Tag: Pavithra Kadthala

  • ಪಬ್ಲಿಕ್ ಟಿವಿ ವರದಿಗಾರ್ತಿ ಪವಿತ್ರ ಕಡ್ತಲಗೆ ಲಯನ್ಸ್ ಮಾಧ್ಯಮ ಪ್ರಶಸ್ತಿ

    ಪಬ್ಲಿಕ್ ಟಿವಿ ವರದಿಗಾರ್ತಿ ಪವಿತ್ರ ಕಡ್ತಲಗೆ ಲಯನ್ಸ್ ಮಾಧ್ಯಮ ಪ್ರಶಸ್ತಿ

    ಬೆಂಗಳೂರು: ಪಬ್ಲಿಕ್ ಟಿವಿಯ ಮೆಟ್ರೋ ಬ್ಯೂರೋ ಮುಖ್ಯಸ್ಥೆ ಪವಿತ್ರ ಕಡ್ತಲ ಅವರಿಗೆ ಲಯನ್ಸ್ ಮಾಧ್ಯಮ ಪ್ರಶಸ್ತಿ ಲಭಿಸಿದೆ.

    ರಾಷ್ಟ್ರೀಯ ಪತ್ರಿಕೋದ್ಯಮ ದಿನಾಚರಣೆ ಪ್ರಯುಕ್ತ ಇಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ-317 ಎಫ್ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ರಾಷ್ಟ್ರೀಯ ಪತ್ರಿಕೋದ್ಯಮ ದಿನಾಚರಣೆಯನ್ನ ಆಯೋಜನೆ ಮಾಡಿತ್ತು.

    ಕೊರೊನಾ ಸಮಯದಲ್ಲಿ ವಿಶೇಷ ವರದಿಗಳ ಮೂಲಕ ಜನರ ಮತ್ತು ಸರ್ಕಾರದ ಗಮನ ಸೆಳೆದ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಒಂದು ದಶಕದಿಂದ ವಿಶೇಷ ಸಾಧನೆ ಮಾಡಿರೋ ಪವಿತ್ರ ಕಡ್ತಲ ಅವರಿಗೆ ಗಣ್ಯರು ಲಯನ್ಸ್ ಮಾಧ್ಯಮ ಪ್ರಶಸ್ತಿ ನೀಡಿ ಗೌರವ ಸಲ್ಲಿಸಿದ್ರು.

    ಕಾರ್ಯಕ್ರಮದಲ್ಲಿ ಜಯದೇವ ಆಸ್ಪತ್ರೆ ನಿರ್ದೇಶಕರಾದ ಡಾ. ಸಿ.ಎನ್ ಮಂಜುನಾಥ್, ಲಯನ್ಸ್ ಕ್ಲಬ್‍ನ ದೀಪಕ್ ಸುಮನ್, ವಿವಿ ಕೃಷ್ಣರೆಡ್ಡಿ ಕರ್ನಾಟಕ ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರಾದ ಮುರಳೀಧರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ರು.

    ಇದೇ ವೇಳೆ, ಹಿರಿಯ ಪತ್ರಕರ್ತರಾದ ರವೀಂದ್ರ ಭಟ್, ಶಿವಾನಂದ ತಗಡೂರು, ಶಾಂತಳಾ, ಕಿರಣ್ ಹೆಚ್ ವಿ, ಮಲ್ಲಪ್ಪ, ರಾನಚಂದ್ರ, ಸ್ವಾತಿ , ದೇವಿಡ್ ಟೆನ್ನಿಸನ್ ಮೊದಲಾದವರನ್ನು ಗೌರವಿಸಲಾಯಿತು

  • ಕೆಪಿಸಿಸಿ ಅಧ್ಯಕ್ಷರ ಸ್ಥಾನ ಆಯ್ಕೆ ಕಗ್ಗಂಟು –  ‘ಸಂಗೀತ ಕುರ್ಚಿ’ ಸ್ಪರ್ಧೆ ಆಯೋಜನೆಗೆ ಮನವಿ.!

