Tag: patna

  • ವೋಟ್ ಹಾಕುತ್ತಿದ್ದಂತೆ ಬ್ಯಾಂಕ್ ಖಾತೆಯಲ್ಲಿದ್ದ ಹಣ ಮಾಯ

    ವೋಟ್ ಹಾಕುತ್ತಿದ್ದಂತೆ ಬ್ಯಾಂಕ್ ಖಾತೆಯಲ್ಲಿದ್ದ ಹಣ ಮಾಯ

    ಪಾಟ್ನಾ: ಇತ್ತೀಚೆಗೆ ನಡೆದ ಬಿಹಾರ್ ಪಂಚಾಯತ್ ಚುನಾವಣೆಯಲ್ಲಿ ಕೆಲ ಮಹಿಳೆಯರು, ಮತ ಚಲಾಯಿಸಿದ ಕೆಲ ಹೊತ್ತಲ್ಲೇ ತಮ್ಮ ಬ್ಯಾಂಕ್ ಖಾತೆಯಲ್ಲಿ ಇಟ್ಟಿದ್ದ ಸಾವಿರಾರು ರೂಪಾಯಿ ಹಣ ಕಳೆದುಕೊಂಡು ಅಘಾತಕಾರಿ ಘಟನೆ ನಡೆದಿದೆ.

    ಪುರ್ನಿಯಾ ಜಿಲ್ಲೆಯ ಚೋಪ್ರಾ ಪಂಚಾಯತ್‍ನ ರಿಹುವಾ ಗ್ರಾಮದಲ್ಲಿ ನ.29ರಂದು ಪಂಚಾಯತ್ ಚುನಾವಣೆ ಮತ ದಾನ ನಡೆದಿತ್ತು. ಈ ವೇಳೆ ಚುನಾವಣಾಧಿಕಾರಿಗಳು ತಾವು ಮತ ಚಲಾವಣೆಗೆ ಬಂದಾಗ ಬಯೋಮೆಟ್ರಿಕ್‍ನಲ್ಲಿ ತಮ್ಮ ಫಿಂಗರ್‌ ಪ್ರಿಂಟ್‌ ಪಡೆದಿದ್ದರು. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಕೆನರಾ ಬ್ಯಾಂಕ್‍ನಲ್ಲಿದ್ದು ತಮ್ಮ ಹಣವೆಲ್ಲಾ ಮಾಯವಾಗಿದೆ ಎಂದು 30ಕ್ಕೂ ಹೆಚ್ಚು ಮಹಿಳೆಯರು ದೂರಿದ್ದಾರೆ. ಇದನ್ನೂ ಓದಿ: ಲಸಿಕೆ ಪ್ರಮಾಣ ಪತ್ರ ಎಡವಟ್ಟು – ವ್ಯಾಕ್ಸಿನ್ ಪಡೆಯಲು ಬಂದಾತನಿಗೆ ಶಾಕ್


    ಎಲೆಕ್ಟ್ರಾನಿಕ್ ಸಾಧನಗಳನ್ನು ಜನರ ಬ್ಯಾಂಕ್‍ನಲ್ಲಿರುವ ಹಣ ಲಪಟಾಯಿಸುವುದು ಅಪರಾಧವಾಗಿದೆ. ಈ ಬಗ್ಗೆ ತಿಳಿದ ಬಳಿಕ ಈ ಕುರಿತು ವಸ್ತುನಿಷ್ಠ ತನಿಖೆ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಗೈಗೊಳ್ಳಬೇಕು ಎಂದು ಪುರ್ನಿಯಾ ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದೇವೆ ಎಂದು ಚೋಪ್ರಾ ಪಂಚಾಯತ್ ಮುಖ್ಯ ಸ್ಥಜಾವೇದ್ ಇಕ್ಬಾಲ್ ಹೇಳಿದ್ದಾರೆ. ಇದನ್ನೂ ಓದಿ: ಜಿಂಬಾಬ್ವೆಯಿಂದ ಗುಜರಾತ್‌ಗೆ ವಾಪಸ್ಸಾಗಿದ್ದ ವ್ಯಕ್ತಿಯಲ್ಲಿ ಓಮಿಕ್ರಾನ್‌ ಪತ್ತೆ- ಭಾರತದಲ್ಲಿ 3ಕ್ಕೇರಿದ ಸಂಖ್ಯೆ

  • ಅಂತ್ಯಕ್ರಿಯೆಗೆ ಹೋಗಿ ಆಸ್ಪತ್ರೆಗೆ ಸೇರಿದ 40 ಜನರ ಸ್ಥಿತಿ ಚಿಂತಾಜನಕ

    ಅಂತ್ಯಕ್ರಿಯೆಗೆ ಹೋಗಿ ಆಸ್ಪತ್ರೆಗೆ ಸೇರಿದ 40 ಜನರ ಸ್ಥಿತಿ ಚಿಂತಾಜನಕ

    ಪಾಟ್ನಾ: ಅಂತ್ಯಕ್ರಿಯೆಗೆಂದು ಹೋಗಿ ಊಟವನ್ನು ಸೇವಿಸಿದ್ದ ಸುಮಾರು 40 ಜನರು ಆಸ್ಪತ್ರೆಗೆ ದಾಖಲಾದ ಆಘಾತಕಾರಿ ಘಟನೆ ಬಿಹಾರದ ಮುಜಾಫರ್‌ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಬಿಹಾರದ ಮುಜಾಫರ್‌ಪುರ್ ಜಿಲ್ಲೆಯ ರೂಪೌಲಿ ಗ್ರಾಮದ ನಿವಾಸಿ ಗಣೇಶ ಮಹ್ತೋ ಎಂಬವರ ಮನೆಯಲ್ಲಿ ಮಹ್ತೋ ಅವರ ಪತ್ನಿ ತೀರಿಕೊಂಡಿದ್ದರು. ಹೀಗಾಗಿ ಹಿಂದೂ ಸಂಪ್ರದಾಯದಂತೆ ಮಂಗಳವಾರ ಸಂಜೆ ಶ್ರಾದ್ಧವನ್ನು ಮಾಡಲಾಗುತ್ತಿತ್ತು. ಕಾರ್ಯ ಮುಗಿದ ನಂತರ ಔತಣವನ್ನು ಏರ್ಪಡಿಸಿದ್ದು, ಊಟವನ್ನು ಸೇವಿಸಿದ ಮಕ್ಕಳು ಸೇರಿದಂತೆ 40 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ

