Tag: patna

  • ಪಲ್ಟಿಯಾಗಿ ಹೊತ್ತಿ ಉರಿದ ಬಸ್ – 27 ಮಂದಿ ಸಜೀವ ದಹನ

    ಪಲ್ಟಿಯಾಗಿ ಹೊತ್ತಿ ಉರಿದ ಬಸ್ – 27 ಮಂದಿ ಸಜೀವ ದಹನ

    ಪಟ್ನಾ: ದೆಹಲಿ ಹಾಗೂ ಮುಜಫರ್ ನಗರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ಸೊಂದು ಉರುಳಿಬಿದ್ದು 27 ಮಂದಿ ಸಜೀವವಾಗಿ ಸುಟ್ಟು ಸಾವನ್ನಪ್ಪಿರುವ ಘಟನೆ ಬಿಹಾರ ಮೊತಿಹಾರಿಯ ಬಲ್ವಾ ಬಳಿ ನಡೆದಿದೆ.

    ಇಂದು ಮಧ್ಯಾಹ್ನ ಹೆದ್ದಾರಿಯಲ್ಲಿ ಸಾಗುತ್ತಿದ್ದ ಬಸ್ ಉರುಳಿಬಿದ್ದಿದ್ದು, ಬಸ್ ಚಾಲಕ ಬೈಕ್ ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿದ ವೇಳೆ ದುರ್ಘಟನೆ ನಡೆದಿದೆ. ಬಳಿಕ ಸ್ಥಳೀಯ ನಿವಾಸಿಗಳು ಬಸ್‍ನಲ್ಲಿದ್ದ ಜನರನ್ನುರಕ್ಷಿಸಲು ಯತ್ನಿಸಿದರೂ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.

    ಘಟನೆ ಕುರಿತು ಮಾಹಿತಿ ಪಡೆದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿ, ಹಲವರನ್ನು ರಕ್ಷಣೆ ಮಾಡಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು ಬಸ್ ನಲ್ಲಿ 32 ಜನರು ಪ್ರಯಾಣ ನಡೆಸುತ್ತಿದ್ದರು. ಮುಜಫರ್ ನಗರದಿಂದ ಬಸ್ ಹೊರಟಿತ್ತು. ಘಟನೆ ವೇಳೆ ಮಳೆ ಹೆಚ್ಚಾಗಿದ ಪರಿಣಾಮ ರಕ್ಷಣಾ ಕಾರ್ಯಾಚರಣೆ ಅಡ್ಡಿ ಉಂಟಾಗಿತ್ತು ಎಂದು ಮಾಹಿತಿ ನೀಡಿದ್ದಾರೆ. ಬಿಹಾರ ವಿಪತ್ತು ನಿರ್ವಹಣೆ ಮತ್ತು ಪರಿಹಾರ ಸಚಿವರು ಪ್ರತಿಕ್ರಿಯಿಸಿ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮೃತ ವ್ಯಕ್ತಿಗಳಿಗೆ ತಲಾ 4 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

  • ನಡುರಸ್ತೆಯಲ್ಲೇ ಅಪ್ರಾಪ್ತೆಯ ಬಟ್ಟೆ ಬಿಚ್ಚಿ ಬಾಲಕರಿಂದ ಲೈಂಗಿಕ ಕಿರುಕುಳ – ವಿಡಿಯೋ ವೈರಲ್

    ನಡುರಸ್ತೆಯಲ್ಲೇ ಅಪ್ರಾಪ್ತೆಯ ಬಟ್ಟೆ ಬಿಚ್ಚಿ ಬಾಲಕರಿಂದ ಲೈಂಗಿಕ ಕಿರುಕುಳ – ವಿಡಿಯೋ ವೈರಲ್

    ಪಾಟ್ನಾ: 6ಕ್ಕೂ ಹೆಚ್ಚು ಅಪ್ರಾಪ್ತ ಬಾಲಕರು ಅಪ್ರಾಪ್ತೆಯ ಬಟ್ಟೆಯನ್ನು ಬಿಚ್ಚಿಸಿ ನಡು ರಸ್ತೆಯಲ್ಲೇ ಲೈಂಗಿಕ ಕಿರುಕುಳ ನೀಡಿದ ಘಟನೆ ಬಿಹಾರದ ಜಹಾನಬಾದ್‍ನಲ್ಲಿ ನಡೆದಿದೆ.

    ಅಪ್ರಾಪ್ತೆಯ ಕೈ ಹಿಡಿದು ಎಳೆದುಕೊಂಡು ಹೋಗುತ್ತಾ ಹುಡುಗರು ಆಕೆಯ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಬಾಲಕಿ ಆ ಹುಡುಗರಿಂದ ತಪ್ಪಿಸಿಕೊಳ್ಳಲು ಹರಸಹಾಸ ಪಡುತ್ತಿದ್ದಳು ಎಂದು ವರದಿಯಾಗಿದೆ.

    ಈ ವೇಳೆ ಬಾಲಕರು ಅಪ್ರಾಪ್ತೆಯ ಬಟ್ಟೆ ಬಿಚ್ಚಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಬಾಲಕಿ ‘ಅಣ್ಣ ಕಾಪಾಡಿ, ಅಣ್ಣ ಕಾಪಾಡಿ’ ಎಂದು ಗೋಗರೆದಿದ್ದಾಳೆ. ಬೈಕಿನಲ್ಲಿ ಬೇರೊಬ್ಬನ ಜೊತೆ ಹೋಗುತ್ತಿದ್ದಾಗ ಈ ಘಟನೆ ನಡೆದಿದ್ದು, ಬೈಕನ್ನು ಬೀಳಿಸಿ ಅಪ್ರಾಪ್ತ ಬಾಲಕರು ಅಪ್ರಾಪ್ತೆಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ.

