Tag: patna

  • ಮದ್ಯ ಸೇವಿಸುವವರು ಭಾರತೀಯರಲ್ಲ, ಮಹಾಪಾಪಿಗಳು: ನಿತೀಶ್ ಕುಮಾರ್

    ಮದ್ಯ ಸೇವಿಸುವವರು ಭಾರತೀಯರಲ್ಲ, ಮಹಾಪಾಪಿಗಳು: ನಿತೀಶ್ ಕುಮಾರ್

    ಪಾಟ್ನಾ: ಮಹಾತ್ಮ ಗಾಂಧಿ ಕೂಡ ಮದ್ಯ ಸೇವನೆಯನ್ನು ವಿರೋಧಿಸಿದ್ದರು. ಅವರ ತತ್ವಗಳಿಗೆ ವಿರುದ್ಧವಾಗಿ ನಡೆಯುವವರು ಮಹಾಪಾಪಿಗಳು. ಅಂತವರನ್ನು ಭಾರತೀಯರೆಂದು ಪರಿಗಣಿಸಲಾಗುವುದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ಯಪಾನ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಜನರು ಸೇವಿಸುತ್ತಾರೆ. ಹೀಗಾಗಿ ಅದರ ಪರಿಣಾಮಗಳಿಗೆ ಅವರೇ ಹೊಣೆ ಹೊರತು ರಾಜ್ಯ ಸರ್ಕಾರ ಹೊಣೆಯಲ್ಲ. ಮದ್ಯಪಾನ ಸೇವಿಸಿ ಮೃತಪಡುವ ಜನರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಎಂದು ಹೇಳಿದರು.

    ಬಿಹಾರ ನಿಷೇಧ ಮತ್ತು ಅಬಕಾರಿ (ತಿದ್ದುಪಡಿ) ಮಸೂದೆ, 2022, ರಾಜ್ಯಪಾಲರ ಅನುಮೋದನೆಯನ್ನು ಪಡೆಯಿತು. ಇದರ ಪ್ರಕಾರ ಅಪರಾಧಿಗಳು ದಂಡವನ್ನು ಠೇವಣಿ ಮಾಡಿದ ನಂತರ ಡ್ಯೂಟಿ ಮ್ಯಾಜಿಸ್ಟ್ರೇಟ್‍ನಿಂದ ಜಾಮೀನು ಪಡೆಯುತ್ತಾರೆ. ಒಂದು ವೇಳೆ ವ್ಯಕ್ತಿಯು ಅದನ್ನು ಪಾವತಿಸಲು ವಿಫಲವಾದರೆ, ಒಂದು ತಿಂಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಇದನ್ನೂ ಓದಿ: ಬಾಯಿ ಮುಚ್ಚು, ಇದು ನಿನಗೆ ಒಳ್ಳೆಯದಲ್ಲ: ಪತ್ರಕರ್ತ ವಿರುದ್ಧ ರಾಮದೇವ್ ಕಿಡಿ

    ಮದ್ಯ ನಿಷೇಧ ಕಾನೂನನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿಲ್ಲ ಮತ್ತು ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದರೆ, ಮದ್ಯ ನಿಷೇಧ ಕೇವಲ ಕಾಗದದಲ್ಲಿ ಮಾತ್ರ ಉಳಿದಿದೆ ಎಂದು ಪ್ರತಿಪಕ್ಷಗಳು ಟೀಕಿಸಿದೆ. ಇದನ್ನೂ ಓದಿ: ಮೋದಿ ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಬೆಳಗಾವಿಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

  • 2 ಬಾರಿ ಮದುವೆ ದಿನವೇ ವರ ನಾಪತ್ತೆ- ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ವಧು ಕುಟುಂಬಸ್ಥರು

    2 ಬಾರಿ ಮದುವೆ ದಿನವೇ ವರ ನಾಪತ್ತೆ- ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ವಧು ಕುಟುಂಬಸ್ಥರು

    ಪಾಟ್ನಾ: ಮದುವೆಯ ದಿನದಂದೇ ವರ ನಾಪತ್ತೆಯಾಗಿದ್ದು, ಎಷ್ಟೇ ಕಾದರೂ ವರ ಬಾರದಿದ್ದಕ್ಕೆ ವಧುವಿನ ಕಟುಂಬಸ್ಥರು ಪೊಲೀಸ್ ಠಾಣೆ ಮಟ್ಟಿಲು ಹತ್ತಿದ ಘಟನೆ ಬಿಹಾರದ ಧನ್‍ಬಾದ್ ಪ್ರದೇಶದಲ್ಲಿ ನಡೆದಿದೆ.

    ಧನ್ಬಾದ್‍ನ ಭುಲಿ ನಿವಾಸಿ ರತ್ನೇಶ್ ಕುಮಾರ್ ವರ. ಇವರು ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮದುವೆ ಸಮಯದಲ್ಲಿ ರತ್ನೇಶ್ ನಾಪತ್ತೆಯಾಗಿದ್ದು, ಎಷ್ಟು ಕಾದರೂ ಬಾರದೇ ಇದ್ದಾಗ ವಧುವಿನ ಕಡೆಯವರು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಈ ಬಗ್ಗೆ ವಧುವಿನ ಸಂಬಂಧಿಕರು, ವರ ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಆದರೆ ನಂತರದಲ್ಲಿ ವರ ವಾಪಸ್ ಬಂದಿದ್ದಾನೆ. ತಡರಾತ್ರಿ ಮದುವೆ ಮಾಡಲಾಯಿತು.