    ಊಟವನ್ನು ಸೇವಿಸಿದ ನಂತರ, ಹಲವು ಮಕ್ಕಳು ತೀವ್ರ ಹೊಟ್ಟೆ ನೋವು ಮತ್ತು ವಾಂತಿಯಾಗಿದ್ದು, ಇದನ್ನು ತಮ್ಮ ಪೋಷಕರಿಗೆ ತಿಳಿಸಿದ್ದಾರೆ. ಈ ಹಿನ್ನೆಲೆ ಚಿಕಿತ್ಸೆಗಾಗಿ ಅವರನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ(ಪಿಎಚ್‍ಸಿ) ಕರೆದೊಯ್ಯಲಾಯಿತು. ಮಕ್ಕಳು ಅಲ್ಲದೇ ದೊಡ್ಡವರಿಗೂ ಈ ರೀತಿ ಸಮಸ್ಯೆಯಾಗಿದ್ದು, ಹಲವು ಜನರು ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳ ಪ್ರಕರಣಗಳು ಹೆಚ್ಚಾದಂತೆ, ಶಸ್ತ್ರಚಿಕಿತ್ಸಕರು ಆರೋಗ್ಯ ರಕ್ಷಣೆಯ ಹೊರಗೆ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

    ಈ ಕುರಿತು ಮಾತನಾಡಿದ ಡಾ.ವಿನಯ್ ಕುಮಾರ್ ಶರ್ಮಾ, ಕೆಲವು ಮಕ್ಕಳನ್ನು ಸಾರಾಯ ಸಾಮಾನ್ಯ ಆಸ್ಪತ್ರೆ(ಸಿಎಚ್‍ಸಿ)ಯಲ್ಲಿ ದಾಖಲಿಸಲಾಗಿದ್ದು, ಇನ್ನೂ 5 ಜನರನ್ನು ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಯ ಸಮಯದಲ್ಲಿ ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪಿದ್ದು, ಆತನನ್ನು ನಿಶಾಂತ್ ಕುಮಾರ್ ಎಂದು ಗುರುತಿಸಲಾಗುದೆ. ಈ ಹಿನ್ನೆಲೆ ನಾವು ಸಿಎಚ್‍ಸಿಯಲ್ಲಿ ವೈದ್ಯಕೀಯ ಅಧಿಕಾರಿಗಳಿಗೆ ತುಂಬಾ ಎಚ್ಚರಿಕೆಯಿಂದ ಮಕ್ಕಳ ಚಿಕಿತ್ಸೆಯನ್ನು ಮಾಡಲು ಸೂಚಿಸಿದ್ದೇವೆ. ಜಿಲ್ಲೆಯ ಹಲವಾರು ಹಿರಿಯ ಅಧಿಕಾರಿಗಳು ಕೂಡ ಸಿಎಚ್‍ಸಿ ಹಾಗೂ ಗ್ರಾಮದಲ್ಲಿ ಕ್ಯಾಂಪ್ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬೀದಿ ನಾಟಕ ಅಭಿಯಾನದ ಮೂಲಕ ಕೋವಿಡ್ ಲಸಿಕೆ ಜಾಗೃತಿ

    ಅಂತ್ಯಕ್ರಿಯೆಯ ಸಮಯದಲ್ಲಿ ಮಾಡಿದ್ದ ಆಹಾರದ ಸ್ಯಾಂಪಲ್ ಅನ್ನು ಸಂಗ್ರಹಿಸಿದ್ದು, ಅದನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿದ್ದೇವೆ. ಆಹಾರವನ್ನು ತಯಾರಿಸುವಾಗ ಕಲಬೆರಕೆಯಾದ ವಸ್ತುಗಳಿಂದ ಆಹಾರ ವಿಷಕಾರಿಯಾಗಿ ಪರಿವರ್ತನೆಯಾಗಿರಬಹುದೆಂದು ಹೇಳಿದರು.

  • ಒಂದು ವಾರ ನಿರಂತರ ಸಾಮೂಹಿಕ ಅತ್ಯಾಚಾರ- ಐವರ ಬಂಧನ

    ಒಂದು ವಾರ ನಿರಂತರ ಸಾಮೂಹಿಕ ಅತ್ಯಾಚಾರ- ಐವರ ಬಂಧನ

    ಪಾಟ್ನಾ: ವಿವಾಹಿತ ಮಹಿಳೆ ಮೇಲೆ ಐವರು ಪುರುಷರು ಒಂದು ವಾರ ನಿರಂತ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ತನ್ನ ಪತಿಯೊಂದಿಗೆ ಅಕ್ಟೋಬರ್ 10ರಂದು ಜಗಳವಾಡಿ ಮನೆಯನ್ನು ಬಿಟ್ಟು ಹೋಗಿದ್ದರು. ಬಳಿಕ ಮಹಿಳೆ ಕೊಲ್ಕತ್ತಾಗೆ ಹೋಗಲು ನಿರ್ಧರಿಸಿ, ಪಾಟ್ನಾ ಜಂಕ್ಷನ್‍ಗೆ ಬಂದಿದ್ದಾರೆ. ಅಲ್ಲಿಂದ ಮಹಿಳೆ ಹೋಟೆಲ್‍ಗೆ ಹೋಗಿ, ಓನರ್ ಬಳಿ ಕೊಲ್ಕತ್ತಾಗೆ ಹೋಗುವ ರೈಲಿನ ಬಗ್ಗೆ ಮಾಹಿತಿ ಕೇಳಿದ್ದಾರೆ. ಇದನ್ನೂ ಓದಿ:  ಭಾರೀ ಮಳೆಗೆ ಕೊಚ್ಚಿ ಹೋದ ಉತ್ತರಾಖಂಡ್ ರೈಲು ಹಳಿ

    ಹೋಟೆಲ್ ಮಾಲೀಕ ಗೋಪಾಲ್ ತನ್ನ ಸ್ನೇಹಿತ ಅಮಿತ್‍ಗೆ ಮಹಿಳೆಯ ಬಗ್ಗೆ ಹೇಳಿದ್ದಾನೆ. ಬಳಿಕ ಇಬ್ಬರೂ ಆಕೆಯನ್ನು ಅಜಯ್ ಇನ್ನೊಬ್ಬ ವ್ಯಕ್ತಿಯ ಬಳಿ ಕರೆದುಕೊಂಡು ಹೋಗಿದ್ದಾರೆ. ಅವರು ಕಾರ್ಬಿಗಾಹಿಯಾ ಎಂಬ ಪ್ರದೇಶದ ಒಂದು ಕೊಠಡಿಯಲ್ಲಿ ರೈಲು ಬರುವವರೆಗೆ ಕಾಯುವಂತೆ ಮಹಿಳೆಗೆ ಹೇಳಿದ್ದಾರೆ ಎಂದು ಜಕ್ಕನಪುರ ಪೊಲೀಸ್ ಠಾಣೆಯ ತನಿಖಾಧಿಕಾರಿ ಕೆಪಿ ಶರ್ಮಾ ಹೇಳಿದ್ದಾರೆ. ಇದನ್ನೂ ಓದಿ:   50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ ಶಿಲ್ಪಾ ಶೆಟ್ಟಿ