    ಕೆಪಿಸಿಸಿ ಅಧ್ಯಕ್ಷರ ಸ್ಥಾನ ಆಯ್ಕೆ ಕಗ್ಗಂಟು –  ‘ಸಂಗೀತ ಕುರ್ಚಿ’ ಸ್ಪರ್ಧೆ ಆಯೋಜನೆಗೆ ಮನವಿ.!

    ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆಗಾಗಿ ಫುಲ್ ಪೈಪೋಟಿ ಶುರುವಾಗಿದ್ದು, ನಾನಾ – ನೀನಾ ಅನ್ನೋ ಮೇಲಾಟ ಶುರುವಾಗಿತ್ತು. ಡಿಕೆಗೆ ಬಹುತೇಕ ಪಟ್ಟ ಒಲಿಯೋದು ಖಚಿತ ಅಂತಾ ಗೊತ್ತಿದ್ರೂ, ಟಗರು, ಪರಂ, ಸದಾ ಕೆಂಪು ಕಣ್ಣನ್ನು ದೊಡ್ಡದಾಗಿ ಮಾಡಿಕೊಂಡು ಕನ್‍ಫ್ಯೂಶನ್‍ನಲ್ಲೇ ಇರುವ ಎಂ.ಬಿ.ಪಾಟೀಲ್ ಈಗ ವಿಚಿತ್ರ ಮನವಿಯನ್ನು ಹೈಕಮಾಂಡ್‍ಗೆ ರವಾನಿಸಿದ್ದಾರಂತೆ. ತಿಹಾರ್ ಜೈಲಿಗೆ ಹೋಗಿ ಬಂದ್ರೂ ಬಂಡೆ ಅದೃಷ್ಟ ಕಂಡು ಒಳಗೊಳಗೆ ಕುದ್ದು ಹೋಗಿರುವ ಮೂವರು, ಕೊನೆ ಪ್ರಯತ್ನ ಮಾಡೋಣ ಅಂತಾ ಸಂಗೀತ ಕುರ್ಚಿ ಆಯೋಜನೆ ಮಾಡೋಣ, ಇದ್ರಲ್ಲಿ ವಿನ್ ಆದವನೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟುಬಿಡಿ ಅಂತಾ ಮಗು ಮನಸಿನ ರಾಹುಲ್ ಗಾಂಧಿಗೆ ಮೊದಲು ಮನವಿ ಮಾಡಿಕೊಂಡಿದ್ರಂತೆ. ತೋಳೇರಿಸಿಕೊಂಡು ರಾಹುಲ್ ಗಾಂಧಿ ಕೂಡ ಮಮ್ಮಿ ಅಂತಾ ಸೋನಿಯಾ ಬಳಿ ಇವ್ರ ಮನವಿ ಇಟ್ಟಿದ್ದಾರೆ ಅನ್ನೋ ಸುದ್ದಿಯೂ ಹರಿದಾಡುತ್ತಿದೆ.
    ———–

    ನಿಂಬೆಹಣ್ಣು ಕೊಡ್ಲೇನ್ರಪ್ಪಾ…! ಸಚಿವಕಾಂಕ್ಷಿಗಳಿಗೆ ರೇವಣ್ಣ ಸರ್‍ಪ್ರೈಸ್ ಫೋನ್ ಕಾಲ್..!

