Tag: patna

  • ವಾಚ್‍ಮ್ಯಾನ್ ಜೊತೆಗೆ 16ರ ಪೋರಿಯ ಸೆಕ್ಸ್-ನೋಡಿದ 8ರ ಹುಡ್ಗನ ಕೊಂದೇ ಬಿಟ್ಟಳು

    ವಾಚ್‍ಮ್ಯಾನ್ ಜೊತೆಗೆ 16ರ ಪೋರಿಯ ಸೆಕ್ಸ್-ನೋಡಿದ 8ರ ಹುಡ್ಗನ ಕೊಂದೇ ಬಿಟ್ಟಳು

    ಪಾಟ್ನಾ: ವಾಚ್‍ಮ್ಯಾನ್ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯವನ್ನು ನೋಡಿದ ಅಂತಾ 8 ವರ್ಷದ ಬಾಲಕನನ್ನು ಕೊಲೆ ಮಾಡಿದ್ದಾಗಿ, 16 ವರ್ಷದ ಬಾಲಕಿಯೊಬ್ಬಳು ಒಪ್ಪಿಕೊಂಡಿದ್ದಾಳೆ.

    ಜುಲೈ 9 ರಂದು ಬಿಹಾರದ ಪಾಟ್ನಾ ಜಿಲ್ಲೆಯ ಹಾಸ್ಟೆಲ್‍ವೊಂದರಲ್ಲಿ ಈ ಅಮಾನವೀಯ ಘಟನೆ ನಡೆದಿತ್ತು. ಅಭಿಮನ್ಯು ಕೊಲೆಯಾದ ಬಾಲಕ. ಪ್ರಕರಣದ ಕುರಿತು ಬಾಲಕಿಯನ್ನು ಈ ಮೊದಲು ವಿಚಾರಣೆಗೆ ಒಳಪಡಿಸಿದಾಗ, ಅಭಿಮನ್ಯು ತನ್ನ ಪುಸ್ತಕದ ಹಾಳೆ ಹರೆದಿದ್ದ, ಹೀಗಾಗಿ ಆತನನ್ನು ಜೋರಾಗಿ ದೂಡಿದಾಗ ಕೆಳಗೆ ಬಿದ್ದು ಮೃತಪಟ್ಟಿದ್ದ ಎಂದು ಕಥೆ ಹೇಳಿದ್ದಳು. ಪೊಲೀಸರು ಬಾಲಕಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಒಪ್ಪಿಕೊಂಡಿದ್ದಾಳೆ.

    ಅಂದು ನಡೆದಿದ್ದು ಏನು..?
    ಅಭಿಮನ್ಯು ಹಾಗೂ ಕೊಲೆ ಮಾಡಿದ ಬಾಲಕಿ ಪಾಟ್ನಾ ಸಮೀಪದ ಫೂತುಹಾದನ ಸೆಫಾಲಿ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳು. ಅಭಿಮನ್ಯು ಎಲ್‍ಕೆಜಿ ಹಾಗೂ ಬಾಲಕಿ 8ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದು, ಒಂದೇ ಹಾಸ್ಟೆಲ್ ಹಾಗೂ ಒಂದೇ ರೂಮ್‍ನಲ್ಲಿ ಮತ್ತಿಬ್ಬರು ಬಾಲಕಿಯರೊಂದಿಗೆ ಇದ್ದರು. ಬಾಲಕಿ ವಾಚ್‍ಮ್ಯಾನ್ ಪಪ್ಪು ಎಂಬಾತನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಹಿಂದೆಯೂ ಪಪ್ಪು ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ, ದೃಶ್ಯವನ್ನು ತನ್ನ ಮೊಬೈಲ್‍ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದನು.

    ಜುಲೈ 6 ರಂದು ರಾತ್ರಿ ಬಾಲಕಿಯನ್ನು ಲೈಂಗಿಕ ಕ್ರಿಯೆಗೆ ಬರುವಂತೆ ಪಪ್ಪು ಒತ್ತಾಯಿಸಿದ್ದ. ಆದರೆ ಹಾಸ್ಟೆಲ್‍ನಲ್ಲಿ ಎಲ್ಲರೂ ಇದ್ದಾರೆ ನಾನು ಬರುವುದಿಲ್ಲ ಎಂದು ಬಾಲಕಿ ನಿರಾಕರಿಸಿದ್ದಕ್ಕೆ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುವುದಾಗಿ ಹೆದರಿಸಿದ್ದನು. ಹೀಗಾಗಿ ಶೌಚಾಲಯಕ್ಕೆ ಹೋದ ಬಾಲಕಿ ಪಪ್ಪು ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿದ್ದಾಗ ರೂಮಿನಲ್ಲಿದ್ದ ಅಭಿಮನ್ಯು ನೋಡಿದ್ದನು.

    ತನ್ನ ಕೃತ್ಯವನ್ನು ಅಭಿಮನ್ಯು ಬಯಲು ಮಾಡುತ್ತಾನೆ ಎಂದು ಅರಿತ ಬಾಲಕಿ, ಜುಲೈ 8ರಂದು ಅಭಿಮನ್ಯುನ ಕುತ್ತಿಗೆಯನ್ನು 10 ನಿಮಿಷ ಗಟ್ಟಿಯಾಗಿ ಹಿಡಿದು ಕೊಲೆ ಮಾಡಿದ್ದಳು. ಅಲ್ಲದೆ ದೇಹವನ್ನು ಸಾಗಿಸಲು ಪ್ರಯತ್ನಿಸಿ ವಿಫಲವಾಗಿ, ಆತನ ಹಾಸಿಗೆಯಲ್ಲಿ ಮಲಗಿಸಿದ್ದಳು.

