Tag: patna

  • 20 ವರ್ಷದ ಯುವಕನನ್ನು 100ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಂದು ಪೊದೆಗೆ ಎಸೆದ!

    20 ವರ್ಷದ ಯುವಕನನ್ನು 100ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಂದು ಪೊದೆಗೆ ಎಸೆದ!

    ಪಾಟ್ನಾ: 20 ವರ್ಷದ ಯುವಕನೊಬ್ಬನನ್ನು 100 ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಂದ ಘಟನೆ ಬಿಹಾರ (Bihar) ದಲ್ಲಿ ನಡೆದಿದೆ.

    ಮೃತನನ್ನು ಚಿಂಟು ಎಂದು ಗುರುತಿಸಲಾಗಿದೆ. ಈತ ಶವ ಪೊದೆಯೊಂದರಲ್ಲಿ ಪತ್ತೆಯಾಗಿದೆ. ಚಿಂಟುವಿನ ಮುಖ ಹಾಗೂ ದೇಹದ ಮೇಲೆ ಚಾಕುವಿನಿಂದ ತಿವಿದ ಗುರುತುಗಳಿವೆ.

    ಕಳೆದ ಮಂಗಳವಾರದಿಂದ ಚಿಂಟು ಮನೆಯಿಂದ ನಾಪತ್ತೆಯಾಗಿದ್ದನು. ಈ ಹಿನ್ನೆಲೆಯಲ್ಲಿ ಆತನ ಮನೆಯವರು ನಾಪತ್ತೆ ಪ್ರಕರಣ ಕೂಡ ದಾಖಲಿಸಿದ್ದರು. ಆದರೆ ಎಲ್ಲಿ ಹುಡುಕಾಟ ನಡೆಸಿದರೂ ಚಿಂಟು ಪತ್ತೆಯಾಗಿರಲಿಲ್ಲ. ಇದೀಗ ಪೊದೆಯೊಂದರಲ್ಲಿ ಆತ ಶವವಾಗಿ ಪತ್ತೆಯಾಗಿದ್ದು, ಕೊಲೆ ಮಾಡಿ ಪೊದೆಗೆ ಬಿಸಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಡ್ರಮ್‍ನಲ್ಲಿ ಮಹಿಳಾ ಶವ ಪತ್ತೆ ಪ್ರಕರಣ- ಮೂವರ ಬಂಧನ

    ಕೊಲೆಗೆ ಕಾರಣವೇನು..?: ಹೋಳಿ ಆಚರಣೆ ಸಂದರ್ಭದಲ್ಲಿ ಚಿಂಟು ಹಾಗೂ ನೆರೆಮನೆಯ ರಾಮ ಮಹತೋ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಮಾತಿನ ಚಕಮಕಿ ನಡೆದಿದೆ. ಹೀಗಾಗಿ ಆತನೇ ಚಿಂಟುವನ್ನು ಕೊಲೆ ಮಾಡಿದ್ದಾನೆ ಎಮದು ಸಹೋದರ ಗಂಭೀರ ಆರೋಪ ಮಾಡಿದರು. ಸ್ಕ್ರ್ಯಾಪ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದ ಚಿಂಟುವಿಗೆ ತಿಂಗಳ ಹಿಂದೆಯಷ್ಟೇ ಮದುವೆಯಾಗಿದೆ.

    ಘಟನೆ ಸಂಬಂಧ ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು. ಈ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಬದಲಿ ರಸ್ತೆ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಸದ್ಯ ಮೃತನ ಸಹೋದರ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ವಿವರಿಸಿದರು.

  • ರೈಲ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ – ಲಾಲು ಪತ್ನಿ, ಮಾಜಿ ಸಿಎಂ Rabri Devi ನಿವಾಸದ ಮೇಲೆ ಸಿಬಿಐ ದಾಳಿ

    ರೈಲ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ – ಲಾಲು ಪತ್ನಿ, ಮಾಜಿ ಸಿಎಂ Rabri Devi ನಿವಾಸದ ಮೇಲೆ ಸಿಬಿಐ ದಾಳಿ

    ಪಾಟ್ನಾ: ‘ಉದ್ಯೋಗಕ್ಕಾಗಿ ಜಮೀನು’ (Land For Jobs Case) ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ (Bihar Former CM) ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ (Rabri Devi) ಅವರನ್ನು ಸಿಬಿಐ (CBI) ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ. ಸೋಮವಾರ ಪಾಟ್ನಾದಲ್ಲಿರುವ (Patna) ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಆರಂಭಿಸಿದ್ದಾರೆ.

    ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಆಪ್ ನಾಯಕ ಮನೀಶ್ ಸಿಸೋಡಿಯಾ (Manish Sisodia) ಬಂಧನದ ಬಳಿಕ ಕೇಂದ್ರೀಯ ಸಂಸ್ಥೆಗಳ ದುರುಪಯೋಗದ ಆರೋಪದ ಕುರಿತು ಪ್ರತಿಪಕ್ಷಗಳ ಉನ್ನತ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವನ್ನು ಬರೆದು ಒಂದು ದಿನದ ನಂತರ ಸಿಬಿಐ ತಂಡವು ರಾಬ್ರಿದೇವಿ ನಿವಾಸದ ಮೇಲೆ ದಾಳಿ ನಡೆಸಿದೆ. ಇದನ್ನೂ ಓದಿ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ಪೊಲೀಸರ ನಡುವೆ ಗುಂಡಿನ ಚಕಮಕಿ- ಆರೋಪಿ ಅಂದರ್

    ರಾಬ್ರಿದೇವಿ ನಿವಾಸದ ಮುಂದೆ ಭಾರಿ ಭದ್ರತೆಯನ್ನು ಒದಗಿಸಲಾಗಿದೆ. ಅಧಿಕಾರಿಗಳು ವಿಚಾರಣೆ ಬಳಿಕ ಸಿಬಿಐ ಕಚೇರಿಗೆ ಕರೆದೊಯ್ಯಬಹುದು ಎನ್ನಲಾಗಿದೆ. ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ರಾಜ್ಯ ಅರಣ್ಯ ಮತ್ತು ಪರಿಸರ ಸಚಿವ ತೇಜ್ ಪ್ರತಾಪ್ ಯಾದವ್ ಕೂಡ ಸಿಬಿಐ ದಾಳಿ ನಿವಾಸದಲ್ಲಿದ್ದರು ಎಂದು ಮೂಲಗಳು ಹೇಳಿವೆ.

