Tag: Pavana

  • ನೇರವಾಗಿ ಒಟಿಟಿಯಲ್ಲಿ ರಿಲೀಸ್ ಪಾವನಾ ನಟನೆಯ ‘ರುದ್ರಿ’ ಸಿನಿಮಾ

    ನೇರವಾಗಿ ಒಟಿಟಿಯಲ್ಲಿ ರಿಲೀಸ್ ಪಾವನಾ ನಟನೆಯ ‘ರುದ್ರಿ’ ಸಿನಿಮಾ

    ಗಾಗಲೇ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ, ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ‘ರುದ್ರಿ’ (Rudri) ಸಿನಿಮಾ ನೇರವಾಗಿ ಇಂದು ಬಿಡುಗಡೆ ಆಗಿದೆ. ನೇರವಾಗಿ ‘ನಮ್ಮ ಫ್ಲಿಕ್ಸ್ ಕನ್ನಡದ ಓಟಿಟಿ ಆಪ್’ (NAMMAFLIX) ನಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಿಸಿತ್ತು. ಅದರಿಂದ ನಿರ್ಮಾಪಕರು ಒಟಿಟಿಯಲ್ಲಿ ರಿಲೀಸ್ ಮಾಡಿದ್ದಾರೆ.

    ಗೊಂಬೆಗಳ ಲವ್ ಖ್ಯಾತಿಯ ಪಾವನಾ (Pavana) ಈ ಸಿನಿಮಾದಲ್ಲಿ ಪ್ರಧಾನ ಪಾತ್ರ ಮಾಡಿದ್ದು, ಬಡಿಗೇರ ರಾಘವೇಂದ್ರ (Badigera Raghavendra) ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ. ಈಗಾಗಲೇ ಠಾಗೋರ್ ಅಂತಾರಾಷ್ಟ್ರೀಯ ಚಿತ್ರೋತ್ಸವ ಸೇರಿದಂತೆ ದೇಶ ವಿದೇಶಗಳ ಚಿತ್ರೋತ್ಸವದಲ್ಲಿ ರುದ್ರಿ ಭಾಗಿಯಾಗಿದೆ. ಅಲ್ಲಿ ಪ್ರದರ್ಶನ ಕಂಡಿದೆ. ಹಲವಾರು ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ.

    ರುದ್ರಿ ಸಿನಿಮಾ 90ರ ದಶಕದ ಕಥೆ. ಆ ಕಾಲದಲ್ಲಿ ಇನ್ನೂ ಮಹಿಳೆಯರಿಗೆ ತಮ್ಮ ಮೇಲಿನ ದೌರ್ಜನ್ಯವನ್ನು ಹೇಳಿಕೊಳ್ಳುವಂತಹ ಧೈರ್ಯವಿರಲಿಲ್ಲ. ಅಂತಹ ಮಹಿಳೆಯೊಬ್ಬರ ಶೋಷಣೆಯ ಕಥೆಯನ್ನು ರುದ್ರಿ ಮೂಲಕ ಹೇಳಲು ಹೊರಟಿದ್ದಾರೆ ನಿರ್ದೇಶಕರು.

    ಸಿ.ಆರ್. ಮಂಜುನಾಥ್ (Manjunath) ಅವರ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಸಾಧೂ ಕೋಕಿಲಾ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅನನ್ಯ ಭಟ್ ಅವರು ಹಾಡಿಗೆ ಧ್ವನಿಯಾಗಿದ್ದಾರೆ.  ಸುಧಾ ಪ್ರಸನ್ನ ಸೇರಿದಂತೆ ಹಲವು ನುರಿತ ಕಲಾವಿದರ ತಂಡವೇ ತಾರಾಗಣದಲ್ಲಿದೆ.

  • ವಿನೋದ್ ಪ್ರಭಾಕರ್ ಅಭಿನಯದ ‘ಫೈಟರ್’ ಟೀಸರ್ ಗೆ ಫ್ಯಾನ್ಸ್ ಫಿದಾ

    ವಿನೋದ್ ಪ್ರಭಾಕರ್ ಅಭಿನಯದ ‘ಫೈಟರ್’ ಟೀಸರ್ ಗೆ ಫ್ಯಾನ್ಸ್ ಫಿದಾ

    ರಿ ಟೈಗರ್ ವಿನೋದ್ ಪ್ರಭಾಕರ್ (Vinod Prabhakar) ಅಭಿನಯದ, ನೂತನ್ ಉಮೇಶ್ (Nutan Umesh) ನಿರ್ದೇಶನದ ಹಾಗೂ ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಿಸಿರುವ ‘ಫೈಟರ್’ (Fighter) ಚಿತ್ರದ ಟೀಸರ್ (Teaser) ಇತ್ತೀಚೆಗೆ ಬಿಡುಗಡೆಯಾಯಿತು. ನಿರ್ಮಾಪಕ ಸೋಮಶೇಖರ್ ಅವರ ತಂದೆ ಕೃಷ್ಣಪ್ಪ ಟೀಸರ್ ಬಿಡುಗಡೆ ಮಾಡಿದರು.

    ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ನೂತನ್ ಉಮೇಶ್, ಈ ಚಿತ್ರದ ಶೀರ್ಷಿಕೆಯನ್ನು ವಿನೋದ್ ಪ್ರಭಾಕರ್ ಅವರ ಅಭಿಮಾನಿಗಳೇ ಅನಾವರಣ ಮಾಡಿದ್ದರು.  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಹೂರ್ತಕ್ಕೆ ಆಗಮಿಸಿ ಚಿತ್ರಕ್ಕೆ ಚಾಲನೆ ನೀಡಿದ್ದರು.  ಈಗ ಟೀಸರ ಅನ್ನು ನಿರ್ಮಾಪಕರ ತಂದೆಯವರು ಬಿಡುಗಡೆ ಮಾಡಿದ್ದಾರೆ. ಸದ್ಯದಲ್ಲೇ ಹಾಡುಗಳು ಹಾಗೂ ಟ್ರೈಲರ್ ಹೊರಬರಲಿದ್ದು, ಅಕ್ಟೋಬರ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ. ಫೈಟರ್ ಎಂದರೆ ಹೊಡೆದಾಡುವವನು ಎಂದು ತಿಳಿದುಕೊಳ್ಳುತ್ತಾರೆ. ಆದರೆ ನಮ್ಮ ಫೈಟರ್ ಅನ್ಯಾಯದ ವಿರುದ್ಧ ಹಾಗೂ ತನ್ನ ಕುಟುಂಬಕ್ಕಾಗಿ ಹೋರಾಡುವವನು.‌ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕ ಸೋಮಶೇಖರ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದಾರೆ‌. ಪಾವನ ಹಾಗೂ ಲೇಖ ಚಂದ್ರ ನಾಯಕಿಯರಾಗಿ ನಟಿಸಿದ್ದಾರೆ . ಸುಮಾರು ವರ್ಷಗಳ ನಂತರ ನಟಿ ನಿರೋಷ  ಈ ಚಿತ್ರದಲ್ಲಿ  ಅಭಿನಯಿಸಿದ್ದಾರೆ ಎಂದರು. ಇದನ್ನೂ ಓದಿ:ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ರಿಷಬ್ ಶೆಟ್ಟಿ ದಂಪತಿ

    ಫೈಟರ್ ನಲ್ಲಿ ಬರೀ ಹೋರಾಟ ಹಾಗೂ ಹೊಡೆದಾಟವಿಲ್ಲ. ತಂದೆ- ತಾಯಿ ಹಾಗೂ ಮಗನ  ಬಾಂಧವ್ಯದ ಸನ್ನಿವೇಶಗಳು ಎಲ್ಲರ ಮನ ಮುಟ್ಟಲಿದೆ. ಜೊತೆಗೆ ಥ್ರಿಲ್ಲರ್ ಅಂಶಗಳನ್ನ ಒಳಗೊಂಡ ಕೌಟುಂಬಿಕ ಮನರಂಜನೆಯ ಚಿತ್ರ ಇದಾಗಿದೆ. ನನ್ನನ್ನು ನಿರ್ದೇಶಕರು ನನ್ನ ಹಿಂದಿನ ಚಿತ್ರಗಳಿಗಿಂತ ತುಂಬಾನೇ ಸ್ಟೈಲಿಷ್ ಆಗಿ ತೋರಿಸಿದ್ದಾರೆ. ನಿರ್ಮಾಪಕರು ಯಾವುದಕ್ಕೂ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಸಮಾಜದ ವ್ಯವಸ್ಥೆಯ ವಿರುದ್ಧ ಹೋರಾಡುವ ಫೈಟರ್ ನಾನು ಎಂದು ವಿನೋದ್ ಪ್ರಭಾಕರ್ ತಿಳಿಸಿದರು.

    ನಾಯಕಿಯರಾದ ಲೇಖಾ ಚಂದ್ರ ಹಾಗೂ ಪಾವನ (Pavana) ತಮ್ಮ ಪಾತ್ರದ ಕುರಿತು ಮಾತನಾಡಿದರು. ಬಹಳ ದಿನಗಳ ನಂತರ ಕನ್ನಡ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ನಿರೋಷ ಸಂತಸಪಟ್ಟರು. ಚಿತ್ರದಲ್ಲಿ  ಹಾಡುಗಳಿದ್ದು ಎರಡೂ ವಿಭಿನ್ನವಾಗಿವೆ ಎಂದು ಸಂಗೀತ ನಿರ್ದೇಶಕ ಗುರುಕಿರಣ್ ತಿಳಿಸಿದರು. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಫೈಟರ್ ಚಿತ್ರದ ಸಾಹಸ ದೃಶ್ಯಗಳ ಕುರಿತು ಮಾಹಿತಿ ನೀಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೇತನ್ ಚಂದ್ರ ನಟನೆಯ ‘ಪ್ರಭುತ್ವ’ ಸಿನಿಮಾದ ಮೆಲೋಡಿ ಸಾಂಗ್ ರಿಲೀಸ್

    ಚೇತನ್ ಚಂದ್ರ ನಟನೆಯ ‘ಪ್ರಭುತ್ವ’ ಸಿನಿಮಾದ ಮೆಲೋಡಿ ಸಾಂಗ್ ರಿಲೀಸ್

    ಮೇಘಡಹಳ್ಳಿ ಡಾ.ಶಿವಕುಮಾರ್ ಅರ್ಪಿಸುವ, ರವಿರಾಜ್ ಎಸ್ ಕುಮಾರ್ (Raviraj) ನಿರ್ಮಿಸಿರುವ ಹಾಗೂ ಆರ್ ರಂಗನಾಥ್ ನಿರ್ದೇಶನದಲ್ಲಿ ಚೇತನ್ ಚಂದ್ರ ನಾಯಕರಾಗಿ ನಟಿಸಿರುವ “ಪ್ರಭುತ್ವ” (Prabhutva) ಚಿತ್ರದಿಂದ “ನೀನೇನಾ ನೀನೇನಾ” ಎಂಬ ಮೆಲೋಡಿ ಸಾಂಗ್  ಬಿಡುಗಡೆಯಾಗಿದೆ. ಇತ್ತೀಚೆಗೆ ಹಾಡು ಬಿಡುಗಡೆ ಸಮಾರಂಭ ಹಾಗೂ ಪತ್ರಿಕಾಗೋಷ್ಠಿ ನಡೆಯಿತು.

