Tag: Patrolling

  • ಗಸ್ತು ತಿರುಗುತ್ತಿದ್ದ ಪೊಲೀಸ್ ಜೀಪ್‍ಗೆ ಟ್ರಕ್ ಡಿಕ್ಕಿ- ಮೂವರು ಸಾವು

    ಗಸ್ತು ತಿರುಗುತ್ತಿದ್ದ ಪೊಲೀಸ್ ಜೀಪ್‍ಗೆ ಟ್ರಕ್ ಡಿಕ್ಕಿ- ಮೂವರು ಸಾವು

    ಪಾಟ್ನಾ: ಗಸ್ತು ತಿರುಗುತ್ತಿದ್ದ ಪೊಲೀಸ್ ಜೀಪ್ ಮೇಲೆ ಟ್ರಕ್ ಉರುಳಿ ಬಿದ್ದು, ಮೂವರು ಪೊಲೀಸರು ದುರ್ಮರಣಕ್ಕೀಡಾದ ಘಟನೆ ಬಿಹಾರದಲ್ಲಿ ಇಂದು ಬೆಳಗ್ಗೆ ನಡೆದಿದೆ.

    ಮೃತರನ್ನು ಗರ್ದನಿಭಾಗ್ ಪೊಲೀಸ್ ಠಾಣೆಗೆ ಸೇರಿದ ಸಿಬ್ಬಂದಿ. ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ:   ಸೊಸೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದು ಮಾವ ಎಸ್ಕೇಪ್

    ಮಂಗಳವಾರ ಮುಂಜಾನೆ 4:30ರ ಸುಮಾರಿಗೆ ಪೊಲೀಸರು ಜೀಪ್‍ನಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ, ಪೊಲೀಸ್ ಜೀಪ್‍ನ ಮೇಲೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಮೂರು ಮಂದಿ ಸಾವನ್ನಪ್ಪಿದ್ದಾರೆ. ಇಬ್ಬರು ಪೊಲೀಸರು ಗಾಯಗೊಂಡಿದ್ದು, ಅವರನ್ನು ಪಿಎಂಸಿಎಚ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಟ್ರೇನಿ ಡಿಎಸ್‍ಪಿ ಪ್ರಾಂಜಲ್ ತ್ರಿಪಾಠಿ ಈ ಘಟನೆಯ ಕುರಿತಾಗಿ ಮಾಹಿತಿ ನೀಡಿದ್ದಾರೆ.  ಇದನ್ನೂ ಓದಿ: ಇಂಟರ್​ನೆಟ್ ಇಲ್ಲದೆ ಆನ್‍ಲೈನ್‍ನಲ್ಲಿ ಹಣ ಕಳುಹಿಸಿ!

  • ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಗಸ್ತು ವ್ಯವಸ್ಥೆಗೆ ಸುಭಾಹು ಈ ಬೀಟ್..!

    ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಗಸ್ತು ವ್ಯವಸ್ಥೆಗೆ ಸುಭಾಹು ಈ ಬೀಟ್..!

    ಬೆಂಗಳೂರು: ನಗರದಲ್ಲಿ ರಾತ್ರಿ ಹೊತ್ತು ಕ್ರೈಂ ರೇಟ್ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಹೊಸ “ಇ-ಬೀಟ್” ವಿಧಾನ ‘ಸುಭಾಹು’ ಇ-ಬೀಟ್ ಜಾರಿಗೆ ಬಂದಿದೆ.

