ನಂತರ ಮತ್ತೆ ಕಿರುತೆರೆಗೆ ಮರಳಿದ್ದಾರೆ.
ಸಿನಿಮಾದಲ್ಲಿ ಒಳ್ಳೆಯ ಅವಕಾಶವಿದ್ದರೂ ಈ ಸೀರಿಯಲ್ ಒಪ್ಪಿಕೊಂಡಿಡ್ಯಾಕೆ ಅಂತಾ ಆದಿ ಲೋಕೇಶ್ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಶ್ರುತಿ ನಾಯ್ಡು ಅವರು ನನ್ನ ಒಳ್ಳೆಯ ಸ್ನೇಹಿತೆ, ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ನಟಿಸಲು ಹೇಳಿದಾಗ ಖುಷಿಯಿಂದ ಒಪ್ಪಿಕೊಂಡೆ, ನನ್ನ ಪಾತ್ರ ಕೂಡ ಚೆನ್ನಾಗಿದೆ. ಡಿಫರೆಂಟ್ ಎಂದು ಎನಿಸಿದಕ್ಕೆ ಈ ಪಾತ್ರ ಮಾಡಲು ಒಪ್ಪಿಕೊಂಡೆ. ಶ್ರುತಿ ನಾಯ್ಡು ಅವರ ತಂಡ ಅದ್ಭುತವಾಗಿ ಕೆಲಸ ಮಾಡ್ತಿದ್ದಾರೆ. ಈ ಸೀರಿಯಲ್‌ನ ನನ್ನ ಮೊದಲ ಪ್ರೋಮೋ ನೋಡಿ ತುಂಬಾ ಇಷ್ಟ ಆಯ್ತು. ಯಾವುದೇ ಸಿನಿಮಾಗೂ ಕಮ್ಮಿ ಇಲ್ಲದಂತೆ ಕೆಲಸ ಮಾಡಿ ತೋರಿಸಿದ್ದಾರೆ. ಅದರಲ್ಲಿ ಅವರ ಶ್ರಮ ಕಾಣ್ತಿದೆ ಎಂದು ಆದಿ ಲೋಕೇಶ್ ಹೇಳಿದ್ದಾರೆ. ಇದರಲ್ಲಿ ನನ್ನ ವಿಶೇಷ ಪಾತ್ರ, ಸೀರಿಯಲ್ ನೋಡಿ ನಿಮಗೆ ಅಚ್ಚರಿ ಮೂಡಿಸುತ್ತೆ. ತುಂಬಾ ಟ್ವಿಸ್ಟ್ ಇದೆ ಎಂದು ಆದಿ ಲೋಕೇಶ್ ಹೇಳಿದ್ದಾರೆ.
ಶ್ರುತಿ ನಾಯ್ಡು (Shruti Naidu) ನಿರ್ಮಾಣದ ಸೀರಿಯಲ್ ‘ಒಲವಿನ ನಿಲ್ದಾಣ’ವು 300 ಎಪಿಸೋಡ್‌ಗಳನ್ನ ಪೂರೈಸಿದೆ. ತಾರಿಣಿ- ಸಿದ್ಧಾಂತ್ ಕಥೆ ಫ್ಯಾನ್ಸ್ ಖುಷಿ ಕೊಟ್ಟಿದೆ. ಈ ಕಥೆಯಲ್ಲಿ ಹೊಸ ಟ್ವಿಸ್ಟ್ ಕೊಡೊದಕ್ಕೆ ಆದಿ ಲೋಕೇಶ್ ಎಂಟ್ರಿಯಾಗಿದೆ. ಪ್ರೋಮೋ ಕೂಡ ರಿವೀಲ್ ಆಗಿದೆ. ಖಡಕ್ ಆಗಿ ಆದಿ ಲೋಕೇಶ್ ಎಂಟ್ರಿ ಕೊಟ್ಟಿದ್ದಾರೆ. ಸೀರಿಯಲ್ ಪ್ರೋಮೊಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು, ನಟ ಆದಿ ರೋಲ್ ಜುಲೈ 20ರ ಸಂಜೆ 6ಕ್ಕೆ ಪ್ರಸಾರವಾಗಲಿದೆ.
ಈ ಸೀರಿಯಲ್‌ನಲ್ಲಿ ವಿಶೇಷ ಪಾತ್ರದಲ್ಲಿ ಆದಿ ಲೋಕೇಶ್ ನಟಿಸುತ್ತಿದ್ದಾರೆ. ತಾರಿಣಿ- ಸಿದ್ಧಾಂತ್ ಬದುಕಿನಲ್ಲಿ ಏನೆಲ್ಲಾ ಟ್ವಿಸ್ಟ್ ಇರಲಿದೆ ಕಾದು ನೋಡಬೇಕಿದೆ. ಒಲವಿನ ನಿಲ್ದಾಣದಲ್ಲಿ ಅಮಿತಾ ಕುಲಾಲ್, ಅಕ್ಷಯ್ ನಾಯಕ್, ಮಂಡ್ಯ ರಮೇಶ್, ಅಶೋಕ್, ಪ್ರಥಮ ಪ್ರಸಾದ್ ನಟಿಸಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]






