    ದೇಕೋ ಏನೋ ಸಚಿವ ಸಂಪುಟ ವಿಸ್ತರಣೆ ಆಗ್ತಿಲ್ಲ, ಬೈ ಎಲೆಕ್ಷನ್‍ನಲ್ಲಿ ಗೆದ್ದ ಶಾಸಕರಂತೂ ಚಾತಕ ಪಕ್ಷಿಯಂತೆ ಕಾದಿದ್ದೇ ಕಾದಿದ್ದು. ಮೋದಿ ಬಂದ್ರೂ, ಅಮಿತ್ ಷಾ ರಾಜ್ಯಕ್ಕೆ ಬಂದ್ಮೇಲೂ ಊಹೂ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಕ್ಕೇ ಇರಲಿಲ್ಲ. ರಾಜಾಹುಲಿಯ ಅಬ್ಬರವೂ ಹೈಕಮಾಂಡ್ ಮುಂದೆ ನಡೆಯಂಗಿಲ್ಲ ಠುಸ್ ಪಟಾಕಿ ಅಂತಾ ಸಚಿವಾಕಾಂಕ್ಷಿಗಳಿಗೂ ಗೊತ್ತಾಗಿ ಬಿಟ್ಟಿದೆ. ಅವ್ರಿಗೂ ಬಿಎಸ್ ವೈ ಮನೆಗೆ ಅಲೆದು ಅಲೆದು ಚಪ್ಪಲಿಯಷ್ಟೇ ಸವೆಯೋದು ಮಾತ್ರ ಅಂತಾ ಗೊತ್ತಾಗಿದೆ. ಸಂಕ್ರಾಂತಿ ಮುಗಿದ್ಮೇಲೆ ಫೈನಲು ಅಂತಾ ಅಂದುಕೊಂಡವರಿಗೆಲ್ಲ ನಿರಾಸೆ ಕಾದಿತ್ತು. ಅತ್ತ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ತೀನಿ ಅಂತಾ ದಾವೋಸ್ ಕಡೆ ಬಿಎಸ್‍ವೈ ಕೋಟು ಗೀಟು ಹಾಕ್ಕೊಂಡ್ರು ಹೊರಟ್ರು. ಇದ್ರಿಂದ ಮತ್ತಷ್ಟು ಉರ್ಕೊಂಡಿರುವ ಅಕಾಂಕ್ಷಿಗಳು ಸಪ್ಪೆ ಮೋರೆಯಲ್ಲಿ ಕೂತುಬಿಟ್ಟಿದ್ದಾರೆ. ಸ್ಯಾಡ್ ಮೂಡ್‍ನಲ್ಲಿರುವ ಇವ್ರಿಗೆಲ್ಲ ಮಾನ್ಯ ರೇವಣ್ಣನವರು ಸರ್‍ಪ್ರೈಸ್ ಕಾಲ್ ಮಾಡಿದ್ದಾರಂತೆ. ಮೈತ್ರಿ ಸರ್ಕಾರ ಉರುಳಿಸಿದ ಬೇಜಾರು ಮನಸಲ್ಲೇ ಇಟ್ಕೊಂಡು, ‘ನೋಡ್ರಪ್ಪ ನಮ್ಗೆ ಕೆಟ್ಟದು ಮಾಡಿದ್ರೂ ನಿಮ್ಗೆ ಒಳ್ಳೆಯದ್ದನ್ನೇ ಬಯಸ್ತೀನಿ. ನಂದು ಸ್ವಾತಿ ನಕ್ಷತ್ರ, ನನ್ನ ನಂಬಿ ನಿಂಬೆಹಣ್ಣು ಕೊಡ್ತೀನಿ ಎಲ್ಲಾ ಸಮಸ್ಯೆನೂ ಫಟಾಫಟ್ ಅಂತಾ ಬಗೆಹರಿಯುತ್ತೆ’ ಅಂತಾ ಸಲಹೆ ಕೊಟ್ರಂತೆ. ಇದು ವ್ಯಂಗ್ಯವೋ ನಿಜವೋ ತಿಳಿಯದಂತೆ ಆಯ್ತು ಬುಡಣ್ಣ ಅಂತಾ ಫೋನ್ ಇಟ್ರಂತೆ ಶಾಸಕರು.

    ———–

    [ಸದಾ ಸೀರಿಯಸ್ ಆಗಿರುವ ಸುದ್ದಿಗಳನ್ನು ಓದಿ, ಓದಿ ನಿಮಗೂ ಬೇಜಾರಾಗಿರುತ್ತೆ. ಸೀರಿಯಸ್ ಓದಿನ ನಡುವೆಯೂ ಸ್ವಲ್ಪ ನವಿರಾದ ಹಾಸ್ಯವೂ ಇರಲಿ ಎಂಬ ಕಾರಣಕ್ಕೆ `ಈ ನ್ಯೂಸ್ ಓದ್ಲೇಬೇಡಿ. ಇದು ತಮಾಷೆಗಾಗಿ..!’ ಅಂಕಣ.]

