Tag: Pav Bhaji

  • ಮುಂಬೈ ಫೇಮಸ್ ʼಪಾವ್ ಭಾಜಿʼ ಮಾಡುವ ವಿಧಾನ

    ಮುಂಬೈ ಫೇಮಸ್ ʼಪಾವ್ ಭಾಜಿʼ ಮಾಡುವ ವಿಧಾನ

    ‘ಪಾವ್ ಭಾಜಿ’ ಹೆಸರು ಕೇಳುತ್ತಿದಂತೆ ಬಾಯಲ್ಲಿ ನೀರು ಬರುತ್ತೆ. ಇದು ಮುಂಬೈನ ಸ್ಟ್ರೀಟ್ ಫುಡ್‍ನಲ್ಲಿ ಹೆಚ್ಚು ಫೇಮಸ್. ಪಾವ್‍ಗೆ ತುಂಬಾ ಮುಖ್ಯ ಎಂದರೇ ಭಾಜಿ. ಕೆಲವರಿಗೆ ಖಾರ ಹೆಚ್ಚು ಇಷ್ಟವಾಗುತ್ತೆ, ಇನ್ನೂ ಕೆಲವರಿಗೆ ಸ್ವಲ್ಪ ಖಾರ ಇದ್ದರೆ ಇಷ್ಟ. ಅದಕ್ಕೆ ಇಂದು ನಾವು ಹೇಳಿಕೊಡುವ ಪಾವ್‌ ಭಾಜಿಯನ್ನು ನಿಮಗೆ ಬೇಕಾದ ರೀತಿಯಲ್ಲಿ ಮಾಡಿಕೊಳ್ಳಬಹುದು. ʼಪಾವ್ ಭಾಜಿʼ ತಿನ್ನಲು ಬೇರೆ ಕಡೆ ಹೋಗುವ ಬದಲು ನೀವೇ ಮನೆಯಲ್ಲಿ ನಿಮಗೆ ಇಷ್ಟವಾಗುವ ರೀತಿ ಮಾಡಿ ಸವಿಯಿರಿ.

    ಬೇಕಾಗಿರುವ ಪದಾರ್ಥಗಳು:
    ಭಾಜಿಗಾಗಿ:
    * ಬೆಣ್ಣೆ – 2 ಟೇಬಲ್ಸ್ಪೂನ್
    * ಕಟ್ ಮಾಡಿದ ಟೊಮ್ಯಾಟೊ – 3
    * ಬಟಾಣಿ – ಅರ್ಧ ಕಪ್* ಕಟ್ ಮಾಡಿದ ಕ್ಯಾಪ್ಸಿಕಂ – ಅರ್ಧ ಕಪ್
    * ಬೇಯಿಸಿ ಸ್ಮಶ್ ಮಾಡಿದ ಆಲೂಗಡ್ಡೆ – 1 ಕಪ್
    * ಉಪ್ಪು – 1 ಟೀಸ್ಪೂನ್
    * ಕಾಶ್ಮೀರಿ ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    * ಅರಿಶಿನ – ಅರ್ಧ ಟೀಸ್ಪೂನ್
    * ಪಾವ್ ಭಜಿ ಮಸಾಲ – 1 ಟೀಸ್ಪೂನ್
    * ಕಸ್ತೂರಿ ಮೆಂತ್ಯ – 1 ಟೀಸ್ಪೂನ್
    * ಕಟ್ ಮಾಡಿದ ಕೊತ್ತಂಬರಿ ಸೊಪ್ಪು – 2 ಟೇಬಲ್ಸ್ಪೂನ್
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    * ಕಟ್ ಮಾಡಿದ ಈರುಳ್ಳಿ – 1 ಕಪ್
    * ನಿಂಬೆ ರಸ – ಅರ್ಧ ಟೀಸ್ಪೂನ್
    * ಬೇಕಾಗಿರುವಷ್ಟು ನೀರು

    ಟೋಸ್ಟ್ ಪಾವ್‍ಗೆ:
    * ಪಾವ್ / ಬ್ರೆಡ್ ರೋಲ್ – 8
    * ಬೆಣ್ಣೆ – 4 ಟೀಸ್ಪೂನ್
    * ಕಾಶ್ಮೀರಿ ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    * ಪಾವ್ ಭಜಿ ಮಸಾಲ – ಅರ್ಧ ಟೀಸ್ಪೂನ್
    * ಕಟ್ ಮಾಡಿದ ಕೊತ್ತಂಬರಿ ಸೊಪ್ಪು – ಅರ್ಧ ಕಪ್