     

    ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಶನಿವಾರ ವೈರಲ್ ಆಗಿದ್ದು, ಪೊಲೀಸರವರೆಗೂ ಈ ವಿಡಿಯೋ ತಲುಪಿದೆ. ಸದ್ಯ ಪೊಲೀಸರು ಈ ವಿಡಿಯೋ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

    ಸದ್ಯ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ಪೊಲೀಸರು ರಚಿಸಿದ್ದು, ಇಬ್ಬರು ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

  • ತಂದೆ ಹೊಡೆತದಿಂದ ತಪ್ಪಿಸಿಕೊಳ್ಳಲು ಟೆರೆಸ್‍ನಿಂದ ಹಾರಿದ 12ರ ಬಾಲಕಿ- ವಿಡಿಯೋ!

    ತಂದೆ ಹೊಡೆತದಿಂದ ತಪ್ಪಿಸಿಕೊಳ್ಳಲು ಟೆರೆಸ್‍ನಿಂದ ಹಾರಿದ 12ರ ಬಾಲಕಿ- ವಿಡಿಯೋ!

    ಪಾಟ್ನಾ: ತಂದೆ ಹೊಡೆತದಿಂದ ತಪ್ಪಿಸಿಕೊಳ್ಳಲು 12 ವರ್ಷದ ಬಾಲಕಿ ಮಹಡಿಯಿಂದ ಜಿಗಿದ ಘಟನೆ ಬಿಹಾರದಲ್ಲಿ ನಡೆದಿದೆ.

    ವರದಿಗಳ ಪ್ರಕಾರ ಬಾಲಕಿ ಮೊಬೈಲಿನಲ್ಲಿ ತನ್ನ ಸ್ನೇಹಿತರ ಜೊತೆ ಚಾಟ್ ಮಾಡುತ್ತಿದ್ದಳು. ಇದೇ ವೇಳೆ ಬಂದ ಬಾಲಕಿಯ ತಂದೆ ಆಕೆಗೆ ಹೊಡೆಯಲು ಶುರು ಮಾಡಿದ್ದಾನೆ. ಬಾಲಕಿ ತಂದೆ ಆ ವೇಳೆ ಕುಡಿದ ನಶೆಯಲ್ಲಿದ್ದನು ಎಂದು ಹೇಳಲಾಗಿದೆ.

    ತಂದೆ ಹೊಡೆತ ತಾಳಲಾರದೇ ಬಾಲಕಿ ಮಹಡಿಯಿಂದ ಜಿಗಿದಿದ್ದು, ಗಂಭೀರವಾಗಿ ಗಾಯಗೊಂಡಿದಾಳೆ. ತಂದೆ ಹೊಡೆಯುವಾಗ ಅಕ್ಕಪಕ್ಕದ ಮನೆಯವರು ಬಾಲಕಿಯನ್ನು ರಕ್ಷಿಸುವ ಬದಲು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡುತ್ತಿದ್ದರು.

    ನಂತರ ವ್ಯಕ್ತಿಯೊಬ್ಬರು ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ವೇಳೆ ಪೊಲೀಸ್ ಠಾಣೆಯ ಲ್ಯಾಂಡ್‍ಲೈನ್ ಸರಿಯಾಗಿ ಕೆಲಸ ಮಾಡತ್ತಿರಲಿಲ್ಲ (ಔಟ್ ಆಫ್ ಆರ್ಡರ್). ನಂತರ ಈ ಘಟನೆಯನ್ನು ಪೊಲೀಸರಿಗೆ ತಿಳಿಸಲಾಯಿತು ಎಂದು ವರದಿಯಾಗಿದೆ.

    ಘಟನೆಯ ಸ್ಥಳದಿಂದ ಪೊಲೀಸ್ ಠಾಣೆಗೆ ಕೇವಲ ಕಿ.ಮೀ ಅಷ್ಟು ದೂರ ಇದ್ದರೂ, ಪೊಲೀಸರು ಸ್ಥಳಕ್ಕೆ ಬರಲು 3 ಗಂಟೆ ತೆಗೆದುಕೊಂಡರು ಎಂದು ವರದಿಯಾಗಿದೆ.

    https://www.youtube.com/watch?v=8L1IH8-sGTo

  • ಮದ್ವೆಯಾಗಿ 11 ವರ್ಷವಾದ್ಮೇಲೆ ಪ್ರಿಯಕರನೊಂದಿಗೆ ಓಡಿಹೋದ 3 ಮಕ್ಕಳ ತಾಯಿ!

    ಮದ್ವೆಯಾಗಿ 11 ವರ್ಷವಾದ್ಮೇಲೆ ಪ್ರಿಯಕರನೊಂದಿಗೆ ಓಡಿಹೋದ 3 ಮಕ್ಕಳ ತಾಯಿ!

    ಪಾಟ್ನಾ: ಮದುವೆಯಾಗಿ 11 ವರ್ಷಗಳ ನಂತರ 3 ಮಕ್ಕಳ ತಾಯಿಯೊಬ್ಬಳು ತನ್ನ ಪ್ರಿಯಕರ ಜೊತೆ ಓಡಿಹೋದ ಘಟನೆ ಬಿಹಾರದ ಮುಂಗೇರ್ ಜಿಲ್ಲೆಯ ಈಸ್ಟ್ ಕಾಲೋನಿನಲ್ಲಿ ನಡೆದಿದೆ.