    “ಪ್ರಭುತ್ವ” ಚಿತ್ರ ನನ್ನ ಸಿನಿಪಯಣದಲ್ಲೇ ಬಿಗ್ ಬಜೆಟ್ ಚಿತ್ರ ಎನ್ನಬಹುದು. ಇದಕ್ಕೆ ಕಾರಣ ನಿರ್ಮಾಪಕರು. ಯಾವುದಕ್ಕೂ ಕೊರತೆ ಇಲ್ಲದೆ ನಿರ್ಮಾಣ‌ ಮಾಡಿದ್ದಾರೆ. ಇನ್ನು, ನಿರ್ದೇಶಕ ರಂಗನಾಥ್ ಚಿತ್ರವನ್ನು ಅದ್ಭುತವಾಗಿ ನಿರ್ದೇಶಿಸಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ.  ಹಾಡು ಬಿಡುಗಡೆ ಸಮಾರಂಭ ಆಗಿರುವುದರಿಂದ, ಹಾಡಿನ ಬಗ್ಗೆ ಹೇಳುತ್ತೇನೆ. ನಿರ್ದೇಶಕ ಹರಿ ಸಂತೋಷ್ ಈ ಹಾಡನ್ನು ಬರೆದಿದ್ದು, ಕಾರ್ತಿಕ್ ಹಾಗೂ ಸುಪ್ರಿಯಾ ರಾಮ್ ಸೊಗಸಾಗಿ ಹಾಡಿದ್ದಾರೆ. ಎಮಿಲ್ ಅಷ್ಟೇ ಚೆನ್ನಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಛಾಯಾಗ್ರಾಹಕ ಕೆ.ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣ ಕೂಡ ಸುಂದರವಾಗಿದೆ. ಸದ್ಯದಲ್ಲೇ ಟ್ರೇಲರ್ ಬಿಡುಗಡೆಯಾಗಲಿದೆ. ನನ್ನ ಜೊತೆ‌ ನಟಿಸಿರುವ ಎಲ್ಲಾ ಕಲಾವಿದರು ಉತ್ತಮವಾಗಿ ನಟಿಸಿದ್ದಾರೆ ಎಂದು ನಾಯಕ ಚೇತನ್ ಚಂದ್ರ (Chetan Chandra) ಹೇಳಿದರು.

    ನಾನು ಈ ಹಿಂದೆ “ಅರಿವು” ಹಾಗೂ “ಕೂಗು” ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದೆ. ಇದು ಮೂರನೇ ಚಿತ್ರ. ನಿರ್ಮಾಪಕ ರವಿರಾಜ್ ಅವರ ತಂದೆ ಮೇಘಡಹಳ್ಳಿ ಶಿವಕುಮಾರ್ ಅವರೆ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಸಂಭಾಷಣೆ ವಿನಯ್ ಅವರದು. ಎಮಿಲ್ ಸಂಗೀತ ಸಂಯೋಜಿಸಿರುವ ನಾಲ್ಕು ಹಾಡುಗಳು ಚಿತ್ರದಲ್ಲಿದೆ. ಇಂದು ಮೊದಲ ಹಾಡು ಬಿಡುಗಡೆಯಾಗಿದೆ.   “ಮತದಾನ” ದ ಮಹತ್ವ ಸಾರುವ ಚಿತ್ರ ಅಂತ ಹೇಳಬಹುದು. ಚೇತನ್ ಚಂದ್ರ, ಪಾವನ, ಶರತ್ ಲೋಹಿತಾಶ್ವ, ವಿಜಯ್ ಚೆಂಡೂರ್, ಡ್ಯಾನಿ ಎಲ್ಲಾ ಕಲಾವಿದರ ಅಭಿನಯ  ಹಾಗೂ ತಂತ್ರಜ್ಞರ ಉತ್ತಮ ಕಾರ್ಯವೈಖರಿಯಿಂದ ಚಿತ್ರ ಚೆನ್ನಾಗಿ ಬಂದಿದೆ. ‌ಮುಂದಿನ ದಿನಗಳಲ್ಲಿ ಇನ್ನೂ ಎರಡು ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆಯಾಗಲಿದೆ ಎಂದರು ನಿರ್ದೇಶಕ ರಂಗನಾಥ್. ಇದನ್ನೂ ಓದಿ: ನಟ ಗೋಪಿಚಂದ್‌ಗೆ ಸ್ಯಾಂಡಲ್‌ವುಡ್‌ ನಿರ್ದೇಶಕ ಎ.ಹರ್ಷ ಆ್ಯಕ್ಷನ್ ಕಟ್

    ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಾಯಕಿ ಪಾವನ, ಇಂದು ಬಿಡುಗಡೆಯಾಗಿರುವ ಹಾಡು ತುಂಬಾ ಚೆನ್ನಾಗಿದೆ ಎಂದರು. ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಮೊದಲು ಮೊಲೋಡಿ ಸಾಂಗ್ ಬಿಡುಗಡೆಯಾಗಿದೆ. ಕಾರ್ತಿಕ್ ಹಾಗೂ ಸುಪ್ರಿಯಾರಾಮ್ ಈ ಹಾಡನ್ನು ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ಎಮಿಲ್ ಮಾಹಿತಿ ನೀಡಿದರು. ನಟರಾದ ಶರತ್ ಲೋಹಿತಾಶ್ವ, ವಿಜಯ್ ಚೆಂಡೂರ್, ಡ್ಯಾನಿ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ಛಾಯಾಗ್ರಾಹಕ ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣದ ಬಗ್ಗೆ ಮಾಹಿತಿ ನೀಡಿದರು.

    ಕಥೆ ಬರೆದಿರುವ ಮೇಘಡಹಳ್ಳಿ ಶಿವಕುಮಾರ್ ಮುಂದಿನ ದಿನಗಳಲ್ಲಿ ಕಥೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದರು. ಚಿತ್ರ ಉತ್ತಮವಾಗಿ ಬರಲು ಸಹಕಾರ ನೀಡಿದ ಚಿತ್ರತಂಡದ ಪ್ರತಿಯೊಬ್ಬರಿಗೂ ನಿರ್ಮಾಪಕ ರವಿರಾಜ್ ಎಸ್ ಕುಮಾರ್ ಧನ್ಯವಾದ ತಿಳಿಸಿದರು.

  • ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾ ಮೆಚ್ಚಿಕೊಂಡ ಪ್ರಬುದ್ಧ ಪ್ರೇಕ್ಷಕ

    ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾ ಮೆಚ್ಚಿಕೊಂಡ ಪ್ರಬುದ್ಧ ಪ್ರೇಕ್ಷಕ

    ಭಾಸ್ಕರ್ ನಿರ್ದೇಶನದ ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾ ನಾಳೆ ಎರಡನೇ ವಾರಕ್ಕೆ ಕಾಲಿಡುತ್ತಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಯಶಸ್ಸಿ ಸಿನಿಮಾಗಳ ಸಾಲಿನತ್ತ ಹೆಜ್ಜೆ ಹಾಕುತ್ತಿದೆ. ವಿಮರ್ಶೆಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೊಸ ತಂಡದ ಚಿತ್ರಕ್ಕೆ ನೋಡುಗರು ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಇದೊಂದು ಹೊಸ ಬಗೆಯ ಸಿನಿಮಾ ಎಂದೂ ಬಣ್ಣಿಸಿದ್ದಾರೆ.

    ‘ಬೆಲ್‍ ಬಾಟಮ್’ ಸಿನಿಮಾದ ನಂತರ ಆ ಮಾದರಿಯ ಮತ್ತೊಂದು ಸಿನಿಮಾವನ್ನು ಪ್ರೇಕ್ಷಕ ಕೊಂಡಾಡುತ್ತಿದ್ದಾನೆ ಎನ್ನುವ ನೆನಪನ್ನು ‘ಸದ್ದು ವಿಚಾರಣೆ ನಡೆಯುತ್ತಿದೆ’ ಚಿತ್ರ ಮಾಡಿದೆ. ಭಾಸ್ಕರ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರೇಕ್ಷಕನಿಗೆ ಥ್ರಿಲ್ ಮಾಡುವಂತಹ ಸಾಕಷ್ಟು ಸಂಗತಿಗಳು ಇವೆ ಎನ್ನುವುದು ವಿಶೇಷ.

    ಈ ಚಿತ್ರದ ಮೂಲಕ ಪಶುವೈದ್ಯರಾಗಿರುವ ಮಧುನಂದನ್ ಸಿನಿಮಾ ರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಥೇಟ್ ನೆನಪಿರಲಿ ಪ್ರೇಮ್ ರೀತಿಯಲ್ಲಿ ಕಾಣುವ ಇವರು, ಈ ಸಿನಿಮಾದಲ್ಲಿ ಪೃಥ್ವಿ ಎಂಬ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದು, ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ದಾರೆ. ಇದು ಇವರ ಚೊಚ್ಚಲ ಸಿನಿಮಾವಾಗಿದ್ದರೂ, ರಂಗಭೂಮಿ ಮೇಲಿನ ಸೆಳೆತ ಮತ್ತು ನಟನಾಗಬೇಕು ಎನ್ನುವ ಹಂಬಲವೇ ಇಂಥದ್ದೊಂದು ಪಾತ್ರ ಮಾಡಿಸಿದೆ. ಆ ಪಾತ್ರವನ್ನು ನೋಡುಗ ಕೂಡ ಮೆಚ್ಚಿಕೊಂಡಿದ್ದಾನೆ.

    ಈ ಸಿನಿಮಾದ ಮತ್ತೊಂದು ವಿಶೇಷ  ಅಂದರೆ, ಎಲ್ಲಾ ವರ್ಗದ ಪ್ರೇಕ್ಷಕರನ್ನು ಮನದಲ್ಲಿಟ್ಟುಕೊಂಡು ಚಿತ್ರಕಥೆ ಹೆಣೆದಿದ್ದಾರೆ ನಿರ್ದೇಶಕ ಭಾಸ್ಕರ್ ರಾವ್. ಪುಟ್ಟ ಪುಟ್ಟ ಪಾತ್ರಕ್ಕೂ ಹಿನ್ನೆಲೆ ಕೊಟ್ಟಿದ್ದಾರೆ. ಹಾಗಾಗಿ ಚಿತ್ರಕಥೆಯಲ್ಲಿ ಹಲವು ತಿರುವುಗಳಿದ್ದರೂ, ನೋಡುಗನನ್ನು ಈ ಸಿನಿಮಾ ಸರಾಗವಾಗಿ ನೋಡಿಸಿಕೊಂಡು ಹೋಗುತ್ತದೆ. ತಿರುವುಗಳಲ್ಲಿ ಥ್ರಿಲ್ ಕೊಡುತ್ತದೆ. ಒಂದಷ್ಟು ದೃಶ್ಯಗಳು ನಗಿಸುತ್ತಲೇ ಮತ್ತೆ ಸಿನಿಮಾದ ಕಥೆಯೊಳಗೇ ನಮ್ಮನ್ನು ತಂದು ಬಿಡುವುದು ಚಿತ್ರದ ಹೆಗ್ಗಳಿಕೆ.

    ಅಚ್ಯುತ್ ಕುಮಾರ್, ರಾಘು ಶಿವಮೊಗ್ಗ, ಪಾವನಾ, ರಾಕೇಶ್ ಮಯ್ಯ, ಜಹಾಂಗೀರ್, ಕೃಷ್ಣ ಹೆಬ್ಬಾಳೆಯಂತಹ ಪ್ರತಿಭಾವಂತ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ನಟನೆ. ಅಚ್ಯುತ್ ಕುಮಾರ್ ಪೊಲೀಸ್ ಅಧಿಕಾರಿಯಾಗಿ ಹೊಸ ಅನುಭವವನ್ನೇ ಕೊಟ್ಟರೆ, ರಾಘು ಶಿವಮೊಗ್ಗ ಖಳನಾಯಕನಾಗಿ ಅಚ್ಚರಿ ಮೂಡಿಸುತ್ತಾರೆ. ಪಾವನಾ ಮತ್ತು ರಾಕೇಶ್ ಮಯ್ಯ ಲವ್ ಸ್ಟೋರಿ ಈ ಹೊತ್ತಿನ ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ. ಜಹಾಂಗೀರ್ ಒದ್ದಾಟ, ಕೃಷ್ಣ ಹೆಬ್ಬಾಳೆಯವರ ಗತ್ತು ಸಿನಿಮಾಗೆ ಮತ್ತಷ್ಟು ಕಸುವು ತುಂಬಿದೆ.