  • ‘ಸ್ಟೈಲ್ ಐಕಾನ್ ರಾಜಾಹುಲಿ’ ವಿಂಟರ್ ಸೀಸನ್ ಬ್ರ್ಯಾಂಡ್ ಬಟ್ಟೆಗಳಿಗೆ ಅಂಬಾಸಿಡರ್..!

    ‘ಸ್ಟೈಲ್ ಐಕಾನ್ ರಾಜಾಹುಲಿ’ ವಿಂಟರ್ ಸೀಸನ್ ಬ್ರ್ಯಾಂಡ್ ಬಟ್ಟೆಗಳಿಗೆ ಅಂಬಾಸಿಡರ್..!

    [ಸದಾ ಸೀರಿಯಸ್ ಆಗಿರುವ ಸುದ್ದಿಗಳನ್ನು ಓದಿ, ಓದಿ ನಿಮಗೂ ಬೇಜಾರಾಗಿರುತ್ತೆ. ಸೀರಿಯಸ್ ಓದಿನ ನಡುವೆಯೂ ಸ್ವಲ್ಪ ನವಿರಾದ ಹಾಸ್ಯವೂ ಇರಲಿ ಎಂಬ ಕಾರಣಕ್ಕೆ ನಾವು ಈ ವಾರದಿಂದ ‘ಈ ನ್ಯೂಸ್ ಓದ್ಲೇಬೇಡಿ. ಇದು ತಮಾಷೆಗಾಗಿ…!’ ಅಂಕಣ ಆರಂಭಿಸುತ್ತಿದ್ದೇವೆ.]

    ದಾವೋಸ್‍ನಲ್ಲಿರುವ ಬಿಎಸ್‍ವೈ ಮೈನಡುಗುವ ಚಳಿಗೆ ಫುಲ್ ಪ್ಯಾಕ್ ಆಗಿದ್ದಾರೆ. ಸೂಟು ಬೂಟು ಅದ್ರ ಮೇಲೊಂದು ವಿಂಟರ್ ಕೋಟು, ತಲೆಗೊಂದು ಮಫ್ಲರ್, ಕೈಗೆ ಗ್ಲೌಸ್ ಕತ್ತಿನಲ್ಲಿ ಸ್ಟೈಲ್ ಆಗಿ ಹಾಕಿಕೊಂಡ ಸ್ಕಾರ್ಫ್, ಖಡಕ್ ಲುಕ್‍ಗೆ ಕೂಲಿಂಗ್ ಗ್ಲಾಸ್..! ಥೇಟು ಸಿನ್ಮಾ ಹೀರೋನಾ ಮೀರಿಸೋ ಲುಕ್..!

