Tag: patna

  • ಮುಸ್ಲಿಮರಿಗೆ ಸಂಪೂರ್ಣ ಮೀಸಲಾತಿ ಸಿಗಬೇಕು: ಲಾಲೂ ಪ್ರಸಾದ್ ಯಾದವ್

    ಮುಸ್ಲಿಮರಿಗೆ ಸಂಪೂರ್ಣ ಮೀಸಲಾತಿ ಸಿಗಬೇಕು: ಲಾಲೂ ಪ್ರಸಾದ್ ಯಾದವ್

    – ಆರ್‍ಜೆಡಿ ಮುಖ್ಯಸ್ಥನ ವಿರುದ್ಧ ಮೋದಿ ಕಿಡಿ

    ಪಾಟ್ನಾ: ಮುಸ್ಲಿಮ್ ಮೀಸಲಾತಿ ರಾಜಕೀಯ ಜೋರಾಗಿದೆ. ಎಲ್ಲಾ ಮೀಸಲಾತಿಯನ್ನು ಮುಸ್ಲಿಮರಿಗೆ ಕೊಡ್ಬೇಕು ಎಂದು ಆರ್‍ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಹೇಳಿದ್ದಾರೆ ಎನ್ನಲಾದ ವೀಡಿಯೋ ವೈರಲ್ ಆಗಿದೆ. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.

    ಪ್ರಧಾನಿ ಮೋದಿಯವರು (Narendra Modi) ಐಎನ್‍ಡಿಐಎ ಒಕ್ಕೂಟದ ನಾಯಕರೊಬ್ರು ಎಲ್ಲಾ ಮೀಸಲಾತಿ ಮುಸ್ಲಿಮರಿಗೆ ಸಿಗಬೇಕು ಎಂದಿದ್ದಾರೆ. ಇಂತಹ ಹೇಳಿಕೆ ನೀಡಿದ್ರೂ ಕಾಂಗ್ರೆಸ್ ಸುಮ್ಮನಿದೆ ಅಂದ್ರೆ ಆ ಒಕ್ಕೂಟದ ಆಶಯ ಎಸ್‍ಸಿ-ಎಸ್‍ಟಿ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡುವುದೇ ಆಗಿದೆ ಅಂತಲೇ ಅರ್ಥ ಎಂದು ಕುಟುಕಿದ್ದಾರೆ. ಇದನ್ನೂ ಓದಿ: NDAಗೆ 400ಕ್ಕೂ ಹೆಚ್ಚು ಸೀಟುಗಳು ಯಾಕೆ ಬೇಕು..?: ಪ್ರಚಾರದಲ್ಲಿ ಮೋದಿ ರಿವೀಲ್‌

    ಈ ನಡುವೆ ಕರ್ನಾಟಕ ಬಿಜೆಪಿ ಹಂಚಿಕೊಂಡಿದ್ದ ಮೀಸಲಾತಿ ಕುರಿತ ವೀಡಿಯೋವನ್ನು ತೆಗೆದು ಹಾಕುವಂತೆ ಟ್ವಿಟ್ಟರ್‍ಗೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಇದೇ ವೇಳೆ ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಿದ ಉಗ್ರರಿಗೆ ಕಾಂಗ್ರೆಸ್ ಕ್ಲೀನ್‍ಚಿಟ್ ಕೊಡ್ತಿದೆ ಅಂತಾನೂ ಮೋದಿ ಆರೋಪಿಸಿದ್ದಾರೆ. ಇದಕ್ಕೆ ಸೋನಿಯಾ ಗಾಂಧಿ ಪ್ರತಿಕ್ರಿಯಿಸಿ, ದೇಶದಲ್ಲಿ ರಾಜಕೀಯ ಲಾಭಕ್ಕಾಗಿ ಜಾತಿಗಳ ಮಧ್ಯೆ ವೈಷಮ್ಯ ಮೂಡಿಸಲಾಗ್ತಿದೆ ಅಂತ ಕಳವಳ ವ್ಯಕ್ತಪಡಿಸಿದ್ದಾರೆ.

  • ಪಾಟ್ನಾ ಜಂಕ್ಷನ್‌ ಬಳಿಯ ಹೋಟೆಲ್‌ಗಳಲ್ಲಿ ಅಗ್ನಿ ಅವಘಡ – 6 ಮಂದಿ ಸಾವು

    ಪಾಟ್ನಾ ಜಂಕ್ಷನ್‌ ಬಳಿಯ ಹೋಟೆಲ್‌ಗಳಲ್ಲಿ ಅಗ್ನಿ ಅವಘಡ – 6 ಮಂದಿ ಸಾವು

    ಪಾಟ್ನಾ: ಇಲ್ಲಿನ ರೈಲ್ವೆ ನಿಲ್ದಾಣದ ಬಳಿಯಿದ್ದ ಹೋಟೆಲ್‌ಗಳಲ್ಲಿ ಭಾರಿ ಪ್ರಮಾಣದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಹತ್ತಾರು ಜನರು ಗಾಯಗೊಂಡಿದ್ದಾರೆ.