    ಮೇಲ್ನೋಟಕ್ಕೆ ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಮರ್ಡರ್ ಮಿಸ್ಟರಿ ಸಿನಿಮಾ ಅನಿಸಿದರೂ, ಕ್ಯಾಮೆರಾ ಕೆಲಸ, ಹಿನ್ನೆಲೆ ಸಂಗೀತ, ಹಾಡು ಮತ್ತು ಪಾತ್ರಗಳ ಹಿನ್ನೆಲೆಯ ಕಾರಣದಿಂದಾಗಿ ನಾನು ಅಂದುಕೊಂಡಿದ್ದನ್ನು ಸುಳ್ಳು ಮಾಡುತ್ತಾ, ಹೊಸ ಲೋಕವನ್ನೇ ಸಿನಿಮಾ ನಮ್ಮೆದುರು ತಂದಿಡುತ್ತಿದೆ. ಭಾಸ್ಕರ್ ನಿರ್ದೇಶನದ ಚೊಚ್ಚಲು ಸಿನಿಮಾ ಇದಾಗಿದ್ದರೂ, ಹಾಗೆ ಅನಿಸುವುದಿಲ್ಲ. ಆ ರೀತಿಯಲ್ಲಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಪ್ರತಿಭಾವಂತರ ತಂಡವೇ ಈ ಚಿತ್ರದಲ್ಲಿ ಇರುವುದರಿಂದ, ಚಿತ್ರವು ಸ್ಯಾಂಡಲ್ ವುಡ್‍ನಲ್ಲಿ ಸಖತ್ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ‘ಸದ್ದು’ ಮಾಡುತ್ತಿದೆ ಸ್ಯಾಂಡಲ್ ವುಡ್ ಮತ್ತೊಂದು ಸಿನಿಮಾ

    ‘ಸದ್ದು’ ಮಾಡುತ್ತಿದೆ ಸ್ಯಾಂಡಲ್ ವುಡ್ ಮತ್ತೊಂದು ಸಿನಿಮಾ

    ಸ್ಪೆನ್ಸ್, ಥ್ರಿಲ್ಲರ್ ಮಾದರಿಯ ಸಿನಿಮಾಗಳನ್ನು ಪ್ರೇಕ್ಷಕ ನಿಧಾನಗತಿಯಲ್ಲೇ ತಗೆದುಕೊಳ್ಳುತ್ತಾನೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಹೊಸಬರು ಮತ್ತು ಪ್ರತಿಭಾವಂತ ಟೀಮ್‍ ಹೊಂದಿರುವ ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾದ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ‘ಬೆಲ್‍ ಬಾಟಮ್’ ಸಿನಿಮಾದ ನಂತರ ಆ ಮಾದರಿಯ ಮತ್ತೊಂದು ಸಿನಿಮಾವನ್ನು ಪ್ರೇಕ್ಷಕ ಕೊಂಡಾಡುತ್ತಿದ್ದಾನೆ ಎನ್ನುವ ನೆನಪನ್ನು ‘ಸದ್ದು ವಿಚಾರಣೆ ನಡೆಯುತ್ತಿದೆ’ ಚಿತ್ರ ಮಾಡಿದೆ. ಭಾಸ್ಕರ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರೇಕ್ಷಕನಿಗೆ ಥ್ರಿಲ್ ಮಾಡುವಂತಹ ಸಾಕಷ್ಟು ಸಂಗತಿಗಳು ಇವೆ ಎನ್ನುವುದು ವಿಶೇಷ.

    ಈ ಚಿತ್ರದ ಮೂಲಕ ಪಶುವೈದ್ಯರಾಗಿರುವ ಮಧುನಂದನ್ ಸಿನಿಮಾ ರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಥೇಟ್ ನೆನಪಿರಲಿ ಪ್ರೇಮ್ ರೀತಿಯಲ್ಲಿ ಕಾಣುವ ಇವರು, ಈ ಸಿನಿಮಾದಲ್ಲಿ ಪೃಥ್ವಿ ಎಂಬ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದು, ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ದಾರೆ. ಇದು ಇವರ ಚೊಚ್ಚಲ ಸಿನಿಮಾವಾಗಿದ್ದರೂ, ರಂಗಭೂಮಿ ಮೇಲಿನ ಸೆಳೆತ ಮತ್ತು ನಟನಾಗಬೇಕು ಎನ್ನುವ ಹಂಬಲವೇ ಇಂಥದ್ದೊಂದು ಪಾತ್ರ ಮಾಡಿಸಿದೆ. ಆ ಪಾತ್ರವನ್ನು ನೋಡುಗ ಕೂಡ ಮೆಚ್ಚಿಕೊಂಡಿದ್ದಾನೆ. ಇದನ್ನೂ ಓದಿ: ಕಾಶ್ಮೀರ್‌ ಫೈಲ್ಸ್‌ ಕಾಲ್ಪನಿಕ ಅಂತಾ ಸಾಬೀತುಪಡಿಸಿದ್ರೆ, ಸಿನಿಮಾ ಮಾಡೋದನ್ನೇ ಬಿಡ್ತೀನಿ- ವಿವೇಕ್ ಅಗ್ನಿಹೋತ್ರಿ