    ಮನೋಜ್ ಕುಮಾರ್ ಎಂಬವರ ಪತ್ನಿ ಪಕ್ಕದ್ಮನೆ ಯುವಕನ ಜೊತೆ ಓಡಿಹೋಗಿದ್ದಾಳೆ. ಮನೋಜ್ ಕುಮಾರ್ ವೃತ್ತಿಯಲ್ಲಿ ವಿಡಿಯೋಗ್ರಾಫರ್ ಆಗಿದ್ದು, ಈ ದಂಪತಿಗೆ ಎರಡು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ.

                                  ಪತಿ ಮನೋಜ್ ಕುಮಾರ್

    ಮನೋಜ್ ಕೆಲಸದ ಮೇಲೆ ಬೇರೆ ಊರಿಗೆ ತೆರಳಿದ್ದ ಸಂದರ್ಭದಲ್ಲಿ ಆತನ ಪತ್ನಿ ತನ್ನ ಇಬ್ಬರು ಮಕ್ಕಳ ಜೊತೆ ಪಕ್ಕದ್ಮನೆ ಯುವಕನ ಜೊತೆ ಓಡಿ ಹೋಗಿದ್ದಾಳೆ. ಪತ್ನಿ ಓಡಿಹೋದ ಮೇಲೆ ಮನೋಜ್ ಏಪ್ರಿಲ್ 8ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮನೋಜ್ ಪೊಲೀಸ್ ಠಾಣೆಯಿಂದ ಡಿಐಜಿ ಕಚೇರಿವರೆಗೂ ದೂರು ನೀಡಿದ್ದರು. ಆದರೆ ಅವರ ದೂರಿಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಮನೋಜ್‍ಗೆ ಪೊಲೀಸ್ ಅಧಿಕಾರಿಯಿಂದ ಕೇವಲ ಆಶ್ವಾಸನೆಯಷ್ಟೇ ಸಿಕ್ಕಿದೆ ಎಂಬುದಾಗಿ ವರದಿಯಾಗಿದೆ.

    ಪುಸ್ತಕ ತರಬೇಕೆಂದ ಅಣ್ಣಂದಿರ ಜೊತೆ ಹೋದ ಅಮ್ಮ ಮತ್ತೆ ಹಿಂದಿರುಗಲಿಲ್ಲ ಎಂದು ಮನೋಜ್ ಕುಮಾರ್ ಮಗಳು ತಿಳಿಸಿದ್ದಾಳೆ.

  • ಚಲಿಸುತ್ತಿದ್ದ ರೈಲಿನ ಮುಂದೆ ಪತ್ನಿಯನ್ನ ತಳ್ಳಿದ ಪತಿ

    ಚಲಿಸುತ್ತಿದ್ದ ರೈಲಿನ ಮುಂದೆ ಪತ್ನಿಯನ್ನ ತಳ್ಳಿದ ಪತಿ

    ಪಾಟ್ನಾ: ವ್ಯಕ್ತಿವೊಬ್ಬ ತನ್ನ ಪತ್ನಿಯನ್ನು ಚಲಿಸುತ್ತಿದ್ದ ರೈಲಿನ ಮುಂದೆ ತಳ್ಳಿ ಕೊಲೆ ಮಾಡಿರುವ ಘಟನೆ ಬಿಹಾರದ ಗುಲ್ಜಾಬಾರ್ಗ್ ರೈಲ್ವೇ ನಿಲ್ದಾಣದ ಬಳಿ ನಡೆದಿದೆ.

    ಮೃತಳನ್ನ ಆಶಾ ದೇವಿ ಎಂದು ಗುರುತಿಸಲಾಗಿದೆ. ಆರೋಪಿ ಸುನಿಲ್ ಪ್ರಸಾದ್ ಕೊಲೆ ಮಾಡಿದ ಪತಿ. ಈತ ಬಿಹ್ತಾದಲ್ಲಿ ಇಂಡಿಯನ್ ಏರ್ ಫೋರ್ಸ್ ನಲ್ಲಿ ಕೆಲಸ ಮಾಡುತ್ತಿದ್ದನು.

    ಮಂಗಳವಾರ ಸುನಿಲ್ ಆಶಾಳನ್ನು ಸ್ಕೂಟರ್ ಮೇಲೆ ರೈಲ್ವೇ ನಿಲ್ದಾಣಕ್ಕೆ ಕರೆದುಕೊಂಡು ಹೋಗಿದ್ದಾನೆ. ಅದೇ ವೇಳೆ ಗುಲ್ಜಾಬಾರ್ಗ್ ರೈಲ್ವೇ ನಿಲ್ದಾಣದಿಂದ ಚಲಿಸುತ್ತಿದ್ದ ರೈಲಿನ ಮುಂದೆ ಏಕಾಏಕಿ ಆಶಾಳನ್ನು ನೂಕಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಅಷ್ಟರಲ್ಲಿ ಸ್ಥಳೀಯರು ಆತನನ್ನ ಹಿಡಿದು ಸರ್ಕಾರಿ ರೈಲ್ವೇ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

    ಆಶಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿ ಸುನಿಲ್ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಈ ಬಗ್ಗೆ ಆಶಾಗೆ ತಿಳಿದಿದ್ದು, ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ ಪ್ರತಿದಿನ ಪತ್ನಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸುತ್ತಿದ್ದನು. ನನ್ನ ಮಗಳನ್ನು ಆಕೆಯ ಪತಿಯೇ ಕೊಲೆ ಮಾಡಿದ್ದಾನೆ ಅಂತಾ ಆಶಾ ತಾಯಿ ಆರೋಪಿಸುತ್ತಾರೆ.

    ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

  • ಹಾಲ್ ಟಿಕೆಟ್ ನಲ್ಲಿ ಫೋಟೋ ನೋಡಿ ದಂಗಾದ ವಿದ್ಯಾರ್ಥಿನಿ!

    ಹಾಲ್ ಟಿಕೆಟ್ ನಲ್ಲಿ ಫೋಟೋ ನೋಡಿ ದಂಗಾದ ವಿದ್ಯಾರ್ಥಿನಿ!

    ಪಾಟ್ನಾ: ಬಿಹಾರದ ವಿಶ್ವವಿದ್ಯಾನಿಲಯವೊಂದು ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದ್ದು, ವಿದ್ಯಾರ್ಥಿನಿಯ ಫೋಟೋ ಬದಲಿಗೆ ಬಿಕಿನಿತೊಟ್ಟ ಬೇರೆ ಹುಡುಗಿಯ ಫೋಟೋ ಹಾಕಲಾಗಿದೆ.

    ದರ್ಭಾಂಗಾ ಜಿಲ್ಲೆಯ ಲಲಿತ್ ನಾರಾಯಣ್ ಮಿಥಿಲಾ ವಿಶ್ವವಿದ್ಯಾನಿಲಯದಲ್ಲಿ ಈ ಪ್ರಮಾದ ನಡೆದಿದ್ದು, ಮಧುಬನಿಯ ಎಸ್‍ಎಂಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರ ಹಾಲ್ ಟಿಕೆಟ್ ನಲ್ಲಿ ಈ ರೀತಿ ಫೋಟೋ ಬಂದಿದೆ.

    ವಿದ್ಯಾರ್ಥಿನಿ ಪರೀಕ್ಷೆಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ತನ್ನ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡಿದ್ದು, ಅದರಲ್ಲಿದ್ದ ಫೋಟೋ ಕಂಡು ವಿದ್ಯಾರ್ಥಿನಿ ದಂಗಾಗಿದ್ದಾರೆ.

    ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿನಿಯ ವಿವರ, ಸಹಿ ಎಲ್ಲವೂ ಸರಿಯಿದ್ದು, ಫೋಟೋದಲ್ಲಿ ಬಿಕಿನಿ ತೊಟ್ಟ ಬೆಡಗಿಯ ಫೋಟೋ ತಪ್ಪಾಗಿ ಮುದ್ರಣವಾಗಿದೆ. ಆಕೆ ಕೂಡಲೇ ಈ ವಿಚಾರವನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ನಂತರ ವಿದ್ಯಾರ್ಥಿನಿಗೆ ಬೇರೆ ಪ್ರವೇಶ ಪತ್ರ ನೀಡಲು ವಿಶ್ವವಿದ್ಯಾನಿಲಯ ಮುಂದಾಗಿದೆ.

    ನಾನು ಆನ್ ಲೈನ್ ನಲ್ಲಿ ಅಪ್ಲಿಕೇಶನ್ ಸಬ್ಮಿಟ್ ಮಾಡುವಾಗ ಎಲ್ಲವೂ ಸರಿಯಾಗಿತ್ತು. ಆದರೆ ಈಗ ನನ್ನ ಫೋಟೋ ಬದಲಿಗೆ ಬಿಕಿನಿ ತೊಟ್ಟಿರುವ ಇನ್ಯಾರದೋ ಫೋಟೋ ಬಂದಿದೆ. ಇದನ್ನ ಬದಲಿಸಿಕೊಡಿ ಎಂದು ಸೋಮವಾರ ಕೇಳಿದೆ. ಆದರೆ ಮಂಗಳವಾರದಿಂಲೇ ಪರೀಕ್ಷೆ ಆರಂಭವಾಗಲಿದೆ. ಆದರೆ ವಿವಿ ಮಾತ್ರ ಇನ್ನೂ ಹಾಲ್ ಟಿಕೆಟ್ ಬದಲಿಸಿಕೊಟ್ಟಿಲ್ಲ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.

    ಈ ಘಟನೆಗೂ ನಮಗೂ ಸಂಬಂಧವಿಲ್ಲ. ಹಾಲ್ ಟಿಕೆಟ್ ನೀಡಲು ಗುತ್ತಿಗೆ ಪಡೆದಿದ್ದ ಏಜೆನ್ಸಿಯಿಂದ ನಡೆದಿರಬಹುದು ಎಂದು ಕಾಲೇಜ್ ಪ್ರಾಂಶುಪಾಲರಾದ ಡಾ. ಜಗದೀಶ್ ಪ್ರಸಾದ್ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ವಿವಿಯ ಪರೀಕ್ಷಾ ನಿಯಂತ್ರಕರು, ಕೂಡಲೇ ಇದನ್ನ ಸರಿಪಡಿಸುವಂತೆ ಸೂಚಿಸಿದ್ದೇನೆ. ಶೀಘ್ರವಾಗಿ ತಪ್ಪು ಯಾರ ಕಡೆಯಿಂದ ಆಗಿದೆ ಎಂದು ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

    ಇದೇ ವಿಶ್ವವಿದ್ಯಾನಿಲಯ ಕಳೆದ ವರ್ಷ ವಿದ್ಯಾರ್ಥಿಗಳಿಗೆ ವಿತರಿಸಿದ್ದ ಪರೀಕ್ಷಾ ಪ್ರವೇಶ ಪತ್ರದಲ್ಲಿ ಗಣಪತಿಯ ಫೋಟೋ ಹಾಕಿ ಎಡವಟ್ಟು ಮಾಡಿಕೊಂಡಿತ್ತು.