    ಪಾಲ್ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಅದನ್ನು ನಂದಿಸುವಷ್ಟರಲ್ಲಿ ಪಕ್ಕದ ಕಟ್ಟಡಗಳಿಗೆ ಹರಡಿತು. ಹೋಟೆಲ್ ಪಾಲ್ ಮತ್ತು ಪಕ್ಕದ ಅಮೃತ್ ಹೋಟೆಲ್‌ನಲ್ಲಿ ಬೆಂಕಿ ಅವಘಡದಿಂದ ಸಾವಿಗೀಡಾದವರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸನಾತನ ಧರ್ಮ ಅಪಮಾನಿಸುವವರ ವಿರುದ್ಧ ನನ್ನ ಹೋರಾಟ – ಯೂಟ್ಯೂಬರ್‌ ಮನೀಶ್‌ ಕಶ್ಯಪ್‌ ಬಿಜೆಪಿ ಸೇರ್ಪಡೆ

    ಬೆಂಕಿಯಿಂದ ರಕ್ಷಿಸಿದ ಜನರನ್ನು ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ. 100% ಮತ್ತು 95% ಸುಟ್ಟ ಗಾಯಗಳೊಂದಿಗೆ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

    ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರನ್ನು, ಪೂನಂ ದೇವಿ, ಆಮ್ಲೇಶ್ ತಿವಾರಿ, ಗೋರಖ್ ಕುಮಾರ್, ಅನುರಾಗ್ ಸಿಂಗ್, ಜಿತೇಂದ್ರ ಕುಮಾರ್, ರೋಹಿತ್ ಕುಮಾರ್, ಅರವಿಂದ್ ತಿವಾರಿ ಎಂದು ಗುರುತಿಸಲಾಗಿದೆ.

    ಮೇಲ್ಛಾವಣಿಯಲ್ಲಿ ಸಿಲುಕಿದ್ದ 45 ಕ್ಕೂ ಹೆಚ್ಚು ಜನರನ್ನು ಅಗ್ನಿಶಾಮಕ ದಳದ ತಂಡಗಳು ರಕ್ಷಿಸಿದ್ದಾರೆ. ಎಲ್ಲರನ್ನೂ ಚಿಕಿತ್ಸೆಗಾಗಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಪಿಎಂಸಿಹೆಚ್) ದಾಖಲಿಸಲಾಗಿದೆ ಎಂದು ಡೈರೆಕ್ಟರ್ ಜನರಲ್ ಕಮ್ ಕಮಾಂಡೆಂಟ್, ಹೋಮ್ ಗಾರ್ಡ್ ಮತ್ತು ಅಗ್ನಿಶಾಮಕ ಸೇವೆಗಳ ಶೋಭಾ ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ನೌಕರರಿಂದ ಬಿಜೆಪಿಗೆ ಒಂದೇ ಒಂದು ವೋಟು ಸಹ ಬರಲ್ಲ: ದೀದಿ ಕೆಂಡ

  • ಬಿಹಾರದಲ್ಲಿ ಜೆಡಿಯು ನಾಯಕನಿಗೆ ಗುಂಡಿಕ್ಕಿ ಹತ್ಯೆ

    ಬಿಹಾರದಲ್ಲಿ ಜೆಡಿಯು ನಾಯಕನಿಗೆ ಗುಂಡಿಕ್ಕಿ ಹತ್ಯೆ

    ಪಾಟ್ನಾ: ನಿತೀಶ್ ಕುಮಾರ್ ನೇತೃತ್ವದ ಜನತಾ ದಳ ಯುನೈಟೆಡ್ (ಜೆಡಿಯು) ಯುವ ಮುಖಂಡನನ್ನು ಗುಂಡು ಹಾರಿಸಿ ಹತ್ಯೆಗೈದ ಘಟನೆ ಪಾಟ್ನಾದಲ್ಲಿ ನಡೆದಿದೆ.

    ಗುಂಡಿನ ದಾಳಿಯಲ್ಲಿ ಮೃತಪಟ್ಟ ಜೆಡಿಯು ನಾಯಕನನ್ನು ಸೌರಭ್ ಕುಮಾರ್ ಎಂದು ಗುರುತಿಸಲಾಗಿದೆ. ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಬೈಕ್‍ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಈ ವೇಳೆ ಸೌರಭ್ ಅವರ ತಲೆಗೆ ಎರಡು ಗುಂಡುಗಳು ತಗಲಿವೆ. ದಾಳಿಯಲ್ಲಿ ಅವರ ಜೊತೆಗಿದ್ದ ಮುನ್ಮುನ್ ಎಂಬವರಿಗೂ ಮೂರು ಗುಂಡುಗಳು ತಗುಲಿದ್ದು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ನಟಿ ಅಮೂಲ್ಯ ಮಾವ, ಬಿಜೆಪಿ ಮುಖಂಡ ರಾಮಚಂದ್ರ ಮನೆ ಮೇಲೆ ಚುನಾವಣಾಧಿಕಾರಿಗಳ ದಾಳಿ

    ದುಷ್ಕರ್ಮಿಗಳು ಸೌರಭ್ ಅವರ ಮೇಲೆ ಗುಂಡು ಹಾರಿಸಿದ ಬಳಿಕ ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಈ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಮತ್ತೋರ್ವ ಗಾಯಾಳುವಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

    ಹತ್ಯೆ ಖಂಡಿಸಿ ಆಕ್ರೋಶಗೊಂಡ ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಮಾಹಿತಿ ಮೇರೆಗೆ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾ ಭಾರತಿ ಸಂತ್ರಸ್ತ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.

    ಘಟನೆ ಬಳಿಕ ಪಾಟ್ನಾ ಪೆÇಲೀಸರ ವಿಶೇಷ ತಂಡ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದೆ. ಇದನ್ನೂ ಓದಿ: ಮಲೇರಿಯಾದಿಂದ ಮಕ್ಕಳನ್ನು ರಕ್ಷಿಸಲು ಈ ಮುನ್ನೆಚ್ಚರಿಕೆಗಳಿರಲಿ

  • ಮಹಾಘಟಬಂಧನ್‌ನಿಂದ ಆಚೆ ಬಂದಿದ್ದೇನೆ – ನಿತೀಶ್ ಕುಮಾರ್

    ಮಹಾಘಟಬಂಧನ್‌ನಿಂದ ಆಚೆ ಬಂದಿದ್ದೇನೆ – ನಿತೀಶ್ ಕುಮಾರ್

    – ಬಿಹಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ಬಳಿಕ ಫಸ್ಟ್ ರಿಯಾಕ್ಷನ್

    ಪಾಟ್ನಾ: ನಮ್ಮ ಪಕ್ಷದ ನಾಯಕರ ಅಪೇಕ್ಷೆಯಂತೆ ರಾಜೀನಾಮೆ (Resignation) ಸಲ್ಲಿಸಿದ್ದೇನೆ ಎಂದು ಜೆಡಿಯು ಪಕ್ಷದ ಮುಖ್ಯಸ್ಥ ಹಾಗೂ ಬಿಹಾರದ ನಿರ್ಗಮಿತ ಸಿಎಂ ನಿತೀಶ್ ಕುಮಾರ್ (Nitish Kumar) ಹೇಳಿದ್ದಾರೆ.

    ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ ಬಳಿಕ ಬಿಹಾರದ (Bihar) ಪಾಟ್ನಾದಲ್ಲಿ (Patna) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. INDIA ಒಕ್ಕೂಟದಿಂದಲೂ ಹೊರಗೆ ಬಂದಿದ್ದೇನೆ. ಮಹಾಘಟಬಂಧನ್‌ನಿಂದಲೂ ಆಚೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಕ್ಷಕ್ಕೆ ದುಡಿದ ಎಲ್ಲಾ ಶಾಸಕರು, ಕಾರ್ಯಕರ್ತರಿಗೂ ಅಧಿಕಾರ – ಡಿಕೆ ಶಿವಕುಮಾರ್

    ಇಂಡಿಯಾ ಒಕ್ಕೂಟದಿಂದ ಹೊರಬಂದು ನಿತೀಶ್ ಕುಮಾರ್ ಎನ್‌ಡಿಎ (NDA) ತೆಕ್ಕೆಗೆ ಮರಳಿದ್ದಾರೆ. ಇನ್ನುಮುಂದೆ ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರ ಆಡಳಿತ ನಡೆಸಲಿದ್ದು, ಇಂದು ಸಂಜೆ ನಿತೀಶ್ ಕುಮಾರ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು 543 ಕ್ಷೇತ್ರಗಳಲ್ಲೂ ಗೆಲ್ಲಲಿ – ಡಿಕೆ ಶಿವಕುಮಾರ್

    ಭಾನುವಾರ (ಜ.28) ಬೆಳಗ್ಗೆ ರಾಜಭವನಕ್ಕೆ ತೆರಳಿದ್ದ ನಿತೀಶ್ ಕುಮಾರ್, ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಮೂಲಕ ರಾಷ್ಟ್ರೀಯ ಜನತಾ ದಳ ಜೊತೆಗಿನ ಮೈತ್ರಿಯನ್ನು ಕೊನೆಗೊಳಿಸಿದ್ದಾರೆ.  ಇದನ್ನೂ ಓದಿ: Breaking: ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್‌ ಕುಮಾರ್‌ ರಾಜೀನಾಮೆ – ಮೈತ್ರಿ ಸರ್ಕಾರ ಪತನ

  • ರೀಲ್ಸ್ ಮಾಡುವುದನ್ನು ವಿರೋಧಿಸಿದ ಗಂಡನನ್ನೇ ಮುಗಿಸಿದ ಹೆಂಡತಿ

    ರೀಲ್ಸ್ ಮಾಡುವುದನ್ನು ವಿರೋಧಿಸಿದ ಗಂಡನನ್ನೇ ಮುಗಿಸಿದ ಹೆಂಡತಿ

    ಪಾಟ್ನಾ: ಇನ್ಸ್ಟಾಗ್ರಾಂನಲ್ಲಿ (Instagram) ರೀಲ್ಸ್ (Reels) ಮಾಡುವುದನ್ನು ವಿರೋಧಿಸಿದ ಗಂಡನನ್ನು (Husband) ಪತ್ನಿ (Wife) ತನ್ನ ಅಪ್ಪ-ಅಮ್ಮನೊಂದಿಗೆ ಸೇರಿ ಕೊಲೆ ಮಾಡಿರುವ ಘಟನೆ ಬಿಹಾರದ (Bihar) ಬೇಗುಸರಾಯ್‌ನಲ್ಲಿ (Begusarai) ನಡೆದಿದೆ.

    ಭಾನುವಾರ ರಾತ್ರಿ 9 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಮೃತರನ್ನು ಮಹೇಶ್ವರ್ ಕುಮಾರ್ ಎಂದು ಗುರುತಿಸಲಾಗಿದೆ. ಇವರು ಕೋಲ್ಕತ್ತಾದಲ್ಲಿ (Kolkata) ಕೂಲಿ ಕೆಲಸ ಮಾಡುತ್ತಿದ್ದು, ಸಮಸ್ತಿಪುರ ಜಿಲ್ಲೆಯ ನರ್ಹಾನ್ ಗ್ರಾಮದ ನಿವಾಸಿಯಾಗಿದ್ದರು. ಪತ್ನಿ ರಾಣಿ ಕುಮಾರಿಗೆ ಇನ್ಸ್ಟಾದಲ್ಲಿ ರೀಲ್ಸ್ ಮಾಡುವ ಗೀಳಿತ್ತು. ಆದರೆ ಪತಿಗೆ ಅದು ಇಷ್ಟವಿಲ್ಲದಿದ್ದರಿಂದ ಅದನ್ನು ವಿರೋಧಿಸಿದ್ದರು. ಇದರಿಂದ ಗಂಡನ ಮೇಲೆ ಕೋಪಗೊಂಡ ಹೆಂಡತಿ ತನ್ನ ಅಪ್ಪ-ಅಮ್ಮನ ಜೊತೆಗೂಡಿ ಆತನನ್ನು ಹತ್ಯೆ ಮಾಡಿದ್ದಾಳೆ. ಇದನ್ನೂ ಓದಿ: ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ – ಸ್ಥಳದಲ್ಲೇ ಇಬ್ಬರು ಸಾವು