    ಪ್ರಕರಣ ಗೊತ್ತಾಗುತ್ತಿದ್ದಂತೆ ಹಾಸ್ಟೆಲ್‍ಗೆ ಬಂದ ಪೊಲೀಸರು ಬಾಲಕಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕಟ್ಟು ಕತೆ ಹೇಳಿದ್ದಳು. ಕೊಲೆಯಾದ ದಿನದಿಂದ ಪಪ್ಪು ಕಾಣೆಯಾಗಿದ್ದರಿಂದ ಪೊಲೀಸರು ಬಾಲಕಿ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. ತೀವ್ರ ತನಿಖೆಯ ನಂತರ, ತಾನು ಪಪ್ಪು ಜೊತೆಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವುದನ್ನು ಅಭಿಮನ್ಯು ನೋಡಿದ್ದನು. ಅವನು ಎಲ್ಲಿ ನನ್ನ ಪೋಷಕರಿಗೆ ಹಾಗೂ ಇತರರಿಗೆ ಹೇಳುತ್ತಾನೆ ಎಂದು ಹೆದರಿ ಕೊಲೆ ಮಾಡಿದ್ದಾಗಿ ಬಾಲಕಿ ಸತ್ಯ ಒಪ್ಪಿಕೊಂಡಿದ್ದಾಳೆ.

    ಬಾಲಕಿ ನಡತೆ ಸರಿಯಿಲ್ಲ. ಪಪ್ಪು ಜೊತೆಗೆ ಎಲ್ಲಂದರಲ್ಲಿ ಓಡಾಡುತ್ತಾಳೆ ಎಂದು ಅಭಿಮನ್ಯು ನಮ್ಮ ಬಳಿ ದೂರು ನೀಡಿದ್ದ. ಹೀಗಾಗಿ ಬಾಲಕಿ ಬಗ್ಗೆ ಎಚ್ಚರ ವಹಿಸುವಂತೆ ಶಾಲಾ ಆಡಳಿತ ಮಂಡಳಿಯ ತಿಳಿಸಿದ್ದೇವು. ಆದರೆ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಮೃತ ಅಭಿಮನ್ಯು ಚಿಕ್ಕಪ್ಪ ಸಂತೋಷ್ ಸಿಂಗ್ ಆರೋಪಿಸಿದ್ದಾರೆ.

  • ಮಿಂಚಿಗೆ ವರ ಹೆದರಿಕೊಂಡಿದ್ದಕ್ಕೆ ಮದುವೆಯನ್ನೇ ಮುರಿದ ವಧು!

    ಮಿಂಚಿಗೆ ವರ ಹೆದರಿಕೊಂಡಿದ್ದಕ್ಕೆ ಮದುವೆಯನ್ನೇ ಮುರಿದ ವಧು!

    ಪಾಟ್ನಾ: ವರನೊಬ್ಬ ಮಿಂಚಿಗೆ ಹೆದರಿಕೊಂಡು ವಿಚಿತ್ರವಾಗಿ ವರ್ತಿಸಿದ್ದಕ್ಕೆ ವಧು ಮದುವೆಯನ್ನೇ ಮುರಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

    ರೇಣು ಕುಮಾರಿ(ಹೆಸರು ಬದಲಾಯಿಸಲಾಗಿದೆ) ಮದುವೆಯನ್ನೇ ಮುರಿದ ವಧು. ಮಿಂಚಿಗೆ ವರ ಹೆದರಿಕೊಂಡಿದ್ದಕ್ಕೆ ವಧು ಮದುವೆಯನ್ನು ಬೇಡ ಎಂದಿದ್ದಾಳೆ. ಇದರಿಂದ ಇಬ್ಬರ ಕುಟುಂಬದ ನಡುವೆ ಗಲಾಟೆ ಆಗಿದೆ.

    ವರ ಮಿಂಚಿಗೆ ಹೆದರಿಕೊಂಡು ವಿಚಿತ್ರವಾಗಿ ವರ್ತಿಸಿದ್ದಾನೆ. ಇದ್ದನ್ನು ಗಮನಿಸಿದ ವಧು ಮದುವೆ ಬೇಡ ಎಂದಿದ್ದಾಳೆ. ವಧು ಮಾತನ್ನು ಕೇಳಿಸಿಕೊಂಡ ವರನ ಕುಟುಂಬದವರು ಒಂದು ಕ್ಷಣ ದಂಗಾಗಿದ್ದಾರೆ. ಮದುವೆಯ ಕೆಲವು ಶಾಸ್ತ್ರಗಳು ಮುಗಿದ ಮೇಲೆ ವಧು ಮದುವೆಗೆ ನಿರಾಕರಿಸಿದ್ದು ಎಲ್ಲರೂ ಆಶ್ಚರ್ಯಪಡುವಂತಾಯಿತು.

    ಮದುವೆಯನ್ನು ನಿರಾಕರಿಸಿದ್ದಕ್ಕೆ ವರನ ಕುಟುಂಬದವರು ವಧುವಿನ ಕುಟುಂಬದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವರನ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಕ್ಕೆ ಪೊಲೀಸರು ವಧುವಿನ ಕುಟುಂಬದ ಮೂವರು ಸದಸ್ಯರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

    ಈ ಹಿಂದೆ ಹಲವು ವಧುಗಳು ಬೇರೆ ಬೇರೆ ಕಾರಣ ನೀಡಿ ಮದುವೆಯನ್ನು ನಿಲ್ಲಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ವಧು ಮಿಂಚಿಗೆ ಹೆದರಿಕೊಂಡ ವರನನ್ನೇ ನಿರಾಕರಿಸಿ ಮದುವೆ ಮುರಿದಿದ್ದಾಳೆ ಎಂದು ವರದಿಯಾಗಿದೆ.

