ಪಾಟ್ನಾ: ಕೊರೊನಾ ಟೆಸ್ಟ್ ನಿಂದ ತಪ್ಪಿಸಿಕೊಳ್ಳಲು ರೈಲ್ವೆ ನಿಲ್ದಾಣದಿಂದ ಪ್ರಯಾಣಿಕರು ಹೊರಗೆ ಓಡಿಹೋದ ಘಟನೆ ಬಿಹಾರದ ಬಕ್ಸಾರ್ ರೈಲ್ವೆ ನಿಲ್ದಾಣದಲ್ಲಿನಡೆದಿದೆ.
ರೈಲಿನಿಂದ ಇಳಿದ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಮಾಡುತ್ತಾರೆ ಅಂತಾ ಗೊತ್ತಾಗಿದ್ದೇ ತಡ ನಿಲ್ದಾಣದಿಂದ ಹೊರಗೆ ಹೋಗಲು ಮುಗಿಬಿದ್ದಿದ್ದಾರೆ. ಈ ಮಧ್ಯೆ ಆರೋಗ್ಯ ಸಿಬ್ಬಂದಿ ಕೆಲ ಪ್ರಯಾಣಿಕರನ್ನು ತಡೆದು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಹೇಳಿದಾಗ ಹಿಂದೇಟು ಹಾಕಿದ್ದಾರೆ. ರೈಲ್ವೆ ನಿಲ್ದಾಣದಿಂದ ಹೊರಗೆ ಓಡಿ ಹೋಗಿದ್ದಾರೆ.

ಪ್ರಯಾಣಿಕರನ್ನು ನಾವು ತಡೆದಾಗ ಅವರು ವಾದ ಮಾಡಲು ಶುರು ಮಾಡಿದ್ರು. ಈ ಘಟನೆ ನಡೆದಾಗ ನಿಲ್ದಾಣದಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿ ಇರಲಿಲ್ಲ. ಬಳಿಕ ಒಬ್ಬರು ಮಹಿಳಾ ಪೊಲೀಸ್ ಬಂದರು ಆದರೆ ಅವರೊಬ್ಬರೇ ಇದ್ದದ್ದರಿಂದ ಅಸಾಹಯಕರಾಗಿದ್ರು ಎಂದು ಸ್ಥಳೀಯ ಕೌನ್ಸಿಲರ್ ಜೈ ತಿವಾರಿ ಹೇಳಿದ್ದಾರೆ.
यह दृश्य कल रात बक्सर स्टेशन का हैं और ये यात्री पुणे -पटना से उतरे हैं और कोरोना जाँच ना कराना पड़े इसलिए भाग रहे हैं @ndtvindia @Anurag_Dwary @suparba pic.twitter.com/cWxDDoP26X
— manish (@manishndtv) April 16, 2021
ದೇಶದ ವಿವಿಧ ಭಾಗಗಳಿಂದ ಜನರು ಬಿಹಾರಕ್ಕೆ ವಾಪಸ್ಸಾಗುತ್ತಿದ್ದು, ಅವರನ್ನು ಸ್ಕ್ರೀನಿಂಗ್ ಮಾಡಲು ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಕೊರೊನಾ ಟೆಸ್ಟ್ ಮಾಡುವ ವ್ಯವೆಸ್ಥೆ ಮಾಡಲಾಗಿದೆ ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ:ಮಹಾ ವಲಸೆ – ಮುಂಬೈ, ದೆಹಲಿ ನಗರಗಳನ್ನ ತೊರೆಯುತ್ತಿರೋ ಪ್ರವಾಸಿ ಕಾರ್ಮಿಕರು
ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಮುಂಬೈ, ಪುಣೆ, ದೆಹಲಿಯಿಂದ ಬರುವ ರೈಲುಗಳು ಪ್ರತಿದಿನ ಬಿಹಾರಕ್ಕೆ ಬರುತ್ತಿದೆ. ಈ ನಗರಗಳಲ್ಲಿ ಲಾಕ್‍ಡೌನ್‍ನಿಂದ ಹಾಗೂ ಉದ್ಯೋಗವಿಲ್ಲದ ಕಾರಣ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳುತ್ತಿದ್ದಾರೆ.


























