Tag: Pavan Wadeyar

  • ಶಿವಣ್ಣ ನಟನೆಯ ಮತ್ತೊಂದು ಹೊಸ ಸಿನಿಮಾ ಘೋಷಣೆ- ಮಾಸ್‌ ಲೀಡರ್‌ಗೆ ಕೈ ಜೋಡಿಸಿದ ‌’ಗೂಗ್ಲಿ’ ಡೈರೆಕ್ಟರ್

    ಶಿವಣ್ಣ ನಟನೆಯ ಮತ್ತೊಂದು ಹೊಸ ಸಿನಿಮಾ ಘೋಷಣೆ- ಮಾಸ್‌ ಲೀಡರ್‌ಗೆ ಕೈ ಜೋಡಿಸಿದ ‌’ಗೂಗ್ಲಿ’ ಡೈರೆಕ್ಟರ್

    ಭೈರತಿ ರಣಗಲ್ ಬ್ಲಾಕ್ ಬಸ್ಟರ್ ಸಕ್ಸಸ್ ಖುಷಿಯಲ್ಲಿರುವ ಭಜರಂಗಿ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈಗಾಗಲೇ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ (Shivarajkumar) ಸ್ಯಾಂಡಲ್‌ವುಡ್‌ನ ಯಶಸ್ವಿ ನಿರ್ದೇಶಕರಾದ ಪವನ್‌ ಒಡೆಯರ್‌ ಜೊತೆ ಕೈ ಜೋಡಿಸಿದ್ದಾರೆ. ಇದನ್ನೂ ಓದಿ:ಬಿಗ್‌ ಬಾಸ್‌ ತೆಲುಗು ಸೀಸನ್‌ 8; ಕರ್ನಾಟಕ ಮೂಲದ ನಿಖಿಲ್‌ ವಿನ್ನರ್‌

    ನಿರ್ದೇಶಕರಾಗಿ ಮಾತ್ರವಲ್ಲದೇ ಪವನ್ ಒಡೆಯರ್ (Pavan Wadeyar) ನಿರ್ಮಾಪಕರಾಗಿಯೂ ಹೆಸರು ಮಾಡಿದ್ದಾರೆ. ‘ಡೊಳ್ಳು’ ಚಿತ್ರ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿ ಸಿನಿರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಅವರು ಮೊದಲ ಚಿತ್ರ ನಿರ್ಮಾಣದಲ್ಲಿಯೇ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅವಸ್ತಿ vs ಅವಸ್ತಿ ಎಂಬ ಬಾಲಿವುಡ್ ಚಿತ್ರ ನಿರ್ಮಿಸಿರುವ ಪವನ್ ಒಡೆಯರ್ ಸದ್ಯ ‘ವೆಂಕ್ಯಾ’ ಚಿತ್ರ ನಿರ್ಮಾಣದಲ್ಲಿ ತೊಡಗಿಸಿದ್ದಾರೆ. ಈಗ ಪವನ್ ಒಡೆಯರ್ ತಮ್ಮ ಒಡೆಯರ್ ಮೂವೀಸ್ ಬ್ಯಾನರ್ ನಡಿ ನಾಲ್ಕನೇ ಚಿತ್ರ ನಿರ್ಮಿಸುತ್ತಿದ್ದಾರೆ‌‌. ಅದು ಶಿವಣ್ಣನಿಗೆ ಎನ್ನುವುದೇ ವಿಶೇಷ.

    2025ಕ್ಕೆ ಶಿವಣ್ಣ ಹಾಗೂ ಪವನ್ ಕಾಂಬೋದ ಹೊಸ ಚಿತ್ರ ಟೇಕಾಫ್ ಆಗಲಿದೆ. ಶಿವಣ್ಣಗೆ ನಿರ್ದೇಶನ ಮಾಡುತ್ತಿರುವ ಸಂತಸ ಹಂಚಿಕೊಂಡರು ಪವನ್ ಒಡೆಯರ್, ಪ್ರತಿಯೊಬ್ಬ ನಿರ್ದೇಶಕರಿಗೂ ಶಿವಣ್ಣನಿಗೆ ಚಿತ್ರ ಮಾಡಬೇಕೆಂಬ ಕನಸು ಇರುತ್ತದೆ. ನನ್ನ ಈ ಕನಸು ಈಗ ನನಸಾಗುತ್ತದೆ. ಥ್ರಿಲ್ಲರ್ ಜೊತೆಗೆ ಔಟ್ ಅಂಡ್ ಔಟ್ ಕಮರ್ಷಿಯಲ್ ಎಂಟರ್ ಟೈನರ್ ಚಿತ್ರ ನಿರ್ದೇಶನ ಮಾಡುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ಸದ್ಯ ರಿವೀಲ್ ಮಾಡಲು ಆಗುತ್ತಿಲ್ಲ. ಆದರೆ ಈ ಹಿಂದಿನ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ಶಿವಣ್ಣ ವಿಭಿನ್ನವಾಗಿ ಕಾಣಲಿದ್ದಾರೆ ಎಂದರು.

    ಒಡೆಯರ್‌ ಮೂವೀಸ್ ಬ್ಯಾನರ್ ನಡಿ ಅಪೇಕ್ಷಾ ಪವನ್ ಒಡೆಯರ್ ಹಾಗೂ ಪವನ್ ಒಡೆಯರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅರ್ನಾ ಕ್ರಿಯೇಟಿವ್ ನಿರ್ಮಾಣದಲ್ಲಿ ಸಾಥ್ ಕೊಡಲಿದ್ದಾರೆ.

  • ಸಾಗರ್ ಪುರಾಣಿಕ್ ನಿರ್ದೇಶನದ ‘ವೆಂಕ್ಯಾ’ ಚಿತ್ರಕ್ಕೆ ಶಿಮ್ಲಾ ಬೆಡಗಿ ರೂಪಾಲಿ ಎಂಟ್ರಿ

    ಸಾಗರ್ ಪುರಾಣಿಕ್ ನಿರ್ದೇಶನದ ‘ವೆಂಕ್ಯಾ’ ಚಿತ್ರಕ್ಕೆ ಶಿಮ್ಲಾ ಬೆಡಗಿ ರೂಪಾಲಿ ಎಂಟ್ರಿ

    ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ (Sagar Puranik) ಹೊಸ ಸಿನಿಮಾ ‘ವೆಂಕ್ಯಾ’ (Venkya) ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಬಾರಿ ಸಾಗರ್ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಬಣ್ಣ ಹಚ್ಚಿದ್ದು, ಇದೀಗ ವೆಂಕ್ಯಾ ಬಳಗಕ್ಕೆ ಯುವ ನಟಿಯರೊಬ್ಬರ ಆಗಮನವಾಗಿದೆ. ಶಿಮ್ಲಾ ಸುಂದರಿ ರೂಪಾಲಿ ಸೂದ್ (Roopali Sood) ಇದೀಗ ಸಾಗರ್ ಪುರಾಣಿಕ್ ನಾಯಕನಾಗಿರುವ ಚಿತ್ರದಲ್ಲಿ ನಟಿಸ್ತಿದ್ದು, ಈ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.