  • ಒಬ್ಬ ಬಾಲಕನನ್ನು ರಕ್ಷಿಸಲು ಹೋಗಿ ಕೊಳಕ್ಕೆ ಬಿದ್ದ ಕಾರು – ಆರು ಮಕ್ಕಳು ಜಲಸಮಾಧಿ

    ಒಬ್ಬ ಬಾಲಕನನ್ನು ರಕ್ಷಿಸಲು ಹೋಗಿ ಕೊಳಕ್ಕೆ ಬಿದ್ದ ಕಾರು – ಆರು ಮಕ್ಕಳು ಜಲಸಮಾಧಿ

    ಪಾಟ್ನಾ: ಕಾರೊಂದು ರಸ್ತೆ ಪಕ್ಕದ ಕೊಳಕ್ಕೆ ಬಿದ್ದ ಪರಿಣಾಮ ಆರು ಮಂದಿ ಬಾಲಕರು ಮೃತಪಟ್ಟಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬೆಳ್ಳಂಬೆಳ್ಳಗೆ ಸಂಭವಿಸಿದೆ.

    ಮೃತರನ್ನು ಉನೀತ್ ಕುಮಾರ್, ನಯನಾ ಕುಮಾರಿ, ಕರಣ್ ಕುಮಾರ್, ಮಿಥುನ್ ಕುಮಾರ್, ಅಜಯ್ ಕುಮಾರ್ ಹಾಗೂ ನಿತೇಷ್ ರಿಷಿದೇವ್ ಅಂತ ಗುರುತಿಸಲಾಗಿದೆ. ತಾರಾಬರಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಖ್ ಸೈನಾ ಗ್ರಾಮದಲ್ಲಿ ಇಂದು ಬೆಳಗ್ಗೆ ಸುಮಾರು 7 ಗಂಟೆ ಈ ಘಟನೆ ನಡೆದಿದೆ ಎಂದು ತಾರಾಬರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮಹಬೂಬ್ ಆಲಂ ತಿಳಿಸಿದ್ದಾರೆ.

    ಮೃತರಲ್ಲಿ ಉನೀತ್ ಕುಮಾರ್ ಮತ್ತು ನಯನಾ ಕುಮಾರಿ ಇಬ್ಬರು ಒಡಹುಟ್ಟಿದವರಾಗಿದ್ದು, ಇನ್ನುಳಿದರು ಬೇರೆ ಬೇರೆ ಕುಟುಂಬದವರಾಗಿದ್ದಾರೆ. ಇವರೆಲ್ಲರೂ ಎಸ್‍ಯುವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಅಪಘಾತದಲ್ಲಿ ಮೋನು ಕುಮಾರ್ ಮಾತ್ರ ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಮೃತ ಎಲ್ಲಾ ಮಕ್ಕಳು 6ರಿಂದ 15 ವರ್ಷದವರಾಗಿದ್ದಾರೆ ಎಂದು ತಿಳಿದು ಬಂದಿದೆ.

    ಸೋಮವಾರ ಇವರೆಲ್ಲರೂ ಮದುವೆಗೆಂದು ಬೋರಿಯಾರೆಯಿಂದ ಚಿಂಕಿ ಗ್ರಾಮಕ್ಕೆ ಹೋಗಿದ್ದರು. ಇಂದು ಬೆಳಗ್ಗೆ ಮದುವೆ ಸಮಾರಂಭ ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ಕಾರಿನಲ್ಲಿ ಹಿಂದಿರುಗುತ್ತಿದ್ದರು. ಈ ವೇಳೆ ಸುಖ್ ಸೈನಾ ಗ್ರಾಮದ ಬಳಿ ಬಾಲಕನೊಬ್ಬ ರಸ್ತೆಗೆ ಅಡ್ಡ ಬಂದಿದ್ದಾನೆ. ಅಡ್ಡ ಬಂದ ಬಾಲಕನಿಗೆ ಡಿಕ್ಕಿ ಹೊಡೆಯುವುದನ್ನು ಚಾಲಕ ತಪ್ಪಿಸಲು ಪ್ರಯತ್ನಿಸಿದ್ದಾನೆ. ಪರಿಣಾಮ ನಿಯಂತ್ರಣ ಕಳೆದಕೊಂಡ ಕಾರು ರಸ್ತೆ ಬದಿಯಲ್ಲಿದ್ದ ಕೊಳಕ್ಕೆ ನುಗ್ಗಿದೆ. ಇದರಿಂದ ಕಾರಿನಲ್ಲಿದ್ದ 6 ಜನ ಮಕ್ಕಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಾರು ಕೊಳಕ್ಕೆ ಬಿದ್ದ ತಕ್ಷಣ ಚಾಲಕ ಪರಾರಿಯಾಗಿದ್ದಾನೆ. ಸುತ್ತಮುತ್ತಲಿನ ಸ್ಥಳೀಯರು ಮಕ್ಕಳ ಸಹಾಯಕ್ಕೆ ಬಂದಿದ್ದಾರೆ. ಇನ್ನು ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಕನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಮೃತ ದೇಹವನ್ನು ಕೊಳದಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಆಲಂ ತಿಳಿಸಿದ್ದಾರೆ.

  • ಕಣ್ಣ ಮುಂದೆಯೇ ಪತ್ನಿ, ಮಗಳ ಮೇಲೆ ಗ್ಯಾಂಗ್ ರೇಪ್ – ಕಾಪಾಡದ ಸ್ಥಿತಿಯಲ್ಲಿ ವ್ಯಕ್ತಿ

    ಕಣ್ಣ ಮುಂದೆಯೇ ಪತ್ನಿ, ಮಗಳ ಮೇಲೆ ಗ್ಯಾಂಗ್ ರೇಪ್ – ಕಾಪಾಡದ ಸ್ಥಿತಿಯಲ್ಲಿ ವ್ಯಕ್ತಿ

    ಪಾಟ್ನಾ: ಕುಟುಂಬವೊಂದನ್ನು ಶಸ್ತ್ರಸಜ್ಜಿತ ಯುವಕರ ಗುಂಪೊಂದು ಅಡ್ಡಗಟ್ಟಿದ್ದು, ವ್ಯಕ್ತಿಯ ಮುಂದೆಯೇ ಆತನ ಪತ್ನಿ ಹಾಗೂ 15 ವರ್ಷದ ಮಗಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆಯೊಂದು ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದೆ.