  • ಮೊಬೈಲ್ ಟಾರ್ಚ್ ಲೈಟ್ ಬಳಸಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು: ವಿಡಿಯೋ ವೈರಲ್

    ಮೊಬೈಲ್ ಟಾರ್ಚ್ ಲೈಟ್ ಬಳಸಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು: ವಿಡಿಯೋ ವೈರಲ್

    ಪಾಟ್ನಾ: ಆಪರೇಷನ್ ಥಿಯೇಟರ್ ನಲ್ಲಿ ಪವರ್ ಕಟ್ ಆದ ಹಿನ್ನಲೆಯಲ್ಲಿ ಮಹಿಳೆಯೊಬ್ಬರಿಗೆ ಟಾರ್ಚ್ ಲೈಟ್‍ನಲ್ಲೇ ಶಸ್ತ್ರಚಿಕಿತ್ಸೆ ಮಾಡಿದ ಘಟನೆ ಬಿಹಾರದ ಸಹಸ್ರಾದ ಸದಾರ್ ಆಸ್ಪತ್ರೆಯಲ್ಲಿ ನಡೆದಿದೆ.

    ಟಾರ್ಚ್ ಲೈಟಿನಲ್ಲಿ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಿರೋ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಅವರ ಸುತ್ತಮುತ್ತ ಹಲವು ಜನ ಸುತ್ತುವರಿದು ಸ್ಟಿಚಸ್ ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೇ ವೈದ್ಯರು ಬಿಳಿ ಬಟ್ಟೆ ಧರಿಸುವ ಬದಲು ಖಾಕಿ ಉಡುಪನ್ನು ಧರಿಸಿದ್ದಾರೆ.

    ವರದಿಗಳ ಪ್ರಕಾರ ಈ ಆಸ್ಪತ್ರೆಯಲ್ಲಿ ಜನರೇಟರ್ ಸೌಲಭ್ಯ ಇಲ್ಲದ ಕಾರಣ ಮೊಬೈಲ್ ಫೋನ್ ಟಾರ್ಚ್‍ನಲ್ಲೇ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆದು ಕೆಲವು ದಿನಗಳ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಈ ಹಿಂದೆ ಉತ್ತರಪ್ರದೇಶದ ಉನಾವೊ ಜಿಲ್ಲೆಯಲ್ಲಿ 32 ರೋಗಿಗಳಿಗೆ ಇದೇ ರೀತಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು ಎಂದು ವರದಿಯಾಗಿದೆ.

  • ಶಾಲೆಯಲ್ಲಿ ಅತ್ಯಾಚಾರಕ್ಕೊಳಗಾಗಿ ರಕ್ತಸ್ರಾವವಾಗ್ತಿದ್ದ ಮಗಳನ್ನು ಎತ್ತಿಕೊಂಡೇ ಆಸ್ಪತ್ರೆಗೆ ಓಡಿದ ತಂದೆ!

    ಶಾಲೆಯಲ್ಲಿ ಅತ್ಯಾಚಾರಕ್ಕೊಳಗಾಗಿ ರಕ್ತಸ್ರಾವವಾಗ್ತಿದ್ದ ಮಗಳನ್ನು ಎತ್ತಿಕೊಂಡೇ ಆಸ್ಪತ್ರೆಗೆ ಓಡಿದ ತಂದೆ!

    ಪಾಟ್ನಾ: 11 ವರ್ಷದ ಬಾಲಕಿಯೊಬ್ಬಳ ಮೇಲೆ ಶಾಲೆಯ ಹಿರಿಯ ವಿದ್ಯಾರ್ಥಿಯೊಬ್ಬ ಅತ್ಯಾಚಾರವೆಸಗಿರೋ ಆಘಾತಕಾರಿ ಘಟನೆ ಶುಕ್ರವಾರ ಬೆಳಗ್ಗೆ ಭೋಜ್ ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಕಾಮುಕ 5 ರೂ. ಕೊಡುವ ಆಮಿಷ ಒಡ್ಡಿ ಬಳಿಕ ಬಾಲಕಿಯನ್ನ ಹತ್ತಿರದ ಹೊಲದ ಬಳಿ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಇದರಿಂದಾಗಿ ಬಾಲಕಿ ತೊಟ್ಟ ಬಟ್ಟೆ ರಕ್ತಸಿಕ್ತವಾಗಿತ್ತು. ಸದ್ಯ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಅರಾ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿ ಪೂನಮ್ ಹೇಳಿದ್ದಾರೆ.

    ಈ ಕುರಿತು ಬಾಲಕಿಯಿಂದ ಹೇಳಿಕೆಯನ್ನು ಪಡೆದುಕೊಂಡಿದ್ದು, ಸುಮಾರು 11 ಗಂಟೆ ವೇಳೆಗೆ ಶಾಲೆಯ ಬಾತ್ ರೂಮ್ ಗೆ ತೆರಳಿದಾಗ ಈ ಘಟನೆ ನಡೆದಿದ್ದಾಗಿ ಹೇಳಿದ್ದಾಳೆ. ಶಾಲೆಯ ಹಿರಿಯ ವಿದ್ಯಾರ್ಥಿ ಅಪು ಸಾಹ್ ಈ ಕೃತ್ಯವೆಸಗಿದ್ದು, ಬಳಿಕ ಬಾಲಕಿ ಶಾಲೆಯ ಶಿಕ್ಷಕರಿಗೆ ಮಾಹಿತಿ ನೀಡಿದ್ದಾಳೆ.