    ಮೂಲತಃ ಶಿಮ್ಲಾದವರಾದ ರೂಪಾಲಿ ಕಾಲೇಜು ದಿನಗಳಲ್ಲಿದ್ದಾಗಲೇ ಮಾಡೆಲಿಂಗ್ ಅಖಾಡಕ್ಕೆ ಇಳಿದಿದ್ದರು. ಮಾಡೆಲಿಂಗ್ ಜೊತೆ ಜೊತೆಯಲಿ ಹಲವು ಮ್ಯೂಸಿಕ್ ಆಲ್ಬಂಗಳಲ್ಲಿ ನಟಿಸಿರುವ ಈ ಶಿಮ್ಲಾ ಚೆಲುವೆ, ಹಾರ್ಡಿ ಸಂಧು ಅವರೊಂದಿಗಿನ ಸೂಪರ್ ಹಿಟ್ ಹಾಡು ‘ಹಾರ್ನ್ ಬ್ಲೋ’ನಲ್ಲಿ ಹೆಜ್ಜೆ ಹಾಕಿದ್ದಾರೆ. ಇದೀಗ ‘ವೆಂಕ್ಯಾ’ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದನ್ನೂ ಓದಿ:ಡಿಜಿಟಲ್ ವರ್ಷನ್‌ನಲ್ಲಿ ಬರಲಿದೆ ‘ಸ್ಟುಡೆಂಟ್ ಆಫ್ ದಿ ಇಯರ್ 3’

    ರೂಪಾಲಿ ಈಗಾಗಲೇ ‘ವೆಂಕ್ಯಾ’ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಅವರು ಹಿಮಾಚಲದ ಪಹಾಡಿ ಹುಡುಗಿಯಾಗಿ ನಟಿಸುತ್ತಿದ್ದಾರೆ. ಶೂಟಿಂಗ್ ಅನುಭವ ಹಂಚಿಕೊಂಡಿರುವ ರೂಪಾಲಿ, ‘ನಾವು ಇತ್ತೀಚೆಗೆ ಮನಾಲಿಯ ಮುಂದೆ ಕೈಲಾಂಗ್ನಲ್ಲಿ, ಪರ್ವತಗಳ ನಡುವೆ ಸುಂದರವಾದ ಸ್ಥಳದಲ್ಲಿ ಕೆಲವು ಭಾಗಗಳನ್ನು ಚಿತ್ರೀಕರಿಸಿದ್ದೇವೆ. ಇದು ನನ್ನ ಸಿನಿಮಾ ವೃತ್ತಿಜೀವನಕ್ಕೆ ಅದ್ಭುತ ಆರಂಭ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ‘ಡೊಳ್ಳು’ ಸಿನಿಮಾ ನಿರ್ಮಾಣ ಮಾಡಿದ್ದ ಪವನ್ ಒಡೆಯರ್ ವೆಂಕ್ಯಾನಿಗೂ ಸಾಥ್ ಕೊಟ್ಟಿದ್ದಾರೆ. ಒಡೆಯರ್ ಫಿಲ್ಮ್ಸ್ ನಡಿ ತಯಾರಾಗ್ತಿರುವ ಈ ಚಿತ್ರಕ್ಕೆ ಅವಿನಾಶ್ ವಿ ರೈ ಮತ್ತು ಮೋಹನ್ ಲಾಲ್ ಮೆನನ್ ಕೂಡ ಹಣ ಹಾಕಿದ್ದಾರೆ. ಉತ್ತರ ಕರ್ನಾಟಕವನ್ನು ಕಥೆ ಆಧಾರಿಸಿ ಮೂಡಿ ಬರುತ್ತಿರುವ ‘ವೆಂಕ್ಯಾ’ ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಶ್ರೀನಿಧಿ ಡಿಎಸ್ ಬರೆದಿದ್ದಾರೆ, ಪ್ರಣವ್ ಮುಲೆ ಅವರ ಛಾಯಾಗ್ರಹಣ ಮತ್ತು ಹೇಮಂತ್ ಜೋಯಿಸ್ ಸಂಗೀತ ನೀಡಿದ್ದಾರೆ.

  • ಮೆಕ್ಸಿಕೋ ಚಿತ್ರೋತ್ಸವದಲ್ಲಿ ಪವನ್ ಒಡೆಯರ್ ಚಿತ್ರ ಪ್ರದರ್ಶನ

    ಮೆಕ್ಸಿಕೋ ಚಿತ್ರೋತ್ಸವದಲ್ಲಿ ಪವನ್ ಒಡೆಯರ್ ಚಿತ್ರ ಪ್ರದರ್ಶನ

    ವನ್ ಒಡೆಯರ್ (Pavan Wadeyar) ನಿರ್ಮಾಣದ ಮೊದಲ ಸಿನಿಮಾ ‘ಡೊಳ್ಳು’ (Dollu) ಈಗಾಗಲೇ ಪ್ರಪಂಚ ಪರ್ಯಟನೆ ಮಾಡಿ ಬಂದಿದೆ. ಪ್ರತಿಷ್ಟಿತ ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವ, ಅಂತಾರಾಷ್ಟ್ರೀಯ ಢಾಕಾ  ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರುವ ಡೊಳ್ಳು, ಎರಡು ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದೀಗ ಈ ಚಿತ್ರ ಮತ್ತೊಂದು ಅಂತರಾಷ್ಟ್ರೀಯ ಮನ್ನಣೆಗೆ ಭಾಜನವಾಗಿದೆ.