    ಕಳೆದ ವರ್ಷವೂ ಇದೇ ರೀತಿ ಆಗಿತ್ತು, ಮದುವೆಯ ದಿನಾಂಕ ನಿಗದಿಯಾಗಿತ್ತು. ಆದರೆ ವರ ರತ್ನೇಶ್ ಮದುವೆಯಾಗಲು ನಿರಾಕರಿಸಿದ್ದ. ಇದರಿಂದ ವಧುವಿನ ಕಡೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಮಹಿಳಾ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯವರ ನಡುವೆ ಒಪ್ಪಂದವಾಗಿತ್ತು ಎಂದು ವಧು ಕಡೆಯವರು ತಿಳಿಸಿದ್ದಾರೆ.  ಇದನ್ನೂ ಓದಿ: ಮೂರು ವರ್ಷದ ಮಗಳನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ತಂದೆ

    ಆಗ ರತ್ನೇಶ್ ಕಡೆಯವರು ಪೊಲೀಸ್ ಸಮ್ಮುಖದಲ್ಲಿಯೇ ಮಾರ್ಚ್ 25ರಂದು ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಇದರಿಂದಾಗಿ ವಧು ಕಡೆಯವರು ಮದುವೆಗೆ  ಸಂಪೂರ್ಣ ತಯಾರಿ ಮಾಡಿಕೊಂಡಿದ್ದರು. ಆದರೆ ವರ ಬಾರದಿದ್ದಾಗ ವಧುವಿನ ಕುಟುಂಬಸ್ಥರು ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.  ಇದನ್ನೂ ಓದಿ: ಒಬ್ಬರಿಗೊಬ್ಬರು ಬಡಿದಾಡಿಕೊಂಡ ಶಾಲಾ ಹುಡುಗರು – ವಿದ್ಯಾರ್ಥಿ ಬಲಿ

  • ಮೂವರು ಶಾಸಕರು ಬಿಜೆಪಿಗೆ ಸೇರ್ಪಡೆ – ಸಚಿವ ಮುಖೇಶ್ ನಾಮಫಲಕ ನಾಪತ್ತೆ

    ಮೂವರು ಶಾಸಕರು ಬಿಜೆಪಿಗೆ ಸೇರ್ಪಡೆ – ಸಚಿವ ಮುಖೇಶ್ ನಾಮಫಲಕ ನಾಪತ್ತೆ

    ಪಾಟ್ನಾ: ಬಿಜೆಪಿ ಪಕ್ಷಕ್ಕೆ ಮೂರು ಶಾಸಕರು ಹೊಸದಾಗಿ ಸೇರ್ಪಡೆಯಾಗಿದ್ದ ಬೆನ್ನಲ್ಲೇ ಬಿಹಾರದ ಸಚಿವರೊಬ್ಬರ ಮನೆಯ ಹೊರಗಡೆಯಿದ್ದ ನಾಮಫಲಕ ನಾಪತ್ತೆಯಾಗಿದೆ. ಈ ಸುದ್ದಿ ಬಿಹಾರದಲ್ಲಿ ಸಂಚಲನ ಮೂಡಿಸಿದೆ.

    ವಿಕಾಸಶೀಲ್ ಇನ್ಸಾನ್ ಪಕ್ಷದ ಮುಖ್ಯಸ್ಥರಾಗಿರುವ ಬಿಹಾರ ಸಚಿವ ಮುಖೇಶ್ ಸಹಾನಿ ಅವರ ಮನೆ ಮುಂದೆ ಇದ್ದ ಅವರ ನಾಮಫಲಕ ನಾಪತ್ತೆಯಾಗಿದೆ. ಅದರಲ್ಲಿಯೂ ಈ ಸುದ್ದಿಯಲ್ಲಿರುವ ವಿಶೇಷತೆ ಎಂದರೆ 3 ಶಾಸಕರು ಬಿಜೆಪಿ ಪಕ್ಷಕ್ಕೆ ಸೇರಿದ ಬಳಿಕ ಮುಖೇಶ್ ಮನೆಯಲ್ಲಿ ಈ ಅಚ್ಚರಿ ಘಟನೆ ನಡೆದಿದ್ದು, ಬಿಹಾರದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ನಾಡಿನ ಮಠಾಧೀಶರ ಕ್ಷಮೆ ಕೇಳಬೇಕು: ಅಭಿನವ ಮಂಜುನಾಥ ಶ್ರೀ

    ಮುಖೇಶ್ ಅವರ ಪಕ್ಷ ಬಿಹಾರದಲ್ಲಿ ಬಿಜೆಪಿ ಮತ್ತು ಸಿಎಂ ನಿತೀಶ್ ಕುಮಾರ್ ಅವರ ಜನತಾ ದಳ(ಯುನೈಟೆಡ್)ದ ಮೈತ್ರಿಕೂಟದಲ್ಲಿತ್ತು. ಆದರೆ ಬಿಹಾರದ ಬಿಜೆಪಿ ಮುಖ್ಯಸ್ಥ ಮತ್ತು ಸಂಸದ ಸಂಜಯ್ ಜೈಸ್ವಾಲ್ ಅವರು, ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಅಲಯನ್ಸ್ ಅಥವಾ ಎನ್‍ಡಿಎ ಜೊತೆ ಇನ್ನು ಮುಂದೆ ಮೈತ್ರಿ ನಡೆಸುವುದಿಲ್ಲವೆಂದು ಹೇಳಿಕೆ ಕೊಟ್ಟರು. ಈ ಹೇಳಿಕೆ ಕೊಟ್ಟ ಒಂದು ದಿನದ ನಂತರ ಮುಖೇಶ್ ಅವರ ನಾಮಫಲಕ ಕಾಣಿಯಾಗಿದೆ.

    ಮುಖೇಶ್ ಅವರ ಪಕ್ಷ ಕಳೆದ ಚುನಾವಣೆಯಲ್ಲಿ ಭಾರೀ ಹಿನ್ನೆಡೆಯಾದ ಪರಿಣಾಮ ಅವರ ಪಕ್ಷದಲ್ಲಿದ್ದ ಮೂವರು ಶಾಸಕರು ಬುಧವಾರ ಬಿಜೆಪಿಗೆ ಸೇರಿದರು. ಈ ಹಿನ್ನೆಲೆ ಮುಖೇಶ್ ಅವರು, ಬಿಹಾರ ಬಿಜೆಪಿ ಪಕ್ಷಗಳು ಮೊದಲಿನಿಂದಲೂ ಅವರನ್ನು ಒಡೆಯುವ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಕಾಶಿ ದೇವಸ್ಥಾನ, ಜ್ಞಾನವಾಪಿ ಮಸೀದಿ ಭೂ ವಿವಾದ – ಮಾ 29 ರಿಂದ ನಿತ್ಯ ವಿಚಾರಣೆ

    ರಾಜು ಸಿಂಗ್, ಮಿಶ್ರಿ ಲಾಲ್ ಯಾದವ್ ಮತ್ತು ಸ್ವರ್ಣ ಸಿಂಗ್ ಈ ಮೂವರು ಶಾಸಕರು ಮುಖೇಶ್ ಅವರ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರಿದರು. ಈ ವೇಳೆ ಬಿಜೆಪಿ ಪಕ್ಷವು ಮುಖೇಶ್ ಅವರಿಗೆ ಬಿಹಾರ ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿದೆ. ಆದರೆ ಗುರುವಾರ ಮುಖೇಶ್ ಅವರು ರಾಜೀನಾಮೆ ನೀಡುವುದನ್ನು ನಿರಾಕರಿಸಿದ್ದರು.