    ಮಾಡುವ ವಿಧಾನ:
    * ಮೊದಲನೆಯದಾಗಿ, ದೊಡ್ಡ ಬಾಣಲೆಯಲ್ಲಿ 1 ಟೀಸ್ಪೂನ್ ಬೆಣ್ಣೆಯನ್ನು ಬಿಸಿ ಮಾಡಿ ಟೊಮೆಟೊ, ಬಟಾಣಿ, ಕ್ಯಾಪ್ಸಿಕಂ ಬೇಯಿಸಿದ ಆಲೂಗಡ್ಡೆ ಮತ್ತು ಉಪ್ಪು ಸೇರಿಸಿ. 2 ನಿಮಿಷಗಳ ಕಾಲ ಫ್ರೈ ಮಾಡಿ. ಅರ್ಧ ಕಪ್ ನೀರು ಮಿಶ್ರಣ ಮಾಡಿ. 10 ನಿಮಿಷಗಳ ಕಾಲ ಕುದಿಸಿ.
    * ಎಲ್ಲ ತರಕಾರಿಗಳನ್ನು ಸರಿಯಾಗಿ ಮ್ಯಾಶ್ ಮಾಡಿ. ಈಗ ಮೆಣಸಿನ ಪುಡಿ, ಅರಿಶಿನ, ಪಾವ್ ಭಜಿ ಮಸಾಲ, ಕಸ್ತೂರಿ ಮೆಂತ್ಯ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಫ್ರೈ ಮಾಡಿ. ಮಸಾಲೆಗಳನ್ನು ಚೆನ್ನಾಗಿ ಬೇಯಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ.


    * ತಯಾರಾದ ತರಕಾರಿ ಮಿಶ್ರಣವನ್ನು ಪ್ಯಾನ್‍ನ ಬದಿಗಳಿಗೆ ಸೈಟ್ ಸಹಾಯದಿಂದ ಹಾಕಿ ಬಾಣಲೆಯ ಮಧ್ಯದಲ್ಲಿ ಜಾಗವನ್ನು ಮಾಡಿಕೊಳ್ಳಿ.
    * ಆ ಮಧ್ಯ ಭಾಗಕ್ಕೆ ಒಂದು ಟೀಸ್ಪೂನ್ ಬೆಣ್ಣೆಯನ್ನು ಬಿಸಿ ಮಾಡಿ ಮೆಣಸಿನ ಪುಡಿ, ಪಾವ್ ಭಜಿ ಮಸಾಲ ಸೇರಿಸಿ. ಕೊತ್ತಂಬರಿ ಸೊಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಮತ್ತು ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿ. ಈರುಳ್ಳಿ ಚೆನ್ನಾಗಿ ಬೇಯಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ.
    * ಈಗ 3 ಹನಿ ಕೆಂಪು ಆಹಾರದ ಬಣ್ಣವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಅರ್ಧ ಕಪ್ ನೀರು ಹಾಕಿ ಫ್ರೈ ಮಾಡಿಕೊಳ್ಳಿ. 5 ನಿಮಿಷಗಳ ಕಾಲ ಕುದಿಸಿ.
    * ಈಗ ಬೆಣ್ಣೆಯನ್ನು ಬಿಸಿ ಮಾಡುವ ಮೂಲಕ ಪಾವ್ ತಯಾರಿಸಿ ಮತ್ತು ಒಂದು ಚಿಟಿಕೆ ಮೆಣಸಿನ ಪುಡಿ, ಪಾವ್ ಭಜಿ ಮಸಾಲ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಚೆನ್ನಾಗಿ ಬೆರೆಸಿ.
    * ಈಗ 2 ಪಾವ್ ಅನ್ನು ಮಧ್ಯದಲ್ಲಿ ಕತ್ತರಿಸಿ ಮಸಾಲೆಯುಕ್ತ ಬೆಣ್ಣೆಯೊಂದಿಗೆ ಹುರಿಯಿರಿ. ಪಾವ್‍ನ ಎರಡೂ ಬದಿಗಳನ್ನು ಸ್ವಲ್ಪ ಬೆಚ್ಚಗಾಗುವವರೆಗೆ ಹುರಿಯಿರಿ.

    – ಅಂತಿಮವಾಗಿ, ಪಾವ್ ಮತ್ತು ಭಾಜಿಯನ್ನು ಕಟ್ ಮಾಡಿದ ಈರುಳ್ಳಿ, ಕೊತ್ತಂಬರಿ, ನಿಂಬೆ ಮತ್ತು ಬೆಣ್ಣೆಯೊಂದಿಗೆ ಬಡಿಸಿ.

    Live Tv
    [brid partner=56869869 player=32851 video=960834 autoplay=true]