     ದಾವೋಸ್‍ನಲ್ಲಿ ಬಿಎಸ್‍ವೈ ಅವತಾರದ ಫೋಟೋ ನೋಡಿ ಪಂಚೆ ಮೇಲೇರಿಸಿಕೊಂಡು ಸಿದ್ದರಾಮಯ್ಯ ಕೂಡ ಯಡಿಯೂರಪ್ಪ ಸಣ್ಣವಯಸ್ಸಿನ ಹುಡ್ಗ ಕಂಡಂಗೆ ಕಾಣ್ಸಲ್ವೇ ಅಂತಾ ಆಪ್ತರ ಬಳಿ ಹೇಳ್ಕೊಂಡಿದ್ರಂತೆ. ಅದ್ ಬಿಟ್ಹಾಕಿ ಯಡಿಯೂರಪ್ಪ ಮೈನಡುಗಿಸುವ ಚಳಿಯಲ್ಲೂ ಸ್ಟೈಲ್ ಆಗಿ ಪೋಸ್ ಕೊಡೋದನ್ನು ನೋಡಿ ಕೆಲ ಬಟ್ಟೆಶಾಪ್‍ನವರು ಕರ್ನಾಟಕದ ವಿಂಟರ್ ಸೀಸನ್ ಬಟ್ಟೆಗಳಿಗೆ ರಾಜಾಹುಲಿನೇ ಬ್ರ್ಯಾಂಡ್ ಅಂಬಾಸಿಡರ್ ಮಾಡಿಬಿಡುವ ಅಂತಾ ನಿರ್ಧಾರ ಮಾಡಿದ್ದಾರಂತೆ. ಬಿಎಸ್‍ವೈ ವೆರೈಟಿ ವೆರೈಟಿ ಫೋಟೋ ಅವ್ರ ಲುಕ್ ಕೊಟ್ಟ ಫೋಟೋಗಳನ್ನೆಲ್ಲ ಎತ್ತಿಟ್ಟುಕೊಂಡಿರುವ ಕೆಲ ಬ್ರ್ಯಾಂಡ್ ಬಟ್ಟೆ ಶೋ ರೂಂನವರು ನೆಕ್ಸ್ಟ್ ಇಯರ್ ಚಳಿಗಾಲಕ್ಕೆ ರಾಜಾಹುಲಿ ಕಾಲ್ ಶೀಟ್ ತೆಗೆದುಕೊಳ್ಳೋಕೆ ರೆಡಿಯಾಗಿದ್ದಾರಂತೆ. ಬಿಎಸ್ ವೈ ಖಡಕ್ ಲುಕ್‍ಗೆ ಮಾಡೆಲ್‍ಗಳೆಲ್ಲ ಹುಣಸೆ ಹಣ್ಣು ತಿಂದವರಂಗೆ ಮುಖವೆಲ್ಲ ಹುಳಿ ಹುಳಿ ಮಾಡ್ಕೊಂಡವ್ರಂತೆ..! ಆದ್ರೇ ರಾಜಾಹುಲಿನ ಚಳಿಗಾಲದ ಸೀಸನ್ ಬಟ್ಟೆಗೆ ಬ್ರ್ಯಾಂಡ್ ಅಂಬಾಸಿಡರ್ ಮಾಡೊದು ಓಕೆ, ಆದ್ರೇ ಅವ್ರ ಫೋಟೋ ತೆಗೆಯುವಾಗ ಸ್ಮೈಲ್ ಪ್ಲೀಸ್ ಅಂತಾ ಹೇಳುವ ಧಮ್ ಇರುವ ಫೋಟೋಗ್ರಾಫರ್ ಯಾರಿದ್ದಾರೆ ಅಂತಾನೂ ಭರ್ಜರಿ ಹುಡುಕಾಟ ನಡೆದಿಯಂತೆ..!

    ಲಾಸ್ಟ್ ಕಿಕ್- ಚಳಿಗಾಲಕ್ಕೆ ಯಡಿಯೂರಪ್ಪ ಇರಲಿ… ಬೇಸಿಗೆ ಬಟ್ಟೆಗೆ ಪಂಚೆ ಉಟ್ಕೊಂಡು ನಾನೇ ಬ್ರ್ಯಾಂಡ್ ಅಂಬಾಸಿಡರ್ ಅಂತಾ ಟಗರು ಹೇಳ್ಕೊಂಡು ಓಡಾಡ್ತಿದೆಯಂತೆ..!

    ———–

    ‘ಗೂಳಿ’ಯಿಂದ ಎಸ್ಕೇಪ್ ಆದ ರೇಣುಕಾಚಾರ್ಯರಿಂದ ಪಶುಸಂಗೋಪನೆ ಇಲಾಖೆ ಮೇಲೆ ಕಣ್ಣು..!