    ಲಾಲು ಪ್ರಸಾದ್ ಯಾದವ್ ಅವರು 2004 ಮತ್ತು 2009 ರ ನಡುವೆ ರೈಲ್ವೆ ಸಚಿವರಾಗಿದ್ದಾಗ ಅವರ ಕುಟುಂಬಕ್ಕೆ ಉಡುಗೊರೆಯಾಗಿ ಅಥವಾ ಮಾರಾಟ ಮಾಡಿದ ಜಮೀನುಗಳಿಗೆ ಪ್ರತಿಯಾಗಿ ರೈಲ್ವೇಯಲ್ಲಿ ನೇಮಕಾತಿ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಕೇಸ್ – ಮತ್ತೊಂದು ಎನ್‌ಕೌಂಟರ್‌ಗೆ ಗುಂಡು ಹಾರಿಸಿದ್ದ ವ್ಯಕ್ತಿಯೂ ಸಾವು

    ಫೆಬ್ರವರಿ 27 ರಂದು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ದೇವಿ ಮತ್ತು ಇತರ 14 ಜನರಿಗೆ ನ್ಯಾಯಾಲಯವು ಸಮನ್ಸ್ ನೀಡಿತ್ತು. ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯೆಲ್ ಅವರು ಆರೋಪಿಗಳಿಗೆ ಮಾ.15 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ.

    ಪ್ರಸ್ತುತ ಜಾಮೀನಿನಲ್ಲಿರುವ ಒಬ್ಬರನ್ನು ಹೊರತುಪಡಿಸಿ ಆರೋಪಿಗಳಿಗೆ ಸಂಬಂಧಿಸಿದಂತೆ ಬಂಧನವಿಲ್ಲದೆ ಚಾರ್ಜ್‌ಶೀಟ್ ಸಲ್ಲಿಸಿದ ಹಿನ್ನೆಲೆ ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯೆಲ್ ಅವರು ಆರೋಪಿಗಳಿಗೆ ಮಾರ್ಚ್ 15 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದರು.

  • ರೈಲ್ವೆ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ – ಆತಂಕಗೊಂಡ ಪ್ರಯಾಣಿಕರು

    ರೈಲ್ವೆ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ – ಆತಂಕಗೊಂಡ ಪ್ರಯಾಣಿಕರು

    ಪಾಟ್ನಾ: ಬಿಹಾರದ ಪಾಟ್ನಾ ಜಂಕ್ಷನ್‍ನಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಕರೆ ಬಂದಿದ್ದು, ಕೆಲ ಕಾಲ ಪ್ರಯಾಣಿಕರಲ್ಲಿ ಆತಂಕವನ್ನು ಸೃಷ್ಟಿಸಿತ್ತು.

    ಬಿಹಾರದ ಪಾಟ್ನಾ (Patna) ರೈಲ್ವೆ ನಿಲ್ದಾಣದಲ್ಲಿ (Railway Station) ಬಾಂಬ್ ಇಟ್ಟಿದ್ದೇವೆ ಎಂದು ಅಪರಿಚಿತ ನಂಬರ್‌ನಿಂದ ಅಲ್ಲಿನ ಅಧಿಕಾರಿಗಳಿಗೆ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೆಲ ಕಾಲ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿದ್ದು, ಅಧಿಕಾರಿಗಳಲ್ಲೂ ಗೊಂದಲ ಉಂಟಾಗಿದೆ. ಆದರೆ ಅಲ್ಲಿನ ರೈಲ್ವೆ ಅಧಿಕಾರಿಗಳು ವಿಷಯ ತಿಳಿದ ತಕ್ಷಣ ರೈಲ್ವೆ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಿದ್ದು, ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿದ್ದಾರೆ.

    ಘಟನೆಗೆ ಸಂಬಂಧಿಸಿ ಅವರು ಶೋಧ ಕಾರ್ಯಾಚರಣೆ ಹಾಗೂ ತನಿಖೆಯನ್ನು ನಡೆಸಿದ್ದಾರೆ. ಅದಾದ ಬಳಿಕ ಇದು ಹುಸಿ ಬಾಂಬ್ (Hoax Bomb) ಕರೆ ಎಂಬುದು ಖಚಿತವಾಗಿದ್ದು, ಅಲ್ಲಿದ್ದ ಪ್ರಯಾಣಿಕರು ನಿರಾಳರಾಗಿದ್ದಾರೆ. ಇದನ್ನೂ ಓದಿ: ನನಗೂ ರಾಜಕೀಯಕ್ಕೂ ಆಗಿ ಬರಲ್ಲ : ಶಿವರಾಜ್ ಕುಮಾರ್

    ಘಟನೆಗೆ ಸಂಬಂಧಿಸಿ ಪಾಟ್ನಾ ರೈಲ್ವೆ ಜಂಕ್ಷನ್‍ನ ಉಸ್ತುವಾರಿ ರಂಜಿತ್ ಕುಮಾರ್ ಮಾತನಾಡಿ, ಯಾವುದೇ ಬಾಂಬ್ ಪತ್ತೆಯಾದ ಬಗ್ಗೆ ನಮಗೆ ಮಾಹಿತಿ ಬಂದಿಲ್ಲ. ನಾವು ವಿಶೇಷ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಓದಿದ್ದು 8ನೇ ತರಗತಿ, ಆದ್ರೆ IPS ಅಧಿಕಾರಿ ಎಂದು ಮಹಿಳೆಯರನ್ನು ನಂಬಿಸಿ ಲಕ್ಷ ಲಕ್ಷ ಹಣ ದೋಚಿದ