  • ಮದುವೆಗಾಗಿ ಕೂದಲು ಕಸಿ ಮಾಡಿಸಿಕೊಂಡು ಮಸಣ ಸೇರಿದ

    ಮದುವೆಗಾಗಿ ಕೂದಲು ಕಸಿ ಮಾಡಿಸಿಕೊಂಡು ಮಸಣ ಸೇರಿದ

    ಪಾಟ್ನಾ: ಮದುವೆಗಾಗಿ ಕೂದಲು ಕಸಿ ಮಾಡಿಕೊಂಡವ ಮರುದಿನವೇ ಸಾವನ್ನಪ್ಪಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

    ಮನೋರಂಜನ್ ಪಾಸ್ವಾನ್ ಮೃತನಾಗಿದ್ದಾನೆ. ಈತ ಬಿಹಾರ ಮಿಲಿಟರಿ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದನು. ಕೂದಲು ಕಸಿಗೆ ಒಳಗಾಗಿದ್ದ ಈತ ಔಷಧದ ಪರಿಣಾಮದಿಂದ ಕಸಿ ಮಾಡಿಕೊಂಡ ಒಂದೇ ದಿನದಲ್ಲಿ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾನೆ.

    ನಡೆದಿದ್ದೇನು?: ಮನೋರಂಜನ್‍ಗೆ ಮೇ 11 ರಂದು ಈ ವ್ಯಕ್ತಿಯ ಮದುವೆ ನಿಶ್ಚಯವಾಗಿತ್ತು. ಕೂದಲು ಕಸಿ ಮಾಡಿಸಿಕೊಳ್ಳುವ ಸಲುವಾಗಿ ಪಾಟ್ನಾಗೆಹೀಗಿದ್ದನು. ಖಾಸಗಿ ಕ್ಲಿನಿಕ್‍ನಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಕೂದಲು ಕಸಿಗೆ ಒಳಗಾಗಿದ್ದನು. ಕಸಿ ನಂತರ ಚರ್ಮದ ತುರಿಕೆಯ ಅನುಭವ ಹೇಳಿಕೊಂಡಿದ್ದನು. ಪಾಸ್ವಾನ್ ಸ್ನೇಹಿತ ಕಮಲ್ ಕುಮಾರ್ ಮರುದಿನ ಕ್ಲಿನಿಕ್‍ಗೆ ಕರೆದೊಯ್ದಿದ್ದರು. ಪಾಸ್ವಾನ್ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಬೋಳು ತಲೆ ಇರೋದು ಮುಚ್ಚಿಟ್ಟು ಮದ್ವೆಯಾದ ಪತಿಯ ವಿರುದ್ಧ ದೂರು

    ನಂತರ ಕ್ಲಿನಿಕ್ ಸಿಬ್ಬಂದಿ ಪಾಸ್ವಾನ್‍ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಐಸಿಯುನಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಪ್ಲಾಸ್ಟಿಕ್ ಸರ್ಜನ್, ಕಾರ್ಡಿಯಾಕ್ ಸರ್ಜನ್, ಇಂಟರ್ನಲ್ ಮೆಡಿಸಿನ್ ಮತ್ತು ಐಸಿಯು ತಜ್ಞರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಒಂದು ಗಂಟೆಯ ನಂತರ ಪಾಸ್ವಾನ್ ಸಾವನ್ನಪ್ಪಿದ್ದಾನೆ. ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ವೇಳೆ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

    ಔಷಧಿಯ ಪ್ರತಿಕ್ರಿಯೆಯಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ಮೃತನ ಕುಟುಂಬಸ್ಥರು ತಿಳಿಸಿದ್ದಾರೆ. ಮೃತರ ಕುಟುಂಬ ಸದಸ್ಯರು ಲಿಖಿತ ದೂರು ನೀಡಿದ್ದಾರೆ ಮತ್ತು ನಾವು ಈ ಪ್ರಕರಣವನ್ನು ತನಿಖೆ ಮಾಡಲಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

  • ಬಿಜೆಪಿ ಶಾಸಕನಿಂದ 25 ವರ್ಷದ ಯುವತಿ ಕಿಡ್ನಾಪ್ – ಕೇಸ್ ದಾಖಲು

    ಬಿಜೆಪಿ ಶಾಸಕನಿಂದ 25 ವರ್ಷದ ಯುವತಿ ಕಿಡ್ನಾಪ್ – ಕೇಸ್ ದಾಖಲು

    ಪಾಟ್ನಾ: 25 ವರ್ಷದ ಯುವತಿಯನ್ನು ಅಪಹರಿಸಿದ ಆರೋಪದ ಮೇಲೆ ಬಿಜೆಪಿ ಶಾಸಕ ವಿನಯ್ ಬಿಹಾರಿ ವಿರುದ್ಧ ಭಾನುವಾರ ಪಾಟ್ನಾದಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಬಿಜೆಪಿ ಶಾಸಕ ವಿನಯ್ ಬಿಹಾರಿ ತನ್ನ ಮಗಳನ್ನು ಅಪಹರಿಸಿದ್ದಾನೆ ಎಂದು ಮಹಿಳೆಯ ತಾಯಿ ದೂರು ನೀಡಿದ್ದು, ಈ ದೂರಿನ ಆಧಾರದ ಮೇಲೆ ನಗರದ ಆಗಮ್ ಕುವಾನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    25 ವರ್ಷದ ಯುವತಿಯನ್ನು ಅಪಹರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪಶ್ಚಿಮ ಚಂಪಾರಣ್‍ನ ಲೌರಿಯಾ ಶಾಸಕ ಮತ್ತು ಇತರ ಇಬ್ಬರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಆಗಮ್ ಕುವಾನ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‍ಎಚ್‍ಒ) ಬಿಪಿನ್ ಬಿಹಾರಿ ಹೇಳಿದ್ದಾರೆ.