    ಅಕ್ಟೋಬರ್ 17ರ ರಾತ್ರಿಯವರೆಗೆ ಸಂತ್ರಸ್ತೆಯನ್ನು ಆ ಕೋಣೆಯಲ್ಲಿ ಕೂಡಿಹಾಕಿದ್ದಾರೆ. ಒಬ್ಬ ಆರೋಪಿ ಆಕೆಯ ಮೇಲೆ ಕಣ್ಣಿಡಲು 24 ಗಂಟೆ ಕೋಣೆಯ ಹೊರಗೆ ಕಾಯುತ್ತಿದ್ದ. ಕೊಲ್ಕತ್ತಾ ತಲುಪಲು ಸಂತ್ರಸ್ತೆ ವಿಫಲವಾದ ಕಾರಣ, ಆಕೆಯ ಪತಿ ಜಕ್ಕನಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಮಹಿಳೆಯ ಮೊಬೈಲ್ ಟವರ್ ಪರಿಶೀಲಿಸಿದ್ದು, ಅದು ಪಾಟ್ನಾ ಜಂಕ್ಷನ್ ಆಕೆಯ ಕೊನೆಯ ಸ್ಥಳವೆಂದು ತೋರಿಸಿದೆ. ಸ್ಥಳೀಯ ಗುಪ್ತಚರ ಮಾಹಿತಿ ಆಧಾರದ ಮೇಲೆ ನಾವು ಮಹಿಳೆ ಇರುವ ಮನೆಯನ್ನು ತಲುಪಿದೆವು ಎಂದು ಅವರು ಹೇಳಿದ್ದಾರೆ.

  • ಬಾಲಕಿ ಕೆನ್ನೆ ಕಚ್ಚಿದ್ದ ಶಿಕ್ಷಕನಿಗೆ ಪೊಲೀಸರ ಮುಂದೆಯೇ ಥಳಿಸಿದ ಸ್ಥಳೀಯರು

    ಬಾಲಕಿ ಕೆನ್ನೆ ಕಚ್ಚಿದ್ದ ಶಿಕ್ಷಕನಿಗೆ ಪೊಲೀಸರ ಮುಂದೆಯೇ ಥಳಿಸಿದ ಸ್ಥಳೀಯರು

    ಪಾಟ್ನಾ: ವಿದ್ಯಾರ್ಥಿನಿಯ ಕೆನ್ನೆ ಕಚ್ಚಿದ್ದ ಶಿಕ್ಷಕನನ್ನು ಸ್ಥಳೀಯರು ಪೊಲೀಸರ ಮುಂದೆಯೇ ಥಳಿಸಿದ ಘಟನೆ ಬಿಹಾರದ ಕತಿಹಾರ್ ನಲ್ಲಿ ನಡೆದಿದೆ.

    ಬಿಹಾರದ ಸೆಮಾಪುರ ಪ್ರದೇಶದ ಪಿಪ್ರಿ ಬಹಿಯಾರ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ 4ನೇ ತರಗತಿ ಓದುತ್ತಿದ್ದ, 12 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಅದು ಅಲ್ಲದೇ ಬಾಲಕಿಯ ಕೆನ್ನೆಯನ್ನು ಕಚ್ಚಿ ವಿಕೃತಿಯನ್ನು ಮೆರೆದಿದ್ದಾರೆ. ಈ ವೇಳೆ ಬಾಲಕಿ ಜೋರಾಗಿ ಕಿರುಚಿಕೊಂಡಿದ್ದು, ಅದನ್ನು ಕೇಳಿಸಿಕೊಂಡ ಸ್ಥಳೀಯರು ತರಗತಿಗೆ ಓಡಿ ಬಂದಿದ್ದಾರೆ. ವಿಷಯ ತಿಳಿದ ಸ್ಥಳೀಯರು ಮುಖ್ಯೋಪಾಧ್ಯಾಯನನ್ನು ಹಿಡಿದು ತರಗತಿಯಲ್ಲಿ ಕೂಡಿ ಹಾಕಿದ್ದಾರೆ. ಇದನ್ನೂ ಓದಿ:  ಬಿಜೆಪಿಗರನ್ನು ಕಾಂಗ್ರೆಸ್ ಸಂಪರ್ಕಿಸುತ್ತಿರುವುದು ನಿಜ: ಯಡಿಯೂರಪ್ಪ

    ಬಾಲಕಿಯ ಪೋಷಕರಿಗೆ ಘಟನೆ ಬಗ್ಗೆ ತಿಳಿಸಿದ ತಕ್ಷಣ ಅವರು ಮತ್ತು ಸ್ಥಳೀಯರು ಶಾಲೆಯ ಮುಂದೆ ಬಂದು ಜಮಾಯಿಸಿದ್ದು, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

    ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದು, ಮುಖ್ಯೋಪಾಧ್ಯಾಯರನ್ನು ತರಗತಿಯಿಂದ ಹೊರಗಡೆ ಕರೆದುಕೊಂಡು ಹೋಗುತ್ತಿರುವಾಗ ಕೋಪಗೊಂಡ ಸ್ಥಳೀಯರು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸರು ಆರೋಪಿಯನ್ನು ರಕ್ಷಿಸಲು ಯತ್ನಿಸಿದಾಗ ಅವರ ಲಾಠಿಯನ್ನೇ ಕಿತ್ತುಕೊಂಡು ಮುಖ್ಯೋಪಾಧ್ಯಾಯರಿಗೆ ಪ್ರಹಾರ ಮಾಡಲಾಗಿದೆ. ಆದರೂ ಸಹ ಆರೋಪಿಯನ್ನು ರಕ್ಷಿಸಲು ಪೊಲೀಸರು ಯಶಸ್ವಿಯಾಗಿದ್ದು, ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಆರೋಪಿಗೆ ಹಲ್ಲೆ ಮಾಡಿದ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನೂ ಓದಿ:  ಜಯಮೃತ್ಯುಂಜಯ ಸ್ವಾಮೀಜಿ ಶಾಪದಿಂದಲೇ ಯಡಿಯೂರಪ್ಪ ಅಧಿಕಾರ ಹೋಗಿದೆ: ವಿಜಯಾನಂದ ಕಾಶಪ್ಪನವರ್

    ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯೋಪಾಧ್ಯಾಯ, ಆ ಕ್ಷಣ ನಾನು ನನ್ನ ಮಾನಸಿಕ ಸ್ಥಿಮಿತೆಯನ್ನು ಕಳೆದುಕೊಂಡಿದ್ದೆ ಎಂದಿದ್ದಾರೆ.