    Live Tv
    [brid partner=56869869 player=32851 video=960834 autoplay=true]

  • ಅಧಿಕಾರಿಗಳಂತೆ ನಟಿಸಿ ಮೊಬೈಲ್ ಟವರ್‌ನ್ನೇ ಕದ್ದ ಖದೀಮರು

    ಅಧಿಕಾರಿಗಳಂತೆ ನಟಿಸಿ ಮೊಬೈಲ್ ಟವರ್‌ನ್ನೇ ಕದ್ದ ಖದೀಮರು

    ಪಾಟ್ನಾ: ಮೊಬೈಲ್ ಕಂಪನಿಯೊಂದರ (Mobile Company) ಅಧಿಕಾರಿಗಳೆಂದು ಹೇಳಿಕೊಂಡು ಬಂದಿದ್ದ ಕಳ್ಳರ (Thieves) ಗುಂಪೊಂದು 19 ಲಕ್ಷ ರೂ. ಮೌಲ್ಯದ ಮೊಬೈಲ್ ಟವರ್‌ನ್ನು (Mobile Tower) ಕದ್ದ  ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

    ಪಾಟ್ನಾದ ಗಾರ್ಡಾನಿಬಾಗ್ ಪ್ರದೇಶದ ಯಾರ್‍ಪುರದ ರಜಪೂತಾನ ಕಾಲನಿಯಲ್ಲಿ ಈ ಘಟನೆ ನಡೆದಿದೆ. ಗುಜರಾತ್‍ನ ಟೆಲಿ ಲಿಂಕ್ ಪ್ರೈವೇಟ್ ಲಿಮಿಟೆಡ್ (ಜಿಟಿಪಿಎಲ್) ಕಂಪನಿಯು ಲಾಲನ್ ಸಿಂಗ್ ಎಂಬಾತನ ಮನೆಯ ಟೆರೇಸ್ ಮೇಲೆ ಸುಮಾರು 15 ವರ್ಷಗಳ ಹಿಂದೆಯೇ ಮೊಬೈಲ್ ಟವರ್ ಅನ್ನು ಸ್ಥಾಪಿಸಿದೆ. ಈ ಟವರ್ 19 ಲಕ್ಷ ರೂ. ಮೌಲ್ಯದ್ದಾಗಿತ್ತು.

    ಆದರೆ ಕೆಲ ದಿನಗಳ ಹಿಂದೆ ಲಾಲನ್ ಸಿಂಗ್ ಮನೆಗೆ ಮೊಬೈಲ್ ಕಂಪನಿಯ ಅಧಿಕಾರಿಗಳೆಂದು ಹೇಳಿಕೊಂಡು ಕೆಲವರು ಬಂದಿದ್ದಾರೆ. ಈ ವೇಳೆ ಆ ಖದೀಮರು ಇಲ್ಲಿ ಟವರ್ ಹಾಕಿರುವುದು ಕಂಪನಿಗೆ ಬಹಳ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್ ಟವರ್ ತೆಗೆದು ಹಾಕುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ಲಾಲನ್ ಸಿಂಗ್ ಅವರ ಐಡಿ ಕಾರ್ಡ್‍ಗಳನ್ನು ಪರಿಶೀಲಿಸದೇ ಒಪ್ಪಿಕೊಂಡಿದ್ದಾನೆ.

    ಇದಾದ ಬಳಿಕ 25 ಮಂದಿ ಬಂದು ಟವರ್‌ನ್ನು ತೆರವುಗೊಳಿಸುವ ಕಾರ್ಯವನ್ನು ಕೈಗೊಂಡಿದ್ದಾರೆ. ಸುಮಾರು 3 ದಿನಗಳ ಕಾಲ ತೆರವು ಕಾರ್ಯ ನಡೆದಿದ್ದು, ಗ್ಯಾಸ್ ಕಟರ್ ಯಂತ್ರದ ಮೂಲಕ ಮೊಬೈಲ್ ಟವರ್‌ನ್ನು ಕತ್ತರಿಸಿದ್ದಾರೆ. ಅದಾದ ಬಳಿಕ ಕತ್ತರಿಸಿದ್ದ ಟವರ್‌ನ ಎಲ್ಲಾ ಭಾಗಗಳನ್ನು ಟ್ರಕ್‍ನಲ್ಲಿ ತುಂಬಿಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಡಿ.1 ರಿಂದ ಸುರತ್ಕಲ್ ಬಂದ್, ಹೆಜಮಾಡಿ ಟೋಲ್ ಜೊತೆ ವಿಲೀನ – ದರ ಎಷ್ಟು?

    3 ದಿನಗಳ ಕಾಲ 15 ವರ್ಷಗಳಿಂದ ಇದ್ದ ಮೊಬೈಲ್ ಟವರ್‌ನ್ನು ಕಳ್ಳತನ ಮಾಡಿದ್ದರೂ ಮೊಬೈಲ್ ಸೇವಾ ಪೂರೈಕೆದಾರ ಜಿಟಿಪಿಡಲ್‍ಗೆ ಸ್ವಲ್ಪವೂ ಅನುಮಾನ ಬಂದಿರಲಿಲ್ಲ. ಆದರೆ ಕಂಪನಿಯ ಅಧಿಕಾರಿಗಳು ನಿಷ್ಕ್ರಿಯಗೊಂಡ ಎಲ್ಲಾ ಮೊಬೈಲ್ ಟವರ್‍ಗಳನ್ನು ಪರಿಶೀಲಿಸುವ ವೇಳೆ, ಗಾರ್ಡಾನಿಬಾಗ್‍ನಲ್ಲಿರುವ ಮೊಬೈಲ್ ಟವರ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಘಟನೆ ಬೆಳಕಿಗೆ ಬಂದ ನಂತರ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಪೀಸ್‌ಪೀಸ್ ಪ್ರೇಮಿ ಅಫ್ತಾಬ್ ಹತ್ಯೆಗೆ ಯತ್ನ – ಪೊಲೀಸ್ ವ್ಯಾನ್ ಮೇಲೆ ದಾಳಿ

    Live Tv
    [brid partner=56869869 player=32851 video=960834 autoplay=true]

  • ವ್ಯಕ್ತಿಯ ಹೊಟ್ಟೆಯಿಂದ ಸ್ಟೀಲ್ ಗ್ಲಾಸ್ ಹೊರತೆಗೆದ ವೈದ್ಯರು!

