Tag: pavagada

  • ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಬಸ್ ಪಲ್ಟಿ:8 ಮಂದಿ ಸಾವು

    ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಬಸ್ ಪಲ್ಟಿ:8 ಮಂದಿ ಸಾವು

    ತುಮಕುರು: ಖಾಸಗಿ ಬಸ್ ಪಲ್ಟಿಯಾಗಿ 8 ಮಂದಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಪಳವಳ್ಳಿ ಕಟ್ಟೆ ಮೇಲೆ ನಡೆದಿದೆ.

    ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಮೇಲೆ ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಬಸ್ ಪಲ್ಟಿಯಾಗಿದೆ. ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

    ಎಸ್.ವಿ.ಟಿ. ಎಂಬ ಖಾಸಗಿ ಬಸ್‍ನಲ್ಲಿ ಒಟ್ಟು 30ಕ್ಕೂ ಹೆಚ್ಚು  ಪ್ರಯಾಣಿಕರು ಇದ್ದರು. ಘಟನೆಯಲ್ಲಿ 25ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಪಾವಗಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸ್ಥಳಕ್ಕೆ ಪಾವಗಡ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯರು ಆಸ್ಪತ್ರೆಗೆ ರವಾನಿಸುತ್ತಿದ್ದಾರೆ. ಗಾಯಾಳುಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಮುಂದಿನ ಮೂರು ದಿನ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

  • ಪಾವಗಡದಲ್ಲಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ

    ಪಾವಗಡದಲ್ಲಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ

    ತುಮಕೂರು: ಬಿಜೆಪಿ ಕಾರ್ಯಕರ್ತರೊಬ್ಬರನ್ನು ಪಾವಗಡ ಹೊರವಲಯದ ಬಿ.ಕೆಹಳ್ಳಿ ಕ್ರಾಸ್ ಬಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

    ಪ್ರಸನ್ನ ಕುಮಾರ್ (46) ಕೊಲೆಯಾದ ವ್ಯಕ್ತಿ. ಪಾವಗಡದಿಂದ ಸ್ವಗ್ರಾಮ ಅಪ್ಪಾಜಿಹಳ್ಳಿಗೆ ಬೈಕ್ ನಲ್ಲಿ ತೆರಳುತ್ತಿದ್ದ ಪ್ರಸನ್ನಕುಮಾರ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಇದನ್ನೂ ಓದಿ: ವಿಚ್ಛೇದನದ ಬಳಿಕ ಕುಗ್ಗಿಹೋಗಿ, ಸಾಯುವ ಹಂತ ತಲುಪುತ್ತೇನೆ ಎಂದುಕೊಂಡಿದ್ದೆ: ಸಮಂತಾ

    ಮಂಗಳವಾರ ಸಂಜೆ 5 ಗಂಟೆಯ ವೇಳೆ ಕೃತ್ಯ ನಡೆದಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್ ಭೇಟಿ ನೀಡಿದ್ದಾರೆ.

    ವಿಧಾನಪರಿಷತ್ ಚುನಾವಣೆ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿದ್ದ ಪ್ರಸನ್ನ ಕುಮಾರ್ ತಾಲೂಕು ಬಿಜೆಪಿಯಲ್ಲಿ ರೈತ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯನಾಗಿಯೂ ಗುರುತಿಸಿಕೊಂಡಿದ್ದರು. ಇದನ್ನೂ ಓದಿ: ಲಹರಿ ಸಂಸ್ಥೆ ಹೊರ ತಂದ ರಿಕ್ಕಿ ಕೇಜ್‌ ಆಲ್ಬ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನ

  • ಪ್ರಧಾನಿ ಮೋದಿಗೆ ಪಾವಗಡದ ಫೋಟೋಗ್ರಾಫರ್

    ಪ್ರಧಾನಿ ಮೋದಿಗೆ ಪಾವಗಡದ ಫೋಟೋಗ್ರಾಫರ್

    ತುಮಕೂರು: ಪ್ರಧಾನಿ ಮೋದಿ ಕಲ್ಪತರುನಾಡು ತುಮಕೂರಿಗೆ ನಿನ್ನೆಯಷ್ಟೇ ಭೇಟಿ ನೀಡಿದ್ದರು. ಇದೇ ವೇಳೆ ಪ್ರಧಾನಿಗಳ ಜೊತೆಗಿದ್ದ ಫೋಟೋಗ್ರಾಫರ್ ಕೂಡ ಜಿಲ್ಲೆಯ ಪಾವಗಡ ತಾಲೂಕಿನವರು ಎಂಬ ವಿಚಾರ ಬಹಿರಂಗಗೊಂಡಿದೆ.

    ಪಾವಗಡ ತಾಲೂಕಿನ ಓಬಳಾಪುರ ಮೂಲದ ಯಡಲಮ್ ಕೃಷ್ಣಮೂರ್ತಿ ಲೋಕನಾಥ್ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋಗ್ರಾಫರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಪ್ರಧಾನಿ ಮೋದಿಯವರ ಬಹುತೇಕ ಎಲ್ಲಾ ಕಾರ್ಯಕ್ರಮಗಳಲ್ಲೂ ಲೋಕನಾಥ್ ಅವರೇ ಛಾಯಾಗ್ರಾಹಕರಾಗಿದ್ದಾರೆ. ಪ್ರಧಾನಿ ಕಾರ್ಯಾಲಯದ ಪ್ರಸಾರ ಭಾರತಿ ಉದ್ಯೋಗಿ ಹಾಗೂ ಇಲಾಖೆಯ ಪ್ರಧಾನ ಫೋಟೋ ಹಾಗೂ ವೀಡಿಯೋಗ್ರಾಫರ್ ಎಂಬ ಮಾಹಿತಿ ತಿಳಿದು ಬಂದಿದೆ. ಯಡಲಮ್ ಕೃಷ್ಣಮೂರ್ತಿ ಅವರ ತಂದೆ ಹೆಸರಾಗಿದ್ದು, ತಮ್ಮ ಹೆಸರಿನ ಆರಂಭದಲ್ಲಿ ತಂದೆಯ ಹೆಸರು ಸೇರಿಸಿಕೊಂಡು ಯಡಲಮ್ ಕೃಷ್ಣಮೂರ್ತಿ ಲೋಕನಾಥ್ ಎಂದು ಗುರುತಿಸಿಕೊಂಡಿದ್ದಾರೆ.

    ಪಾವಗಡ ತಾಲೂಕಿನ ಓಬಳಾಪುರ ಇವರ ಮೂಲವಾಗಿದ್ದು, ತಂದೆ ಯಡಲಮ್ ಕೃಷ್ಣಮೂರ್ತಿ, ತಾಯಿಯ ಹೆಸರು ರತ್ನಮ್ಮ. ಓಬಳಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಪಾವಗಡ ಪಟ್ಟಣದಲ್ಲಿ ಪ್ರೌಢ ಶಿಕ್ಷಣ ಪಡೆದ ಇವರು ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಿದ್ದರು. ಬೆಂಗಳೂರಲ್ಲಿ ಫೋಟೋಗ್ರಾಫಿ ಕಲಿತು ಪ್ರಸಾರ ಭಾರತಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲೇ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ತಮ್ಮ ತವರು ಜಿಲ್ಲೆಗೆ ಪ್ರಧಾನಿ ಮೋದಿ ಆಗಮಿಸಿದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಲೋಕನಾಥ್ ಅವರು, ಜ.2ರಂದು ತುಮಕೂರಿಗೆ ಆಗಮಿಸುತ್ತಿರುವುದು ಸಂತಸ ತಂದಿದೆ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ನಾಡಿನ ಜನರಲ್ಲಿ ಅಚ್ಚರಿ ಮೂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

