Tag: patna

  • ಬ್ಯಾಲೆನ್ಸ್ ಕಳೆದುಕೊಂಡು ಬಿದ್ರೂ ನಗುತ್ತಲೇ ಎದ್ದು ನಡೆದ ಬಿಹಾರ ಸಿಎಂ

    ಬ್ಯಾಲೆನ್ಸ್ ಕಳೆದುಕೊಂಡು ಬಿದ್ರೂ ನಗುತ್ತಲೇ ಎದ್ದು ನಡೆದ ಬಿಹಾರ ಸಿಎಂ

    ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಬ್ಯಾಲೆನ್ಸ್ ಕಳೆದುಕೊಂಡು ಬಿದ್ದರೂ ನಗುತ್ತಲೇ ಎದ್ದು ನಡೆದ ಪ್ರಸಂಗವೊಂದು ನಡೆದಿದೆ.

    ಶಿಕ್ಷಕರ ದಿನಾಚರಣೆಯ (Teachers Day) ಹಿನ್ನೆಲೆಯಲ್ಲಿ ಪಾಟ್ನಾ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಿಎಂ ಅವರನ್ನು ಆಹ್ವಾನಿಸಲಾಗಿತ್ತು. ಅಂತೆಯೇ ಯೂನಿರ್ವಸಿಟಿಗೆ ಬಂದಿದ್ದ ಬಿಹಾರ ಸಿಎಂ, ಗವರ್ನರ್ ರಾಜೇಂದ್ರ ಅರ್ಲೇಕರ್ ಅನಾವರಣಗೊಳಿಸಿದ ಫಲಕದ ಕಡೆಗೆ ಸಾಗುತ್ತಿದ್ದಾಗ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ.

    ಸಿಎಂ ಬೀಳುತ್ತಿದ್ದಂತೆಯೇ ಅವರ ಭದ್ರತಾ ಸಿಬ್ಬಂದಿ ಕೈ ಹಿಡಿದುಕೊಂಡಿದ್ದಾರೆ. ಈ ವೇಳೆ ಸಿಎಂ ಬಿದ್ದ ಜಾಗವನ್ನು ನೋಡಿ ನಗುತ್ತಲೇ ಎದ್ದು ನಡೆದಿದ್ದಾರೆ. ಬಳಿಕ ಕುಂಟುತ್ತಲೇ ವೇದಿಕೆ ಮೇಲೆ ಏರಿದ ಸಿಎಂ ಅವರು, ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಇದನ್ನೂ ಓದಿ: 2.5 ಕೋಟಿ ರೂ.ಗೆ ಬೇಡಿಕೆ, ಕೊಡದಿದ್ದರೆ ಎನ್‍ಕೌಂಟರ್ ಬೆದರಿಕೆ – 9 ಪೊಲೀಸರು ಅರೆಸ್ಟ್

    ಘಟನೆಯಿಂದ ನಿತೀಶ್ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ ಅವರು ಹೇಗೆ ಬ್ಯಾಲೆನ್ಸ್ ಕಳೆದುಕೊಂಡು ಬಿದ್ದರು ಎಂಬುದು ತಿಳಿದುಬಂದಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿತ್ರಮಂದಿರ ಎದುರು ಬಾಂಬ್ ಸ್ಫೋಟ: ‘ಗದರ್ 2’ ಸಕ್ಸಸ್ ಕಾರಣವಾ?

    ಚಿತ್ರಮಂದಿರ ಎದುರು ಬಾಂಬ್ ಸ್ಫೋಟ: ‘ಗದರ್ 2’ ಸಕ್ಸಸ್ ಕಾರಣವಾ?

    ನ್ನಿ ಡಿಯೋಲ್ (Sunny Deol) ನಟನೆಯ ಗದರ್ 2 ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಗೆಲುವನ್ನು ಸಹಿಸಿಕೊಳ್ಳಲು ಆಗದೇ ಇರುವ ಕಿಡಿಗೇಡಿಗಳು ಚಿತ್ರ ಪ್ರದರ್ಶನ ಕಾಣುತ್ತಿದ್ದ ಥಿಯೇಟರ್ ಮುಂದೆ ಬಾಂಬ್ (Bomb) ಸ್ಪೋಟಿಸಿ ಆತಂಕ ಸೃಷ್ಟಿಸಿದ್ದಾರೆ. ಈ ದುಷ್ಕೃತ್ಯ ಪಾಟ್ನದಲ್ಲಿ ನಡೆದಿದೆ.

    ಗದರ್ 2 (Gadar 2) ಸಿನಿಮಾ ದಿನದಿಂದ ದಿನಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಈಗಾಗಲೇ 250 ಕೋಟಿ ರೂಪಾಯಿಗೂ ಅಧಿಕ ಹಣ ಬಾಕ್ಸ್ ಆಫೀಸಿಗೆ ಹರಿದು ಬಂದಿದೆ. ಇದು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎನ್ನುವುದು ಥಿಯೇಟರ್ ಮಾಲೀಕರ ಆರೋಪ. ಹಾಗಾಗಿಯೇ ಪ್ರೇಕ್ಷಕರನ್ನು ಮತ್ತು ಥಿಯೇಟರ್ ಸಿಬ್ಬಂದಿಯನ್ನು ಹೆದರಿಸುವಂತಹ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದ್ದಾರೆ.

