Tag: pavagada

  • ಬ್ರಿಟಿಷರ ವಿರುದ್ಧ ಹೋರಾಡಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿ.ಎನ್ ರೆಡ್ಡಿ ನಿಧನ

    ಬ್ರಿಟಿಷರ ವಿರುದ್ಧ ಹೋರಾಡಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿ.ಎನ್ ರೆಡ್ಡಿ ನಿಧನ

    ತುಮಕೂರು: ಜಿಲ್ಲೆಯ ಪಾವಗಡದ (Pavagada) ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ (Freedom Fighter) 103 ವರ್ಷದ ವಿ.ಎನ್ ನರಸರೆಡ್ಡಿ (VN Reddy) ನಿಧನರಾಗಿದ್ದಾರೆ.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವಿ.ಎನ್ ರೆಡ್ಡಿ ಚಿಕಿತ್ಸೆ ಫಲಕಾರಿಯಾಗದೇ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಇಬ್ಬರು ಪುತ್ರರು, ನಾಲ್ವರು ಪುತ್ರಿಯರಿದ್ದಾರೆ. ಇಂದು ಮೃತರ ಸ್ವಗ್ರಾಮವಾದ ವೆಂಕಟಪುರ ಗ್ರಾಮದ ಸಮೀಪದ ತೋಟದಲ್ಲಿ ಅಂತ್ಯಕ್ರಿಯೆ ನಡೆದಿದೆ. ಇದನ್ನೂ ಓದಿ: ನಾಳೆ ರಫೇಲ್‌ನಲ್ಲಿ ಹಾರಲಿದ್ದಾರೆ ರಾಷ್ಟ್ರಪತಿ ಮುರ್ಮು

    ವಿ.ಎನ್ ರೆಡ್ಡಿಯವರು ಮಾಜಿ ಉಪರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ, ಎ.ಎಂ ಲಿಂಗಣ್ಣ, ಕೊಲ್ಲೂರು ಸುಬ್ಬಾರಾವು, ಪಡಪಲ್ಲಿ ಚಿದಂಬರ ರೆಡ್ಡಿಯವರ ಒಡನಾಡಿಯಾಗಿದ್ದರು. 1951-52ರಲ್ಲಿ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ನಡೆದ ಎಲ್ಲಾ ಚುನಾವಣೆಗಳಲ್ಲೂ ವಿ.ಎನ್ ರೆಡ್ಡಿ ಮತ ಚಲಾಯಿಸಿದ್ದಾರೆ. ಬ್ರಿಟಿಷ್ ಆಳ್ವಿಕೆಯಲ್ಲಿದ್ದ ದಾಖಲೆಗಳನ್ನು ನಾಶಪಡಿಸಲು ಪಾವಗಡ ತಾಲೂಕು ಕಛೇರಿಗೆ ಇಲಿಗಳ ಬಾಲಕ್ಕೆ ಬಟ್ಟೆ ಸುತ್ತಿ, ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ದಾಖಲೆಗಳಿರುವ ಕೊಠಡಿಗೆ ಇಲಿಗಳನ್ನು ಬಿಟ್ಟು ದಾಖಲೆಗಳನ್ನು ಸುಟ್ಟಿದ್ದರು. ಇದನ್ನೂ ಓದಿ: ಪಲ್ಲಂಗದಾಟಕ್ಕೆ ಅಡ್ಡಿಯಾಗುತ್ತಿದ್ದಾಳೆಂದು ಮಗಳ ಹತ್ಯೆ – ಮಲತಂದೆ ಅರೆಸ್ಟ್

    ಈ ಕೃತ್ಯ ಎಸಗಿದ್ದಕ್ಕೆ ರಾತ್ರಿ ಮಲಗಿದ್ದ ವೇಳೆ ಪೊಲೀಸರು ವಿ.ಎನ್ ನರಸರೆಡ್ಡಿ ಅವರನ್ನು ಸೇರಿದಂತೆ ಏಳು ಜನರನ್ನು ಬಂಧಿಸಿ ತುಮಕೂರು ಜೈಲಿಗೆ ಹಾಕಿದ್ದರು. ಅಲ್ಲಿಯೂ ಬ್ರಿಟಿಷರ ಆಳ್ವಿಕೆ ವಿರುದ್ಧ ಪ್ರತಿಭಟನೆ, ಹೋರಾಟಗಳನ್ನು ಮುಂದುವರಿಸಿದ್ದರಿಂದ ತುಮಕೂರು ಜೈಲಿನಿಂದ ಬೆಂಗಳೂರು ಸೆಂಟ್ರಲ್ ಜೈಲಿಗೆ ಬಂಧಿಸಿ ಒಟ್ಟು 32 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಇದನ್ನೂ ಓದಿ: ಮೊಂಥಾ ಎಫೆಕ್ಟ್: 100ಕ್ಕೂ ಹೆಚ್ಚು ರೈಲುಗಳು, 35 ವಿಮಾನಗಳ ಹಾರಾಟ ರದ್ದು