    ಗಯಾ ಜಿಲ್ಲೆಯ ಕೋಂಚ್ ಪೊಲೀಸ್ ಠಾಣೆ ವ್ಯಾಪ್ತಿಯ ಸೊಂದಿಹಾ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ವ್ಯಕ್ತಿ ತನ್ನ ಪತ್ನಿ ಹಾಗೂ ಮಗಳೊಂದಿಗೆ ಮೋಟಾರ್ ಬೈಕ್ ನಲ್ಲಿ ಗುರುವಾರ ರಾತ್ರಿ ಹೋಗುತ್ತಿದ್ದರು. ಸೊಂದಿಹಾ ಗ್ರಾಮದ ಬಳಿ ಹೋಗುತ್ತಿದ್ದಂತೆ ಮೂವರು ಯುವಕರು ಬಂದು ಗನ್ ತೋರಿಸಿ ಅಡ್ಡಗಟ್ಟಿದ್ದಾರೆ. ನಂತರ ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಹಾಕಿದ್ದು, ಆತನ ಮುಂದೆಯೇ ಪತ್ನಿ ಹಾಗೂ ಮಗಳ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಇನ್ಸ್ ಪೆಕ್ಟರ್ ನಯ್ಯರ್ ಹಸ್ನೈನ್ ಖಾನ್ ಹೇಳಿದ್ದಾರೆ.

    ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಇಬ್ಬರು ಯುವಕರನ್ನು ಗುರುತಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಈ ದುಷ್ಕರ್ಮಿಗಳ ಗುಂಪು ಅತ್ಯಾಚಾರ ಕೃತ್ಯ ಎಸಗುವ ಮುನ್ನ ಇದೇ ಮಾರ್ಗದಲ್ಲಿ ತಮ್ಮ ಗ್ರಾಮಕ್ಕೆ ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಅಡ್ಡಗಟ್ಟಿದ್ದಾರೆ. ಬಳಿಕ ಅವರ ಬಳಿ ಇದ್ದ ಮೊಬೈಲ್ ಫೋನ್ ಹಾಗೂ ಹಣ ದೋಚಿದ್ದರೆಂದು ಅವರು ತಿಳಿಸಿದ್ದಾರೆ.

    ಈ ಪ್ರಕರಣದಲ್ಲಿ ನಾಪತ್ತೆಯಾದ ಆರೋಪಿಗಾಗಿ ಬಲೆ ಬೀಸಿದ್ದೇವೆ. ಕಳ್ಳತನ ಆದ ತಕ್ಷಣ ಸೂಕ್ತಕ್ರಮ ಕೈಗೊಳ್ಳದೆ ತಳ್ಳಿ ಹಾಕಿದ್ದಾರೆ. ಆದ್ದರಿಂದ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕೋಂಚ್ ಪೊಲೀಸ್ ಠಾಣಾಧಿಕಾರಿಯನ್ನು ಹಿರಿಯ ಅಧಿಕಾರಿಗಳು ಅಮಾನತು ಮಾಡಿದ್ದಾರೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ 20 ಯುವಕರನ್ನು ಬಂಧಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ಹೇಳಿದ್ದಾರೆ.

  • ಎಸ್ಕಾಂಗಳಿಗೆ ಮೋದಿ ಸರ್ಕಾರದಿಂದ ಶಾಕ್: ಲೋಡ್‍ಶೆಡ್ಡಿಂಗ್ ಮಾಡಿದರೆ ಬೀಳುತ್ತೆ ಭಾರೀ ದಂಡ!

    ಎಸ್ಕಾಂಗಳಿಗೆ ಮೋದಿ ಸರ್ಕಾರದಿಂದ ಶಾಕ್: ಲೋಡ್‍ಶೆಡ್ಡಿಂಗ್ ಮಾಡಿದರೆ ಬೀಳುತ್ತೆ ಭಾರೀ ದಂಡ!

    ಪಾಟ್ನಾ: ದೇಶಾದ್ಯಂತ ವಿದ್ಯುತ್ ವಿತರಿಸುವ ಸಂಸ್ಥೆಗಳು ಅಥವಾ ಎಸ್ಕಾಂಗಳು ಲೋಡ್ ಶೆಡ್ಡಿಂಗ್ ಮಾಡಿದರೆ ದಂಡ ಪಾವತಿ ಮಾಡಬೇಕು ಎಂದು ಇಂಧನ ಸಚಿವರಾದ ಆರ್ ಕೆ ಸಿಂಗ್‍ರವರು ಬಿಹಾರ್ ನ  ಪಾಟ್ನಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಕೇಂದ್ರ ಇಂಧನ ಸಚಿವರಾದ ಆರ್ ಕೆ ಸಿಂಗ್‍ರವರು ಮಂಗಳವಾರ ಕೇಂದ್ರ ಸರ್ಕಾರದ 4 ವರ್ಷಗಳ ಸಾಧನೆ ಕುರಿತು 7 ರಾಜ್ಯದ ರಾಜಧಾನಿಗಳ ಪತ್ರಕರ್ತರ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದರು. ಈ ವೇಳೆ ದೇಶಾದ್ಯಂತ ಇರುವ ಎಲ್ಲಾ ವಿದ್ಯುತ್ ವಿತರಣಾ ಸಂಸ್ಥೆಗಳೇ ಲೋಡ್ ಶೆಡ್ಡಿಂಗ್ ಮಾಡಿದರೆ ಇದರಿಂದಾಗುವ ನಷ್ಟವನ್ನು ಖುದ್ದು ಸಂಸ್ಥೆಗಳೇ ಭರಿಸಬೇಕು ಎಂದು ತಿಳಿಸಿದ್ದಾರೆ.