    ಮಹೇಶ್ವರ್ ಕೆಲ ದಿನಗಳ ಹಿಂದೆ ಕೋಲ್ಕತ್ತಾದಿಂದ ತನ್ನ ಗ್ರಾಮಕ್ಕೆ ತೆರಳಿದ್ದರು. ಫಫೌತ್ ಗ್ರಾಮದವರಾದ ರಾಣಿ ಕುಮಾರಿ ಸುಮಾರು 7 ವರ್ಷಗಳ ಹಿಂದೆ ಮಹೇಶ್ವರ್ ಅವರನ್ನು ವಿವಾಹವಾಗಿದ್ದರು. ಮಹೇಶ್ವರ್ ಕೆಲಸಕ್ಕೆ ತೆರಳುವ ಮೊದಲು ಫಫೌತ್ ಗ್ರಾಮದಲ್ಲಿರುವ ತನ್ನ ಅತ್ತೆಯ ಮನೆಗೆ ಹೋಗಿದ್ದರು ಎಂದು ತಿಳಿದುಬಂದಿದೆ. ಇನ್ಸ್ಟಾಗ್ರಾಂ ರೀಲ್ಸ್ ವಿಚಾರವಾಗಿ ಮಹೇಶ್ವರ್ ಮತ್ತು ರಾಣಿ ಕುಮಾರಿ ನಡುವೆ ವಾಗ್ವಾದ ನಡೆದಿದ್ದು, ಇವರಿಬ್ಬರ ಜಗಳ ವಿಕೋಪಕ್ಕೆ ತಿರುಗಿ ಪತ್ನಿ ತನ್ನ ಅಪ್ಪ-ಅಮ್ಮನ ಸಹಾಯದಿಂದ ಗಂಡನ ಕತ್ತು ಹಿಸುಕಿ ಸಾಯಿಸಿದ್ದಾಳೆ. ರಾತ್ರಿಯ ವೇಳೆ ಮೃತನ ಸಹೋದರ ಕೋಲ್ಕತ್ತಾದಿಂದ ಕರೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಕರೆ ಮಾಡಿದ ವೇಳೆ ಬೇರೊಬ್ಬರು ಫೋನ್ ಸ್ವೀಕರಿಸಿದ್ದರಿಂದ ಅನುಮಾನಗೊಂಡ ಸಹೋದರ ತನ್ನ ತಂದೆಗೆ ಕರೆ ಮಾಡಿ ಅಲ್ಲಿ ಹೋಗಿ ನೋಡುವಂತೆ ಕೇಳಿಕೊಂಡಿದ್ದಾನೆ. ಇದನ್ನೂ ಓದಿ:ಐವರ ಅಸ್ಥಿಪಂಜರ ಪತ್ತೆ ಕೇಸ್‌ – ಮರಣೋತ್ತರ ಪರೀಕ್ಷಾ ವರದಿಯಲ್ಲೂ ಪತ್ತೆಯಾಗದ ಸತ್ಯಾಂಶ

    ತಂದೆ ಹೋಗಿ ನೋಡಿದಾಗ ಮಗ ಸತ್ತು ಬಿದ್ದಿರುವುದು ಕಂಡುಬಂದಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೃತದೇಹವನ್ನು ತಮ್ಮ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಹೇಶ್ವರ್ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಪೊಲೀಸರು ಮೃತರ ಪತ್ನಿಯನ್ನು ಬಂಧಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಯಶ್ ಬರ್ತ್‍ಡೇಗೆ ಬೃಹತ್ ಕಟೌಟ್ ನಿಲ್ಲಿಸುವಾಗ ವಿದ್ಯುತ್ ಸ್ಪರ್ಶ – ಮೂವರ ದುರ್ಮರಣ


  • JDU ಮುಖ್ಯಸ್ಥರನ್ನು ಕಿತ್ತೆಸೆದು ತಾವೇ ಹುದ್ದೆ ಅಲಂಕರಿಸುತ್ತಾರಾ ಬಿಹಾರ ಸಿಎಂ?

    JDU ಮುಖ್ಯಸ್ಥರನ್ನು ಕಿತ್ತೆಸೆದು ತಾವೇ ಹುದ್ದೆ ಅಲಂಕರಿಸುತ್ತಾರಾ ಬಿಹಾರ ಸಿಎಂ?

    ಪಾಟ್ನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜನತಾ ದಳದ (JDU) ಮುಖ್ಯಸ್ಥನ ಸ್ಥಾನದಿಂದ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ (Laln Singh) ಅವರನ್ನು ತೆಗೆದುಹಾಕುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

    ನಿತೀಶ್ ಕುಮಾರ್ ಅವರೇ ಪಕ್ಷದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ಈ ಕುರಿತು ಡಿಸೆಂಬರ್ 29ರಂದು ದೆಹಲಿಯಲ್ಲಿ ನಡೆಯಲಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