    ಜೈಲು ಶಿಕ್ಷೆ ಅನುಭವಿಸಿ ಬಂದ ನಂತರ ಪಾವಗಡ ತಾಲೂಕಿನಾದ್ಯಂತ ಎತ್ತಿನಗಾಡಿಯಲ್ಲಿ ಸಂಚರಿಸಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಸ್ವಾತಂತ್ರ‍್ಯ ಹೋರಾಟದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದ್ದರು. ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೀತಿಪಾಠ: ಪ್ರಹ್ಲಾದ್ ಜೋಶಿ

  • ಕಾಂಗ್ರೆಸ್ ಏನ್ ದಬಾಕಿರೋದು? ಹೆಂಗಸರು ಬೀದಿ ಸುತ್ತೋ ಹಾಗೆ ಮಾಡಿದ್ದೇ ಸಿಎಂ – ಮಹಿಳಾ ಅಧಿಕಾರಿ ಮಾತಾಡಿದ ವಿಡಿಯೋ ವೈರಲ್

    ಕಾಂಗ್ರೆಸ್ ಏನ್ ದಬಾಕಿರೋದು? ಹೆಂಗಸರು ಬೀದಿ ಸುತ್ತೋ ಹಾಗೆ ಮಾಡಿದ್ದೇ ಸಿಎಂ – ಮಹಿಳಾ ಅಧಿಕಾರಿ ಮಾತಾಡಿದ ವಿಡಿಯೋ ವೈರಲ್

    – ಗಾಂಧೀಜಿ, ಇಂದಿರಾ ವಿರುದ್ಧ ನಾಲಿಗೆ ಹರಿಬಿಟ್ಟ ಸಬ್ ರಿಜಿಸ್ಟರ್ ರಾಧಮ್ಮ

    ತುಮಕೂರು: ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಗ್ಯಾರಂಟಿ ಯೋಜನೆಯ (Guarantee scheme) ಬಗ್ಗೆ ಪಾವಗಡದ ಸಬ್ ರಿಜಿಸ್ಟರ್ ಟೀಕಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವೈರಲ್ ಆಗಿರುವ ವಿಡಿಯೋದಲ್ಲಿ ಸಬ್ ರಿಜಿಸ್ಟರ್ (Pavagada Sub Registrar) ರಾಧಮ್ಮ, “ಕಾಂಗ್ರೆಸ್ (Congress) ಏನ್ ದಬಾಕಿರೋದು? ಗಾಂಧೀಜಿ ಹೆಂಡತಿ ಮುಸ್ಲಿಂ, ಇಂದಿರಾಗಾಂಧಿ ಗಂಡ ಮುಸ್ಲಿಂ, ಅಧಿಕಾರನಾ ಕಾಂಗ್ರೆಸ್‍ಗೆ ಕೊಟ್ಟಿದ್ರೆ ಇಷ್ಟೊತ್ತಿಗೆ ಇಂಡಿಯಾ ಧೂಳಿಪಟ, ನಮಗೆ ಕುಡಿಯೋಕೆ ನೀರು ಸಿಗ್ತಿರಲಿಲ್ಲ. ಸಿದ್ದರಾಮಯ್ಯ ಎಲ್ಲವನ್ನೂ ಫ್ರೀಯಾಗಿ ಹೆಣ್ಣು ಮಕ್ಕಳಿಗೆ ಕೊಟ್ಟ, ಎಲ್ಲಾ ದರ ಜಾಸ್ತಿ ಮಾಡಿ ಬರೆ ಎಳೆದ. ತರಕಾರಿ, ಹಣ್ಣು, ಹಾಲು, ಮಕ್ಕಳು ತಿನ್ನುವ ಬಿಸ್ಕೆಟ್ ಎಲ್ಲಾ. ಬೆಳೆ ಕಾಳು ಎಲ್ಲ ಒನ್ ಟು ಡಬಲ್ ಆಗಿದೆ. ಹೆಂಗಸರು ಮನೆಲಿ ಇರದೇ ಬೀದಿ ಸುತ್ತುವ ಹಾಗೇ ಮಾಡಿದ್ದೆ ಸಿದ್ದರಾಮಯ್ಯ.” ಎಂದು ಹೇಳಿದ್ದಾರೆ. ಇದನ್ನೂ ಓದಿ: 5 ಹುಲಿಗಳ ಸಾವು ಪ್ರಕರಣ – ಕಾರ್ಬೋಫುರಾನ್ ಕೀಟನಾಶಕ ಬಳಕೆ: ಸಿಸಿಎಫ್ ಹೀರಾಲಾಲ್