    ದೇಶದಲ್ಲಿ ಶೇ.15ರಷ್ಟು ಆರ್ಥಿಕ ನಷ್ಟ ವಿದ್ಯುತ್ ಕಡಿತದಿಂದಾಗಿ ಸಂಭವಿಸುತ್ತಿದೆ. ಇದು ದೇಶದ ಬೆಳವಣಿಗೆಗೆ ಮಾರಕವಾಗಿದೆ. ವಿದ್ಯುತ್ ಕಡಿತದಿಂದಾಗಿ ಶೇ.15 ಹಾಗೂ ಅದಕ್ಕಿಂತ ಹೆಚ್ಚಿನ ನಷ್ಟ ಉಂಟಾದರೆ ಆ ನಷ್ಟವನ್ನು ವಿದ್ಯುತ್ ವಿತರಣಾ ಸಂಸ್ಥೆಗಳೇ ಪಾವತಿ ಮಾಡಬೇಕು ಎಂದು ಹೇಳಿದ್ದಾರೆ.

    ಕೇಂದ್ರ ಸರ್ಕಾರವು ಸಿದ್ದ ಪಡಿಸುತ್ತಿರುವ ನೂತನ ಇಂಧನ ನೀತಿಯಲ್ಲಿ ಈ ವಿಚಾರವನ್ನು ಸೇರ್ಪಡೆ ಮಾಡಲಾಗಿದೆ ಎಂದು ತಿಳಿಸಿದ್ದು. ಈ ಯೋಜನೆಗೆ ಸಾರ್ವಜನಿಕರಿಂದ ಮಾಹಿತಿ ಮತ್ತು ಸಲಹೆಗಳನ್ನು ಪಡೆದುಕೊಂಡು ಮುಂದಿನ ಹಣಕಾಸು ವರ್ಷದಲ್ಲಿ ಈ ನೂತನ ನೀತಿಯನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

     

    ದೇಶದಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಕುರಿತು ಮಾತನಾಡಿದ ಅವರು ಶೀಘ್ರವಾಗಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಬಿಹಾರ ಹಾಗೂ ಇತರೆ ರಾಜ್ಯಗಳಲ್ಲಿ ಹೆಚ್ಚಿನ ರೈತರು ಡೀಸೆಲ್ ಪಂಪ್‍ಗಳನ್ನ ಬಳಸುತ್ತಿದ್ದಾರೆ. ಡೀಸೆಲ್‍ಗೆ ಪರ್ಯಾಯವಾಗಿ ಸೋಲಾರ್ ಪಂಪ್‍ಸೆಟ್‍ಗಳನ್ನು ಬಳಕೆ ಮಾಡಲು ರೈತರಿಗೆ ಕುಸುಮ್ ಯೋಜನೆಯನ್ನು ಜಾರಿಗೊಳಿಸಿದ್ದೇವೆಂದು ಮಾಹಿತಿ ನೀಡಿದ್ದಾರೆ. ರೈತರ ಅಗತ್ಯತೆಗೆ ತಕ್ಕಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳುತ್ತದೆ ಎಂದು ಈ ವೇಳೆ ತಿಳಿಸಿದ್ದಾರೆ.

  • ಮದ್ವೆ ಮುಗ್ಸಿ ಬರೋವಾಗ ಕಾರ್ ಅಪಘಾತ- ಮೂವರು ಆರ್ ಜೆಡಿ ಮುಖಂಡರು ಸೇರಿ ನಾಲ್ವರ ದುರ್ಮರಣ

    ಮದ್ವೆ ಮುಗ್ಸಿ ಬರೋವಾಗ ಕಾರ್ ಅಪಘಾತ- ಮೂವರು ಆರ್ ಜೆಡಿ ಮುಖಂಡರು ಸೇರಿ ನಾಲ್ವರ ದುರ್ಮರಣ

    ಪಾಟ್ನಾ: ಕಾರ್ ಅಪಘಾತಕ್ಕೀಡಾಗಿ ಮೂವರು ಆರ್ ಜೆಡಿ ಮುಖಂಡರು ಸೇರಿ ನಾಲ್ವರು ದುರ್ಮರಣಕ್ಕೀಡಾದ ಘಟನೆ ಬಿಹಾರದ ಆರಾರಿಯಾ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

    ಮೃತರನ್ನು ಆರ್ ಜೆಡಿ ಕಾರ್ಯಕರ್ತ ಹಾಗೂ ಮಾಜಿ ಮಂತ್ರಿ ಇಸ್ಲಾಮುದ್ದೀನ್ ಪುತ್ರ ಇಕ್ರಮುಲ್ ಹಾಕ್ ಬಾಘಿ, ಇಂಟೆಕ್ಹಾಬ್ ಆಲಂ, ಪಪ್ಪು ಹಾಗೂ ಚಾಲಕ ಶಾಹಿಲ್ ಎಂದು ಗುರುತಿಸಲಾಗಿದೆ.

    ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಮದ್ವೆ ಮುಗಿಸಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

    ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಕಾರ್ ಕಿಶಾನ್ ಗಂಜ್ ನಿಂದ ಪಾಟ್ನಾ ಕಡೆ ತೆರಳುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರ್ ರಸ್ತೆ ಪಕ್ಕದ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಡಿವೈಡರ್ ಇಬ್ಭಾಗವಾಗಿದ್ದು, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮನೋಜ್ ಕುಮಾರ್ ತಿಳಿಸಿದ್ದಾರೆ.

    ಸದ್ಯ ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

    ಲಾಲೂ ಪ್ರಸಾದ್ ಯಾದವ್ ಮಗ ತೇಜ್ ಪ್ರತಾಪ್ ಯಾದವ್ ಅವರು ಐಶ್ವರ್ಯಾ ಎಂಬವನರನ್ನು ವರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಅತಿಥಿಗಳು, ವಿಐಪಿಗಳು ಭಾಗಿಯಾಗಿದ್ದರು.

  • ತೇಜ್‍ಪ್ರತಾಪ್ -ಐಶ್ವರ್ಯಾರನ್ನು ಶಿವಪಾರ್ವತಿಗೆ ಹೋಲಿಸಿದ್ರು ಲಾಲೂ ಅಭಿಮಾನಿಗಳು!