    ಡೊಳ್ಳು ಸಿನಿಮಾ ಮೆಕ್ಸಿಕೋದಲ್ಲಿ ನಡೆಯಲಿರುವ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ. ಆಸ್ಕರ್ ಗೆದ್ದಿರುವ ಎಸ್. ಎಸ್. ರಾಜಮೌಳಿಯವರ RRR, ದೀಪಿಕಾ ಪಡುಕೋಣೆ ಹಾಗೂ ರಣ್ಬೀರ್ ಸಿಂಗ್ ನಟನೆಯ ಬಾಜಿರಾವ್ ಮಸ್ತಾನಿ, ಸೂರ್ಯ ನಟನೆಯ ಸೂರರೈ ಪೊಟ್ರು, ಅಜಯ್ ದೇವಗನ್ ನಟನೆಯ ತಾನಜಿ ಚಿತ್ರಗಳ ಜೊತೆಗೆ ನಮ್ಮ ಕನ್ನಡದ ಹೆಮ್ಮೆಯ ಡೊಳ್ಳು ಸಿನಿಮಾ ಪ್ರದರ್ಶನ ಕಾಣುತ್ತಿರುವುದು ಖುಷಿ ಜೊತೆಗೆ ಹೆಮ್ಮೆಯ ವಿಷಯ.

    ಡೊಳ್ಳು ಸಿನಿಮಾ ಹೆಸರೇ ಹೇಳುವಂತೆ ಡೊಳ್ಳು ಕುಣಿತದ ಸುತ್ತಮುತ್ತ ಹಾಗೂ ನಮ್ಮ ನೆಲದ ಜಾನಪದ ಸೊಗಡನ್ನು ಮುಖ್ಯವಾಗಿ ಇರಿಸಿ ಹೆಣೆದ ಕಥೆ ಇದಾಗಿದೆ. ಸಾಗರ್ ಪುರಾಣಿಕ್ (Sagar Puranik) ನಿರ್ದೇಶನ ಮೂಡಿಬಂದಿದ್ದ ಈ ಚಿತ್ರದಲ್ಲಿ ಕಾರ್ತಿಕ್ ಮಹೇಶ್ (Karthik Mahesh), ನಿಧಿ ಹೆಗ್ಡೆ ಜೋಡಿಯಾಗಿ ನಟಿಸಿದ್ದಾರೆ. ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್ ಸೇರಿದಂತೆ ಹಲವು ಮಂದಿ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

    ಸ್ಯಾಂಡಲ್ವುಡ್ನಲ್ಲಿ ಹಲವು ಯಶಸ್ವಿ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪವನ್ ಒಡೆಯರ್ ತಮ್ಮದೇ ಹೋಂ ಬ್ಯಾನರ್ ಒಡೆಯರ್ ಮೂವೀಸ್ನಲ್ಲಿ ಪತ್ನಿ ಅಪೇಕ್ಷಾ ಜೊತೆಗೂಡಿ ಡೊಳ್ಳು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

    ಪ್ರತಿಭಾವಂತ ನಿರ್ದೇಶಕರಾಗಿರುವ ಪವನ್ ಒಡೆಯರ್, ಗೂಗ್ಲಿ, ರಣವಿಕ್ರಮ, ನಟ ಸಾರ್ವಭೌಮ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ನಿರ್ದೇಶನ, ಬರವಣಿಗೆ ಜೊತೆಗೆ ಸಿನಿಮಾ ನಿರ್ಮಾಣ ಕೂಡ ಆರಂಭಿಸಿದ್ದು, ನಿರ್ಮಾಣ ಮಾಡಿದ ಮೊದಲ ಚಿತ್ರದ ಮೂಲಕವೇ ಸಂಚಲನ ಸೃಷ್ಟಿಸಿದ್ದಾರೆ.

  • ಅದ್ದೂರಿಯಾಗಿ ನಡೆಯಿತು ಪವನ್ ಒಡೆಯರ್ ಮಗಳ ನಾಮಕರಣ

    ಅದ್ದೂರಿಯಾಗಿ ನಡೆಯಿತು ಪವನ್ ಒಡೆಯರ್ ಮಗಳ ನಾಮಕರಣ

    ಸ್ಯಾಂಡಲ್‌ವುಡ್ (Sandalwood) ಡೈರೆಕ್ಟರ್ ಪವನ್ ಒಡೆಯರ್ (Pavan Wadeyar) ದಂಪತಿ ತಮ್ಮ ಮುದ್ದಾದ ಮಗಳಿಗೆ ಚೆಂದದ ಹೆಸರಿಟ್ಟಿದ್ದಾರೆ. ಇತ್ತೀಚೆಗಷ್ಟೇ 2ನೇ ಮಗುವನ್ನ ಪವನ್- ಅಪೇಕ್ಷಾ ಜೋಡಿ ಬರಮಾಡಿಕೊಂಡರು. ಈಗ ಅದ್ದೂರಿಯಾಗಿ ಮಗಳ ನಾಮಕರಣ ಮಾಡಿದ್ದಾರೆ.

    ಗೂಗ್ಲಿ (Googly Film) ನಿರ್ದೇಶಕ ಪವನ್ ಒಡೆಯರ್ (Pavan Wadeyar) ಮತ್ತು ಅಪೇಕ್ಷಾ ಜೋಡಿ (Apeksha Purohit) ತಮ್ಮ ಮುದ್ದು ಮಗಳಿಗೆ ಯಾದ್ವಿ (Yadvi) ಎಂದು ಹೆಸರಿಟ್ಟಿದ್ದಾರೆ. ನಾಮಕರಣದ ಚೆಂದದ ವಿಡಿಯೋವೊಂದನ್ನ ಸೋಶಿಯಲ್ ಮೀಡಿಯಾದಲ್ಲಿ ಪವನ್ ದಂಪತಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:104 ದಿನಗಳಲ್ಲಿ ರೆಡಿಯಾಯ್ತು ಪರಿಣಿತಿ ಮದುವೆಗೆ ಧರಿಸಿದ ದುಬಾರಿ ಲೆಹೆಂಗಾ

    ಇವಳೇ ನಮ್ಮ ಜೀವನದ ಹೊಸ ಪ್ರೀತಿ, ರಾಜಕುಮಾರಿ ಮತ್ತು ಶೌರ್ಯನ ತಂಗಿ. ನಾವು ಇವಳನ್ನು ಯಾದ್ವಿ ಒಡೆಯರ್ ಎಂದು ಕರೆಯುತ್ತೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪವನ್ ಪತ್ನಿ ಅಪೇಕ್ಷಾ ಪುರೋಹಿತ್ ಬರೆದುಕೊಂಡಿದ್ದಾರೆ. ಈ ಸಮಾರಂಭದಲ್ಲಿ ‘ಗಾಳಿಪಟ’ ನಟಿ ಭಾವನಾ ರಾವ್‌ (Bhavana Rao) ಸೇರಿದಂತೆ ಚಿತ್ರರಂಗದ ಅನೇಕ ನಟ-ನಟಿಯರು ಭಾಗಿಯಾಗಿದ್ದಾರೆ.