    ಈ ವಿಡಿಯೋ ವೈರಲ್ ಆದ ಬೆನ್ನಲ್ಲೆ ರೈತ ಸಂಘದ ಕಾರ್ಯಕರ್ತರು ಅಧಿಕಾರಿಯ ವಿರುದ್ಧ ಪ್ರತಿಭಟಿಸಿದ್ದಾರೆ. ರಾಧಮ್ಮ ಲಂಚ ಇಲ್ಲದೇ ಕೆಲಸ ಮಾಡಲ್ಲ. ಈಗ ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರದ ಗ್ಯಾರಂಟಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ರೈತರ ವಿರೋಧಿಯಾಗಿರುವ ಅಧಿಕಾರಿ ರಾಧಮ್ಮರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

    ರೈತ ಸಂಘದ ಪ್ರತಿಭಟನೆ ಬಳಿಕ ಎಚ್ಚೆತ್ತ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್, ರಾಧಮ್ಮರನ್ನು ತುಮಕೂರು ಜಿಲ್ಲಾ ನೋಂದಣಿ ಕಚೇರಿಗೆ ಎತ್ತಂಗಡಿ ಮಾಡಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ IIM ಬಾಯ್ಸ್ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ – ಆರೋಪಿ ಅರೆಸ್ಟ್

  • ದೂಡಿದ್ದಕ್ಕೆ ಬಿತ್ತು ಪೆಟ್ಟು – ಸೀಟಿಗಾಗಿ ಅಲ್ಲ ಈಗ ಬಸ್ಸು ಹತ್ತಲು ಮಹಿಳೆಯರ ಜಗಳ!

    ದೂಡಿದ್ದಕ್ಕೆ ಬಿತ್ತು ಪೆಟ್ಟು – ಸೀಟಿಗಾಗಿ ಅಲ್ಲ ಈಗ ಬಸ್ಸು ಹತ್ತಲು ಮಹಿಳೆಯರ ಜಗಳ!

    ತುಮಕೂರು: ರಾಜ್ಯದ್ಯಂತ ಕರ್ನಾಟಕದ ಮಹಿಳೆಯರಿಗೆ ಉಚಿತ ಪ್ರಯಾಣದ (Free Bus Rides Across Karnataka) ಪರಿಣಾಮ ಬಸ್ಸಿನಲ್ಲಿ ಹಿಂದೆ ಸೀಟ್‌ಗಾಗಿ ಜಗಳ ನಡೆದಿತ್ತು. ಆದರೆ ಈಗ ಪಾವಗಡದಲ್ಲಿ (Pavagada) ಬಸ್ಸು ಹತ್ತಲು ಮಹಿಳೆಯರು ಜಗಳ ಮಾಡಿದ್ದಾರೆ.

    ಪಾವಗಡ ಶನಿಮಹಾತ್ಮ ದೇವಸ್ಥಾನಕ್ಕೆ ಶನಿವಾರ, ಭಾನುವಾರ ಚಿತ್ರದುರ್ಗ, ಚಳ್ಳಕೆರೆ, ಹಿಂದೂಪುರ, ಮಡಕಶಿರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಇದನ್ನೂ ಓದಿ: Ghaziabad| ಏರ್‌ ಇಂಡಿಯಾ ಟೇಕಾಫ್‌ ವೇಳೆ ತಾಂತ್ರಿಕ ದೋಷ – ತಪ್ಪಿದ ಅನಾಹುತ

     

     

     

    View this post on Instagram

     

    A post shared by PUBLiC TV (@publictv)

     

    ದೇವಸ್ಥಾನದಲ್ಲಿ ಪೂಜೆ ಮುಗಿಸಿದ ನಂತರ ಬಸ್ಸು ಹತ್ತಲು ಮಹಿಳೆಯರು ಮುಗಿಬಿದ್ದಿದ್ದಾರೆ. ಬಹುತೇಕ ಬಸ್ಸುಗಳು ರಶ್‌ ಇದ್ದ ಕಾರಣ ಮಹಿಳೆಯರು ಸಿಕ್ಕಿದ ಬಸ್ಸು ಹತ್ತಲು ಮುಂದಾಗಿದ್ದಾರೆ. ಈ ವೇಳೆ ಒಬ್ಬರನ್ನು ತಳ್ಳಿ ಮತ್ತೊಬ್ಬರು ಹತ್ತಲು ಪೈಪೋಟಿ ನಡೆಸಿದ್ದಾರೆ.