    ತೇಜ್‍ಪ್ರತಾಪ್ -ಐಶ್ವರ್ಯಾರನ್ನು ಶಿವಪಾರ್ವತಿಗೆ ಹೋಲಿಸಿದ್ರು ಲಾಲೂ ಅಭಿಮಾನಿಗಳು!

    ಪಟ್ನಾ: ಆರ್‍ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರಸಾದ್ ಮತ್ತು ಐಶ್ವರ್ಯ ಅವರನ್ನು ಶಿವ, ಪಾರ್ವತಿಗೆ ಹೋಲಿಸಿ ಬ್ಯಾನರ್ ಹಾಕಿದ್ದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

    ಪಾಟ್ನಾದಲ್ಲಿ ಶನಿವಾರ ಇವರಿಬ್ಬರ ಮದುವೆ ನಡೆದಿದೆ. ಮದುವೆಯಾಗುತ್ತಿರುವ ಹಿನ್ನಲೆಯಲ್ಲಿ ಲಾಲೂ ನಿವಾಸದ ಮುಂಭಾಗ ಬ್ಯಾನರ್ ಹಾಕಿದ್ದು, ಈ ಬ್ಯಾನರ್ ನಲ್ಲಿ ತೇಜ್ ಪ್ರಸಾದ್ ಮತ್ತು ಐಶ್ವರ್ಯಾ ಅವರನ್ನು ಶಿವ ಪಾರ್ವತಿಗೆ ಹೋಲಿಸಿ ಫೋಟೋ ಪ್ರಕಟಿಸಲಾಗಿತ್ತು.

    ಮದುವೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆ ಹಾಗೂ ನಗರದ ವಿವಿಧೆಡೆ ಬ್ಯಾನರ್ ಹಾಕಲಾಗಿತ್ತು. ಅದರಲ್ಲೂ ತೇಜ್ ಪ್ರತಾಪ್ ಹಾಗೂ ಐಶ್ವರ್ಯ ಅವರನ್ನು ಶಿವ-ಪಾರ್ವತಿ ರೂಪದಲ್ಲಿ ಬಿಂಬಿಸಲಾಗಿತ್ತು. ಈಗ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋದ ಬಗ್ಗೆ ಚರ್ಚೆ ನಡೆಯುತ್ತಿದ್ದು, ದೇವರಂತೆ ಚಿತ್ರಿಸಿರುವುದು ಸರಿಯಲ್ಲ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.

    ವಧು ಐಶ್ವರ್ಯ ರೈ ತಂದೆ ಚಂದ್ರಿಕಾ ಪ್ರಸಾದ್ ಮಾಜಿ ಸಚಿವರಾಗಿದ್ದು, ಈಗ ಈ ಮದುವೆಯ ಮೂಲಕ ರಾಜಕಾರಣಿಗಳಿಬ್ಬರು ಸಂಬಂಧಿಗಳಾಗಿದ್ದಾರೆ. ಮೇವು ಹಗರಣದಲ್ಲಿ ದೋಷಿಯಾಗಿರುವ ಲಾಲೂ ಪ್ರಸಾದ್ ಯಾದವ್ ಪ್ರಸ್ತುತ ಬಿರ್ಸಾಮುಂಡಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದು ಸದ್ಯ ಮಗನ ಮದುವೆಯಲ್ಲಿ ಭಾಗವಹಿಸಲು ಕೋರ್ಟ್ ಮೂರು ದಿನಗಳ ಪೆರೋಲ್ ಮಂಜೂರು ಮಾಡಿದೆ. ಇದರ ಜೊತೆಯಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯಲು ಜಾರ್ಖಂಡ್ ಹೈಕೋರ್ಟ್ 6 ವಾರಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ.

  • ಲಾಲು ಪ್ರಸಾದ್ ಯಾದವ್‍ಗೆ 6 ವಾರ ತಾತ್ಕಾಲಿಕ ಜಾಮೀನು ಮಂಜೂರು

    ಲಾಲು ಪ್ರಸಾದ್ ಯಾದವ್‍ಗೆ 6 ವಾರ ತಾತ್ಕಾಲಿಕ ಜಾಮೀನು ಮಂಜೂರು

    ಪಟ್ನಾ: ರಾಂಚಿಯ ಹೈಕೋರ್ಟ್ ಮೇವು ಹಗರಣದ ಅಪರಾಧಿ, ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಆರೋಗ್ಯ ಚಿಕಿತ್ಸೆಗಾಗಿ ಆರು ವಾರಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ.

    ಲಾಲು ಪ್ರಸಾದ್ ಪುತ್ರನ ತೇಜ್ ಪ್ರತಾಪ್ ಯಾದವ್ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಶುಕ್ರವಾರ ಪಟ್ನಾಗೆ ಆಗಮಿಸಿದ್ದರು. ಈ ವೇಳೆಯೇ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಶನಿವಾರ ತೇಜ್ ಪ್ರತಾಪ್ ವಿವಾಹ ಸಮಾರಂಭ ನಡೆಯಲಿದೆ.

    ಇದಕ್ಕೂ ಮುನ್ನವೇ ಲಾಲು ಪ್ರಸಾದ್ ಯಾದವ್ ಪುತ್ರನ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಮೂರು ದಿನಗಳ ಪೆರೋಲ್ ಪಡೆದಿದ್ದರು. ತೇಜ್ ಪ್ರತಾಪ್ ಯಾದವ್ ಹಾಗೂ ಐಶ್ವರ್ಯಾ ವಿವಾದ ನಿಶ್ಚಿತಾರ್ಥ ಸಮಾರಂಭವೂ ಏಪ್ರಿಲ್ 18 ರಂದು ಪಟ್ನಾದ ಮಯೂರ ಹೋಟೆಲ್ ನಲ್ಲಿ ನೆರವೇರಿತ್ತು. ಮೇ 12 ರಂದು ವಿವಾಹ ಸಮಾರಂಭ ನಡೆಯಲಿದೆ.