    ಕತಿಹಾರ್ ಎಎಸ್‍ಪಿ ರಶ್ಮಿ ಈ ಕುರಿತು ಮಾತನಾಡಿದ್ದು, ಸಂತ್ರಸ್ತೆಯ ಹೇಳಿಕೆಯನ್ನು ತೆಗೆದುಕೊಳ್ಳಲಾಗಿದೆ. ಈ ಪ್ರಕರಣ ಬರಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆರೋಪಿಯನ್ನು ಪ್ರಸ್ತುತ ಬಂಧಿಸಲಾಗಿದ್ದು, ಬಾಲಕಿಯನ್ನು ಚಿಕಿತ್ಸೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಕಲಬುರಗಿಯಲ್ಲಿ 36ನೇ ಪತ್ರಕರ್ತರ ರಾಜ್ಯ ಸಮ್ಮೇಳನ

    ಸ್ಥಳೀಯರು ಮುಖ್ಯೋಪಾಧ್ಯಾಯರ ಮೇಲೆ ಹಲ್ಲೆ ಮಾಡಿದ ವೀಡಿಯೋವನ್ನು ನಾನು ಇನ್ನೂ ನೋಡಿಲ್ಲ. ಒಂದು ವೇಳೆ ಅದು ನಿಜವಾಗಿದ್ದರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

  • ಶಿಕ್ಷಕಿಯಾಗುವ ಇಚ್ಛೆ ವ್ಯಕ್ತಪಡಿಸಿದ ಕೈಯಿಲ್ಲದ ಬಾಲಕಿಯ ಸ್ಪೂರ್ತಿದಾಯಕ ಕಥೆ

    ಶಿಕ್ಷಕಿಯಾಗುವ ಇಚ್ಛೆ ವ್ಯಕ್ತಪಡಿಸಿದ ಕೈಯಿಲ್ಲದ ಬಾಲಕಿಯ ಸ್ಪೂರ್ತಿದಾಯಕ ಕಥೆ

    ಪಾಟ್ನಾ: 14 ವರ್ಷದ ಬಿಹಾರ ಪಾಟ್ನಾದ ಬಾಲಕಿಯೊಬ್ಬಳು ಅಪಘಾತದಲ್ಲಿ ತನ್ನ ಎರಡು ಕೈಗಳನ್ನು ಕಳೆದುಕೊಂಡು ಬಳಿಕ ತನ್ನ ಕಾಲುಗಳ ಬೆರೆಳ ಸಹಾಯದಿಂದ ಬರೆಯುವುದನ್ನು ಕಲಿತು ಶಿಕ್ಷಣವನ್ನು ಮುಂದುವರಿಸಿದ್ದಾರೆ.

    7 ವರ್ಷಗಳಿಂದ ತನುಕುಮಾರಿ ಎಂಬ ಬಾಲಕಿ ಅಂಗವೈಕಲ್ಯದಿಂದ ಎದುರಾದ ಹಲವಾರು ಸವಾಲುಗಳನ್ನು ಎದುರಿಸುವ ಮೂಲಕ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ತನ್ನ ಧೈರ್ಯವನ್ನು ಪ್ರದರ್ಶಿಸಿದ್ದಾಳೆ.  ಇದನ್ನೂ ಓದಿ: ಒಗ್ಗಟ್ಟು ಇಲ್ಲದೆ 3 ಪಾಲಿಕೆಯಲ್ಲಿ ಸೋಲು – ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್‍ಗೆ ಡಿಕೆಶಿ ಚಾರ್ಜ್‍ಶೀಟ್

    specially abled girl

    ತನುಕುಮಾರಿ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದು, ನಾನು ಶಿಕ್ಷಕಿಯಾಗಲು ಬಯಸುತ್ತೇನೆ. ನನ್ನ ಅಂಗವೈಕಲ್ಯತೆಯಿಂದಾಗಿ ನಾನು ಹಿಂದುಳಿಯುತ್ತೇನೆ ಎಂದು ನನಗೆ ಅನಿಸಿಲ್ಲ. ಅಪಘಾತದ ನಂತರ ನಾನು ಕ್ರಮೇಣ ನನ್ನ ಕಾಲ್ಬೆರಳುಗಳಿಂದ ಬರೆಯುವುದನ್ನು ಕಲಿತೆ. ಓದುವುದಷ್ಟೇ ಅಲ್ಲದೇ ಕ್ರೀಡೆ ಹಾಗೂ ಚಿತ್ರಕಲೆ ಚಟುವಟಿಕೆಗಳಲ್ಲಿ ಕೂಡ ಭಾಗವಹಿಸಲು ಇಷ್ಟಪಡುತ್ತೇನೆ ಎಂದಿದ್ದಾಳೆ.  ಇದನ್ನೂ ಓದಿ:  ಫುಲ್ ಟೈಟು..ನಡುರಸ್ತೆಯಲ್ಲೇ ಫೈಟು – ಎದುರಿಗಿದ್ದವನಿಗೆ ಬಿತ್ತು ದೊಣ್ಣೆ ಏಟು!

    specially abled girl

    ಬಾಲಕಿ ತಾಯಿ ಸುಹಾ ದೇವಿ ಕೂಡ ತಮ್ಮ ಮಗಳ ಬಗ್ಗೆ ಆತ್ಮ ವಿಶ್ವಾಸ ಮತ್ತು ಮೆಚ್ಚುಗೆಯನನು ವ್ಯಕ್ತಪಡಿಸಿದ್ದಾರೆ. 2014ರಲ್ಲಿ ನನ್ನ ಮಗಳು ಆಟವಾಡುವಾಗ ವಿದ್ಯುತ್ ತಂತಿಯನ್ನು ಮುಟ್ಟಿದ್ದಳು. ಇದರಿಂದ ಅವಳು ತನ್ನ ಕೈಗಳನ್ನು ಕಳೆದುಕೊಂಡಳು. ಆರಂಭದಲ್ಲಿ ನಾವು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವು. ಆದರೆ ತನ್ನ ದಿನನಿತ್ಯದ ಕೆಲಸಗಳನ್ನು ಕಾಲುಗಳ ಸಹಾಯದಿಂದ ಆಕೆಯೇ ಇಷ್ಟಪಟ್ಟು ಮಾಡಿಕೊಳ್ಳುತ್ತಿರುವುದು ನನಗೆ ಬಹಳ ಸಂತೋಷವಾಗುತ್ತಿದೆ. ನಾನು ಅವಳ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದು ಹೇಳಿದ್ದಾರೆ.

    ಮಕ್ಕಳಿಗಾಗಿ ಆಯೋಜಿಸಿದ್ದ ಹಲವಾರು ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ತನು ಪ್ರಶಸ್ತಿಗಳನ್ನು ಗೆದ್ದಿದ್ದಾಳೆ.

  • ಹೈಪ್ರೊಫೈಲ್ ಸೆಕ್ಸ್ ದಂಧೆ ಬಯಲು – ವಾಟ್ಸಪ್ ನಲ್ಲಿಯೇ ರೇಟ್ ಫೈನಲ್

    ಹೈಪ್ರೊಫೈಲ್ ಸೆಕ್ಸ್ ದಂಧೆ ಬಯಲು – ವಾಟ್ಸಪ್ ನಲ್ಲಿಯೇ ರೇಟ್ ಫೈನಲ್

    – 8 ಮಹಿಳೆಯರು ಸೇರಿದಂತೆ 16 ಜನ ಪೊಲೀಸರ ವಶಕ್ಕೆ
    – ಬಂದ ಹಣದಲ್ಲಿ ಹುಡುಗಿಯರಿಗೆ ಶೇ.30ರಷ್ಟು ಹಣ
    – ಹೋಟೆಲ್ ಹೆಸರಿನಲ್ಲಿ ವೇಶ್ಯಾವಾಟಿಕೆ

    ಪಾಟ್ನಾ: ಹೋಟೆಲ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ 16 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಿಹಾರದ ರಾಜಧಾನಿ ಪಾಟ್ನಾದಲ್ಲಿಯ ಗರ್ದನಾಬಾಗಿ ಇಲಾಖೆಯ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಇದೊಂದು ಹೈ ಪ್ರೊಫೈಲ್ ದಂಧೆಯಾಗಿದ್ದು, ಈ ವ್ಯವಹಾರದಲ್ಲಿ ಭಾಗಿಯಾದವರ ಹೆಸರು ಬೆಳಕಿಗೆ ಬರಬೇಕಿದೆ.