    ಅಂದ್ಹಾಗೆ, 2018ರಲ್ಲಿ ಅಪೇಕ್ಷಾ ಪುರೋಹಿತ್- ಪವನ್ ಒಡೆಯರ್ ಮದುವೆಯಾದರು. ದಂಪತಿಗೆ ಈಗಾಗಲೇ ಶೌರ್ಯ ಎಂಬ ಮಗನಿದ್ದಾನೆ. ಕಳೆದ ಜುಲೈ ತಿಂಗಳಿನಲ್ಲಿ ಹೆಣ್ಣು ಮಗುವಿಗೆ ಅಪೇಕ್ಷಾ ಜನ್ಮ ನೀಡಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪವನ್ ಒಡೆಯರ್ ನಿರ್ದೇಶನದ ಬಾಲಿವುಡ್ ಸಿನಿಮಾಗೆ ಟೈಟಲ್ ಫಿಕ್ಸ್

    ಪವನ್ ಒಡೆಯರ್ ನಿರ್ದೇಶನದ ಬಾಲಿವುಡ್ ಸಿನಿಮಾಗೆ ಟೈಟಲ್ ಫಿಕ್ಸ್

    ಸ್ಯಾಂಡಲ್‌ವುಡ್ (Sandalwood) ನಿರ್ದೇಶಕ ಪವನ್ ಒಡೆಯರ್ (Pavan Wadeyar) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮನೆಗೆ ಮುದ್ದು ಮಗಳ ಆಗಮನವಾಗಿದೆ. ಈ ಸಂತಸದ ನಡುವೆ ತಮ್ಮ ಬಾಲಿವುಡ್‌ನ ಚೊಚ್ಚಲ ಸಿನಿಮಾ ನಿರ್ದೇಶನದ ಟೈಟಲ್ ರಿವೀಲ್ ಮಾಡಿದ್ದಾರೆ. ಬಾಲಿವುಡ್ ಸಿನಿಮಾದ ಟೈಟಲ್ ಫಿಕ್ಸ್ ಮಾಡಿದ್ದಾರೆ.

    ಗೋವಿಂದಾಯ ನಮಃ, ಗೂಗ್ಲಿ (Googly), ರಣವಿಕ್ರಮ, ಜೆಸ್ಸಿ, ನಟಸಾರ್ವಭೌಮ ಸೇರಿದಂತೆ ಹಲವು ಸಿನಿಮಾಗಳನ್ನ ನಿರ್ದೇಶಿಸಿರುವ ಪವನ್ ಒಡೆಯರ್ ಅವರು ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ವಿಭಿನ್ನ ಕಥೆಯನ್ನ ರೆಡಿ ಮಾಡಿ, ಹಿಂದಿಯಲ್ಲಿ ಸಿನಿಮಾ ಮಾಡಿ ಮುಗಿಸಿದ್ದಾರೆ. ಹಿಂದಿ ಸಿನಿಮಾಗೆ ‘ಆವಸ್ಥಿ ವರ್ಸಸ್ ಆವಸ್ಥಿ’ ಎಂಬ ಟೈಟಲ್ ಇಡಲಾಗಿದೆ. ಚಿತ್ರೀಕರಣ ಮುಗಿಸಿ, ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ.

    ಸುಳ್ಳು ತುಂಬಿರುವ ಜಗತ್ತಿನಲ್ಲಿ ಅವನೊಬ್ಬನೇ ಸತ್ಯ ನುಡಿಯುವವನು ಎಂದು ನಂಬಿರುವ ನಾಯಕನ ಕುರಿತ ಸ್ಟೋರಿಯನ್ನ ನಿರ್ದೇಶಕ ಪವನ್ ಒಡೆಯರ್ ಹೇಳಲು ಹೊರಟಿದ್ದಾರೆ. ಈ ಚಿತ್ರದಲ್ಲಿ ಬೆಂಗಾಳಿ, ಬಾಲಿವುಡ್ ಚಿತ್ರಗಳಲ್ಲಿ ಮಿಂಚಿರುವ ಪರಂಬ್ರತಾ ಚಟರ್ಜಿ ನಾಯಕನಾಗಿದ್ದಾರೆ. ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ನಿ ನಟಿ ಗೀತಾ ಬಸ್ರಾ ಅವರಿಗೆ ನಾಯಕಿಯಾಗಿದ್ದು, ಏಳು ವರ್ಷಗಳ ಬ್ರೇಕ್ ಬಳಿಕ ಕಮ್‌ಬ್ಯಾಕ್ ಮಾಡ್ತಿದ್ದಾರೆ. ಜೊತೆಗೆ ಮನೋಜ್ ಜೋಶಿ, ದಲೀಪ್ ತಾಹಿಲ್, ಜರೀನಾ ವಾಹಬ್, ಸತೀಶ್ ರಾಜೇಂದ್ರನ್, ಸಹರ್ ಶುಕ್ಲಾ, ಶಿವ್ ಪಂಡಿತ್, ಶಿಶಿರ್ ಶರ್ಮಾ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ.

    ಪವನ್ ಒಡೆಯರ್ ಈ ಹಿಂದೆ ನಿರ್ದೇಶಿಸಿದ ಕನ್ನಡದ ಸಿನಿಮಾಗಳು ಪರಭಾಷೆಗಳಲ್ಲಿ ರಿಮೇಕ್ ಆಗುತ್ತಿದ್ದ ಸಂದರ್ಭದಲ್ಲಿಯೇ ಹೊಸ ಕಥೆಯನ್ನ ಹೇಳಬೇಕು ಎಂಬ ಆಸೆ ಪವನ್ ಅವರಿಗೆ ಇತ್ತತಂತೆ. ಅದರಂತೆ ಈಗ ಡಿಫರೆಂಟ್ ಕಥೆಯೊಂದಿಗೆ ಬಾಲಿವುಡ್‌ಗೆ ಪವನ್ ಪಾದಾರ್ಪಣೆ ಮಾಡಿದ್ದಾರೆ. ಇದನ್ನೂ ಓದಿ:ಶಿವರಾಜ್ ಕುಮಾರ್ ಹುಟ್ಟ ಹಬ್ಬಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡ ‘ಘೋಸ್ಟ್’ ಟೀಮ್

    ಮನೆಗೆ ಮುದ್ದು ಮಗಳು ಆಗಮನವಾಗಿರುವ ಖುಷಿಯಲ್ಲಿ ನಿರ್ದೇಶಕ ಪವನ್ ಒಡೆಯರ್ ಬ್ರೇಕ್ ತೆಗೆದುಕೊಂಡಿದ್ದಾರೆ. ಸದ್ಯದಲ್ಲೇ ಬಾಲಿವುಡ್ ಸಿನಿಮಾ ತೆರೆಗೆ ಅಪ್ಪಳಿಸೋದಾಗಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪವನ್ ಒಡೆಯರ್ ಅಪೇಕ್ಷಾ ದಂಪತಿ ಮಗನ ಹೆಸರು ಶೌರ್ಯ