    ಘಟನೆಯಿಂದಾಗಿ ನಡೆಯಲಾರದ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಆಕೆಯ ತಂದೆ ಎತ್ತಿಕೊಂಡೇ ಆಸ್ಪತ್ರೆಗೆ ತೆರಳಿದ್ದಾರೆ. ತಂದೆಯ ದುಃಖ ಎಷ್ಟಿತ್ತೆಂಬುದು ಫೋಟೋಗಳಿಂದ ತಿಳಿಯುತ್ತದೆ.

  • ಪ್ರೀತಿಸಿ ಮದ್ವೆಯಾಗಿ ಪತಿ ಮನೆಗೆ ತೆರಳ್ತಿದ್ದಾಗ ಕಾರಿನಿಂದ ಜಿಗಿದು ಪೊಲೀಸ್ ಠಾಣೆಗೆ ಓಡಿದ ವಧು!

    ಪ್ರೀತಿಸಿ ಮದ್ವೆಯಾಗಿ ಪತಿ ಮನೆಗೆ ತೆರಳ್ತಿದ್ದಾಗ ಕಾರಿನಿಂದ ಜಿಗಿದು ಪೊಲೀಸ್ ಠಾಣೆಗೆ ಓಡಿದ ವಧು!

    ಪಾಟ್ನಾ: ಪ್ರೀತಿಸಿದ ಹುಡುಗನ ಜೊತೆ ಮದುವೆಯಾಗಿ ಆತನ ಮನೆಗೆ ಹೋಗುವಾಗ ವಧು ಕಾರಿನಿಂದ ಜಿಗಿದು ವರನ ವಿರುದ್ಧ ಅತ್ಯಾಚಾರದ ದೂರನ್ನು ದಾಖಲಿಸಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

    ವರದಿಗಳ ಪ್ರಕಾರ ವಧು-ವರ ಇಬ್ಬರೂ ಬಾಲ್ಯ ಸ್ನೇಹಿತರಾಗಿದ್ದು, 2012ರಿಂದ ಲಿವಿಂಗ್ ರಿಲೇಶನ್‍ಶಿಪ್‍ನಲ್ಲಿದ್ದರು. ನಂತರ ಫೆಬ್ರವರಿ 9ರಂದು ಸಂಪ್ರದಾಯದಂತೆ ಮದುವೆಯಾಗಿದ್ದರು. ಮದುವೆ ಆದ ಮಾರನೇ ದಿನ ವಧು ತನ್ನ ಪತಿ ಹಾಗೂ ಕುಟುಂಬದ ವಿರುದ್ಧ ಅತ್ಯಾಚಾರ ಹಾಗೂ ವರದಕ್ಷಿಣೆ ಕೇಸನ್ನು ದಾಖಲಿಸಿದ್ದಾಳೆ.

     ಫೆಬ್ರವರಿ 9ರ ರಾತ್ರಿ ಮದುವೆ ನಡೆದಿದ್ದು, ಮಾರನೇ ದಿನ ಪತಿ, ಪತ್ನಿಯ ತವರು ಮನೆಯಿಂದ ತನ್ನ ಮನೆಗೆ ಕರೆದುಕೊಂಡು ಹೋಗುವ ಸಮಯದಲ್ಲಿ ದಾರಿ ಮಧ್ಯೆದಲ್ಲಿ ವಧು ಕಾರಿನಿಂದ ಜಿಗಿದು ಪೊಲೀಸ್ ಠಾಣೆಗೆ ಹೋಗಿದ್ದಾಳೆ. ಪೊಲೀಸ್ ಠಾಣೆಗೆ ಹೋದ ನಂತರ ತನ್ನ ಪತಿ ವೈಭವ್, ಆತನ ಸಹೋದರ ಸೌರಬ್ ಆನಂದ್, ತಂದೆ ಅಲೋಕ್ ಕುಮಾರ್ ಹಾಗೂ ವರನ ಮಾವ ವಿರುದ್ಧ ದೂರು ನೀಡಿ ಕೇಸ್ ದಾಖಲಿಸಿದ್ದಾಳೆ.

    ಮದುವೆಯಾಗಿ ಗಂಡನ ಮನೆಗೆ ಹೋಗುತ್ತಿರುವಾಗ ಕಾರಿನಲ್ಲಿ ಪತಿ ಹಾಗೂ ನನ್ನ ನಡುವೆ ಜಗಳವಾಗಿತ್ತು. ಆಗ ವೈಭವ್‍ನನ್ನ ಕುತ್ತಿಗೆ ಬಿಗಿದು ಕೊಲ್ಲಲು ಯತ್ನಿಸಿದ್ದನು. ನಾನು ಜಿಗಿದು ಓಡಿ ಹೋಗಲು ಪ್ರಯತ್ನಿಸುವಾಗ ಕಾರು ಚಲಾಯಿಸುತ್ತಿದ್ದ ವೈಭವ್‍ನ ಮಾವ ಲಾಕ್ ಮಾಡಲು ಪ್ರಯತ್ನಿಸಿದ್ದ. ಅಷ್ಟೇ ಅಲ್ಲದೇ ನನ್ನ ಮೈಮೇಲೆ ಇರುವ ಚಿನ್ನಾಭರಣವನ್ನು ದೋಚಲು ಪ್ರಯತ್ನಿಸಿದ್ದರು ಎಂದು ವಧು ಆರೋಪಿಸಿದ್ದಾಳೆ.