    ಹೋಟೆಲ್ ನಲ್ಲಿ ಸಿಕ್ಕಿರುವ ಮಹಿಳೆಯರು ಕೋಲ್ಕತ್ತಾ ಮತ್ತು ಬನಾರಸ ಮೂಲದವರು ಎಂದು ತಿಳಿದು ಬಂದಿದೆ. ಎಸ್.ಪಿ. ಅಂಬರೀಶ್ ರಾಹುಲ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಆದ್ರೆ ಸ್ಥಳೀಯ ಪೊಲೀಸರಿಗೆ ದಾಳಿಯ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ದಾಳಿ ವೇಳೆ ಪೊಲೀಸರು ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ವಾಟ್ಸಪ್ ನಲ್ಲಿಯೇ ಡೀಲ್:
    ಲಾಕ್‍ಡೌನ್ ವೇಳೆಯಲ್ಲಿಯೂ ಇಲ್ಲಿ ಸೆಕ್ಸ್ ದಂಧೆ ನಡೆಯುತ್ತಿತ್ತು. ಇನ್ನು ಇಲ್ಲಿ ಬರುತ್ತಿದ್ದ ಮಹಿಳೆಯರು ವಿವಾಹಿತರಾಗಿದ್ದು, ಈ ವಿಷಯ ಅವರ ಕುಟುಂಬಸ್ಥರಿಗೂ ತಿಳಿದಿದೆ. ಎಲ್ಲ ವ್ಯವಹಾರಗಳು ವಾಟ್ಸಪ್ ಮೂಲಕವೇ ನಡೆಯುತ್ತಿತ್ತು. ಗ್ರಾಹಕರಿಗೆ ವಾಟ್ಸಪ್ ನಲ್ಲಿಯೇ ಫೋಟೋ ತೋರಿಸಿ ಬೆಲೆ ನಿಗದಿ ಮಾಡಿ ಹೋಟೆಲ್ ಗೆ ಕರೆ ತರಲಾಗುತ್ತಿತ್ತು. ಆರು ಸಾವಿರದಿಂದ 18 ಸಾವಿರ ರೂ.ವರೆಗೆ ಬೆಲೆ ಫಿಕ್ಸ್ ಮಾಡಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ನಮ್ಮ ಸೈನಿಕರ ಮೇಲೆ ದಾಳಿಯಾದ ಮರು ಕ್ಷಣವೇ ಪ್ರತಿದಾಳಿ – ಅಮೆರಿಕ ಅಧ್ಯಕ್ಷ ಬೈಡನ್ ಎಚ್ಚರಿಕೆ

    ಹೋಟೆಲ್ ಮಾಲೀಕ ಪಂಕಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹೋಟೆಲ್ ನಡೆಸುವದಾಗಿ ಹೇಳಿ ಪಂಕಜ್ ಕಟ್ಟಡವನ್ನು ಲೀಸ್ ಪಡೆದುಕೊಂಡು ಸೆಕ್ಸ್ ದಂಧೆ ನಡೆಸುತ್ತಿದ್ದನು. ಈ ದಂಧೆಗೆ ಬರುತ್ತಿದ್ದ ಮಹಿಳೆಯರಿಗೆ ಓರ್ವ ಗ್ರಾಹಕನಿಂದ ಬಂದ ಹಣದಿಂದ ಶೇ.30ರಷ್ಟು ನೀಡಲಾಗುತ್ತಿತ್ತು. ಬರೋ ಗ್ರಾಹಕರಿಗೆ ಹೋಟೆಲ್ ನಲ್ಲಿ ಮದ್ಯ, ಕಾಂಡೋಮ್, ಮಾತ್ರೆಗಳ ಸರಬರಾಜು ಮಾಡಲಾಗುತ್ತಿತ್ತು. ಇದನ್ನೂ ಓದಿ: ತಾವು ನಟಿಸಿದ ಸಿನಿಮಾವನ್ನೇ ನೋಡಿ ಗಳಗಳನೇ ಅತ್ತ ಕಿಯಾರಾ

  • ಸೈಕಲ್ ಗರ್ಲ್‍ಗೆ ಪ್ರಿಯಾಂಕಾ ವಾದ್ರಾ ನೆರವು

    ಸೈಕಲ್ ಗರ್ಲ್‍ಗೆ ಪ್ರಿಯಾಂಕಾ ವಾದ್ರಾ ನೆರವು

    ಪಾಟ್ನಾ: ಬಿಹಾರದ ಸೈಕಲ್ ಗರ್ಲ್ ಎಂದೇ ಖ್ಯಾತಿಯಾಗಿರುವ ಜ್ಯೋತಿ ಕುಮಾರ್ ಅವರ ತಂದೆ ನಿಧನರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ನೆರವಿನ ಹಸ್ತ ಚಾಚಿದ್ದಾರೆ.

    ಜ್ಯೋತಿ ಕುಮಾರ್ ಜೊತೆ ದೂರವಾಣಿ ಕರೆ ಮಾಡಿ ಮಾತನಾಡಿರುವ ಪ್ರಿಯಾಂಕಾ ಆಕೆಗೆ ಸಮಾಧಾನ ಮಾಡಿದ್ದಾರೆ. ಜೊತೆಗೆ ಆಕೆಯ ವಿಧ್ಯಾಭ್ಯಾಸ ಮತ್ತು ಜೀವನಕ್ಕೆ ನೆರವು ನೀಡುವುದಾಗಿ ಹೇಳಿದ್ದಾರೆ.

