Tag: Pavan Kumar

  • ವೆಬ್ ಸಿರೀಸ್‌ಗಾಗಿ ಬಣ್ಣ ಹಚ್ಚಿದ ಲೂಸಿಯಾ ನಿರ್ದೇಶಕ ಪವನ್

    ವೆಬ್ ಸಿರೀಸ್‌ಗಾಗಿ ಬಣ್ಣ ಹಚ್ಚಿದ ಲೂಸಿಯಾ ನಿರ್ದೇಶಕ ಪವನ್

    ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ಗೌಡ ನೇತೃತ್ವದ ಕೆಆರ್‌ಜಿ ಸ್ಟುಡಿಯೋಸ್ (KRG Studios) ಕಡಿಮೆ ಅವಧಿಯಲ್ಲಿಯೇ ಸಿನಿಮಾ ನಿರ್ಮಾಣ ಹಾಗೂ ಸಿನಿಮಾ ವಿತರಣೆ ವಿಭಾಗದಲ್ಲಿ ಹೆಸರುಗಳಿಸಿಕೊಂಡಿದೆ. ಭಿನ್ನ, ಗುಣಮಟ್ಟದ ಸಿನಿಮಾಗಳನ್ನು ಕನ್ನಡದಲ್ಲಿ ನಿರ್ಮಿಸುತ್ತಿರುವ ಕೆಆರ್‌ಜಿ ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದೆ.

    ಚಿತ್ರ ನಿರ್ಮಾಣ ಹಾಗೂ ವಿತರಣೆಯಲ್ಲಿ ಹೆಸರು ಮಾಡಿರುವ ಕೆಆರ್‌ಜಿ ಸ್ಟುಡಿಯೋ ವೆಬ್ ಸಿರೀಸ್ ನಿರ್ಮಾಣಕ್ಕಿಳಿದಿದೆ. Zee5 ಜೊತೆ ಕೈ ಜೋಡಿಸುವ ಮೂಲಕ ಕನ್ನಡ ಸಿನಿಪ್ರೇಕ್ಷಕರಿಗೆ ವೆಬ್ ಸರಣಿಗಳನ್ನು ಉಣಬಡಿಸುವ ತವಕದಲ್ಲಿದೆ. ಅದರ ಮೊದಲ ಭಾಗವಾಗಿ ಶೋಧ (Shodha Web Series) ಎಂಬ ವೆಬ್ ಸಿರೀಸ್‌ಗೆ ಕೆಆರ್‌ಜಿ ಬಂಡವಾಳ ಹೂಡಿದೆ.

    ಕೆಆರ್‌ಜಿ ಸ್ಟುಡಿಯೋಸ್ ನಿರ್ಮಿಸಿ, ಪ್ರೆಸೆಂಟ್ ಮಾಡುತ್ತಿರುವ ಶೋಧ ವೆಬ್ ಸರಣಿಗೆ ಸುನಿಲ್ ಮೈಸೂರು ಆಕ್ಷನ್ ಕಟ್ ಹೇಳಿದ್ದಾರೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಮನಸಾರೆ, ಪಂಚರಂಗಿ, ಲೈಫು ಇಷ್ಟೇನೆ ಮತ್ತು ಕಲ್ಟ್ ಸೈಕಲಾಜಿಕಲ್ ಥ್ರಿಲ್ಲರ್ ಲೂಸಿಯಾ ಸಿನಿಮಾಗಳ ಮೂಲಕ ನಟನೆ ಹಾಗೂ ನಿರ್ದೇಶನದಲ್ಲಿ ಹೆಸರು ಮಾಡಿರುವ ಪವನ್ ಕುಮಾರ್ (Pawan Kumar) ಶೋಧ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    ಶೋಧ ವೆಬ್ ಸರಣಿ ಬಗ್ಗೆ ಮಾತನಾಡಿರುವ ಪವನ್ ಕುಮಾರ್, ಶೋಧದಲ್ಲಿ ನಟಿಸುವುದು ನನಗೆ ಸಂಪೂರ್ಣವಾಗಿ ಹೊಸ ಪ್ರಯಾಣವಾಗಿದೆ. ಬರವಣಿಗೆ ಮತ್ತು ನಿರ್ದೇಶನದಿಂದ ಬಂದ ನಂತರ, ಕ್ಯಾಮೆರಾ ಮುಂದೆ ಹೆಜ್ಜೆ ಹಾಕುವುದು, ಭಾವನೆಗಳನ್ನು ಹೊಸ ರೀತಿಯಲ್ಲಿ ಅನ್ವೇಷಿಸಲು ಇದು ನನಗೆ ಸವಾಲು ಹಾಕಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಅಯ್ಯನ ಮನೆ ಸೂಪರ್ ಸಕ್ಸಸ್ ಬಳಿಕ Zee5ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಮತ್ತೊಂದು ವೆಬ್ ಸರಣಿಯೇ ಶೋಧ. ಆಗಸ್ಟ್ 22ರಂದು ಶೋಧ ವೆಬ್ ಸಿರೀಸ್ zee5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈಗಾಗಲೇ ಅಯ್ಯನ ಮನೆ ವೆಬ್ ಸರಣಿಗೆ ಭರಪೂರ ಮೆಚ್ಚುಗೆ ಸಿಕ್ಕಿದ್ದು, ಈಗ ಶೋಧ ತನ್ನ ಕಂಟೆಂಟ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದೆ.