  • ದಲಿತ ಸಂಸದರಿಗೆ ಗ್ರಾಮಕ್ಕೆ ಬರದಂತೆ ತಡೆದ ಗ್ರಾಮಸ್ಥರು

    ದಲಿತ ಸಂಸದರಿಗೆ ಗ್ರಾಮಕ್ಕೆ ಬರದಂತೆ ತಡೆದ ಗ್ರಾಮಸ್ಥರು

    ತುಮಕೂರು: ಗುಡಿಸಲು ಮುಕ್ತ ಯೋಜನೆ ರೂಪಿಸಲು ಊರಿಗೆ ಬಂದ ದಲಿತ ಸಂಸದರನ್ನು ಗ್ರಾಮದೊಳಗೆ ಬಿಡದೇ ಗ್ರಾಮಸ್ಥರು ತಡೆ ಹಾಕಿದ ವಿಚಿತ್ರ ಘಟನೆ ತುಮಕೂರಲ್ಲಿ ನಡೆದಿದೆ. ಚಿತ್ರದುರ್ಗ ಬಿಜೆಪಿ ಸಂಸದ ನಾರಾಯಣಸ್ವಾಮಿಗೆ ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ನಿರ್ಬಂಧ ಹಾಕಲಾಗಿತ್ತು.

    ಖಾಸಗಿ ಕಂಪನಿಗಳ ತಂಡದೊಂದಿಗೆ ಊರಿಗೆ ಬಂದಿದ್ದ ಸಂಸದ ನಾರಾಯಣಸ್ವಾಮಿ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೂ ಭೇಟಿ ಕೊಟ್ಟಿದ್ದರು. ಈ ವೇಳೆ ಎದುರಾದ ಗೊಲ್ಲರಟ್ಟಿ ನಿವಾಸಿಗಳು ಹಟ್ಟಿಯ ಪ್ರವೇಶ ದ್ವಾರದಲ್ಲೇ ತಡೆದು ನಿಲ್ಲಿಸಿ, ಅಲ್ಲಿಯೇ ಕುರ್ಚಿ ಹಾಕಿ ಕೂರಲು ಮನವಿ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ನಿಮ್ಮ ಜನಾಂಗದವರು ಹಟ್ಟಿ ಒಳಗಡೆ ಹೋಗಬಾರದು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ತಂಡದಲ್ಲಿದ್ದ ಇನ್ನಿತರರನ್ನು ಹಟ್ಟಿ ಒಳಕ್ಕೆ ಬಿಟ್ಟುಕೊಂಡಿದ್ದಾರೆ.

    ಸಂಸದ ನಾರಾಯಣಸ್ವಾಮಿ ಎಷ್ಟೇ ಮನವೊಲಿಸಿದರೂ ಗೊಲ್ಲರಹಟ್ಟಿ ನಿವಾಸಿಗಳು ಒಳಕ್ಕೆ ಬಿಟ್ಟುಕೊಳ್ಳಲೇ ಇಲ್ಲ. ನೀವು ಗೊಲ್ಲರಹಟ್ಟಿ ಪ್ರವೇಶ ಮಾಡಿದರೆ ಕೇವಲ ನಮಗೆ ಮಾತ್ರ ಅಲ್ಲ, ನಿಮಗೂ ಕೆಟ್ಟದಾಗುತ್ತದೆ. ಬಲವಂತಾಗಿ ನುಗ್ಗಿದ, ಸುಳ್ಳು ಹೇಳಿ ಒಳಗೆ ಬಂದಿದ್ದ ಹಲವರಿಗೆ ಅನಾಹುತ ಉಂಟಾಗಿದೆ. ಆ ಅನಾಹುತ ನಿಮಗೆ ಆಗೋದು ಬೇಡ ಎಂದು ನಾರಾಯಣಸ್ವಾಮಿಗೆ ಸಮಾಧಾನಪಡಿಸಿದ್ದಾರೆ.