    ಮೇ 18 2020 ರಂದು ಜ್ಯೋತಿ ಕುಮಾರಿ ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದರು, ತನ್ನ ಅನಾರೋಗ್ಯದ ತಂದೆಯನ್ನು ಹರಿಯಾಣದ ಗುರುಗ್ರಾಮ್‍ನಿಂದ ಬಿಹಾರದ ದಭರ್ಂಗಾಗೆ 1,200 ಕಿ.ಮೀ ಸೈಕಲ್‍ನಲ್ಲಿ ಮನೆಗೆ ಕರೆದೊಯ್ದರು. ಆದರೆ ಕೆಲವು ದಿನಗಳ ನಂತರ ಆಕೆಯ ತಂದೆ ಹೃದಯಾಘಾತದಿಂದ ಸಾವನ್ನಪಿದ್ದರು. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ. ಜ್ಯೋತಿಕಾ ತಂದೆಯನ್ನು ಉಳಿಸಿಕೊಳ್ಳಲು ಮಾಡಿರು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದನ್ನೂ ಓದಿ: ಸೈಕಲಿನಲ್ಲೇ ಮಗಳೊಂದಿಗೆ ಕ್ರಮಿಸಿ ಸುದ್ದಿಯಾಗಿದ್ದ ವ್ಯಕ್ತಿ ಸಾವು

    ತಂದೆಯನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ತಂದೆಯನ್ನು ಸೈಕಲ್ ನಲ್ಲಿ ಕರೆದುಕೊಂಡು ಹೋಗಿದ್ದ ವಿಷಯವನ್ನು ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಹೊಗಳಿದ್ದರು. ನೆಟ್ಟಿಗರು ಜ್ಯೋತಿಕಾ ಕಾರ್ಯವನ್ನು ಮೆಚ್ಚಿದ್ದರು. ಇದನ್ನೂ ಓದಿ : ಅನ್‍ಲಾಕ್ ಸುಳಿವು ನೀಡಿದ್ರು ಸಿಎಂ ಯಡಿಯೂರಪ್ಪ

    ಆದರೆ ತಂದೆ ಮೋಹನ್ ಪಾಸ್ವಾನ್ ನಿಧನದ ನಂತರ ಜ್ಯೋತಿಕುಮಾರಿ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದಾರೆ, ಅವರೊಬ್ಬರೇ ಮನೆಯಲ್ಲಿ ದುಡಿಯುತ್ತಿದ್ದು, ಕುಟುಂಬದ ಅಗತ್ಯತೆಗಳನ್ನು ಪೂರೈಸುತ್ತಿದ್ದರು. ಹೀಗಾಗಿ ಆಕೆಗೆ ಕರೆ ಮಾಡಿರುವ ಪ್ರಿಯಾಂಕಾ ಗಾಂಧಿ ವಿಧ್ಯಾಭ್ಯಾಸ ಸೇರಿದಂತೆ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸುವುದಾಗಿ ತಿಳಿಸಿದ್ದಾರೆ. ಪ್ರಿಯಾಂಕಾ ಗಾಂಧಿಯವರೊಂದಿಗೆ ಮಾತನಾಡಿದ ಜ್ಯೋತಿ, ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನು ಭೇಟಿ ಮಾಡುವ ಇಚ್ಛೆ ವ್ಯಕ್ತಪಡಿಸಿದರು. ಕೋವಿಡ್-19 ಸಾಂಕ್ರಾಮಿಕ ರೋಗವು ಮುಗಿದ ಕೂಡಲೇ ನವದೆಹಲಿಯಲ್ಲಿ ಭೇಟಿಯಾಗುವುದಾಗಿ ಜ್ಯೋತಿಗೆ ಪ್ರಿಯಾಂಕಾ ಭರವಸೆ ನೀಡಿದ್ದಾರೆ.

    ಪ್ರಿಯಾಂಕಾ ಗಾಂಧಿ ವಾದ್ರಾ ಬರೆದ ಸಂತಾಪ ಪತ್ರವನ್ನು ಪಕ್ಷದ ಮುಖಂಡ ಮಶ್ಕೂಲ್ ಅಹ್ಮದ್ ಅವರು ಜ್ಯೋತಿ ಕುಮಾರಿ ಅವರಿಗೆ ಹಸ್ತಾಂತರಿಸಿದರು. ಯಾವುದಕ್ಕೂ ಮುಜುಗರ ಪಡದೆ ಸಹಾಯ ಕೇಳುವಂತೆ ಪ್ರಿಯಾಂಕಾ ಜ್ಯೋತಿ ಕುಮಾರಿ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

  • ಪಾಟ್ನಾದ ಏಮ್ಸ್‌ನಲ್ಲಿ ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆ ಪ್ರಯೋಗ ಆರಂಭ

    ಪಾಟ್ನಾದ ಏಮ್ಸ್‌ನಲ್ಲಿ ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆ ಪ್ರಯೋಗ ಆರಂಭ

    ಪಾಟ್ನಾ: ಬಿಹಾರದ ಪಾಟ್ನಾದಲ್ಲಿ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯಲ್ಲಿ ಮಕ್ಕಳ ಮೇಲೆ ಭಾರತ್ ಬಯೋಟೆಕ್ ಕಂಪನಿಯ ಕೊವಾಕ್ಸಿನ್ ಲಸಿಕೆಯ ಪ್ರಯೋಗ ಆರಂಭವಾಗಿದೆ.

    ಮೇ 18 ರಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನೀತಿ ಆಯೋಗದ ಸದಸ್ಯ (ಆರೋಗ್ಯ ವಿಭಾಗ) ಡಾ.ವಿ.ಕೆ.ಪೌಲ್, ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆಯ ವೈದ್ಯಕೀಯ ಪ್ರಯೋಗ 10-12 ದಿನಗಳಲ್ಲಿ ಆರಂಭವಾಗಲಿದೆ ಎಂದು ತಿಳಿಸಿದ್ದರು.

    ಕೊವಾಕ್ಸಿನ್ ಲಸಿಕೆಯನ್ನು 2ರಿಂದ 18 ವರ್ಷದವರ ಮೇಲೆ ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಅನುಮತಿ ನೀಡಿದೆ ಎಂದು ವಿವರಿಸಿದ್ದರು. ಭಾರತದ ಹಲವು ವೈದ್ಯಕೀಯ ಸಂಸ್ಥೆಗಳಲ್ಲಿ 525 ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆ ಪ್ರಯೋಗ ನಡೆಸಲು ಸಿದ್ಧತೆ ನಡೆದಿದೆ.

    ಕೆಲವು ಷರತ್ತುಗಳನ್ನು ವಿಧಿಸಿ ಲಸಿಕೆಯ ಪ್ರಯೋಗಕ್ಕೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‍ಸಿಒ) ವಿಷಯ ತಜ್ಞರ ಸಮಿತಿ ಶಿಫಾರಸು ಮಾಡಿತ್ತು. ಶಿಫಾರಸಿನ ಹಿನ್ನೆಲೆಯಲ್ಲಿ ಮೇ 11 ರಂದು ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಡಿಸಿಜಿಐ ಕೊವಾಕ್ಸಿನ್ ಲಸಿಕೆಗೆ ಅನುಮತಿ ನೀಡಿತ್ತು. ಇದನ್ನು ಓದಿ:ವ್ಯಾಕ್ಸಿನ್ ಖರೀದಿಗೆ ಮೀಸಲಿಟ್ಟ 35,000 ಕೋಟಿ ಏನಾಯ್ತು? ಲೆಕ್ಕ ಪರಿಶೋಧನೆಗೆ ಸುಪ್ರೀಂಕೋರ್ಟ್ ಆದೇಶ

    5 ರಿಂದ 18 ವರ್ಷದ ಒಳಗಿನವರಲ್ಲಿ ಲಸಿಕೆ ಪ್ರಯೋಗ ನಡೆಸಲು ಅನುಮತಿ ನೀಡುವಂತೆ ಫೆಬ್ರುವರಿಯಲ್ಲಿ ಭಾರತ್ ಬಯೋಟೆಕ್ ಮನವಿ ಮಾಡಿತ್ತು. ಈ ಸಮಯದಲ್ಲಿ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‍ಸಿಒ) ವಯಸ್ಕರ ಮೇಲೆ ಈ ಲಸಿಕೆಯ ಪರಿಣಾಮದ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿತ್ತು.

    ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಬೀಳಲಿದೆ. ಹೀಗಾಗಿ ಕೂಡಲೇ ಮಕ್ಕಳಿಗೆ ಲಸಿಕೆ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಈ ಆಗ್ರಹಕ್ಕೆ ಕೇಂದ್ರ ಸರ್ಕಾರ ಕಳೆದ ವಾರ ಸ್ಪಷ್ಟನೆ ನೀಡಿತ್ತು.

    ವಿಶ್ವದ ಯಾವುದೇ ದೇಶವು ಮಕ್ಕಳಿಗೆ ಲಸಿಕೆಗಳನ್ನು ನೀಡುತ್ತಿಲ್ಲ. ಅಲ್ಲದೆ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ಶಿಫಾರಸು ಮಾಡಿಲ್ಲ. ಮಕ್ಕಳಲ್ಲಿ ಲಸಿಕೆಗಳ ಸುರಕ್ಷತೆಯ ಬಗ್ಗೆ ಅಧ್ಯಯನಗಳು ನಡೆದಿದೆ ಎಂದು ತಿಳಿಸಿತ್ತು. ಇದನ್ನು ಓದಿ:ರಾಜ್ಯದಲ್ಲಿ 1 ಸಾವಿರ ವೆಂಟಿಲೇಟರ್ ಕೊಳೆಯುತ್ತಿವೆ: ಶಾಸಕ ಡಾ.ಅಜಯ್ ಸಿಂಗ್

    ಭಾರತದಲ್ಲಿ ಮಕ್ಕಳ ಮೇಲೆ ಶೀಘ್ರವೇ ಕ್ಲಿನಿಕಲ್ ಟ್ರಯಲ್ ಆರಂಭವಾಗಲಿದೆ. ಪ್ರಯೋಗಗಳ ಆಧಾರದ ಮೇಲೆ ಸಾಕಷ್ಟು ದತ್ತಾಂಶಗಳು ಲಭ್ಯವಾದ ನಂತರ ಈ ಬಗ್ಗೆ ನಮ್ಮ ವಿಜ್ಞಾನಿಗಳು ನಿರ್ಧಾರ ಕೈಗೊಳ್ಳಬೇಕೇ ಹೊರತು, ವಾಟ್ಸಪ್ ಗ್ರೂಪ್‍ಗಳಲ್ಲಿ ಸೃಷ್ಟಿಸಲಾಗುವ ಭೀತಿ ಮತ್ತು ಕೆಲವು ರಾಜಕಾರಣಿಗಳ ರಾಜಕೀಯ ಆಧರಿಸಿ ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗದು ಎಂದಿತ್ತು.

  • 1,200 ಕಿ.ಮೀ ಸೈಕಲಿನಲ್ಲೇ ಮಗಳೊಂದಿಗೆ ಕ್ರಮಿಸಿ ಸುದ್ದಿಯಾಗಿದ್ದ ವ್ಯಕ್ತಿ ಸಾವು

    1,200 ಕಿ.ಮೀ ಸೈಕಲಿನಲ್ಲೇ ಮಗಳೊಂದಿಗೆ ಕ್ರಮಿಸಿ ಸುದ್ದಿಯಾಗಿದ್ದ ವ್ಯಕ್ತಿ ಸಾವು

    ಪಾಟ್ನಾ: ಸೈಕಲಿನಲ್ಲಿಯೇ ಮಗಳೊಂದಿಗೆ 1,200 ಕಿ.ಮೀ ಕ್ರಮಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ.

    ಮೋಹನ್ ಪಾಸ್ವಾನ್ ಅವರು ಸೋಮವಾರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ದರ್ಭಾಂಗ ಜಿಲ್ಲೆಯಲ್ಲಿರುವ ಪಾಸ್ವಾನ್ ಮನೆಯಲ್ಲಿಯೇ ಮೋಹನ್ ಮೃತಪಟ್ಟಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    1,200 ಕಿ.ಮೀ ಕ್ರಮಿಸಿ ಧೈರ್ಯ ಮೆರೆದಿದ್ದ ಬಾಲಕಿ:
    ಕಳೆದ ವರ್ಷ ಲಾಕ್‍ಡೌನ್‍ನಿಂದಾಗಿ 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ತಂದೆಯನ್ನು ಸೈಕಲಿನಲ್ಲಿ ಕೂರಿಸಿಕೊಂಡು 1,200 ಕಿ.ಮೀ ಕ್ರಮಿಸಿ ಧೈರ್ಯ ಮೆರೆದಿದ್ದಳು. ದೆಹಲಿಯಿಂದ ಬಿಹಾರ ಜಿಲ್ಲೆಯ ದರ್ಭಾಂಗಕ್ಕೆ ಸೈಕಲಿನಲ್ಲಿ ಕ್ರಮಿಸಿದ ಜ್ಯೋತಿ, ಈ ಮಧ್ಯೆ ಹಲವು ಏಳು- ಬೀಳುಗಳನ್ನು ಎದುರಿಸಿಕೊಂಡು ತನ್ನ ತಂದೆಯ ಜೊತೆ ಕೊನೆಗೂ ಊರು ಸೇರಿದ್ದಳು. 2020ರ ಮೇ 10ರಂದು ಜ್ಯೋತಿ ದೆಹಲಿಯಿಂದ ಹೊರಟಿದ್ದಳು. ಈ ವೇಳೆ ಸೈಕಲಿನಲ್ಲಿ ಹಿಂಬದಿ ಸವಾರನಾಗಿ ಜ್ಯೋತಿ ಅಪ್ಪ ಕುಳಿತಿದ್ದರು. ಇದನ್ನೂ ಓದಿ: ನನ್ನ ಮಗನನ್ನ ನೋಡಿದ್ರಾ..?- ನಾಪತ್ತೆಯಾಗಿರೋ ಮಗನಿಗಾಗಿ ಹುಡುಕುತ್ತಾ 5 ತಿಂಗಳಿಂದ 1500 ಕಿ.ಮೀ ಸೈಕಲ್ ಓಡಿಸಿರೋ ತಂದೆ