    ಕೆಲವರು ಬ್ಲಾಕ್ ಟಿಕೆಟ್ ಮಾರಲು ಯತ್ನಿಸಿದರೆ, ಇನ್ನೂ ಕೆಲವರು ಬಾಂಬ್ ಸ್ಪೋಟಿಸಿ ಆತಂಕ ಸೃಷ್ಟಿ ಮಾಡುತ್ತಾರೆ. ಈಗ ಸ್ಫೋಟಗೊಂಡಿರುವ ಬಾಂ‍ಬ್ ತೀವ್ರ ಸ್ವರೂಪದ್ದು ಆಗಿರಲಿಲ್ಲ. ಹಾಗಾಗಿ ಯಾವುದೇ ಜೀವಹಾನಿ ಆಗಿಲ್ಲ. ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನುವ ಮಾಹಿತಿ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೌಟುಂಬಿಕ ದ್ವೇಷ – ಚಾಕುವಿನಿಂದ ಇರಿದು ನರ್ಸ್ ಹತ್ಯೆ

    ಕೌಟುಂಬಿಕ ದ್ವೇಷ – ಚಾಕುವಿನಿಂದ ಇರಿದು ನರ್ಸ್ ಹತ್ಯೆ

    ಪಾಟ್ನಾ: ವ್ಯಕ್ತಿಯೋರ್ವ ನರ್ಸ್ (Nurse) ಅನ್ನು ಚಾಕುವಿನಿಂದ ಹಲವು ಬಾರಿ ಇರಿದು ಕೊಂದ ಬಳಿಕ ಅಲ್ಲಿಂದ ಪರಾರಿಯಾದ ಘಟನೆ ಬಿಹಾರದ (Bihar) ಪಾಟ್ನಾದಲ್ಲಿ (Patna) ನಡೆದಿದೆ.

    ಮೃತ ನರ್ಸ್ ಅನ್ನು ಸೋನಿ ಕುಮಾರಿ (25) ಎಂದು ಗುರುತಿಸಲಾಗಿದ್ದು, ಕೌಟುಂಬಿಕ ದ್ವೇಷದ (Family Feud) ಹಿನ್ನೆಲೆ ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನಗರದ ಜನನಿಬಿಡ ತಾಣವಾದ ಪಾಟ್ನಾದ ಕಂಕರ್‌ಬಾಗ್‌ನಲ್ಲಿ ಶನಿವಾರ ಸಂಜೆ ಸುಮಾರು 4 ಗಂಟೆಯ ವೇಳೆಗೆ ಘಟನೆ ನಡೆದಿದೆ. ಇದನ್ನೂ ಓದಿ: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 7 ಮಂದಿ ಸಾವು

    ಘಟನೆಯಲ್ಲಿ ನರ್ಸ್ ತೀವ್ರ ಗಾಯಗೊಂಡಿದ್ದು, ಕೂಡಲೇ ದಾರಿಹೋಕರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಾಳೆ. ಈಕೆ ಪೂರ್ಣಿಯಾ ಮೂಲದವಳಾಗಿದ್ದು, ಪಾಟ್ನಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಭೀಕರ ಅಪಘಾತ- ಒಂದೇ ಕುಟುಂಬದ ನಾಲ್ವರ ದುರ್ಮರಣ

    ನರ್ಸ್ ಆಸ್ಪತ್ರೆಯಲ್ಲಿ ತನ್ನ ಕೆಲಸ ಮುಗಿಸಿ ಹಾಸ್ಟೆಲ್‌ಗೆ ತೆರಳುತ್ತಿದ್ದ ಸಂದರ್ಭ ಆಕೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದ್ದು, ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಘಟನೆ ಕುರಿತು ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಅಲ್ಲದೇ ಆರೋಪಿಯ ಪತ್ತೆಗಾಗಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ವೆಬ್ ಸಿರೀಸ್‍ನಿಂದ ಪ್ರೇರಣೆ – ದಂಪತಿ ಕೊಲೆಗೈದು ದರೋಡೆ ಮಾಡಿದ್ದ ಲಾ ಸ್ಟೂಡೆಂಟ್ ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಟ್ನಾದಲ್ಲಿ ವಿಪಕ್ಷ ನಾಯಕರ ಸಭೆ – ಮೋದಿ ಸರ್ಕಾರ ಗದ್ದುಗೆಯಿಂದಿಳಿಸಲು 15 ಪಕ್ಷಗಳ ಮಹತ್ವದ ಚರ್ಚೆ

    ಪಾಟ್ನಾದಲ್ಲಿ ವಿಪಕ್ಷ ನಾಯಕರ ಸಭೆ – ಮೋದಿ ಸರ್ಕಾರ ಗದ್ದುಗೆಯಿಂದಿಳಿಸಲು 15 ಪಕ್ಷಗಳ ಮಹತ್ವದ ಚರ್ಚೆ

    – ಅಧಿಕಾರಕ್ಕಾಗಿ ಅಲ್ಲ: ಸಭೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ ವಿಪಕ್ಷಗಳು

    ಪಾಟ್ನಾ: ಲೋಕಸಭಾ ಚುನಾವಣೆ (Lok Sabha Election) ಹತ್ತಿರವಾಗುತ್ತಿದ್ದಂತೆಯೇ ಪ್ರತಿಪಕ್ಷಗಳು (Opposition) ಮೈಕೊಡವಿ ಎದ್ದಿವೆ. ಬಿಜೆಪಿ (BJP) ವಿರುದ್ಧ ಪರಿಣಾಮಕಾರಿ ಒಕ್ಕೂಟ ರಚಿಸಿ ಹೋರಾಟ ನಡೆಸುವ ಕುರಿತು ಮೊದಲ ಹೆಜ್ಜೆ ಇಟ್ಟಿವೆ.

    ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಏಕೈಕ ಗುರಿಯೊಂದಿಗೆ ಬಿಹಾರ ರಾಜಧಾನಿ ಪಾಟ್ನಾದಲ್ಲಿ (Patna) ವಿಪಕ್ಷ ನಾಯಕರು ಸಭೆ ಸೇರಿದರು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ನಿತೀಶ್ ಕುಮಾರ್, ಲಾಲೂ ಪ್ರಸಾದ್ ಯಾದವ್, ಮಮತಾ ಬ್ಯಾನರ್ಜಿ, ಶರದ್ ಪವಾರ್, ಹೇಮಂತ್ ಸೊರೇನ್, ಉದ್ಧವ್ ಠಾಕ್ರೆ, ಸೀತಾರಾಂ ಯೆಚೂರಿ, ಅಖಿಲೇಶ್ ಯಾದವ್, ಎಎಪಿಯ ರಾಘವ್ ಚಡ್ಡಾ, ಮೆಹಬೂಬಾ ಮುಫ್ತಿ ಸೇರಿ 15 ಪಕ್ಷಗಳ ರಾಜಕೀಯ ಮುಖಂಡರು ಸಭೆ ಸೇರಿ, ಮೋದಿ ಸರ್ಕಾರವನ್ನು ಗದ್ದುಗೆಯಿಂದ ಇಳಿಸುವ ಬಗ್ಗೆ ಮಹತ್ವದ ಚರ್ಚೆ ನಡೆಸಿದರು.

    ಕರ್ನಾಟಕ ಗೆಲುವಿನ ಜೋಶ್‌ನಲ್ಲಿರುವ ಕಾಂಗ್ರೆಸ್ ನಾಯಕರು, ನಾವೆಲ್ಲಾ ಒಗ್ಗೂಡಿದಲ್ಲಿ ಮೋದಿಯನ್ನು ಮನೆಗೆ ಕಳಿಸೋದು ದೊಡ್ಡ ವಿಚಾರವಲ್ಲ. ನಾವೆಲ್ಲಾ ಒಗ್ಗೂಡಿ ಹೋರಾಟ ನಡೆಸೋಣ ಎಂದು ಕರೆ ನೀಡಿದರು. ಇದೇ ವೇಳೆ ಸಭೆಯಲ್ಲಿ ತಮ್ಮೊಳಗೆ ಇರುವ ತಿಕ್ಕಾಟದ ಬಗ್ಗೆಯೂ ಚರ್ಚೆ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ-ಕಾಂಗ್ರೆಸ್ ನಡುವೆ ಸೆಣಸಿದೆ. ದೆಹಲಿ, ಪಂಜಾಬ್‌ನಲ್ಲಿ ಎಎಪಿ ಮತ್ತು ಕಾಂಗ್ರೆಸ್ ನಡುವಿನ ತಿಕ್ಕಾಟದ ಬಗ್ಗೆ ಚರ್ಚೆ ನಡೆದಿದೆ. ಇದನ್ನೂ ಓದಿ: ಇನ್ಫೋಸಿಸ್ ಸುಧಾಮೂರ್ತಿಗೆ ಬಾಲ ಸಾಹಿತ್ಯ ಪುರಸ್ಕಾರ

    ಈ ಸಭೆಯಲ್ಲಿ ಯಾವುದೇ ಪ್ರಮುಖ ನಿರ್ಧಾರ ಹೊರಬಿದ್ದಿಲ್ಲ. ಶೀಘ್ರವೇ ಶಿಮ್ಲಾದಲ್ಲಿ 2 ದಿನಗಳ ಸಭೆ ನಡೆಸಲು ಇಂದಿನ ಮೀಟಿಂಗ್‌ನಲ್ಲಿ ತೀರ್ಮಾನಿಸಲಾಗಿದೆ. ಶಿಮ್ಲಾ ಸಭೆಯಲ್ಲಿ ಸಂಚಾಲಕರನ್ನು ಆಯ್ಕೆ ಮಾಡುವ ಸಂಭವ ಇದೆ. ಆದರೆ 80 ಲೋಕಸಭಾ ಸ್ಥಾನಗಳಿರುವ ಉತ್ತರ ಪ್ರದೇಶದಿಂದ ಕೇವಲ ಸಮಾಜವಾದಿ ಪಕ್ಷ ಮಾತ್ರ ಈ ಕೂಟದಲ್ಲಿ ಕಾಣಿಸಿಕೊಂಡಿರೋದು ಚರ್ಚೆಗೆ ಗ್ರಾಸವಾಗಿದೆ.

    ಈ ಸಭೆಗೆ ಬಿಎಸ್‌ಪಿ ನಾಯಕಿ ಮಾಯಾವತಿಯನ್ನು ಆಹ್ವಾನಿಸಿಲ್ಲ. ಕರ್ನಾಟಕದ ಜೆಡಿಎಸ್, ಆಂಧ್ರದ ವೈಎಸ್‌ಆರ್, ತೆಲುಗುದೇಶಂ, ತೆಲಂಗಾಣದ ಬಿಆರ್‌ಎಸ್, ಒಡಿಶಾದ ಬಿಜೆಡಿ ಈ ಕೂಟದಲ್ಲಿ ಕಾಣಿಸಿಕೊಂಡಿಲ್ಲ. ಇವರಿಗೆ ಜೆಡಿಯು ಕೂಡ ಆಹ್ವಾನ ನೀಡಿಲ್ಲ. ಈ ಪಕ್ಷಗಳನ್ನು ಹೊರಗಿಟ್ಟು ಬಿಜೆಪಿ ವಿರುದ್ಧ ಗೆಲ್ಲುವುದು ಸಾಧ್ಯವೇ ಎಂಬ ಪ್ರಶ್ನೆಯೂ ಈಗ ಎದ್ದಿದೆ. ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ – ಜಗದೀಶ್‌ ಶೆಟ್ಟರ್‌ ಸೇರಿ ಕಾಂಗ್ರೆಸ್‌ನ ಮೂವರೂ ಅವಿರೋಧ ಆಯ್ಕೆ

    ಇದು ಆರಂಭ ಮಾತ್ರ ಆಗಿದ್ದು, ಮುಂದಿನ ದಿನಗಳಲ್ಲಿ ಏನು ಬೇಕಾದರೂ ಆಗಬಹುದು. ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿದೆ.