    ಏನಿದು ಘಟನೆ?
    ಈ ಕುರಿತು ಪ್ರತಿಕ್ರಿಯಿಸಿದ ಯುವತಿಯ ತಾಯಿ, ಪರೀಕ್ಷೆಗೆಂದು ಕಾಲೇಜಿಗೆ ತೆರಳಿದ ನನ್ನ ಮಹಳು ಫೆಬ್ರವರಿ 9 ರಿಂದ ನಾಪತ್ತೆಯಾಗಿದ್ದಾಳೆ. ಆ ದಿನ ಮಧ್ಯಾಹ್ನ 3 ಗಂಟೆಯಾದರೂ ನನ್ನ ಮಗಳು ಮನೆಗೆ ಹಿಂತಿರುಗದಿದ್ದಾಗ, ನಾನು ಅವಳಿಗೆ ಕರೆ ಮಾಡಿದೆ. ಆದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಮಧ್ಯಾಹ್ನ 3ರ ಸುಮಾರಿಗೆ, ಆಕೆಯ ಫೋನ್‍ನಿಂದ ನನಗೆ ಸಂದೇಶ ಬಂದಿತ್ತು. ಆ ಸಂದೇಶದಲ್ಲಿ ಒಂದು ನಂಬರ್ ಗೆ ಸಂಪರ್ಕಿಸಲು ತಿಳಿಸಲಾಯಿತು. ನಾನು ಆ ಸಂಖ್ಯೆಗೆ ಕರೆ ಮಾಡಿದಾಗ, ಬಿಜೆಪಿ ಶಾಸಕ ವಿನಯ್ ಬಿಹಾರಿ ಕರೆಯನ್ನು ಸ್ವೀಕರಿಸಿದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  1.35 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಶ್ರೀಮಂತ ಪಾಟೀಲ್

    ನಾನು ಅವರಿಗೆ ಕರೆ ಮಾಡಿದಾಗ ಒಂದು ಗಂಟೆಯ ನಂತರ ಮತ್ತೆ ಕರೆ ಮಾಡಿ ಎಂದು ನನಗೆ ಹೇಳಿದರು. ಸ್ವಲ್ಪ ಸಮಯದ ನಂತರ ನಾನು ಅವರನ್ನು ಮತ್ತೆ ಸಂಪರ್ಕಿಸಿದಾಗ ಅವರು ನನಗೆ ಬೆದರಿಕೆ ಹಾಕಿದರು. ನನ್ನ ಮಗಳು ಅವರ ಸೋದರಳಿಯ ರಾಜೀವ್ ಸಿಂಗ್ ಜೊತೆಗಿದ್ದಾಳೆ ಎಂದು ಹೇಳಿದರು. ಈ ವಿಚಾರವನ್ನು ಎಸ್‍ಪಿ ಅಥವಾ ಡಿಎಸ್‍ಪಿ ಬಳಿ ಹೇಳಿದರೂ ಪ್ರಯೋಜನವಿಲ್ಲ ಎಂದು ಬೆಂದರಿಸಿದರು ಎಂದು ದುಃಖವನ್ನು ಹೇಳಿಕೊಂಡಿದ್ದಾರೆ.

    ನಾನು ಪಾಟ್ನಾದ ಮಹಾತ್ಮಾ ಗಾಂಧಿ ನಗರದ ಬಳಿಯಿರುವ ಸಿಂಗ್ ಅವರ ಮನೆಗೆ ಹೋಗಿದ್ದೆ. ಆದರೆ ಅಂತಹ ಯಾವುದೇ ಘಟನೆಯ ಬಗ್ಗೆ ನಮಗೆ ತಿಳಿದಿಲ್ಲ ಎಂದು ಅವರ ಪೋಷಕರು ಹೇಳಿದ್ದಾರೆ ಎಂದು ತಿಳಿಸಿದರು.

    ಹಲವು ಬಾರಿ ಆರೋಪಿ ಶಾಸಕನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಪಡೆಯಲು ಸಾಧ್ಯವಾಗಲಿಲ್ಲ. ಈ ಕುರಿತು ಹೆಚ್ಚಿನ ತನಿಖೆಯನ್ನು ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಆಸ್ತಿ ವಿವಾದ – ಗರ್ಭಿಣಿ ಸೇರಿದಂತೆ ಮೂವರನ್ನು ಬೆಂಕಿಗೆ ಹಾಕಿದ ದುರುಳರು

    ಆಸ್ತಿ ವಿವಾದ – ಗರ್ಭಿಣಿ ಸೇರಿದಂತೆ ಮೂವರನ್ನು ಬೆಂಕಿಗೆ ಹಾಕಿದ ದುರುಳರು

    ಪಾಟ್ನಾ: ಎಂಟು ತಿಂಗಳ ಗರ್ಭಿಣಿ ಸೇರಿದಂತೆ ಒಂದೇ ಕುಟುಂಬದ ಮೂವರು ಸದಸ್ಯರನ್ನು ಆಸ್ತಿ ವಿವಾದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಕೊಲ್ಲಲು ಪ್ರಯತ್ನಿಸಿದ ಘಟನೆ ಬಿಹಾರದ ದರ್ಭಾಂಗಾದಲ್ಲಿ ನಡೆದಿದೆ.