    ಪವನ್ ಒಡೆಯರ್ ಅಪೇಕ್ಷಾ ದಂಪತಿ ಮಗನ ಹೆಸರು ಶೌರ್ಯ

    ಬೆಂಗಳೂರು: ಯುವ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ದಂಪತಿ ಗಂಡು ಮಗು ಹುಟ್ಟಿರುವ ವಿಚಾರ ಗೊತ್ತೇ ಇದೆ. ಇದೀಗ ದಂಪತಿ ತಮ್ಮ ಮುದ್ದಿನ ಮಗನಿಗೆ ಹೆಸರಿಟ್ಟಿದ್ದಾರೆ.

     

    ಹೌದು. ತಮ್ಮ ಮಗನ ಹೆಸರನ್ನು ದಂಪತಿ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಮಗನಿಗೆ ಶೌರ್ಯ ಎಂದು ಹೆಸರಿಟ್ಟಿದ್ದಾರೆ.

    ಮುದ್ದಿನ ಮಗನಿಗೆ ಹೆಸರಿಟ್ಟಿರುವುದನ್ನು ಒಂದು ಪುಟ್ಟ ವೀಡಿಯೋ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಮಗನ ನಾಮಕರಣದ ಒಂದು ಫೋಟೋ ಹಾಗೂ ಮಗುವಿನ ಕೆಲವು ಮುದ್ದಾದ ಫೋಟೋಗಳನ್ನು ಕೂಡ ವೀಡಿಯೋದಲ್ಲಿ ಸೇರಿಸಿದ್ದಾರೆ.

     

    View this post on Instagram

     

    A post shared by Pavan wadeyar (@pavanwadeyar)

    2020ರ ಡಿಸೆಂಬರ್ 10 ರಮದು ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ದಂಪತಿಗೆ ಮಗ ಹುಟ್ಟಿದ್ದನು. ಈ ಸಂತಸದ ವಿಚಾರವನ್ನು ಪವನ್ ಒಡೆಯರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದರು. ಪತ್ನಿ ಹಾಗೂ ಮಗು ಆಸ್ಪತ್ರೆಯಲ್ಲಿರುವ ಫೋಟೋವನ್ನು ಪವನ್ ತಮ್ಮ ಇನ್‍ಸ್ಟಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಅಲ್ಲದೆ ನನ್ನ ಜನ್ಮದಿನದಂದೇ ವಿಶ್ವದ ಅತ್ಯಂತ ಅದ್ಭುತ ಉಡುಗೊರೆ ದೊರೆತಿದ್ದು, ಗಂಡು ಮಗುವಿನ ಜನನವಾಗಿದೆ. ಜೈ ಚಾಮುಂಡೇಶ್ವರಿ ಎಂದು ಬರೆದುಕೊಂಡಿದ್ದರು.

    ಪವನ್ ಒಡೆಯರ್ ಮತ್ತು ನಟಿ ಅಪೇಕ್ಷಾ ಅವರು 2018ರ ಮೇ 20ರಂದು ಬಾಗಲಕೋಟೆ ಜಿಲ್ಲೆಯ ವಿದ್ಯಾಗಿರಿಯಲ್ಲಿರುವ ಗೌರಿ ಶಂಕರ್ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಅಪೇಕ್ಷಾ ಪುರೋಹಿತ್ ಬಾಗಲಕೋಟೆಯ ಮೂಲದವರಾಗಿದ್ದು, ಕನ್ನಡದ ಕಿರುತೆರೆ ನಟಿಯಾಗಿ ಅಭಿನಯಿಸಿದ್ದಾರೆ.

     

    View this post on Instagram

     

    A post shared by Pavan wadeyar (@pavanwadeyar)

     

  • ಜನ್ಮ ದಿನದಂದೇ ಅದ್ಭುತ ಗಿಫ್ಟ್- ಗಂಡು ಮಗುವಿನ ತಂದೆಯಾದ ಪವನ್ ಒಡೆಯರ್

    ಜನ್ಮ ದಿನದಂದೇ ಅದ್ಭುತ ಗಿಫ್ಟ್- ಗಂಡು ಮಗುವಿನ ತಂದೆಯಾದ ಪವನ್ ಒಡೆಯರ್

    ಬೆಂಗಳೂರು: ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ದಂಪತಿಗೆ ಗಂಡು ಮಗುವಿನ ಜನನವಾಗಿದೆ.

    ವಿಶೇಷ ಅಂದ್ರೆ ಇಂದು ಪವನ್ ಒಡೆಯರ್ ಅವರ ಹುಟ್ಟುಹಬ್ಬವಾಗಿದೆ. ಹೀಗಾಗಿ ಇಂದೇ ಮಗನ ಜನನ ಕೂಡ ಆಗಿರುವುದು ಕುಟುಂಬದ ಸಂತಸ ಮತ್ತಷ್ಟು ಹೆಚ್ಚಿಸಿದೆ. ಈ ಖುಷಿಯ ವಿಚಾರವನ್ನು ಪವನ್ ಒಡೆಯರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಪತ್ನಿ ಹಾಗೂ ಮಗು ಆಸ್ಪತ್ರೆಯಲ್ಲಿರುವ ಫೋಟೋವನ್ನು ಪವನ್ ತಮ್ಮ ಇನ್‍ಸ್ಟಾ, ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅಲ್ಲದೆ ನನ್ನ ಜನ್ಮದಿನದಂದೇ ವಿಶ್ವದ ಅತ್ಯಂತ ಅದ್ಭುತ ಉಡುಗೊರೆ ದೊರೆತಿದ್ದು, ಗಂಡು ಮಗುವಿನ ಜನನವಾಗಿದೆ. ಜೈ ಚಾಮುಂಡೇಶ್ವರಿ ಎಂದು ಬರೆದುಕೊಂಡಿದ್ದಾರೆ.

    https://twitter.com/PavanWadeyar/status/1314234597077471234

    ಪವನ್ ಒಡೆಯರ್ ಮತ್ತು ನಟಿ ಅಪೇಕ್ಷಾ ಅವರು 2018ರ ಮೇ 20ರಂದು ಬಾಗಲಕೋಟೆ ಜಿಲ್ಲೆಯ ವಿದ್ಯಾಗಿರಿಯಲ್ಲಿರುವ ಗೌರಿ ಶಂಕರ್ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಅಪೇಕ್ಷಾ ಪುರೋಹಿತ್ ಬಾಗಲಕೋಟೆಯ ಮೂಲದವರಾಗಿದ್ದು, ಕನ್ನಡದ ಕಿರುತೆರೆ ನಟಿಯಾಗಿ ಅಭಿನಯಿಸಿದ್ದಾರೆ.