    ಲಾಲನ್ ಸಿಂಗ್ ಅವರು ಕಾರ್ಯನಿರ್ವಹಿಸುತ್ತಿರುವ ರೀತಿ ಮತ್ತು ವಿಶೇಷವಾಗಿ ಆರ್‍ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (Tejaswi Yadav) ಅವರೊಂದಿಗಿನ ಸಾಮೀಪ್ಯದಿಂದ ನಿತೀಶ್ ಕುಮಾರ್ (Nitish Kumar) ಅಸಮಾಧಾನಗೊಂಡಿದ್ದಾರೆ. ಅಲ್ಲದೆ ತಮ್ಮ ರಾಷ್ಟ್ರೀಯ ಮಹತ್ವಾಕಾಂಕ್ಷೆಗಳನ್ನು ಈಡೇರಿಸಲು ಇಂಡಿಯಾ ಒಕ್ಕೂಟದೊಂದಿಗೆ (I.N.D.I.A) ಉತ್ತಮವಾಗಿ ಸಹಕರಿಸುವಲ್ಲಿಯೂ ಲಾಲನ್ ಸಿಂಗ್ ವಿಫಲರಾಗಿದ್ದಾರೆ ಎಂದು ನಿತೀಶ್ ಅಸಮಾಧಾನಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಒಂದು ವೇಳೆ ಪಕ್ಷದ ಮುಖ್ಯಸ್ಥನ ಸ್ಥಾನದಿಂದ ತೆಗೆದುಹಾಕಲ್ಪಟ್ಟರೆ, ಲಾಲನ್ ಸಿಂಗ್ ಅವರು ನಿತೀಶ್ ಕುಮಾರ್ ಅವರಿಗೆ ಅತ್ಯಂತ ನಿಕಟವಾಗಿದ್ದರೂ, ಜಾರ್ಜ್ ಫರ್ನಾಂಡಿಸ್, ಶರದ್ ಯಾದವ್, ಆರ್ ಸಿಪಿ ಸಿಂಗ್, ಉಪೇಂದ್ರ ಕುಶ್ವಾಹ ಮತ್ತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರಂತಹ ಪಕ್ಷದ ಇತರ ಹಿರಿಯ ನಾಯಕರೊಂದಿಗೆ ಸೇರುತ್ತಾರೆ ಎನ್ನಲಾಗಿದೆ.

    2024 ರ ಲೋಕಸಭೆ ಚುನಾವಣೆಯಲ್ಲಿ ಮುಂಗರ್ ಕ್ಷೇತ್ರದಿಂದ (Munger Constituency) ಮತ್ತೊಮ್ಮೆ ಸ್ಪರ್ಧಿಸಲು ಲಾಲನ್ ಸಿಂಗ್ ಉತ್ಸುಕರಾಗಿದ್ದಾರೆ. ಇವರು ಆರ್‌ಜೆಡಿ ಪಕ್ಷದಿಂದ ಟಿಕೆಟ್‌ನಲ್ಲಿ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂಬುದಾಗಿ ವರದಿಯಾಗಿದೆ.

  • ಬಿಹಾರದಲ್ಲಿ ಛಾತ್ ಹಬ್ಬದ ವೇಳೆ 13 ಜನ ನೀರು ಪಾಲು

    ಬಿಹಾರದಲ್ಲಿ ಛಾತ್ ಹಬ್ಬದ ವೇಳೆ 13 ಜನ ನೀರು ಪಾಲು

    ಪಾಟ್ನಾ: ಬಿಹಾರದಲ್ಲಿ (Bihar) ಛಾತ್ ಹಬ್ಬದ (Chhath Festivities) ಆಚರಣೆ ವೇಳೆ ವಿವಿಧ ಜಲ ಮೂಲಗಳಲ್ಲಿ ಮುಳುಗಿ ಒಟ್ಟು 13 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪಾಟ್ನಾ (Patna), ಖಗಾರಿಯಾ, ಸಮಸ್ತಿಪುರ್, ಸಹರ್ಸಾ, ದಬರ್ಂಗಾ, ಮುಂಗೇರ್ ಮತ್ತು ಬೆಸುಸರೈಗಳಲ್ಲಿ ಈ ಸಾವುಗಳು ವರದಿಯಾಗಿವೆ. ಪಾಟ್ನಾ ಜಿಲ್ಲೆಯಲ್ಲಿ ಬ್ರಹ್ಮಪುರ ಪ್ರದೇಶದಲ್ಲಿ ಮೂವರು ವ್ಯಕ್ತಿಗಳು ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಖಗಾರಿಯಾದಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಚೌತಮ್ ಮತ್ತು ಪರ್ಬಟಾ ಪ್ರದೇಶಗಳಲ್ಲಿ ಮೂವರು ಮುಳುಗಿದ್ದಾರೆ. ಅಲ್ಲದೆ, ದಬರ್ಂಗಾ ಮತ್ತು ಸಮಸ್ತಿಪುರ್ ಜಿಲ್ಲೆಗಳಲ್ಲಿ ತಲಾ ಇಬ್ಬರು ಮತ್ತು ಬೇಗುಸರೈ, ಮುಂಗರ್ ಮತ್ತು ಸಹರ್ಸಾ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಶೀಘ್ರವೇ ಹೆಚ್‌ಡಿಕೆ ನಿರ್ಮಾಣದ ಪೆನ್ ಡ್ರೈವ್ ಬ್ರದರ್ ಚಿತ್ರ ಬಿಡುಗಡೆ – ಪೋಸ್ಟರ್‌ ರಿಲೀಸ್‌

    ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಅವರ ಗುರುತು ಪತ್ತೆಗೆ ಅಧಿಕಾರಿಗಳು ಹಾಗೂ ಪೊಲೀಸರು (Police) ಕ್ರಮ ಕೈಗೊಂಡಿದ್ದಾರೆ. ಕಳೆದ ಬಾರಿ ಛಾತ್ ಹಬ್ಬದ ವೇಳೆ ಬಿಹಾರದಾದ್ಯಂತ ಸುಮಾರು 53 ಜನ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದರು. ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಇಬ್ಬರು ಸೇನಾ ಸಿಬ್ಬಂದಿ ಹುತಾತ್ಮ