  • ನೀವು ಗಡ್ಡ ಟ್ರಿಮ್‌ ಮಾಡಿ ಬೇಗ ಮದುವೆಯಾಗಿ: ರಾಹುಲ್‌ ಗಾಂಧಿಗೆ ಲಾಲು ಯಾದವ್‌ ಸಲಹೆ

    ನೀವು ಗಡ್ಡ ಟ್ರಿಮ್‌ ಮಾಡಿ ಬೇಗ ಮದುವೆಯಾಗಿ: ರಾಹುಲ್‌ ಗಾಂಧಿಗೆ ಲಾಲು ಯಾದವ್‌ ಸಲಹೆ

    ಪಾಟ್ನಾ: ರಾಹುಲ್‌ ಗಾಂಧಿ (Rahul Gandhi) ಅವರು ಗಡ್ಡ ಟ್ರಿಮ್‌ ಮಾಡಿ ಬೇಗ ಮದುವೆ ಆಗಬೇಕು ಎಂದು ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ (Lalu Prasad Yadav) ಸಲಹೆ ನೀಡಿದರು. ಈ ಮಾತು ಕೇಳಿ ರಾಹುಲ್‌ ಗಾಂಧಿ ಹಾಗೂ ಸಭೆಯಲ್ಲಿದ್ದವರೆಲ್ಲ ನಗೆ ಬೀರಿದರು.

    ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಏಕತಾ ಸಭೆಯಲ್ಲಿ ಭಾಗವಹಿಸಿದ್ದ ಆರ್‌ಜೆಡಿ (RJD) ನಾಯಕ ಲಾಲು ಪ್ರಸಾದ್, ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ಯಾತ್ರೆಯಿಂದ (Bharat Jodo Yatra) ಒಳ್ಳೆಯ ಕೆಲಸ ಮಾಡಿದ್ದಾರೆ. ಅವರು ನಮ್ಮ ಮಾತು ಕೇಳಿ ಈಗಲೇ ಮದುವೆಯಾಗಬೇಕು ಎಂದು ಹೇಳಿದರು. ಇದನ್ನೂ ಓದಿ: ಮೊದಲ ಬಾರಿಗೆ ಲೈಫ್‌ ಪಾರ್ಟ್ನರ್‌ ಬಗ್ಗೆ ಮಾತನಾಡಿದ ರಾಹುಲ್‌ ಗಾಂಧಿ

    ಈ ವಿಚಾರವಾಗಿ ನಿಮ್ಮ ತಾಯಿ ಯಾವಾಗಲೂ ನಮ್ಮಲ್ಲಿ ದೂರುತ್ತಾರೆ. ನೀವು ಅವರ ಮಾತನ್ನು ಕೇಳುವುದಿಲ್ಲವಂತೆ. ನಮ್ಮ ಮಾತು ಕೇಳಿ, ಈಗಲೇ ಒಂದು ನಿರ್ಧಾರಕ್ಕೆ ಬನ್ನಿ ಎಂದು ಸಲಹೆ ಕೊಟ್ಟರು.

    ಈ ಮಾತಿಗೆ 53 ವಯಸ್ಸಿನ ರಾಹುಲ್‌ ಗಾಂಧಿ ನಗೆ ಬೀರಿದರು. ನಂತರ ಪ್ರತಿಕ್ರಿಯಿಸಿದ ಅವರು, ಈಗ ನೀವು ಹೇಳಿದ್ದೀರಿ. ಖಂಡಿತ ಅದು ಆಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ: ಹೈಕಮಾಂಡ್‌ಗೆ ಸೋಮಣ್ಣ ಮನವಿ

    ಭಾರತ್‌ ಜೋಡೋ ಯಾತ್ರೆ ವೇಳೆ ಸಂದರ್ಶನವೊಂದರಲ್ಲಿ ರಾಹುಲ್‌ ಗಾಂಧಿಗೆ ಮದುವೆ ಕುರಿತು ಪ್ರಶ್ನೆ ಕೇಳಲಾಗಿತ್ತು. ನನ್ನ ಬಾಳ ಸಂಗಾತಿಯಾಗುವವರಿಗೆ ತಾಯಿ ಸೋನಿಯಾ ಗಾಂಧಿ ಮತ್ತು ಅಜ್ಜಿ ಇಂದಿರಾ ಗಾಂಧಿ ಇಬ್ಬರ ಗುಣಗಳು ಇರಬೇಕು. ಅಂತಹ ಸಂಗಾತಿಯೊಂದಿಗೆ ಜೀವನ ನಡೆಸಲು ನಾನು ಬಯಸುತ್ತೇನೆ ಎಂದು ಕಾಂಗ್ರೆಸ್ ನಾಯಕ ಪ್ರತಿಕ್ರಿಯಿಸಿದ್ದರು.