    ಪದೇ ಪದೇ ಗೂಳಿಯಿಂದ ಗುಮ್ಮಿಸಿಕೊಳ್ಳುವ ಹೊತ್ತಿಗೆ ಟಪಕ್ ಅಂತಾ ಹೆಂಗೋ ಹಾರಿ ಎಸ್ಕೇಪ್ ಆಗುವ ಹೊನ್ನಾಳಿ ಹೀರೋ ರೇಣುಕಾಚಾರ್ಯ ಈ ಹಿಂದೆ ತನಗೆ ಸಚಿವ ಸ್ಥಾನ ಸಿಕ್ಕಿಲ್ಲ ಅಂತಾ ಶ್ಯಾನೆ ಬೇಸರ ಮಾಡ್ಕೊಂಡಿದ್ರು. ಬೇಜಾರಿಲ್ಲ ಬೇಜಾರಿಲ್ಲ ಅಂತಾ ಮಾಧ್ಯಮದ ಮುಂದೆ ಹೇಳ್ತಾ ಇದ್ರೂ ಅವತ್ತೆಲ್ಲ ಕಣ್ಣೀರು ಕಾಣಬಾರದು ಅಂತಾ ಕಪ್ಪು ಕನ್ನಡಕ ಹಾಕಿಕೊಂಡು ಓಡಾಡಿದ್ದೇ ಓಡಾಡಿದ್ದು. ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆ ಕೊಟ್ಟು ಕಣ್ಣೊರೆಸಿಕೋ ಅಂತಾ ಕರ್ಚೀಫು ಕೂಡ ಕೊಟ್ರಂತೆ ಯಡಿಯೂರಪ್ಪ. ಗೂಳಿಯಿಂದ ಗುಮ್ಮಿಸಿಕೊಂಡು ಓಡಾಡು ನೀನು ಅಂತಾ ಬಿಎಸ್‍ವೈ ಬೈದ್ರೂ ಅಳುಮುಖದ, ಒಮ್ಮೊಮ್ಮೆ ಕೆಂದಾವರೆಯಂತೆ ಅರಳಿದಂತೆ ಕಾಣುವ ರೇಣುಕಾಚಾರ್ಯ ಕಂಡ್ರೆ ಬಿಎಸ್‍ವೈಗೂ ಒಂಥರ ಪ್ರೀತೀನೆ..! ಬಿಎಸ್‍ವೈ ಮನೆಗೆ ಸೆಕ್ಯೂರಿಟಿಯವರು ದಿನಾ ಇನ್ ಟೈಂಗೆ ಬರ್ತಾರೋ ಇಲ್ವೋ ಆದ್ರೇ ರೇಣುಕಾಚಾರ್ಯ ಮಾತ್ರ ಡೈಲಿ ಸಿಎಂ ಮನೆಗೆ ಬೆಳಗ್ಗೆ ಒಂದ್ಸಲ ಸಂಜೆ ಒಂದ್ಸಲ ಬಂದ್ ಹೋಗ್ತಾರೆ. ಇಂತಿಪ್ಪ ರೇಣುಕಾಚಾರ್ಯಗೆ ಈಗ ಮತ್ತೆ ಸಂಪುಟ ವಿಸ್ತರಣೆ ಟೈಂನಲ್ಲಿ ಲೈಟ್ ಆಗಿ ಆಸೆ ಚಿಗುರಿಕೊಳ್ತಿದೆಯಂತೆ. ಗೂಳಿಯಿಂದ ಕೊನೆಕ್ಷಣದಲ್ಲಿ ಪದೇ ಪದೇ ನಾನು ಎಸ್ಕೇಪ್ ಆಗೋದನ್ನು ನೋಡಿ ನಮ್ ಸಾಹೇಬ್ರು ಇಂಪ್ರೆಸ್ ಆಗವ್ರೇ, ಈ ಬಾರಿ ಹೇಳೋಕ್ಕಾಗಲ್ಲ, ಪಶುಸಂಗೋಪನೆ ಇಲಾಖೆ ಆಫರ್ ಕೊಟ್ರೂ ಕೊಡಬಹುದು ಅಂತಾ ರೇಣುಕಾಚಾರ್ಯ ಆಪ್ತರ ಬಳಿ ಹೇಳ್ಕೊಂಡು ಓಡಾಡ್ತಿದ್ದಾರೆ ಅಂತಾ ಹೊನ್ನಾಳಿಯಲ್ಲೇ ಸುದ್ದಿಯೋ ಸುದ್ದಿ..!

    [ಈ ಬರಹದ ಹಕ್ಕು ಮತ್ತು ಇದರಲ್ಲಿ ಪ್ರಕಟವಾಗಿರುವ ಅಭಿಪ್ರಾಯಗಳು ಲೇಖಕರದ್ದು.]