    ಮೊದಲ ಮಗುವಿನ ಸಂತಸದಲ್ಲಿದ್ದ ದಂಪತಿ ಈ ವಿಚಾರವನ್ನು ಸೋಶಿಯಲ್ ಮೀಡಿಯಾದ ಮೂಲಕ ಹಂಚಿಕೊಂಡಿದ್ದರು. ಅಲ್ಲದೇ ಅಪೇಕ್ಷಾ ಪುರೋಹಿತ್ ಗರ್ಭಿಣಿ ಫೋಟೋಶೂಟ್ ಕೂಡ ಮಾಡಿಸಿದ್ದರು. ಪತ್ನಿಯ ಜೊತೆ ಪವನ್ ಒಡೆಯರ್ ಕೂಡ ಫೋಟೋಗೆ ಪೋಸ್ ಕೊಟ್ಟಿದ್ದರು. ವಿವಿಧ ರೀತಿಯಲ್ಲಿ ದಂಪತಿ ಫೋಟೋಶೂಟ್ ಮಾಡಿದ್ದು, ಇಬ್ಬರು ಮುದ್ದಾಗಿ ಕಾಣಿಸಿಕೊಂಡಿದ್ದರು.

    ಈ ಫೋಟೋವನ್ನು ಪವನ್ ಅವರು ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿದ್ದು, ‘ಸದಾ ವಟ ವಟ ಮಾತನಾಡುವ ನಾನು. ಮೌನಿಯಾದ ಕ್ಷಣಗಳು. ಹೌದು. ನಮ್ಮ ಜೀವನದ ಅತ್ಯಂತ ಸುಂದರ ದಿನಗಳಿಗಾಗಿ ಹಾತೊರೆಯುತ್ತಿದ್ದೇವೆ. ಮಾತುಗಳಲ್ಲಿ ಆ ಖುಷಿ ಹೇಳಲಾಗದೆ. ಹಾಡಿನ ರೂಪದಲ್ಲಿ ವ್ಯಕ್ತಪಡಿಸುವ ಪ್ರಯತ್ನ ಮಾಡಿದ್ದೇವೆ. ಆ ಮುಗುಳುನಗೆ ಹಾಡಿಗಾಗಿ ನಿರೀಕ್ಷಿಸಿ’ ಎಂದು ಬರೆದುಕೊಂಡಿದ್ದರು. ಇದೀಗ ದಂಪತಿಗೆ ಗಂಡು ಮಗು ಹುಟ್ಟಿದ್ದು, ಕುಟುಂಬ ಸಂಸತದಲ್ಲಿದೆ.

     

    View this post on Instagram

     

    A post shared by Pavan wadeyar (@pavanwadeyar)

  • ಪವನ್ ಒಡೆಯರ್ ಪತ್ನಿಗೆ ಸೀಮಂತ ಸಂಭ್ರಮ

    ಪವನ್ ಒಡೆಯರ್ ಪತ್ನಿಗೆ ಸೀಮಂತ ಸಂಭ್ರಮ

    ಬೆಂಗಳೂರು: ಇತ್ತೀಚೆಗಷ್ಟೆ ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಮತ್ತು ಪತ್ನಿ ಅಪೇಕ್ಷಾ ಪುರೋಹಿತ್ ತಂದೆ-ತಾಯಿ ಆಗುತ್ತಿರುವ ಸಂತಸವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ತುಂಬು ಗರ್ಭಿಣಿ ಅಪೇಕ್ಷಾ ಅವರಿಗೆ ಸೀಮಂತ ಶಾಸ್ತ್ರ ನೆರವೇರಿದೆ. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಪವನ್ ಒಡೆಯರ್ ದಂಪತಿ – ಫೋಟೋಶೂಟ್

    ಅಪೇಕ್ಷಾ ಪುರೋಹಿತ್ ಅವರ ಸೀಮಂತ ಕಾರ್ಯಕ್ರಮ ಮಾಡಲಾಗಿದೆ. ಈ ಸುಂದರ ಕ್ಷಣಗಳ ಫೋಟೋವನ್ನು ನಿರ್ದೇಶಕ ಪವನ್ ಒಡೆಯರ್ ಟ್ವಿಟ್ಟರಿನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತುಂಬಾ ಸರಳವಾಗಿ ಸೀಮಂತ ಶಾಸ್ತ್ರ ಮಾಡಲಾಗಿದ್ದು, ಕುಟುಂಬದವರು ಮತ್ತು ಆಪ್ತರು ಮಾತ್ರ ಸೀಮಂತ ಸಂಭ್ರಮದಲ್ಲಿ ಭಾಗಿಯಾಗಿದ್ದರು.

    ತುಂಬು ಗರ್ಭಿಣಿ ಅಪೇಕ್ಷಾ ಹಸಿರು ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ. ಜೊತೆಗೆ ಇಷ್ಟದ ತಿನಿಸುಗಳನ್ನು ಇಟ್ಟು ಬಯಕೆ ಶಾಸ್ತ್ರ ಮಾಡಿಸಿಕೊಂಡಿದ್ದಾರೆ. ಪೂಜೆ ಮತ್ತು ಶಾಸ್ತ್ರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    ಕೆಲ ದಿನಗಳ ಹಿಂದೆಯಷ್ಟೆ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ದಂಪತಿ ಅಭಿಮಾನಿಗಳು ಗುಡ್‍ನ್ಯೂಸ್ ಕೊಟ್ಟಿದ್ದರು. ಅಂದರೆ ತಾವು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ಪವನ್ ಒಡೆಯರ್ ಸೋಶಿಯಲ್ ಮೀಡಿಯಾದ ಮೂಲಕ ಹಂಚಿಕೊಂಡಿದ್ದರು. “ಸದಾ ವಟ ವಟ ಮಾತನಾಡುವ ನಾನು. ಮೌನಿಯಾದ ಕ್ಷಣಗಳು. ಹೌದು ನಮ್ಮ ಜೀವನದ ಅತ್ಯಂತ ಸುಂದರ ದಿನಗಳಿಗಾಗಿ ಹಾತೊರೆಯುತ್ತಿದ್ದೇವೆ. ಮಾತುಗಳಲ್ಲಿ ಆ ಖುಷಿ ಹೇಳಲಾಗದೆ. ಹಾಡಿನ ರೂಪದಲ್ಲಿ ವ್ಯಕ್ತಪಡಿಸುವ ಪ್ರಯತ್ನ ಮಾಡಿದ್ದೇವೆ. ಆ ಮುಗುಳುನಗೆ ಹಾಡಿಗಾಗಿ ನಿರೀಕ್ಷಿಸಿ” ಎಂದು ಬರೆದುಕೊಂಡಿದ್ದರು.