    ವ್ಯಕ್ತಿಯ ಹೊಟ್ಟೆಯಿಂದ ಸ್ಟೀಲ್ ಗ್ಲಾಸ್ ಹೊರತೆಗೆದ ವೈದ್ಯರು!

    ಪಾಟ್ನಾ: ವೈದ್ಯ (Doctor) ರ ಗುಂಪೊಂದು ವ್ಯಕ್ತಿಯ ಹೊಟ್ಟೆಯಿಂದ ಸ್ಟೀಲ್ ಲೋಟವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದ ವಿಲಕ್ಷಣ ಘಟನೆಯೊಂದು ಬಿಹಾರದ ಪಾಟ್ನಾದಲ್ಲಿ ನಡೆದಿದೆ.

    ವ್ಯಕ್ತಿಯನ್ನು ರಿತೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತನ ಹೊಟ್ಟೆಯಿಂದ 5.5 ಇಂಚು ಉದ್ದದ ಗ್ಲಾಸ್ ಹೊರತೆಗೆಯಲಾಗಿದೆ. ಇದನ್ನೂ ಓದಿ: ಕೇರಳದಲ್ಲಿ ನರಬಲಿ ಪ್ರಕರಣ – ಮಹಿಳೆ ದೇಹವನ್ನು 56 ತುಂಡು ಮಾಡಿ ಭಕ್ಷಿಸಿರುವ ಶಂಕೆ

    ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಿತೇಶ್, ಪಾಟ್ನಾ ಮೆಡಿಕಲ್ ಕಾಲೇಜ್ ಹಾಗೂ ಹಾಸ್ಪಿಟಲ್ (ಪಿಎಂಸಿಹೆಚ್) ಗೆ ಬಂದಿದ್ದಾನೆ. ಈ ವೇಳೆ ವೈದ್ಯರು ಆತನಿಗೆ ಎಕ್ಸ್ ರೇ ಮಾಡಿದ್ದಾರೆ. ಎಕ್ಸ್ ರೇ ನೋಡಿದ ವೈದ್ಯರೇ ದಂಗಾಗಿ ಹೋಗಿದ್ದಾರೆ. ರೋಗಿಯನ್ನು ಪರೀಕ್ಷೆ ಮಾಡಿದ ವೈದ್ಯರು ತಕ್ಷಣ ಆತನಿಂದ ಯಾವುದೇ ಹಣವನ್ನು ತೆಗೆದುಕೊಳ್ಳದೆ ಚಿಕಿತ್ಸೆ ನೀಡಲು ನಿರ್ಧರಿಸಿದರು.

    ರಿತೇಶ್ ಹೊಟ್ಟೆಯೊಳಗೆ ಸ್ಟೀಲ್ ಗ್ಲಾಸ್ (Steel Glass) ಹೇಗೆ ಇಳಿಯಿತು ಎಂಬುದರ ಕುರಿತು ಮಾತನಾಡಿದ ವೈದ್ಯರು, ಘಟನೆ ನಡೆದಾಗ ರೋಗಿಯು ಕುಡಿದಿರಬೇಕು ಅಥವಾ ಯಾರಾದರೂ ಅದನ್ನು ಅವನ ದೇಹದೊಳಗೆ ಹಾಕಿರಬೇಕು ಎಂದು ತಿಳಿಸಿದ್ದಾರೆ. ಸದ್ಯ ರೋಗಿಯು ಈ ಬಗ್ಗೆ ಸ್ಪಷ್ಟವಾಗಿ ತಿಳಿಸಲು ಸಾಧ್ಯವಿಲ್ಲ. ಹೀಗಾಗಿ ಆತ ಸಂಪೂರ್ಣ ಗುಣಮುಖನಾದ ಬಳಿಕ ಆತನಿಂದ ಕಾರಣ ಕೇಳಲಾಗುವುದು ಎಂದು ಅವರು ಹೇಳಿದ್ದಾರೆ.

    ಸಾಂದರ್ಭಿಕ ಚಿತ್ರ

    ಆಪರೇಷನ್ ಯಶಸ್ವಿಯಾಗಿದ್ದಕ್ಕೆ ವೈದ್ಯರು ಸಂತಸ ವ್ಯಕ್ತಪಡಿಸಿದ್ದು, ಸದ್ಯ ರೋಗಿ ಐಸಿಯುನಲ್ಲಿದ್ದಾರೆ. ಈ ರೀತಿಯ ಯಾವುದೇ ಪ್ರಕರಣವನ್ನು ಎಂದಿಗೂ ಪರಿಗಣಿಸಿಲ್ಲ ಎಂದು ಇದೇ ವೇಳೆ  ಡಾ.ಕುಮಾರ್ ಬೈಭವ್ ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಶಿಕ್ಷಕರ ನೇಮಕಾತಿ ವಿಳಂಬ – ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್