    ಬಸ್ ಬಂದ ಕೂಡಲೇ ಸೀಟ್ ಹಿಡಿಯಲು ನಾನು ಮುಂದು ತಾ ಮುಂದು ಮಹಿಳೆ ಬಸ್ಸು ಹತ್ತಿದ್ದಾರೆ. ಈ ವೇಳೆ ಮಹಿಳೆಯೊಬ್ಬಳು ಮತ್ತೊಬ್ಬ ಮಹಿಳೆಗೆ ಹೊಡೆದಿದ್ದಾರೆ. ಮಹಿಳೆಯರು ಬಸ್ಸು ಹತ್ತಲು ಜಗಳ ಮಾಡುತ್ತಿರುವ ವಿಡಿಯೋ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

  • ನಿಧಿ ಆಸೆಗಾಗಿ ವ್ಯಕ್ತಿಯ ಬಲಿ – ಜ್ಯೋತಿಷಿ ಸೇರಿ ಇಬ್ಬರು ಅರೆಸ್ಟ್

    ನಿಧಿ ಆಸೆಗಾಗಿ ವ್ಯಕ್ತಿಯ ಬಲಿ – ಜ್ಯೋತಿಷಿ ಸೇರಿ ಇಬ್ಬರು ಅರೆಸ್ಟ್

    ಚಿತ್ರದುರ್ಗ: ನಿಧಿ ಆಸೆಗಾಗಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆಯ ಪರಶುರಾಂಪುರದಲಿನಡೆದಿದೆ.

    ಕೊಲೆಯಾದ ದುರ್ದೈವಿಯನ್ನು ಪ್ರಭಾಕರ್ (52) ಎಂದು ಗುರುತಿಸಲಾಗಿದೆ. ಅವರು ಪರಶುರಾಂಪುರದ ಬಸ್ ನಿಲ್ದಾಣದಲ್ಲಿ ಚಪ್ಪಲಿ ಹೊಲೆಯುವ ಕಾಯಕ ಮಾಡುತ್ತಿದ್ದರು. ಆನಂದ ರೆಡ್ಡಿ (52) ಕೊಲೆಗೈದ ಆರೋಪಿಯಾಗಿದ್ದಾನೆ. ಆತ ಕುಂದುರ್ಪಿಯಲ್ಲಿ ಬಾರ್ ಸಪ್ಲೆಯರ್ ಆಗಿ ಕೆಲಸ ಮಾಡುತ್ತಿದ್ದ. ಆನಂದ ರೆಡ್ಡಿಗೆ ಪಾವಗಡದ (Pavagada) ಜ್ಯೋತಿಷಿ ರಾಮಕೃಷ್ಣ, ಪಶ್ಚಿಮ ದಿಕ್ಕಿನಲ್ಲಿ ನರಬಲಿ ಕೊಟ್ಟರೆ ಚಿನ್ನ ಸಿಗಲಿದೆ ಎಂದು ಹೇಳಿದ್ದ. ಅದರಂತೆ ಕೊಲೆಮಾಡುವ ಉದ್ದೇಶದಿಂದಲೇ ಆರೋಪಿ ಕರ್ನಾಟಕಕ್ಕೆ ಬಂದಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಪಂಜಾಬ್ ಸಿಎಂ, ಎಲ್ಲ ಆಪ್ ಶಾಸಕರನ್ನು ಭೇಟಿಯಾದ ಕೇಜ್ರಿವಾಲ್ – ಪಂಜಾಬ್ ಸಿಎಂ ಮಾನ್ ಬದಲಾಗ್ತಾರಾ?

    ಪ್ರಭಾಕರ್‌ಗೆ ಲಿಫ್ಟ್ ಕೊಡುವ ನೆಪದಲ್ಲಿ ಕರೆದೊಯ್ದು ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಆರೋಪಿಯ ಬೈಕ್ ಡೀಟೈಲ್ ಪ್ರಕಾರ ಆತನನ್ನು ಪತ್ತೆ ಮಾಡಲಾಗಿದೆ. ಮಚ್ಚು ಹಾಗೂ ಬಟ್ಟೆಯನ್ನು ಪೊಲಿಸರು ಸೀಜ್ ಮಾಡಿದ್ದಾರೆ.

    ಸದ್ಯ ಹಂತಕ ಹಾಗೂ ಜ್ಯೋತಿಷಿ ಇಬ್ಬರೂ ಪೊಲೀಸರ ಅತಿಥಿಯಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.  ಇದನ್ನೂ ಓದಿ: ರಣವೀರ್ ಅಲಹಾಬಾದಿಯಾ ವಿರುದ್ಧ ಮುಂಬೈ ನ್ಯಾಯಾಲಯದಲ್ಲಿ ದೂರು

  • ಕಾರ್ಮಿಕರು ತೆರಳುತ್ತಿದ್ದ ವಾಹನ ಪಲ್ಟಿ – 10ಕ್ಕೂ ಹೆಚ್ಚು ಮಂದಿ ಗಂಭೀರ

    ಕಾರ್ಮಿಕರು ತೆರಳುತ್ತಿದ್ದ ವಾಹನ ಪಲ್ಟಿ – 10ಕ್ಕೂ ಹೆಚ್ಚು ಮಂದಿ ಗಂಭೀರ

    ತುಮಕೂರು: ಕಾರ್ಮಿಕರು ತೆರಳುತಿದ್ದ 407 ವಾಹನ ಪಲ್ಟಿಯಾಗಿ (Accident), 10ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡ ಘಟನೆ ಪಾವಗಡ (Pavagada) ತಾಲೂಕಿನ ಬುಗುಡೂರು ಗ್ರಾಮದಲ್ಲಿ ನಡೆದಿದೆ.

    ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಗ್ರಾಮದ ಬಳಿ ಇರುವ ತಿರುವಿನಲ್ಲಿ ಅಪಘಾತ ನಡೆದಿದೆ. ಗಾಯಾಳುಗಳು ಬಿ.ಹೊಸಳ್ಳಿ ಗ್ರಾಮದ ಲಂಬಾಣಿ ತಾಣದ ಕಾರ್ಮಿಕರು. ಅವರು ತಿರುಮಣಿ ಗ್ರಾಮದಲ್ಲಿ ಸೆಂಟ್ರಿಂಗ್ ಕೆಲಸ ಮುಗಿಸಿಕೊಂಡು ವಾಪಸ್ಸಾಗುತಿದ್ದರು. ಈ ವೇಳೆ ಈ ಅಪಘಾತ ಸಂಭವಿಸಿದೆ.

    ಗಾಯಾಳುಗಳಿಗೆ ತುಮಕೂರು ಜಿಲ್ಲಾಸ್ಪತ್ರೆ ಹಾಗೂ ಪಾವಗಡ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಸಂಬಂಧ ತಿರುಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Kolar| ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಾ ಸರ್ಕಾರಿ ಬಸ್ ಚಾಲನೆ – ವೀಡಿಯೋ ವೈರಲ್

    Kolar| ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಾ ಸರ್ಕಾರಿ ಬಸ್ ಚಾಲನೆ – ವೀಡಿಯೋ ವೈರಲ್

    – ಕ್ರಮಕ್ಕೆ ಪ್ರಯಾಣಿಕರ ಆಗ್ರಹ

    ಕೋಲಾರ: ಮೊಬೈಲ್‌ನಲ್ಲಿ ರೀಲ್ಸ್ (Reels) ನೋಡುತ್ತಲೇ ಚಾಲಕ (Bus Driver) ಸರ್ಕಾರಿ ಬಸ್ ಚಲಾಯಿಸಿದ ಘಟನೆ ಕೋಲಾರದಲ್ಲಿ (Kolar) ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ.

    ಸರ್ಕಾರಿ ಬಸ್ ಚಾಲಕ ಹತ್ತಾರು ಪ್ರಯಾಣಿಕರ ಜೀವ ಕೈಯಲ್ಲಿಟ್ಟುಕೊಂಡು ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಾ ಬಸ್ ಚಲಾಯಿಸಿದ್ದಾನೆ. ತನ್ನ ಕೈಯಲ್ಲಿ ಪ್ರಯಾಣಿಕರ ಜೀವವಿದೆ ಎಂಬುದನ್ನು ಮರೆತು ಮೊಬೈಲ್‌ನಲ್ಲಿ ಮುಳುಗಿದ್ದ ಬಸ್ ಚಾಲಕನ ನಿರ್ಲಕ್ಷ್ಯದಿಂದ ಪ್ರಯಾಣಿಕರು ರೋಸಿ ಹೋಗಿದ್ದಾರೆ. ಈ ಹಿನ್ನೆಲೆ ಪ್ರಯಾಣಿಕರೊಬ್ಬರು ಚಾಲಕನ ನಿರ್ಲಕ್ಷ್ಯವನ್ನು ಮೊಬೈಲ್‌ನಲ್ಲಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: 40 ಅಡಿಗಿಂತ ಕಿರಿದಾದ ರಸ್ತೆಗಳಲ್ಲಿ ವ್ಯಾಪಾರ ಮಾಡಿದರೆ ಅಂಗಡಿ ಬಂದ್‌: ಬಿಬಿಎಂಪಿ ಮಾರ್ಗಸೂಚಿಯಲ್ಲಿ ಏನಿದೆ?

    ಕೋಲಾರದಿಂದ ಪಾವಗಡ ಮಾರ್ಗದ ಬಸ್ ಚಾಲಕ ಈ ರೀತಿಯ ನಿರ್ಲಕ್ಷ್ಯ ತೋರಿದ್ದಾನೆ. ಇನ್ನು ಚಾಲಕನ ನಿರ್ಲಕ್ಷ್ಯದ ವಿರುದ್ಧ ಪ್ರಯಾಣಿಕರು ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಇನ್ಫಿ ಸಹ ಸಂಸ್ಥಾಪಕ ಕ್ರಿಸ್ ಸೇರಿ 18 ಮಂದಿ ವಿರುದ್ಧ ಅಟ್ರಾಸಿಟಿ ಕೇಸ್