  • ಭಾರತದ ಗೆಲುವಿಗಾಗಿ ಇಶನ್ ಕಿಶನ್ ಕುಟುಂಬಸ್ಥರಿಂದ ವಿಶೇಷ ಪೂಜೆ

    ಭಾರತದ ಗೆಲುವಿಗಾಗಿ ಇಶನ್ ಕಿಶನ್ ಕುಟುಂಬಸ್ಥರಿಂದ ವಿಶೇಷ ಪೂಜೆ

    ಪಾಟ್ನಾ: ಇಂದು ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium Ahemadabad) ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ (INDVsAUS) ನಡುವೆ ತೀವ್ರ ಹಣಾಹಣಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರತದ ಗೆಲುವಿಗಾಗಿ ಪೂಜೆ-ಪುನಸ್ಕಾರಗಳನ್ನು ನಡೆಸಲಾಗುತ್ತದೆ. ಅಂತೆಯೇ ಟೀಂ ಇಂಡಿಯಾದ ಎಡಗೈ ಓಪನಿಂಗ್ ಬ್ಯಾಟ್ಸ್ ಮನ್ ಹಾಗೂ ವಿಕೆಟ್ ಕೀಪರ್ ಇಶನ್ ಕಿಶನ್ ಕುಟುಂಬಸ್ಥರು ದೇವರ ಮೊರೆ ಹೋಗಿದ್ದಾರೆ.

    ಭಾರತದ ಗೆಲುವಿಗಾಗಿ ಇಶನ್ ಕಿಶನ್ (Ishan Kishan) ಕುಟುಂಬಸ್ಥರು ಪಾಟ್ನಾದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಛತ್ ಪೂಜಾ ದಿನದಂದೇ ವಿಶ್ವಕಪ್ ಪಂದ್ಯ ನಡೆಯುತ್ತಿರುವುದು ಶುಭ ಲಕ್ಷಣವಾಗಿದೆ ಎಂದು ಕಿಶನ್ ತಾಯಿ ಸುಚಿತ್ರಾ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: 13 ವಿಶ್ವಕಪ್‍ನಲ್ಲಿ 8ನೇ ಬಾರಿ ಫೈನಲ್- 5 ಬಾರಿ ಚಾಂಪಿಯನ್ ಆಗಿರೋ ಆಸ್ಟ್ರೇಲಿಯಾ

    ಟೀಂ ಇಂಡಿಯಾವು ಏಕದಿನ ವಿಶ್ವಕಪ್ 2023ರ ಪ್ರತಿಯೊಂದು ಪಂದ್ಯದಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಫೈನಲ್‍ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಇದೀಗ ಇಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಎದುರಾಳಿ ತಂಡ ಆಸ್ಟ್ರೇಲಿಯಾದ ವಿರುದ್ಧ ಸೆಣಸಾಡಲಿದೆ. ಇದನ್ನೂ ಓದಿ: ಶಮಿ ಕೈಯಲ್ಲಿ ಬೆಂಕಿ ಚೆಂಡು- ಕಾಂಗರೂಗಳ ನಿದ್ದೆಗೆಡಿಸಿರೋ ಸ್ವಿಂಗ್ ಮಾಸ್ಟರ್

    ಒಟ್ಟಿನಲ್ಲಿ ವಿಶ್ವಕಪ್ (World Cup 2023) ಮಹಾಸಮರಕ್ಕೆ ಅಹಮದಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂ ಸಾಕ್ಷಿಯಾಗುತ್ತಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಪಂದ್ಯ ನಡೆಯಲಿದ್ದು, ಪಂದ್ಯಕ್ಕೂ ಮುನ್ನ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi), ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸೆ (Anthony Albanese), ಬಾಲಿವುಡ್ ತಾರೆಯರು, ಸಚಿನ್ ತೆಂಡೂಲ್ಕರ್ (Sachin Tendulkar) ಸೇರಿದಂತೆ ವಿಶ್ವಕಪ್ ಗೆದ್ದ ತಂಡದ ಮಾಜಿ ನಾಯಕರು ಉಪಸ್ಥಿತಿ ಇರಲಿದ್ದಾರೆ. ಇದಲ್ಲದೆ ಏರ್‍ಶೋ, ಲೇಸರ್ ಶೋ, ಸಂಗೀತ, ನೃತ್ಯ ವೈಭವ ವಿಶ್ವಕಪ್ ಫೈನಲ್ ಮ್ಯಾಚ್‍ನ ಕಿಕ್ಕನ್ನ ಹೆಚ್ಚಿಸಲಿದೆ.

  • ಬಿಹಾರದ ಜಾತಿ ಆಧಾರಿತ ಸಮೀಕ್ಷೆ ವರದಿ ಪ್ರಕಟ

    ಬಿಹಾರದ ಜಾತಿ ಆಧಾರಿತ ಸಮೀಕ್ಷೆ ವರದಿ ಪ್ರಕಟ

    ಪಾಟ್ನಾ: ಜಾತಿ ಆಧಾರಿತ ಸಮೀಕ್ಷೆ ನಡೆಸುತ್ತಿದ್ದ ಬಿಹಾರ ಸರ್ಕಾರ ಸೋಮವಾರ ಅಂತಿಮ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಸಮೀಕ್ಷೆಯ ವರದಿಯ ಪ್ರಕಾರ, ಒಟ್ಟು 13,07,25,310 ಜನಸಂಖ್ಯೆ ಇದ್ದು, ಇತರ ಹಿಂದುಳಿದ ವರ್ಗ (OBC) ಮತ್ತು ಅತ್ಯಂತ ಹಿಂದುಳಿದ ವರ್ಗಗಳ (EBC) ವರ್ಗದಲ್ಲಿ 63 ಪ್ರತಿಶತದಷ್ಟು ಜನರನ್ನು ಹೊಂದಿದೆ.