    ಶಿಕ್ಷಕರ ನೇಮಕಾತಿ ವಿಳಂಬ – ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್

    ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಸೋಮವಾರ ಶಿಕ್ಷಕರ ನೇಮಕಾತಿ ವಿಳಂಬವನ್ನು ವಿರೋಧಿಸಿ ನೂರಾರು ಶಿಕ್ಷಕ ಹುದ್ದೆಗಳ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ದು, ಅವರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಇದೇ ವೇಳೆ ಪ್ರತಿಭಟನಾಕಾರನೊಬ್ಬ ನೆಲದ ಮೇಲೆ ಮಲಗಿ ರಾಷ್ಟ್ರಧ್ವಜ ಹಿಡಿದು ಪ್ರತಿಭಟಿಸುತ್ತಿದ್ದಾಗ ಅಧಿಕಾರಿಗಳು ಅವನನ್ನು ಥಳಿಸಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

    ಪಾಟ್ನಾದ ದಕ್ ಬಾಂಗ್ಲಾ ಚೌರಾದಲ್ಲಿ ಪ್ರತಿಭಟನೆ ನಡೆದಿದ್ದು ವೀಡಿಯೊದಲ್ಲಿ, ಪಾಟ್ನಾದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೆ.ಕೆ ಸಿಂಗ್, ನೆಲದ ಮೇಲೆ ಮಲಗಿ ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದಿದ್ದ ವ್ಯಕ್ತಿಯನ್ನು ಥಳಿಸಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಬಳಿಕ ಧ್ವಜವನ್ನು ವ್ಯಕ್ತಿಯ ಕೈಯಿಂದ ಪೊಲೀಸರು ಕಿತ್ತುಕೊಂಡಿದ್ದಾರೆ.

    ಸಿಟಿಇಟಿ, ಬಿಟಿಇಟಿ ಉತ್ತೀರ್ಣರಾದ ಅಭ್ಯರ್ಥಿಗಳು ಪ್ರಾಥಮಿಕ ಶಿಕ್ಷಕರ ನೇಮಕಾತಿ ಅಧಿಸೂಚನೆ ಹೊರಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳನ್ನು ನಿಯೋಜಿಸಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಜಲಫಿರಂಗಿಗಳನ್ನು ಬಳಸಲಾಯಿತು. ಇದನ್ನೂ ಓದಿ: ನಾನು ಪ್ರಧಾನಿಯಾಗಲು ಬಯಸುವುದಿಲ್ಲ: ಅರವಿಂದ್ ಕೇಜ್ರಿವಾಲ್

    ನಾವು ನೇಮಕಾತಿಗಾಗಿ 2019ರಿಂದ ಕಾಯುತ್ತಿದ್ದೇವೆ. ಕಳೆದ 3 ವರ್ಷಗಳಿಂದ ಸರ್ಕಾರ ಕೇವಲ ಭರವಸೆಯನ್ನು ಮಾತ್ರ ನೀಡುತ್ತಿದೆ. ಸರ್ಕಾರ ರಚನೆಗೂ ಮುನ್ನ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮೊದಲ ಸಂಪುಟದಲ್ಲಿಯೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿದ್ದರು. ಆದರೆ ಇಲ್ಲಿಯವರೆಗೂ ಏನೂ ಆಗಿಲ್ಲ ಎಂದು ಪ್ರತಿಭಟನಾಕಾರರು ಕಿಡಿ ಕಾರಿದ್ದಾರೆ.

    ರಾಜ್ಯದಲ್ಲಿ 20 ಲಕ್ಷ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಪ್ರತಿಭಟನೆ ಮಾಡಿದ್ದ ಶಿಕ್ಷಕ ಅಭ್ಯರ್ಥಿಯನ್ನು ಅಮಾನವೀಯವಾಗಿ ಥಳಿಸಲಾಗಿದೆ. ಬಿಹಾರ ಸರ್ಕಾರ ಹಾಗೂ ಅಧಿಕಾರಿಗಳು ಆತನ ಮುಖದಲ್ಲಿ ರಕ್ತ ಬರುವಂತೆ ಮಾಡಿದ್ದಲ್ಲದೇ ತ್ರಿವರ್ಣ ಧ್ವಜಕ್ಕೂ ಅವಮಾನ ಮಾಡಿದ್ದಾರೆ. ಇದು ಜೆಡಿಯು-ಆರ್‌ಜೆಡಿ ಸರ್ಕಾರದ ಅಸಲಿ ಮುಖ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮನೀಶ್ ಸಿಸೋಡಿಯಾ ಭಾರತ ರತ್ನಕ್ಕೆ ಅರ್ಹರು: ಅರವಿಂದ್ ಕೇಜ್ರಿವಾಲ್

    ಪ್ರತಿಭಟನೆಯನ್ನು ನಿಯಂತ್ರಣಕ್ಕೆ ತರಲು ಲಾಠಿಚಾರ್ಜ್ ಮಾಡಲಾಗಿತ್ತು. ಈ ವೇಳೆ ಎಸ್‌ಟಿಇಟಿ ಅಭ್ಯರ್ಥಿಯನ್ನು ಎಡಿಎಂ ಥಳಿಸಿರುವುದು ತಿಳಿದುಬಂದಿದೆ. ಈ ಘಟನೆ ಬಗ್ಗೆ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಅವರು ತಪ್ಪಿತಸ್ಥರು ಎಂಬುದು ಕಂಡುಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆ ಎಂದು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 20 ಲಕ್ಷ ಉದ್ಯೋಗ ಸೃಷ್ಟಿ: ನಿತೀಶ್ ಕುಮಾರ್ ಮಹತ್ವದ ಘೋಷಣೆ

    20 ಲಕ್ಷ ಉದ್ಯೋಗ ಸೃಷ್ಟಿ: ನಿತೀಶ್ ಕುಮಾರ್ ಮಹತ್ವದ ಘೋಷಣೆ

    ಪಾಟ್ನಾ: ಹೊಸ ಮೈತ್ರಿ ಸರ್ಕಾರದ ಬಾಕಿ ಅವಧಿಯಲ್ಲಿ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಭರವಸೆ ನೀಡಿದ್ದಾರೆ. ಸಾರ್ವಜನಿಕ ಧ್ವಜಾರೋಹಣದ ಬಳಿಕ ಮಾತನಾಡಿದ ಅವರು ಈ ಮಹತ್ವದ ಘೋಷಣೆ ಮಾಡಿದ್ದಾರೆ.