    ಪೇಮೆಂಟ್ ಆ್ಯಪ್‍ಗಳ ರೀತಿ ಇಲ್ಲಿಯೂ ಕ್ಯು ಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಕ್ಯು ಆರ್ ಕೋಡ್ ಸ್ಕ್ಯಾನ್ ಮೂಲಕ ಕುಳಿತಲ್ಲೇ ನೈಟ್ ಬೀಟ್ ಮಾಹಿತಿ ಕಲೆ ಹಾಕಲಾಗುತ್ತೆ. “ಸುಭಾಹು” ಇ-ಬೀಟ್ ಸಿಸ್ಟಮ್ ಗೆ ಕಮೀಷನರ್ ಫಿದಾ ಆಗಿದ್ದು, ರಾತ್ರಿ ಗಸ್ತು ವ್ಯವಸ್ಥೆಗೆ ಅತ್ಯಾಧುನಿಕ ತಂತ್ರಜ್ಞಾನದ ಟಚ್ ನೀಡಲಾಗಿದೆ. ಅಲ್ಲದೆ ಈ ಸಿಸ್ಟಮ್ ನಿಂದ ಕೆಲ ಪೊಲೀಸ್ ಸಿಬ್ಬಂದಿ ಕಳ್ಳಾಟಕ್ಕೂ ಬ್ರೇಕ್ ಬಿದ್ದಿದೆ. ಬೆಂಗಳೂರು ಉತ್ತರ ವಿಭಾಗದಲ್ಲಿ”ಸುಭಾಹು” ಸಿಸ್ಟಮ್ ಜಾರಿಯಾಗಿದ್ದು, ಕಮಲ್ ಪಂತ್ ರಿಂದ “ಸುಭಾಹು” ಇ-ಬೀಟ್ ವ್ಯವಸ್ಥೆಗೆ ಶ್ಲಾಘನೆ ವ್ಯಕ್ತವಾಗಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದ ಹಿಂದೂ-ಸಿಖ್ಖರು ಭಾರತಕ್ಕೆ ಬರಲು ಸರ್ಕಾರದ ನೆರವು

    ಏನಿದು “ಸುಭಾಹು ಇ-ಬೀಟ್” ಸಿಸ್ಟಮ್?
    ರಾತ್ರಿ ಗಸ್ತನ್ನು ತಂತ್ರಜ್ಞಾನದ ಮೂಲಕ ಆಪರೇಟ್ ಮಾಡುವ ವಿಧಾನವೇ ಸುಭಾಹು ಇ – ಬೀಟ್ ಸಿಸ್ಟಮ್. ರಾತ್ರಿ ಪಾಳಯದ ಸಿಬ್ಬಂದಿ ಕಡ್ಡಾಯವಾಗಿ ಈ ಆ್ಯಪ್ ನಲ್ಲಿ ಲಾಗ್ ಇನ್ ಆಗಲೇಬೇಕು. ಅಲಾಟ್ ಅಗಿರುವ ಪಾಯಿಂಟ್ ಗಳಿಗೆ ವಿಸಿಟ್ ಮಾಡಲೇಬೇಕು. ನಿಯೋಜಿತ ಸ್ಪಾಟ್ ಗೆ ಹೋಗಿ, ಆ ಲೊಕೇಶನ್ ಪಾಯಿಂಟ್ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಅಪ್ರೂವಲ್ ಪಡೀಬೇಕು. ನಿಯೋಜಿತ ಸ್ಪಾಟ್ ಗೆ ಅಲ್ಲಿನ ಬೀಟ್ ಪಾಯಿಂಟ್ ನಲ್ಲಿ ಸ್ಕ್ಯಾನ್ ಮಾಡಬೇಕು. ಸ್ಕ್ಯಾನ್ ನಂತ್ರ ಅಪ್ರೂವಲ್ ಪಡೆದು ಬೀಟ್ ಗಸ್ತು ಮಾಡಬೇಕು. ಬೀಟ್ ಬಳಿ ಹೋದಾಗ ಪೊಲೀಸರು ಇದ್ದಾರ ಇಲ್ವಾ ಅನ್ನೋದನ್ನ ಸಹ ಪತ್ತೆ ಹಚ್ಚಬಹುದಾಗಿದೆ. ಇದನ್ನೂ ಓದಿ: ನಾಳೆ ಬಹುದೊಡ್ಡ ಘೋಷಣೆ ಮಾಡಲಿದ್ದೇನೆ: ಅರವಿಂದ್ ಕೇಜ್ರಿವಾಲ್