    ಸರ್ಕಾರದ ಮಾಹಿತಿ ಪ್ರಕಾರ, ಒಟ್ಟು ಜನಸಂಖ್ಯೆಯಲ್ಲಿ 6,41,31,992 ಪುರುಷರು, 6,11,38,460 ಮಹಿಳೆಯರು, 2,836 ತೃತಿಯ ಲಿಂಗಿಗಳಿದ್ದಾರೆ. ಇದರಲ್ಲಿ 19ರಷ್ಟು ಜನರನ್ನು ಪರಿಶಿಷ್ಟ ಜಾತಿ, 1.68% ಪರಿಶಿಷ್ಟ ಪಂಗಂಡ, 27.12% ಒಬಿಸಿ, 36.01% ಇಬಿಸಿ, 15.52% ಮೀಸಲಾತಿ ವ್ಯಾಪ್ತಿಗೆ ಬಾರದ ಜನರಿದ್ದಾರೆ. ಈ ಸಮೀಕ್ಷೆಗೆ ಸರ್ಕಾರ 500 ಕೋಟಿ.ರೂ ಖರ್ಚು ಮಾಡಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಕೋಮು ಸಂಘರ್ಷ – ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳದಿದ್ದರೆ ಕಿಡಿ ರಾಜ್ಯಕ್ಕೆ ಹಬ್ಬಬಹುದು: ವಿಜಯೇಂದ್ರ

    ಸಮೀಕ್ಷೆ ನಡೆಸಿದ ತಂಡಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿನಂದಿಸಿದರು. ಇಂದು ಗಾಂಧಿ ಜಯಂತಿಯ ಶುಭ ಸಂದರ್ಭದಲ್ಲಿ ಬಿಹಾರದಲ್ಲಿ ನಡೆಸಿದ ಜಾತಿ ಆಧಾರಿತ ಜನಗಣತಿಯ ಡೇಟಾವನ್ನು ಪ್ರಕಟಿಸಲಾಗಿದೆ. ಜಾತಿವಾರು ಗಣತಿ ಕಾರ್ಯದಲ್ಲಿ ತೊಡಗಿರುವ ಇಡೀ ತಂಡಕ್ಕೆ ಅಭಿನಂದನೆಗಳು. ಜಾತಿವಾರು ಲೆಕ್ಕಾಚಾರದ ಪ್ರಸ್ತಾವನೆಯನ್ನು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕಗ್ಗತ್ತಲ ಮಳೆಯಲ್ಲಿ ನದಿಯನ್ನು ರಸ್ತೆ ಎಂದು ತೋರಿಸಿದ ಜಿಪಿಎಸ್ – ಕಾರು ಮುಳುಗಿ ಕೇರಳದ ಇಬ್ಬರು ವೈದ್ಯರು ಸಾವು

    ಆಗಸ್ಟ್‌ನಲ್ಲಿ ಪಾಟ್ನಾ ಹೈಕೋರ್ಟ್ ಬಿಹಾರದ ಜಾತಿ ಸಮೀಕ್ಷೆಯನ್ನು ಎತ್ತಿ ಹಿಡಿದಿತ್ತು. ಎರಡು ಹಂತದಲ್ಲಿ ಸಮೀಕ್ಷೆ ಆರಂಭಿಸಲಾಗಿತ್ತು. ಮೊದಲ ಹಂತದಲ್ಲಿ ಮನೆಗಳ ಎಣಿಕೆಯ ವ್ಯಾಯಾಮವನ್ನು ಈ ವರ್ಷದ ಜನವರಿಯಲ್ಲಿ ಬಿಹಾರ ಸರ್ಕಾರವು ನಡೆಸಿತು. ಈ ನಡುವೆ ಜಾತಿ ಸಮೀಕ್ಷೆ ಪ್ರಶ್ನಿಸಿ ಹಲವು ಅರ್ಜಿಗಳನ್ನು ಹೈಕೋರ್ಟ್ಗೆ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಮತ್ತು ನ್ಯಾಯಮೂರ್ತಿ ಪಾರ್ಥ ಸಾರಥಿ ಅವರ ಪೀಠವು ಜಾತಿ ಆಧಾರಿತ ಸಮೀಕ್ಷೆಯನ್ನು ಪ್ರಶ್ನಿಸಿದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿತು. ಇದನ್ನೂ ಓದಿ: ಮಹಾತ್ಮ ಗಾಂಧಿ ಪ್ರಭಾವ ಜಾಗತಿಕವಾಗಿದೆ: ಪ್ರಧಾನಿ ಮೋದಿ

    ಇದಕ್ಕೂ ಮೊದಲು ಏಕ ಸದಸ್ಯ ಪೀಠ ಈ ವರ್ಷ ಮೇ 4 ರಂದು ತಕ್ಷಣವೇ ಜಾರಿಗೆ ಬರುವಂತೆ ಜಾತಿ ಸಮೀಕ್ಷೆಗೆ ತಡೆ ನೀಡಿತ್ತು. ಇದುವರೆಗೆ ಸಂಗ್ರಹಿಸಲಾದ ಡೇಟಾವನ್ನು ಸಂರಕ್ಷಿಸುವಂತೆ ಅಧಿಕಾರಿಗಳಿಗೆ ಸೂಚಿಸಿತ್ತು. 1948ರ ಜನಗಣತಿ ಕಾಯ್ದೆಯಡಿಯಲ್ಲಿ ಜಾತಿ ಸಮೀಕ್ಷೆ ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ ಎಂದು ನ್ಯಾಯಾಲಯವು ಗಮನಿಸಿದೆ. ಆದರೆ ಈ ತಡೆಯನ್ನು ದ್ವಿ ಸದಸ್ಯ ಪೀಠ ರದ್ದು ಮಾಡಿತ್ತು. ಇದನ್ನೂ ಓದಿ: ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳ ಭೀಕರ ಹತ್ಯೆ ಪ್ರಕರಣ – ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೆಚ್ಚಿನ ಹಣ ಕೊಡಲು ನಿರಾಕರಿಸಿದ ದಲಿತ ಮಹಿಳೆಗೆ ಮೂತ್ರ ಕುಡಿಸಿದ ದುಷ್ಕರ್ಮಿಗಳು