    ನಾವು ತುಂಬಾನೇ ಬಡವರಾಗಿದ್ದು, ನಮ್ಮ ಕೈಯಲ್ಲಿ ಅಲ್ಪ-ಸ್ವಲ್ಪ ಹಣವಿತ್ತು. ಬಾಡಿಗೆ ಮನೆಯಲ್ಲಿದ್ದ ನಮ್ಮನ್ನ ಮಾಲೀಕ ಒಂದಾ ನೀವು ಹಣ ಪಾವತಿಸಬೇಕು, ಇಲ್ಲವೆಂದಲ್ಲಿ ಮನೆ ಖಾಲಿ ಮಾಡಬೇಕು ಎಂದು ಗದರಿದ್ದಾನೆ. ಇದು ನಮ್ಮನ್ನ ಹತಾಶರನ್ನಾಗಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ನಾವು ನಮ್ಮ ಹಳ್ಳಿಗೆ ವಾಪಸ್ ಹೋಗಲು ನಿರ್ಧರಿಸಿದ್ದು, ಟ್ರಕ್ ಚಾಲಕನ ಬಳಿ ನಮ್ಮನ್ನು ಕರೆದೊಯ್ಯುವಂತೆ ಕೇಳಿಕೊಂಡೆವು. ಆಗ ಆತ 6,000 ನೀಡಬೇಕು ಎಂದು ತಿಳಿಸಿದನು. ಆದರೆ ಆತನಿಗೆ ಹಣ ಕೊಡುವಷ್ಟು ನಮ್ಮ ಬಳಿ ಹಣವಿರಲಿಲ್ಲ. ಹೀಗಾಗಿ ನನ್ನ ತಂದೆ 500 ರೂ. ನೀಡಿ ಒಂದು ಸೈಕಲ್ ಖರೀದಿಸಿದ್ದು, ಅದರಲ್ಲೇ ದರ್ಭಾಂಗಕ್ಕೆ ತಲುಪಿದೆವು ಎಂದು ಜ್ಯೋತಿ ಕುಮಾರಿ ಮಾಧ್ಯಮವೊಂದಕ್ಕೆ ತಿಳಿಸಿದ್ದಳು.

    ಜ್ಯೋತಿಯ ತಂದೆ ದೆಹಲಿಯಲ್ಲಿ ಇ-ರಿಕ್ಷಾ ಚಾಲಕರಾಗಿದ್ದರು. ಆದರೆ ಮಾರ್ಚ್ 25ರಿಂದ ಲಾಕ್ ಡೌನ್ ಹೇರಲಾದ ಪರಿಣಾಮ ತನ್ನ ಬಳಿಯಿದ್ದ ರಿಕ್ಷಾವನ್ನು ಮಾಲೀಕನಿಗೆ ಕೊಟ್ಟಿದ್ದಾರೆ. ಆ ನಂತರ ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟಪಡುತ್ತಿದ್ದರು. ಇದನ್ನೂ ಓದಿ: ಊರಿಗೆ ತೆರಳಲೆಂದು 1,200 ಕಿ.ಮೀ ಪ್ರಯಾಣಿಸಿದ ನಂತ್ರ ಕೈ ಕೊಡ್ತು ಅದೃಷ್ಟ

    ಮೊದಲೇ ಕಾಲು ನೋವಿನಿಂದ ಬಳಲುತ್ತಿದ್ದ ಜ್ಯೋತಿ ತಂದೆಗೆ ನಡೆದಾಡಲು ಕಷ್ಟವಾಗುತ್ತಿತ್ತು. ಅವರ ಬಳಿ 600 ರೂ. ಮಾತ್ರ ಇತ್ತು. ದಾನಿಗಳ ನೆರವಿನಿಂದ ಹಾಗೂ ಕ್ಯಾಂಪ್ ಗಳು ನೀಡುವ ಆಹಾರದ ಮೂಲಕ ದಿನಕಳೆಯುತ್ತಿದ್ದೆವು ಎಂದಿದ್ದಳು.

  • ಪಾಟ್ನಾ AIIMSನಲ್ಲಿ ಕೊರೊನಾ ಸ್ಫೋಟ – 384 ವೈದ್ಯರಿಗೆ ಪಾಸಿಟಿವ್, ನರ್ಸಿಂಗ್ ಸಿಬ್ಬಂದಿಗೂ ಸೋಂಕು

    ಪಾಟ್ನಾ AIIMSನಲ್ಲಿ ಕೊರೊನಾ ಸ್ಫೋಟ – 384 ವೈದ್ಯರಿಗೆ ಪಾಸಿಟಿವ್, ನರ್ಸಿಂಗ್ ಸಿಬ್ಬಂದಿಗೂ ಸೋಂಕು

    ಪಾಟ್ನಾ: ಬಿಹಾರದಲ್ಲಿ ಕೊರೊನಾ ಆತಂಕದ ನಡುವೆ ಮತ್ತೊಂದು ಆಘಾತ ಎದುರಾಗಿದೆ. ಬಿಹಾರದಲ್ಲಿ ಮಂಗಳವಾರ ಮೊದಲ ಬಾರಿಗೆ 10 ಸಾವಿರ ಕೊರೊನಾ ಪ್ರಕರಣಗಳ ವರದಿಯಾಗಿವೆ. ಇದರಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿದ್ದ ಏಮ್ಸ್ ಆಸ್ಪತ್ರೆಯ 384 ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿಗೂ ಸೋಂಕು ತಗುಲಿದೆ.

    ಪಾಟ್ನಾ ಏಮ್ಸ್ ಮೆಡಿಕಲ್ ಸೂಪರಿಟೆಂಡೆಂಟ್ ಇಂದು ತಮ್ಮ ಆಸ್ಪತ್ರೆಯ 384 ವೈದ್ಯರು ಸೇರಿದಂತೆ ಅನೇಕ ನರ್ಸಿಂಗ್ ಸಿಬ್ಬಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ತಿಳಿಸಿದ್ದಾರೆ.

    ಕೊರೊನಾ ಹಿನ್ನೆಲೆ ಬಿಹಾರದ ಪಂಚಾಯತಿ ಚುನಾವಣೆಗಳನ್ನ ಮುಂದೂಡಲಾಗಿದೆ. ಚುನಾವಣೆ ಏಪ್ರಿಲ್ ಅಂತ್ಯಕ್ಕೆ ನಿಗದಿಯಾಗಿತ್ತು. 15 ದಿನಗಳ ನಂತರ ಕೊರೊನಾ ಕುರಿತ ವಾಸ್ತವತೆ ಬಗ್ಗೆ ಸಮೀಕ್ಷೆ ನಡೆಸಿ ದಿನಾಂಕ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

    ಮಂಗಳವಾರ ಬಿಹಾರದಲ್ಲಿ 10,455 ಹೊಸ ಪ್ರಕರಣಗಳು ವರದಿಯಾಗಿದ್ದು, 51 ಸೋಂಕಿತರು ಸಾವನ್ನಪ್ಪಿದ್ದಾರೆ. ಪ್ರತಿ ಗಂಟೆಗೆ ಇಬ್ಬರು ಕೊರೊನಾದಿಂದ ಬಿಹಾರದಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇದವರೆಗೂ 3,42,059 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 1,841 ಜನ ಸಾವನ್ನಪ್ಪಿದ್ದಾರೆ. ಸದ್ಯ 49,527 ಸಕ್ರಿಯ ಪ್ರಕರಣಗಳಿವೆ.