    ಅಕ್ರಮವಾಗಿ ನಮ್ಮ ಜಾಗದಲ್ಲಿ ಬೇರೆ ಕುಟುಂಬ ವಾಸಿಸುತ್ತಿದೆ ಎಂದು ವ್ಯಕ್ತಿಯೊಬ್ಬ ಬುಲ್ಡೋಜರ್‍ನಿಂದ ಮನೆ ಬಿಳಿಸಲು ಸೂಚಿಸಿದ್ದಾನೆ. ಈ ವೇಳೆ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ದುಷ್ಕರ್ಮಿಗಳು ಮನೆಯಲ್ಲಿ ವಾಸಿಸುತ್ತಿದ್ದವರ ಮೇಲೆ ಬೆಂಕಿ ಹಚ್ಚಿದ್ದಾರೆ. ಗರ್ಭಿಣಿ ಎಂಬುದನ್ನು ನೋಡದೇ ಆಕೆಯ ಮೇಲೂ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಆದರೆ ಇವರನ್ನು ಕಡ ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ. ಪ್ರಸ್ತುತ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕುತ್ತಿದ್ದಾರೆ.

    Three injured after being set on fire in Darbhanga - The Dani Post

    ಗಾಯಗೊಂಡವರನ್ನು ಸಂಜಯ್ ಝಾ(31), ಪಿಂಕಿ(36) ಮತ್ತು ನಿಕ್ಕಿ ಕುಮಾರಿ(20) ಎಂದು ಗುರುತಿಸಲಾಗಿದೆ. ಪ್ರಸ್ತುತ ಇವರನ್ನು ಚಿಕಿತ್ಸೆಗಾಗಿ ಆಸತ್ರೆಗೆ ದಾಖಲಿಸಲಾಗಿದ್ದು, ನಿಕ್ಕಿ ಹುಷಾರಾಗಿ ಮನೆಗೆ ಮರಳಿದ್ದಾರೆ. ಆದರೆ ಎಂಟು ತಿಂಗಳ ಗರ್ಭಿಣಿ, ಪಿಂಕಿ ಮತ್ತು ಸಂಜಯ್ ಅವರನ್ನು ದರ್ಭಾಂಗಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಲಾಗಿದೆ.

    ದರ್ಭಾಂಗ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಪ್ರಸಾದ್ ಈ ಕುರಿತು ಮಾತನಾಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಈ ಘಟನೆಯು ಆಸ್ತಿ ವಿವಾದದಿಂದ ಈ ಕೃತ್ಯ ಸಂಭವಿಸಿದೆ ಎಂದು ಎನ್ನಲಾಗುತ್ತಿದೆ. ಆಸ್ತಿಗಾಗಿ ಜಗಳ ನಡೆಯುವ ವೇಳೆ ಕುಟುಂಬದ ಮೂವರಿಗೆ ಬೆಂಕಿ ಹಚ್ಚಲಾಗಿದ್ದು, ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.

    ಪ್ರಸ್ತುತ ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗಿದೆ. ಶೀಘ್ರದಲ್ಲೇ ಈ ಕೃತ್ಯ ಮಾಡಿದ ದುಷ್ಕರ್ಮಿಗಳನ್ನು ಗುರುತಿಸಲಾಗುವುದು. ಈ ಕೃತ್ಯದ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ನಿಕ್ಕಿ ಪ್ರತಿಕ್ರಿಯಿಸಿದ್ದು, ಈ ಹಿಂದೆಯೇ ನಾವು ಪೊಲೀಸರಿಗೆ ಭದ್ರತೆಗಾಗಿ ಪದೇ-ಪದೇ ಮನವಿ ಮಾಡಿಕೊಂಡಿದ್ದೆವು. ಆದರೆ ಈ ಬಗ್ಗೆ ಪೆÇಲೀಸರು ಕಿವಿಗೊಡುತ್ತಿಲ್ಲ ಎಂದು ಆರೋಪಿಸಿದರು. ಈ ಕೃತ್ಯದಲ್ಲಿ ಶಿವಕುಮಾರ್ ಝಾ ಭಾಗಿಯಾಗಿದ್ದಾರೆ ಎಂದು ಸೂಚಿಸಿದ್ದಾರೆ.

    ಎಂಟು ತಿಂಗಳ ಗರ್ಭಿಣಿ, ನನ್ನ ಸಹೋದರ ಸಂಜಯ್ ಮತ್ತು ಅಕ್ಕ ಪಿಂಕಿ ಅವರ ದೇಹ ಬೆಂಕಿಯಿಂದ ಶೇ.80 ರಷ್ಟು ಹೆಚ್ಚು ಸುಟ್ಟು ಗಾಯಗಳಾಗಿವೆ ಎಂದು ಉಲ್ಲೇಖಿಸಿದ ಅವರು, ಈ ಆಸ್ತಿಯನ್ನು ಶಿವಕುಮಾರ್ ಅವರು ಅಕ್ರಮವಾಗಿ ಖರೀದಿಸಿದ್ದಾರೆ. ಈ ಸುದ್ದಿ ತಿಳಿದ ನಂತರ ನಾವು ಪೊಲೀಸರಿಗೂ ತಿಳಿಸಿದ್ದು, ಅವರು ನಿರ್ಲಕ್ಷ್ಯ ತೋರಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ವಿವಾದಾತ್ಮಕ ಸ್ಟೇಟಸ್ ಹಾಕಿದ ಯುವಕ – ಹತ್ತು ಜನ ಅರೆಸ್ಟ್!

    ಗುರುವಾರ ಮಧ್ಯಾಹ್ನ ದರ್ಬಾಂಗಾ ಎಸ್‍ಎಸ್‍ಪಿ ಅವರನ್ನು ಭೇಟಿ ಮಾಡಲು ಹೋಗಿದ್ದೆವು. ಎಸ್‍ಎಸ್‍ಪಿ ನಮ್ಮನ್ನು ಭೇಟಿಯಾಗಲಿಲ್ಲ. ನನ್ನ ಸಹೋದರಿಯೊಂದಿಗೆ ಫೋನ್ ನಲ್ಲಿ ಮಾತನಾಡಿ ಸಹಾಯ ಮಾಡುತ್ತೇವೆಂದು ಭರವಸೆ ನೀಡಿದ್ದರು ಎಂದು ತಿಳಿಸಿದ್ದಾರೆ.