  • ಬಾಲಕನನ್ನು ಕೊಂದು ತಿಂದ ಮೊಸಳೆಯನ್ನೇ ಥಳಿಸಿ ಹತ್ಯೆಗೈದ್ರು- ವೀಡಿಯೋ ವೈರಲ್

    ಬಾಲಕನನ್ನು ಕೊಂದು ತಿಂದ ಮೊಸಳೆಯನ್ನೇ ಥಳಿಸಿ ಹತ್ಯೆಗೈದ್ರು- ವೀಡಿಯೋ ವೈರಲ್

    ಪಾಟ್ನಾ: 14 ವರ್ಷದ ಬಾಲಕನನ್ನು ಕೊಂದು ತಿಂದ ಮೊಸಳೆ (Crocodile) ಯನ್ನೇ ಜನ ದೊಣ್ಣೆ, ರಾಡ್‍ನಿಂದ ಥಳಿಸಿ ಹತ್ಯೆ ಮಾಡಿದ ಘಟನೆ ಬಿಹಾರದಲ್ಲಿ ನಡೆದಿದೆ.

    ಬಾಲಕನನ್ನು ಅಂಕಿತ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಬಿಹಾರದ ವೈಶಾಲಿ ಜಿಲ್ಲೆಯ ರಾಘೋಪುರ ದಿಯಾರಾದ 5ನೇ ತರಗತಿ ವಿದ್ಯಾರ್ಥಿ. ಇದನ್ನೂ ಓದಿ: ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದ್ದಕ್ಕೆ 7 ತುಂಡು – ಮೃತದೇಹ ಚರಂಡಿಯಲ್ಲಿ ಪತ್ತೆ

    ನಡೆದಿದ್ದೇನು..?: 14 ವರ್ಷದ ಬಾಲಕ ಹೊಸ ಸೈಕಲ್ (Motorcycle) ಖರೀದಿಸಿದ್ದನು. ಇದಕ್ಕೆ ಪೂಜೆ ಮಾಡಿಸುವ ಸಲುವಾಗಿ ತೊಳೆಯಲೆಂದು ಗಂಗಾ ನದಿಗೆ ಇಳಿದಿದ್ದಾನೆ. ಇನ್ನೊಂದೆಡೆ ಬಾಲಕನ ಕುಟುಂಬಸ್ಥರು ಕೂಡ ಸ್ನಾನಕ್ಕೆಂದು ನದಿಗೆ ಇಳಿದಿದ್ದಾರೆ. ಈ ವೇಳೆ ಕುಟುಂಬಸ್ಥರು ನೋಡ ನೋಡುತ್ತಿದ್ದಂತೆಯೇ ಮೊಸಳೆಯೊಂದು ಬಂದು ಬಾಲಕನ ಮೇಲೆ ದಾಳಿ ಮಾಡಿದೆ. ಅಲ್ಲದೆ ನೀರಿನೊಳಗೆ ಎಳೆದುಕೊಂಡು ಹೋಗಿ ಆತನನ್ನು ತಿಂದು ಹಾಕಿದೆ.

    ಘಟನೆ ನಡೆದು ಗಂಟೆಯ ಬಳಿಕ ಅಂಕಿತ್ ಮೃತದೇಹವನ್ನು ಗಂಗಾ ನದಿ (Ganga River) ಯಿಂದ ಹೊರಗೆ ತೆಗೆಯುವಲ್ಲಿ ಕುಟುಂಬ ಯಶಸ್ವಿಯಾಯಿತು. ಅಷ್ಟೊತ್ತಿಗಾಗಲೇ ಸುತ್ತಮುತ್ತಲಿನ ಜನ ಜಮಾಯಿಸಿದರು. ಬಳಿಕ ಮೊಸಳೆಯನ್ನು ನೀರಿನಿಂದ ಹೊರಗೆಳೆದು ದೊಣ್ಣೆ ಹಾಗೂ ಕಬ್ಬಿಣದ ರಾಡ್‍ಗಳಿಂದ ಹೊಡೆಯಲು ಆರಂಭಿಸಿದರು. ರಾಡ್ ಏಟಿಗೆ ಮೊಸಳೆ ಸತ್ತು ಹೋಗಿದೆ. ಇದರ ಸಂಪೂರ್ಣ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಈ ಸಂಬಂಧ ಅಂಕಿತ್ ತಾತ ಸಕಲದೀಪ್ ದಾಸ್ ಪ್ರತಿಕ್ರಿಯಿಸಿ, ನಾವು ಬಾಲಕನಿಗಾಗಿ ಹೊಸ ಸೈಕಲ್ ಖರೀದಿಸಿದ್ದೆವು. ಹೀಗಾಗಿ ಅದಕ್ಕೆ ಪೂಜೆ ಮಾಡಿಸುವ ಮೊದಲು ತೊಳೆಯಲೆಂದು ಗಂಗಾ ನದಿಗೆ ಬಂದಿದ್ದೆವು. ಈ ವೇಳೆ ಮೊಸಳೆ ದಾಳಿ ಮಾಡಿ ಆತನನ್ನು ಕೊಂದಿದೆ. ಸಿಟ್ಟಿನಿಂದ ನಾವು ಕೂಡ ಮೊಸಳೆಯನ್ನು ಹಿಡಿದು ಕೊಂದೆವು ಎಂದು ತಿಳಿಸಿದ್ದಾರೆ.

  • ಹಾರ ಬದಲಾಯಿಸಿಕೊಂಡ ಆದ್ರೆ ತಾಳಿ ಮಾತ್ರ ಮದುಮಗಳ ಅಕ್ಕನಿಗೆ ಕಟ್ಟಿದ!

    ಹಾರ ಬದಲಾಯಿಸಿಕೊಂಡ ಆದ್ರೆ ತಾಳಿ ಮಾತ್ರ ಮದುಮಗಳ ಅಕ್ಕನಿಗೆ ಕಟ್ಟಿದ!