    ಎನ್‍ಡಿಎ ಮೈತ್ರಿಯಿಂದ ಹೊರ ಬಂದು ವಿಪಕ್ಷಗಳ ಜೊತೆಗೆ ಸರ್ಕಾರ ರಚನೆ ಬಳಿಕ ಮೊದಲ ಬಾರಿಗೆ ನಿತೀಶ್ ಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಮತ್ತು ಆರ್‍ಜೆಡಿ ನಾಯಕ ತೇಜಸ್ವಿ ಯಾದವ್ ಕಳೆದ ಚುನಾವಣಾ ಪ್ರಚಾರದ ಸಮಯದಲ್ಲಿ 10 ಲಕ್ಷ ಉದ್ಯೋಗಗಳ ಭರವಸೆ ಹೇಳಿಕೆಯನ್ನು ಉಲ್ಲೇಖಿಸಿ ನಿತೀಶ್ ಈ ಘೋಷಣೆ ಮಾಡಿದ್ದಾರೆ.

    NITHISH KUMAR

    ನಿತೀಶ್ ಕುಮಾರ್ ಘೋಷಣೆ ಬೆನ್ನಲ್ಲೇ ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದು, ಇದೊಂದು ಐತಿಹಾಸಿಕ ಘೋಷಣೆ, ನಿರುದ್ಯೋಗಿ ಯುವಕರ ನಿರೀಕ್ಷೆಗಳು ಈಡೇರಲಿದೆ. ಇದಕ್ಕಾಗಿ ನಾನು ನಿತೀಶ್ ಕುಮಾರ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಹಾಗೂ ಬಿಹಾರವನ್ನು ಅಭಿವೃದ್ಧಿ ಮತ್ತು ಪ್ರಗತಿಯ ಪಥದಲ್ಲಿ ಕೊಂಡೊಯ್ಯುತ್ತೇವೆ ಎಂದು ಪ್ರಮಾಣ ಮಾಡಿದ್ದಾರೆ.

    ಸಮಾಜದಲ್ಲಿ ಕೋಮು ಸೌಹಾರ್ದತೆ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳುವಂತೆ ಜನರನ್ನು ಒತ್ತಾಯಿಸಿದ ನಿತೀಶ್ ಕುಮಾರ್, ತೇಜಸ್ವಿ ಯಾದವ್ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ, ಈಗ ಯುವ ಶಕ್ತಿಯೊಂದಿಗೆ ಕೆಲಸ ಮಾಡಲು ಅವಕಾಶವಿದೆ ಮತ್ತು ಅವರು ಬಿಹಾರವನ್ನು ಅಭಿವೃದ್ಧಿ ಮತ್ತು ಪ್ರಗತಿಯ ಹೊಸ ಹಾದಿಗೆ ಕೊಂಡೊಯ್ಯುವ ನಿರೀಕ್ಷೆಯಿದೆ ಎಂದು ಹೇಳಿದರು.

    2006 ರಿಂದ ಯಾವುದೇ ಕೋಮು ಉದ್ವಿಗ್ನತೆ ಇಲ್ಲ ಎಂದು ಖಚಿತಪಡಿಸಿಕೊಂಡಿದ್ದೇವೆ. ಇಂತಹ ವಿಷಯಗಳಲ್ಲಿ ಪೋಲೀಸರ ಪ್ರತಿಕ್ರಿಯೆಯು ತುಂಬಾ ವೇಗವಾಗಿತ್ತು. ಪರಿಣಾಮವಾಗಿ, ಕೋಮು ಉದ್ವಿಗ್ನತೆಯ ಪ್ರಕರಣಗಳು ಕಡಿಮೆಯಾಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದೆ, 39ರಷ್ಟು ಕಡಿಮೆ ಮಳೆಯಾಗಿದ್ದು, ಈವರೆಗೆ ಶೇ 80ರಷ್ಟು ಭತ್ತ ಬಿತ್ತನೆಯಾಗಿದೆ ಎಂದು ಹೇಳಿದರು.

    Live Tv

    [brid partner=56869869 player=32851 video=960834 autoplay=true]

  • ಮಹಾರಾಷ್ಟ್ರ ಬಳಿಕ ಬಿಹಾರದಲ್ಲೂ ಪಕ್ಷಾಂತರ ಪರ್ವ – AIMIMನ ನಾಲ್ವರು ಶಾಸಕರು RJDಗೆ ಜಂಪ್

    ಮಹಾರಾಷ್ಟ್ರ ಬಳಿಕ ಬಿಹಾರದಲ್ಲೂ ಪಕ್ಷಾಂತರ ಪರ್ವ – AIMIMನ ನಾಲ್ವರು ಶಾಸಕರು RJDಗೆ ಜಂಪ್

    ಪಾಟ್ನಾ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿ ಸುಧಾರಣೆಗೊಳ್ಳುವ ಮುನ್ನವೇ ಬಿಹಾರದಲ್ಲೂ ಪಕ್ಷಾಂತರ ಪರ್ವ ಶುರುವಾಗಿದೆ.

    ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (AIMIM)ನ ನಾಲ್ವರು ಶಾಸಕರು ಆರ್‌ಜೆಡಿ (ರಾಷ್ಟ್ರೀಯ ಜನತಾ ದಳ) ಸೇರಿದ್ದಾರೆ. ಇದನ್ನೂ ಓದಿ: 16 ವರ್ಷಗಳಿಂದ ಅಳಿಯನನ್ನೇ ಪ್ರೀತಿಸ್ತಿದ್ದ ಅತ್ತೆ- ಒಟ್ಟಿಗೆ ಇರಲು ಸಾಧ್ಯವಾಗದೇ ಇಬ್ಬರೂ ಆತ್ಮಹತ್ಯೆ

    OWAISI

    AIMIMನ ಶಾಸಕರಾದ ಶಹನವಾಜ್, ಮೊಹಮ್ಮದ್ ಅನ್ಜರ್ ನೈಮೈ, ಮುಹಮ್ಮದ್ ಇಝಾರ್ ಅಸ್ಫಿ ಮತ್ತು ಸೈಯದ್ ರುಕ್ನುದ್ದೀನ್ ಆರ್‌ಜೆಡಿ ಸೇರ್ಪಯಾಗಿದ್ದಾರೆ.

    ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಾಳೆ ವಿಶ್ವಾಸಮತ ಯಾಚನೆಗೆ ಸೂಚಿಸಿರುವ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ನಿರ್ಧಾರವನ್ನು ಪ್ರಶ್ನಿಸಿ ಶಿವಸೇನೆ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಲಿದೆ.

    ನಾಳೆ ಬೆಳಗ್ಗೆ 11 ಗಂಟೆಗೆ ವಿಶ್ವಾಸಮತ ಯಾಚನೆಗೆ ಸೂಚಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಬಗ್ಗೆ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ದ್ವಿ-ಸದಸ್ಯ ಪೀಠದ ಮುಂದೆ ಪ್ರಸ್ತಾಪಿಸಿ ತುರ್ತು ವಿಚಾರಣೆಗೆ ಮನವಿ ಮಾಡಿದ್ದರು. ಇದನ್ನೂ ಓದಿ: ಅಸ್ಸಾಂ ಪ್ರವಾಹಕ್ಕೆ ಮರುಗಿದ ಮಹಾರಾಷ್ಟ್ರ ರೆಬೆಲ್‌ ಶಾಸಕರು – ಪರಿಹಾರ ನಿಧಿಗೆ 51 ಲಕ್ಷ ರೂ. ಸಹಾಯ

    ರಾಜ್ಯಪಾಲರು ವಿಶ್ವಾಸಮತ ಯಾಚನೆಗೆ ಸೂಚಿಸಿರುವುದು ಸರಿಯಾದ ಕ್ರಮವಲ್ಲ, 16 ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಿದ್ದು ಇದು ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ಹಂತದಲ್ಲಿ ವಿಶ್ವಾಸಮತ ಯಾಚನೆಗೆ ಸೂಚಿಸುವುದು ಕಾನೂನು ಬಾಹಿರ ಎಂದಿದ್ದಾರೆ. ಒಂದು ವೇಳೆ ಬಹುಮತ ಸಾಬೀತು ಮಾಡಲೇಬೇಕು ಎನ್ನುವುದಾದರೆ ಏಕನಾಥ ಶಿಂಧೆ ಗುಂಪಿನಲ್ಲಿರುವ ಬಂಡಾಯ ಶಾಸಕರಿಗೆ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಭಾಗವಹಿಸಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದಾರೆ.

    Live Tv

  • ಕೋಮು ಗಲಭೆ ಸೃಷ್ಟಿಸುವ ಪೋಸ್ಟ್ ಹಾಕಿದ ಹಿರಿಯ ಸರ್ಕಾರಿ ಅಧಿಕಾರಿ ಅರೆಸ್ಟ್

    ಕೋಮು ಗಲಭೆ ಸೃಷ್ಟಿಸುವ ಪೋಸ್ಟ್ ಹಾಕಿದ ಹಿರಿಯ ಸರ್ಕಾರಿ ಅಧಿಕಾರಿ ಅರೆಸ್ಟ್

    ಪಾಟ್ನಾ: ಸೋಶಿಯಲ್ ಮೀಡಿಯಾದಲ್ಲಿ ಕೋಮು ಗಲಭೆ ಸೃಷ್ಟಿಸುವ ಪೋಸ್ಟ್ ಹಾಕಿದಕ್ಕೆ ಹಿರಿಯ ಸರ್ಕಾರಿ ಅಧಿಕಾರಿಯನ್ನು ಬಿಹಾರದಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು(ಎಡಿಜಿ) ಸಂಜಯ್ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದು, ಕಾನೂನು ಮತ್ತು ಸುವ್ಯವಸ್ಥೆ ಪ್ರಕಾರ ಯಾವುದೇ ಧರ್ಮ ನಿಂದನೆ ಮಾಡುವುದು ಅಪರಾಧ. ಈ ಹಿನ್ನೆಲೆ ಬಿಹಾರದ ಆಡಳಿತ ಸೇವೆ ಅಧಿಕಾರಿ ಅಲೋಕ್ ಕುಮಾರ್ ಅವರ ವಿರುದ್ಧ ಎಫ್‍ಐಆರ್ ದಾಖಲಿಸಿ ಬಂಧಿಸಲಾಗಿದೆ ಎಂದು ಮಾಹಿತಿ ಕೊಟ್ಟರು. ಇದನ್ನೂ ಓದಿ:  ಕಲಬುರಗಿಯಲ್ಲಿ ಬುಲ್ಡೋಜರ್ ಸದ್ದು: 14 ಮನೆಗಳು ಸೇರಿದಂತೆ 17 ಟಿನ್ ಶೆಡ್ ತೆರವು 

    ಘಟನೆಯ ವಿವರ
    ಇಒಯು ಮುಸ್ಲಿಮರನ್ನು ಅವಹೇಳನ ಮಾಡುವ ವಾಟ್ಸಾಪ್ ಸಂದೇಶ ಕಳಿಸಿದವರ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಇದರ ಮೂಲದ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಈ ವೇಳೆ ಚುನಾವಣಾ ಇಲಾಖೆಯಲ್ಲಿ ಉಪ ಕಾರ್ಯದರ್ಶಿಯಾಗಿ ಪಾಟ್ನಾದಲ್ಲಿ ನಿಯೋಜನೆಗೊಂಡಿರುವ ಜಾರ್ಖಂಡ್ ನಿವಾಸಿ ಅಲೋಕ್ ಕುಮಾರ್ ಅವರ ಫೋನ್‍ನಲ್ಲಿ ಇದರ ಫಾರ್ವರ್ಡ್ ಸಂದೇಶ ಪತ್ತೆಯಾಗಿದೆ.