    ಪ್ರತಾಪ್ ನಿಶ್ಚಿತಾರ್ಥ ಸಮಾರಂಭದ ವೇಳೆ ಲಾಲು ಪ್ರಸಾದ್ ಯಾದವ್ ಜೈಲಿನಲ್ಲಿ ಇದ್ದ ಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಈ ವೇಳೆ ಪ್ರತಾಪ್ ತಮ್ಮ ನೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡು `ಮೀಸ್ ಯೂ ಪಾ’ ಎಂದು ಬರೆದುಕೊಂಡಿದ್ದರು.

    ಸದ್ಯ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲು ಪ್ರಸಾದ್ ಯಾದವ್ ಅನಾರೋಗ್ಯ ಸಮಸ್ಯೆಯಿಂದ ಜಾರ್ಖಂಡ್ ನ ಆರ್ ಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಇದನ್ನು ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಮೋದಿ ಕಾರಣ: ಲಾಲೂ ಕಿಡಿ

  • ತೇಜ್ ಪ್ರತಾಪ್, ಐಶ್ವರ್ಯ ವಿವಾಹ – ಲಾಲು ಪ್ರಸಾದ್ ಯಾದವ್‍ಗೆ 5 ದಿನ ಪೆರೋಲ್

    ತೇಜ್ ಪ್ರತಾಪ್, ಐಶ್ವರ್ಯ ವಿವಾಹ – ಲಾಲು ಪ್ರಸಾದ್ ಯಾದವ್‍ಗೆ 5 ದಿನ ಪೆರೋಲ್

    ಪಟ್ನಾ : ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರಿಗೆ ನ್ಯಾಯಾಲಯ ಐದು ದಿನ ಪೆರೋಲ್ ಮಂಜೂರು ಮಾಡಿದ್ದು, ಪುತ್ರ ತೇಜ್ ಪಾಲ್ ವಿವಾಹದಲ್ಲಿ ಭಾಗವಹಿಸಲು ಅವಕಾಶ ನೀಡಿದೆ.

    ಬಿಹಾರ ಮಾಜಿ ಆರೋಗ್ಯ ಸಚಿರಾಗಿರುವ ಲಾಲು ಪುತ್ರ ತೇಜ್ ಪ್ರತಾಪ್ ಯಾದವ್ ಹಾಗೂ ಎಂಬಿಎ ಪದವೀಧರೆ ಐಶ್ವರ್ಯ ರೈ ಅವರ ನಿಶ್ಚಿತಾರ್ಥ ಏಪ್ರಿಲ್ 18 ರಂದು ನಡೆದಿದ್ದು, ಮೇ 12ರಂದು ಅದ್ಧೂರಿ ಮದುವೆ ಸಮಾರಂಭ ನಡೆಯಲಿದೆ. ತೇಜ್ ಪ್ರತಾಪ್ ಹಾಗೂ ಐಶ್ವರ್ಯ ನಿಶ್ಚಿತಾರ್ಥ ಸಮಾರಂಭ ಲಾಲು ಜೈಲಿನಲ್ಲಿ ಇರುವ ಸಂದರ್ಭದಲ್ಲಿ ನಡೆದಿತ್ತು.

    ಲಾಲು ಪ್ರಸಾದ್ ಯಾದವ್ 1990 ರಿಂದ 1944 ವರೆಗೂ ಮುಖ್ಯಮಂತ್ರಿ ಆಗಿದ್ದರು. ಈ ವೇಳೆ ನಡೆದ ಮೇವು ಹಗರಣದಲ್ಲಿ ಪ್ರಮುಖ ಅಪರಾಧಿಯಾಗಿದ್ದು, ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರೆ. ಆದ್ರೆ ಅನಾರೋಗ್ಯದ ಕಾರಣ ಮಾರ್ಚ್ 29 ರಂದು ಲಾಲು ಪ್ರಸಾದ್ ಯಾದವ್ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮಗನ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಲಾಲು ಪ್ರಸಾದ್ ಪೆರೋಲ್ ಗೆ ಅರ್ಜಿ ಸಲ್ಲಿಸಿದ್ದದರು.

    ಸದ್ಯ ಲಾಲು ಅವರು ಮೇ 10 ರಿಂದ ಮೇ 14 ರವರೆಗೆ ಹೊರ ಬರುವ ಸಾಧ್ಯತೆ ಇದೆ. ಮೇ 12 ರಂದು ಪಾಟ್ನಾದಲ್ಲಿ ವಿವಾಹ ಸಮಾರಂಭ ನಡೆಯಲಿದೆ.

  • ವರ ವಧುವಿಗೆ ಹಾರ ಹಾಕ್ತಿದ್ದಂತೆ, ಓಡೋಡಿ ಬಂದು ಸಿಂಧೂರವಿಟ್ಟ ಪ್ರಿಯತಮ

    ವರ ವಧುವಿಗೆ ಹಾರ ಹಾಕ್ತಿದ್ದಂತೆ, ಓಡೋಡಿ ಬಂದು ಸಿಂಧೂರವಿಟ್ಟ ಪ್ರಿಯತಮ

    ಪಾಟ್ನಾ: ಮದುವೆಯಲ್ಲಿ ವಧುವಿಗೆ ವರ ಹಾರ ಹಾಕಿದ ಬೆನ್ನೆಲ್ಲೆ ಪ್ರಿಯಕರ ಸಿಂಧೂರ ಹಚ್ಚಿದ (ಬೈತಲೆಗೆ ಕುಂಕುಮ) ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

    ವೇದಿಕೆ ಮೇಲೆ ವಧು ಹಾಗೂ ವರ ಹಾರ ಬದಲಾಯಿಸಿಕೊಳ್ಳಲು ನಿಂತಿದ್ದರು. ಆಗ ತಕ್ಷಣ ವಧುವಿನ ಪ್ರಿಯಕರ ತನ್ನ ನಾಲ್ಕೈದು ಸ್ನೇಹಿತರ ಜೊತೆ ವೇದಿಕೆ ಹತ್ತಿ ಸಿಂಧೂರ ಹಾಕಿದ್ದಾನೆ. ಇದನ್ನು ನೋಡಿದ ಅಲ್ಲಿದ್ದ ಜನರು ಒಂದು ಕ್ಷಣ ದಂಗಾದರು.