    ಆಸ್ತಿ ವಿವಾದ ನಡೆಯುತ್ತಿದ್ದ ಜಾಗದಲ್ಲೇ ಕಳೆದ ನಾಲ್ಕು ದಶಕಗಳಿಂದ ಈ ಕುಟುಂಬ ವಾಸಿಸುತ್ತಿದೆ. ಆದರೆ 2017 ರಲ್ಲಿ, ಶಿವಕುಮಾರ್ ಝಾ ಅವರು ಈ ಆಸ್ತಿಯನ್ನು ಅಕ್ರಮವಾಗಿ ಖರೀದಿಸಿದ್ದಾರೆ. 2019 ರಿಂದ ಈ ವಿವಾದದ ಕೇಸ್ ಪಾಟ್ನಾ ಹೈಕೋರ್ಟ್‍ನಲ್ಲಿ ನಡೆಯುತ್ತಿದೆ.

  • 500 ರೂಪಾಯಿಗೆ ಕೈ ಮಿಲಾಯಿಸಿದ ಆಶಾ ಕಾರ್ಯಕರ್ತೆಯರು

    500 ರೂಪಾಯಿಗೆ ಕೈ ಮಿಲಾಯಿಸಿದ ಆಶಾ ಕಾರ್ಯಕರ್ತೆಯರು

    ಪಾಟ್ನಾ: 500 ರೂಪಾಯಿ ವಿಚಾರವಾಗಿ ಇಬ್ಬರು ಆಶಾ ಕಾರ್ಯಕರ್ತೆಯರು ಪರಸ್ಪರ ಹೊಡೆದುಕೊಂಡಿರುವ ಘಟನೆ ಬಿಹಾರದ ಜಮುಯಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ಲಕ್ಷ್ಮಿಪುರ ಬ್ಲಾಕ್‍ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಮಗುವೊಂದು ಜನಸಿದೆ. ಈ ವೇಳೆ ಆಶಾ ಕಾರ್ಯಕರ್ತೆ ರಿಂತು ಕುಮಾರಿ ಮಗುವಿಗೆ ಚುಚ್ಚು ಮದ್ದು ನೀಡಲು ಮತ್ತೋರ್ವ ಆಶಾ ಕಾರ್ಯಕರ್ತೆ ರಂಜನಾ ಕುಮಾರಿ ಅವರನ್ನ ಸಂಪರ್ಕಿಸಿದ್ದಾಳೆ. ಈ ವೇಳೆ ಲಸಿಕೆ ನೀಡಲು ನರ್ಸ್ 500 ರೂಪಾಯಿ ಬೇಡಿಕೆ ಇಟ್ಟಿದ್ದಾರೆಂದು ಆಶಾ ಕಾರ್ಯಕರ್ತೆ ರಂಜನಾ ತಿಳಿಸಿದ್ದಾಳೆ. ಈ ವಿಚಾರವಾಗಿ ವಾಗ್ವಾದ ನಡೆದಿದ್ದು, ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಬಣ ರಾಜಕೀಯ ಬಲು ಜೋರು – ಕತ್ತಿ ಸಭೆಗೆ ಪ್ರತಿಯಾಗಿ ಜಾರಕಿಹೊಳಿ ಮೀಟಿಂಗ್

    ಇಬ್ಬರು ಆಶಾ ಕಾರ್ಯಕರ್ತೆಯರು ಪರಸ್ಪರ ಹೊಡೆದಾಡಿಕೊಳ್ಳಲು ಶುರು ಮಾಡುತ್ತಿದ್ದಂತೆ ಆಸ್ಪತ್ರೆಯಲ್ಲಿರುವ ಒಬ್ಬರು ಅದರ ವೀಡಿಯೋ ಸೆರೆ ಹಿಡಿದಿದ್ದಾರೆ. ಘಟನೆಯ ವೀಡಿಯೋ ವೈದ್ಯಾಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ತನಿಖೆ ನಡೆಸಲು ಸೂಚನೆ ನೀಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ಸಂಪುಟ ಸರ್ಜರಿಗೆ ಡೆಡ್‍ಲೈನ್ – ಮಾರ್ಚಲ್ಲ ಈಗ್ಲೇ ವಿಸ್ತರಿಸಿ ಅಂತ ಬಿಗಿಪಟ್ಟು

  • 11 ಬಾರಿ ಕೋವಿಡ್ -19 ಲಸಿಕೆ ಪಡೆದ 84 ವರ್ಷದ ವೃದ್ಧ

    11 ಬಾರಿ ಕೋವಿಡ್ -19 ಲಸಿಕೆ ಪಡೆದ 84 ವರ್ಷದ ವೃದ್ಧ

    ಪಾಟ್ನಾ: ದೇಶದಲ್ಲಿ ಎಷ್ಟೋ ಜನರು ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳಿ ಎಂದರೆ ಹಿಂದೇಟು ಹಾಕುತ್ತಿರುತ್ತಾರೆ. ಆದರೆ ಇಲ್ಲೊಬ್ಬ 84 ವರ್ಷದ ವೃದ್ಧ 11 ಬಾರಿ ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ಅಚ್ಚರಿಯ ಘಟನೆ ಬಿಹಾರದಲ್ಲಿ ನಡೆದಿದೆ.

    ಮಾಧೇಪುರ ಜಿಲ್ಲೆಯ ಉದಕಿಶುಂಗಂಜ್ ಉಪವಿಭಾಗದ 84 ವರ್ಷದ ವ್ಯಕ್ತಿಯೊಬ್ಬರು 11 ಬಾರಿ ಲಸಿಕೆಯನ್ನು ಹಾಕಿಸಿಕೊಂಡಿದ್ದು, 12ನೇ ಬಾರಿ ಲಸಿಕೆ ಹಾಕಿಸಿಕೊಳ್ಳಲು ಹೋಗಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