    ಪಾಟ್ನಾ: ಮದುವೆ ಮಂಟಪದಲ್ಲಿ ವರನೊಬ್ಬ ಹಾರ ಬದಲಾಯಿಸಿಕೊಂಡು ಬಳಿಕ ತಾಳಿ ಮಾತ್ರ ಮದುಮಗಳ ಸಹೋದರಿಗೆ ಕಟ್ಟಿದ (Marriage Twist) ವಿಲಕ್ಷಣ ಘಟನೆಯೊಂದು ಬಿಹಾರ (Bihar) ದ ಸರನ್ ಜಿಲ್ಲೆಯಲ್ಲಿ ನಡೆದಿದೆ.

    ಛಪ್ರಾ ನಿವಾಸಿ ರಾಜೇಶ್ ಕುಮಾರ್ ಗೆ ಗೆಳತಿ ಪುತುಲ್ ಎಂಬಾಕೆಯ ಸಹೋದರಿ ರಿಂಕು ಕುಮಾರಿ ಎಂಬಾಕೆಯ ಜೊತೆ ಮದುವೆ ನಿಶ್ಚಯವಾಗಿತ್ತು. ಅಂತೆಯೇ ಮದುವೆಗೆ ಎಲ್ಲಾ ತಯಾರಿಗಳು, ಸಂಪ್ರದಾಯಗಳು ನಡೆಯುತ್ತಿದ್ದವು. ಅಲ್ಲದೆ ಇನ್ನೇನು ಹಾರ ಬದಲಾಯಿಸಿಕೊಂಡು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಗೆಳತಿ ಪುತುಲ್ ನಿಂದ ಕರೆ ಬಂದಿದೆ. ಆದರೆ ಈ ಕರೆಯು ಬೆದರಿಕೆ ಕರೆಯಾಗಿತ್ತು.

    ಹೌದು. ನೀನು ಆಕೆಯನ್ನು ಮದುವೆಯಾದರೆ ನಾನು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದಳು. ಇದನ್ನು ಕೆಳಿದ ವರ ಕೂಡಲೇ ಮದುವೆ ನಿಲ್ಲಿಸಿದ್ದು, ಸ್ಥಳದಿಂದ ತೆರಳಿದ್ದಾನೆ. ವರನ ಈ ನಡೆ ಕಂಡು ಮದುವೆಗೆ ಆಗಮಿಸಿದವರಿಗೆ ಶಾಕ್ ನೀಡಿತ್ತು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ರಾಜೇಶ್ ಸ್ಪಷ್ಟನೆ ನೀಡಿದ್ದಾನೆ. ಛಾಪ್ರಾದಲ್ಲಿ ನಾನು ಹಾಗೂ ಪುತುಲ್ ಆಗಾಗ ಭೇಟಿಯಾಗುತ್ತಿದ್ದೆವು. ನಾನು ಆಕೆಯನ್ನು ಪ್ರೀತಿ(Love) ಸುತ್ತಿದ್ದೆ ಎಂದು ತನ್ನ ಕುಟುಂಬಕ್ಕೆ ಬಹಿರಂಗಪಡಿಸಿದನು. ಇದನ್ನೂ ಓದಿ: ಚುನಾವಣಾ ಅಧಿಕಾರಿಗಳಿಂದ ರಾಜ್ಯಾದ್ಯಂತ 145 ಕೋಟಿ ರೂ. ನಗದು ಜಪ್ತಿ – ಯಾವ ಜಿಲ್ಲೆಯಲ್ಲಿ ಎಷ್ಟು ಸೀಜ್?

    ಇತ್ತ ರಿಂಕು ಜೊತೆ ಮದುವೆ ಫಿಕ್ಸ್ ಆಗುತ್ತಿದ್ದಂತೆಯೇ ಪುತುಲ್ ವಿಚಲಿತಗೊಂಡಿದ್ದಾಳೆ. ಹೀಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು ಎಂದು ಕೂಡ ತಿಳಿಸಿದ್ದಾನೆ. ರಾಜೇಶ್ ಈ ರೀತಿ ಹೇಳುತ್ತಿದ್ದಂತೆಯೇ ಎರಡೂ ಕುಟುಂಬಗಳ ನಡುವೆ ಮಾತಿಗೆ ಮಾತು ಬೆಳೆದಿದೆ. ಜಗಳ ಜೋರಾಗುತ್ತಿದ್ದಂತೆಯೇ ಮದುವೆಗೆ ಆಗಮಿಸಿದ ಕೆಲ ಸಂಬಂಧಿಕರು ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿ ಸ್ಥಳಕ್ಕೆ ಕರೆಸುವ ಮೂಲಕ ಪರಿಸ್ಥಿತಿ ತಿಳಿಗೊಳಿಸಲು ಮನವಿ ಮಾಡಿದ್ದಾರೆ.

    ಅಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಎರಡೂ ಕುಟುಂಬಗಳನ್ನು ಕುಳಿತುಕೊಳ್ಳಿಸಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಾಜೇಶ್, ನನಗೆ ರಿಂಕು ಜೊತೆ ಮದುವೆ ಫಿಕ್ಸ್ ಆಗುವ ಮುಂಚೆಯೇ ಆಕೆಯ ಸಹೋದರಿಯಾಗಿರುವ ಪುತುಲ್ ಪರಿಚಯ ಎಂದು ಹೇಳಿದ್ದಾನೆ. ಮಾತುಕತೆಯ ಬಳಿಕ ರಾಜೇಶ್, ರಿಂಕು ಬದಲು ಪುತುಲ್ ಗೆ ತಾಳಿ ಕಟ್ಟಿದ್ದಾನೆ. ಈ ಮೂಲಕ ಪ್ರಕರಣ ಸುಖಾಂತ್ಯ ಕಂಡಿತ್ತು.