    ಮದುವೆಯ ವೇಳೆ ದುಬಾರಿ ಕಾರನ್ನು ವರದಕ್ಷಿಣೆಯಾಗಿ ನೀಡಲು ಹೇಳಿದ್ದರು. ಅಷ್ಟೇ ಅಲ್ಲದೇ ಜಾತಿಯ ಬಗ್ಗೆ ನಿಂದಿಸಿದ್ದರು. 25ಲಕ್ಷ ರೂ. ಗಿಫ್ಟ್ ಆಗಿ ನೀಡಲು ಹೇಳಿದ್ದರು. ಆದರೆ ನಾವು ವರದಕ್ಷಿಣೆ ನೀಡಲು ನಿರಾಕರಿಸಿದ್ವಿ. ಇದರಿಂದ ವರ ಹಸಮಣೆಯಿಂದ ಓಡಿ ಹೋಗಲು ಪ್ರಯತ್ನಿಸುತ್ತಿದ್ದ. ಹಾಗಾಗಿ ಆತನ ವಿರುದ್ಧ ಅತ್ಯಾಚಾರದ ಆರೋಪವನ್ನು ವದು ನೀಡಿದ್ದಾಳೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ವರ ಹಾಗೂ ವಧು ಇಬ್ಬರೂ ಒಪ್ಪಿಕೊಂಡು 2012ರಲ್ಲೇ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಹೀಗಿರುವಾಗ ಸುಳ್ಳು ಅತ್ಯಾಚಾರದ ಕೇಸ್ ದಾಖಲಿಸಿದ್ದಾಳೆ ಎಂದು ವೈಭವ್ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ. ಇಬ್ಬರೂ ಶಾಲಾ ದಿನಗಳಿಂದ ಸ್ನೇಹಿತರು. ವೈಭವ್ ಮಧ್ಯಮ ವರ್ಗದ ಕುಟುಂಬದವನಾಗಿದ್ದರೆ, ಹುಡುಗಿ ಹೈ ಪ್ರೊಫೈಲ್ ಕುಟುಂಬದವಳು ಎಂದು ವರದಿಯಾಗಿದೆ.

    ವೈಭವ್ ದೆಹಲಿಯ ಏರ್ ಲೈನ್ಸ್ ಕಂಪನಿಯಲ್ಲಿ ಮ್ಯಾನೆಜರ್ ಆಗಿ ಕೆಲಸ ಮಾಡುತ್ತಿದ್ದು, 2012ರಲ್ಲಿ ಇಬ್ಬರೂ ಒಪ್ಪಿಕೊಂಡು ದೇವಸ್ಥಾನದಲ್ಲಿ ಮದುವೆಯಾಗಿದ್ದರು. ನಂತರ ಲಿವಿಂಗ್ ರಿಲೇಶನ್‍ಶಿಪ್‍ನಲ್ಲಿದ್ದರು. ಫೆ. 09 ರಂದು ಇಬ್ಬರ ಕುಟುಂಬದವರ ಒಪ್ಪಿಗೆ ಪಡೆದು ಸಂಪ್ರದಾಯದಂತೆ ಮದುವೆಯಾಗಲು ನಿರ್ಧರಿಸಿದ್ದರು.

  • 2 ಗಂಟೆ ವಿಡಿಯೋ ಕಾಲ್ ನಲ್ಲಿ ಪ್ರೇಯಸಿ ಜೊತೆ ಮಾತಾಡಿ ತನ್ನ ತಲೆಗೆ ಶೂಟೌಟ್ ಮಾಡ್ಕೊಂಡ!

    2 ಗಂಟೆ ವಿಡಿಯೋ ಕಾಲ್ ನಲ್ಲಿ ಪ್ರೇಯಸಿ ಜೊತೆ ಮಾತಾಡಿ ತನ್ನ ತಲೆಗೆ ಶೂಟೌಟ್ ಮಾಡ್ಕೊಂಡ!

    ಪಾಟ್ನಾ: ಯುವಕನೊಬ್ಬ ತನ್ನ ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿ 2 ಗಂಟೆ ಮಾತನಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