    https://twitter.com/PavanWadeyar/status/1314234597077471234

    ಪವನ್ ಒಡೆಯರ್ ಹಾಡಿನ ಮೂಲಕ ತಾವು ತಂದೆಯಾಗುತ್ತಿರುವ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಶೀಫ್ರದಲ್ಲೇ ಹಾಡನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೇ ಅಪೇಕ್ಷಾ ಪುರೋಹಿತ್ ಗರ್ಭಿಣಿ ಫೋಟೋಶೂಟ್ ಮಾಡಿಸಿದ್ದು, ಪತ್ನಿಯ ಜೊತೆ ಪವನ್ ಒಡೆಯರ್ ಕೂಡ ಫೋಟೋಗೆ ಪೋಸ್ ಕೊಟ್ಟಿದ್ದರು. ವಿವಿಧ ರೀತಿಯಲ್ಲಿ ದಂಪತಿ ಫೋಟೋಶೂಟ್ ಮಾಡಿದ್ದು, ಇಬ್ಬರು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

  • ‘ಈಗ ಮೂಡ್ ಇಲ್ಲ, ನೆಕ್ಸ್ಟ್ ಟೈಮ್ ಸಿಕ್ಕಾಗ ಹೇಳ್ತೀನಿ’ – ರಾಕಿಭಾಯ್ ಗೂಗ್ಲಿಗೆ ಪವನ್ ಒಡೆಯರ್ ಬೌಲ್ಡ್

    ‘ಈಗ ಮೂಡ್ ಇಲ್ಲ, ನೆಕ್ಸ್ಟ್ ಟೈಮ್ ಸಿಕ್ಕಾಗ ಹೇಳ್ತೀನಿ’ – ರಾಕಿಭಾಯ್ ಗೂಗ್ಲಿಗೆ ಪವನ್ ಒಡೆಯರ್ ಬೌಲ್ಡ್

    ಬೆಂಗಳೂರು: ಪವನ್ ಒಡೆಯರ್ ನಿರ್ದೇಶನ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಗೂಗ್ಲಿ ಸಿನಿಮಾ ತೆರೆಕಂಡ ನಿನ್ನೆಗೆ 7 ವರ್ಷವಾಗಿದೆ. ಈ ಸಮಯದಲ್ಲಿ ಚಿತ್ರತಂಡ ಸಿನಿಮಾದ ಯಶಸ್ಸನ್ನು ನೆನಪಿಸಿಕೊಂಡಿದೆ.

    2013ರ ಜುಲೈ 19ರಂದು ಗೂಗ್ಲಿ ಸಿನಿಮಾ ತೆರೆಕಂಡಿತ್ತು. ಯಶ್ ನಾಯಕನಾಗಿ, ಕೃತಿ ಕರಬಂಧ ನಾಯಕಿಯಾಗಿ ಮಿಂಚಿದ್ದರು. ಲವ್, ಕಾಲೇಜ್ ಲೈಫ್, ಸಕ್ಸಸ್ ಹೀಗೆ ಎಲ್ಲ ಅಂಶಗಳನ್ನು ಒಳಗೊಂಡಿದ್ದ ಸಿನಿಮಾ ಅಂದು ಕಾಲೇಜು ಯುವಕ-ಯುವತಿಯರಿಗೆ ಬಹಳ ಇಷ್ಟ ಆಗಿತ್ತು. ಈ ಮೂರು ಕಥೆ ಹಂದರವನ್ನು ಇಟ್ಟುಕೊಂಡು ಸ್ಟೋರಿ ಹೇಳುವಲ್ಲಿ ನಿರ್ದೇಶಕ ಪವನ್ ಒಡೆಯರ್ ಗೆದ್ದು ಬೀಗಿದ್ದರು. ಈ ಸಿನಿಮಾ ಹಿಟ್ ಆಗಿ ಯಶ್ ಅವರಿಗೆ ಒಳ್ಳೆಯ ನೇಮ್ ತಂದುಕೊಟ್ಟಿತ್ತು. ಜೊತೆಗೆ ಗಲ್ಲಾ ಪೆಟ್ಟಿಗೆಯಲ್ಲೂ ಸದ್ದು ಮಾಡಿತ್ತು.

    ಈಗ ಈ ಸಿನಿಮಾಗೆ 7 ವರ್ಷ ತುಂಬಿದ ನೆನಪಿನಲ್ಲಿ ಚಿತ್ರದ ನಾಯಕ ರಾಂಕಿಗ್ ಸ್ಟಾರ್ ಯಶ್ ಅವರು ಟ್ವೀಟ್ ಮಾಡಿದ್ದು, ಸಿನಿಮಾರಂಗಕ್ಕೆ ಬಂದು 12 ವರ್ಷ ತುಂಬಿದ ದಿನವನ್ನು ಸ್ಪೆಶಲ್ ಆಗಿ ಆಚರಣೆ ಮಾಡಿದ ಎಲ್ಲರಿಗೂ ಧನ್ಯವಾದ. ಇದರ ಜೊತೆಗೆ ಗೂಗ್ಲಿ ಸಿನಿಮಾ ತೆರೆಕಂಡು ಇಂದಿಗೆ 7 ವರ್ಷ ತುಂಬಿದೆ. ಹೀಗಾಗಿ ಗೂಗ್ಲಿ ಸಿನಿಮಾ ತಂಡಕ್ಕೆ ಧನ್ಯವಾದ. ಜಯಣ್ಣ ಫಿಲಮ್ಸ್, ಪವನ್ ಒಡೆಯರ್, ಕೃತಿ ಕರಬಂಧ ಸೇರಿದಂತೆ ಸಿನಿಮಾ ನಿರ್ಮಾಣದಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.