    ಈ ಸಿನಿಮಾದ ಮತ್ತೊಂದು ವಿಶೇಷ  ಅಂದರೆ, ಎಲ್ಲಾ ವರ್ಗದ ಪ್ರೇಕ್ಷಕರನ್ನು ಮನದಲ್ಲಿಟ್ಟುಕೊಂಡು ಚಿತ್ರಕಥೆ ಹೆಣೆದಿದ್ದಾರೆ ನಿರ್ದೇಶಕ ಭಾಸ್ಕರ್ ರಾವ್. ಪುಟ್ಟ ಪುಟ್ಟ ಪಾತ್ರಕ್ಕೂ ಹಿನ್ನೆಲೆ ಕೊಟ್ಟಿದ್ದಾರೆ. ಹಾಗಾಗಿ ಚಿತ್ರಕಥೆಯಲ್ಲಿ ಹಲವು ತಿರುವುಗಳಿದ್ದರೂ, ನೋಡುಗನನ್ನು ಈ ಸಿನಿಮಾ ಸರಾಗವಾಗಿ ನೋಡಿಸಿಕೊಂಡು ಹೋಗುತ್ತದೆ. ತಿರುವುಗಳಲ್ಲಿ ಥ್ರಿಲ್ ಕೊಡುತ್ತದೆ. ಒಂದಷ್ಟು ದೃಶ್ಯಗಳು ನಗಿಸುತ್ತಲೇ ಮತ್ತೆ ಸಿನಿಮಾದ ಕಥೆಯೊಳಗೇ ನಮ್ಮನ್ನು ತಂದು ಬಿಡುವುದು ಚಿತ್ರದ ಹೆಗ್ಗಳಿಕೆ.

    ಅಚ್ಯುತ್ ಕುಮಾರ್, ರಾಘು ಶಿವಮೊಗ್ಗ, ಪಾವನಾ, ರಾಕೇಶ್ ಮಯ್ಯ, ಜಹಾಂಗೀರ್, ಕೃಷ್ಣ ಹೆಬ್ಬಾಳೆಯಂತಹ ಪ್ರತಿಭಾವಂತ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ನಟನೆ. ಅಚ್ಯುತ್ ಕುಮಾರ್ ಪೊಲೀಸ್ ಅಧಿಕಾರಿಯಾಗಿ ಹೊಸ ಅನುಭವವನ್ನೇ ಕೊಟ್ಟರೆ, ರಾಘು ಶಿವಮೊಗ್ಗ ಖಳನಾಯಕನಾಗಿ ಅಚ್ಚರಿ ಮೂಡಿಸುತ್ತಾರೆ. ಪಾವನಾ ಮತ್ತು ರಾಕೇಶ್ ಮಯ್ಯ ಲವ್ ಸ್ಟೋರಿ ಈ ಹೊತ್ತಿನ ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ. ಜಹಾಂಗೀರ್ ಒದ್ದಾಟ, ಕೃಷ್ಣ ಹೆಬ್ಬಾಳೆಯವರ ಗತ್ತು ಸಿನಿಮಾಗೆ ಮತ್ತಷ್ಟು ಕಸುವು ತುಂಬಿದೆ.

    ಮೇಲ್ನೋಟಕ್ಕೆ ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಮರ್ಡರ್ ಮಿಸ್ಟರಿ ಸಿನಿಮಾ ಅನಿಸಿದರೂ, ಕ್ಯಾಮೆರಾ ಕೆಲಸ, ಹಿನ್ನೆಲೆ ಸಂಗೀತ, ಹಾಡು ಮತ್ತು ಪಾತ್ರಗಳ ಹಿನ್ನೆಲೆಯ ಕಾರಣದಿಂದಾಗಿ ನಾನು ಅಂದುಕೊಂಡಿದ್ದನ್ನು ಸುಳ್ಳು ಮಾಡುತ್ತಾ, ಹೊಸ ಲೋಕವನ್ನೇ ಸಿನಿಮಾ ನಮ್ಮೆದುರು ತಂದಿಡುತ್ತಿದೆ. ಭಾಸ್ಕರ್ ನಿರ್ದೇಶನದ ಚೊಚ್ಚಲು ಸಿನಿಮಾ ಇದಾಗಿದ್ದರೂ, ಹಾಗೆ ಅನಿಸುವುದಿಲ್ಲ. ಆ ರೀತಿಯಲ್ಲಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಪ್ರತಿಭಾವಂತರ ತಂಡವೇ ಈ ಚಿತ್ರದಲ್ಲಿ ಇರುವುದರಿಂದ, ಚಿತ್ರವು ಸ್ಯಾಂಡಲ್ ವುಡ್‍ನಲ್ಲಿ ಸಖತ್ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರತಿಭಾವಂತ ತಂಡದ ಸದ್ದು ವಿಚಾರಣೆ ನಡೆಯುತ್ತಿದೆ ಟ್ರೇಲರ್ ರಿಲೀಸ್

    ಪ್ರತಿಭಾವಂತ ತಂಡದ ಸದ್ದು ವಿಚಾರಣೆ ನಡೆಯುತ್ತಿದೆ ಟ್ರೇಲರ್ ರಿಲೀಸ್

    ಭಾಸ್ಕರ್ ಆರ್ ನೀನಾಸಂ ನಿರ್ದೇಶನದ ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾ ಪ್ರೇಕ್ಷಕರೆದುರು ಬರಲು ಸಜ್ಜಾಗಿದೆ. ಹಾಡುಗಳ ಮೂಲಕ ಗಮನ ಸೆಳೆದ ಚಿತ್ರತಂಡ ಇದೀಗ ಪ್ರಾಮಿಸಿಂಗ್ ಟ್ರೇಲರ್ ಬಿಡುಗಡೆ ಮಾಡಿ ಸಿನಿರಸಿಕರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. ಎಂ. ಎಂ. ಸಿನಿಮಾಸ್ ಬ್ಯಾನರ್ ನಡಿ ಸುರಭಿ ಲಕ್ಷ್ಮಣ್ ಚಿತ್ರವನ್ನು ನಿರ್ಮಾಣ ಮಾಡಿದ್ದು, ರಾಜ್ ಕಾಂತ ಕ್ಯಾಮೆರಾ ನಿರ್ದೇಶನ, ಸಚಿನ್ ಬಸ್ರೂರು ಸಂಗೀತ, ಶಶಿಧರ್ ಪಿ ಸಂಕಲನ ಚಿತ್ರಕ್ಕಿದೆ.