  • ವ್ಯಕ್ತಿಯ ಹತ್ಯೆಗೈದು 30 ಮೇಕೆಗಳನ್ನು ಕದ್ದೊಯ್ದಿದ್ದ ಆರೋಪಿ ಅರೆಸ್ಟ್

    ವ್ಯಕ್ತಿಯ ಹತ್ಯೆಗೈದು 30 ಮೇಕೆಗಳನ್ನು ಕದ್ದೊಯ್ದಿದ್ದ ಆರೋಪಿ ಅರೆಸ್ಟ್

    ತುಮಕೂರು: ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆಗೈದು 30 ಮೇಕೆಗಳನ್ನು ಕದ್ದೊಯ್ದಿದ್ದ ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಮಣಿಕಂಠ ಎಂದು ಗುರುತಿಸಲಾಗಿದೆ. ಆರೋಪಿ ಪಾವಗಡ (Pavagada) ತಾಲೂಕಿನ ದೇವಲಕೆರೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ನರಸಿಂಹಪ್ಪ (60) ಎಂಬಾತನನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದ. ಬಳಿಕ 30 ಮೇಕೆಗಳನ್ನು ಕದ್ದುಕೊಂಡು ಹೋಗಿದ್ದ.

    ಕದ್ದ ಮೇಕೆಗಳನ್ನು ಚಿತ್ರದುರ್ಗದ ಹಿರಿಯೂರಿನ ಕುರಿಸಂತೆಯಲ್ಲಿ ಮಾರಾಟಕ್ಕೆ ಯತ್ನಿಸಿದ್ದ. ಮೇಯಲು ಹೋಗಿದ್ದ ಮೇಕೆಗಳು ಮತ್ತು ನರಸಿಂಹಪ್ಪ ಮನೆಗೆ ಬಾರದಿದ್ದಕ್ಕೆ ಕುಟುಂಬಸ್ಥರ ಹುಡುಕಾಟ ನಡೆಸಿದ್ದರು.

    ಅನುಮಾನದಿಂದ ನರಸಿಂಹಪ್ಪ ಪುತ್ರ ಹಿರಿಯೂರು ಸಂತೆಗೆ ತೆರಳಿ ನೋಡಿದಾಗ, ಮೇಕೆಗಳ ಸಮೇತ ಸಂತೆಯಲ್ಲಿ ಆರೋಪಿ ಮಣಿಕಂಠ ಸಿಕ್ಕಿಬಿದ್ದಿದ್ದ. ಈ ವೇಳೆ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿತ್ತು. ತನಿಖೆ ವೇಳೆ ಮೇಕೆಗಳಿಗಾಗಿ ಕೊಲೆ ಮಾಡಿರುವುದಾಗಿ ಆರೋಪಿ ಬಾಯಿ ಬಿಟ್ಟಿದ್ದ.

    ಪೊಲೀಸರು ಸ್ಥಳ ಮಹಜರಿಗೆ ಆರೋಪಿಯನ್ನು ಕರೆದೊಯ್ದಾಗ, ಅರಣ್ಯ ಪ್ರದೇಶದಲ್ಲಿ ಕೊಲೆ ಮಾಡಿ ಎಸೆದಿದ್ದ ಮೃತ ದೇಹವನ್ನು ತೋರಿಸಿದ್ದಾನೆ. ಈ ಸಂಬಂಧ ಅರಸಿಕೆರೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

  • ಆರತಕ್ಷತೆ ಮುಗಿಸಿ ಬರುತ್ತಿದ್ದವರ ಕಾರು ಪಲ್ಟಿ – ಇಬ್ಬರು ಶಿಕ್ಷಕರು ಸಾವು, ಮತ್ತಿಬ್ಬರು ಗಂಭೀರ

    ಆರತಕ್ಷತೆ ಮುಗಿಸಿ ಬರುತ್ತಿದ್ದವರ ಕಾರು ಪಲ್ಟಿ – ಇಬ್ಬರು ಶಿಕ್ಷಕರು ಸಾವು, ಮತ್ತಿಬ್ಬರು ಗಂಭೀರ

    ತುಮಕೂರು: ಚಲಿಸುತಿದ್ದ ಕಾರು (Car) ಪಲ್ಟಿಯಾಗಿ ಇಬ್ಬರು ಶಿಕ್ಷಕರು (Teachers) ಸಾವನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ತುಮಕೂರು (Tumakuru) ಜಿಲ್ಲೆ ಪಾವಗಡ (Pavagada) ತಾಲೂಕಿನ ಕಣಿವೇನಹಳ್ಳಿ ಗೇಟ್ ಬಳಿ ನಡೆದಿದೆ.