    ಯಾರಿದು?
    ಮಾಧೇಪುರ ಜಿಲ್ಲೆಯ ಉದಕಿಶುಂಗಂಜ್ ಉಪವಿಭಾಗದ ಪುರೈನಿ ಪೊಲೀಸ್ ಠಾಣೆಯ ಓರೈ ಗ್ರಾಮದ ನಿವಾಸಿ ಬ್ರಹ್ಮದೇವ್ ಮಂಡಲ್ ಅವರಿಗೆ 84 ವರ್ಷ ವಯಸ್ಸಾಗಿದ್ದು, ಇವರು ನಿವೃತ್ತ ಅಂಚೆ ಇಲಾಖೆ ಉದ್ಯೋಗಿಯಾಗಿದ್ದರು. ಮಂಡಲ್ ಅವರು ಕೋವಿಡ್ ಲಸಿಕೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ 11 ಬಾರಿ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಅದೇ ರೀತಿ 12ನೇ ಬಾರಿ ಲಸಿಕೆ ಪಡೆಯಲು ಹೋದಾಗ ಸಿಕ್ಕಿ ಬಿದ್ದಿದ್ದಾರೆ. ಇದನ್ನೂ ಓದಿ: ಲಾಕ್‍ಡೌನ್ ಮಾಡಬಾರದು ಅನ್ನೋದೇ ಸರ್ಕಾರದ ಮೂಲ ಉದ್ದೇಶ: ಅಶ್ವಥ್ ನಾರಾಯಣ್

    ಈ ರೀತಿ ಏಕೆ ಮಾಡಿದ್ರಿ ಎಂದು ಮಾಧ್ಯಮಗಳು ಪ್ರಶ್ನಿಸಿದಕ್ಕೆ ಉತ್ತರಿಸಿದ ಅವರು, ನಾನು ಲಸಿಕೆಯಿಂದ ಸಾಕಷ್ಟು ಪ್ರಯೋಜನ ಪಡೆದಿದ್ದೇನೆ. ಅದಕ್ಕಾಗಿಯೇ ನಾನು ಅದನ್ನು ಪದೇ ಪದೇ ತೆಗೆದುಕೊಳ್ಳುತ್ತಿದ್ದೇನೆ ಎಂದು ಉತ್ತರಿಸಿದ್ದಾರೆ.

    ಈ ಕುರಿತು ವಿವಾರಿಸಿದ ಅವರು, ನಾನು ಮೊದಲ ಡೋಸ್ ಅನ್ನು ಕಳೆದ ವರ್ಷದ ಫೆಬ್ರವರಿ 13 ರಂದು ಪಡೆದುಕೊಂಡೆ. ನಂತರ ಮಾರ್ಚ್, ಮೇ, ಜೂನ್, ಜುಲೈ ಮತ್ತು ಆಗಸ್ಟ್‍ನಲ್ಲಿ ತಲಾ ಒಂದೊಂದರಂತೆ ಲಸಿಕೆಯನ್ನು ಪಡೆದುಕೊಂಡೆ. ಸೆಪ್ಟೆಂಬರ್‍ನಲ್ಲಿ, ಮೂರು ಬಾರಿ ಲಸಿಕೆಯನ್ನು ಪಡೆದುಕೊಂಡೆ ಎಂದು ತಿಳಿಸಿದ್ದಾರೆ.

    ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಡಿಸೆಂಬರ್ 30 ರೊಳಗೆ ನಾನು 11 ಬಾರಿ ಲಸಿಕೆಯನ್ನು ಪಡೆದುಕೊಂಡೆ. ಈ ಲಸಿಕೆಯು ಸರ್ಕಾರದ ಅದ್ಭುತವಾದ ಯೋಜನೆಯಲ್ಲಿ ಒಂದು ಎಂದು ಪ್ರಶಂಸಿದ್ದಾರೆ. ಇದನ್ನೂ ಓದಿ: ಕಳ್ಳರ ಗ್ಯಾಂಗ್ ಅರೆಸ್ಟ್ – 21 ಲಕ್ಷ ಮೌಲ್ಯದ ಶ್ರೀಗಂಧ ವಶ

    ಲಸಿಕೆ ಪಡೆಯುವ ವೇಳೆ ಮಂಡಲ್ ಅವರು ತಮ್ಮ ಆಧಾರ್ ಕಾರ್ಡ್ ಮತ್ತು ಫೋನ್ ನಂಬರ್ ಅನ್ನು ಎಂಟು ಸಂದರ್ಭದಲ್ಲಿಯೂ ಸಲ್ಲಿಸಿದ್ದಾರೆ. ಇತರ ಮೂರು ಡೋಸ್ ಅನ್ನು ಅವರ ಮತದಾರರ ಗುರುತಿನ ಚೀಟಿ ಮತ್ತು ಪತ್ನಿಯ ಫೋನ್ ನಂಬರ್ ಕೊಟ್ಟು ಪಡೆದುಕೊಂಡಿದ್ದಾರೆ.

    ಮಾಧೇಪುರ ಜಿಲ್ಲೆಯ ಸಿವಿಲ್ ಸರ್ಜನ್ ಅಮರೇಂದ್ರ ಪ್ರತಾಪ್ ಶಾಹಿ ಈ ಕುರಿತು ಪ್ರತಿಕ್ರಿಯಿಸಿದ್ದು, ಮಂಡಲ್ ಅವರು ಇಷ್ಟು ಪ್ರಮಾಣದ ಲಸಿಕೆಯನ್ನು ಹೇಗೆ ತೆಗೆದುಕೊಂಡರು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

  • ಎಂಜಿನಿಯರ್ ಮನೆಯಲ್ಲಿ 4 ಗಂಟೆ ದಾಳಿ ನಂತರ 60 ಲಕ್ಷ ರೂ. ಪತ್ತೆ

    ಎಂಜಿನಿಯರ್ ಮನೆಯಲ್ಲಿ 4 ಗಂಟೆ ದಾಳಿ ನಂತರ 60 ಲಕ್ಷ ರೂ. ಪತ್ತೆ

    ಪಾಟ್ನಾ: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ವಿಜಿಲೆನ್ಸ್ ಬ್ಯೂರೋ ದಾಳಿ ಮುಂದುವರಿಸಿದೆ. ಎಂಜಿನಿಯರಿಂಗ್ ಮನೆಯ ಮೇಲೆ ದಾಳಿ ಮಾಡಿದ್ದು 60 ಲಕ್ಷ ರೂ. ಪತ್ತೆಯಾಗಿದೆ.