    ನೈಜ ಘಟನೆ ಆಧರಿಸಿ ಹೆಣೆದ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ಚಿತ್ರ ‘ಸದ್ದು ವಿಚಾರಣೆ ನಡೆಯುತ್ತಿದೆ’. ಚಿತ್ರಕ್ಕೆ ಕಥೆ ಬರೆದು ಭಾಸ್ಕರ್ ಆರ್ ನೀನಾಸಂ ನಿರ್ದೇಶನ ಮಾಡಿದ್ದಾರೆ. ರಾಕೇಶ್ ಮಯ್ಯ, ಪಾವನ ಗೌಡ ನಾಯಕ ನಾಯಕಿಯಾಗಿ ನಟಿಸಿದ್ದು, ಪ್ರಮುಖ ಪಾತ್ರದಲ್ಲಿ ಮಧುನಂದನ್ ನಟಿಸಿದ್ದಾರೆ. ಅಚ್ಯುತ್ ಕುಮಾರ್, ರಾಘು ಶಿವಮೊಗ್ಗ, ಜಾಹಂಗೀರ್ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಗಣದಲ್ಲಿದ್ದಾರೆ. ಇದನ್ನೂ ಓದಿ:ಸಾನಿಯಾ, ಮಲಿಕ್ ದಾಂಪತ್ಯ ಜೀವನ ಅಂತ್ಯ? – ಹುಳಿ ಹಿಂಡಿದ ಸ್ಟಾರ್ ನಟಿ

    ಹಿರಿಯ ನಟ ಅಚ್ಯುತ್ ಕುಮಾರ್ ಮಾತನಾಡಿ ಭಾಸ್ಕರ್ ನಟನೆ ಮಾಡ್ತಾನೆ ಅಂತ ಗೊತ್ತಿತ್ತು, ನಿರ್ದೇಶನ ಮಾಡುತ್ತಾನೆ ಎಂದು ಗೊತ್ತಿರಲಿಲ್ಲ. ನನ್ನ ನಾಟಕಗಳಲ್ಲಿ ಭಾಸ್ಕರ್ ಅಭಿನಯಿಸಿದ್ದಾನೆ. ತುಂಬಾ ಚೆನ್ನಾಗಿ ನಿರ್ದೇಶನ ಮಾಡಿದ್ದಾನೆ. ಈ ಚಿತ್ರದಲ್ಲಿ ಇನ್ಸ್ ಪೆಕ್ಟರ್ ಪಾತ್ರ ಎಂದು ಹೇಳಿದಾಗ ನಾನು ಮಾಡೋದಿಲ್ಲ ಚಿತ್ರದಲ್ಲಿರೋ ಕೋಳಿ ಕಳ್ಳರ ಪಾತ್ರ ಕೊಡು ತುಂಬಾ ಇಂಟ್ರಸ್ಟಿಂಗ್ ಆಗಿದೆ ಎಂದೆ ಆದ್ರೆ ಇನ್ಸ್ ಪೆಕ್ಟರ್ ಪಾತ್ರವನ್ನು ನೀವೇ ಮಾಡಬೇಕು ಎಂದು ಹೇಳಿದ್ರಿಂದ ಇನ್ಸ್ ಪೆಕ್ಟರ್ ಪಾತ್ರ ನಿರ್ವಹಿಸಿದ್ದೇನೆ. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಮಧುನಂಧನ್ ಚಿತ್ರವನ್ನು ನಿರ್ಮಾಣ ಮಾಡೋದ್ರ ಜೊತೆಗೆ ನಟನೆ ಕೂಡ ಮಾಡಿದ್ದಾರೆ. ನಟನೆಯಲ್ಲಿ ಅವರಿಗೆ ತುಂಬಾ ಪ್ಯಾಶನ್ ಇದೆ‌. ಇನ್ನೊಂದಿಷ್ಟು ತಯಾರಿ ಮಾಡಿಕೊಂಡ್ರೆ ಒಳ್ಳೆ ಭವಿಷ್ಯ ಇದೆ.  ಸಿನಿಮಾ ಇದೇ ತಿಂಗಳು ಬಿಡುಗಡೆಯಾಗುತ್ತಿದೆ ಎಲ್ಲರೂ ನೋಡಿ ಹರಸಿ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡ್ರು ಅಚ್ಯುತ್ ಕುಮಾರ್.

    Live Tv
    [brid partner=56869869 player=32851 video=960834 autoplay=true]

  • ಅಜ್ಞಾತವಾಸಿಯಾದ ರಂಗಾಯಣ ರಘು ಮತ್ತು ಪಾವನಾ

    ಅಜ್ಞಾತವಾಸಿಯಾದ ರಂಗಾಯಣ ರಘು ಮತ್ತು ಪಾವನಾ

    ‘ಗೋಧಿಬಣ್ಣ‌ ಸಾಧಾರಣ ಮೈಕಟ್ಟು’ ಚಿತ್ರ ಖ್ಯಾತಿಯ ಹೇಮಂತ್ ರಾವ್ ನಿರ್ಮಾಣದಲ್ಲಿ ಹೊಸ ಸಿನಿಮಾವೊಂದು ಮೂಡಿ ಬರುತ್ತಿದ್ದು, ಈ ಚಿತ್ರಕ್ಕೆ  ಗುಲ್ಟು  ಚಿತ್ರ ಖ್ಯಾತಿಯ ಜನಾರ್ದನ್ ಚಿಕ್ಕಣ್ಣ ನಿರ್ದೇಶನ ಮಾಡುತ್ತಿದ್ದಾರೆ. ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರಕ್ಕೆ ಅಜ್ಞಾತವಾಸಿ ಎಂದು ಹೆಸರಿಡಲಾಗಿದೆ. ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ರಂಗಾಯಣ ರಘು ಅವರೊಂದಿಗೆ ಈ ಚಿತ್ರದಲ್ಲಿ ಪಾವನ ಗೌಡ ಹಾಗೂ ಸಿದ್ದು ಮೂಲಿಮನಿ ಸಹ ಅಭಿನಯಿಸುತ್ತಿದ್ದಾರೆ. ಇದನ್ನೂ ಓದಿ : ಲಾಕಪ್ ನಲ್ಲಿ ಗಳಗಳನೆ ಅತ್ತ ಪೂನಂ: ಈ ನಟಿಗೆ ಅದೆಂಥ ಅವಮಾನ?