    ನೂರಾರು ವರ್ಷದ ಹಿಂದೆ ಗೊಲ್ಲರ ಚಿತ್ರಲಿಂಗೇಶ್ವರ ದೇವರು-ಹರಿಜನರ ದೇವರ ನಡುವೆ ಕೆಟ್ಟ ಘಟನೆ ನಡೆದಿತಂತೆ. ಅಲ್ಲಿಂದ ಇಲ್ಲಿವರೆಗೂ ಯಾವ ಹರಿಜನರನ್ನೂ ಬಿಟ್ಟುಕೊಳ್ಳುತ್ತಿಲ್ಲ ಎಂದು ಕಥೆ ಹೇಳಿದ್ದಾರೆ. ಇಷ್ಟೆಲ್ಲಾ ಅವಮಾನಗಳನ್ನ ಸಹಿಸಿಕೊಂಡು ಸಂಸದ ನಾರಾಯಣಸ್ವಾಮಿ ಸೌಜನ್ಯದಿಂಲೇ ಕಾರಿನಲ್ಲೇ ಕುಳಿತುಕೊಂಡರು.

    ನಾನು ಅತಿಹೆಚ್ಚು ಗೊಲ್ಲರ ಮತದಿಂದ ಗೆದ್ದು ಬಂದಿದ್ದೆನೆ. ಅವರ ಸಮುದಾಯಕ್ಕೆ ಏನಾದರೊಂದು ಒಳ್ಳೆದು ಮಾಡಬೇಕು ಎಂದು ಬಂದಿದ್ದೇನೆ. ಈ ಒಂದು ಕಾರಣಕ್ಕೆ ನೀವು ಅವಮಾನ ಮಾಡಿದರೂ ಸುಮ್ಮನಿದ್ದೇನೆ ಎಂದು ಸೌಜನ್ಯದಿಂದ ವರ್ತಿಸಿದರು. ಗೊಲ್ಲರಹಟ್ಟಿ ಒಳಗೆ ಹೋದ ತಂಡದ ಸದಸ್ಯರು ಹೊರಗೆ ಬರುವವರೆಗೂ ಸುಮಾರು ಅರ್ಧ ಗಂಟೆಗಳ ಕಾಲ ಸಂಸದರು ಕಾರಿನಲ್ಲಿ ಕುಳಿತು, ಬಳಿಕ ತಂಡದ ಜತೆ ಮರಳಿದ್ದಾರೆ.

  • ‘ಮಟ್ಕಾ ನಿಲ್ಲಿಸಿ, ಪಾವಗಡ ಉಳಿಸಿ’ ಅಭಿಯಾನ ಆರಂಭಿಸಿದ ಸ್ಥಳೀಯ ಯುವಕರು

    ‘ಮಟ್ಕಾ ನಿಲ್ಲಿಸಿ, ಪಾವಗಡ ಉಳಿಸಿ’ ಅಭಿಯಾನ ಆರಂಭಿಸಿದ ಸ್ಥಳೀಯ ಯುವಕರು

    ತುಮಕೂರು: ಜಿಲ್ಲೆಯ ಪಾವಗಡದಲ್ಲಿ ಮಿತಿಮೀರಿದ ನಡೆಯುತ್ತಿರುವ ಮಟ್ಕಾ ದಂಧೆಯನ್ನು ತಡೆಗಟ್ಟಲು ಯುವಕರು ‘ಮಟ್ಕಾ ನಿಲ್ಲಿಸಿ, ಪಾವಗಡ ಉಳಿಸಿ’ ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ.

    ಜಿಲ್ಲೆಯ ಪಾವಗಡ ತಾಲೂಕು ಪ್ರೇಕ್ಷಣಿಯ ಸ್ಥಳವಾಗಿದ್ದು, ಇಲ್ಲಿಗೆ ಸಾವಿರಾರು ಜನರು ಆಗಮಿಸುತ್ತಾರೆ. ಆದರೆ ಪಾವಗಡದಲ್ಲಿ ಸ್ಥಳೀಯರು ಮತ್ತು ಇತರೆ ಪ್ರದೇಶದಿಂದ ಬಂದ ಜನರು ಮಟ್ಕಾ ದಂದೆಯನ್ನು ನಡೆಸುತ್ತಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಮಟ್ಕಾ ದಂಧೆ ಹೆಚ್ಚಾಗಿದ್ದರಿಂದ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಅಭಿಯಾನ ಆರಂಭಿಸಿದ್ದಾರೆ.