    ಯಶ್ ಅವರ ಟ್ವೀಟ್‍ಗೆ ರೀಟ್ವೀಟ್ ಮಾಡಿರುವ ಪವನ್ ಒಡೆಯರ್ ಅವರು ಧನ್ಯವಾದಗಳು, ಗೂಗ್ಲಿ ಎಂದರೆ ಇದು ಎಂದು ಹೇಳಿದ್ದರು. ಇದಕ್ಕೆ ಮತ್ತೆ ರೀಟ್ವೀಟ್ ಮಾಡಿರುವ ಯಶ್ ಅವರು, ನೀನು ಮತ್ತೊಮ್ಮೆ ಗೂಗ್ಲಿ ಎಂದರೆ. ಈಗ ಆದ್ರೂ ಬಗ್ಗೆ ಹೇಳುವ ಮೂಡ್ ಇಲ್ಲ. ನೆಕ್ಸ್ಟ್ ಟೈಮ್ ಸಿಕ್ಕಾಗ ಹೇಳುತ್ತೇನೆ ಎಂದು ಒಡೆಯರ್ ಅವರ ಕಾಲೆಳೆದಿದ್ದಾರೆ. ಈಗ ಹೇಳುವ ಮೂಡ್ ಇಲ್ಲ. ನೆಕ್ಸ್ಟ್ ಟೈಮ್ ಸಿಕ್ಕಾಗ ಹೇಳುತ್ತೇನೆ ಎನ್ನುವ ಡೈಲಾಗ್ ಗೂಗ್ಲಿ ಮೂವಿಯಲ್ಲಿದ್ದು, ಆ ಕಾಲಕ್ಕೆ ಬಹಳ ಜನಪ್ರಿಯವಾಗಿತ್ತು.

    ತಾನೂ ಅಭಿನಯಿಸಿದ ಚಿತ್ರ ತೆರೆಕಂಡು ಏಳು ವರ್ಷವಾದ ಸಂಭ್ರಮದಲ್ಲಿ ಟ್ವೀಟ್ ಮಾಡಿರುವ ನಾಯಕ ನಟಿ ಕೃತಿ ಕರಬಂಧ, ಡಾಕ್ಟ್ರೇ ಎಂಬುದು ನನ್ನ ನೆಚ್ಚಿನ ನಿಕ್‍ನೇಮ್ ಆಗಿದೆ. ನನಗೆ ಈ ಮೂವಿ ಬಗ್ಗೆ ಹೆಮ್ಮೆ ಇದೆ. ಪವನ್ ಒಡೆಯರ್, ಜಯಣ್ಣ ಫಿಲಮ್ಸ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಧನ್ಯವಾದಗಳು ಮತ್ತು ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ರೀಟ್ವೀಟ್ ಮಾಡಿರುವ ಪವನ್ ನಿಮಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

  • ಪತ್ನಿಯ ಹುಟ್ಟುಹಬ್ಬಕ್ಕೆ ಶುಭಕೋರಿ ವಿಶೇಷ ಮನವಿ ಸಲ್ಲಿಸಿದ ಪವನ್ ಒಡೆಯರ್

    ಪತ್ನಿಯ ಹುಟ್ಟುಹಬ್ಬಕ್ಕೆ ಶುಭಕೋರಿ ವಿಶೇಷ ಮನವಿ ಸಲ್ಲಿಸಿದ ಪವನ್ ಒಡೆಯರ್

    ಬೆಂಗಳೂರು: ನಿರ್ದೇಶಕ ಪವನ್ ಒಡೆಯರ್ ತಮ್ಮ ಪತ್ನಿ, ನಟಿ ಅಪೇಕ್ಷಾ ಪುರೋಹಿತ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ವಿಶೇಷ ಮನವಿಯೊಂದನ್ನು ಸಲ್ಲಿಸಿದ್ದಾರೆ.

    ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಪತ್ನಿಯ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿರುವ ಪವನ್ ಒಡೆಯರ್, ಅದ್ಭುತ ಸ್ನೇಹಿತೆ, ಮಹಾನ್ ವಾಗ್ಮಿ, ಈ ಒಡೆಯರ್‍ನ ಸಂಪೂರ್ಣ ಜೀವನದ ಒಡತಿ. ಈ ನಿನ್ನ ಹುಟ್ಟುಹಬ್ಬದ ದಿನದಂದು ನನ್ನ ಒಂದು ಬಿನ್ನಹ, ಗೂಗಲ್‍ಗೂ ಕನ್‍ಫ್ಯೂಸ್ ಮಾಡುವಂಥ ಪ್ರಶ್ನೆಗಳನ್ನು ಸ್ವಲ್ಪ ಕಡಿಮೆ ಮಾಡ್ಕೋ ಬಂಗಾರಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಎಂತಹ ಕಷ್ಟ ಬಂದ್ರೂ ಎದುರಿಸೋದನ್ನ ಕಲಿಸಿರುವುದೇ ದರ್ಶನ್ ಸರ್: ಪವನ್ ಒಡೆಯರ್

    ಪತ್ನಿಯ ಹುಟ್ಟುಹಬ್ಬಕ್ಕೆ ಪವನ್ ಒಡೆಯರ್ ಕಾರ್ ಗಿಫ್ಟ್ ನೀಡಿದ್ದಾರೆ. ಪವನ್ ಒಡೆಯರ್ ಮತ್ತು ನಟಿ ಅಪೇಕ್ಷಾ ಅವರು 2018ರ ಮೇ 20ರಂದು ಬಾಗಲಕೋಟೆ ಜಿಲ್ಲೆಯ ವಿದ್ಯಾಗಿರಿಯಲ್ಲಿರುವ ಗೌರಿ ಶಂಕರ್ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು.

    ಅಪೇಕ್ಷಾ ಪುರೋಹಿತ್ ಬಾಗಲಕೋಟೆಯ ಮೂಲದವರಾಗಿದ್ದು, ಕನ್ನಡದ ಕಿರುತೆರೆ ನಟಿಯಾಗಿ ‘ತ್ರಿವೇಣಿ ಸಂಗಮ’, ‘ಕಿನ್ನರಿ’, ‘ಸಾಗುತ ದೂರ ದೂರ’ ‘ಮರಳಿ ಬಂದಳು ಸೀತೆ’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ಟಿಎನ್ ಸೀತಾರಾಮ್ ಅವರ `ಕಾಫೀ ತೋಟ’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು.

    ನಿರ್ದೇಶಕ ಪವನ್ ಒಡೆಯರ್ ‘ರಣವಿಕ್ರಮ’, ‘ನಟರಾಜ ಸರ್ವಿಸ್’, ‘ಗೂಗ್ಲಿ’, ‘ಗೋವಿಂದಾಯ ನಮಃ’ ಹಾಗೂ ‘ನಟ ಸಾರ್ವಭೌಮ’ ಸಿನಿಮಾಗಳನ್ನು ಮಾಡಿದ್ದಾರೆ.