    ಧನಂಜಯ (58) ಹಾಗೂ ಶ್ರೀಕೃಷ್ಣ (49) ಘಟನೆಯಲ್ಲಿ ಮೃತಪಟ್ಟಿದ್ದಾರೆ. ನರಸಿಂಹ ಮತ್ತು ವೆಂಕಟಾಚಲಪತಿಗೆ ಗಂಭೀರ ಗಾಯವಾಗಿದೆ. ತುಮಕೂರಿನಿಂದ ಮದುವೆ ಆರತಕ್ಷತೆ ಕಾರ್ಯಕ್ರಮ ಮುಗಿಸಿ ಪಾವಗಡಕ್ಕೆ ವಾಪಸ್ ಹೋಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಇದನ್ನೂ ಓದಿ: ಗೋವಾದಿಂದ ಆಂಧ್ರಕ್ಕೆ ಅಕ್ರಮ ಸಾಗಾಟ – 28 ಲಕ್ಷ ರೂ. ಮೌಲ್ಯದ ಮದ್ಯ ವಶ

    ಮೃತರು ಸೇರಿದಂತೆ ಕಾರಿನಲ್ಲಿದ್ದ 4 ಜನರು ಶಿಕ್ಷಕರಾಗಿ ಸೇವೆ ಸಲ್ಲಿಸುತಿದ್ದರು. ಘಟನೆ ಸಂಬಂಧ ಪಾವಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಕಳೆದ ಐದು ದಿನದಲ್ಲಿ ಧರೆಗುರುಳಿದ 271 ಮರ

  • ಗೃಹ ಇಲಾಖೆ ಕಾರ್ಯದರ್ಶಿಗೆ ನಿಂದನೆ- ದೆಹಲಿ ಪೊಲೀಸರಿಂದ ಆರೋಪಿ ಬಂಧನ

    ಗೃಹ ಇಲಾಖೆ ಕಾರ್ಯದರ್ಶಿಗೆ ನಿಂದನೆ- ದೆಹಲಿ ಪೊಲೀಸರಿಂದ ಆರೋಪಿ ಬಂಧನ

    ತುಮಕೂರು: ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಗೆ ಕರೆ ಮಾಡಿ ನಿಂದನೆ ಮಾಡಿದ ಆರೋಪದ ಮೇಲೆ ಪಾವಗಡ ತಾಲೂಕಿನ ವೆಂಕಟಾಪುರದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಗ್ರಾಮದ ನಿರಂಜನ್ (40) ಎಂದು ಗುರುತಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಗೆ ಆರೋಪಿ ಫೋನ್ ಮಾಡಿ ನಿಂದನೆ ಮಾಡಿದ್ದ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಆತನನ್ನ ಹುಡುಕಿಕೊಂಡು ದೆಹಲಿ ಪೊಲೀಸರು ಬಂದಿದ್ದು, ಇದೀಗ ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಹರಿಸಲು CWRC ಶಿಫಾರಸು

    ಎಂಜಿನಿಯರ್ ಪದವೀಧರನಾಗಿರುವ ನಿರಂಜನ್, ಕೆಲಸವಿಲ್ಲದೇ ನಿರುದ್ಯೋಗಿಯಾಗಿದ್ದು ಸದಾ ಮನೆಯಲ್ಲೇ ಇರುತ್ತಿದ್ದ ಎಂಬ ಮಾಹಿತಿ ದೊರಕಿದೆ. ಕೆಲಸ ಸಿಗದ ಹಿನ್ನೆಲೆ ಮನನೊಂದು ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಗೆ ನಿಂದನೆ ಮಾಡಿದ್ದಾನೆ ಎನ್ನಲಾಗಿದೆ. ನಿರಂಜನ್ ನಿಂದನೆ ಮಾಡಿರುವ ಮಾಹಿತಿ ಬಗ್ಗೆ ಪೊಲೀಸರು ಯಾವುದೇ ಸುಳಿವು ಬಿಟ್ಟು ಕೊಟ್ಟಿಲ್ಲ.

    ಆರೋಪಿಯ ಸ್ನೇಹಿತರು ಹಾಗೂ ಗ್ರಾಮಸ್ಥರ ಬಳಿ ಸ್ಥಳೀಯ ಪೊಲೀಸರ ಸಹಾಯದಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ಇದನ್ನೂ ಓದಿ: ಅಪಘಾತದಿಂದ ಯುವಕನ ಸಾವಿಗೆ ನಾನೇ ಕಾರಣ ಎಂದು ಆತ್ಮಹತ್ಯೆಗೆ ಶರಣಾದ!