    ಒಂದು ವಾರದಿಂದಲೇ ಈ ಅಭಿಯಾನವನ್ನು ಸ್ಥಳೀಯ ಯುವಕರು ಶುರು ಮಾಡಿದ್ದು, ಈಗಾಗಲೇ ಅಭಿಯಾನದ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದ ಮೂಲಕ ಯುವಕರು ಮಟ್ಕಾ ದಂಧೆಯನ್ನು ನಿಲ್ಲಿಸಬೇಕು. ಪಾವಗಡ ಪಟ್ಟಣದ ವೈ.ಎನ್ ಹೊಸಕೋಟೆ, ನಿಡುಗಲ್, ನಾಗಲಮಡಿಕೆ ಸೇರಿದ್ದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಮಿತಿಮೀರಿ ಮಟ್ಕಾ ದಂಧೆ ನಡೆಯುತ್ತಿದೆ. ಈ ಮಟ್ಕಾ ದಂಧೆಯಿಂದ ಸ್ಥಳೀಯ ಯುವ ಜನರು ಹಾಳಾಗುತ್ತಿದ್ದಾರೆ ಎಂದು ಪೋಸ್ಟ್ ಗಳಲ್ಲಿ ಬಿತ್ತರಿಸಲಾಗುತ್ತಿದೆ.

  • ಪಾವಗಡದಲ್ಲಿರೋ ಬೃಹತ್ ಸೋಲಾರ್ ಪಾರ್ಕ್ ಗೆ ಹಾಲಿವುಡ್ ನಟ ಮೆಚ್ಚುಗೆ

    ಪಾವಗಡದಲ್ಲಿರೋ ಬೃಹತ್ ಸೋಲಾರ್ ಪಾರ್ಕ್ ಗೆ ಹಾಲಿವುಡ್ ನಟ ಮೆಚ್ಚುಗೆ

    ಬೆಂಗಳೂರು: ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಸೋಲಾರ್ ಪಾರ್ಕ್‍ಗೆ ವಿಶ್ವ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತು ಹಾಲಿವುಡ್‍ನ ಖ್ಯಾತ ನಟ ಲಿಯೊನಾರ್ಡೊ ಡಿ ಕಾಪ್ರಿಯೊ ಸಹ ಟ್ವಿಟ್ಟರ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    ಸೋಲಾರ್ ಪಾರ್ಕ್ ಕುರಿತು ಅಮೆರಿಕದ ಲಾಸ್ ಏಂಜಲೀಸ್ ಟೈಮ್ಸ್ ವರದಿ ಪ್ರಕಟಿಸಿದೆ. `ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಭಾರತದಲ್ಲಿ ನಿರ್ಮಾಣವಾಗುತ್ತಿದೆ’ ಎಂಬ ಶೀರ್ಷಿಕೆಯಡಿ ಸೋಮವಾರ ಸೋಲಾರ್ ಪಾರ್ಕ್ ಬಗ್ಗೆ ವಿಸ್ತೃತ ವರದಿ ಪ್ರಕಟಿಸಲಾಗಿದೆ. ಸೋಲಾರ್ ಪಾರ್ಕ್ ಪೂರ್ಣಗೊಂಡ ಬಳಿಕ 2,000 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಲಿದ್ದು, 7 ಲಕ್ಷ ಮನೆಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಹಾಲಿವುಡ್ ನಟ ರೀಟ್ವೀಟ್: ವಿಶ್ವದ ಅತೀ ದೊಡ್ಡ ಸೋಲಾರ್ ಪಾರ್ಕ್ ಭಾರತದಲ್ಲಿ ನಿರ್ಮಾಣವಾಗುತ್ತಿರುವ ಬಗ್ಗೆ ನಟ ಲಿಯೊನಾರ್ಡೊ ಡಿ ಕಾಪ್ರಿಯೊ ಸಹ ಟ್ವಿಟರ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಲಾಸ್ ಏಂಜಲೀಸ್ ಟೈಮ್ಸ್‍ನ ವರದಿಯನ್ನು ಅವರು ರಿಟ್ವೀಟ್ ಮಾಡುವ ಮೂಲಕ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ `ರಾಹುಲ್ ಗಾಂಧಿ ಫ್ಯಾನ್ಸ್ ಫ್ರಮ್ ಬೆಳಗಾವಿ’ ಫೇಸ್‍ಬುಕ್ ಪುಟದಲ್ಲಿ `ಪಾವಗಡದ ಬೃಹತ್ ಸೌರಪಾರ್ಕ್ ಗೆ ಹಾಲಿವುಡ್ ನಟ ಲಿಯೊನಾರ್ಡೊ ಡಿ ಕಾಪ್ರಿಯೊ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಅಪ್ಲೋಡ್ ಮಾಡಿದ್ದಾರೆ.