  • ಎರಡೇ ದಿನದಲ್ಲಿ ಇಬ್ಬರನ್ನು ಕಳೆದುಕೊಂಡೆ – ಸರ್ಕಾರದ ವಿರುದ್ಧ ನಟ ಪವನ್ ಆಕ್ರೋಶ

    ಎರಡೇ ದಿನದಲ್ಲಿ ಇಬ್ಬರನ್ನು ಕಳೆದುಕೊಂಡೆ – ಸರ್ಕಾರದ ವಿರುದ್ಧ ನಟ ಪವನ್ ಆಕ್ರೋಶ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಕೈಮೀರುತ್ತಿದೆ. ಈ ನಡುವೆ ಕಿರುತೆರೆ ಕಲಾವಿದ ಗಟ್ಟಿಮೇಳದ ಪವನ್ ಕುಮಾರ್ ತಮ್ಮ ಕುಟುಂಬದ ಇಬ್ಬರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಕೊರೊನಾದಿಂದಾಗಿ ಮರಣ ಹೊಂದಿದ್ದಾರೆ. ರಾಜ್ಯ ಸರ್ಕಾರ ಜನರ ಜೀವಕ್ಕೆ ಬೆಲೆ ಕೊಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಪವನ್ ತಮ್ಮ ಕುಟುಂಬದವರನ್ನು ಕಳೆದುಕೊಂಡ ದುಖಃದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡುವ ಮೂಲಕ ಕೊರೊನಾ ಬಗ್ಗೆ ಜನರಿಗೆ ಅರಿವು ಮೂಡಿಸಿದ್ದಾರೆ. ಪವನ್ ಕುಟುಂಬದಲ್ಲಿ ಇಬ್ಬರು ಕೊರೊನಾದಿಂದಾಗಿ ಬೆಡ್ ಸಿಗದೇ ಬಲಿಯಾಗಿದ್ದರು.

    ಇದರಿಂದ ನೊಂದ ಪವನ್ ಅವರು ಸರ್ಕಾರದ ಅವ್ಯವಸ್ಥೆಗೆ ನಾನು ಕುಟುಂಬದವರನ್ನು ಕಳೆದುಕೊಂಡೆ. ನನ್ನ ಕಣ್ಣ ಎದುರಲ್ಲೇ ಭಾವ ಮತ್ತು ಅವರ ತಂದೆಯನ್ನು ಕೊರೊನ ಬಲಿ ಪಡೆದಿದೆ. ಕೊರೊನ ಎರಡನೇ ಅಲೆ ತುಂಬಾ ಭಯಾನಕವಾಗಿದೆ. ಸರ್ಕಾರ ಜನರಿಗೆ ಹೇಳುತ್ತಿರುವುದು ಬರಿ ಸುಳ್ಳು. ರಾಜಕಾರಣಿಗಳು ಹೇಳುತ್ತಿರುವುದು ಸಾವಿನ ಸಂಖ್ಯೆ ಕೂಡ ಸುಳ್ಳು ಎಂದು ಸರ್ಕಾರದ ವಿರುದ್ಧ ವಾಗ್ದಾಲಿ ನಡೆಸಿದ್ದಾರೆ.

    ಎರಡು ದಿನಗಳ ಅಂತರದಲ್ಲಿ ನನ್ನ ಕುಟುಂಬದ ಇಬ್ಬರು ಸದಸ್ಯರನ್ನು ಕಳೆದುಕೊಂಡ ನನಗೆ ಕೊರೊನಾದ ಬಗ್ಗೆ ನಿಜ ಅರಿವಾಗಿದೆ. ಸರ್ಕಾರ ಜನರ ಜೀವಕ್ಕೆ ಬೆಲೆ ಕೊಡುತ್ತಿಲ್ಲ. ದಯವಿಟ್ಟು ಸಾರ್ವಜನಿಕರು ಮನೆಯಿಂದ ಹೊರ ಬರಬೇಡಿ. ಸರ್ಕಾರಕ್ಕೆ ನಮಗೆ ಬೇಕಾದ ಆಕ್ಸಿಜನ್ ಕೋಡುವುದಕ್ಕೆ ಆಗುತ್ತಿಲ್ಲ. ಒಂದು ಹೆಣ ಸುಡಲು ಸ್ಮಶಾನದಲ್ಲಿ 5 ರಿಂದ 6 ಗಂಟೆ ಕಾಯುತ್ತಿರುವುದನ್ನು ನೋಡಿದರೆ ಜನರ ಸಾವಿನ ಸಂಖ್ಯೆ ಎಷ್ಟಿರಬಹುದೆಂದು ನೀವೇ ಯೋಚಿಸಿ. ಸಾರ್ವಜನಿಕರು ದಯವಿಟ್ಟು ಎಚ್ಚರ ವಹಿಸಿಕೊಂಡು ನಿಮ್ಮ ಜೀವ ನೀವೇ ಉಳಿಸಿಕೊಳ್ಳಬೇಕು ಎಂದು ಮನವಿಮಾಡಿಕೊಂಡಿದ್ದಾರೆ.