Tag: paurakarmika

  • 600ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ 5 ತಿಂಗ್ಳಿಂದ ಸಂಬಳವಿಲ್ಲ!

    600ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ 5 ತಿಂಗ್ಳಿಂದ ಸಂಬಳವಿಲ್ಲ!

    – ರೊಚ್ಚಿಗೆದ್ದು ನಗರಸಭೆಗೆ ಮುತ್ತಿಗೆ

    ರಾಯಚೂರು: ಕಳೆದ ಐದು ತಿಂಗಳಿನಿಂದ ವೇತನವಿಲ್ಲದೆ ರೊಚ್ಚಿಗೆದ್ದ ರಾಯಚೂರು ನಗರದ ಪೌರಕಾರ್ಮಿಕರು ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.

    600ಕ್ಕೂ ಅಧಿಕ ಪೌರ ಕಾರ್ಮಿಕರಿಗೆ ಕಳೆದ 5 ತಿಂಗಳಿಂದ ವೇತನ ನೀಡಿಲ್ಲ. ವೇತನವಿಲ್ಲದೆ ಪರದಾಡುತ್ತಿರುವ ಕಾರ್ಮಿಕರು ಅನೇಕ ಬಾರಿ ಮನವಿಯನ್ನ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವೇತನ ನೀಡುವಂತೆ ಕೇಳಿದ್ರೆ ಇಂದು, ನಾಳೆ ಎಂದು ಅಧಿಕಾರಿಗಳು ಕಥೆ ಹೇಳ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹೀಗಾಗಿ ವೇತನ ನೀಡದ್ದಕ್ಕೆ ರೊಚ್ಚಿಗೆದ್ದ ಪೌರ ಕಾರ್ಮಿಕರು ಏಕಾಏಕೀ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ಹಿಂದೆ ಪ್ರತಿಭಟನೆ ಕೈಗೊಂಡಾಗ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ಕೊಟ್ಟಿದ್ದ ಅಧಿಕಾರಿಗಳು ಮತ್ತೆ ಹಳೆಯದನ್ನೇ ಮುಂದುವರಿಸಿದ್ದಾರೆ. ಹೀಗಾಗಿ ಪೌರಕಾರ್ಮಿಕರು ಬೇಸತ್ತು ಹೋಗಿದ್ದಾರೆ.