    ಪ್ರಿಯಕರ ವಧುವಿನ ಹಣೆಗೆ ಸಿಂಧೂರ ಹಾಕಿದ ನಂತರ ಮದುವೆ ಮನೆಯಲ್ಲಿ ದೊಡ್ಡ ಗಲಾಟೆ ನಡೆದಿತ್ತು. ನಂತರ ಗ್ರಾಮದ ಹಿರಿಯರು ಬಂದು ವಿಚಾರಿಸಿದಾಗ ಇಬ್ಬರೂ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂಬುದು ತಿಳಿದು ಬಂದಿದೆ. ನಂತರ ವಧುವನ್ನು ತನ್ನ ಪ್ರಿಯಕರನ ಜೊತೆ ಗ್ರಾಮಸ್ಥರು ಕಳುಹಿಸಿಕೊಟ್ಟಿದ್ದಾರೆ ಅಂತಾ ವರದಿಯಾಗಿದೆ.

    ವಧುವಿನ ಕುಟುಂಬದವರು ಮದುವೆಯನ್ನು ಬೇರೆ ಕಡೆ ನಿಶ್ಚಯ ಮಾಡಿದ್ದು, ಮದುವೆಯ ಶಾಸ್ತ್ರ ಸಂಪ್ರದಾಯಗಳೆಲ್ಲ ನೆರವೇರಿತ್ತು. ವರ ಮೆರವಣಿಗೆಯಿಂದ ನೇರವಾಗಿ ಹಾರ ಬದಲಾಯಿಸಿಕೊಳ್ಳಲು ವೇದಿಕೆ ಮೇಲೆ ಬಂದರು. ವರ ವಧುವಿಗೆ ಹಾರ ಹಾಕುವ ಸಮಯದಲ್ಲೇ ಆಕೆಯ ಪ್ರಿಯಕರ ವೇದಿಕೆ ಮೇಲೆ ಹತ್ತಿ ಯುವತಿಗೆ ಸಿಂಧೂರ ಹಚ್ಚಿದ್ದಾನೆ.

    ಈ ಘಟನೆ ನಡೆದ ನಂತರ ಮದುವೆ ಮನೆ ಗಲಾಟೆಗಳು ಆರಂಭವಾಗಿದೆ. ವಧುವಿನ ಕುಟುಂಬಸ್ಥರು ಎಲ್ಲರೂ ಸೇರಿ ಪ್ರಿಯಕರ ಹಾಗೂ ಆತನ ಸ್ನೇಹಿತರಿಗೆ ಥಳಿಸಿದ್ದಾರೆ. ಘಟನೆಯಲ್ಲಿ ಪ್ರಿಯಕರ ಹಾಗೂ ಆತನ ಸ್ನೇಹಿತರು ಗಂಭೀರವಾಗಿ ಗಾಯಗೊಂಡರು. ಇದನ್ನು ನೋಡಿದ ವಧು ತನ್ನ ಪ್ರಿಯಕರನನ್ನು ಬಿಟ್ಟುಬಿಡಿ ಎಂದು ಜೋರಾಗಿ ಕಿರುಚಲು ಶುರು ಮಾಡಿದ್ದಳು ಎಂದು ಸ್ಥಳೀಯರು ತಿಳಿಸಿದ್ದಾರೆ.

    ವಧು ಹಾಗೂ ಆಕೆಯ ಪ್ರಿಯಕರನ ಬಗ್ಗೆ ವಿಚಾರಿಸಿದ್ದಾಗ ನಾವು ಮೂರು ವರ್ಷದಿಂದ ಪ್ರೀತಿಸುತ್ತಿದ್ದೇವೆ. ಈ ವಿಚಾರ ನನ್ನ ತಂದೆ- ತಾಯಿಗೂ ಗೊತ್ತಿತ್ತು. ಆದರೆ ಅವರು ಬಲವಂತವಾಗಿ ನನ್ನ ಮದುವೆಯನ್ನು ಮಾಡಲು ನಿರ್ಧರಿಸಿದ್ದರು. ನಂತರ ನನಗೆ ಹೆದರಿಸಿ ನನ್ನ ಮದುವೆಯನ್ನು ಬೇರೊಬ್ಬ ಜೊತೆ ನಿಶ್ಚಯಿಸಿದ್ದರು ಎಂದು ವಧು ಗ್ರಾಮಸ್ಥರ ಮುಂದೆ ಹೇಳಿಕೆ ನೀಡಿದ್ದಾಳೆ.

    ವಧು ಹಾಗೂ ಆಕೆಯ ಪ್ರಿಯಕರ ಫೋಟೋವನ್ನು ನೋಡಿದ ವರ ಮತ್ತೊಮ್ಮೆ ವಧುವಿನ ನಿರ್ಧಾರವನ್ನು ಕೇಳಿದ್ದನು. ಆಗ ವಧು ತನ್ನ ಪ್ರಿಯಕರನ ಜೊತೆ ಹೋಗುವುದಾಗಿ ಹಠ ಮಾಡುತ್ತಿದ್ದಳು. ಆಗ ವರ ಮೆರವಣಿಗೆ ಮೂಲಕ ಹಿಂದಿರುಗಲು ನಿರ್ಧರಿಸಿದ್ದರು. ನಂತರ ಗ್ರಾಮಸ್ಥರು ಹಾಗೂ ಪೋಷಕರು ವಧುವನ್ನು ತನ್ನ ಪ್ರಿಯಕರನ ಜೊತೆ ಮದುವೆ ಮಾಡಿ ಕಳುಹಿಸಿಕೊಟ್ಟರು ಎಂದು ವರದಿಯಾಗಿದೆ.