    ಹೆಚ್ಚಿನ ಹಣ ಕೊಡಲು ನಿರಾಕರಿಸಿದ ದಲಿತ ಮಹಿಳೆಗೆ ಮೂತ್ರ ಕುಡಿಸಿದ ದುಷ್ಕರ್ಮಿಗಳು

    ಪಾಟ್ನಾ: ತಂದೆ-ಮಗ ದಲಿತ ಮಹಿಳೆಯ (Dalit Woman) ಬಳಿ ಸಾಲ ವಾಪಸ್ ಪಡೆದು ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟಿದ್ದು, ಮಹಿಳೆ ಹಣ ಕೊಡಲು ನಿರಾಕರಿಸಿದ ಬಳಿಕ ಆಕೆಯನ್ನು ವಿವಸ್ತ್ರಗೊಳಿಸಿ, ಅಮಾನುಷವಾಗಿ ಹಲ್ಲೆ ನಡೆಸಿ, ಮೂತ್ರ (Urine) ಕುಡಿಸಿದ ಘಟನೆ ಬಿಹಾರದ (Bihar) ಪಾಟ್ನಾದಲ್ಲಿ (Patna) ನಡೆದಿದೆ.

    ಘಟನೆಯಿಂದ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಮಹಿಳೆಯ ತಲೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪೊಲೀಸರ ಪ್ರಕಾರ, ಆರೋಪಿಗಳಾದ ಪ್ರಮೋದ್ ಸಿಂಗ್ ಮತ್ತು ಆತನ ಮಗ ಅಂಶು ಮತ್ತು ಇತರ ನಾಲ್ವರು ಶನಿವಾರ ರಾತ್ರಿ 10 ಗಂಟೆಯ ಸುಮಾರಿಗೆ ದಲಿತ ಮಹಿಳೆಯ ಮನೆಗೆ ನುಗ್ಗಿ ಬಲವಂತವಾಗಿ ಆಕೆಯನ್ನು ತಮ್ಮ ಮನೆಗೆ ಒಯ್ದಿದ್ದಾರೆ. ಇದನ್ನೂ ಓದಿ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಬುರ್ಕಾ ಧರಿಸಿ ನೃತ್ಯ – ವ್ಯಕ್ತಿ ಬಂಧನ

    ಬಳಿಕ ಆಕೆಯ ಮೇಲೆ ಕ್ರೂರ ರೀತಿಯಲ್ಲಿ ಹಲ್ಲೆ ನಡೆಸಿ, ವಿವಸ್ತ್ರಗೊಳಿಸಿದ್ದು, ಕೋಲಿನಿಂದ ಹೊಡೆದಿದ್ದಾರೆ. ಬಳಿಕ ಪ್ರಮೋದ್ ಸಿಂಗ್ ತನ್ನ ಮಗನಿಗೆ ಮಹಿಳೆಯ ಬಾಯಿಗೆ ಮೂತ್ರ ವಿಸರ್ಜನೆ ಮಾಡುವಂತೆ ಸೂಚಿಸಿದ್ದಾನೆ. ನಂತರ ಸಂತ್ರಸ್ತೆ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ತನ್ನ ಮನೆಗೆ ಮರಳಿದ್ದಾಳೆ. ಇದನ್ನೂ ಓದಿ: ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ – ವಿಷ ಸೇವಿಸಿ ದಂಪತಿ ಆತ್ಮಹತ್ಯೆ

    ದಲಿತ ಮಹಿಳೆ ಕೆಲ ತಿಂಗಳ ಹಿಂದೆ ಪ್ರಮೋದ್ ಸಿಂಗ್‌ನಿಂದ ಬಡ್ಡಿಗೆ 1,500 ರೂ. ಸಾಲ (Loan) ಪಡೆದಿದ್ದು, ಬಡ್ಡಿ ಸಮೇತ ಹಣವನ್ನು ಮರುಪಾವತಿ ಮಾಡಿದ್ದಳು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದಾಗಿಯೂ ಆರೋಪಿ ಆಕೆಯಿಂದ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದು, ಅದನ್ನು ನೀಡಲು ಮಹಿಳೆ ನಿರಾಕರಿಸಿದ್ದಾಳೆ. ಹೆಚ್ಚಿನ ಹಣ ನೀಡದಿದ್ದರೇ ಮಹಿಳೆಯನ್ನು ವಿವಸ್ತ್ರ ಮಾಡಿ ಊರೂರು ಅಲೆಯುವಂತೆ ಮಾಡುವುದಾಗಿ ಪ್ರಮೋದ್ ಮಹಿಳೆಗೆ ಬೆದರಿಕೆ ಹಾಕಿದ್ದ. ಇದನ್ನೂ ಓದಿ: ಐಫೋನ್‌ ನೀಡಲು ತಡ ಮಾಡಿದ್ದಕ್ಕೆ ಸಿಬ್ಬಂದಿ ಮೇಲೆ ಗ್ರಾಹಕರಿಂದ ಹಲ್ಲೆ

    ಬೆದರಿಕೆಯ ಕುರಿತು ಮಹಿಳೆ ಈ ಹಿಂದೆ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಘಟನೆಯಿಂದ ಸ್ಥಳದಲ್ಲಿ ಅಶಾಂತಿ ಉಂಟಾಗಿದ್ದು, ಸಂತ್ರಸ್ತ ಕುಟುಂಬ ಹಾಗೂ ದಲಿತ ಸಮುದಾಯದವರು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಘಟನೆ ಬಳಿಕ ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇದನ್ನೂ ಓದಿ: ಅಕ್ರಮವಾಗಿ ಗಡಿ ನುಸುಳಿದ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಿದ ಬಿಎಸ್‌ಎಫ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]