    `2025ರ ವೇಳೆಗೆ ಅವಶ್ಯ ಇರುವ ಶೇ. 50ರಷ್ಟು ವಿದ್ಯುತ್ ಅನ್ನು ನವೀಕರಿಸಬಹುದಾದ ಇಂಧನಗಳ ಮೂಲಕವೇ ಉತ್ಪಾದಿಸುವುದು ನಮ್ಮ ಗುರಿ. ಈ ಕನಸಿಗೆ ನಾವು ಶಂಕುಸ್ಥಾಪನೆ ಮಾಡಿದ್ದೇವೆ. ಮುಂದಿನ 5-7 ವರ್ಷಗಳಲ್ಲಿ ಇದನ್ನು ಸಾಧಿಸುವ ಆಶಾಭಾವನೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಜತೆಗೆ, ಲಾಸ್ ಏಂಜಲೀಸ್ ಟೈಮ್ಸ್ ವರದಿಯನ್ನೂ ಉಲ್ಲೇಖಿಸಿದ್ದಾರೆ.

  • ನನ್ನದು ತುಮಕೂರು, ನನಗೆ ಮದುವೆ ಮಾಡಿಸ್ತೀಯಾ?- ಬೀದಿಯಲ್ಲಿ ಯುವತಿಯ ಹುಚ್ಚಾಟ

    ನನ್ನದು ತುಮಕೂರು, ನನಗೆ ಮದುವೆ ಮಾಡಿಸ್ತೀಯಾ?- ಬೀದಿಯಲ್ಲಿ ಯುವತಿಯ ಹುಚ್ಚಾಟ

    ತುಮಕೂರು: ನನ್ನದು ತುಮಕೂರು, ನನಗೆ ಮದುವೆ ಮಾಡಿಸ್ತೀಯಾ ಎಂದು ಯುವತಿಯಯೊಬ್ಬಳು ಹುಚ್ಚಾಟ ಮಾಡಿರುವ ಘಟನೆ ಪಾವಗಡ ಪಟ್ಟಣದಲ್ಲಿ ನಡೆದಿದೆ.

    ಸುಮಾರು 25 ವರ್ಷ ಪ್ರಾಯದ ಹುಡುಗಿ ಈ ರೀತಿ ಹುಚ್ಚಾಟ ಮಾಡಿದ್ದಾಳೆ. ಅರೆಹುಚ್ಚಿಯಂತೆ ಬೀದಿ ಬೀದಿಯಲ್ಲಿ ಡ್ಯಾನ್ಸ್ ಮಾಡುತ್ತಾ ಓಡಾಡುತ್ತಿದ್ದಾಳೆ. ಕಳೆದ 2 ದಿನಗಳಿಂದ ಪಾವಗಡದಲ್ಲಿ ಯುವತಿ ಅಲೆಯುತ್ತಿದ್ದಾಳೆ.

    ಹೀಗಿದ್ದರೂ ಎಚ್ಚೆತ್ತುಕೊಳ್ಳದ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ವಿರುದ್ಧ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಯುವತಿ ಮೇಲೆ ಕಾಮುಕರು ಕಣ್ಣು ಹಾಕುವ ಮೊದಲು ಅನಾಥಾಶ್ರಮಕ್ಕೆ ಬಿಡಲು ಒತ್ತಾಯಿಸಿದ್ದಾರೆ.