    ಆಕಾಶ್ (19) ಆತ್ಮಹತ್ಯೆಗೆ ಶರಣಾದ ಯುವಕ. ಆಕಾಶ್ ತನ್ನ ರೂಮಿನಲ್ಲಿದ್ದಾಗ ಪ್ರೇಯಸಿಯನ್ನು ವಿಡಿಯೋ ಕಾಲ್ ಮಾಡಿ ಬಳಿಕ ಅಲ್ಲೇ ಇದ್ದ ಪಿಸ್ತೂಲಿನಿಂದ ತನ್ನ ತಲೆಗೆ ತಾನೇ ಗುಂಡಿಟ್ಟುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ವರದಿಗಳ ಪ್ರಕಾರ ಆಕಾಶ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದನು. ಪರೀಕ್ಷೆಯಲ್ಲಿ ಫೇಲ್ ಆಗಿದ್ದನೆಂದು ಆತನ ಕುಟುಂಬದವರು ಯುವತಿಯ ಜೊತೆ ಇರುವ ಪ್ರೀತಿಯನ್ನು ನಿಲ್ಲಿಸು ಎಂದು ಹೇಳಿದ್ದಾರೆ. ಇದಕ್ಕೆ ಸಿಟ್ಟಾದ ಆಕಾಶ್ ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿ ನಂತರ ರೂಮಿಗೆ ಹೋಗಿದ್ದಾನೆ. ಬಳಿಕ ಗುಂಡುಗಳನ್ನು ಲೋಡ್ ಮಾಡಿದ್ದಾನೆ. ಈ ದೃಶ್ಯವನ್ನು ನೋಡಿ ಪ್ರೇಯಸಿ ಗುಂಡುಗಳನ್ನು ಹೊರತೆಗೆ ಶೂಟ್ ಮಾಡಿಕೊಳ್ಳಬೇಡ ಎಂದು ಹೇಳಿದ್ದಾಳೆ. ಈಕೆಯ ಮಾತು ಕೇಳಿ ಬುಲೆಟ್ ತೆಗೆದು ಕಾಲ್ ಕಟ್ ಮಾಡಿದ್ದಾನೆ. ಇದಾದ ನಂತರ ಪಿಸ್ತೂಲ್ ಗೆ ಬುಲೆಟ್ ಲೋಡ್ ಮಾಡಿ ತಲೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಪಿಸ್ತೂಲ್ ಶೂಟ್ ಶಬ್ಧ ಕೇಳುತ್ತಿದ್ದಂತೆ ಆಕಾಶ್ ಕುಟುಂಬದವರು ರೂಮಿಗೆ ಓಡಿ ಬಂದಿದ್ದಾರೆ. ಆದರೆ ಅಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಸ್ಥಳಕ್ಕೆ ಪೊಲೀಸರು ಆಗಮಿಸಿ ಮೊಬೈಲ್, ಪಿಸ್ತೂಲ್ ಹಾಗೂ ಬುಲೆಟ್ಸ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ವರದಿಗಳ ಪ್ರಕಾರ ಆಕಾಶ್ ತಂದೆ ಸಂಜಯ್ ಸಿಂಗ್ ಪ್ರಾಪರ್ಟಿ ಡೀಲರ್ ಆಗಿದ್ದು, ಆಕಾಶ್‍ ನನ್ನು ಬೇರೆ ಹುಡುಗಿಯ ಜೊತೆ ಮದುವೆ ಮಾಡಲು ಮುಂದಾಗಿದ್ದರು. ಆದರೆ ಯುವತಿಯನ್ನು ಪ್ರೀತಿಸುತ್ತಿದ್ದ ಕಾರಣ ಆಕಾಶ್‍ಗೆ ಈ ಮದುವೆ ಇಷ್ಟವಿರಲಿಲ್ಲ. ತನ್ನ ಪ್ರೇಯಸಿಯನ್ನು ಮದುವೆಯಾಗಲು ಆತ ಬಯಸುತ್ತಿದ್ದ.

    ಆಕಾಶ್ ಯುವತಿಯನ್ನು ಪ್ರೀತಿಸುತ್ತಿರುವುದನ್ನು ಕೆಲವು ದಿನಗಳ ಹಿಂದೆ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದ. ಅಷ್ಟೇ ಅಲ್ಲದೇ ನಾನು ಆಕೆಯನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ್ದನು. ಆದರೆ ಆ ಹುಡುಗಿಯ ಕುಟುಂಬದವರು ಬೇರೆ ಯುವಕನ ಜೊತೆ ಮದುವೆ ನಿಶ್ಚಯ ಮಾಡಲು ನಿರ್ಧರಿಸಿದ್ದರು. ಇದ್ದರಿಂದ ಆಕಾಶ್ ಮಾನಸಿಕವಾಗಿ ಕುಗ್ಗಿ ಹೋಗಿದ್ದನು ಎಂದು ಹೇಳಲಾಗಿದೆ.

    ಆಕಾಶ್ ಆತ್ಮಹತ್ಯೆಗೆ ಶರಣಾಗುವಾಗ ಯುವತಿ ವಿಡಿಯೋ ಕಾಲ್‍ನಲ್ಲಿಯೇ ಇದ್ದಳು. ಗುಂಡೇಟಿನ ಸದ್ದು ಕೇಳಿದ ನಂತರ ಆಕಾಶ್ ಗೆ ಮುಂಜಾನೆ 3.00 ಗಂಟೆವರೆಗೂ ಕರೆ ಮಾಡುತ್ತಿದ್ದಳು. ಆಕಾಶ್ ಫೋನಿನಲ್ಲಿ 80ಕ್ಕೂ ಹೆಚ್ಚು ಮಿಸ್ ಕಾಲ್ ಬಂದಿತ್ತು. ಆಕಾಶ್ ಫೋನ್ ರಿಸೀವ್ ಮಾಡದೇ ಇದ್ದಾಗ ಸ್ನೇಹಿತರಿಗೆ ಕರೆ ಮಾಡಿ ನಡೆದ ಘಟನೆಯನ್ನು ವಿವರಿಸಿದ್ದಳು.

    ಯುವತಿಯ ಜೊತೆಗೆ ಇರುವ ಸಂಬಂಧವನ್ನು ತಿಳಿದು ಸಂಬಂಧಿಕರು ಆಕಾಶ್ ನನ್ನು ಬೈಯುತ್ತಿದ್ದರು. ಇದರಿಂದಾಗಿ ಆತ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಎಂದು ವರದಿಯಾಗಿದೆ.