    ಇಂದ್ರಪುರಿ ಪ್ರದೇಶದಲ್ಲಿರುವ ಗ್ರಾಮೀಣ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅಜಯ್ ಕುಮಾರ್ ಸಿಂಗ್ ಅವರು ಅಕ್ರಮವಾಗಿ ಆಸ್ತಿಯನ್ನು ಸಂಪಾದಿಸುತ್ತಿದ್ದಾರೆ ಎಂಬ ಮಾಹಿತಿ ವಿಜಿಲೆನ್ಸ್ ಬ್ಯೂರೋಗೆ ಸಿಕ್ಕಿತ್ತು. ಇದನ್ನೂ ಓದಿ: MES ಪುಂಡರಿಗೆ ತಕ್ಕ ಶಾಸ್ತಿ ಆಗಲಿದೆ: ಸುನಿಲ್ ಕುಮಾರ್

    ಈ ಹಿನ್ನೆಲೆ ಅಧಿಕಾರಿಗಳು ಅಜಯ್ ಅವರ ಬಗ್ಗೆ ಎಲ್ಲ ರೀತಿಯ ಮಾಹಿತಿಯನ್ನು ಹಂತ-ಹಂತವಾಗಿ ಸಂಗ್ರಹಿಸಿದ್ದಾರೆ. ನಂತರ ವಿಜಿಲೆನ್ಸ್ ಬ್ಯೂರೋ ನಿನ್ನೆ ಅಜಯ್ ಅವರ ಮನೆ ಮೇಲೆ ದಾಳಿಯನ್ನು ಮಾಡಿದೆ. ಇದನ್ನೂ ಓದಿ: ಕಪ್ಪು ಬಟ್ಟೆ ಮೇಲೆ MES ಎಂದು ಬರೆದು ಚಪ್ಪಲಿ ಏಟು ಕೊಟ್ಟ ರಾಯಣ್ಣನ ಅಭಿಮಾನಿಗಳು

    ಅಧಿಕಾರಿಗಳು ಅಜಯ್ ಅವರ ಮನೆಯನ್ನು ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ದಾಳಿಯನ್ನು ಮಾಡಿದ್ದಾರೆ. ಈ ವೇಳೆ ಅವರಿಗೆ 60 ಲಕ್ಷ ರೂ.ಗೂ ಹೆಚ್ಚು ನಗದು, ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಭೂ ಹೂಡಿಕೆ ಪತ್ರಗಳು ಮತ್ತು ಇತರ ಕೆಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

  • 8 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿ- ಅಧಿಕಾರಿ ವಿರುದ್ಧ ಪ್ರಕರಣ ದಾಖಲು

    8 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿ- ಅಧಿಕಾರಿ ವಿರುದ್ಧ ಪ್ರಕರಣ ದಾಖಲು

    ಪಾಟ್ನಾ: ಬಿಹಾರ ಸರ್ಕಾರದ ವಿಜಿಲೆನ್ಸ್ ಇನ್ವೆಸ್ಟಿಗೇಶನ್ ಬ್ಯೂರೋ ಬ್ಲಾಕ್ ಮಟ್ಟದ ಅಧಿಕಾರಿಯೊಬ್ಬರ ವಿರುದ್ಧ ತನ್ನ ಆದಾಯಕ್ಕಿಂತ 8 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಗಳಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದೆ.

    ಜಾಗೃತ ದಳದ ಸಿಬ್ಬಂದಿ ತಮಗೆ ಸಿಕ್ಕ ಸುಳಿವಿನ ಮೇರೆಗೆ ಪಾಟ್ನಾ ಮತ್ತು ಮೋತಿಹಾರಿಯಲ್ಲಿರುವ ಅಧಿಕಾರಿಯ ಎರಡು ನಿವಾಸಗಳ ಮೇಲೆ ದಾಳಿ ಮಾಡಿದ್ದು, ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ 1.75 ಕೋಟಿ ನಗದು, 48 ಲಕ್ಷ ಮೌಲ್ಯದ 2.2 ಕೆಜಿ ಚಿನ್ನ ಮತ್ತು ಬೆಳ್ಳಿ ಆಭರಣಗಳು, 42 ರಾಷ್ಟ್ರೀಕೃತ ಬ್ಯಾಂಕುಗಳ ಪಾಸ್‍ಬುಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಲವ್ ಇದ್ಮೇಲೆ ಜಿಹಾದ್ ಯಾಕೆ ಬರುತ್ತೆ – ಇಬ್ರಾಹಿಂ ತಿರುಗೇಟು

    BRIBE

    ಈ ಕುರಿತು ವಿಜಿಲೆನ್ಸ್ ಅಧಿಕಾರಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕಾರ್ಮಿಕ ಇಲಾಖೆಯ ಹಾಜಿಪುರದ ಬ್ಲಾಕ್ ಮಟ್ಟದ ಅಧಿಕಾರಿ 8 ಕೋಟಿಗೂ ಹೆಚ್ಚು ಮೊತ್ತದ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದಾಳಿಯ ವೇಳೆ 14 ಎಲ್‍ಐಸಿ ಪಾಲಿಸಿಗಳು, 17 ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‍ಗಳು ಮತ್ತು 25 ಭೂಮಿ ಖರೀದಿ ಒಪ್ಪಂದ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಚರ ಮತ್ತು ಸ್ಥಿರ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗಿದೆ. ವಿಶೇಷ ನ್ಯಾಯಾಧೀಶರು, ವಿಜಿಲೆನ್ಸ್, ಪಾಟ್ನಾ ಅವರು ಸರ್ಚ್ ವಾರೆಂಟ್ ಹೊರಡಿಸಿದ ನಂತರ ಈ ದಾಳಿಗಳನ್ನು ನಡೆಸಲಾಯಿತು. ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ನಡೆದ ಅಕ್ರಮ ಆಸ್ತಿ ಪ್ರಕರಣಗಳಲ್ಲಿ ಇದು ಅತಿ ದೊಡ್ಡ ಜಪ್ತಿಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಯೋಗಿ ಸರ್ಕಾರದಿಂದ ಇಲ್ಲಿಯವರೆಗೆ 15246 ಕಿ.ಮೀ.ಗೂ ಹೆಚ್ಚು ಗ್ರಾಮೀಣ ರಸ್ತೆಗಳನ್ನು ನಿರ್ಮಾಣ