  • ಒಂದು ಸೆಕೆಂಡ್‌ನಲ್ಲಿ ನಿನ್ನನ್ನು ಭಯೋತ್ಪಾದಕ ಅಂತ ಘೋಷಿಸುತ್ತೇನೆ – ಶಿಕ್ಷಕನಿಗೆ ಬಿಹಾರ ಪೊಲೀಸ್ ಬೆದರಿಕೆ

    ಒಂದು ಸೆಕೆಂಡ್‌ನಲ್ಲಿ ನಿನ್ನನ್ನು ಭಯೋತ್ಪಾದಕ ಅಂತ ಘೋಷಿಸುತ್ತೇನೆ – ಶಿಕ್ಷಕನಿಗೆ ಬಿಹಾರ ಪೊಲೀಸ್ ಬೆದರಿಕೆ

    ಪಾಟ್ನಾ: ಒಂದು ಸೆಕೆಂಡ್‌ನಲ್ಲಿ ನಿನ್ನನ್ನು ಭಯೋತ್ಪಾದಕನೆಂದು ಘೋಷಿಸುತ್ತೇನೆ ಎಂದು ಶಿಕ್ಷಕರೊಬ್ಬರಿಗೆ (Teacher) ಬಿಹಾರ (Bihar) ಪೊಲೀಸ್ ಅಧಿಕಾರಿ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ವೈರಲ್ ಆಗಿದೆ.

    ರಾಜಧಾನಿ ಪಾಟ್ನಾದಿಂದ (Patna) ಸುಮಾರು 165 ಕಿ.ಮೀ ದೂರದಲ್ಲಿರುವ ಜಮುಯಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕರೊಬ್ಬರು ವಿವಾದವನ್ನು ಬಗೆಹರಿಸಿಕೊಳ್ಳುವ ಸಲುವಾಗಿ ತಮ್ಮ ಕುಟುಂಬದೊಂದಿಗೆ ಜಮುಯಿ (Jamui) ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಆದರೆ ಮೂರು ದಿನ ತಡವಾಗಿ ಬಂದಿದ್ದರಿಂದ ರಾಜೇಶ್ ಶರಣ್ ಎಂಬ ಪೊಲೀಸ್ ಅಧಿಕಾರಿ ಕೋಪಗೊಂಡು ಶಿಕ್ಷರಿಗೆ ಮತ್ತು ಆತನ ಕುಟುಂಬದವರಿಗೆ ಬೆದರಿಕೆ (Threat) ಹಾಕಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅಲ್ಲದೇ ಪೊಲೀಸ್ ಅಧಿಕಾರಿಯ ಸುತ್ತಲೂ ಜನರಿದ್ದರೂ ಸಹ ಯಾರೂ ಮಧ್ಯಪ್ರವೇಶ ಮಾಡಿ ಮಾತನಾಡಲಿಲ್ಲ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಗುಪ್ತ ಮಾಹಿತಿ ರವಾನೆ – ರಕ್ಷಣಾ ಸಂಸ್ಥೆಯ ವಿಜ್ಞಾನಿ ಅರೆಸ್ಟ್

    ಶಿಕ್ಷಕ ತಡವಾಗಿ ಬರಲು ಕಾರಣ ಏನೆಂದು ಹೇಳಲು ಹೊರಟಾಗ, ಹೆಚ್ಚು ಮಾತನಾಡಬೇಡಿ. ಜನರನ್ನು ಭಯೋತ್ಪಾದಕರು ಎಂದು ಘೋಷಿಸುವುದು ನಮ್ಮ ಕೆಲಸ. ಒಂದು ಸೆಕೆಂಡಿನಲ್ಲಿ ನಿನ್ನನ್ನು ಭಯೋತ್ಪಾದಕ ಎಂದು ಘೋಷಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕುರಿತು ಜಮುಯಿ ಪೊಲೀಸರು ತನಿಖೆಗೆ ಆದೇಶಿಸಿದ್ದಾರೆ. ಇದನ್ನೂ ಓದಿ: ಮಣಿಪುರ ಧಗಧಗ – ಪರಿಸ್ಥಿತಿ ಕೈಮೀರಿದರೆ ಕಂಡಲ್ಲಿ ಗುಂಡು ಹಾರಿಸಿ: ಸರ್ಕಾರ ಆದೇಶ

  • ರೈಲ್ವೆ ನಿಲ್ದಾಣದ ಟಿವಿಯಲ್ಲಿ ಪ್ರಸಾರವಾಯ್ತು ಅಶ್ಲೀಲ ವೀಡಿಯೋ – ಮುಜುಗರಕ್ಕೊಳಗಾದ ಜನ

    ರೈಲ್ವೆ ನಿಲ್ದಾಣದ ಟಿವಿಯಲ್ಲಿ ಪ್ರಸಾರವಾಯ್ತು ಅಶ್ಲೀಲ ವೀಡಿಯೋ – ಮುಜುಗರಕ್ಕೊಳಗಾದ ಜನ

    ಪಾಟ್ನಾ: ರೈಲ್ವೆ ನಿಲ್ದಾಣದಲ್ಲಿ (Railway Station) ಅಳವಡಿಸಲಾಗಿದ್ದ ಟಿವಿ ಪರದೆಯಲ್ಲಿ ಅಶ್ಲೀಲ ವೀಡಿಯೋ (Porn Clip) ಪ್ರಸಾರವಾಗಿ ಸ್ಥಳದಲ್ಲಿ ನೆರೆದಿದ್ದ ನೂರಾರು ಪ್ರಯಾಣಿಕರು ಮುಜುಗರಕ್ಕೀಡಾದ ಪ್ರಸಂಗ ಬಿಹಾರದ (Bihar) ಪಾಟ್ನಾ ರೈಲ್ವೇ ನಿಲ್ದಾಣದಲ್ಲಿ (Patna Railway Station) ನಡೆದಿದೆ.