    KILLING CRIME

    ಈ ಹಿನ್ನೆಲೆ ಅಲೋಕ್ ಕುಮಾರ್ ಅವರನ್ನು ಅವರ ಮನೆಯಲ್ಲೇ ಬಂಧಿಸಲಾಗಿದೆ. ಜೈಲಿಗೆ ಕಳುಹಿಸುವ ಮೊದಲು ಅವರನ್ನು ವಿಚಾರಣೆಗಾಗಿ ಸಚಿವಾಲಯ ಪೊಲೀಸ್ ಠಾಣೆಗೆ ಕರೆತರಲಾಗಿದೆ ಎಂದು ಸಂಜಯ್ ಸಿಂಗ್ ತಿಳಿಸಿದರು. ಇದನ್ನೂ ಓದಿ: ಪಾಕಿಸ್ತಾನಿ ಎಲ್‍ಇಟಿ ಉಗ್ರ ಎನ್‍ಕೌಂಟರ್ – ಮೂವರು ಅರೆಸ್ಟ್ 

    Live Tv

  • ಹಕ್ಕಿ ಡಿಕ್ಕಿಯಾಗಿ 185 ಮಂದಿ ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ!

    ಹಕ್ಕಿ ಡಿಕ್ಕಿಯಾಗಿ 185 ಮಂದಿ ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ!

    ಪಾಟ್ನಾ: ಸುಮಾರು 185 ಮಂದಿ ಪ್ರಯಾಣಿಕರಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾಟ್ನಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಗೊಂಡ ಘಟನೆ ಇಂದು ನಡೆದಿದೆ.

    ವಿಮಾನ ದೆಹಲಿಗೆ ಹೊರಟಿತ್ತು. ಆದರೆ ಟೇಕಾಫ್ ಆಗುತ್ತಿದ್ದಂತೆಯೇ ಎಡ ಬದಿಯ ಎಂಜಿನ್‍ಗೆ ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವಿಮಾನ ಟೇಕಾಫ್ ಆಗುತ್ತಿರುವುದನ್ನು ಸ್ಥಲೀಯರು ವೀಡಿಯೋ ಮಾಡಿದ್ದರು. ಈ ವೇಳೆ ಬೆಂಕಿ ಕಾಣಿಸಿರುವುದು ಬೆಳಕಿಗೆ ಬಂದಿದೆ. ಕೂಡಲೆ ವಿಮಾನವು ನಿಲ್ದಾಣಕ್ಕೆ ಹಿಂದಿರುಗಿದ್ದು, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ಟೇಕ್-ಆಫ್ ಸಮಯದಲ್ಲಿ ಹಕ್ಕಿಗೆ ಪೆಟ್ಟಾಗಿದೆ ಎಂದು ಪೈಲಟ್‍ಗಳು ಶಂಕಿಸಿದ್ದಾರೆ ಎಂದು ವಿಮಾನಯಾನ ನಿಯಂತ್ರಕ ಡಿಜಿಸಿಎ ಮೂಲಗಳು ತಿಳಿಸಿವೆ.

    ಘಟನೆ ಬಗ್ಗೆ ಪ್ರಯಾಣಿಕರು ಪ್ರತಿಕ್ರಿಯಿಸಿ, ವಿಮಾನ ಟೇಕ್-ಆಫ್ ಆದ ಕೂಡಲೇ ಅದರೊಳಗಿದ್ದ ನಮಗೆ ಭಯ ಆರಂಭವಾಯಿತು. ಅಲ್ಲದೆ ಲೈಟ್ ಗಳು ಆಫ್ ಆಗುತ್ತಿದ್ದಂತೆಯೇ ಆದ ಭಯ ಅಷ್ಟಿಷ್ಟಲ್ಲ ಎಂದು ಹೇಳಿದರು.

    ಈ ಸಂಬಂಧ ಪಾಟ್ನಾ ಡಿಎಂ ಚಂದ್ರಶೇಖರ್ ಸಿಂಗ್ ಮಾತನಾಡಿ, ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಸ್ಥಳೀಯರು ಮೊದಲು ಗಮನಿಸಿದ್ದಾರೆ. ನಂತರ ಅವರು ಜಿಲ್ಲಾ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ದೆಹಲಿಗೆ ಹೊರಟಿದ್ದ ವಿಮಾನವು ಪಾಟ್ನಾ ವಿಮಾನ ನಿಲ್ದಾಣಕ್ಕೆ ಮರಳಿತು. ಎಲ್ಲಾ 185 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಎಂದು ಮಾಹಿತಿ ನಿಡಿದರು.

    ಸ್ಪೈಸ್ ಜೆಟ್ ಪ್ರಯಾಣಿಕರಿಗೆ ಪರ್ಯಾಯ ವಿಮಾನ ವ್ಯವಸ್ಥೆ ಮಾಡಿದೆ ಎಂದು ಪಾಟ್ನಾ ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ. ಯಾವ ಪ್ರಯಾಣಿಕರಿಗೆ ಹಾನಿಯಾಗಿಲ್ಲ. ದೆಹಲಿಗೆ ಅವರ ಪ್ರಯಾಣವನ್ನು ಪರ್ಯಾಯ ವಿಮಾನದ ಮೂಲಕ ವ್ಯವಸ್ಥೆಗೊಳಿಸಲಾಗುತ್ತಿದೆ. ಬೆಂಕಿಗೆ ಕಾರಣವೇನು ಎಂಬುದು ತನಿಖೆಯ ವಿಷಯವಾಗಿದೆ ಎಂದು ಅವರು ಹೇಳಿದರು.

    Live Tv