  • ತುಮಕೂರಿನಲ್ಲೊಂದು ಕ್ರಿಕೆಟ್ ಪ್ರೇಮಿಗಳ ಮದುವೆ – ಮಂಟಪದಲ್ಲೇ ಇಂಡೋ-ಕಿವೀಸ್ ಸೆಮಿ ಫೈನಲ್ ವೀಕ್ಷಣೆ

    ತುಮಕೂರಿನಲ್ಲೊಂದು ಕ್ರಿಕೆಟ್ ಪ್ರೇಮಿಗಳ ಮದುವೆ – ಮಂಟಪದಲ್ಲೇ ಇಂಡೋ-ಕಿವೀಸ್ ಸೆಮಿ ಫೈನಲ್ ವೀಕ್ಷಣೆ

    ತುಮಕೂರು: ಬುಧವಾರ ಟೀಂ ಇಂಡಿಯಾ (Team India) ಹಾಗೂ ನ್ಯೂಜಿಲೆಂಡ್ (New Zealand) ನಡುವೆ ಸೆಮಿ ಫೈನಲ್ (Semi Final) ಕ್ರಿಕೆಟ್ ಪಂದ್ಯ ನಡೆದಿದ್ದು, 70 ರನ್‌ಗಳ ಅಂತರದಲ್ಲಿ ಭಾರತ ಭರ್ಜರಿ ಜಯ ಗಳಿಸಿ ವಿಶ್ವಕಪ್ (World Cup) ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ನಡುವೆ ತುಮಕೂರಿನಲ್ಲಿ (Tumakuru) ಕ್ರಿಕೆಟ್ ಪ್ರೇಮಿಗಳು ತಮ್ಮ ಮದುವೆ ಮಂಟಪದಲ್ಲೇ ಬಂಧುಗಳಿಗಾಗಿ ಇಂಡೋ-ಕಿವೀಸ್ ಸೆಮಿ ಫೈನಲ್ ಮ್ಯಾಚ್ ಹಾಕಿಸಿ ಸುದ್ದಿಯಾಗಿದ್ದಾರೆ.

    ಪಾವಗಡದ (Pavagada) ಎಸ್‌ಎಸ್‌ಕೆ ಕಲ್ಯಾಣ ಮಂಟಪದಲ್ಲಿ ಕ್ರಿಕೆಟ್ ಪ್ರೇಮಿಗಳಾದ ಸೌಂದರ್ಯ ಹಾಗೂ ಕಾರ್ತಿಕ್ ಸೆಮಿ ಫೈನಲ್ ದಿನವೇ ತಮ್ಮ ಮದುವೆ ಮಾಡಿಕೊಂಡಿದ್ದು, ಮದುವೆ ಮಂಟಪದಲ್ಲೇ ಇಂಡಿಯಾ ಮತ್ತು ನ್ಯೂಜಿಲೆಂಡ್ ಸೆಮಿ ಫೈನಲ್ ಪಂದ್ಯ ವೀಕ್ಷಿಸಿದ್ದಾರೆ. ವಧು ಹಾಗೂ ವರ ಮದುವೆ ಮಂಟಪದಲ್ಲಿ ಇಂಡೋ-ಕಿವೀಸ್ ಸೆಮಿ ಫೈನಲ್ ವೀಕ್ಷಣೆ ಮಾಡಿದ್ದು, ಆರತಕ್ಷತೆಗೆ ಬಂದಿದ್ದ ಸಂಬಂಧಿಕರು, ಸ್ನೇಹಿತರಿಗಾಗಿ ಎಲ್‌ಇಡಿ (LED) ಮೂಲಕ ಪಂದ್ಯವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: World Cup Semifinal: 7 ವಿಕೆಟ್‌ ಕಿತ್ತು ಗ್ಲೆನ್‌ ಮ್ಯಾಕ್‌ಗ್ರಾತ್‌ ದಾಖಲೆ ಸರಿಗಟ್ಟಿದ ಶಮಿ

    ಮದುವೆಗೆಂದು ಬಂದವರಿಗೆ ಆರ್ಕೆಸ್ಟ್ರಾ ಜೊತೆ ಮ್ಯಾಚ್ ನೋಡಲು ಎಲ್‌ಇಡಿ ವ್ಯವಸ್ಥೆ ಕಲ್ಪಿಸಿದ್ದು, ಮದುವೆ ಆರತಕ್ಷತೆಯಲ್ಲಿ ಭರ್ಜರಿ ಊಟದೊಂದಿಗೆ ಪಂದ್ಯ ವೀಕ್ಷಣೆಯ ಭಾಗ್ಯ ಲಭಿಸಿದೆ. ಸೆಮಿ ಫೈನಲ್‌ನಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಜಯ ಸಾಧಿಸುತ್ತಿದ್ದಂತೆ ಮದುವೆ ಮಂಟಪದಲ್ಲಿ ಸಂಭ್ರಮಾಚರಣೆ ಜೋರಾಗಿ ನಡೆದಿದೆ. ಇದನ್ನೂ ಓದಿ: ಸೆಮಿಸ್‌ನಲ್ಲೂ ಶಮಿ ಮಿಂಚು; ಕಿವೀಸ್‌ ವಿರುದ್ಧ 70 ರನ್‌ಗಳ ಭರ್ಜರಿ ಜಯ – 4ನೇ ಬಾರಿಗೆ ವಿಶ್ವಕಪ್‌ ಫೈನಲ್‌ಗೆ ಭಾರತ ಎಂಟ್ರಿ