    ನನ್ನ ಗುರುಗಳಾದ ಕೃಷ್ಣರಾಜ್ ಅವರು ಕಥೆ ಬರೆದಿದ್ದಾರೆ. 1997 ರಲ್ಲಿ ಮಲೆನಾಡಿನಲ್ಲಿ ನಡೆದ ಕೊಲೆಯೊಂದರ ಸುತ್ತ ಈ ಕಥೆ ಹೆಣೆಯಲಾಗಿದೆ. ಅವರು ಕಥೆ ಹೇಳಿದ ರೀತಿ ತುಂಬಾ ಹಿಡಿಸಿತು.  ನನಗೆ ತಿಳಿದ ಹಾಗೆ ಇದೊಂದು ಕನ್ನಡದಲ್ಲಿ ಈವರೆಗೂ ಬಂದಿರದ ಮರ್ಡರ್ ಮಿಸ್ಟರಿ ಅನ್ನಬಹುದು. ಆನಂತರ ಹೇಮಂತ್ ರಾವ್ ಅವರನ್ನು ಭೇಟಿಯಾಗಿ ಕಥೆ ಹೇಳಿದಾಗ ಕೇವಲ ಅರ್ಧಗಂಟೆಯಲ್ಲಿ ನಿರ್ಮಾಣಕ್ಕೆ ಒಪ್ಪಿಕೊಂಡರು. ರಂಗಾಯಣ ರಘು ಸರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ದು ಮೂಲಿಮನಿ, ಪಾವನ ಗೌಡ ಅವರ ಪಾತ್ರ ಕೂಡ ಜನಮನಸೂರೆಗೊಳ್ಳಲಿದೆ.  ಅದ್ವೈತ ಛಾಯಾಗ್ರಹಕರಾಗಿ ಹಾಗೂ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನೆರಡು ದಿನಗಳಲ್ಲಿ ಚಿತ್ರೀಕರಣ ಆರಂಭಿಸುವುದಾಗಿ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ತಿಳಿಸಿದರು.‌ ಇದನ್ನೂ ಓದಿ : ಪುನೀತ್ ಬ್ಯಾನರ್ ಗಾಗಿ ನಡೆಯಿತು ಮಾರಾಮಾರಿ : ರಾಡ್ ಹಿಡಿದುಕೊಂಡು ಗಲಾಟೆ

    ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ರಂಗಾಯಣ ರಘು ಅವರ ಅಭಿನಯವನ್ನು ನೋಡಲು ನಾನು ನಿರ್ಮಾಪಕನಿಗಿಂತ ಹೆಚ್ಚಾಗಿ ಅಭಿಮಾನಿಯಾಗಿ ಕಾಯುತ್ತಿದ್ದೇನೆ.  “ಕವಲುದಾರಿ” ಸಿನಿಮಾ ಸಂದರ್ಭದಲ್ಲಿ ಪುನೀತ್ ಸರ್ ರಂಗಾಯಣ ರಘು ಬಗ್ಗೆ ಹೇಳಿದ ಮಾತು ಇನ್ನೂ ಕಿವಿಯಲ್ಲೇ ಇದೆ.‌ ಈ ಚಿತ್ರ ನಿರ್ಮಾಣಕ್ಕೆ ಅವರೆ ಸ್ಪೂರ್ತಿ ಎನ್ನಬಹುದು ಎಂದರು ನಿರ್ಮಾಪಕ ಹೇಮಂತ್ ರಾವ್. ಇದನ್ನೂ ಓದಿ : ಕೆಜಿಎಫ್ 2 : ನಾಲ್ಕೇ ದಿನಕ್ಕೆ 550 ಕೋಟಿ ಬಾಚಿದ ರಾಕಿಭಾಯ್

    ನಾನು ಟಿವಿ ಜ್ಯೋತಿಷಿಗಳಿಗಿಂತ ಹೆಚ್ಚಾಗಿ ಜನಾರ್ದನ ಚಿಕ್ಕಣ್ಣ ಅವರನ್ನು ನಂಬುತ್ತೇನೆ. ಏಕೆಂದರೆ “ಗುಲ್ಟು” ಚಿತ್ರದಲ್ಲಿ ಅವರು ಹೇಳಿದ್ದ ಒಂದು ಹಗರಣದ ವಿಷಯ ನಂತರ ನಿಜವಾಯಿತು. ಹೇಮಂತ್ ರಾವ್ ಕೂಡ ಹಾಗೆ ಈ ಯುವ ನಿರ್ದೇಶಕರ ಯೋಚನಾಶೈಲಿಯೇ ಬೇರೆ. ನನಗೆ ಉತ್ತಮ ಪಾತ್ರ ನೀಡಿದ್ದಾರೆ‌. ಇಡೀತಂಡಕ್ಕೆ ಒಳ್ಳೆಯದಾಗಲಿ ಎಂದು ರಂಗಾಯಣ ರಘು ಹಾರೈಸಿದರು. ಇದನ್ನೂ ಓದಿ : ಕ್ಷಮಿಸಿ ಬಿಡು ಬಸವಣ್ಣ : ವಿಡಿಯೋ ರಿಲೀಸ್ ಮಾಡಿದ ಹಂಸಲೇಖ

    ಚಿತ್ರದಲ್ಲಿ ನಟಿಸುತ್ತಿರುವ ಪಾವನ ಗೌಡ, ಸಿದ್ದು ಮೂಲಿಮನಿ‌ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತದ ಕುರಿತು ಹಾಗೂ ಅದ್ವೈತ ಛಾಯಾಗ್ರಹಣದ ಬಗ್ಗೆ ಮಾತನಾಡಿದರು.