    ಭಾನುವಾರ ಬೆಳಗ್ಗೆ 9:30ರ ವೇಳೆಗೆ ನಿಲ್ದಾಣದಲ್ಲಿ ಸ್ಥಾಪಿಸಲಾಗಿದ್ದ ಟಿವಿ ಪರದೆ ಮೇಲೆ ಸುಮಾರು 3 ನಿಮಿಷಗಳ ಕಾಲ ಅಶ್ಲೀಲ ವೀಡಿಯೋ ಪ್ರದರ್ಶನವಾಗಿದೆ. ನಿಲ್ದಾಣದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನರಿದ್ದು, ಈ ವೇಳೆ ಜನರು ಮುಜುಗರಕ್ಕೀಡಾಗಿದ್ದಾರೆ.

    ಘಟನೆ ನಡೆದ ತಕ್ಷಣವೇ ಪ್ರಯಾಣಿಕರು ಈ ಬಗ್ಗೆ ಸರ್ಕಾರಿ ರೈಲ್ವೆ ಪೊಲೀಸ್ (GRP) ಹಾಗೂ ರೈಲ್ವೆ ರಕ್ಷಣಾ ಪಡೆಗೆ (RPF) ದೂರು ನೀಡಿದ್ದಾರೆ. ಬಳಿಕ ಪೊಲೀಸರು ಜಾಹೀರಾತು ಪ್ರದರ್ಶನ ಮಾಡುವ ಸಂಸ್ಥೆ ದತ್ತಾ ಕಮ್ಯುನಿಕೇಷನ್ ಬಳಿ ಈ ಬಗ್ಗೆ ವಿಚಾರಿಸಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರ ಮುಂದೆ ಈ ರೀತಿ ಅಶ್ಲೀಲ ವೀಡಿಯೋ ಪ್ರದರ್ಶನ ಮಾಡಿದ್ದಕ್ಕಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಹಾಡುಹಗಲೇ ನಡುರಸ್ತೆಯಲ್ಲಿ ಯುವಕನ ಮೇಲೆ ದಾಳಿ – ಬೆಚ್ಚಿಬಿದ್ದ ಸವಾರರು

    ಬಳಿಕ ರೈಲ್ವೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಜಾಹೀರಾತು ಪ್ರಸಾರ ಮಾಡಲು ನೀಡಲಾಗಿದ್ದ ಗುತ್ತಿಗೆಯನ್ನು ರದ್ದುಗೊಳಿಸಿದ್ದಾರೆ ಮತ್ತು ದತ್ತಾ ಕಮ್ಯುನಿಕೇಷನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

    ಅಶ್ಲೀಲ ವೀಡಿಯೋ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ 10 ರಲ್ಲಿ ಮಾತ್ರವೇ ಪ್ರಸಾರವಾಗಿತ್ತು. ನಿರ್ಧಿಷ್ಟ ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೋ ಪ್ರಸಾರ ಮಾಡಿರುವುದನ್ನು ಗಮನಹರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ರೈಲ್ವೆ ಇಲಾಖೆಯೂ ಪ್ರತ್ಯೇಕ ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಆಪ್ತ ನಾಗೇಶ್ ಮನ್ನೋಳ್ಕರ್‌ಗೆ ಮತ್ತೊಂದು ಶಾಕ್

  • ನಾಯಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕ – ಸಿಸಿಟಿವಿಯಲ್ಲಿ ಸೆರೆ

    ನಾಯಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕ – ಸಿಸಿಟಿವಿಯಲ್ಲಿ ಸೆರೆ

    ಪಾಟ್ನಾ: ಬೀದಿ ನಾಯಿಯ (Dog) ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ ಘಟನೆ ಬಿಹಾರದ (Bihar) ಪಾಟ್ನಾದಲ್ಲಿ (Patna) ನಡೆದಿದೆ.

    ಪಾಟ್ನಾದ ಫುಲ್ವಾರಿ ಶರೀಫ್‍ನ ಫೈಸಲ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಈ ಭೀಕರ ಕೃತ್ಯದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಿಸಿಟಿವಿ ದೃಶ್ಯಾವಳಿಯಲ್ಲಿ ಅನಾಮಿಕನೊಬ್ಬ ಕಾಲೋನಿಯಲ್ಲಿ ನಾಯಿಯೊಂದಿಗೆ ಅಸಹಜ ಕೃತ್ಯವನ್ನು ಬಹಿರಂಗವಾಗಿ ಮಾಡುತ್ತಿರುವುದು ಕಂಡುಬಂದಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಫುಲ್ವಾರಿ ಷರೀಫ್ ಪೊಲೀಸ್ ಠಾಣೆಯಲ್ಲಿ NGOವೊಂದು ದೂರು ನೀಡಿದೆ. ಇದನ್ನೂ ಓದಿ: ಬಿಜೆಪಿಯ ಮಿಷನ್ ಬೆಂಗಳೂರು ಟಾಸ್ಕ್‌ಗೆ ಜೀವ – ಮೋದಿ ಮೆಟ್ರೋ ಅಜೆಂಡಾ ಏನು?

    ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪಾಟ್ನಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ದಾಖಲೆಯೊಂದಿಗೆ ದೂರು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ರೆಡ್ ಸಿಗ್ನಲ್ – ಕೋಲಾರ ಕಾಂಗ್ರೆಸ್‌ನಲ್ಲಿ ಮತ್ತೆ ಆರಂಭವಾಯ್ತು ಗುಂಪುಗಾರಿಕೆ